24 November 2015

ವಲಿ - ೩೫








ಈ ನಡುವೆ ಮಹಮದನ ವಯಕ್ತಿಕ ಹಾಗೂ ಸಾಂಸಾರಿಕ ಬದುಕಿನಲ್ಲಿಯೂ ಹಲವಾರು ಬದಲಾವಣೆಗಳಾಗಿದ್ದವು. ತನ್ನನ್ನ ಏಳು ವರ್ಷಗಳ ಕಾಲ ಅಗಲಿದ್ದ ಪುತ್ರಿ ಝೈನಬ್ ತನ್ನೊಂದಿಗೆ ಇದ್ದು ಬಾಳಲು ಮದೀನಾಕ್ಕೆ ಬಂದ ಕೆಲವೆ ಕಾಲದಲ್ಲಿ ಗರ್ಭಪಾತದ ನಂತರ ಉಂಟಾಗಿದ್ದ ಒಳಬೇನೆಯಿಂದ ನರಳಿ ಸತ್ತು ಹೋದಳು. ಬಹುಕಾಲದ ಅಸ್ವಾಸ್ಥ್ಯದಿಂದ ಇನ್ನೊಬ್ಬ ಮಗಳಾದ ಉಮ್ ಕುಲ್ತುಮ್ ಸಹ ಅದಾಗಿ ಎರಡು ತಿಂಗಳಿಗೆ ಇಹಲೋಕವನ್ನ ತ್ಯಜಿಸಿದಳು. ಈಗ ಸಂತಾನವಾಗಿ ಉಳಿದಿದ್ದುದು ಕೇವಲ ಫಾತಿಮಾ ಮಾತ್ರ. ಇಷ್ಟಾದರೂ ಮಹಮದನು ಈವರೆಗೆ ಗಂಡು ಸಂತಾನವನ್ನ ಪಡೆದಿರಲಿಲ್ಲ. ಲೈಂಗಿಕ ಬದುಕು ನಿಯಮಿತವಾಗಿ ಅಡೆತಡೆಯಿಲ್ಲದೆ ತೃಪ್ತಿಕರವಾಗಿ ಸಾಗುತ್ತಿದ್ದರೂ ಸಂತಾನ ಭಾಗ್ಯದ ವಿಚಾರದಲ್ಲಿ ಮಾತ್ರ ಆತ ತೀರಾ ನತದೃಷ್ಟನಾಗಿದ್ದ.


ಹೀಗಿರೋವಾಗ ಆತ ಮತ್ತೊಮ್ಮೆ ಅಪ್ಪನಾಗುವ ಹಾಗಾಯಿತು. ಆದರೆ ಅವನಿಗೆ ಈ ಖುಷಿಯನ್ನ ದೊರಕಿಸಿಕೊಟ್ಟವಳು ಅಧಿಕೃತ ಪತ್ನಿಯರಲ್ಲಿ ಯಾರೊಬ್ಬರೂ ಆಗಿರದೆ, ಆತನಿಗೆ ರೋಮನ್ ರಾಜ್ಯಪಾಲನಿಂದ ಸಂದಿದ್ದ ಕೊಡುಗೆಯಾಗಿ ದೊರಕಿದ್ದ ಈಜಿಪ್ಟಿಯನ್ ಸೂಳೆ ಮೇರಿ ಆತನಿಂದ ಗರ್ಭ ಧರಿಸಿದ್ದಳು. ಕಾಪ್ಟ್ ಸುಂದರಿ ಮೇರಿ ಕ್ರೈಸ್ತಳಾಗಿಯೆ ಉಳಿದಿದ್ದು ಆತನ ಸೂಳೆಯಾಗಲು ಮಾತ್ರ ಅರ್ಹವಾಗುಳಿದಿದ್ದಳು. ಆಕೆಯ ಜೊತೆಗೆ ಕೊಡುಗೆಯ ರೂಪದಲ್ಲಿ ಬಂದಿದ್ದ ಅವಳ ಅಕ್ಕ ಶಿರೀನ್ ಕವಿ ಹಸನ್'ನ ಸೂಳೆಯಾಗಿ ಉಳಿದುಕೊಂಡದ್ದನ್ನ ನೆನಪಿಸಿಕೊಳ್ಳಿ. ಪ್ರತ್ಯೇಕವಾದ ತೋಟದ ಮನೆಯೊಂದರಲ್ಲಿ ಇರಿಸಲಾಗಿದ್ದ ಮೇರಿ ಗರ್ಭವತಿಯಾಗಿ ನವಮಾಸ ತುಂಬಿದ ನಂತರ ಗಂಡು ಮಗುವೊಂದನ್ನ ಮಹಮದನಿಗೆ ಹೆತ್ತು ಕೊಟ್ಟಳು.



ಬಹಳ ವರ್ಷಗಳ ನಂತರ ತನ್ನನ್ನು ಅಪ್ಪನ ಪಟ್ಟಕ್ಕೇರಿಸಿದ ಮಗನ ಬಗ್ಗೆ ಮಹಮದ್ ವಿಪರೀತ ಖುಷಿಯಾಗಿದ್ದ. ಸಾಲದ್ದಕ್ಕೆ ಆತನ ಏಕೈಕ ಗಂಡು ಸಂತಾನ ಬೇರೆ! ಸಂಭ್ರಮದ ಸಮಾರಂಭವನ್ನ ಏರ್ಪಡಿಸಿ ಮಗುವಿಗೆ ಇಬ್ರಾಹಿಂ ಎಂದು ನಾಮಕರಣ ಮಾಡಲಾಯಿತು. ಹೆಚ್ಚು ಕಡಿಮೆ ಕಾಲು ಶತಮಾನಗಳ ನಂತರ ಮಹಮದನಿಂದಾಗಿ ಹೆಣ್ಣೊಬ್ಬಳ ಮಡಿಲು ತುಂಬಿತ್ತು. ವಾಡಿಕೆಯಂತೆ ಮಗುವಿಗೆ ಏಳು ದಿನಗಳ ಪ್ರಾಯ ತುಂಬಿದ ನಂತರ ಅಪ್ಪನಾದ ಮಹಮದ್ ತನ್ನ ತಲೆ ಬೋಳಿಸಿಕೊಂಡ. ಆ ಕೂದಲ ತೂಕದ ಬೆಳ್ಳಿಯನ್ನ ಬಡವರಲ್ಲಿ ಹಂಚಿ ಅನಂತರ ಆ ಮುಂಡನದ ಕೂದಲನ್ನ ನೆಲದಲ್ಲಿ ಹೂಳಲಾಯಿತು. ಾದನ್ನ ಪೂರೈಸಿ ಕೃತಜ್ಞತಾ ಸ್ವರೂಪವಾಗಿ ದೇವರಿಗೊಂದು ಪ್ರಾಣಿಬಲಿಯನ್ನೂ ಸಹ ನೀಡಲಾಯಿತು.



ಆದರೆ ಈ ಸಂಭ್ರಮದ ಪರಿಣಾಮ ಮಹಮದನ ಅಂತಃಪುರದೊಳಗೆ ಮಾತ್ರ ತೀರಾ ವ್ಯತಿರಿಕ್ತವಾಗಿತ್ತು. ಊರೆಲ್ಲಾ ಪ್ರವಾದಿಯ ಈ 'ಸಾಧನೆ'ಯನ್ನ ಮೆಚ್ಚಿ ಕೊಂಡಾಡುತ್ತಿದ್ದರೆ, ಇತ್ತ ಆತನ ಜನಾನದಲ್ಲಿ ಮಾತ್ರ ಇನ್ನಿತರ ಹೆಂಡತಿಯರು ಹೊಟ್ಟೆಕಿಚ್ಚಿನಿಂದ ಬೆಂದು ನರಳಿ ಹೋದರು! ಈ ಈರ್ಷ್ಯೆಗೆ ಹೊಸ ಮಗುವಾದ ನಂತರ ಮೇರಿಯೆಡೆಗೆ ಹೆಚ್ಚಿದ ಮಹಮದನ ವಿಶೇಷ ಕಾಳಜಿ ಹಾಗೂ ಪ್ರೀತಿ ಸಹ ಕಾರಣವಾಗಿತ್ತು. ಸ್ತ್ರೀ ಸಹಜ ಮತ್ಸರದಿಂದ ಅವರೆಲ್ಲಾ ಚಡಪಡಿಸಿದರು. ತಮ್ಮಿಂದ ಸಾಧ್ಯವಾಗದ್ದು ಯಕಶ್ಚಿತ್ ಒಬ್ಬ ಸೂಳೆಯಿಂದ ಆಯಿತಲ್ಲ! ಅನ್ನುವುದು ಅವರೆಲ್ಲರಿಗೂ ಆಶ್ಚರ್ಯದ ಹಾಗೂ ಮತ್ಸರದ ಕಾರಣವಾಗಿತ್ತು ಎನ್ನುತ್ತಾರೆ ಇತಿಹಾಸಕಾರ ಥಾಮಸ್ ವಿಲಿಯಂ ಬೆಯಿಲ್ ತಮ್ಮ ಕೃತಿ 'ಆನ್ ಓರಿಯೆಂಟಲ್ ಭಯಾಗ್ರಫಿಸ್ ಆಫ್ ಡಿಕ್ಷನರಿ' ಕೃತಿಯ ಪುಟ ಸಂಖ್ಯೆ ೨೫೭ರಲ್ಲಿ.



ಈ ಸಂದರ್ಭದಲ್ಲಿ ನಡೆದ ಒಂದು ಕುತೂಹಲಕರ ಸಂಗತಿಯ ಬಗ್ಗೆ ಅವರು ವಿವರ ನೀಡುತ್ತಾರೆ. ಮೊದಲಿನಿಂದಲೂ ಮಹಮದ್ ತನ್ನ ಪ್ರತಿಯೊಬ್ಬ ಹೆಂಡತಿಯರೊಂದಿಗೂ ದಿನಕ್ಕೊಬ್ಬರಂತೆ ಕಾಲ ಕಳೆಯುವ ಸ್ವ ನಿಯಮಕ್ಕೆ ಬದ್ಧನಾಗಿದ್ದನಷ್ಟೆ? ಅಂತೆಯೆ ಆ ದಿನ ಹಫ್ಸಾಳ ಸರದಿಯ ದಿನ ಬಂದಿತ್ತು. ಅದು ಸಂದು ಮರುದಿನ ಆತ ಇನ್ನೊಬ್ಬಳ ಅಂತಃಪುರ ಹೊಕ್ಕುವ ದಿನವಾದದ್ದರಿಂದ ಆಕೆ ನಿರಾತಂಕವಾಗಿ ಆ ಬಿಡುವನ್ನ ಉಪಯೋಗಿಸಿಕೊಂಡು ತನ್ನ ಅಪ್ಪನ ಮನೆಗೆ ಹೋಗಿದ್ದಳು. ಮರಳಿ ಮನೆಗೆ ಬಂದಾಗ ಆಕೆಗೆ ಅಘಾತಕಾರಿಯಾದ ಒಂದು ದೃಶ್ಯ ಕಾಣಬೇಕಾದ ಪರಿಸ್ಥಿತಿ ಕಾದುಕೊಂಡಿತ್ತು. ಅಂದು ಅವಳು ತುಸು ಬೇಗ ಮರಳಿ ಬಂದದ್ದೆ ಎಡವಟ್ಟಿಗೆ ಕಾರಣವಾಗಿತ್ತು. ಮಾನ್ಯ ಪ್ರವಾದಿವರ್ಯರು ಅಂದು ಅವಳ ಮನೆಯಲ್ಲಿ ತಮ್ಮ ಖಾಸಗಿ ಸೂಳೆ ಮೇರಿಯಿಂದಿಗೆ ಸ್ವರ್ಗ ಸುಖದಲ್ಲಿ ತಲ್ಲೀನರಾಗಿದ್ದರು! ಈ ಪರಮಪವಿತ್ರ ಕಾರ್ಯ ತನ್ನ ಹಕ್ಕಾಗಿದ್ದ ಕೋಣೆಯಲ್ಲಿ, ತನ್ನದೆ ಖಾಸಗಿ ಹಾಸಗೆಯ ಮೇಲೆ ನಿರ್ವಾಣವಾಗಿದ್ದ ಅವರಿಬ್ಬರೂ ನಿರಾತಂಕವಾಗಿ, ಅದೂ ಹಾಡ ಹಗಲಿನಲ್ಲಿಯೆ ನಡೆಸುತ್ತಿದ್ದದ್ದನ್ನ ಕಂಡಾಗ ಆಕೆ ಸ್ತ್ರೀ ಸಹಜವಾಗಿ ಕೆರಳಿ ಕೆಂಡವಾದಳು.



