tag:blogger.com,1999:blog-3647359896003532739.post926932088068394453..comments2023-06-17T05:27:12.787-07:00Comments on maretha maathugalu: ಮುಂಜಾನೆಯ ಮೀನು ರಾಗ.... Unknownnoreply@blogger.comBlogger1125tag:blogger.com,1999:blog-3647359896003532739.post-45927705505568132932012-09-25T22:03:17.506-07:002012-09-25T22:03:17.506-07:00ನನ್ನ ನೆನ್ನೆಯ ಲೇಖನದಲ್ಲಿ ಕೆಲವು ತಾಂತ್ರಿಕ ದೋಷಗಳು ನುಸುಳ...ನನ್ನ ನೆನ್ನೆಯ ಲೇಖನದಲ್ಲಿ ಕೆಲವು ತಾಂತ್ರಿಕ ದೋಷಗಳು ನುಸುಳಿದ್ದವು. ಬ್ಯಾರಿಗಳ ಮೂಲ ನನಗೆ ಗೊತ್ತಿತ್ತಾದರೂ ಲಬ್ಬೆಗಳ ಕುರಿತು ನನ್ನ ಗ್ರಹಿಕೆ ತಪ್ಪಾಗಿತ್ತು. ಅವರೂ ಬ್ಯಾರಿಗಳೆ ಎನ್ನುವ ತಪ್ಪು ಅಭಿಪ್ರಾಯ ನನ್ನದಾಗಿತ್ತು. ಇನ್ನು ಸಾಬರ ಕುರಿತು ಗೊಂದಲಗಳಿಲ್ಲ. ನನ್ನ ಮನೆಯಲ್ಲಿನ ಮಾತುಗಳನ್ನ ಕೇಳಿ ನಾನು ನನ್ನ ಅಭಿಪ್ರಾಯವನ್ನ ರೂಪಿಸಿಕೊಂಡಿದ್ದೆ. ಅಲ್ಲದೆ ಬ್ಯಾರಿಗಳಂತೆಯೇ ಇರುತ್ತಿದ್ದ ಅವರ ಭಾಷೆಯ ಧಾಟಿಯೂ ನನ್ನನ್ನು ದಾರಿ ತಪ್ಪಿಸಿತ್ತು ಅನ್ನಬಹುದು. ಇದನ್ನ ಹಿರಿಯರಾದ ಲೇಖಕ- ರೈತ ಶ್ರೀಮಧುಸೂದನ ಪೆಜತ್ತಾಯರು ತಿದ್ದಿದ್ದಾರೆ. ಅವರದೆ ಮಾತುಗಳಲ್ಲಿ ಈ ಒಪ್ಪೋಲೆಯನ್ನ ಇಲ್ಲಿ ಹಾಕುತ್ತಿದ್ದೇನೆ.

ಪ್ರೀತಿಯ ಹರ್ಷ
ಮೀನಿನ ಬ್ಯಾರಿ ಮತ್ತು ಗುಜರಿ ಸಾಬರು.
ನಮ್ಮಲ್ಲಿ ನಾವು ಕಾಣುತ್ತಾ ಇದ್ದ ಮೀನಿನ ಬ್ಯಾರಿಗಳು ಮಾಪ್ಳೆ (Mopla) ಜನಾಂಗದವರು. ಅವರದು ಬ್ಯಾರಿ ಭಾಷೆ.
ನಮ್ಮ ಗುಜರೀ ಸಾಬರು ಉರ್ದು ಮಾತನಾಡುವ ಮುಸ್ಲಿಂ. ( ಸಾಬರು ಅಂದರೆ ಉರ್ದು ಮಾತಿನ ಮುಸ್ಲಿಮ್)
ಲಬ್ಬೆ ಅಂದರೆ ಆರ್ಕಾಟ್ ಕಡೆಯ ವ್ಯಾಪಾರೀ ಮುಸ್ಲಿಮರು. ತಲೆಯ ಮೇಲೆ ಕುರಿ ಚರ್ಮದ ಟೊಪ್ಪಿ.
ಇವರದು ತಮಿಳು ಬೆರೆತ ಅಶುದ್ಧ ಕನ್ನಡ. ನಮ್ಮೂರಿನಿಂದ ಗುಜರೀ ಸಾಬರು ಒಟ್ಟು ಹಾಕಿದ ಗುಜರಿ ಮತ್ತು ನಮ್ಮೂರಿನಲ್ಲಿ ಒಟ್ಟು ಹಾಕಿದ ಪ್ರಾಣಿಗಳ ಚರ್ಮಗಳನ್ನು ಕೊಳ್ಳುತ್ತಾ ಇದ್ದರು. ಇವರ ಠಿಕಾಣಿ ಹೆಚ್ಚಾಗಿ ಮೆಟ್ಟಿನ ಅಂಗಡಿಗಳಲ್ಲಿ. ಯಾಕೆಂದರೆ, ಮೆಟ್ಟಿನ ಅಂಗಡಿಯವರು ಪ್ರಾಣಿಗಳ ಚರ್ಮ ಕೊಳ್ಳುತ್ತಾ ಇದ್ದರು. ಈ ಚರ್ಮಗಳನ್ನು ಲಬ್ಬೆಗಳು ತಮ್ಮೂರಾದ ತಮಿಳುನಾಡಿನ ವಾನಿಯಂಬಾಡಿಗೆ ಕೊಂಡು ಹೋಗಿ ಹದ (Tan) ಮಾಡಿ ಮಾರುತ್ತಾ ಇದ್ದರು.
ಈ ಮೂರು ವರ್ಗದ ಜನರೂ ವ್ಯಾಪಾರಸ್ಥರು. ಚರ್ಚೆಯಲ್ಲಿ ಸದಾ ಗೆಲ್ಲುವ ಜನ. ಆದರೆ, ಕಪಟಿ ಮೋಸಗಾರರಲ್ಲ.
ಈ ವರ್ಗದ ಮೂರು ಪಂಗಡದವರಿಗೂ ನಮ್ಮೂರ ಅಂಗಳಗಳಿಗೆ ಸ್ವಾಗತ ಇತ್ತು.
ಇವರಾರನ್ನೂ ಯಾರೂ ಮನೆಯೊಳಗೆ ಸೇರಿಸುತ್ತಾ ಇಲ್ಲ.
ಇಂದು ನಮ್ಮೂರಿಗೆ ಮೀನು Ape ಏರಿಬರುತ್ತಾ ಇದೆ.
ಎಲ್ಲರೂ ಪ್ಯಾಂಟ್ ಧಾರಿಗಳು.
ಇಂದು ಎಲ್ಲರೂ ತ್ರಿಚಕ್ರಿಗಳು.
ಪ್ರೀತಿಯಿಂದ

ಪೆಜತ್ತಾಯ
Anagha Kirana ಅನಘ ಕಿರಣhttps://www.blogger.com/profile/09587762117139340360noreply@blogger.com