Pages

20 May 2013

ಭಟ್ಟ ಹೋದ ಭಟ್ಟಂಗಿಗಳ್ಯಾವಾಗ?


"ಸುವರ್ಣ"ಕ್ಕನ ಅಂಗಳಕ್ಕೆ ೨೪*೭ ಅಂಟಿಕೊಂಡಿದ್ದ "ವಿ"ಚಿತ್ರ ಶನಿ ತೊಲಗಿದೆ ಅನ್ನುವ ಸುದ್ದಿ ಬಲ್ಲ ಮೂಲಗಳಿಂದ ಬಂದಿದೆ. ಆ ಅಡ್ಡ ಕಸುಬಿಯನ್ನ ಸದ್ಯ "ಕಪ್ರ"ದ ಹೆಪ್ರನನ್ನಾಗಿ ಮಾತ್ರ ಉಳಿಸಿಕೊಳ್ಲಲಾಗಿದೆ. ಹಾಗೂ ಇದು ಖಚಿತಗೊಂಡಿದೆ. ಇಲ್ಲಿಯವರೆಗೂ "ಸುವರ್ಣ"ದಲ್ಲಿ ರಾಡಿ ಎಬ್ಬಿಸುತ್ತಿದ್ದ ಮಂಗನಾಥ್ "ಭಾರ"ದ್ವಜ್ ಹಾಗೂ ತಂಡ ಪಕ್ಷಾಂತರ ಮಾಡಿ ಆದ ಆಪರೇಷನ್ ನಂತರ "ಟಿವಿ ಒಂಬತ್ತರ" ಪಾಲಾಗಿದ್ದಾರೆ. "ಜನಶ್ರಿ"ಯಲ್ಲಿದ್ದ ಅನಂತ್ ಚಿನಿವಾರ್ ತಂಡ "ಸುವರ್ಣ"ದ ಯಜಮಾನಿಕೆ ವಹಿಸುವುದು ಬಹುತೇಕ ಅಂತಿಮವಾಗಿದೆ.

ಸದ್ಯಕ್ಕೆ "ಕನ್ನಡಪ್ರಭ"ಕ್ಕೆ ಮಾತ್ರ ಎಲ್ಲೂ ಸಲ್ಲದ ಅದೇ ಶನಿ ಅಂಟಿಕೊಂಡಿರಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿ ಅಲ್ಲಿಂದಲೂ ಆ ಗಡವನನ್ನ "ಗೌರವಪೂರ್ವಕವಾಗಿ" ಒದ್ದು ಓಡಿಸಲಾಗುತ್ತದೆ ಎನ್ನುವ ಮಾಹಿತಿಯಿದೆ. ಇತ್ತ ಕನ್ನಡಪ್ರಭದಿಂದಲೂ ಗಡಿಪಾರಾಗುವ ಭೀತಿಯಲ್ಲಿರುವ ಭಟ್ಟ ವಿಜಯವಾಣಿಯ ಸಂಪಾದಕತ್ವಕ್ಕಾಗಿ ಲಾಬಿ ನಡೆಸುತ್ತಿರೋದು ಕೂಡ ಖಚಿತವಾಗಿದೆ. ಆ ಪತ್ರಿಕೆಗೆ ಒಂದು ಘನತೆ ಗೌರವ ತಂದುಕೊಟ್ಟಿರುವ ಸಂಪಾದಕರಾದ ತಿಮ್ಮಪ್ಪ ಭಟ್ಟರಿಗೆ ಇದರಿಂದ ವಂಚನೆಯಾಗುವ-ಅನ್ಯಾಯವಾಗುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿರುವುದು ಮಾತ್ರ ಅಘಾತಕಾರಿ ಅಂಶ.



No comments:

Post a Comment