ಕೂಡಲೆ ಅರ್ಧ ಸಂಕಟ ಅರ್ಧ ಹೊಟ್ಟೆಕಿಚ್ಚಿನಿಂದ ಸವತಿ ಆಯೇಷಾಳ ಮನೆಗೆ ನುಗ್ಗಿದ ಆಕೆ ತನ್ನ ಎದೆಯಾಳದ ಅಹವಾಲನ್ನ ತೋಡಿಕೊಂಡು ಕಣ್ಣೀರಿಟ್ಟಳು. ಆಯೆಷಾ ಇದನ್ನೆ ಇನ್ನಿತರ ಸವತಿಯರಿಗೂ ಕರೆದು ತಿಳಿಸಿ ಕೋಲಾಹಲವೆಬ್ಬಿಸಲು ಅವರೆಲ್ಲರಿಗೂ ಕುಮ್ಮಕ್ಕು ಕೊಟ್ಟಳು. ಈಗಾಗಲೆ ಮಗು ಹೆತ್ತ ಕಾರಣಕ್ಕೆ ಮಹಮದನ ದೃಷ್ಟಿಯಲ್ಲಿ ಹೆಚ್ಚಿದ್ದ ಮೇರಿಯ ಪ್ರಾಮುಖ್ಯತೆಯನ್ನ ಕಾಣುವಾಗ ಅವರೆಲ್ಲಾ ನೊಂದು ಒಳಗೊಳಗೆ ಸಂಕಟ ಪಟ್ಟಿದ್ದರಷ್ಟೆ? ರೋಷದಿಂದ ಕುದ್ದು ಕೆಂಡವಾದ ಎಲ್ಲರೂ ಮಹಮದನನ್ನು ತಾವೆ ಮುಂದಾಗಿ ದೂರವಿಟ್ಟರು! ಮಾತು ಬಿಟ್ಟರು. ಮಹಮದ್ ವಿಧವಿಧವಾಗಿ ಅವರನ್ನೆಲ್ಲಾ ಸಂಭಾಳಿಸಿ ಒಲಿಸಲು ಯತ್ನಿಸಿ ಸೋತ. ಯಾರೊಬ್ಬರೂ ಒಂಚೂರೂ ಜಗ್ಗಲಿಲ್ಲ. ಪತಿಯ ಕಚ್ಚೆ ಹರುಕತನವನ್ನ ಅವರ್ಯಾರೂ ಕ್ಷಮಿಸಲೂ ಇಲ್ಲ, ಅವರ ಮುನಿಸು ತಗ್ಗಲೂ ಇಲ್ಲ.



ಇದರಿಂದ ವಿಚಲಿತನಾದ ಮಹಮದ್ ಸಹ ಖಾಯಂ ಆಗಿ ಮೇರಿಯ ತೋಟದ ಮನೆಯಲ್ಲಿಯೆ ಠಿಕಾಣಿ ಹೂಡಿಬಿಟ್ಟ! ತಾನೂ ಅವರಂತೆಯೆ ಅವರನ್ನು ದೂರವಿಟ್ಟು ಮಾತು ಬಿಟ್ಟ. ಕಡೆಗಣಿಸಿ ಅವರನ್ನ ಬಗ್ಗಿಸಲು ಹೊರಟಿದ್ದ ಮಹಮದನಿಗೆ ತನ್ನ ಪ್ರಯತ್ನದ ಸಾಫಲ್ಯದ ಬಗ್ಗೆ ಭರವಸೆ ಇತ್ತು. ಅದರೆ ಚಪಲವೊಂದು ಆತನಲ್ಲಿ ವಿಪರೀತವಾಗಿ ಹೆಡೆಯಾಡಿಸುತ್ತಲೆ ಇತ್ತಲ್ಲ! ಅದು ಅವರನ್ನ ಬಿಗಿಯಾಗಿಯೆ ಇಟ್ಟಿದ್ದರೂ ಇವನನ್ನ ಮಾತ್ರ ವಿಪರೀತ ಸಡಿಲ ಗೊಳಿಸಿಬಿಟ್ಟಿತು! ಅನಿವಾರ್ಯವಾಗಿ ಆತ ಆಗ ದೈವವಾಣಿಯ ಮೊರೆ ಹೋದ. ದೈವ ಸಹ ಮಹಮದನಂತೆಯೆ ಆತನ ಹೆಂಡಿರ ಅಕಾರ್ಯದ ಬಗ್ಗೆ ಮುನಿದಿತ್ತು! ಅವರ ಅವಿಧೇಯತೆಯನ್ನ ಸರ್ವಶಕ್ತನಾದ ಅಲ್ಲಾಹನೆಂಬ ದೇವರು ಕಟು ಮಾತುಗಳಲ್ಲಿ ಖಂಡಿಸಿದರು?! ಮೇರಿಯನ್ನೂ ಯಾವುದೆ ಕಾರಣಕ್ಕೂ ಬಿಡಲೆ ಕೂಡದು ಅಂತಲೂ, ಆ ಸೊಕ್ಕಿನ ಹೆಂಗಸರ ಹಟ ಹೀಗೆ ಮುಂದುವರೆದರೆ ಅವರಿಗೆಲ್ಲಾ ಮುಲಾಜಿಲ್ಲದೆ ತಲ್ಲಾಖ್ ಕೊಟ್ಟು ತನಗೆ ಚೆಂದ ಕಂಡ ಇನ್ಯಾರಾದರೂ ಹೆಂಗಸರನ್ನ ಮಾನ್ಯ ಪ್ರವಾದಿಗಳು ಮದುವೆಯಾಗಿ 'ಸುಖ'(?)ವಾಗಿ ಇರಬಹುದು ಎಂದು ದೈವಾಜ್ಞೆಯಾಯಿತು.



ಈ ಅನಿರೀಕ್ಷಿತ ನಡೆಯಿಂದ ಮಹಮದನ ಮುನಿದ ಹೆಂಡಿರೆಲ್ಲಾ ಕಂಗಾಲಾದರು. ಹೀಗೆ ಆದರೆ ನಮ್ಮೆಲ್ಲರ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆ ಇದೆ ಎಂದವರಿಗೆ ಜ್ಞಾನೋದಯವಾಗಿತು. ಹೀಗಾಗಿ ರಾಜಿ ಕಬೂಲಿ ಶುರುವಾಯಿತು. ಇದಕ್ಕೊಂದು ದೈವಿಕ ಸ್ಪರ್ಷ ನೀಡುವ ಉದ್ದೇಶದಿಂದ ಮೊದಲು ಹಫ್ಸಾಳನ್ನ ಮಹಮದ್ ಯಕ್ಷ ಗ್ರೇಬ್ರಿಯಲ್'ನ ಮೂಲಕ ಕರೆಸಿಕೊಂಡು ಆಕೆ ಕಣ್ಣೀರಾಗಿ ಶರಣಾಗಿ ಕಾಲಿಗೆ ಬಿದ್ದಾಗ ಮಹಮದ್ ಕ್ಷಮಿಸಿದನೆಂತಲೂ, ಆಕೆಯ ಮೂಲಕ ಇನ್ನಿತರ ನೊಂದ ಜೀವಗಳನ್ನೂ ಮತ್ತೆ ಸಂತೈಸಿ ಮರಳಿ ಹಾಸಿಗೆಗೆ ಬಿಟ್ಟುಕೊಳ್ಳಲಾಯಿತು ಅಂತಲೂ ಕಥೆ ಕಟ್ಟಲಾಯಿತು. ಯಥಾಪ್ರಕಾರ ಮೊದಲಿನ ನಿಯಮಾವಳಿಯಂತೆ ದಿನಕ್ಕೊಬ್ಬಳ ಸಂಗಡ ರಾತ್ರಿ ಕಳೆಯುವ ಏರ್ಪಾಡನ್ನೆ ಮುಂದುವರೆಸಲು ಮಹಮದ್ ನಿರ್ಧರಿಸಿದ.



ಈ ಬಗೆಗಿನ ಸುರಾವನ್ನು ಈ ಪ್ರಕರಣವನ್ನೆ ಖಚಿತವಾಗಿ ಆಧಾರವಾಗಿಟ್ಟುಕೊಂಡು ಪಡೆಯಲಾಗಿದೆ. ಅದನ್ನ ಸುರಾ ಸಂಖ್ಯೆ ೬೬/೧-೪ರಲ್ಲಿ ಆಸಕ್ತರು ಗಮನಿಸಬಹುದು.  ಸುರಾ ೬೬/೩ ಸಾರುವಂತೆ, ಪ್ರವಾದಿಯವರು ತಮ್ಮ ಒಬ್ಬಳು ಪತ್ನಿಯೊಡದನೆ ಮಾತೊಂದನ್ನ ರಹಸ್ಯವಾಗಿ ಹೇಳಿದ್ದರು. ಆ ಹೆಂಡತಿ ಅದೆ ರಹಸ್ಯವನ್ನ ಇನ್ನೊಬ್ಬಳಲ್ಲಿ ಬಯಲುಗೊಳಿಸಿಬಿಟ್ಟಾಗ ಹಾಗೂ ಆ ವಿಷಯ ಅಲ್ಲಾಹನ ಮೂಲಕ ಪ್ರವಾದಿಯವರ ಅರಿವಿಗೂ ಬಂದಾಗ ಅವರು, ಅದರ ಸ್ವಲ್ಪಾಂಶವನ್ನ ಹೆಂಡತಿಗೂ ತಿಳಿಸಿ ಇನ್ನು ಸ್ವಲ್ಪವನ್ನು ಕಡೆಗಣಿಸಿದರು! (ಗಮನಿಸಿ ಅಲ್ಲಾಹನ ಮಾತನ್ನೆ ಪ್ರವಾದಿಯವರು ಕಡೆಗಣಿಸಿದರು ಎನ್ನುತ್ತದೆ ಈ ಸುರಾ, ಅಂದರೆ ಅಲ್ಲಾಹನ  ನುಡಿಯನ್ನೂ ಸಹ ಪ್ರವಾದಿ ಚಾಡಿಯೆಂದೆ ಪರಿಗಣಿಸಿದ್ದರು ಎಂದಾಯಿತು!) ನಂತರ ಅವರು ನಿಮಗೆ ಈ ವಿಷಯವನ್ನ ಯಾರು ಹೇಳಿದ್ದು? ಎಂದು ಕೇಳಿದಾಗ, ಮಹಿಮಾಪೂರ್ಣನೂ ಸರ್ವಜ್ಞನೂ ಆದ ವಿವರಪೂರ್ಣನೆ ಈ ಸುದ್ದಿಯನ್ನ ನೇರವಾಗಿ ಹೇಳಿದರು! ಎಂದು ಪ್ರವಾದಿ ಉತ್ತರಿಸಿದರು.


"ನೀವಿಬ್ಬರೂ ಈ ಕಾರಣಕ್ಕಾಗಿ ಅಲ್ಲಾಹನೊಡನೆ ಪಶ್ಚಾತಾಪ ಪಡುತ್ತೀರಾದರೆ, ಅದು ವಾಸ್ತವದಲ್ಲಿ ನಿಮ್ಮ ಪಾಲಿಗೆ ಅತ್ಯುತ್ತಮವಾದುದಾಗಿದೆ. ಏಕೆಂದರೆ ನಿಮ್ಮ ಹೃದಯಗಳು ನೇರ ಮಾರ್ಗದಿಂದ ಸರಿದುಹೋಗಿವೆ. ಹಾಗೂ ನೀವು ಇನ್ನು ಮುಂದೆಯೂ ಸಹ ಪ್ರವಾದಿಯವರ ವಿರುದ್ಧ ಗುಂಪುಗಾರಿಕೆ ನಡೆಸಿದರೆ ಅಲ್ಲಾಹನು ಅವರ ಸಂರಕ್ಷಕನಾಗಿದ್ದಾನೆ! ಅವನ ನಂತರ ಜೆಬ್ರೀಲರು, ಎಲ್ಲಾ ಸಜ್ಜನ ಸತ್ಯ ವಿಶ್ವಾಸಿಗಳೂ ಹಾಗೂ ಎಲ್ಲಾ ದೇವಚರರು ಅವರ ಸಂಗಾತಿಗಳೂ ಹಾಗೂ ಸಹಾಯಕರೂ ಆಗಿರುವವರೆಂದು ನಿಮಗೆ ತಿಳಿದಿರಲಿ?!" ಎಂದು ಬೆದರಿಕೆಯ ರೂಪದಲ್ಲಿ ಉಳಿದೆಲ್ಲಾ ಹೆಂಡಂದಿರನ್ನೂ ಈ ಸುರಾ ಎಚ್ಚರಿಸುತ್ತದೆ.



ಮೇಲ್ನೋಟಕ್ಕೆ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾದಂತೆ ಕಂಡರೂ ಸಹ ವಾಸ್ತ್ಯವದಲ್ಲಿ ಇದು ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿತ್ತು. ಎಲ್ಲಕ್ಕೂ ಮೂಲವಾಗಿದ್ದ ಮೇರಿಯ ಮೇಲೆ ಈ ವಿಷಯದಲ್ಲಿ ಸವತಿಯರೆಲ್ಲರೂ ತಿರುಗಿಬಿದ್ದಿದ್ದರು. ಸವತಿ ಮಾತ್ಸರ್ಯದ ಧಗೆ ಹದಿನೈದು ದಿನದ ಎಳೆ ಮಗು ಇಬ್ರಾಹಮನಿಗೆ ವಿಷ ಉಣಿಸುವುದರ ಮೂಲಕ ಪರ್ಯಾವಸನಗೊಂಡಿತು! ಏನೂ ಅರಿಯದ, ಪ್ರಪಂಚವನ್ನೆ ಕಾಣದ ಈ ನಿಶ್ಪಾಪಿ ಮಗು ತೀವೃ ಅಸ್ವಾಸ್ಥ್ಯಕ್ಕೆ ಒಳಗಾಗಿ ನರಳಿ ನರಳಿ ಪ್ರಾಣ ಬಿಟ್ಟಿತು. ಮಗುವನ್ನ ಉಳಿಸಿಕೊಳ್ಳಲು ಲಭ್ಯವಿದ್ದ ಎಲ್ಲಾ ವೈದ್ಯಕೀಯ ಶೂಶ್ರಷೆಯ ಮೊರೆ ಹೋದ ಮಹಮದ್ ತನ್ನ ಕೊನೆಯಿರದ ಪ್ರಯತ್ನಗಳ ಹೊರತಾಗಿಯೂ ಮಗು ಬದುಕಿ ಉಳಿಯುವ ಲಕ್ಷಣ ಕಂಡು ಬಾರದೆ ಹೋದಾಗ ಎಳೆ ಕೂಸನ್ನ ತನ್ನ ತೋಳಿನಲ್ಲಿ ಎತ್ತಿಕೊಂಡು ವಿಪರೀತ ಗೋಳಾಡಿದ. ಆ ಹೊತ್ತಿನಲ್ಲಿ ಆತನ ಪ್ರವಾದಿತ್ವವೂ ಆತನ ಕೈ ಹಿಡಿಯದೆ ಕೇವಲ ಅಪ್ಪಟ ಅಪ್ಪನೊಬ್ಬನಾಗಿ ಆತ ಕಂಬನಿ ಹರಿಸಿ ತನ್ನ ಅಸಾಹಯಕತೆಯನ್ನ ಬಹಿರಂಗವಾಗಿ ತೋರ್ಪಡಿಸಿಕೊಂಡ.



ಮೃತ್ಯು ಶಯ್ಯೆಯಲ್ಲಿದ್ದ ತನ್ನ ಕಂದನ ಹಿಡಿದು ಅತ್ಯಂತ ಶೋಕ ಹಾಗೂ ದುಃಖ ಪೀಡಿತನಾಗಿದ್ದ ಮಹಮದನನ್ನು ಅತನ ಬಂಧುಗಳೆಲ್ಲಾ ಕೂಡಿ ಸಂತೈಸಿದರು. ನೊಂದ ಅವನ ಮನಕ್ಕೆ ತಮ್ಮಿಂದಾದಷ್ಟು ಧೈರ್ಯ ತುಂಬಿದರು. ಆದರೂ ಅವನ ಗೋಳಾಟವನ್ನ ತಡೆಯುವುದು ಬಹಳ ಕಷ್ಟವಾಯಿತು. ತಾನು ಕಣ್ಣೀರಿಡುತ್ತಿರುವುದು ದಃಖಿಸುತ್ತಿರುವುದು ತನ್ನ ಹೃದಯದಲ್ಲಿ ಮಗನ ಮೇಲೆ ಮಡುಗಟ್ಟಿರುವ ಪ್ರೀತಿ, ಮಮತೆ ಹಾಗೂ ಕನಿಕರದ ಕಾರಣದಿಂದ ಎಂದಾತ ಗದ್ಗದನಾಗಿಯೆ ಅವರಿಗೆಲ್ಲರಿಗೂ ಮಾರುತ್ತರಿಸಿದ. ಯಾರು ಈ ವೇಳೆ ಮಗುವಿನ ಸಾವಿಗೆ ಕನಿಕರ ಪ್ರಕಟಪಡಿಸುವುದಿಲ್ಲವೋ ಅಂತವರ ಬಗ್ಗೆ ತಾನೂ ಸಹ ಮುಂದೆ ಯಾವತ್ತೂ ಕನಿಕರ ತೋರಿಸುವ ಪ್ರಶ್ನೆಯೆ ಇಲ್ಲ ಅಂದಾತ ಗೋಳಾಡುತ್ತಲೆ ಸ್ಪಷ್ಟ ಪಡಿಸಿದ.



ಸ್ವಲ್ಪ ಸಮಯದಲ್ಲಿಯೆ ನಂಜಿನ ಬಾಧೆಯಿಂದ ನರಳಿದ ಎಳೆಮಗು ಇಬ್ರಾಹಿಂ ಪ್ರಾಣ ತ್ಯಜಿಸಿತು. ಆದ ಪಿತೂರಿಯ ಸಂಗತಿ ಬಯಲಾಗಿ ಅದೆ ಒಂದು ಹೊಸ ಪ್ರಕರಣವಾಗಿ ಬೆಳೆಯುವುದು ಮಹಮದನಿಗೂ ಸಹ ಬೇಕಿರಲಿಲ್ಲ. ಹೀಗಾಗಿ ಆದಷ್ಟು ಬೇಗ ಶವ ಸಂಸ್ಕಾರ ನಡೆಸಿ ಎಲ್ಲಾ ಸಂಚಿನ ಕಥೆಯನ್ನ ಶಾಶ್ವತವಾಗಿ ಮಣ್ಣಿನಡಿ ಹೂತುಬಿಡುವ ನಿರ್ಧಾರಕ್ಕೆ ಆತನೂ ಬಂದ. ಮಗುವಿಗಾಗಿ ರೋಧಿಸುತ್ತಿದ್ದ ಮೇರಿ ಹಾಗೂ ಶಿರೀನರನ್ನು ಒಪ್ಪಿಸಿ ಶವವನ್ನ ಪಡೆದು ಅದನ್ನ ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಸ್ಮಶಾನದಲ್ಲಿ ಆದಷ್ಟು ಶೀಘ್ರವಾಗಿ ಮಗುವಿನ ಹೆಣವನ್ನ ಶವಪೆಟ್ಟಿಗೆ ಸಹಿತ ದಫನ್ ಮಾಡಿ ಸಮಾಧಿಯೊಂದನ್ನ ಕಟ್ಟಲಾಯಿತು. ಸಮಾಧಿಯ ಮೇಲೆ ನೀರನ್ನು ಚುಮುಕಿಸುತ್ತಾ ಭಾವುಕನಾಗಿ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಹಮದ್ ಕೆಲ ಮಾತುಗಳನ್ನೂ ಸಹ ಆಡಿದ.


"ಇದನ್ನ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ಏಕೆಂದರೆ ಇದು ಶೋಕಭರಿತ ಹೃದಯಕ್ಕೆ ಸಾಂತ್ವಾನವನ್ನು ನೀಡುತ್ತದೆ. ಮೃತ್ಯುವಿಗೆ ಈಡಾದವರಿಗೆ ಇದು ಲಾಭವನ್ನೂ ತರುವುದಿಲ್ಲ, ಅಂತೆಯೆ ಇದರಿಂದ ಅವರಿಗೆ ಯಾವುದೆ ಹಾನಿಯೂ ಉಂಟಾಗುವುದಿಲ್ಲ. ಆದರೆ ಬದುಕಿರುವವರ ಹೃದಯಕ್ಕೆ ಮಾತ್ರ ಸಾಂತ್ವಾನದ ಮಳೆ ಸುರಿಸುತ್ತದೆ."


ಅಂದು ಕಾಕತಾಳೀಯವಾಗಿ ಸೂರ್ಯಗ್ರಹಣವಾಯಿತು.  ಜನರು ಅದನ್ನ ಸತ್ತ ಮಗು ಇಬ್ರಾಹಿಮನ ಪುಣ್ಯವಂತಲೂ, ದೇವರು ಅವನಿಗೆ ಈ ಮೂಲಕ ಶುಭ ಶಕುನವನ್ನ ಹೊತ್ತು ತಂದಿದ್ದಾನೆ ಅಂತಲೂ ಅಲ್ಲಾಹನನ್ನು ಸ್ತುತಿಸಿ ತಮ್ಮೊಳಗೆ ವ್ಯಾಖ್ಯಾನಿಸಿದರು. ಆದರೆ ಮಹಮದ್ ಅದನ್ನು ಸರಾ ಸಗಟಾಗಿ ತಿರಸ್ಕರಿಸಿದನು. 'ಗ್ರಹಣಗಳು ದೈವೀಕ ನಿಯಮದ ಚಿನ್ಹೆಗಳು. ಅವು ಯಾರದೆ ಒಬ್ಬರ ಸಾವಿನ ಸೂಚಕವಾಗಿ ಘಟಿಸುವುದಿಲ್ಲ. ಗ್ರಹಣವಾದಲ್ಲಿ ನೀವೆಲ್ಲರೂ ಅದನ್ನ ತಲೆಗೊಬ್ಬರಂತೆ ಅರ್ಥೈಸದೆ ಅದು ಬಿಡುವವರೆಗೂ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರಿ." ಎಂದು ಆತ ಜನರಿಗೆ ಉಪದೇಶಿಸಿದ. ಈ ಗ್ರಹಣ ಕಳೆದ ನಂತರ ಆತ ಕೃತಜ್ಞತಾ ಸೂಚಕವಾಗಿ ಮಗುವಿನ ಶೂಶ್ರಷೆಗಾಗಿ ನೇಮಕವಾಗಿದ್ದ ದಾದಿ ಉಮ್ ಬುರ್ದಾ ಎಂಬಾಕೆಗೆ ಖರ್ಜೂರದ ತೋಟವೊಂದನ್ನ ಆತ್ಮ ಸಂತೋಷಕ್ಕಾಗಿ ದಾನ ಮಾಡಿದ.



( ಇನ್ನೂ ಇದೆ.)

No comments: