08 February 2013

ಸುಳ್ಳೇ ಸುಳ್ಳು, ಎಲ್ಲಾ ಸುಳ್ಳೆ ಸುಳ್ಳು....


ಮೂರು ಮುಕಾಲು ಘಂಟೆ ಬಂಡಲ್ ಕಟ್ಟುತ್ತಾ ಶೆಟ್ಟರ್ ಓಡಿಸಿದ ಹಳಿಯಿಲ್ಲದ ರೈಲು ಕಡೆಗೂ ನಿಲ್ತಲ್ಲಪ್ಪ ರಾಮ ರಾಮ!.... ಇಷ್ಟು ದಭ ದಭೆ ಕೇಳಿಯೂ ಬಡ ಕನ್ನಡಿಗರ ಕಿವಿ ಹೊಟ್ಟಿ ಹೋಗಲಿಲ್ಲವಲ್ಲ ಏನಾಶ್ಚರ್ಯ?!
ಮೂರು ಮುಕ್ಕಾಲು ಘಂಟೆ ನಾಲ್ಕು ವರ್ಷದಿಂದ ಹಾಡಿದ್ದನ್ನೆ ಹಾಡಿ, ಹೊಗಳಿಕೊಂಡರು ತಮ್ಮನ್ನೆ ತಾವು.... ತೆಗೆದಿದ್ದರೂ ನಾಡನ್ನ-ನಾಡಿನ ಮಾನವನ್ನ ಮುಲಾಜಿಲ್ಲದೆ ಲಗಾಡಿ/ ಬಜೆಟ್ ಎಂಬ ಕ"ಮಲ"ದ ಹೂವನ್ನ ಬಡ-ಎಬಡ-ನಡು ಕನ್ನಡದಲ್ಲಿ ಜೊತೆಗೊಂದಿಷ್ಟು ಇಂಗ್ಲಿಸ್.... ನಂಚಿಕೊಂಡು ಒತ್ತಾಯಿಸಿ ಸುರಿದೆ ಬಿಟ್ಟರ್, ನಮ್ಮ ಅಳಿದೂರಿಗೆ ಉಳಿದ ಗೌಡ ಶೆಟ್ಟರ್ ಬೇಡದಿದ್ದರೂ ತೋಯ್ದು ತೊಪ್ಪೆಯಾಗಿ ಕನ್ನಡಿಗರು ಹಗಲ್ಲಲ್ಲೆ ಕೆಟ್ಟರ್,,,, ಅಸಹಾಯಕವಾಗಿ ಕಣ್ ಕಣ್ ಬಿಟ್ಟರ್//

31 January 2013

"ನೇರ"ವಾಗಿ ಮೂರೂ"ಬಿಟ್ಟ" ಈ ಗತಿಗೆಟ್ಟ "ದಿಟ್ಟ"ರು ಊರಿಗೇ ದೊಡ್ಡವರು......


ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಕರುನಾಡಿನಲ್ಲಿ ನಡೆಯುತ್ತಿರುವ ಕೆಲವು ಪತರಕರ್ತ ಪರದೇಶಿಗಳ ನಿತ್ಯ ನಾಟಕಕ್ಕೆ ಕೊನೆಯೆ ಇದ್ದಂತೆ ಕಾಣುತ್ತಿಲ್ಲ. ಕರಿಮುಸುಡಿಯ ಪದ್ಮನಾಭನಗರದ ಮುಸುವನ ಕರ ಪತ್ರಿಕೆ, ರಾಣಿರಸ್ತೆಯ ಇಶ್ಶಿಶ್ಶಿ ಭಟ್ಟನ ಕಪ್ರ, ಅವನದ್ದೆ ಸಂಪಾದಕತ್ವದ ಕ್ರೆಸಂಟ್ ರಸ್ತೆಯ ಪಿಸುಂಟು ಸುವರ್ಣಕ್ಕ, ಹಾಕಿ ಮೈದಾನದ ಹತ್ತಿರದ ಹಾಕಿದ್ದನ್ನೆ ಹಾಕಿ ತೌಡುಕುಟ್ಟುವ ಟಿವಿ ಒಂಬತ್ತು ಇವೆಲ್ಲ ಪೈಪೋಟಿಗೆ ಬಿದ್ದವಂತೆ ಕನ್ನಡಿಗ ಓದುಗ ಹಾಗೂ ವೀಕ್ಷಕರ ಅಭಿರುಚಿಯನ್ನ ಮನಸಾ ಕೆಡಿಸುತ್ತಿವೆ. ಇವರು ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರಾ! ಅಂತ ನಾವು ಓದುಗರೂ/ ನೋಡುಗರು ಕಣ್ ಕಣ್ ಬಿಡುವ ಹೊತ್ತಿನಲ್ಲಿ ಈ ಗಡವರೆಲ್ಲ ಇನ್ನಷ್ಟು ಕೆಳಕ್ಕಿಳಿದು "ನಾವು ಇದಕ್ಕಿಂತ ಕೆಳ ಮಟ್ಟಕ್ಕಿಳಿಯಬಲ್ಲೆವು" ಅನ್ನೋದನ್ನ ನಾಚಿಕೆ ಬಿಟ್ಟು ಸಾಬೀತು ಮಾಡಿಯಾಗಿರುತ್ತದೆ. ಈ ಒಂದು ವಿಷಯದಲ್ಲಿ ಇವರೆಲ್ಲರೂ ತುಂಬಾ ಫಾಸ್ಟು. ಉದಹಾರಣೆಗೆ ಭಟ್ಟನ ರಿಯಲ್ ಎಸ್ಟೇಟ್ ಕಾಸಿನ ದಾಹಕ್ಕೆ "ನಿತ್ಯ" ನಿಮ್ಮ ಮನೆಯ ಟಿವಿ ಪರದೆಯ ಮೇಲೆ "ಸುವರ್ಣ"ಕ್ಕನ ಕೃಪೆಯಿಂದ ಕಂಡಕಂಡ ಕಂಮಂಗಿಗಳ ಉಚಿತ ದರ್ಶನವಾದದ್ದು ನಿಮಗೆ ನೆನಪಿದ್ದೇ ಇದೆ. ಇತ್ತೀಚೆಗೆ ವಿಶಿಲ್ ಭಟ್ಟ ಹಾಗೂ ಕರಿಮುಸುಡಿಯ ಆದಿಮಾನವನ ನಡುವೆ ನಡೆದ ಹೀನ ಕಚ್ಚಾಟವೆ ಇದಕ್ಕೊಂದು ಅತ್ಯುತ್ತಮ ಸ್ಯಾಂಪಲ್. ಕರ್ರಗೆ ಮಿಂಚುತ್ತಿರುವ ಕರುನಾಡಿನ "ಚಂಡಾ"ಳನೊಬ್ಬನ ಮುರಿದ ಮನೆಯಲ್ಲಿ ಇವರಿಬ್ಬರೂ ಸೇರಿ ಗಳ ಹಿರಿದು ಹಿರಿದು ಚಳಿ ಕಾಯಿಸಿಕೊಂಡರು. ಕಾಸುಕೊಟ್ಟು ಈ ಕರ್ಮಾಂತರಗಳನ್ನೆಲ್ಲ ಈ ಕನ್ನಡಿಗರು ಹಲ್ಲುಕಚ್ಚಿ ಸಹಿಸಿಕೊಂಡು ನೋಡಬೇಕಾಯಿತು. ಕಂಡವರ ಮನೆ ಹೊತ್ತಿ ಉರಿದರೆ ಇವರಿಗೆ ಎಲ್ಲಿಲ್ಲದ ರಣೋತ್ಸಾಹ ಉಕ್ಕುಕ್ಕಿ ಬರುತ್ತದೆ. ಅದೇ ಕರಿಮುಸುಡಿಯವನ ಮನೆ ಕಥೆ ಎಕ್ಕುಟ್ಟಿ ಹೋಗಿದ್ದಾಗ, ಲಿಂಬೆಹುಳಿಯಂತಹ ಆ ಕಾಲದ ಆ(ಯೋ)ರೋಗ್ಯ ಮಂತ್ರಿಯ ಜೊತೆ ರಾಣಿರಸ್ತೆಯ ಅರ್ಧನಾರೀಶ್ವರ ಕರೆವೆಣ್ಣೊಂದನ್ನ ದೆಹಲಿಯ ಚಳಿಗೆ ಬೆಚ್ಚಗಾಗಲು ಜಂಟಿಯಾಗಿ ಬಳಸಿಕೊಂಡಾಗ, ಜನತೆಯನ್ನ ಭರ್ಜರಿಯಾಗಿ ಬೋಳಿಸಿದ ಜನಾರ್ಧನ ರೆಡ್ಡಿಯಿಟ್ಟ ಸ"ಗಣಿ"ಯನ್ನ ಗೋರಿಕೊಂಡು ಇದೇ ವಿಷ್ಪರ್ ಭಟ್ತ ಎರಡೂ ಕೈಯಲ್ಲಿ ತಿಂದದ್ದು ಲೋಕಾಯುಕ್ತ ತನಿಖೆಯಲ್ಲಿ ಸಾಧಾರ ಸಿಕ್ಕಿ ಹಾಕಿಕೊಂಡಾಗ ಮಾತ್ರ ಯಾವ "ಒಂಬತ್ತನೆ" ನಂಬರಿನ "ಸಮಯ"ಸಾಧಕ "ಸುವರ್ಣ"ಕ್ಕನ ಸಂಬಂಧಿಗಳು ಈ ಬಗ್ಗೆ ವಾರಗಟ್ಟಲೆ ಅತ್ಲಾಗಿರಲಿ ಒಂದೈದು ನಿಮಿಷ ತಜ್ಞ(?)ರನ್ನ ಎತ್ತಾಕಿಕೊಂಡು ಬಂದು ಪ್ಯಾನಲ್ ಚರ್ಚೆ ನಡೆಸಿದ್ದು ನನಗಂತೂ ನೆನಪಿಲ್ಲ, ನಿಮ್ಗ್ಯಾರಿಗಾದರೂ ಇದೆಯ? ಬೀದಿ ಬದಿ ನಾಯಿ ಹೇತರೂ ಅದನ್ನ "ಬ್ರೇಕಿಂಗ್ ನ್ಯೂಸ್" ಮಾಡುವ ಈ ಮೂರು ಬಿಟ್ಟ ಇಂತಹ ಚೀಪ್ "ಪಬ್ಲಿಕ್" ಮಂದಿಯನ್ನ "ನಿತ್ಯಾ" ಪ್ರಕರಣದಲ್ಲಿ ಕಂಡೆ ಕನ್ನಡಿಗ ಹೇಸಿಕೊಂಡಿದ್ದ. "ಕಾಳಿ"ಬೋಳೀರನ್ನೆಲ್ಲ ಕರೆತಂದು ಕಂಡ ಕಂಡ ವಿಷಯಗಳಲ್ಲೆಲ್ಲ ಕೆರೆದೇ ಕೆರೆದರೂ ನಾಡಿಗಾಗಲಿ, ನೆಲದ ಜನತೆಗಾಗಲಿ ಈ ದರಿದ್ರದವರಿಂದ ಮೂರುಕಾಸಿನ ಪ್ರಯೋಜನವಂತೂ ಆಗಲಿಲ್ಲ. ಇದ್ದಿದ್ದರಲ್ಲಿ "ಜನಶ್ರೀ"ಯೊಂದು ಚೂರು ವಾಸಿ. ಇನ್ನು "ಕಸ್ತೂರಿ"ಯ ಕೆಟ್ಟವಾಸನೆ ಕಸ್ತೂರ್ಬಾ ರಸ್ತೆಯಿಂದಾಚೆಗೆ ಇನ್ನೂ ಹರಡಲು ಪರದಾಡಲಾಗುತ್ತಿದೆ. ಯಾಕೋ ಅದಕ್ಕಿನ್ನೂ ಮಲರೋಗ ವಾಸಿಯಾದ ಹಾಗಿಲ್ಲ. ಇವತ್ತಿನ ದಿನವನ್ನೆ ತೆಗೆದುಕೊಳ್ಳಿ "ದುನಿಯ"ದಲ್ಲಿ ಇದೇ ಅತಿಮುಖ್ಯ ಸಂಗತಿಯೇನೋ ಎಂಬಂತೆ ಸ್ವಯಂಘೋಷಿತ "ಕರಿಚಿರತೆ"ಯೊಂದರ ಅಧಿಕೃತ/ ಅನಧಿಕೃತ ಸಂಸಾರಗಳ ವಿಭಿನ್ನ ಧಾಟಿಯ ಆವೃತ್ತಿಗಳನ್ನ "ಸುವರ್ಣ"ಕ್ಕನ ಜೊತೆ "ಒಂಬತ್ತ"ರಲ್ಲೂ ನೋಡಿ ಅದಾಗಲೆ ರೋಸಿಹೋಗಿದ್ದ ಕನ್ನಡಿಗ ಮಲಗುವ ಹೊತ್ತಿಗೆ ಸುವರ್ಣಕ್ಕನ ಅಂಗಳದಲ್ಲಿ ನಡೆದ ಜಂಗಿಕುಸ್ತಿಯ ನೇರ ಪ್ರಸಾರವನ್ನ ಬೇಡದಿದ್ದರೂ ತೋರಿಸಿ ತಲೆಹಡೆದರು. ಕಾಸು ಕೊಟ್ಟ ತಪ್ಪಿಗೆ ಈ ಖದೀಮರ ತೆವಲುಗಳನ್ನೆಲ್ಲ ಕಂಡು ನಲಿಯುವ ಒತ್ತಾಯದ ಶಿಕ್ಷೆ ಬಡ ವೀಕ್ಷಕರದ್ದು. ಸಚಿವ ಸೋಮಣ್ಣರಿಗೆ ಇನ್ನೊಬ್ಬ "ವ್ಯಭಿಚಾರಿ" ಸಚಿವ ಮೊನ್ನೆ ರಾತ್ರಿ ಖಾಸಗಿಯಾಗಿ ಕಪಾಳಮೋಕ್ಷ ಮಾಡಿದ್ದ ಅನ್ನುವ ಬ್ರೇಕಿಂಗ್ ಸುದ್ದಿಯೆ ಈ ಅಧ್ವಾನಗಳಿಗೆಲ್ಲ ನೇರ ಕಾರಣ. ಅದಕ್ಕೆ ಸಮಜಾಯಷಿ ಕೊಡಲು ಬಂದ ಸರ್ವರ್ ಸೋಮನ ಗ್ಯಾಂಗ್ ಕಂಡು ಬೆಚ್ಚಿ ಬೆದರಿದ ಚೋರಗುರು ವಿಶ್ಶಿಶ್ಶಿ ಭಟ್ಟ ಹಿಂದಿನ ಬಾಗಿಲಿಂದ ತನ್ನ ಕದ್ದ ಬೆಂಜ್ ಕಾರಿನಲ್ಲಿ ಓಡಿ ಹೋಗಿ ಪಾರಾದ. ಅವನ ಚಾಂಡಾಲ ಶಿಷ್ಯಂದಿರಾದ ಮೂರುನಾಮದ ರಂಗ ಹಾಗು ಹನುಮಕ್ಕ ಇಬ್ಬರೂ ಸಿಕ್ಕಿಬಿದ್ದರು. ಇಷ್ಟಾಗಿಯೂ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬಂತೆ ಸೋಮನ ಪುಂಡ ಪಡೆಯ ಶೂರನೊಬ್ಬನ ಹದಿನೈದು ಕ್ಷಣದ ಶೌರ್ಯವನ್ನ ಪದೆಪದೆ ಪ್ರಸಾರ ಮಾಡಿ ತಾವು ಸಾಚ ಎಂದು ಅವಲತ್ತುಕೊಳ್ಳುವ ಎಂದಿನ ಹೀನಕಾರ್ಯಕ್ಕೆ ರಂಗ ಮತ್ತು ಹನುಮ ಕೈ ಹಾಕಿದರು. ಸಾಲದ್ದಕ್ಕೆ ನೇರ ಪ್ರಸಾರದಲ್ಲಂತು ದೊಡ್ಡ ದೊಂಡೆಯಲ್ಲಿ ಪತ್ರಿಕಾ ಸ್ವಾತಂತ್ರದ ಕುರಿತು ಸೋಮನಿಗೂ, ಅವರ ಬೆಂಬಲಕ್ಕೆ ಬಂದಿದ್ದ ಶಿವನಗೌಡ ನಾಯಕನಿಗೂ ಮಾತಾಡಲೆ ಬಿಡದೆ ಬೊಬ್ಬಿಟ್ಟರು. ಇನ್ಯಾರದೋ ತಪ್ಪಾಗಿದ್ದರೆ ಇನ್ನಷ್ಟು ಎಳೆಯುತ್ತಿದ್ದ ಚರ್ಚೆಯನ್ನ ಇವತ್ತು ಚುಟುಕಾಗಿ ಮೊಟಕುಗೊಳಿಸಿ ಮೇಲೆದ್ದರು! ಇದೇ ಹನುಮಕ್ಕನೆಂಬ ಕಪಿ ತಮ್ಮ ಚಾನಲ್ಗಳ ಹರಾಮಿ ದಂಧೆಗೆ "ಅಭಿರುಚಿ ಹೀನ ಕನ್ನಡಿಗರೆ" ಕಾರಣ ಅಂತ ಇತ್ತೀಚೆಗೆ "ಕಪ್ರ"ದಲ್ಲಿ ಊಳಿಟ್ಟಿತ್ತು. ಆಗ್ಲೆ ಯಾರಾದರೂ ಕನ್ನಡದ ಮಾನದ ಹೊಣೆಹೊತ್ತ ದೊಣೆನಾಯಕರ್ಯಾರಾದರೂ ಸರಿಯಾಗಿ ವಿಚಾರಿಸಿಕೊಳ್ಳಬೇಕಾಗಿತ್ತು, ಅವರೆಲ್ಲ ವಸೂಲಿಯಲ್ಲಿ ಬ್ಯುಸಿಯಾಗಿದ್ದರಿಂದ ಈ ಕಪಿ ಅರಾಮಾಗಿ ಅನ್ನಬಾರದ್ದನ್ನ ಅಂದಿದ್ದರೂ ಪಾರಾಯ್ತು. ನಾಳೆಯೂ ನೋಡಿ ಬೇಕಾದರೆ "ಕಪ್ರ"ದಲ್ಲಿ ತಮ್ಮ ಸಾಚಾತನಕ್ಕೆ ಸಾಬೂಬು ಕೊಟ್ಟುಕೊಂಡು ಇಡಿ ಪ್ರಕರಣವನ್ನೆ ತಿರುಚದಿದ್ದರೆ ಕೇಳಿ, ನಂಬಲು ನೀವು "ಹೆಪ್ರ"ರಾಅಗಿರಬೇಕಷ್ಟೆ. ಇಲ್ಲಿ ಸರ್ವರ್ ಸೋಮನ ಸುಭಗತನದ ಬಗ್ಗೆ ಪುರಾವೆ ಒದಗಿಸೋದು ನನ್ನ ಉದ್ದೇಶವಲ್ಲ. ಈ ಊರಿಗೆ ನೀತಿ ಬೋಧಿಸುವ ಕಮಂಗಿಗಳ ಕಂತ್ರಿ ಬುದ್ಧಿಯನ್ನ ಕ್ಯಾಕರಿಸಲಷ್ಟೆ ಹೊರಟಿದ್ದೇನೆ. ನಿಮಗೂ ಅಸಹ್ಯ ಉಕ್ಕಿ ಬಂದರೆ ಈ "ಕಲಾವಿದ"ರ ಮುಖಕ್ಕೆ ಒಳಗಿನ ಕಫವನ್ನೆಲ್ಲ ಎಳೆದು ಉಗಿಯಲು ಹಿಂದುಮುಂದು ನೋಡಬೇಡಿ.

27 January 2013

ಬೋಪ ಲೀಲೆ, ಇವರಿಗೆ ನಾಚಿಗೆಯೆ ಇಲ್ಲವಲ್ಲೆ!


ರಾಮನ ಪಕ್ಷದ ಹರಾಮರು ನಡೆಸುತ್ತಿರುವ ನಿತ್ಯ ಕರು"ನಾಟಕ"ದ ಹೊಚ್ಚ ಹೊಸಾ ಸೀನರಿಗಳನ್ನ ನೋಡುತ್ತಾ "ಕುರಿತೋದದಯುಂ ಪರಿಣತಮತಿ"ಗಳಾದ ಕನ್ನಡಿಗರು ತಮ್ಮ ಇನ್ನಿತರ ಭಾರತೀಯ ಸಹೋದರರ ಮುಂದೆ ತಲೆ ತಗ್ಗಿಸುವ ಅನಿವಾರ್ಯತೆ ಬಂದಿದೆ. ಎಬಡರ ಮುಂದೆ ಎಡವಿ ಬಿದ್ದಂತ ಪರಿಸ್ಥಿತಿ ಬಡ ಕನ್ನಡಿಗರದ್ದು. ಮೊನ್ನೆ ಮೊನ್ನೆ ನಡೆದ "ಓಡಿಹೋದ ಸ್ಪೀಕರ್" ಪ್ರಕರಣವಂತೂ ಇವೆಲ್ಲ ಅಧ್ವಾನಗಳಿಗೆ ಕಳಶವಿಟ್ಟಂತಿತ್ತು. ತೀರ ಬಸ್ಟಾಂಡ್ ಕಿಸೆಕಳ್ಳನ ತರ ತಲೆ ಮರೆಸಿಕೊಂಡು ಅದೆಲ್ಲೋ ಅಜ್ಞಾತ ಸ್ಥಳದಲ್ಲಿ ಹೋಗಿ ಕೂತು ಗುಂಡು ಹಾಕುತ್ತಿದ್ದ ಬೋಪ ಅದ್ಯಾತಕ್ಕೆ ಅರ್ಜೆಂಟಾಗಿ ಸರಗಳ್ಳನ ಗೆಟಪ್ಪಿನಲ್ಲಿ ಮಂಗಳೂರಿಗೆ ಕದ್ದುಮುಚ್ಚಿ ಹಾರಿ ಬಂದನೋ ಆ ಶ್ರೀರಾಮನೆ ಬಲ್ಲ. ಬೂಸಿಯ ಬಳಗದ ಹದಿಮೂರು ಕಪಿಗಳು ಕಡೆಗೂ ಬಂಡೆದ್ದು ಜಗದೀಶನಾಳುವ ಸರಕಾರದ ಬೆಂಡೆತ್ತಲು ತಮ್ಮತಮ್ಮ ರಾಜಿನಾಮೆಯ ಸಹಿತ ನಾಳೆ ತಮ್ಮ ಕಛೇರಿಗೆ ಧಾವಿಸಿ ಬರಲಿದ್ದರೆ ಎನ್ನುವ ಮಾಹಿತಿ ಖಚಿತವಾಗುತ್ತಿದ್ದಂತೆ ಹಿಂದಿನ ದಿನ ರಾತ್ರಿಯೆ ಗಂಟು-ಮೂಟೆ ಕಟ್ಟಿಕೊಂಡು ಗೃಹ ಸಚಿವರ ಖಾಸಗಿ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಪೇರಿಕಿತ್ತ ಬೋಪ ದೇಶಾಂತರ ಓಡಿ ಹೋಗಿ ಕರುನಾಡ ಮಾನ ಕಳೆದ. ಕನಿಷ್ಠ ಪಕ್ಷ ಒಂದು ದೂರವಾಣಿ ಕರೆಗೂ ಸಿಗಲಾರದಂತೆ ಮೂರ್ನಾಲ್ಕು ದಿನ ಅದ್ಯಾವ ಕಗ್ಗಾಡಿಗೆ ಕಟ್ಟಿಗೆ ಒಟ್ಟಲು ಹೋಗಿದ್ದನೋ ಆ ಬೋಪನೆ ಹೇಳಬೇಕು. ಇನ್ನು ಇಲ್ಲಿ ಪರಿಸ್ಥಿತಿ ವಿಪರೀತಕ್ಕೆ ಹೋಗಿ ರಾಜ್ಯಪಾಲರು ಶೆಟ್ಟರನ್ನು "ಸಮಾ" ವಿಚಾರಿಸಿಕೊಂಡ ಮೇಲೆ ಅನಿವಾರ್ಯವಾಗಿ ಉಟ್ಟ ಬಟ್ಟೆಯಲ್ಲಿಯೆ ಮುಂಬೈ ವಿಮಾನ ನಿಲ್ದಾಣಕ್ಕೆ ಓಡಿ ಬಂದಿದ್ದ ಈ ಬೋಪ ಹೆದ್ದಾರಿ ದರೋಡೆಗೆ ಹೊಂಚು ಹಾಕಲು ಹೊರಟ ಹುದ್ದರಿಯಂತೆ ಮುಂಬೈಯ ಸುಡು ಬಿಸಿಲಿನಲ್ಲಿಯೂ ಮಂಕಿ ಕ್ಯಾಪ್ ಹಾಗೂ ಕಿವಿ ಮುಚ್ಚುವ ಕೋಟು ಧರಿಸಿ ಕಳ್ಳನಂತೆ ವಿಐಪಿ ಲಾಂಜಿಗೂ ಹೋಗದೆ ಮುಖಮುಚ್ಚಿಕೊಂಡು ಅನುಮಾನಾಸ್ಪದವಾಗಿ ಅಡ್ಡಾಡುತಿದ್ದಾಗ ದಕ್ಷಿಣ ಕನ್ನಡದ ಹೊರೆಹೊತ್ತ ಪಕ್ಷದ ಕಾರ್ಯದರ್ಶಿಯ ಕಣ್ಣಿಗೆ ರೆಡ್'ಹ್ಯಾಂಡಾಗಿ ಸಿಕ್ಕು ಹಾಕಿಕೊಂಡು ಇಂಗು ತಿಂದ ಮಂಗನಂತೆ ವಿಮಾನ ಇಳಿವ ಕಡೆಕ್ಷಣದಲ್ಲಿ ವೇಷ ಮರೆಸಿಕೊಳ್ಳಲು ರೆಡ್ಡು ಸ್ವೆಟ್ಟರ್ ಧರಿಸಿ ಮಂಗಳೂರಿನ ನಿಗಿನಿಗಿ ಸೆಖೆಯಲ್ಲೂ ಬೆವರೊರಿಸಿಕೊಳ್ಳುತ್ತಾ ಹಾಸ್ಯಾಸ್ಪದನಾಗಿ ಕಂಗೊಳಿಸುತ್ತಿದ್ದ. ಮುಂಬೈ ಟು ಮಂಗಲೂರು ಪ್ರಯಾಣದ ಪರ್ಯಂತ ಬೋನಿನಲ್ಲಿ ಸಿಕ್ಕಿದ ಹೆಗ್ಗಣದಂತೆ ಚಡಪಡಿಸಿತ್ತಿದ್ದ ಬೋಪನ ದುರಾದೃಷ್ಟಕ್ಕೆ ಮಂಗಳೂರು ವಿಮನ ನಿಲ್ದಾಣದಲ್ಲಿ ವಿಐಪಿ ಲಾಂಜ್ ಹಾಗೂ ಹೊರ ಹೋಗುವ ಮಾರ್ಗ ಇರಲೆ ಇಲ್ಲ! ಈತನ ಖದೀಮ ಅವತಾರವನ್ನ ಸಿ ಸಿ ಟಿವಿಯಲ್ಲಿ ಕಂಡು ಅನುಮಾನಗೊಂಡ ಮುಂಬೈ ಏರ್'ಪೋರ್ಟ್ ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ದರೋಡೆಗೆ ಹೊಂಚುಹಾಕುತ್ತಿರುವ ಖದೀಮನಂತೆ ಕಾಣುತ್ತಿದ್ದ ಬೋಪನನ್ನ ಬಂಧಿಸಿ ವಿಚಾರಿಸಿರದಿರುವುದು ಸಮಸ್ತ ಕನ್ನಡಿಗರ ಅಜ್ಜಿ ಪುಣ್ಯ ಅಷ್ಟೆ! ಹೇಳಿಕೇಳಿ ಇದು ಭಯೋತ್ಪಾದಕರು ವಿಮಾನಗಳನ್ನೆ ಅಪಹರಿಸುತ್ತಿರುವ ವಿಪರೀತ ಕಾಲ. ವೇಷ- ಭೂಷಣ ಹಾಗೂ ನಡುವಳಿಕೆಯಲ್ಲಿ ಬೋಪ ಯಾವುದೆ ಮೂರುಕಾಸಿನ ಭಯೋತ್ಪಾದಕನಿಗಿಂತಲೂ ಭಿನ್ನವಾಗೇನೂ ಅಂದು ಗೋಚರಿಸುತ್ತಿರಲಿಲ್ಲ. ಮಂಗಳೂರಿನ ಅರ್ಧ ವಿಮಾನ ನಿಲ್ದಾಣವಿರುವುದು ರಾಜ್ಯ ವಿಧಾನಸಭೆಯ ಉಪ-ಸಭಾಪತಿ ಯೋಗೀಶ್ ಭಟ್ಟರ ಮತಕ್ಷೇತ್ರದಲ್ಲಿ ಅವರಿಗೇನೆ ಈ ಬೋಪಾಗಮನದ ಸುದ್ದಿ ಗೊತ್ತಿರಲಿಲ್ಲವಂತೆ! ಶಿಷ್ಟಾಚಾರದ ಪ್ರಕಾರ ಸ್ಥಳಿಯ ಪೊಲೀಸ್ ಕಮೀಷನರ್'ರಿಗೂ ಭದ್ರತೆಯ ಕಾರಣಕ್ಕೆ ಈ ಸಂಗತಿ ತಿಳಿದಿರಲೆಬೇಕು. ಆದರೆ ಈ ಅಪಾಪೋಲಿಯಂತೆ ಮಂಗಳೂರಿಗೆ ನುಸುಳಿ ಅಲ್ಪಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಂಡ ಬೋಪ ಓಡಿ ಬರುವ ಸುದ್ದಿ ಅವರ್ಯಾರಿಗೂ ಅವರ ತಾಯಾಣೆಗೂ ಗೊತ್ತಿರಲಿಲ್ಲವಂತೆ! ಕಮಲ ಪಕ್ಷದ ಸ್ಥಳಿಯ ಕಪಿಗಳೂ ಈ ವಿಷಯದ್ಸಲ್ಲಿ ಅಜ್ಞರಾಗಿದ್ದರು. ಇನ್ನು ವಿಮಾನ ನಿಲ್ದಾಣದಿಂದ ತರಾತುರಿಯಲ್ಲಿ ಓಡಿ ಬಂದ ಬೋಪ ಪುತ್ತೂರಿನ ಬಳಿ ಮಾಧ್ಯಮದವರ ಕಣ್ಣು ತಪ್ಪಿಸಲು ಇನ್ನೊಂದು ಖಾಸಗಿ ಕಾರೇರಿ ಮಡಿಕೇರಿಗೆ ಊರುಕೇರಿ ಎದ್ದುಬಿದ್ದು ಥೇಟ್ ಬೀದಿ ಕಳ್ಳನಂತೆ ಓಡಿ ಹೋದ. ಹಿಂದೊಮ್ಮೆ ಕಿಷ್ಕಿಂದೆಯ "ರಾಮು"ನನ್ನೆ "ಮುಲು"ಕುವ ರೇಪಿಷ್ಟ್ ಗೆಟಪ್ಪಿನ ಕಪಿಯೊಂದರ ರಾಜಿನಾಮೆ ಪ್ರಹಸನದಲ್ಲಿ "ಒಲ್ಲೆ ಒಲ್ಲೆ" ಅಂತ ಬೋಪ ಬೆಂಗಳೂರು ಬಿಟ್ಟು ಓಡಿ ಹೋಗಿದ್ದು. ಆಗ ಅದೇ ಕಪಿ ಅಟ್ಟಾಡಿಸಿಕೊಂಡು ಹೋಗಿ ಬೋಪನನ್ನ ಹುಡುಕಿ ಹಿಡಿದು ರಾಜಿನಾಮೆ ಕೊಟ್ಟು ನಿಟ್ಟುಸಿರು ಬಿಟ್ಟದ್ದು ಎಲ್ಲಾ ನೆನಪಿನಲ್ಲೆ ಇರುವಾಗ: ಆ ಕಣ್ಣಾಮುಚ್ಚಾಲೆ ಆಟವನ್ನ ನೆನಪಿಸಿಕೊಂಡು ಕನ್ನಡಿಗರು ತಮ್ಮ ಮನೆಯೊಳಗೇನೋ ಇದನ್ನ ಕ್ಯಾಕರಿಸಿ ನಗಲು ಒಂದು ಕಾರಣ ಹುಡುಕಿಕೊಳ್ಳಬಹುದು, ಆದರೆ ದೇಶದಾದ್ಯಂತ ಈ ಪ್ರಕರಣದಿಂದ ರಾಜ್ಯದ ಮಾನ ಪಂಛೇರಿಗೆ ಪಂಚರ್ ಆಗಿ ಆದ ಸಾರ್ವತ್ರಿಕ ನಗೆಪಾಟಲಿಗೆ ನಾಚಿ ತಲೆ ತಗ್ಗಿಸಿಕೊಳ್ಳುವುದರ ಹೊರತು ಇನ್ಯಾವುದೇ ಮಾರ್ಗೋಪಾಯ ಕನ್ನಡಿಗರಿಗೆ ತೋಚುತ್ತಿಲ್ಲ.

ಇದೇಕೆ ತಾತ್ಸಾರ? ಇದ್ಯಾತರ ಅವತಾರ?


ಬಹಳ ಬೇಸರದಿಂದಲೆ ಬರೆಯುತ್ತಿದ್ದೇನೆ. ಎಸ್ ಜಾನಕಿಯಮ್ಮ ಪದ್ಮ ಪ್ರಶಸ್ತಿಯನ್ನ ತಿರಸ್ಕರಿಸಿ ಧೀಮಂತರಂತೆ ಗೋಚರಿಸುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಹೆಮ್ಮೆ, ಸ್ವಲ್ಪ ವಿಷಾದದಿಂದ ಈ ಮಾತನ್ನ ಹೇಳಲೆ ಬೇಕು ಅಂತ ಅನ್ನಿಸುತ್ತಿದೆ. ಮಾತಿನಲ್ಲಿ ಪ್ರಕಟವಾಗದ ಅವ್ಯಕ್ತ ಅಭಿವ್ಯಕ್ತಿಯ ಎರಡನೆ ದರ್ಜೆಯ ಉಪಚಾರಕ್ಕೆ ಒಳಗಾದ ಸಮಸ್ತ ದಕ್ಷಿಣ ಭಾರತೀಯ ಮನಸ್ಸುಗಳ ಮೂಕಭಾವಗಳಿಗೆ ಜಾನಕಿಯಮ್ಮ ಧ್ವನಿಯಾದರಷ್ಟೆ. ಇಂತಹ ಕ್ಷೀಣ ಹತಾಶ ಬಂಡಾಯದ ಹೊರತು ಅದೆಷ್ಟು ಪ್ರತಿಭಾವಂತರು ತುಟಿಯೆರಡು ಮಾಡದೆ ಸುಮ್ಮನಿದ್ದಾರೆ ಎನ್ನುವುದನ್ನ ನೋಡುವಾಗ ಸಂಕಟವಾಗುತ್ತದೆ. ಯಾವುದೆ ಕೋನದಿಂದ ನೋಡಿದರೂ ದ"ಕ್ಷೀಣ" ಭಾರತೀಯ ಪ್ರತಿಭೆಗಳು ಈ ದೊಡ್ಡ ದೇಶದ ಪ್ರಗತಿಗೆ, ಹೆಮ್ಮೆಗೆ ಸೇರಿಸಿದ ಗರಿ ಉತ್ತರದವರ ಹೋಲಿಕೆಯಲ್ಲಿ ಕಡಿಮೆಯಿಲ್ಲ. ಅವರಲ್ಲಿ ಲತಕ್ಕ ಇದ್ದರೆ, ನಮ್ಮಲ್ಲಿ ಸುಶೀಲಮ್ಮ ಇದಾರೆ. ಅವರಲ್ಲಿ ಆಶಕ್ಕ ಇದ್ದರೆ ನಮ್ಮೂರಲ್ಲೂ ಜಾನಕಿಯಮ್ಮ ಇದಾರೆ. ರಫಿ ಸಾಹೇಬರಿಗೆ ಪ್ರತಿವಾದಿ ಭಯಂಕರ ಶ್ರೀನಿವಾಸರು ಯಾವುದರಲ್ಲಿ ಕಡಿಮೆ? ಕಿಶೋರ್ ಕುಮಾರರ ಮಿಮಿಕ್ರಿ ಧ್ವನಿಗೆ ನಮ್ಮ ಬಾಲಸುಬ್ರಮಣ್ಯಂರ ಬಹು ಮಜಲಿನ ಧ್ವನಿ ಯಾವ ರೀತಿಯಲ್ಲಿ ತಾನೆ ಕಡಿಮೆ? ಅವರಿಗೆ ಉತ್ತರಾದಿಗೆ ನಾವೇ ಭೀಮಸೇನರನ್ನ ಕಡ ಕೊಟ್ಟರೂ, ನಮ್ಮ ತಿಜೋರಿಯಲ್ಲಿ ಇನ್ನೂ ಎಮ್ ಎಸ್ ಎನ್ನುವ ರತ್ನ ವಿದ್ದೇ ಇತ್ತು. ಅವರ ಒಬ್ಬ ಶೋಮ್ಯಾನ್ ರಾಜ್ ಕಪೂರ್ ಮುಂದೆ ನಾವು ಶಂಕರ್ ಮತ್ತು ಮಣಿ ಎನ್ನುವ ಎರಡೆರಡು "ರತ್ನ"ಗಳನ್ನ ನಿಲ್ಲಿಸ ಬಲ್ಲವು. ಭಾರತೀಯ ಮೊಜಾರ್ಟ್ ಮತ್ತು ಬಿತೋವನ್ ಇಬ್ಬರೂ ಮದರಾಸು ಈ ಭಾರತೀಯ "ಇಳೆ"ಗೆ ಇತ್ತಿರೋ "ರೆಹಮ್" ಅನ್ನೋದು ಎಲ್ಲರಿಗೂ ಗೊತ್ತು. ಲಂಬೂ ನಟರೊಬ್ಬರು ಇತ್ತೀಚೆಗೆ ಮುಂಬೈನಲ್ಲಿ ಸವಾಲಿನ ಪಾತ್ರಕ್ಕೆ ಬಣ್ಣ ಹಚ್ಚಿ "ಪಾ" ಅಂತ ಒರಲಿ ಭೇಷ್ ಅನ್ನಿಸಿಕೊಂಡಿರಬಹುದು. ( ಅವರನ್ನ ಆ ಪಾತ್ರಕ್ಕೆ ಕಟೆದದ್ದು ಮದರಾಸಿನ ಬಾಲ್ಕಿ ಅನ್ನೋದು ವಿಚಿತ್ರವಾದರೂ ಸತ್ಯ.). ಆದರೆ ಆ ಕಾಲದಿಂದ ಸವಾಲನ್ನೇ ಬದುಕಾಗಿಸಿಕೊಂಡಿರುವ ನಮ್ಮ "ಕಮಲ"ನ ಕಮಾಲ್ ಮುಂದೆ ಅದ್ಯಾತರ ಛದ್ಮವೇಷ ಸ್ವಾಮಿ? ಕಾಕಾ ರಾಜೇಶ್ ಖನ್ನಾರಿಗೆ ಮರಣೋತ್ತರ ಪ್ರಶಸ್ತಿ ಸಲ್ಲ ಬಹುದಾಗಿದ್ದರೆ ನಮ್ಮ "ಸಾಹಸ ಸಿಂಹ" ವಿಷ್ಣು ಯಾಕೆ ಅಂತಲ್ಲಿ ಸಲ್ಲುವುದಿಲ್ಲ? ನಮ್ಮ ಎಂಜಿಆರ್, ಎನ್'ಟಿಆರ್, ರಾಜಣ್ಣ ಯಾವ ದಿಲೀಪ, ದೇವಾನಂದ, ಸುನೀಲದತ್ತರಿಗಿಂತ ಕಡಿಮೆ? ಇವತ್ತಿಗೂ ನಮ್ಮಿಂದ ಅವರು ಎರವಲು ಪಡೆದಿದ್ದ ಪಡುಕೋಣೆಯ ಗುರುದತ್ತರನ್ನ ಮೀರಿಸುವ ತಂತ್ರಜ್ಞರು ಅವರಲ್ಲಿನ್ನೊಬ್ಬರು ಇದ್ದರೆ ತೋರಿಸಿ ಕೊಡಲಿ ನೋಡೋಣ. ವೈಜಯಂತಿಮಾಲ, ವಹೀದಾ ರೆಹಮಾನ್, ರೇಖಾ, ಹೇಮಾಮಾಲಿನಿ, ಶ್ರೀದೇವಿ, ಜಯಪ್ರದಾ ಇವರೆಲ್ಲ ಎಲ್ಲಿ ಉದ್ಭವವಾಗಿ ಅಲ್ಲಿಗೆ ವಲಸೆ ಹೋದವರು. ಒಬ್ಬ ದೇವೆ ಗೌಡ ಪ್ರಧಾನಿಯಾದರೆ ಸುಶುಪ್ತ ಹೊಟ್ಟೆಕಿಚ್ಚಿನಿಂದ ಅವರ ರೂಪ, ಬಣ್ನ, ಊಟವನ್ನೆಲ್ಲ ಸುಖಾಸುಮ್ಮನೆ ಎತ್ತಾಡಿ ಕೊಂಡ ಉತ್ತರದ ಮಾಧ್ಯಮಗಳು ಪಿ ವಿ ನರಸಿಂಹರಾಯರನ್ನೂ ಚಿತ್ರವಿಚಿತ್ರ ವ್ಯಂಗ್ಯಚಿತ್ರಗಳಲ್ಲಿ ಗೇಲಿ ಮಾಡುತ್ತಿದ್ದವು. ಅದೇ ಅವರ ಮನ"ಮೌನ"(ಗ್ರಾಮ)ಸಿಂಹ ಕಡೆದು ಕಟ್ಟೆ ಹಾಕಿದ್ದೇನು ಎನ್ನುವ ಬಗ್ಗೆ ನನಗಂತೂ ಮಾಹಿತಿಯ ಕೊರತೆಯಿದೆ. ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ಯಾರದರೂ ತಿಳಿಸಿ ದಯವಿಟ್ಟು ಪುಣ್ಯ ಕಟ್ಟಿಕೊಳ್ಳಿ. ವಿಕ್ರಂ ಸಾರಾಭಾಯಿಗಿಂತಲೂ ಕಲಾಮಣ್ನ ಮಾಡಿದ ಕಮಾಲ್ ಕಡಿಮೆಯಿಲ್ಲ. ನಮ್ಮ ರಾಜಾರಾಮಣ್ನರ ದಕ್ಷತೆಗೆ ಇನ್ನೊಬ್ಬ ಉತ್ತರದವ ಸರಿಸಾಟಿಯಿಲ್ಲ. ಸಂತಾನಂ, ಉ ಎನ್ ರಾವ್, ಕಸ್ತೂರಿ ರಂಗನ್ ನಂತಹವರು ನಮ್ಮಲ್ಲಿ ಹೆಚ್ಚೆ ಹೊರತು ಅವರಲ್ಲಲ್ಲ ಅನ್ನುವ ವಿವೇಕ ದೆಲ್ಲಿಯಲ್ಲಿ ಆಳುವ ಪುಡಿ ಪಾಳೆಗಾರರಿಗೆ ಮೂಡೋದು ಯಾವಾಗ? ನಮ್ಮದು ಒಂದು ದೇಶವಲ್ಲ "ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ" ಅಂತ ಕಹಿಯಾಗಿಯೆ ಇಂತವರಿಗೆ ಹೇಳ ಬೇಕಾಗಿದೆ. ನಮ್ಮ ಪ್ರತಿಭೆಗಳು ನಿಮಗೆ ಕಾಣದಷ್ಟು ಪೊರೆ ಬಂದಿದೆ ಅಂತಾದರೆ ದಯವಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳೋದು ಉತ್ತಮ. ಜಾಗತಿಕ ಮಟ್ಟದಲ್ಲಿ ಆಂಗ್ಲದ ಮೋಹ ಮಾಡುತ್ತಿರುವ ಹಾನಿಗೆ ಸರಿಸಾಟಿಯಾಗಿ ದೇಶದೊಳಗೆ ಹಿಂದಿ ಹಾಗೂ ಬಿಳಿ ಚರ್ಮದ ಮೇಲಿನ ಅಂಧ ವ್ಯಾಮೋಹ ಎಲ್ಲಾ ಅನಾಹುತಗಳನ್ನೂ ಮಾಡುತ್ತಲಿದೆ ಅನ್ನೋದು ಕೇಳಲಿಕ್ಕೆ ಕಠೋರವಾದರೂ ಹದಿನಾರಾಣೆ ಸತ್ಯ. ಇಂತಹ ತಾರತಮ್ಯಕ್ಕೆ ಕಡೆಗೂ ಜಾನಕಿಯಮ್ಮನಾದರೂ ಧ್ವನಿಯಾದದ್ದಕ್ಕೆ ಸ್ವಲ್ಪ ಹೆಮ್ಮೆಯೂ, ಅವರಿಗೆ ಭಾರತ ರತ್ನ ಸಿಗದ್ದಕ್ಕೆ ಅಲ್ಪ ವಿಷಾದವೂ ಉಳಿದೇ ಇದೆ. ಇದು ಖಂಡಿತಾ ಅಸಹನೆಯ ಒಡಕಿನ ಧ್ವನಿಯಲ್ಲ, ತಾರತಮ್ಯಕ್ಕೆ ಸಟೆದು ನಿಂತ ಹತಾಶೆಯ ನೋವು ಅಷ್ಟೆ.

17 December 2012

ನಿರಂತರ ನನ್ನೆದೆಯಲ್ಲಿ ನಿನ್ನದೆ ಧ್ಯಾನ......

ಕನಸಾದ ಆಸೆಗಳೆಲ್ಲ ಗಾಳಿಪಟದಂತೆ ಮನದ ಬಾನಗಲ ರಂಗು ತುಂಬಿ ಹಾರಾಡುವಾಗ..... ನಲಿವ ಹನಿಸುವುದರ ಜೊತೆಜೊತೆಗೆ ನಯನಗಳಲ್ಲಿ ನೋವಿನ ಹನಿಗಳನ್ನೂ ಉಕ್ಕಿಸುತ್ತಿದೆ, ಕಾತರಕೆ ಕೊನೆಯಿಲ್ಲ ಆತುರದ ಮಾತಲ್ಲ.... ನೋವು ಗೊತ್ತಿರೋದು ಕೇವಲ ಕಾದು ಕುಳಿತ ಅಪೂರ್ಣ ಕನಸಿಗೆ ಸಂಕಟದ ಹೊರೆಹೊತ್ತ ಭಾವುಕ ಮನಸಿಗೆ/ ಮೋಡ ಮುಸುಗಿದ ಬಾನಿನಂಚಿನಲ್ಲಿ ಬೆಚ್ಚಗೆ ಹೊಳೆವ ಭಾನುವಿನ ಕಣ್ಣಲ್ಲಿ ನಿನ್ನದೆ ಪ್ರತಿಬಿಂಬ.... ಮನದ ಹಿತ್ತಲಿನಲ್ಲಿ ಅರಳಿದ್ದ ಕನಸಿನ ಸುಮಗಳಿಗೆ ನನ್ನ ಕಣ್ಣುಗಳಷ್ಟೆ ಅನುಗಾಲದ ಮಾಲಿಗಳು// ಮನಸಿನ ಕವಲಿನಲ್ಲಿ ಕೊನರೊಡೆದಿದ್ದ ಕನಸುಗಳಿಗೆಲ್ಲ ಹೋಗಿ ಸೇರುವ ಗುರಿಯತ್ತ ಯಾವುದೆ...... ಗೊಂದಲಗಳಿರಲಿಲ್ಲ ಗೊತ್ತ?, ಬಾನ ಮನಸೊಳಗೂ ತೀರದ ನೋವಿನ ಮೋಡ ಮಡುಗಟ್ಟಿ ಮಳೆಯ ನಯನದ ಹನಿಗಳಾಗಿ ಹನಿಯುತ್ತಿವೆ.... ಶಿಶಿರದ ಕಾತರ ಹೇಮಂತದಲ್ಲಿ ಚಳಿಯಾಗಿ ಮನ ನಡುಗುವಾಗಲೂ ನನ್ನ ನೇತ್ರಗಳಲ್ಲಿ ನಿನ್ನ ನೆನಪುಗಳದೆ ವರ್ಷಧಾರೆ/ ಮರೆತು ಮನಸು ಹಾಡಿದ ಸಂತಸದ ಪದಗಳಲ್ಲಿಯೂ ನಿನ್ನ ನೆನಪುಗಳೆ ನುಗ್ಗಿ ವಿಷಾದ ಮತ್ತೆ ನನ್ನನಾವರಿಸಿದೆ....... ನೆನ್ನೆ ಸುರಿದ ಮಳೆಯಲ್ಲಿ ಮೊದಲಿನ ಆರ್ದ್ರತೆಯಿಲ್ಲದಿದ್ದರೂ ನಿನ್ನ ನೆನಪಿನ ತಂಪಿತ್ತು// ಮಳೆಯಲ್ಲಿ ಜಿನುಗುವ ಹನಿಗಳ ಅಂತರಾಳದಲ್ಲಿ ಇಳೆಯೆಡೆಗೆ ಅಂಕುರಿಸಿದ ಇನಿತು ಪ್ರೀತಿಗೆ ಕಾರಣ ನೂರಿದೆ.... ಕಾದಿರಿಸಿದ ಎದೆಯ ಜಾಗದಲ್ಲಿ ನಿನ್ನ ಹೆಸರಿನ ಹಚ್ಚೆಯಿದೆ.... ಅದರ ಹಿಂದೆಯಿರುವ ಮೃದು ಭಾವಗಳ ಹೃದಯದಲಿ ನಿನ್ನೊಲವ ಗೆಲ್ಲುವ ಇಚ್ಛೆಯಿದೆ, ಕಾದು ಕುಳಿತಿದ್ದ ವೈದೇಹಿಗೂ ರಾಮ ಭರ್ತ್ಸನೆ ತಪ್ಪಲಿಲ್ಲ ರಾಧೆ ಶ್ಯಾಮನಿಗಾಗಿ ವ್ಯರ್ಥ ಬಾಳು ಪೂರ ನಿರೀಕ್ಷಿಸ ಬೇಕಾಯಿತಲ್ಲ.... ಅವರ ಮುಂದೆ ನನ್ನದೇನು ಮಹಾ ಹೇಳು?/ ಇರುಳಲ್ಲಿ ಪೂರ್ಣ ಶಶಿಗೆ ಶರಣಾಗದೆ ಮಿನುಗುತ್ತಲೆ ನನ್ನೊಲವ ಕಾತರದಂತೆ ಕೆಲವು ತಾರೆಗಳು..... ಇನ್ನೂ ಹೊಳೆಯುತ್ತಿವೆ, ಕಡು ಶಾಪಕ್ಕೆ ಗುರಿಯಾದ ಚಂದ್ರ ಮಾಸಕ್ಕೊಮ್ಮೆ ಮಾಸುತ್ತಾ ಹೋಗಿ ಮರೆಯಾಗಿ..... ಮತ್ತೆ ಚಿಗುರುವಂತೆ ನನ್ನೆದೆಯ ಭಾವಗಳಿಗೂ ಅಕಾಲ ಗ್ರಹಣ ಕವಿದಿದೆ// ಕಾರಣವಿಲ್ಲದೆ ಕದಲುವ ಕನಸಿನ ಪ್ರತಿ ಕದಲಿಕೆಯಲ್ಲೂ ನಿನ್ನ ಮೆಲು ಮಾತುಗಳ ಕನವರಿಕೆಗಳಿವೆ.... ಮುಗಿಲ ಮೃದು ಹನಿಗಳ ಮತ್ತಲ್ಲಿ ಮೈಮನ ಇರುಳಲ್ಲಿ ಕನವರಿಸಿದಾಗ ನೆನಪಾದದ್ದು ನಿನ್ನ ಮಂದಸ್ಮಿತ, ಸ್ವಲ್ಪ ದೂರ ನನ್ನೊಂದಿಗೆ ಜೊತೆಗೆ ಹೆಜ್ಜೆ ಹಾಕಿದ್ದ ನಿನ್ನ ಉಸಿರ ಘಮ ಆಗ ನನ್ನಾವರಿಸಿದ್ದು..... ಇನ್ನೂ ನನ್ನ ಸುತ್ತಲೆ ಸುಳಿಯುತ್ತಿದೆ/ ಕಾದು ಕುಳಿತುಕೊಳ್ಲುವುದು ಸುಖ ನಿಜ ಆದರೆ ಆ ಹೊತ್ತೆಲ್ಲ ಮುಳ್ಳಿನ ನೆಲಹಾಸಿನ ಮೇಲೆಯೆ ಕೂತಿರಬೇಕಲ್ಲ... ಅದನ್ನೊಮ್ಮೆ ಊಹಿಸಿ ನೋಡು, ಮನದ ಕತ್ತಲ ಕೋಣೆಯಲ್ಲಿ ಹಚ್ಚಿದ ಕಿರು ಕಂದೀಲು ದೀಪದ ಬೆಳಕಲ್ಲಿ ನಿನ್ನ ಕಣ್ಗಳದೆ ಹೊಳಪು.... ಕದಡದ ಏಕಾಂತದ ಅಡಿಪಾಯವಿರುವ ಸ್ವಪ್ನ ಸರೋವರದಲ್ಲಿ ಆಗಾಗ ಏಳುವ ಆತಂಕದ ಅಲೆಗಳಿಗೆ ಅಡೆತಡೆಯಿಲ್ಲ..... ಮಾರ್ದವ ಮೌನದ ದಾಸ ನನ್ನ ಮನ ನಿರಂತರ ನನ್ನೆದೆಯಲ್ಲಿ ನಿನ್ನದೆ ಧ್ಯಾನ ಅನುಕ್ಷಣ//

15 December 2012

ಮೌನ ಮುರಿದ ಮಾತಿನ ಹರಿವಿನ ನಡುವೆ......

ಜ್ಞಾಪಕದ ಗೋಳವನ್ನು ಕೈಯಲ್ಲಿ ಹಿಡಿದು ನಿನ್ನ ನೆಲೆಯನ್ನ ಅದರಲ್ಲಿ ಹುಡುಕುತ್ತಿರುವ..... ನನ್ನ ಕಳವಳದ ಕೊನೆಗೆ ಇರುವುದು ಕೇವಲ ನಿರಾಸೆಯ ಕುರುಹು, ಮತ್ತೆ ಮತ್ತೆ ಮರುಕಳಿಸಿ ಮನವ ಕಾಡುವ ಮೌನದ ಮಾತ ಹನಿಗಳೆಲ್ಲ.... ಮನಸಿನ ಮೋಡದೊಳಗೆ ಮಡುಗಟ್ಟಿವೆ/ ಇಬ್ಬನಿಯ ತೆರೆ ಕರಗಿ ಹನಿ ನೆಲ ಮುಟ್ಟುವ ಹೊತ್ತಿಗೆ ಕನಸೊಡೆದ ಮನಸಿಗೆ ನಿನ್ನ ನೆನಪಾಯ್ತು.... ಕಡಿವಾಣವಿಲ್ಲದ ಕನಸಿನ ಕುದುರೆ ಅನುಮಾನವಿಲ್ಲದೆ ನಿನ್ನೆದೆಯ ಗುರಿಯತ್ತಲೆ ದೌಡಾಯಿಸುತ್ತಿದೆ, ಕನಸ ಕಡಲು ಅಗಾಧವಾಗಿದ್ದರೂ ನನಗೆ ನಿರೀಕ್ಷೆ ಹಾಯಿದೋಣಿಯೇರಿ.... ಕೇವಲ ಕೈ ಹುಟ್ಟಿನ ಆಸರೆಯಿಂದಲೆ ಅದನ್ನ ದಾಟುವ ಕಷ್ಟಸಾಧ್ಯ ಹಂಬಲ// ಕನಸಿಗೆ ದುಗ್ಗಾಣಿಯ ಖರ್ಚಿಲ್ಲ ಅದಕ್ಕೇನೆ ಈ ಜುಗ್ಗ ಮನಸು ಹಗಲಲ್ಲೂ.... ಬಿಟ್ಟಿ ಸಿಗುವ ಸ್ವಪ್ನಗಳ ಸೂರೆ ಹೊಡೆಯುವ ಅವಕಾಶ ತಪ್ಪಿಸಿಕೊಳ್ಳಲ್ಲ!, ಮನಸಿನ ತುಮುಲಗಳ ಜೊತೆಗೆ ಜೂಟಾಟವಾಡುತ್ತಿರುವ ಭಾವ ತೀವೃತೆಗಳಲ್ಲೆಲ್ಲ..... ಗೊಂದಲದ ಹಾಯಿದೋಣಿಗಳು ಓಲಾಡುತ್ತಿವೆ/ ಕಳವಳಗೊಂಡ ಮನಕ್ಕೆ ನಿನ್ನ ಬಿಂಬ ಕನಸಿನಲ್ಲಿ ಕಾಣುವ ಕ್ಷಣವಷ್ಟೆ..... ತಂಪಿನ ಅನುಭವವಾಗುತ್ತದೆ, ಎಲ್ಲ ಚೌಕಟ್ಟುಗಳ ಮೀರಿ ಕಟ್ಟುಪಾಡುಗಳೆಲ್ಲವನ್ನೂ ನೀಲಾಗಸಕ್ಕೆ ತೂರಿ.... ಕೇವಲ ನಿನ್ನ ನೆರಳಿನ ಗುರುತು ಹಿಡಿದು ನಡೆಯುತ್ತಿದ್ದವನಿಗೆ ನಡುನೆತ್ತಿ ಮೇಲೆ ಸೂರ್ಯ ಬಂದ ಹೊತ್ತು..... ನೆರಳಿನ ಜಾಡು ಕಾಣಿಸದೆ ಕಂಗಾಲಾದಂತೆ ನೆನ್ನಿನಿರುಳು ಕನಸಾಗಿತ್ತು// ನಿರಾಳತೆಯೂ ಸುಖನಿದ್ರೆಯನ್ನ ತಂದು ಕೊಡಬಹುದು ಎನ್ನುವ ಸತ್ಯ.... ಕೆಸುವಿನೆಲೆಯ ಮೇಲಿನ ನೀರ ಹನಿಯಾಗಲು ನಿರ್ಧರಿಸಿದ ನೆನ್ನಿನಿರುಳ ಸುಖನಿದ್ರೆಯಲ್ಲಿ ಸಾಬೀತಾಯ್ತು, ಸರಳವಲ್ಲದ ಬಾಳ ಹಾದಿಯಲ್ಲಿ ಸಿಗುವ ಮುಳ್ಳುಗಳ ನಡು ನಡುವೆ...... ನಿನ್ನ ನಗುವ ಹೂಗಳನ್ನ ಹುಡುಕುವ ನನ್ನ ಮನ ಮರುಳು/ ಇನ್ನೊಬ್ಬರ ಕನಸುಗಳ ಸಾಕಾರದಲ್ಲಿ ಮೂಕ ಪ್ರೇಕ್ಷಕನಾಗುವಾಗ.... ನನ್ನಲಿರುವ ಕೊರತೆ ಕಾಡುವುದು ನನ್ನೆದೆಯ ದೌರ್ಬಲ್ಯ, ನಿರೀಕ್ಷೆ ಮನಸಿನ ಜೊತೆ ಬಿಡದ ತನಕ ನಾಳಿನ ಕನಸಿನ ಆಸರೆ ಕೈತಪ್ಪಿ ಹೋಗದ ತನಕ..... ನನ್ನ ಮನ ಸದಾ ನಿನ್ನ ನೆನಪಲ್ಲೆ ಭಾವುಕ// ಕಾವಿಳಿದ ಬಾನು ಸುರಿವ ತಂಪಿನ ನಿಲ ವರ್ಷದಲ್ಲಿ ತೋಯ್ದ ಭೂಮಿಯೆದೆಯೊಳಗಡೆ.... ಬೆಚ್ಚನೆ ನೆನಪುಗಳ ಸಂಚಿತ ಸಂಗ್ರಹದ ದಾಸ್ತಾನಿದೆ, ಬೆಳೆದು ಬಲವಾಗಿರುವ ಒಲವ ಹೆಮ್ಮರದ ತುದಿಯಲ್ಲಿ ನಿರೀಕ್ಷೆಯ ಸ್ವಚ್ಛ ಗಾಳಿಗಾಗಿ ಕಾತರಿಸುವ.... ಕೊಂಬೆ ನಿನ್ನೆದುರು ಮಾತ್ರ ಸಮ್ಮತಿಯಿಂದ ಕಷ್ಟಪಟ್ಟಾದರೂ ಬಾಗಲಿದೆ/ ಮೌನ ಮುರಿದ ಮಾತಿನ ಹರಿವಿನ ನಡುವೆ ತೇಲುತ್ತಿರುವ ನೆನಪಿನ ಕಾಗದದ ದೋಣಿ.... ಕೈಲಾದಷ್ಟು ದೂರ ಮುಳುಗುವ ಮುನ್ನ ಸಾಗಲಿದೆ, ಸಂಶಯಕ್ಕೆ ಎಡೆಗೊಡದೆ ವರ್ತಿಸುತ್ತಿದ್ದ ಕನಸುಗಳೆಲ್ಲ ಸಂಕಟದಲ್ಲಿ ಮುಳುಗಿ ಉಸಿರು ಕಟ್ಟಿ ನರಳಲಿಕ್ಕೆ.... ನನ್ನ ಕುರುಡು ನಂಬಿಕೆಗಳೆ ನೇರ ಕಾರಣ//

ನೋವಿನ ಮಾ ನಿಷಾದದಲ್ಲಿಯೆ......

ವಿರಹ ಯಾನಕ್ಕೆ ಸಿಕ್ಕವ ಸುಮ್ಮನೆ ಇದ್ದ ನಾ ಕವಿಯಾದೆ ನೆನಪಿನ ಬುತ್ತಿ ಬಿಚ್ಚುತ ಕೂತ ನನ್ನ ಕಹಿ ಉಣಿಸಿನ ನಡುವೆ...... ನೀ ಕೊಂಚ ಮಾತ್ರ ಅನಿರೀಕ್ಷಿತವಾಗಿ ಸಿಗುವ ಸವಿಯಾದೆ, ಇನ್ನೇನಿದ್ದೀತು ಹೇಳು ನನ್ನ ತಪ್ತ ಮನದ ಇರಾದೆ? ನಾವಿಬ್ಬರೂ ಇಬ್ಬರೆಂದು ಕೊಂಡಿರಲಿಲ್ಲ ನಿನ್ನೊಂದಿಗೆ ನಾ ಸೇರಿ ಹೋಗಿದ್ದ ಮೇಲೆ..... ನನ್ನ ಮನಸೊಂತರ ನಿನ್ನ ಕನಸ ಕೃಷ್ಣನಲ್ಲಿ ಐಕ್ಯವಾದ ರಾಧೆ/ ಆತ್ಮ ವಿಮರ್ಶೆಯ ಧಶರಥನಾಗಿದೆ ಮನಸು ಬಹಿರಂಗ ಒಡ್ಡೋಲಗಗಳಲ್ಲಿ ನಿರ್ಭೀತವಾಗಿ ಮನದ ಕನ್ನಡಿಯಲ್ಲಿ.... ಮುಖದ ಕನ್ನಡಿಯನ್ನ ನೋಡಲಿದು ಕಲಿತಿದೆ ತಪ್ಪುಗಳನ್ನ ಕಂಡು ಕೊಳ್ಳುವ ಪರಿಯಲ್ಲಿದು ಬಲಿತಿದೆ, ಮನ ಕೈಕೇಯಿ ಅದರ ಕಿವಿ ಕಚ್ಚುವ ಆಕ್ಷಾಂಶೆಯ ಸ್ವಪ್ನಗಳೆ ಮಂಥರೆ..... ಲೋಕಕ್ಕೇನು ನಷ್ಟ ಹೇಳು ನಾನು ನಿನ್ನ ನೆನಪ ನಿಲ್ದಾಣದಲ್ಲಿಯೆ ಶಾಶ್ವತವಾಗಿ ನಿಂತರೆ?// ಮಂದ್ರ ಮಾರುತದ ಜೊತೆಯಲ್ಲಿ ಮೆಲುಮಾತನ್ನಾಡುವ ಮರದ ಎಲೆಗಳ ಎದೆಯಲ್ಲೆಲ್ಲ ಸುಪ್ತ ಸ್ವಪ್ನಗಳದ್ದೆ ಕನವರಿಕೆ...... ಚಳಿಯ ನಡುಕದ ನಡುವೆ ಮನದ ಬನದಲ್ಲಿ ನಿನ್ನ ನೆನಪಿನ ಸುಮ ಅರಳಿದ್ದು, ನನ್ನೆದೆಯೊಳಗೆಲ್ಲ ಪರಿಮಳವನ್ನೇಳಿಸುತ್ತಿದೆ/ ಇಬ್ಬನಿಯ ಹನಿಯೊಳಗೆ ಅಡಗಿರುವ ಇನಿದನಿಗೆ ಮೌನ ಸಮ್ಮತಿಯಿತ್ತ ಇಳೆ..... ಸುಮ್ಮನೆ ಮಾತು ಮರೆತು ಇಂದು ನಸುಕದರಲ್ಲಿ ಮಿಂದಳೆ?, ಬಾನ ಒಲವಲ್ಲಿ ತನ್ಮಯ ಲೀನಳಾಗಿ ಅದರ ತಂಪಲ್ಲಿ ತೋಯ್ದು ನಿಂದಳೆ? ನೋಡಿ ಅವಳ ಮುಖದಲ್ಲದೇನು ಸಂತೃಪ್ತಿಯ ಕಳೆ!// ಮನಸು ಚಂಚಲಗೊಳ್ಳುವ ಕ್ಷಣಗಳಲ್ಲೆಲ್ಲ ಹಿಡಿತ ಮೀರಿ ಕಣ್ಣು ತೇವಗೊಳ್ಳುವ ಪರಿಗೆ...... ನನ್ನೊಳಗೇನೆ ನನಗೆ ಪ್ರಶ್ನೆಗಳೇಳುತ್ತಿವೆ, ಸಂಕಟಗಳನ್ನೆಲ್ಲ ನುಂಗಿ ಸಂಭ್ರಮದ ಹಾದಿ ಹುಡುಕುವ ಕ್ಷಣದಲ್ಲಿಯೆ ಕನಸಿನ ಪುಗ್ಗೆಯೊಡೆದು ಚೂರಾಗಿ ಹೋದರೂ... ನಿರೀಕ್ಷೆಗಳ ಸೆಲೆ ನನ್ನೆದೆಯಂಗಳದಲ್ಲಿ ಬತ್ತಿ ಹೋಗದೆ ಹಾಗೆಯೆ ಉಳಿದಿದೆ/ ಸಂಕಟಗಳನ್ನೆಲ್ಲ ನುಂಗಿ ಸಂಭ್ರಮದ ಹಾದಿ ಹುಡುಕುವ ಕ್ಷಣದಲ್ಲಿಯೆ ಕನಸಿನ ಪುಗ್ಗೆಯೊಡೆದು ಚೂರಾಗಿ ಹೋದರೂ.... ನಿರೀಕ್ಷೆಗಳ ಸೆಲೆ ನನ್ನೆದೆಯಂಗಳದಲ್ಲಿ ಬತ್ತಿ ಹೋಗದೆ ಹಾಗೆಯೆ ಉಳಿದಿದೆ, ಮನಸು ಚಂಚಲಗೊಳ್ಳುವ ಕ್ಷಣಗಳಲ್ಲೆಲ್ಲ ಹಿಡಿತ ಮೀರಿ ಕಣ್ಣು ತೇವಗೊಳ್ಳುವ ಪರಿಗೆ...... ನನ್ನೊಳಗೇನೆ ನನಗೆ ಪ್ರಶ್ನೆಗಳೇಳುತ್ತಿವೆ// ಮರೆತು ಹೋಗದ ನೆನಪು ನೀನು ಇನ್ನೆಲ್ಲರತ್ತ ನಿರ್ಲಕ್ಷಿತನಾಗಿರುವ ನನಗೆ..... ನಿನ್ನ ನನ್ನೊಳಗಿಂದ ತೊಳೆದು ಹಾಕಲು ಯಾವುದೆ ಭಾವ ಮಾರ್ಜಕಗಳು ಬಳಿಯಿಲ್ಲವಲ್ಲ!, ಕಥೆ ಬಗೆ ಹರಿದರೂನು ಕೊನೆಯಾದದ್ದು ವಿಷಾದದಲ್ಲಿಯೆ ಮನಸೊಳಗೆ ನಿರಾಸೆಯ ನೋವಿನ ಮಾ ನಿಷಾದದಲ್ಲಿಯೆ/ ಮನಸ ಖಾಲಿ ಹಾಳೆಯ ಮೇಲೆ ಬರೆದೇನು ಕನಸ ಹೃದಯದ ಭಿತ್ತಿಯ ಮೇಲೆ ಕಣ್ಣ ಮೊನೆಯಿಂದಲೆ ಕೊರೆದೇನು.... ಆದರೆ ಅದನ್ನ ಓದಿ ಸಂಭ್ರಮಿಸ ಬೇಕಿದ್ದ ನೀನೆ ನನ್ನ ಪರಿಧಿಯಿಂದ ನಾಪತ್ತೆಯಾದ ಮೇಲೆ ನನಗಿನ್ನೇನಿದ್ದರೇನು?, ನಿನ್ನೆದೆಯಲ್ಲಿ ಕಾಲಡಿಯ ಕಸವಾಗಿರುವ ನನ್ನ ಕನಸು..... ನನ್ನೆದೆಯ ಒಳಮನೆಯಲ್ಲಿ ಮಾತ್ರ ಅಮೂಲ್ಯ ಕಸವರ//