05 April 2009

ಸುಳಿವಿಲ್ಲ...

ಅದೆಂದೋ ಕುಂಡದಲ್ಲಿ ಹೂತು ಮರೆತಿದ್ದ ಗೆಡ್ಡೆ,
ಲಕ್ಷಣವಾಗಿ ಚಿಗುರಿ ಡೇರೆ ಹೂಗಳ ಅರಳಿಸಿ ನಗುತಿದೆ/
ಛಲ ಬಿಡದ ನನ್ನೀ ಪ್ರಯತ್ನ,
ಎಂದಾದರೊಮ್ಮೆ ನಿನ್ನ ಮನದ ಡೇರೆಯಲ್ಲೂ ಒಲವಿನ ಹೂಗಳ ಅರಳಿಸೀತ?//ಮೋಡದ ಮರೆಯಿಂದ ಯಾವಾಗಲೂ ಹೊರಗಿಣುಕುತ್ತಿದ್ದ ಚಂದಿರ,
ಇಂದು ಅದೇಕೋ ಒಂಟಿಯಾಗಿದ್ದ/
ಮೋಡದ ಸುಳಿವಿಲ್ಲ,
ಬೆಳದಿಂಗಳ ಒಲವಿಲ್ಲ//

No comments: