13 June 2026

ನೀ

ಕಂತುಗಳಲ್ಲಿ ಬದುಕುತ್ತಿರುವ
ಬೇಡದ ನರಳಿಕೆ 
ಕನವರಿಕೆಯ ಬಾಳುˌ
ಅನಿವಾರ್ಯವಾಗಿ ಸಹಿಸುತ್ತಾ 
ನಿರಂತರ ಒಂಟಿತನದ ಏಕಾಂತದ ಗೋಳು./🙃
ಈಗಲೆ ಅವಸರಿಸಿ 
ಮರಳಿ ಬರಬೇಡ 
ತುಸು ನಿಲ್ಲು..... 
ಈಗಲಾದರೂ ನೊಂದ 
ನನ್ನ ಮನದ 
ಮಾತನ್ನಿಷ್ಟು ಕೇಳುˌ
ಕೊಂಚ ತಡೆದೆ ಬಂದು
ನಿನ್ನ ಬರುವನ್ನೆ ಕಾಯುತ್ತಾ
ತೆರೆದುಳಿಯುವ ನನ್ನ ಕಣ್ರೆಪ್ಪೆಗಳ
ನಡುಗುವ ನಿನ್ನವೆ ಕೈಗಳಿಂದ 
ಕೊನೆಯ ಸಲ ಮುಚ್ಚುವೆಯಂತೆ....
ಇನ್ನೂ ಸ್ವಲ್ಪ ತಾಳು.//😌


- 🙂


https://youtu.be/8aDa39JdFu8?si=HRBOefLMsKeKOJVT