21 October 2015

ವಲಿ - ೧೨







'ಈದ್ ಉಲ್ ಅದಃ' ಎಂಬ ಹಬ್ಬದ ಆಚರಣೆಯನ್ನೂ ಸಹ ಕ್ರಿಸ್ತಶಕ ೬೨೩ರಲ್ಲಿ ಮಹಮದ್ ಜಾರಿಗೆ ತಂದನು. ಯಹೂದಿಗಳ ಬಲಿ ಹಬ್ಬದಿಂದ ಪ್ರೇರೇಪಿತವಾಗಿದ್ದ ಅದರ ಎಲ್ಲಾ ಆಚರಣೆಗಳೂ ಸಹ ಸಹಜವಾಗಿ ಯಹೂದಿ ಆಚರಣೆಗಳ ನಕಲಾಗಿದ್ದವು. ಇದನ್ನ ತನ್ನ 'ಸೀಲ್ಡ್ ನೆಕ್ಟರ್' ಕೃತಿಯಲ್ಲಿ ಅಲ್ ಮುಬಾರಖಿ ಹಾಗೂ 'ದ ಲೈಫ್ ಆಫ್ ಮಹಮದ್'ನಲ್ಲಿ ಸರ್ ವಿಲಿಯಂ ಮ್ಯೂರ್ ಇಬ್ಬರೂ ಖಚಿತ ಪಡಿಸುತ್ತಾರೆ. ಯಹೂದಿಗಳ ನಂಬಿಕೆ ಪ್ರಕಾರ ಅವರ ಸಂತ ಅರೋನ್ ತನ್ನ ಹಾಗೂ ತನ್ನ ಕುಟುಂಬದ ಒಳಿತಿಗೋಸ್ಕರ ಬಲಿ ಕೊಡುವ ಈ ವಾರ್ಷಿಕ ವಿಧಿಯಾಚರಣೆಯನ್ನ ಜಾರಿಗೆ ತಂದಿದ್ದ. ಅತ ಪ್ರತ್ಯೇಕವಾಗಿ ಎರಡು ಪ್ರಾಣಿಗಳನ್ನ ಬಲಿಕೊಡುವ ಆಚರಣೆಯನ್ನ ತನ್ನ ಮತಾವಲಂಭಿಗಳಿಗೆ ವಿಧಿಸಿದ್ದ. ಅಂತೆಯೆ ಮಮಹಮದ್ ಸಹ ಮದೀನಾದ ಹೊರವಲಯದಲ್ಲಿ ಸ್ವತಃ ತನ್ನ ಕೈಯಿಂದಲೆ ಕುರಿಮರಿಯೊಂದನ್ನ ಬಲಿ ಕೊಟ್ಟು ಪ್ರಾಚೀನ ಕಾಲದಲ್ಲಿ ಅರೋನ್ ನುಡಿದಿದ್ದಂತೆಯೆ ಗಟ್ಟಿ ಕಂಠದಲ್ಲಿ ನಾಟಕೀಯವಾಗಿ "ಓಹ್ ದೇವರೆ! ಇದನ್ನು ಯಾವ ನನ್ನ ಜನರು ನಿನ್ನ ಏಕತ್ವವನ್ನು ಹಾಗೂ ನನ್ನ ಧರ್ಮ ಪ್ರಚಾರ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೋ ಅವರಿಗೆ ನಾನು ಈ ಬಲಿಯನ್ನ ಮನಸಾರೆ ಒಪ್ಪಿಸುತ್ತಿದ್ದೇನೆ" ಎಂದು ಹೇಳಿದ.


ಬಳಿಕ ಇನ್ನೊಂದು ಕುರಿಮರಿಯನ್ನ ಕೊಂದು "ಓಹ್ ದೇವರೆ! ಇದು ಮಹಮದನಿಗೆ ಹಾಗೂ ಅವನ ಕುಟುಂಬಕ್ಕೆ" ಎಂದು ಕೂಗಿ ಹೊಸತೊಂದು ಆಚರಣೆಯನ್ನ ಆರಂಭಿಸಿ ಬಿಟ್ಟ. ಇದೆ ರೀತಿ ಆ ವರ್ಷ ಹಬ್ಬದ ದಿನ ಮಸೀದಿಯಲ್ಲಿ 'ಪ್ರಾರ್ಥನಾ ಸಮಯ ಬಂದಿದೆ, ಸಾರ್ವರ್ತಿಕ ಪ್ರಾರ್ಥನೆಗೆ ಬನ್ನಿರಿ!' ಎನ್ನುವ ಆವರೆಗಿನ ಕರೆಯನ್ನ ಬದಲಿಸಿ, ಹೊಸತಾಗಿ 'ದೇವರು ದೊಡ್ಡವನು! ದೇವರು ದೊಡ್ಡವನು!' ( ಅಲ್ಲಹೋ ಅಕ್ಬರ್, ಅಲ್ಲಾಹೋ ಅಕ್ಬರ್.) ಎನ್ನುವ ಹೊಸ ಘೋಷಣೆಯನ್ನ ಆರಂಭಿಸಿದ. ಸ್ವತಃ ಮಹಮದ್ ಮಸೀದಿಯ ದಕ್ಷಿಣ ದಿಕ್ಕಿನ ಗೋಡೆಯ ಬಳಿ ಒಂದು ಖರ್ಜೂರದ ಮರದ ತುಂಡಿನ ಮೇಲೆ ನಿಂತುಕೊಂಡು ಆವರೆಗೂ ಪ್ರಾರ್ಥಿಸುತ್ತಿದ್ದನು. ಯಾವಾಗ ಕಿಬ್ಲಾದ ಕಡೆಗೆ ಜುರೇಸಲಂನಿಂದ ಪ್ರಾರ್ಥನೆಯ ದಿಕ್ಕನ್ನ ಬದಲಾಯಿಸಲಾಯಿತೋ ಆಗ ಅಷ್ಟು ಹೊತ್ತು ನಿಂತು ಪ್ರಾರ್ಥಿಸುವುದು ಅವನಿಗೆ ಸಾಧ್ಯವಾಗುತ್ತಿರಲಿಲ್ಲ.



ಸಾಲದ್ದಕ್ಕೆ ವಯೋ ವೃದ್ಧಾಪ್ಯವೂ ಅವನನ್ನ ಬಾಧಿಸಲು ಆರಂಭಿಸಿತ್ತು. ಹೀಗಾಗಿ ಆತ ತನಗಾಗಿ ಕ್ರೈಸ್ತ ಇಗರ್ಜಿಗಳಂತೆ ಒಂದು ವೇದಿಕೆ (ಪುಲ್ಪಿಟ್) ರಚಿಸಿಕೊಂಡು ಅದರ ಮೇಲೆ ಕುಳಿತಿದ್ದು ಪ್ರತಿ ಶುಕ್ರವಾರದ ನಮಾಝಿನ ನಂತರ ತನ್ನ ಮತ ಬಾಂಧವರಿಗೆ ಮತೋಪದೇಶ ಮಾಡುವುದನ್ನ ಆರಂಭಿಸಿದ. ಈ ವೇದಿಕೆ ಕ್ರಮೇಣ ಪವಿತ್ರ್ಯತೆಯ ಪ್ರಾಮುಖ್ಯತೆಯನ್ನ ಮಸೀದಿಯಲ್ಲಿ ಗಿಟ್ಟಿಸಿಕೊಂಡಿತು.

ಇದೇ ನಮಯದಲ್ಲಿ ಆತನ ಆಪ್ತ ಮತ ಬಾಂಧವರಿಬ್ಬರು ಅಕಾಲ ಮೃತ್ಯುವಿಗೆ ಈಡಾದರು. ಇದು ಯಹೂದಿ ಸಮುದಾಯದಲ್ಲಿ ಮಹಮದ್ ಕುರಿತು ಕುಹಕದ ನುಡಿಗಟ್ಟುಗಳು ಹುಟ್ಟಿಕೊಳ್ಳಲಿಕ್ಕೆ ಒಂದು ಕಾರಣವಾಯಿತು. ಈ ಸಾವುಗಳ ನಂತರ ಆತನ ಪ್ರವಾದಿತ್ವದ ಟೊಳ್ಳುತನವನ್ನ ಜನ ಆಡಿಕೊಳ್ಳಲು ತೊಡಗಿದರು. ಅವನ ಅಪರಮಾಪ್ತನಾಗಿದ್ದ ಮಾಸಬ್ ಗಂಟಲು ನೋವಿನಿಂದ ಪ್ರಾಣ ತೆತ್ತಿದ್ದ. ಆತನನ್ನ ಸ್ವತಃ ಮಹಮದನೆ ರೋಗಾವಸ್ಥೆಯಲ್ಲಿ ಉಪಚರಿಸಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಆಗ ಮಹಮದನ ದೈವಾಂಶದ ಬಗ್ಗೆ ಅವನ ಪ್ರಾವಾದಿತ್ವದ ಬಗ್ಗೆ ಸಂಶಯಿತರಾದ ಯಹೂದಿಗಳು ಸಹಜವಾಗಿ ಅದನ್ನ ಗೇಲಿ ಮಾಡಿದರು. ಆತ ತಾನೆ ಹೇಳಿಕೊಳ್ಳುತ್ತಿದ್ದಂತೆ ಯಾವುದೇ ರೋಗ ನಿವಾರಣೆಯ ಶಕ್ತಿಯನ್ನೆ ಅಸಲಿಗೆ ಪಡೆದಿಲ್ಲವೆಂದು ಅವರೆಲ್ಲಾ ಟೀಕಿಸಿದರು. ಅವನ ಉಪಚಾರ ಸಿಕ್ಕರೂ ಮಾಸಬ್ ಸಾಯುವುದಾದರೆ ಇವ ಯಾವ ಸೀಮೆಯ ಪ್ರವಾದಿ? ಎನ್ನುವ ಪ್ರಶ್ನೆಯನ್ನು ಅವರೆಲ್ಲಾ ಎತ್ತಿದರು.


ಅದರೆ ಇದಕ್ಕುತ್ತರವಾಗಿ ಮಹಮದ್ ಮಾತ್ರ 'ತಾನು ಕೇವಲ ಪ್ರವಾದಿ ಮಾತ್ರ ಆಗಿದ್ದೇನೆ! ತನ್ನ ಅಥವಾ ತನ್ನ ಮತ ಬಾಂಧವರ ಜೀವ ಉಳಿಸುವ ಯಾವ ಶಕ್ತಿಯನ್ನೂ ತನಗೆ ದೇವರು ಇನ್ನೂ ನೀಡದೆ ಇರುವಾಗ, ನಾನದರೂ ಅದು ಹೇಗೆ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ' ಎಂದು ಅಸಹಾಯಕನಾಗಿ ಪ್ರಾರ್ಥನಾ ಸಮಯದಲ್ಲಿ ಸಾರ್ವಜನಿಕವಾಗಿ ಅಳಲು ತೋಡಿಕೊಂಡ. 'ದ ಲೈಫ್ ಆಫ್ ಮಹಮದ್' ಕೃತಿಯಲ್ಲಿ ಸರ್ ವಿಲಿಯಂ ಮ್ಯೂರ್ ಹೇಳುವ ಪ್ರಕಾರ ಆತ ಯಹೂದಿಗಳಿಗೆ ಶಾಪವನ್ನೂ ಆ ಕ್ಷಣದಲ್ಲಿ ಇತ್ತ! ವಿಪರ್ಯಾಸವೆಂದರೆ ಅಂತಹ ವರ ಹಾಗೂ ಶಾಪ ಕೊಡುವ ಯಾವುದೆ ಶಕ್ತಿಯನ್ನ ದೇವರು ತನಗೆ ದಯ ಪಾಲಿಸಿಲ್ಲ ಅಂತ ಸತಃ ಆತನೆ ಕೆಲ ಕ್ಷಣದ ಹಿಂದೆ ಹುಲುಬಿದ್ದ! ಇಂತಹ ವಿರೋಧಾಭಾಸಗಳನ್ನ ಮಹಮದನ ಬಾಳಿನುದ್ದ ವಿವಿಧ ಪ್ರಕರಣಗಳಲ್ಲಿ ಕಾಣಬಹುದಾಗಿದೆ. ತಮಾಷೆಯೆಂದರೆ ಖಟ್ಟರ್ ಮುಸಲ್ಮಾನ ವಿದ್ವಾಂಸರು ತಮ್ಮ ಕೃತಿಗಳಲ್ಲಿ ಮಹಮದನಿಗೆ ದೈವಾಂಶ ಶಕ್ತಿಯೂ ಇತ್ತು ಹಾಗೂ ಹಾಗೂ ಆತ ಪವಾಡ ಪುರುಷನಿಗೆ ಇರುವ ಅತಿಮಾನುಷ ಶಕ್ತಿಗಳನ್ನೂ ಹೊಂದಿದ್ದ ಎಂದು ಬರೆದುಕೊಂಡಿದ್ದಾರೆ. ಆದರೆ ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನ ಒದಗಿಸುವ ಶಕ್ತಿಯೊಂದು ಮಾತ್ರ ಅವರ್ಯಾರಿಗೂ ಇಲ್ಲ ಅಷ್ಟೆ.



ಮಹಮದ ತನ್ನ ಸೇವೆಗಾಗಿ ಆತನ ಬಂಟರಲ್ಲೊಬ್ಬನೆ ಆಗಿದ್ದ 'ಅಬ್ದುಲ್ಲಾ ಇಬ್ನ ಮಸೂದ್' ಎಂಬಾತನನ್ನ ನೇಮಿಸಿಕೊಂಡ. ವಾಸ್ತವದಲ್ಲಿ ಅವನ ತಾಯಿ ಒಬ್ಬ ಗುಲಾಮಳಾಗಿದ್ದಳು. ಆದರೆ ಮಹಮದನ ಸೇವೆಗೆ ನಿಂತ ಮೇಲೆ ಅವರಿಬ್ಬರಿಗೂ ಸ್ವಾತಂತ್ರ್ಯವನ್ನ ಘೋಷಿಸಲಾಯಿತು. ಅಬ್ದುಲ್ಲ ಒಂದು ರೀತಿ ಮಹಮದನ ಆಪ್ತ ಕಾರ್ಯದರ್ಶಿಯಂತೆ ವರ್ತಿಸುತ್ತಿದ್ದ. ಅವನ ಸಕಲ ದೈನಿಕ ಅಗತ್ಯಗಳನ್ನೂ ಸಹ ಮುತುವರ್ಜಿ ವಹಿಸಿ ಪೂರೈಸುತ್ತಿದ್ದ. ಅವನ ನಿವಾಸ ಮಹಮದನ ಮನೆಯ ಹತ್ತಿರದಲ್ಲಿಯೆ ಇತ್ತು, ಸದಾ ಕಾಲವೂ ಅವನು ಮಹಮದನ ಸೇವೆಗೆ ಲಭ್ಯನಿದ್ದ.


ಮದೀನಾ ಪಟ್ಟಣಕ್ಕೆ ಬಂದು ಸೇರಿದ ಮೊದಲ ಆರು ತಿಂಗಳು ಮಹಮದ್ ಹಾಗೂ ಅವನ ಅನುಚರರಿಗೆ ಬಾಳ್ವೆ ಹಿತಕರವಾಗಿಯೆ ಇತ್ತು. ಅವರು ನಿರಾಶ್ರಿತರಾಗಿಯೆ ನೆಲೆ ಹುಡುಕಿಕೊಂಡು ಅಲ್ಲಿಗೆ ಬರಿಗೈಯಲ್ಲಿ ಬಂದವರಾಗಿದ್ದರೂ ಸಹ ಸ್ಥಳಿಯರ ನೆರವಿನಿಂದ ತಮ್ಮ ತಮ್ಮ ಗುಡಿಸಲುಗಳನ್ನ ಕಟ್ಟಿಕೊಂಡು, ಬದುಕಿನ ಆಸರೆಗಾಗಿ ಕೆಲಸವನ್ನು ಹುಡುಕಿಕೊಂಡು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿತ್ತು. ಮದೀನದ ಪ್ರಜೆಗಳು ಮೆಕ್ಕಾದ ಈ ಎಲ್ಲ ನಿರಾಶ್ರಿತರನ್ನ ಆದರಿಸಿ ಸತ್ಕರಿಸಿ ಬದುಕಿ ಉಳಿಯಲಿಕ್ಕೆ ಸಹಾಯ ಮಾಡಿ ಅವರಿಂದ 'ಸಹಾಯಕರು' ಎಂದೆ ಅಭಿದಾನ ಪಡೆದಿದ್ದರು.



ಅದರೆ ಇಲ್ಲಿ ಒಂದು ಅತೃಪ್ತಿಯ ಛಾಯೆ ಸಹ ನಿರಾಶ್ರಿತರಲ್ಲಿ ದಟ್ಟವಾಗಿಯೆ ಆವರಿಸಿತ್ತು. ಮದೀನಾ ವಾಸಿಗಳು ತಮ್ಮ ತಮ್ಮ ಮನೆ ಹಾಗೂ ತೋಟಗಳಲ್ಲಿ ಅವರಿಗೆ ಕೆಲಸ ನೀಡಿದ್ದರೂ ಸಹ ಅದು ಅವರಲ್ಲಿ ಸಂಪೂರ್ಣ ಖುಷಿ ಸಂತೃಪ್ತಿ ತಂದಿರಲಿಲ್ಲ. ಕಾರಣ ಸರಳ ಅವರಲ್ಲಿ ಖರ್ಜೂರದ ತೋಟಗಳಲ್ಲಿ ದುಡಿಯುವ ವ್ಯವಸಾಯಿ ನೈಪುಣ್ಯತೆ ಇರಲಿಲ್ಲ. ಹೀಗಾಗಿ ಅವರು ಹೀನ ಮಟ್ಟದ, ಕೀಳಾದ ಹಾಗೂ ಕಠಿನ ಶ್ರಮ ಬೇಡುವ ಇನ್ನಿತರ ಕೆಲಸಗಳನ್ನ ಸಹ ಮಾಡುವ ಅನಿವಾರ್ಯತೆ ಎದುರಾಯಿತು. ಕಟ್ಟಿಗೆ ಒಡೆಯುವುದು, ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವುದು, ನೀರು ಹೊತ್ತು ಸಾಗಿಸುವುದು ಇವೆ ಮೊದಲದ ಅವರ ಅಂತಸ್ತಿಗೆ ಕುಂದು ತರುವ ದೈಹಿಕ ಶ್ರಮದ ಕೆಲಸ ಮಾಡುವ ದುರವಸ್ಥೆಗೆ ಅವರೆಲ್ಲಾ ಒಳಗಾದರು. ಬಹುತೇಕರು ಅನಿವಾರ್ಯವಾಗಿ ಹೊಟ್ಟೆ ಹೊರೆದುಕೊಳ್ಳಲು ಇಂತಹ ಕೂಲಿ ಕೆಲಸಗಳಲ್ಲಿ ವ್ಯಸ್ತರಾದರು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಸ್ಥಿತಿವಂತಿಕೆ ಕಂಡವರು ಮಾತ್ರ ತಕ್ಕಮಟ್ಟಿನ ಸಾಮಾಜಿಕ ಅಂತಸ್ತು ಹೊಂದಿದ ಕಸುಬುಗಳಲ್ಲಿ ತೊಡಗಿದರು. ಉದಾಹರಣೆಗೆ ಅಬು ಬಕರ್ ಮದೀನಾದ ಮಾರುಕಟ್ಟೆಯಲ್ಲಿ ಬಟ್ಟೆಯಂಗಡಿ ತೆರೆದ. ಅಬ್ದುಲ್ ರೆಹಾನ ಒಂಟೆಗಳ ಹಾಲು ಕರೆದು ಮಾರುವ ವ್ಯಾಪಾರವನ್ನ ಶುರುವಿಟ್ಟುಕೊಂಡ.



ಆದರೆ ಇದ್ಯಾವುದರಿಂದಲೂ ಆರ್ಥಿಕವಾಗಿ ನಿರಾಶ್ರಿತರಲ್ಲಿ ಯಾರ ಪರಿಸ್ಥಿತಿಯೂ ಅಷ್ಟಾಗಿ ವೃದ್ಧಿಸಲಿಲ್ಲ. ಎಲ್ಲರೂ ಬಡತನದ ಬೇಗೆಯಿಂದ ಬಳಲಿದರು. ಸ್ವತಃ ಮಹಮದನೂ ಇದಕ್ಕೆ ಹೊರತಾಗಿರಲಿಲ್ಲ. ಅದೆಷ್ಟೋ ದಿನಗಳೂ ಅವನ ಅಡುಗೆ ಮನೆಯಲ್ಲಿನ ಒಲೆಯಲ್ಲಿ ಕೆಂಡ ಸಹ ಇರುತ್ತಿರಲಿಲ್ಲ. ಬರೆ ಖರ್ಜೂರ ಹಾಗೂ ತಣ್ಣೀರನ್ನ ಕುಡಿದೆ ದಿನ ದೂಡಬೇಕಾದ ಅನಿವಾರ್ಯತೆಯೂ ಆಗಾಗ ಎದುರಾಗುತ್ತಿತ್ತು. ಇಂತಹ ಹೀನ ಪರಿಸ್ಥಿತಿಯಲ್ಲಿ ಮದೀನಾದ ಮೂಲ ನಿವಾಸಿಗಳಲ್ಲಿ ಹಲವರು ಅವನ ಸಹಾಯಕ್ಕೆ ಬಂದರೆ ಯಾವುದೆ ಯಹೂದಿ ಸಹ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ತಮ್ಮ ಪ್ರವಾದಿಯನ್ನ ನಂಬದ ಹಾಗೂ ಬೆಂಬಲಿಸದ ಯಹೂದಿಗಳು ಅವರೆಲ್ಲರ ಕ್ರೋಧವನ್ನ ಎದುರಿಸಬೇಕಾಯಿತು. ತಮ್ಮ ಪ್ರವಾದಿಗೆ ಕಷ್ಟ ಕಾಲದಲ್ಲಿ ಒದಗಿ ಬಾರದ ಯಹೂದಿಗಳ ಬಗ್ಗೆ ಮುಸಲ್ಮಾನರಲ್ಲಿ ಮತ್ಸರ ಹಾಗೂ ಸಿಟ್ಟು ಹುಟ್ಟಿಕೊಂಡವು. ಸಾಲದ್ದಕ್ಕೆ ಈ ವಲಸೆ ಬಂದ ನಿರಾಶ್ರಿತರಲ್ಲಿನ ಬಹುತೇಕ ಮಹಿಳೆಯರು ಹೊಸ ಪರಿಸರದಲ್ಲಿ ಬಸಿರಾಗದೆ ಮಕ್ಕಳನ್ನು ಹೆರದೆ ಇದ್ದ ಕಾರಣಕ್ಕೆ ವರ್ಷದ ನಂತರ ಬಂಜೆಯರೆಂಬ ಭರ್ತ್ಸನೆಯನ್ನ ಯಹೂದಿ ಸಮುದಾಯದಿಂದ ಕೇಳಬೇಕಾಯಿತು. ಇದು ಗಾಯದ ಮೇಲೆ ಮುಸಲ್ಮಾನರಿಗೆ ಉಪ್ಪು ಸುರಿದಂತೆ ಅನ್ನಿಸಿತು. ಯಹೂದಿಗಳ ವ್ಯಾಪಾರದಲ್ಲಿನ ಜಿಪುಣತನ, ಎಲ್ಲದರಲ್ಲೂ ವ್ಯಾವವಹಾರಿಕವಾಗಿರುವ ಗುಣ ಹಾಗೂ ಬಡ್ಡಿ ವ್ಯವಹಾರದಲ್ಲಿನ ಅವರ ಜನ್ಮಜಾತ ಕುಶಲತೆಗಳೂ ಸಹ ಮುಸಲ್ಮಾನರನ್ನ ಕೆಂಗೆಡಿಸಿದವು.



ಹೀಗಾಗಿ ಕ್ರಮೇಣ ಈ ಎಲ್ಲಾ ಅಸಹನೆಗಳ ಪ್ರತಿರೂಪವಾಗಿ ಮಹ್ಮದ್ ಬಾಯಿಯಿಂದ ಯಹೂದಿಗಳ ವಿರುದ್ಧ ಅವರ ಗುಣ - ನಡತೆ, ಹವ್ಯಾಸ ಬುದ್ಧಿಗಳ ವಿರುದ್ಧ ಟೀಕಾ ಪ್ರಹಾರಗಳು ದೈವವಾಣಿಯ ಹೆಸರಿನಲ್ಲಿ ಹೊರ ಬರಲಾರಂಭಿಸಿದವು! ಆತ ತನ್ನ ಅಂತಹ ಪ್ರತಿಯೊಂದು ಮಾತನ್ನೂ ಸಹ ದೈವವಾಣಿ ಎಂದು ಹೇಳಿ ಸುಲಭವಾಗಿ ಅದರ ಹೊಣೆಗಾರಿಕೆಯಿಂದ ತಾನು ಪಾರಾಗಿ ಬಿಡುತ್ತಿದ್ದ. ಮಹಮದನ ಮೂಲ ಬುಡಕಟ್ಟಿನ ಖುರೈಷಿಗಳು ಗುಣ ಹಾಗೂ ನಡತೆಯಲ್ಲಿ ಪರಮ ಹೇಡಿಗಳಾಗಿದ್ದರು ಅನ್ನುವುದು ಮುಂದಿನ ದಿನಗಳಲ್ಲಿ ನಿಸ್ಸಂಶಯವಾಗಿ ಸಾಬೀತಾಯಿತು ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಮಹಮದ ಹೊಸ ಧಾರ್ಮಿಕ ವಾದವನ್ನ ಬಿತ್ತಲು ಆರಂಭಿಸಿದ ಹೊಸತರಲ್ಲಿ ಅವನ ಹುಟ್ಟನ್ನ ಅಡಗಿಸದೆ. ಜೀವ ಸಹಿತ ಆತನನ್ನ ದೇಶಭ್ರಷ್ಟನಾಗಿ ಬಾಳಲು ಅನುವು ಮಾಡಿಕೊಟ್ಟು ಮೆಕ್ಕಾದಿಂದ ಓಡಿ ಹೋಗುವಂತೆ ಮಾಡಿದ್ದು ಹೇಡಿತನವಲ್ಲದೆ ಇನ್ನೇನು? ಅನ್ನೋದು ಮುಬಾರಖಿಯ ಪ್ರಶ್ನೆ.



ಅತ್ತ ಖುರೈಷಿಗಳು ಮಹಮದನ ರಕ್ತಪಾತಕ್ಕೆ ಹೆದರಿದರೆ ಈತ ಮಾತ್ರ ಹೊಸ ಧರ್ಮೋನ್ಮಾದದಲ್ಲಿ ಯಾವತ್ತೂ ಅವರ ರಕ್ತ ಹರಿಸಲು ಹಿಂದೆಮುಂದೆ ಯೋಚಿಸಲೆ ಇಲ್ಲ. ಆತ ಅವಕಾಶ ಸಿಕ್ಕಾಗಲೆಲ್ಲ ಖುರೈಷಿಗಳ ವಿರುದ್ಧ ಹೋರಾಡಿ ಅವರ ಪ್ರಾಣ ಕಳೆದ. ಅವನ ನೂತನ ಧರ್ಮದಲ್ಲಿನ ಈ ಹೊಸತಾಗಿದ್ದ ಹೋರಾಟದ ಕರೆ ಮುಂಚಿನ ಸ್ಥಳಿಯ ಯುದ್ಧಾಚರಣೆಗಳ ವಿಧಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಆರಂಭದಲ್ಲಿ ಕೇವಲ ಶಾಂತಿ, ಸಂಯಮ ಹಾಗೂ ಸಹನೆಯನ್ನ ಬೋಧಿಸಿದ್ದ ಮಹಮದ್ ಈಗ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಕತ್ತಿಯ ಹೋರಾಟಕ್ಕೆ ಕರೆ ನೀಡುವುದು ಅವರಲ್ಲಿ ಸಖೇದಾಶ್ಚರ್ಯವನ್ನ ಹುಟ್ಟಿಸಿತು. ಈ ತನಕದ ಅತನ ಸಮರಸ್ಯದ ಬೋಧನೆಗಳಿಗೆ ಅವು ಸಂಪೂರ್ಣ ವಿರುದ್ಧವಾಗಿದ್ದವು. ಆತನ ವಯಕ್ತಿಕ ಜೀವನದ ವಿರೋಧಾಭಾಸಗಳಿಗೆ ಇದೂ ಸಹ ಒಂದು ಜ್ವಲಂತ ಉದಾಹರಣೆ. ಆದರೆ ಅವನ ನೂತನ ವಿಚಾರಧಾರೆಗೆ ಬೆಂಬಲವಾಗಿ ಆತನಿಗೆ ಖುರ್ಹಾನಿನ ಸುರಾದ ಮೂಲಕ ದೈವಿಕ ಆದೇಶವೂ ದೊರಕಿತು. ಸುರಾ ೨೨;೩೯; ೨;೧೯೦ ೯/೩೫ರ ಮೂಲಕ ದೇವರು ಧರ್ಮಕ್ಕಾಗಿ ಹೋರಾಟ ನಡೆಸಲು ಮಹಮದನ ಮೂಲಕ ಮುಸಲ್ಮಾನರಿಗೆ ಆದೇಶ ಕೊಟ್ಟನು.


ಒಳಗೊಳಗೆ ಅವಮಾನದಿಂದ ಕುದ್ದು ಹೋಗಿದ್ದ ಮಹಮದ ಮೆಕ್ಕಾದ ನಿವಾಸಿಗಳಿಂದ ತನಗಾದ ಘೋರ ಪರಾಭವ ಹಾಗೂ ಸೋಲಿನ ಕಾರಣಕ್ಕೆ ಪ್ರತಿಕಾರಕ್ಕಾಗಿ ಚಡಪಡಿಸುತ್ತಿದ್ದ. ಆತ ಅಶಾಂತ ಮನಸ್ಥಿತಿಯಲ್ಲಿ ಸದಾ ತನಗಾದ ಹತಾಶೆ ಹಾಗೂ ಅವ ಮರ್ಯಾದೆಗೆ ತಕ್ಕ ಮುಯ್ಯನ್ನ ಅವರೆಲ್ಲರಿಗೂ ಮುಟ್ಟಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಲಿದ್ದ. ಮೆಕ್ಕಾದ ಖುರೈಷಿಗಳಿಗೆ ಪ್ರತಿಕಾರ ಎಸಗಲು ರಣತಂತ್ರವೊಂದು ಆತನ ಮನಸ್ಸಿನಲ್ಲಿ ರೂಪುಗೊಳ್ಳುತ್ತಲೆ ಇತ್ತು. ಅತೃಪ್ತಿ ಹೊಗೆಯಾಡುತ್ತಿದ್ದ ಮನಸ್ಸಿನಲ್ಲಿ ಆತ ಅದನ್ನು ಜಾರಿಗೆ ತರಲು ಸೂಕ್ತ ಸಮಯ ಹಾಗೂ ಸಂದರ್ಭಕ್ಕಾಗಿ ಕಾದು ಕುಳಿತಿದ್ದ.



( ಇನ್ನೂ ಇದೆ.....)

No comments: