29 August 2011

"ಬೂಸಿಯ" ಆರೋಗ್ಯ ಕಾಪಾಡು ಮಂಜುನಾಥಾ....?!ಮಾಜಿ ಮುಖ್ಯಮಂತ್ರಿ ಬೂಸಿಯಗೆ ಒಂದು ವೇಳೆ 'ಎಡ್ಸ್' ಏನಾದರೂ ಬಂದಿರಬಹುದ? ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ 'ರಸಿಕ' ಕುಲಚಕ್ರವರ್ತಿ ರೇಣುಕಾಚಾರ್ಯನ ಸಂಗ ಮಾಡಿ ಅವರೂ ಅವನಂತೆ ಎಲ್ಲೆಲ್ಲೋ ಜಾರಿ ಬಿದ್ದಿದ್ದು (!) ಏನಾದ್ರೂ ಬಾಯಿಬಿಟ್ಟು ಹೇಳಲಾಗದ ಮಾರಕ ರೋಗಕ್ಕೆ ಬಲಿಯಾಗಿದ್ದಾರಾ? ಇಲ್ಲ ರಾಮಚಂದ್ರೆಗೌಡರು ಏನಾದ್ರೂ ಮಾರಣಾಂತಿಕ ಸೋಂಕನ್ನು ಅವರಿಗೆ ಅಂಟಿಸಿರಬಹುದ? ಎಂಬ ಪ್ರಶ್ನೆಗಳು ಅಕಾಲದಲ್ಲಿ ಕನ್ನಡಿಗರ ಮನಸ್ಸಿನ ಮೇಲೆ ಧಾಳಿಯಿಡುತ್ತಿವೆ.

ತಾವು ಮುಖ್ಯಮಂತ್ರಿಯಾಗಿದ್ದ ಮೂರು ಚಿಲ್ಲರೆ ವರ್ಷಗಳಲ್ಲಿ ನೆಲಕಾಣದ ಯವ್ವನಿಗರಂತೆ ಹೆಲಿಕಾಪ್ಟರ್'ನಲ್ಲಿ ಗಿರಗಿರನೆ ರಾಜ್ಯ ಸುತ್ತುತ್ತಿದ್ದಾಗ-ತಮ್ಮ ಬಿಡುವಿಲ್ಲದ ತೀರ್ಥಕ್ಷೇತ್ರ ಯಾತ್ರೆಗಳ ನಡುವೆಯೂ ಮಧ್ಯ ಮಧ್ಯ ಹಿತ್ತಲಿಗೆ ಹೋಗಿ ಬಂದಂತೆ ಕು'ಮಾರಿ' ಜೊತೆಗೆ (ಅವರೊಬ್ಬರ ಜೊತೆಗೆ ಮಾತ್ರ!) ಆಗಾಗ "ಇದೀಗ ದೆಹಲಿಗೆ" ದೌಡಾಯಿಸುತ್ತಿದ್ದಾಗ-ಮನ ಬಂದಾಗ ಹೊತ್ತು ಗೊತ್ತು ಒಂದನ್ನೂ ನೋಡದೆ ಮಾರಿಷಸ್,ಚೀನಾ ಅಂತ ವಿದೇಶಕ್ಕೆ ಹಾರುತ್ತಿದ್ದಾಗ ಇದ್ದಿರದಿದ್ದ ಯಾವುದೇ ಮಂಡೆಮಾರಿ ಈಗ ಕೋರ್ಟ್ ಕಾಟ ಆರಂಭವಾಗುವ ಅನಿಷ್ಟ ಕಾಲದಲ್ಲಿಯೆ ಶನಿಯಂತೆ ವಕ್ಕರಿಸಿಕೊಂಡಿದೆ ಎಂದರೆ ಏನರ್ಥ?

ಅಧಿಕಾರ ಬಿಟ್ಟ ತಿಂಗಳೊಳಗೆ ಮೂರು ಮೂರು ಬಾರಿ ಆರೋಗ್ಯ ಸಮಸ್ಯೆ ಉಲ್ಬಣಿಸಿರೋದರಿಂದ,ಅದೂ ಚಿಕ್ಕ ಚಿಕ್ಕ ಕಾರಣಗಳಾದ ಅಧಿಕ ರಕ್ತದೊತ್ತಡ-ಮಧುಮೇಹ-ಜ್ವರದಂತಹ ಚಿಲ್ಲರೆ ರೋಗಗಳಿಗೂ ಅವರನ್ನ ತೀವ್ರ ನಿಗಾಘಟಕಕ್ಕೆ ಸೇರಿಸಲೇ ಬೇಕಾದ ಅಗತ್ಯ ಮೂಡಿರೋದನ್ನ ನೋಡಿದರೆ ( ಇದೆಲ್ಲ 'ಎಡ್ಸ್'ನ ಲಕ್ಷಣಗಳೇ ಅನ್ನೋದನ್ನ ನಾವು ಮರೆಯಲೇ ಬಾರದು ಮತ್ತೆ!) ಪಾಪ ಅವರ ಸಂಕಟ ನೋಡಲಾಗದೆ ಈ ಸಂಶಯ ಕನ್ನಡ ಕುಲಕೋಟಿಯ ಹೃದಯದಲ್ಲಿ ಹುಟ್ಟಿದೆ,ಕಿರುವಯಸ್ಸಿನಲ್ಲಿಯೆ 'ಮಾಂಗಲ್ಯ ಭಾಗ್ಯ' ಕಳೆದುಕೊಳ್ಳುವ ಭೀತಿ ಎದುರಿಸುತ್ತಿರೊ ಕು'ಮಾರಿ'ಯ ಬಗ್ಗೆ ಕರುಣೆ ಎಲ್ಲೆಲಿಂದಲೋ(?) ಉಕ್ಕುಕ್ಕಿ ಬರುತ್ತಿದೆ.ಅವರು ನಂಬಿದ ಧರ್ಮಸ್ಥಳದ ಮಂಜಣ್ಣ ಅವರನ್ನ "ಸದಾ" ಕಾಪಾಡಲಿ ಅನ್ನೋದಷ್ಟೆ ನಮ್ಮ ಮನದಾಳದ ಹಾರೈಕೆ?!

No comments: