11 November 2015

ವಲಿ - ೨೫








ಸ್ವಂತ ಬಲದ ಮೇಲೆ ನಡೆಯಲು ಅಸಮರ್ಥನಾಗಿದ್ದ, ಯುದ್ಧ ಗಾಯಾಳುವಾಗಿದ್ದ ಸಾದ್ ಇಬ್ನ್ ಮಾಆದನನ್ನು ಮುಸಲ್ಮಾನರು ಅಕ್ಷರಶಃ ಎತ್ತಿಕೊಂಡು ತಂದು ನ್ಯಾಯಪೀಠದ ಮೇಲೆ ಕೂರಿಸಿದರು. ವಿಚಾರಣೆ ಆರಂಭವಾಯಿತು. ಅವನು ಕೂತಿದ್ದ ಸ್ಥಳದ ಅಕ್ಕಪಕ್ಕಗಳಲ್ಲಿ ಸೆರೆಯಾಳುಗಳನ್ನ ತಂದು ನಿಲ್ಲಿಸಲಾಗಿತ್ತು. ಎಡಗಡೆ ಎಂಟುನೂರಕ್ಕೂ ಹೆಚ್ಚಿನ ದುಗುಡದ ಮುಖ ಹೊತ್ತ ಆತಂಕಿತ ಯುವಕರನ್ನ ಕೈ ಹಿಂದೆ ಕಟ್ಟಿ ಬಿಗಿದು ನಿಲ್ಲಿಸಲಾಗಿದ್ದರೆ, ಬಲಗಡೆ ಮಹಿಳೆಯರು ಹಾಗೂ ಮಕ್ಕಳನ್ನ ಪ್ರತ್ಯೇಕವಾಗಿ ತಂದು ನಿಲ್ಲಿಸಲಾಗಿತ್ತು. ಅವರೆಲ್ಲಾ ಮ್ಲಾನಗೊಂಡ ಮೊಗದೊಂದಿಗೆ ದುಮ್ಮಾನ ಹೊತ್ತು ಮುದುಡಿದಂತೆ ಒತ್ತೊತ್ತಾಗಿ ನಿಂತಿದ್ದರು. ನ್ಯಾಯಾಧೀಶನ ಹಿಂದೆ ಲೂಟಿಗೆ ಹಾಗೂ ಆತನಿಂದ ಯಾವುದೆ ಆಜ್ಞೆ ಹೊರಟರೆ ಅದನ್ನ ನೆರವೇರಿಸುವುದಕ್ಕೆ ನವ ಧರ್ಮಿ ಮುಸಲ್ಮಾನರು ತಯ್ಯಾರಾಗಿ ನಿಂತಿದ್ದರು.




ಏಕಪಕ್ಷೀಯವಾಗಿದ್ದ ವಿಚಾರಣೆ ಹೆಚ್ಚು ಹೊತ್ತು ಸಾಗದೆ ಬಹು ಬೇಗನೆ ಪೂರ್ವ ನಿರ್ಧರಿತ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶನಾಗಿದ್ದ ಸಾದ್ ಘೋಷಿಸುವುದರೋಂದಿಗೆ ಕಲಾಪವನ್ನ ಮುಗಿಯಿತು. ವಿಚಾರಣೆ ಎನ್ನುವ ನಾಟಕ ಮುಗಿದೊಡನೆ ಹೇಗೆ ತಂದು ಅಲ್ಲಿ ಕೂರಿಸಿದ್ದರೋ ಅಂತೆಯೆ ಅಲ್ಲಿಂದ ಹೊತ್ತು ಅವನನ್ನು ಅವನ ಮನೆಗೆ ಮುಟ್ಟಿಸಿ ಬರಲಾಯಿತು. ಸಾದ್ ಕೊಟ್ಟ ತೀರ್ಪು ಹೀಗಿತ್ತು. ಎಲ್ಲಾ ಪುರುಷರಿಗೆ ಮರಣ ದಂಡನೆ! ಮಹಿಳೆಯರು ಹಾಗೂ ಮಕ್ಕಳಿಗೆ ಅಜನ್ಮ ಪರ್ಯಂತ ಗುಲಾಮಗಿರಿ!! ಹಾಗೂ ಯಹೂದಿಗಳ ಸೊತ್ತನ್ನೆಲ್ಲಾ ಸಂಪೂರ್ಣ ಗೆದ್ದ ಪಕ್ಷದವರು ಲೂಟಿ ಹೊಡೆದು ಕೊಳ್ಳೆಯಲ್ಲಿ ಐದನೆ ಒಂದು ಪಾಲನ್ನ ಪ್ರವಾದಿ ಮಹಮದನಿಗೆ ಅರ್ಪಿಸಿ ಉಳಿದ್ದನ್ನ ಸಮಾನವಾಗಿ ಹಂಚಿಕೊಳ್ಳುವುದು!!! ಈ ಅರಣ್ಯ ನ್ಯಾಯವನ್ನು ಆಲಿಸಿದ ಯಹೂದಿಗಳು ಭೀಕರವಾಗಿ ಎದೆ ಬಡಿದುಕೊಂಡು ಗೋಳಿಟ್ಟರು. ಯಾವುದೆ ಪ್ರಶ್ನಾವಳಿ - ಹೇಳಿಕೆ ಇದ್ದಿರದಿದ್ದ ಇದೆಂತಹ ವಿಚಾರಣೆ? ಎನ್ನುವ ಆಕ್ಷೇಪಭರಿತ ಪ್ರತಿರೋಧವನ್ನು ಅವರು ಧ್ವನಿಯಲ್ಲಿ ತೋರಿಸಿದರು. ಆದರೆ ಅವರ ಈ ಪ್ರಯತ್ನವೆಲ್ಲಾ ಕೇವಲ ಗಾಳಿಯಲ್ಲಿ ಗುದ್ದಾಡಿದ ಹಾಗಿತ್ತು ಅಷ್ಟೆ. ನ್ಯಾಯಾಧೀಶನೆಂದರೆ ಪ್ರತ್ಯಕ್ಷ ದೇವರಿದ್ದಂತೆ! ಅವನ ನುಡಿ ದೈವವಾಣಿಗೆ ಸಮ ಎಂದನ್ನುತ್ತಾ ಈ ವಿರೋಧವನ್ನೆಲ್ಲಾ ಮಹಮದ್ ಸರಾಸಗಟಾಗಿ "ಇದು ದೇವರು ನೀಡಿದ ನ್ಯಾಯ?!" ಎಂಬ ಒಂದೆ ಮಾತಿನಲ್ಲಿ ತಿರಸ್ಕರಿಸಿದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ಆರುನೂರಾ ಮೂವತ್ತೊಂದರಲ್ಲಿ.



ಎಲ್ಲಾ ಸೆರೆಯಾಳುಗಳನ್ನ ಮದೀನಾ ನಗರದೊಳಗೆ ಎಳೆದೊಯ್ಯಲಾಯಿತು. ನಿಷ್ಕರುಣೆಯಿಂದ ಮಕ್ಕಳೆಲ್ಲರನ್ನ ತಾಯಂದಿರಿಂದ ಬೇರ್ಪಡಿಸಿ ಪ್ರತ್ಯೇಕವಾಗಿಡಲಾಯಿತು. ಇನ್ನು ನಾಳೆ ಸಾಯಲಿಕ್ಕಿರುವ ಪುರುಷರನ್ನೂ ಕುರಿಗಳಂತೆ ಒಟ್ಟಿ ಪ್ರತ್ಯೇಕವಾಗಿ ಕೂಡಿ ಹಾಕಲಾಯಿತು. ಪ್ರೇತ ಕಳೆಯನ್ನ ಅದಾಗಲೆ ಮುಖದಲ್ಲಿ ಹೊತ್ತಂತಿದ್ದ ಅವರೆಲ್ಲರೂ ಮೂಕ ಪಶುಗಳಂತೆ ತಮ್ಮ ದುರ್ವಿಧಿಯನ್ನ ನೆನೆಯುತ್ತಾ ಚಡಪಡಿಕೆಯಿಂದಲೆ ಇರುಳನ್ನ ಕಳೆದರು. ಮದೀನಾದ ಮುಖ ಮಾರಾಟ ಸ್ಥಳದಲ್ಲಿ ಆಳವಾದ ಗುಂಡಿಯನ್ನ ಶಿಕ್ಷೆ ಜಾರಿಗೆಂದೆ ವಿಶೇಷವಾಗಿ ತೋಡಲಾಯಿತು. ವ್ಯವಸ್ಥೆಯ ಪರಿಶೀಲನೆಗೆ ಸ್ವತಃ ಮಹಮದನೆ ಬಂದು ಎಲ್ಲವೂ ಸರಿಯಾಗಿ ಮಾಡಲಾಗಿದೆಯೆ? ಎನ್ನುವ ಮೇಲುಸ್ತುವಾರಿಯನ್ನ ವಹಿಸಿದ. ಆರು ಮಂದಿ ಪುರುಷರನ್ನ ಒಂದು ತಂಡವಾಗಿ ತಂದು ಹೊಂಡದ ಅಂಚಿನಲ್ಲಿ ಕೂರಿಸಲಾಗುತ್ತಿತ್ತು. ಒಬ್ಬೊಬ್ಬರ ತಲೆಯನ್ನೂ ಒಂದೆ ಏಟಿಗೆ ಕಡಿದು ರುಂಡ ಹಾಗೂ ಮುಂಡವನ್ನ ಗುಂಡಿಗೆ ಒದ್ದು ತಳ್ಳಲಾಗುತ್ತಿತ್ತು. ತನ್ನ ಅದೆ ಕೃತಿಯ ಮುಂದಿನ ಅರುನೂರಾ ಮುವತ್ತೆರಡನೆ ಪುಟದಲ್ಲಿ ಇತಿಹಾಸಕಾರಕಾರ ಅಲ್ ಮುಬಾರಖಿ ಈ ಭೀಕರ ಹಾಗೂ ಬೀಭತ್ಸ ಹತ್ಯಾಕಾಂಡದ ವರದಿಯನ್ನ ವಿವರವಾಗಿ ಕೊಟ್ಟಿದ್ದಾನೆ.



ಕೊಲ್ಲಲಾದ ಸೆರೆಯಾಳುಗಳೆಲ್ಲ ಪುರುಷರೆ ಆಗಿದ್ದರೂ ಸಹ, ಕಡೆಯಲ್ಲಿ ಆದರಲ್ಲಿ ಒಬ್ಬ ಮಹಿಳೆಯನ್ನೂ ಸೇರಿಸಲಾಯಿತು. ಆಕೆ ಮುಸಲ್ಮಾನ ಯೋಧನ ತಲೆಯ ಮೇಲೆ ಕೋಟೆಯ ಮೇಲಿಂದ ಕಲ್ಲು ಗುಂಡನ್ನ ಎಸೆದು ಕೊಂದಿದ್ದ ಯಹೂದಿ ಹೆಂಗಸಾಗಿದ್ದಳು. ಅವಳ ಪತಿಯ ಹತ್ಯೆಯನ್ನು ಕಣ್ಣಾರೆ ಕಂಡ ನಂತರ ಆಕೆಯೆ ಮುಂದೆ ಬಂದು ಆ ಘಟನೆಯನ್ನ ವಿವರಿಸಿ ತಾನು ಇನ್ನು ಗಂಡನಿಲ್ಲದೆ ಬದುಕಿ ಪ್ರಯೋಜನವಿಲ್ಲ, ಹೀಗಾಗಿ ನನ್ನನ್ನೂ ಸಹ ಕೊಲ್ಲಿರಿ ಎಂದು ಪ್ರಾರ್ಥಿಸಿ ಬಯಸಿ ಬಯಸಿ ಕತ್ತಿಗೆ ಆಹುತಿಯಾದಳು. ಮಹಮದ್ ಅವಳ ಮನವಿಯನ್ನು ಮನಸಾರೆ ಒಪ್ಪಿದನು. ಆಗ ಅವನಿಗೆ ಇದು ದೇವರ ತೀರ್ಪಾಗಿದ್ದು ಅದರ ವಿರುದ್ಧ ಕ್ರಮ ಕೈಗೊಳ್ಳಲು ತನಗೆ ಅಧಿಕಾರ ಇಲ್ಲ ಎನ್ನುವ ಅಂಶ ಮರೆತು ಹೋಗಿತ್ತು!.



ಇದೇ ರೀತಿ ಗುಂಪಿನಲ್ಲಿದ್ದ ಒಬ್ಬ ವಯೋವೃದ್ಧ ಯಹೂದಿ ಅಝ್ ಝಾಬಿರ್ ಎಂಬಾತನನ್ನು ಉಳಿಸಲು ಅನೇಕರು ಬಹಳ ಪ್ರಯತ್ನ ಪಟ್ಟರು. ಅದಕ್ಕೊಂದು ಖಚಿತ ಕಾರಣವೂ ಇತ್ತು. ದಯಾಳುವಾಗಿದ್ದ ಆತ ತನ್ನ ಸ್ವಭಾವ ಸಹಜವಾಗಿ ಹಿಂದಿನ ಅನೇಕ ಯುದ್ಧಗಳಲ್ಲಿ ಅನೇಕ ಅರಬ್ಬಿಗಳನ್ನ ಕಡೆಕ್ಷಣದಲ್ಲಿ ಜೀವದಾನ ಮಾಡಿ ಪಾರು ಮಾಡಿದ್ದನು. ಅವನ ಆ ಸೇವೆಯನ್ನ ಗುರುತಿಸಿ ಅವನಿಗೆ ಹಾಗೂ ಅವನ ಕುಟುಂಬದವರಿಗೆ ಅವರ ಆಸ್ತಿ ಹಾಗೂ ಪ್ರಾಣ ಭಿಕ್ಷೆಯನ್ನ ನೀಡುವುದು ಒಳ್ಳೆಯದು ಎನ್ನುವುದು ಹಾಗವನ ಪರವಾಗಿ ವಾದಿಸಿದವರ ಅಭಿಪ್ರಾಯವಾಗಿತ್ತು. ಆದರೆ ಆತ ಮಾತ್ರ ಮಾನಸಿಕವಾಗಿ ಮರಗಟ್ಟಿ ಹೋಗಿದ್ದ. ತನ್ನ ಜನಾಂಗದ ಎಲ್ಲರೂ ಸತ್ತು ಹೋಗುತ್ತಿರುವಾಗ ತಾನೊಬ್ಬ ಕುಟುಂಬದೊಂದಿಗೆ ನಿರರ್ತಕವಾಗಿ ಉಳಿದು ಮಾಡುವುದಾದರೂ ಏನು? ಅವರಿಗೆ ಬಂದದ್ದೆ ತನ್ನ ಪಾಲಿಗೂ ಇರಲಿ! ಎಂದು ಆತ ಈ ದಯಾಭಿಕ್ಷೆಯನ್ನ ಅದು ಸಿಗುವ ಮೊದಲೆ ಸರಾಸಗಟಾಗಿ ತಿರಸ್ಕರಿಸಿದ.



ಸಾಲದ್ದಕ್ಕೆ ತಾನೆ, ತನ್ನದೆ ಸ್ವಂತ ಕತ್ತಿಯನ್ನ ಮಹಮದನ ಯೋಧರಿಗೆ ತೋರಿಸುತ್ತಾ ಇದು ನಿಮ್ಮದಕ್ಕಿಂತ ಹರಿತವಾಗಿದೆ, ಇದರಿಂದಲೆ ಒಂದೆ ಏಟಿಗೆ ನನ್ನ ಕತ್ತನ್ನ ಕಡಿದು ಕೊಲ್ಲಿರಿ ಎಂದು ಆಗ್ರಹಿಸಿದ. ಅದನ್ನ ಪರಿಗಣಿಸಿದ ಮಹಮದನ ಅಳಿಯ ಅಲಿ ತನ್ನ ನೆಚ್ಚಿನ ಭಂಟನ ಕೈಗೆ ಅದನ್ನ ದಾಟಿಸಿ ಆ ವೃದ್ಧನ ಕೊನೆಯಾಸೆಯನ್ನು ಕ್ಷಣ ಮಾತ್ರದಲ್ಲಿ ನೆರವೇರಿಸುವಂತೆ ನೋಡಿಕೊಂಡ!



ಬೆಳಗ್ಯೆ ಆರಂಭವಾದ ಈ ಕಡೆದುರುಳಿಸುವ ಆಟ ಇಳಿ ರಾತ್ರಿಯವರೆಗೂ ನಿರಂತರವಾಗಿ ಸಾಗಿತು. ಸುರಿದ ನೆತ್ತರಿನ ಓಕುಳಿಗೆ ಮಾರುಕಟ್ಟೆಯ ನೆಲ ಕೆಸರುಗಟ್ಟಿತು. ಅವರೆಲ್ಲರ ಶವವನ್ನೂ ಗುಂಡಿಗೆಸೆದು ಎಂಟುನೂರ ಒಂದು ಹೆಣಗಳು ತುಂಬಿದ್ದ ಆ ಗುಂಡಿಯನ್ನ ಮಟ್ಟಸವಾಗಿ ಮುಚ್ಚಿಸಿ ಮಹಮದ್ ತನ್ನ ಮನೆಗೆ ಬಂದು ಮುಟ್ಟಿದಾಗ ನಡು ರಾತ್ರೆ ಮುಗಿದು ಒಂದು ಜಾವವಾಗಿತ್ತು. ಮೊದಲೆ ನಿರ್ಧರಿಸಿದಂತೆ ಸೆರೆಯಾಳು ಸುಂದರಿ ರೆಹಾನಾಳನ್ನು ಪ್ರತ್ಯೇಕವಾಗಿ ಕಂಡು ತನ್ನನ್ನ ಮದುವೆಯಾಗುವಂತೆ ಮಹಮದ್ ಕೇಳಿಕೊಂಡ.


ಆದರೆ ಆಕೆ ತನ್ನ ಮಾತೃ ಧರ್ಮವನ್ನ ಬಿಟ್ಟು ಇಸ್ಲಾಮನ್ನ ಒಪ್ಪಲು ಸಿದ್ಧಳಿರಲಿಲ್ಲ. ಬೇಕಿದ್ದರೆ ಯಹೂದಿಯಾಗಿಯೇ ಉಳಿದು ಆತನ ಸೂಳೆ ಆಗುವೆ ಎಂಡಳು. ಮಹಮದ್ ಆ ಕೊಡುಗೆಯನ್ನ ಮರು ಮಾತಿಲ್ಲದೆ ಒಪ್ಪಿಕೊಂಡು ಕಾಫಿರಳಾಗಿದ್ದರೂ ಆಕೆಯನ್ನ ಪ್ರತ್ಯೇಕ ಬಿಡಾರವೊಂದರಲ್ಲಿ ತನ್ನ ಇನ್ನಿತರ ಹೆಂಡತಿಯರಂತೆಯೆ ಅವಳನ್ನೂ ಉಳಿಸುವ ಏರ್ಪಾಡು ಮಾಡಿದ. ಅದು ಅಧರ್ಮಿ ನಡುವಳಿಕೆ. ಅವಿಶ್ವಾಸಿಯೊಬ್ಬಳನ್ನ ಎಂದೆಂದಿಗೂ ಕೂಡಬಾರದು ಅನ್ನುವ ನೈತಿಕತೆ ಅವನನ್ನ ಆ ಕ್ಷಣ ಕಾಡಲೆ ಇಲ್ಲ. ಆಕೆ ಮಹಮದ್ ಸಾಯುವ ಒಂದು ವರ್ಷದ ಹಿಂದಿನವರೆಗೂ ಯಹೂದಿಯಾಗಿಯೆ ಬಾಳಿ ಬದುಕಿ ಸಹಜ ಸಾವನ್ನ ಸತ್ತಳು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ಆರುನೂರಾ ಮೂವತ್ತನಾಲ್ಕರಲ್ಲಿ.




ತನ್ನ ಕೃತಿ "ದ ಸೋರ್ಸಸ್ ಆಫ್ ಇಸ್ಲಾಂ"ನ ಪುಟ ಸಂಖ್ಯೆ ತೊಂಬತ್ತೆಂಟರಲ್ಲಿ ಇತಿಹಾಸಕಾರ್ತಿ ಸೆಂಟ್ ಕ್ಲೇರ್ ಟಿಸ್ಟಲ್ ಹೇಳುವ ಪ್ರಕಾರ ಮದೀನಾದ ಮೇಲಿನ ಖುರೈಷಿಗಳ ಆಕ್ರಮಣ ಹಾಗೂ ಅದೆ ಕಾರಣಕ್ಕೆ ತಾನು ಯಹೂದಿ ಬೆನ್ ಕೊರೈಝ್'ರ ಮೇಲೆ ನಡೆಸಿದ್ದ ಕ್ರೂರ ಹತ್ಯಾಕಾಂಡವನ್ನ ಮಹಮದ್ ಬಲವಾಗಿ ಸಮರ್ಥಿಸಿಕೊಂಡಿದ್ದ. ಅವಿಶ್ವಾಸಿಗಳು ತೋರಿದ ಸಂಚಿನ ನಡುವಳಿಕೆ ಹಾಗೂ ಅವರ ಪುಕ್ಕಲು ಸ್ವಭಾವದ ಹೇಡಿತನವನ್ನ ಆತ ಕಟು ಶಬ್ದಗಳಲ್ಲಿ ತನ್ನ ದೈವಾವಾಣಿಯ ಮೊಹರೊತ್ತಿ ಟೀಕಿಸಿದ. ಖುರ್ಹಾನಿನ ಸುರಾ ಸಂಖ್ಯೆ ೩೩/೯, ೩೮/೯-೨೭ಗಳಲ್ಲಿ ಈ ದಯೆ ಇಲ್ಲದ ಇಂತಹ ಟೀಕೆಗಳನ್ನ ಕಾಣಬಹುದು ಎನ್ನುತ್ತರವರು. ಈ ಕಗ್ಗೊಲೆ ಜರುಗಿಸಿದ ನಂತರ ಸಹಜವಾಗಿಯೆ ಮದೀನಾದಲ್ಲಿ ಮಹಮದನ ಪ್ರತಿಷ್ಠೆ ಗರಿಗೆದರಿತು. ಮದೀನಾದ ಮೂಲ ನಿವಾಸಿಗಳಲ್ಲಿ ಹಲವರು ಈ ಬಗ್ಗೆ ಅಸಮ್ಮತಿ ಸೂಚಕ ನಿಲುವನ್ನ ಹೊಡಿದ್ದು, ಒಳಗೊಳಗೆ ಅಸಂತುಷ್ಟರಾಗಿದ್ದರೂ ಸಹ ಆತನ ತೋಳ್ಬಲ ಹಾಗೂ ಆತನ ಬಗ್ಗೆ ಮೂಡಿದ್ದ ಆಂತರಿಕ ಭಯ ಅವರನ್ನೆಲ್ಲಾ ತೆಪ್ಪಗಾಗಿಸಿತ್ತು. ಈ ಮೂಲಕ ಅನಧಿಕೃತವಾಗಿ ಆತ ಮದೀನಾದ ಒಡೆಯನಾದಂತಾಗಿ ಆತ ಅಲ್ಲಿನ ಪ್ರವಾದಿ ಆದನಷ್ಟೆ ಅಲ್ಲ - ಅಲ್ಲಿನ ಆಡಳಿತ ನಡೆಸುವ ಪ್ರಭುವಾಗಿಯೂ ಬದಲಾದ. ಈಗ ಅವನನ್ನ ಪ್ರಶ್ನಿಸುವ ಧೈರ್ಯ ಅಲ್ಲಿನ ಇನ್ಯಾರಲ್ಲೂ ಉಳಿದಿರಲಿಲ್ಲ.




ಬೆನ್ ಕೊರೈಝಾರ ಮೂಲಕ ಯಹೂದಿಗಳ ಕೊನೆ ಬುಡಕಟ್ಟು ಸಹ ಮದೀನಾ ಸುತ್ತಮುತ್ತಲಿನಿಂದ ಬುಡ ಸಹಿತ ನಿರ್ನಾಮವಾಗಿ ಹೋಗಿ ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ ಸರ್ವಾಧಿಕಾರಿಯಾಗಲು ಅವನಿಗೆ ಯಾವ ಅಡೆತಡೆಗಳೂ ಮದೀನದ ಪ್ರಾಂತ್ಯದಲ್ಲಿ ಉಳಿದಿರಲಿಲ್ಲ. ಮಾತೆತ್ತಿದರೆ ತನ್ನ ಎಲ್ಲಾ ಕೃತ್ಯಗಳು ದೈವ ಪ್ರೇರಿತವಾಗಿವೆ ಎನ್ನುತ್ತಿದ್ದ ಅವನ ಯಾವುದೇ ಅ ಕೃತ್ಯವನ್ನು ಸಹ ಪ್ರಶ್ನಿಸುವ ಛಾತಿ ಅಲ್ಲಿ ಯಾರಿಗೂ ಉಳಿದಿರಲಿಲ್ಲ. ಕುಚೋದ್ಯವೆಂದರೆ ಅವನ ಅಂಧಾ ದರ್ಬಾರನ್ನು ಹಾಡಿ ಹೊಗಳುವ ಹೊಸತೊಂದು ಭಕ್ತಾದಿಗಳ ಪಡೆಯೆ ಹುಟ್ಟಿಕೊಂಡು ಎಲ್ಲಾ ಅ ಕೃತ್ಯಗಳನ್ನೂ ಸಹ ದೈವಲೀಲೆ ಎಂಬಂತೆ ಬಿಂಬಿಸುವಲ್ಲಿ ಅವು ಸಫಲವಾದವು. ಈ ನಡುವೆ ಬೆನ್ ಕೊರೈಝ್'ರ ಮಾರಣಹೋಮದ ನ್ಯಾಯದ ತೀರ್ಪಿತ್ತಿದ್ದ ಸಾದ್ ಎಂಬ ಸೋಗಲಾಡಿ ನ್ಯಾಯಾಧೀಶ ಯುದ್ಧ ಗಾಯದಿಂದಾದ ವೃಣಗಳಿಂದ ನಂಜೇರಿ ಸತ್ತ. ಓಡಾಡಲೆ ತ್ರಾಸ ಪಡುತ್ತಿದ್ದ ಆ ಬ್ರಹತ್ ದೇಹಿಯನ್ನ ಬಲು ಕಷ್ಟದಿಂದ ಅಂದು ಹೊತ್ತು ತಂದು ನ್ಯಾಯಾಧಿಕಾರಿಯ ಪೀಠದಲ್ಲಿ ಕೂರಿಸಿದ್ದವರು. ಅವನ ಕಲಾಪ ಮುಗಿದ ನಂತರ ಹಾಗೆಯೆ ಎತ್ತಿ ಕತ್ತೆಯ ಮೇಲೆ ಕೂರಿಸಿ ಅವನ ಹೆಂಡತಿ ರುಫೈದ್'ಳ ಗುಡಾರಕ್ಕೆ ತಂದು ಮುಟ್ಟಿಸಿದ್ದರು.


ಅಲ್ಲಿ ಅವನನ್ನು ಹಾಸಿಗೆಯ ಮೇಲೆ ಮಲಗಿಸುತ್ತಿದ್ದಂತೆ ಹೊಲೆದಿದ್ದ ಅವನ ಗಾಯದ ಹೊಲಿಗೆ ಕಿತ್ತು ಹೋಗಿ ವಿಪರೀತ ರಕ್ತಸ್ರಾವವಾಯಿತು. ಮುಂದೆ ಅದೆ ವೃಣವಾಗಿ ವಿಪರೀತ ಕೀವಾಗಿ ನಂಜೇರಿತು. ನರಳುತ್ತಾ ಸಾಯುವ ಹಂತದಲ್ಲಿ ಆತನಿದ್ದ ಈ ಸುದ್ದಿ ಅರಿತ ಮಹಮದ್ ಅವನ ಹಾಸಿಗೆಯ ಬಳಿ ಬಂದು ಅವನನ್ನ ಬಿಗಿದಪ್ಪಿಕೊಂಡು ಸಂತೈಸಿದ. ಆತನ ತಲೆಯನ್ನ ತನ್ನ ತೊಡೆಯ ಮೇಲೆಳೆದು ಕೊಂಡು ಆರ್ತ ಧ್ವನಿಯಲ್ಲಿ "ಹೇ ಪ್ರಭೂ! ಓ ದೇವರೆ!! ಸಾದ್ ಕೇವಲ ತನ್ನ ಕರ್ತವ್ಯವನ್ನು ಮಾತ್ರ ನಿರ್ವಹಿಸಿದ್ದಾನೆ, ಇದರಲ್ಲಿ ಅವನ ಪಾಪವೇನೇನೂ ಇಲ್ಲ!! ಆತ ನಿಮ್ಮ ಹಾಗೂ ನಿಮ್ಮ ಪ್ರವಾದಿಯ ಒಳಿತಿಗಾಗಿ ಮಾತ್ರ ಈ ಕಾರ್ಯವನ್ನು ಒಪ್ಪಿಕೊಂಡು(?) ನೆರವೇರಿಸಿದ! ತಾವು ಅವನ ಆತ್ಮವನ್ನು ಅದೆಲ್ಲಿಗೆ ಕೊಂಡೊಯ್ಯುವಿರೋ ಅಲ್ಲಿ ಅವನನ್ನ ಹಾರ್ದಿಕವಾಗಿ ಸ್ವಾಗತಿಸುವಂತವರಾಗಿ." ಎಂದು ಬೇಡುತ್ತಾ ದೇವರಲ್ಲಿ ಮೊರೆಯಿಟ್ಟ. ಅವನ ಈ ಪ್ರಲಾಪವನ್ನು ಆಲಿಸಿದ ಸಾದ್ "ಮಮದ್ ನೀನು ನಿಜವಾಗಿಯೂ ದೇವರ ಪ್ರವಾದಿ!" ಎನ್ನುತ್ತಾ ತನ್ನ ಕೊನೆಯುಸಿರನ್ನೆಳೆದ.




ಆತನ ತಾಯಿ ಇದನ್ನ ನೋಡಿ ಭಾವುಕಳಾಗಿ ಕಣ್ಣೀರಿಟ್ಟಳು. ಹುಟ್ಟಾ ಕವಯತ್ರಿಯಾಗಿದ್ದ ಅವಳು ಸತ್ತ ತನ್ನ ಮಗನ ಪೌರುಷ ಹಾಗೂ ಗುಣವನ್ನು ಭಾವಪೂರ್ಣವಾಗಿ ಹಾಡುತ್ತಾ ಗೋಳಿಟ್ಟಳು. ಅದನ್ನು ಸ್ಥಳದಲ್ಲಿಯೆ ಆಕ್ಷೇಪಿಸಿದ ಕೆಲವರನ್ನ ಮಹಮದ್ ತನ್ನ ಕಣ್ಸನ್ನೆಯಿಂದಲೆ ಸುಮ್ಮನಾಗಿಸಿದ. ಅವಳನ್ನು ಎದೆ ತುಂಬಿ ಹಾಡಲು ಬಿಟ್ಟ. ಅಷ್ಟು ದಡೂತಿಯಾಗಿದ್ದ ಸಾದನ ಹೆಣ ಹೊರುವಾಗ ಮಾತ್ರ ಹತ್ತಿಯಂತೆ ಹಗುರಾಗಿ ಭಾಸವಾದದ್ದನ್ನ ಕಂಡು ಕೆಲವರು ವಿಸ್ಮಯ ಪಟ್ಟರು. ಅದನ್ನ ಅವಿಶ್ವಾಸಿಗಳು "ಸಾದ್ ಯಹೂದಿಗಳ ಬಗ್ಗೆ ಅನ್ಯಾಯವಾಗಿ ನಡೆದುಕೊಂಡು ಕಠೋರ ನ್ಯಾಯ ನೀಡಿದ ಕಾರಣ ಹೀಗಾಗಿದೆ!" ಎಂದು ಮೊದಲಿಸಿದರು. ಆದರೆ ಮಹಮದ್ ಮಾತ್ರ ಶವಕ್ಕೆ ದೇವಲೋಕದ ಯಕ್ಷರೂ ಸಹ ಬಂದು ಹೆಗಲು ಕೊಟ್ಟ ಕಾರಣ ಅದು ಹಗುರಾಯಿತು ಎಂದು ಹಾಡಿ ಹೊಗಳಿದ. ಅದೇನೆ ಇದ್ದರೂ ಆತನ್ನ ಹೊತ್ತು ಹೂತು ಅಲ್ಲಿ ಸಮಾಧಿಯನ್ನ ಕಟ್ಟಲಾಯಿತು. ಇದೆಲ್ಲಾ ಮುಗಿಯುವವರೆಗೂ ಮಹಮದ್ ಸ್ಮಶಾನದಲ್ಲಿಯೆ ಇದ್ದು ಅನಂತರ ಮನೆಗೆ ಮರಳಿ ಬಂದ.



ಕೊರೈಝ್ ಬುಡಕಟ್ಟಿನ ಕಗ್ಗೊಲೆ ನಡೆಸುವ ಹೊತ್ತಿನಲ್ಲಿ ಸಲ್ಲಮ್ ಎನ್ನುವ ಇನ್ನೊಬ್ಬ ವಿದ್ರೋಹಿ ಸಹ ಮಹಮದನ ಕೆಂಗಣ್ಣಿಗೆ ಗುರಿಯಾಗಿದ್ದ. ಆದರೆ ಅದು ಹೇಗೋ ಮದೀನಾದಿಂದ ಪಾರಾಗಿ ತಪ್ಪಿಸಿಕೊಂಡಿದ್ದ ಆತ ಖೈಬರ್'ನಲ್ಲಿ ಅಡಗಿದ್ದ. ಆದರೆ ಈ ಎಲ್ಲಾ ರಗಳೆ ಮುಗಿದ ನಂತರ ತನ್ನ ಬೇಹುಗಾರರ ಮೂಲಕ ಈ ಜಾಡು ಹಿಡಿದ ಮಹಮದ್ ಐದು ಮಂದಿ ನುರಿತ ಹಂತಕರನ್ನ ಸಲ್ಲಮ್ ಕಥೆ ಮುಗಿಸಲು ಖೈಬರ್'ಗೆ ಕಳುಹಿಸಿದ. ಅವರು ಆತ ಅಲ್ಲಿರುವ ಸ್ಥಳವನ್ನ ಪತ್ತೆ ಹಚ್ಚಿ ಮೈಮರೆತು ರಾತ್ರಿ ಮಲಗಿದ್ದಾಗ ಕೊಚ್ಚಿ ಕೊಂದು ಬಂದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ಆರುನೂರಾ ಮೂವತ್ತೈದರಲ್ಲಿ.


ಖೈಬರ್ ಪ್ರಾಂತ್ಯದಲ್ಲಿ ಆಗ ಯಹೂದಿಗಳು ನೆಲೆಸಿದ್ದರು. ಸಲ್ಲಮ್'ಗಾದ ಅವಸ್ಥೆ, ದುರ್ಗತಿ ತಮಗೂ ಮುಂದೊಮ್ಮೆ ಬಂದೀತು ಎನ್ನುವ ಭೀತಿ ಅವರಲ್ಲಿ ಆವರಿಸಿತು. ತಾವೆಲ್ಲಾ ಸಮಸ್ತ ಅರೇಬಿಯಾದ ಯಹೂದಿ ಬುಡಕಟ್ಟುಗಳನ್ನ ಒಗ್ಗೂಡಿಸಿ ಮಹಮದನ ಮದೀನವನ್ನೇಕೆ ಧೂಳಿಪಟ ಮಾಡಬಾರದು ಎಂದವರು ಚಿಂತಿಸಿದರಾದರೂ ಅದೆಲ್ಲಾ ಕೇವಲ ಉತ್ತರನ ಒಲೆ ಮುಂದಿನ ಪೌರುಷದಂತಿತ್ತು. ಹಾಗೆ ಬುಡಕಟ್ಟುಗಳನ್ನ ಸಂಘಟಿಸುವ ಧೈರ್ಯ ಹಾಗೂ ಸಾಮರ್ಥ್ಯ ಅವರಲ್ಲಿ ಯಾರ್ಯಾರಿಗೂ ಇರಲಿಲ್ಲ. ಸೂಕ್ತ ನಿರ್ಧಾರವನ್ನ ಕೈಗೊಳ್ಳುವ ಮೊದಲೆ ಹೇಡಿತನಕ್ಕೆ ಅವರೆಲ್ಲಾ ಬಲಿಯಾಗಿದ್ದರು.


ಮದೀನಾಕ್ಕೆ ಮಹಮದ್ ಬಂದು ವಾಸಿಸಲಾರಂಭಿಸಿ ಆಗಲೆ ನಾಲ್ಕು ವರ್ಷದ ಮೇಲೆ ಕಾಲ ಸವೆದಿತ್ತು. ಸುತ್ತಲಿನ ಯಹೂದಿಗಳನ್ನ ಸೆಳೆಯುವ ಆತನ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿತ್ತು. ಕಾಲಕಾಲಕ್ಕೆ ಅವರಿಗೆಲ್ಲರಿಗೂ ಖುರ್ಹಾನಿನ ಮೂಲಕ ತನಗೆ ಲಭ್ಯವಾದ ದೈವವಾಣಿಗಳನ್ನು ಸಾರಿ ತನ್ನ ಪ್ರವಾದಿತ್ವದ ಖಚಿತತೆಯನ್ನು ಅವರ ಮನದಲ್ಲಿ ಬಿತ್ತಲು ಮಹಮದ್ ಪ್ರಯತ್ನಿಸುತ್ತಿದ್ದ. ತನ್ನ ನೂತನ ಧರ್ಮವಾಗಿದ್ದ ಇಸ್ಲಾಮಿಗೆ ಶರಣಾಗಿ ಮುಸಲ್ಮಾನರಾಗುವಂತೆ ಅವರನ್ನ ಆಗ್ರಹಿಸುತ್ತಲೂ ಇದ್ದ. ಅವರ ಮನ ಸೆಳೆಯುವ ಉದ್ದೇಶದಿಂದಲೆ ಆತ ಬೈಬಲ್ಲಿನ ಹಳೆಯ ಒಡಂಬಡಿಕೆಯ ಭಾಗದಿಂದ ಹಲವಾರು ದೃಷ್ಟಾಂತ ಕಥೆಗಳನ್ನು ಖುರ್ಹಾನಿನಲ್ಲಿಯೂ ಯಥಾವತ್ತಾಗಿ ಮರು ಬಳಿಸಿದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ.


ಆದರೆ ಯಹೂದಿಗಳು ಮಹಮದನ ಯಾವ ಮಾತಿಗೂ ಅಥವಾ ಬೆದರಿಕೆಗೂ ಬಗ್ಗದೆ ಆತನ ಯಾವುದೆ ನುಡಿಗಳಿಗೂ ಮರುಳಾಗದೆ ಹಾಗೆಯೆ ತಟಸ್ಥರಾಗಿ ತಮ್ಮ ಮಾತೃಧರ್ಮದಲ್ಲಿಯೆ ಉಳಿದರು. ತಾನು ಅಂತಿಮ ಪ್ರವಾದಿ ಎನ್ನುವ ಆತನ ಬೊಗಳೆಗೆ ಅವರ್ಯಾರೂ ಸೊಪ್ಪು ಹಾಕಲಿಲ್ಲ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಯಹೂದಿಗಳು ಅನುಕೂಲ ಸಿಂಧು ಕಾರಣಗಳಿಗೋಸ್ಕರ ಮಾತ್ರ ಇಸ್ಲಾಮಿಗೆ ಮತಾಂತರಗೊಂಡು ಆತನ ಹಿಂಬಾಲಕರಾದರು. ಈ ಅಸಹಕಾರ ಹಾಗೂ ತಿರಸ್ಕಾರ ಯಹೂದಿಗಳೊಂದಿಗೆ ಮೊದಮೊದಲಿಗೆ ವಾಕ್ ಸಮರಕ್ಕೆ ದೂಡಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಅವರ ಅವಿಶ್ವಾಸ, ಅಪನಂಬಿಕೆಗಳನ್ನು ಮಹಮದ್ ಖುರ್ಹಾನಿನ ಸುರಾಗಳ ಮೂಲಕ ಹರಿಹಾಯ್ದು ತನ್ನ ಸಿಟ್ಟನ್ನ ತೋರ್ಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಡೋಝಿ. ಈ ದೂಷಣೆ ಹಾಗೂ ಬೈಗುಳದ ನಮೂನೆಗಳಿರುವ ಸುರಾದ ಉದ್ದ ಪಟ್ಟಿಯನ್ನೆ ಡೋಝಿ ನೀಡಿದ್ದಾನೆ.



( ಇನ್ನೂ ಇದೆ.)

No comments: