( ಕರಾವಳಿ ಕರ್ನಾಟಕದ ಸಂಸದರಿಗೆ ಈ ಮಾತನ್ನು ಬರೆದದ್ದು, ಈ ಸಂದೇಶವನ್ನ ಅವರಲ್ಲಿ ಇಬ್ಬರ ಗಮನಕ್ಕೆ ತರಲಾಗಿದೆ, ಮೂರು ಕಾಸಿನ ಪ್ರಯೋಜನ ಇದರಿಂದ ಇಲ್ಲ ಎನ್ನುವ ಅರಿವಿದ್ದೂ ಸಹ.)
ಇದೇನಿದು ಸಂಸದರೆ ಮಂಗಳೂರಿಗೆ, ಅದು ಸಹ ವಾರಕ್ಕೊಮ್ಮೆ ಕಳೆದ ರೈಲ್ವೆ ಬಜೆಟ್ನಲ್ಲಿ ಘೋಷಿಸಿದ್ದ ಹೊಸ ರೈಲು ಕೇವಲ "ರೈಲು" ಬಿಟ್ಟಂತಾಗಿದೆಯಲ್ಲ!
ಸೇಲಂ, ಕೊಯಮತ್ತೂರು, ಪಾಲ್ಘಾಟ್, ಕಣ್ಣೂರು ದಾರಿಯಾಗಿ ಈ ಕಣ್ಣೊರೆಸುವ ರೈಲು ಬಿಟ್ಟಿರೋದು ಯಾವ ಕರ್ಮಕ್ಕಾಗಿ? ಮಲಯಾಳಿ ಸಂಸದರು ಲಾಬಿ ಮಾಡುವಾಗ ನೀವೆಲ್ಲ ನಿದ್ದೆಯಲ್ಲಿದ್ದಿರಾ ಸ್ವಾಮಿ? ನಿಮ್ಮನ್ನೆ ನಂಬಿದ್ದೆವಲ್ಲ ನಾವೆಲ್ಲ.
ಇಷ್ಟೆಲ್ಲಾ ನಾಟಕ ಮಾಡೊದಕ್ಕಿಂತ ಒಂದೊಳ್ಳೆ ರೇಟು ಬಂದರೆ ಸಮಯ ನೋಡಿಕೊಂಡು ನಮ್ಮ ಕರಾವಳಿ ಜಿಲ್ಲೆಗಳನ್ನ ಮಲಯಾಳಿಗಳಿಗೂ, ಮೈಸೂರು ಭಾಗದ ನಾಲ್ಕಾರು ಜಿಲ್ಲೆಗಳನ್ನ ತಮಿಳುನಾಡಿಗೂ, ಅಳಿದುಳಿವ ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳನ್ನ ಮರಾಠಿಗರಿಗೂ ಹರಾಜು ಹಾಕೋದು ವಾಸಿ. ಸದ್ಯದ ಪರಿಸ್ಥಿತಿಯಲ್ಲಿ ಹಂಗಾದರೂ ನಾವು ಬಡ ಎಬಡ ಕನ್ನಡಿಗರು ಸುಖವಾಗಿದ್ದೇವು ಅನ್ನಿಸುತ್ತೆ!
ಅಲ್ಲಾ ಮಂಗಳೂರು, ಉಡುಪಿ, ಕಾರವಾರ ಇವೆಲ್ಲಾ ಬಡಪಾಯಿ ಪಟ್ಟಣಗಳು ನಮ್ಮ ರಾಜ್ಯದಲ್ಲಿಯೆ ಇವೆಯೋ ಇಲ್ಲಾ ಕೇರಳದಲ್ಲಿದೆಯೋ? ಒಂದು ಕೆಲಸ ಮಾ,ಡಿ ಈ ಪರಿ ನಮ್ಮನ್ನ ಮಂಗ ಮಾಡಿ ಮಾನಸಿಕವಾಗಿ ಹಿಂಸಿಸೋದಕ್ಕಿಂತ ಇಡಿ ಈ ಮೂರು ಕರಾವಳಿ ಜಿಲ್ಲೆಗಳ ಹಣೆಬರಹ ನಿರ್ಧರಿಸುವ ಹಕ್ಕನ್ನ ಪೂರ್ತಿ ಮಲೆಯಾಳಿಗಳಿಗೆ ಧಾರೆ ಎರೆದು ಕೊಟ್ಟು ನೀವೆಲ್ಲ ನಿರಮ್ಮಳವಾಗಿದ್ದು ಬಿಡಿ. ನಮ್ಮಂತಹ ನೊಂದ ತಲೆತಿರುಕರ ಕಾಟವಾದರೂ ನಿಮಗಾಗ ತಪ್ಪುತ್ತದಲ್ಲ.
ನಿಮಗೆ ಮತ್ತು ಇನ್ನುಳಿದ ಕರಾವಳಿ ಕರುನಾಡಿನ ಇನ್ನಿಬ್ಬರು ಸಂಸದರಿಗೆ ಒಳ್ಳೆಯದಾಗಲಿ.
2 comments:
ಮಾನ್ಯರೇ,
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ,ರಾಜ್ಯಾಂಗ,ನ್ಯಾಯಂಗ ಇವು ಮೂರು ಪ್ರಮುಖ ಭಾಗಗಳಾಗಿವೆ.ಇದರ ಮಹತ್ವವರಿವದ ನಮ್ಮ ಚಿಗುರು ಮೀಸೆಯ ಕೆಲ ಯುವಕರು ಇದರ ಅರ್ಥವನ್ನು ಅರಿಯದೆ ನಮ್ಮ ಸಂಸತ್ತು ಮತ್ತು ಸಂಸದರ ಬಗ್ಗೆ ಟೀಕೆ ಮಾದುವಷ್ಟು ಅಪ್ರಭುದ್ದರಾಗಿದ್ದಾರೆ.
ಕೇವಲ ಕಂಪ್ಯೂಟರ ಮುಂದೆ ಕುಳಿತು ಇತರರ ಬಗ್ಗೆ ಟೀಕೆ ಮಾಡುವ ಇವರು ಯಾವುದೇ ಸಂಘಟನೆ ಮತ್ತು ಹೋರಾಟಗಳಲ್ಲಿ ಭಾಗವಹಿಸದೆ ಫೇಸ ಬುಕ್ಕಗಳಲ್ಲೆ ತರಲೆ ಮಾಡುವ ಆಧುನಿಕ ಉತ್ತರ ಕುಮಾರ ರಾಗಿದ್ದಾರೆ.
ರೇಲ್ವೇ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಜನರಿಗೆ ಸಂಸದರ ನಿಜವಾದ ಪಾಲ್ಗೊಳ್ಳಿವಿಕೆಯ ಅರಿವಿದೆ.ಕೇವಲ ಒಂದು ವರ್ಷದ ಅವಧಿಯಲ್ಲೆ ರೇಲ್ವೇ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ನಮ್ಮ ಸಂಘಟನೆಗಳೊಡನೆ ಕೈ ಜೋಡಿಸಿದ ಸಂಸದ ಜಯಪ್ರಕಾಶ ಹೆಗಡೆ ಯವರ ಬಗ್ಗೆ ಟೀಕೆ ಮಾಡುವ ಕೀಳುಮಟ್ಟ ಸರಿಯಲ್ಲ.
ಕುಂದಾಪುರದಲ್ಲಿ ದೆಹಲಿ ರೈಲು ನಿಲುಗಡೆ,ಗಣಕೀಕ್ರತ ಸೀಟು ಕಾಯ್ದಿರಿಸುವಿಕೆ,ಬೇಸಿಗೆ ರೈಲುಗಳ ನಿಲುಗದೆ,ಕಾರವಾರ ಬೆಂಗಳೊರ ರಾತ್ರಿ ರೈಲು ಇವು ನಮ್ಮ ಸಂಸದರ ಅಲ್ಪ ಅವಧಿಯ ಕೊಡುಗೆಗಳು.
ತಮ್ಮ ಸಂಸದೀಯ ಕಾರ್ಯ ಕ್ಷೇತ್ರ ವನ್ನು ಮೀರಿ ಹಲವಾರು ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಂಸದರನ್ನು ಕೇವಲ ಟೀಕೆ ಮಡುವದಕ್ಕೆ ಹುಟ್ಟಿಕೊಂಡಂತೆ ಆಡಬಾರದು.ರೇಲ್ವೇ ಸಮಸ್ಯೆ ಗಳ ಸಂಪುರ್ಣ ನಿಗ್ರಹಕ್ಕೆ ಮತ್ತು ಕೇರಳದ ಲಾಬಿ ಯಿಂದ ಕೊಂಕಣ ರೈಲು ವಿಭಾಗವನ್ನು ಪಾರು ಮಾಡಲು ಇತ್ಟೀಚಿನ ಮಂಗಳೂರು ರೈಲ್ವೆ ವಿಭಾಗದ ಹೋರಾಟದಲ್ಲಿ ಸಂಸದೀಯ ಕ್ಷೇತ್ರ ವ್ಯಾಪ್ತಿಯನ್ನು ಮೀರಿ ನಮ್ಮೊಡನೆ ಸಹಕರಿಸಿದ್ದಾರೆ ಮತ್ತು ರೆಲ್ವೆ ಸಚಿವರ ಗಮನಕ್ಕೆ ತಂದಿದ್ದಾರೆ.
ಕೇವಲ ಟೀಕೆ ಮಾಡುವದಕ್ಕೆ ಜನ್ಮ ತಳೆದಂತೆ ಆಗ್ಗದ ಪ್ರಚಾರಕ್ಕಾಗಿ ಹೇಳಿಕೆ ನೀಡುವದು ಸರಿಯಲ್ಲ, ನಿಜವಾದ ಹೋರಾಟದಲ್ಲಿ ಆಸಕ್ತಿಯಿದ್ದರೆ ನಮ್ಮ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಯ ಹೋರಾಟದಲ್ಲಿ ತಮ್ಮ ಕೈ ಜೋಡಿಸಿ ಹೋರಾಟದಲ್ಲಿ ಪಾಲ್ಗೊಳ್ಳಿ.ಕೇವಲ ಹೇಳಿಕೆಗಳನ್ನು ನೀಡಿ ತಿಟೆ ತೀರಿಸಿ ಕೊಳ್ಳ ಬೇಡಿ,
ಇಂದಿನ ಹಣ ಕೊಟ್ಟು ಮತ ಖರಿದಿಸುವ ರಾಜಕಾರಣಿಗಳಲ್ಲಿ ಅಪವಾದ ಎಂಬತ್ತೆ ತಮ್ಮ ಕಾರ್ಯ ದಿಂದ ಜನ ಮನ ಗೆದ್ದ ಆಪರೂಪದ ರಾಜಕಾರಣಿ ಜಯಪ್ರಕಾಶ್ ಹೆಗಡೆಯ ವರನ್ನು ಸಹ ದಯವಿಟ್ಟು ಇಂತಹ ಟೀಕೆ ಮಾಡಿ ನಮ್ಮ್ ಹೋರಾಟದ ಕಾಲೆಳೆಯಬೇಡಿ. ವಿವೇಕ ನಾಯಕ ಕುಂದಾಪುರ.
ನಿಜ ವಿವೇಕ್ ನಾಯಕ್ ರವರೆ,ಯಾವುದೇ ಸಾಮಾಜಿಕ ಹೋರಾಟ ಗಳಲ್ಲಿ ಪಾಲ್ಗೊಳ್ಳದ ಜನಪರ ಕಾಳಜಿ ಇಲ್ಲದ ಕೆಲವು ಪೂರ್ವಾಗ್ರಹ ಪೀಡಿತ ಮಂದಿ (? ) ಇತ್ತೀಚೇಗೆ ತಲೆ ಬುಡವಿಲ್ಲದ ವಿಚಾರಗಳನ್ನು ಫೇಸ್ ಬುಕ್ ನಂತಹ ಸಾಮಾಜಿಕ ಜಾಲ ತಾಣ ಗಳಲ್ಲಿ ತಾವು(?)ಮಾತ್ರ ದೇಶ ಪ್ರೇಮಿಗಳು,ಉಳಿದವರೆಲ್ಲ ದೇಶದ ಬಗ್ಗೆ ಕಾಳಜಿ ಇಲ್ಲದವರು ಎಂಬಂತೆ ಬರೆಯುವುದನ್ನು ನಾನು ಕೂಡ ಗಮನಿಸಿದ್ದೇನೆ ,ಜಯಪ್ರಕಾಶ್ ಹೆಗ್ಡೆ ಯಂತಹ ಒಬ್ಬ ಅತ್ಯಂತ ಪ್ರಾಮಾಣಿಕ ,24 ಗಂಟೆಗಳ ಕಾಲವು ಜನಸಾಮಾನ್ಯರ ಸಮಸ್ಯೆ ಗಳಿಗೆ ಸ್ಪಂದಿಸುವ ,ತಾನು ಸಂಸದ ನಾಗಿ ಆಯ್ಕೆಯಾದ ಬರೇ ಒಂದು ವರ್ಷದ ಅವದಿಯಲ್ಲಿ ಹಿಂದಿನ ಬಿಜೆಪಿ ಸಂಸದರಾದ ಮಾನ್ಯ ಶ್ರೀ ಡಿ.ವಿ. ಸದಾನಂದ ಗೌಡರ ಕಡೆಗಣನೆ ಇಂದಾಗಿ ಮೂಲೆ ಗುಂಪಾಗಿದ್ದ ನಮ್ಮ ಜಿಲ್ಲೆಗೆ,ತನ್ನ ಅಷ್ಟೂ ಪ್ರಭಾವವನ್ನು ಬಳಸಿ, ಕೇಂದ್ರ ರೈಲ್ವೆ ಇಲಾಖೆಇಂದ ಕುಂದಾಪುರಕ್ಕೆ - ದೆಹಲಿ ರೈಲು ನಿಲುಗಡೆ,ಗಣಕೀಕ್ರತ ಸೀಟು ಕಾಯ್ದಿರಿಸುವಿಕೆ,ಬೇಸಿಗೆ ರೈಲುಗಳ ನಿಲುಗದೆ,ಕಾರವಾರ ಬೆಂಗಳೊರ ರಾತ್ರಿ ರೈಲು,ಹೆದ್ದಾರಿ ಸಮಸ್ಯೆ ಗಳ ಬಗ್ಗೆ ಸ್ಪಂದನೆ,ವಿಮಾನ ನಿಲ್ದಾಣ ಮೇಲ್ದರ್ಜೆಗೆರಿಸುಕೆಯಲ್ಲಿ ಪ್ರಾಮಾಣಿಕ ಪ್ರಯತ್ನ ,ಒಂದೇ ಎರಡೆ ,ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆ ಇಲ್ಲ ಬಿಡಿ , ಜಯಪ್ರಕಾಶ್ ಹೆಗ್ಡೆ ಅವರ ಕಾರ್ಯ ವೈಖರಿಯ ಅರಿವಿಲ್ಲ ದವರು ಹೀಗೆಲ್ಲ ಮಾತನಾಡುತ್ತಾರೆ, ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಬಿಡಿ ವಿವೇಕ್ ರವರೆ.
Post a Comment