ಕಳೆದು ಹೋಗಿದೆ....
ಸೂರ್ಯೋದಯ ಸೂರ್ಯಾಸ್ತಕ್ಕೂ ನಡುವೆ,
ಅರವತ್ತು ವಜ್ರ ಖಚಿತ ನಿಮಿಷಗಳನ್ನು ಕೂಡಿಸಿದ್ದ ಒಂದು ಬಂಗಾರದ ಘಂಟೆ/
ಬಹುಮಾನ ಘೋಷಿಸಿಲ್ಲ ಅದನು ಹುಡುಕಿ ಕೊಟ್ಟವರಿಗೆ,
ಏಕೆಂದರೆ ಸಿಗಲಾರದಂತೆ...
ಅದು ಕಳೆದೆ ಹೋಗಿದೆ//
-ಲಾರ ಇಂಗಲ್ಸ್ ವೈಲ್ದೆರ್
( ಭಾವಾನುವಾದ)
ಕಳೆದು ಹೋಗಿದೆ....
ಸೂರ್ಯೋದಯ ಸೂರ್ಯಾಸ್ತಕ್ಕೂ ನಡುವೆ,
ಅರವತ್ತು ವಜ್ರ ಖಚಿತ ನಿಮಿಷಗಳನ್ನು ಕೂಡಿಸಿದ್ದ ಒಂದು ಬಂಗಾರದ ಘಂಟೆ/
ಬಹುಮಾನ ಘೋಷಿಸಿಲ್ಲ ಅದನು ಹುಡುಕಿ ಕೊಟ್ಟವರಿಗೆ,
ಏಕೆಂದರೆ ಸಿಗಲಾರದಂತೆ...
ಅದು ಕಳೆದೆ ಹೋಗಿದೆ//
-ಲಾರ ಇಂಗಲ್ಸ್ ವೈಲ್ದೆರ್
( ಭಾವಾನುವಾದ)
ನಿಲ್ಲದ ಮಳೆಹನಿಯ ಆತುರ,
ಮೋಡದ ಎದೆಯೊಳಗೆ ಅಡಗಿದ ಕಾತರ/
ಮುತ್ತಿನ ಮಣಿಗಳಾಗಿ......ಭೂರಮೆಯ ಅಂಗುಲ ಅಂಗುಲವನ್ನೂ,
ಬಿಡದೆ ಚುಮ್ಬಿಸಿವೆ
ಇಬ್ಬನಿಯಲಿ ಮೀಯುವ ತವಕ,
ಮೋಡದಲ್ಲಿ ತೇಲುವ ಕನಸೇ ಮೋಹಕ/
ಈ ಮುಂಜಾನೆಯ ಮೊಗ್ಗು ಮೂಡದಿದ್ದರೆ,
ಸವಿ ಸ್ವಪ್ನದ ಇರುಳು ಜಾರದಿದ್ದರೆ.....ಸೊಗಸಿತ್ತು//
ಎಲೆ ಬಿಸಿಲ ಕೊಳದಲ್ಲಿ,
ನಿಂತಿದ್ದ ಬೆಳಕ ತಿಳಿನೀರು/
ಚಲುವೆ ಧರೆಯ ಕುಡಿ ನೋಟಕೆ,
ಕಲಕಿ...ರಾಡಿಯೆದ್ದಿದೆ//
ಬೆಚ್ಚಗೆ ಮುದುಡಿ ಮಲಗಿದ್ದ ಭೂಮಿಗೆ/
ಬಾನು ಬಾಗಿ,
ಕಿವಿಯಲ್ಲಿ ಉಸುರಿದ ಗುಟ್ಟು....
ಈ ಮುಂಜಾವು//
ಆತ್ಮೀಯರೇ
ನಾಳೆ ಅಂದರೆ ದಿ ೯/೦೫/೦೯ ರಂದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ನಾನು
ಸಾಹಿತಿ ನಾ ಡಿ'ಸೊಜರೊಂದಿಗೆ ನಡೆಸಿಕೊಟ್ಟ ಅರ್ಧಘಂಟೆ ಅವಧಿಯ ಸಂದರ್ಶನ ಪ್ರಸಾರವಾಗುತ್ತದೆ ಸಾಧ್ಯವಾದರೆ ವೀಕ್ಷಿಸಿ.
ಸಮಯ-ಭಾರತದಲ್ಲಿ: ಮಧ್ಯಾಹ್ನ ೨;೦೦ ಘಂಟೆಗೆ.
[ಮರುಪ್ರಸಾರ : ಡಿ ೧೦/೦೬/೦೯
ಆದಿತ್ಯವಾರ ರಾತ್ರಿ ೧೦:೦೦ ಘಂಟೆಗೆ]
ಸಂಯುಕ್ತ ರಾಷ್ಟ್ರಗಳಲ್ಲಿ; ನಡುರಾತ್ರಿ ೧:೩೦ಕ್ಕೆ ಪಶ್ಚಿಮ ತೀರ ಹಾಗು ನಡುರಾತ್ರಿ ೨:೩೦ಕ್ಕೆ ಪೂರ್ವ ತೀರ
[ಮರುಪ್ರಸಾರ: ದಿ ೧೦/೦೫/೦೯ ರಂದು ಬೆಳಿಗ್ಯೆ ೯:೩೦ಕ್ಕೆ ಪಶ್ಚಿಮತೀರ ಹಾಗು ಬೆಳಿಗ್ಯೆ ೧೦:೩೦ಕ್ಕೆ ಪೂರ್ವತೀರ]
-ನಿಮ್ಮವ -
ಶ್ರೀಹರ್ಷ ಹೆಗಡೆ