15 November 2015

ವಲಿ - ೩೦ಖೈಬರ್ ಕಣಿವೆ ಮದೀನಾದಿಂದ ಸಿರಿಯಾಕ್ಕೆ ಹೋಗುವ ಹಾದಿಯಲ್ಲಿ ನಗರದಿಂದ ಬಹುತೇಕ ನೂರು ಮೈಲಿ ದೂರದಲ್ಲಿ ಇದೆ. ಸುತ್ತಲೂ ಬೆಟ್ಟಗುಡ್ದ ಹಾಗೂ ಕಣಿವೆಯಿಂದ ಅವೃತ್ತವಾದ ಈ ಪ್ರದೇಶದಲ್ಲಿ ಬಹುತೇಕ ಯಹೂದಿಗಳ ಪ್ರಾಬಲ್ಯವಿತ್ತು. ಅರೇಬಿಯಾದ ಇನ್ನಿತರ ಎಡೆಗಳಲ್ಲಿ ನೆಲೆ ಕಳೆದುಕೊಂಡು ನಿರಾಶ್ರಿತರಾದ ಯಹೂದಿ ಬುಡಕಟ್ಟುಗಳ ಹಾಗೂ ಉಪ ಪಂಗಡಗಳ ಮಂದಿಯೂ ಸಹ ಆಶ್ರಯವನ್ನು ಅರಸಿಕೊಂಡು ಅಲ್ಲಿಗೆ ಬಂದಿದ್ದರು. ಹೀಗೆ ವಲಸೆ ಬಂದವರು ಹಾಗೂ ಅಲ್ಲಿನ ಮೂಲ ನಿವಾಸಿಗಳು ಪ್ರತ್ಯೇಕವಾಗಿ ಬೆಟ್ಟಗಳ ಮೇಲೆ ತಮ್ಮ ರಕ್ಷಣಾ ಕೋಟೆಗಳನ್ನ ನಿರ್ಮಿಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ಅಂತಹ ಕೋಟೆಗಳೊಳಗೆಯೆ ವಸತಿಯನ್ನ ಹೂಡಿದ್ದರು.


ರಾಜಕೀತವಾಗಿ ಪ್ರಬಲನೂ ಹಾಗೂ ಮಾನ್ಯನೂ ಆಗುತ್ತಿದ್ದಂತೆ ಮಹಮದನ ಗ್ರಧೃ ದೃಷ್ಟಿ ಈಗ ಖೈಬರ್ ಮೇಲೆ ಬಿದ್ದಿತು. ಯಹೂದಿಗಳ ವಿಚಾರದಲ್ಲಿ ಒಂದು ಬಗೆಯ ಪೂರ್ವಗ್ರಹ ಮನಸ್ಥಿತಿಯಿದ್ದ ಮಹಮದ್ ಇನ್ನಿತರರಂತೆ ಅವರಿಗೆ ಯಾವುದೇ ದೌತ್ಯ ಕಳಿಸಲು ಆಸಕ್ತನೆ ಆಗಿರಲಿಲ್ಲ. ಅವರನ್ನ ಬೆದರಿಸಿ ವಶಕ್ಕೆ ತೆಗೆದುಕೊಳ್ಳಬಲ್ಲೆ ಅನ್ನುವ ಆತ್ಮವಿಶ್ವಾಸ ಅವನಿಗಿದ್ದದ್ದೂ ಬಹುಶಃ ಅವರನ್ನ ಉಡಾಫೆಯಿಂದ ನಡೆಸಿಕೊಳ್ಳುವಂತೆ ಮಾಡಿದ್ದವು ಅನ್ನಬಹುದು. ಯಹೂದಿಗಳೊಂದಿಗೆ ಹಿಂದೆಯೂ ಕ್ರೌರ್ಯ ಮೆರೆದ ಆತನ ಹಿನ್ನೆಲೆಯೂ ಯಹೂದಿಗಳೊಂದಿಗಿನ ಆತನ ಈ ದಾಢಸಿ ನಡುವಳಿಕೆಗೆ ಮಾನಸಿಕ ಒತ್ತಾಸೆ ನೀಡಿತ್ತು. ಯಾವುದೆ ಪೂರ್ವ ಸೂಚನೆಯನ್ನೂ ಕೊಡದೆ ಶಸ್ತ್ರಸಜ್ಜಿತರಾದ ಸುಮಾರು ಐದುನೂರು ಯೋಧರೊಂದಿಗೆ ಮಹಮದ್ ಖೈಬರ್ ಮೇಲೆ ದಂಡೆತ್ತಿ ಹೊರಟ. ಜೊತೆ ಹೆಂಡತಿ ಉಮ್ ಸಲ್ಮಾ ಸಹ ಇದ್ದಳು. ಅತ್ಯಂತ ಕರಾರುವಾಕ್ಕಾಗಿ ಚುರುಕಿನಿಂದ ಅಡೆತಡೆಯಿಲ್ಲದೆ ನುಗ್ಗಿಬಂದ ಮುಸಲ್ಮಾನರ ಸೈನ್ಯ ಯಹೂದಿಗಳನ್ನ ಬೆದರಿತಷ್ಟೆ ಅಲ್ಲಾ ಬುಡದಿಂದಲೆ ಅಲ್ಲಾಡಿಸಿ ಹಾಕಿಬಿಟ್ಟಿತು. ಅವರಿಗೆ ಶರಣಾಗಿ ಮತಾಂತರವಾಗುವುದರ ಹೊರತು ಯಾವುದೆ ಆಯ್ಕೆ ಉಳಿದಿರಲಿಲ್ಲ. ಈ ಏಕಪಕ್ಷೀಯವಾದ ಕಿರಾತಕ ನಡೆಯ ಯುದ್ಧಪಿಪಾಸುಗಳ ಸಮ್ಮುಖದಲ್ಲಿ ಜೀವ ಉಳಿಸಿಕೊಳ್ಳಲು ಬೆಚ್ಚಿ ಬಿದ್ದ ಯಹೂದಿಗಳಿಗೆ ಇನ್ಯಾವ ಆಯ್ಕೆಯೂ ಉಳಿದಿರಲಿಲ್ಲ. ಹೆದರಿ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡಿಹೋದವರ ಆಸ್ತಿಗಳೆಲ್ಲ ಲೂಟಿಗೆ ತುತ್ತಾದವು. ಒಂದೊಂದೆ ಕೋಟೆಯನ್ನೂ ಸುಲಭವಾಗಿ ಸೂರೆ ಹೊಡೆಯುತ್ತಾ ಮುನ್ನುಗ್ಗಿದ ಮಹಮದ್ ಯಹೂದಿ ಕೋಟೆಗಳಲ್ಲೆ ಅತ್ಯಂತ ಬಲಿಹ್ಠವಾಗಿದ್ದ ಅಲ್ ಕಮಾಸ್ ಹೆಬ್ಬಾಗಿಲನ್ನ ಬಂದು ಮುಟ್ಟಿದ. 


ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ದ ಪುಟ ಸಂಖ್ಯೆ ೭೨೪ ಹಾಗೂ ೧೨೫ರಲ್ಲಿ ಇತಿಹಾಸಕಾರ ಅಲ್ ಮುಬಾರಖಿ ಹೇಳುವಂತೆ ಮುಸಲ್ಮಾನರ ಮುತ್ತಿಗೆ ವಾರದ ತನಕ ಅಲ್ಲಿ ವಿಸ್ತರಿಸಿತು. ಹಿಂದೆ ಮಹಮದನ ಸುಪಾರಿ ಕೊಲೆಗಡುಕ ಪಡೆಯಿಂದ ಸಾವನ್ನಪ್ಪಿದ್ದ ಅಬು ರಫಿಯ ಮೊಮ್ಮಗ ಕಿನಾನ್ ಈಗ ಕೋಟೆ ರಕ್ಷಣೆಯ ಹೊಣೆ ಹೊತ್ತು ಶರಣಾಗತಿಯನ್ನ ಪ್ರಕಟಿಸದೆ ಜೀವದ ಹಂಗು ತೊರೆದು ಆಕ್ರಮಣಕಾರಿ ಮುಸಲ್ಮಾನ ಪಡೆಯ ವಿರುದ್ಧ ವೀರೋಚಿತ ಹೋರಾಟ ನಡೆಸಿದ. ಆತನ ಹೋರಾಟದ ಹುಮ್ಮಸ್ಸು ಹೆಚ್ಚಿದಷ್ಟೂ ಮಹಮದನ ಹಟವೂ ಉಕ್ಕ ತೊಡಗಿ ಆತ ತನ್ನ ಸರ್ವಶಕ್ತಿಯನ್ನೂ ಪ್ರಯೋಗಿಸಿ ಮುತ್ತಿಗೆಯನ್ನ ಮುಂದುವರೆಸಿದ. ಮುಸಲ್ಮಾನರ ಪಡೆಯ ಅಗಾಧತೆಯ ಮುಂದೆ ಕೆಲವೆ ಮಂದಿಯಿದ್ದ ಆಯುಧಗಳ ಕೊರತೆಯೂ ಧಾರಾಳವಾಗಿದ್ದ ಯಹೂದಿಗಳ ಹೋರಾಟ ಬಹಳ ಕಾಲ ಮುಂದುವರೆಸಲಾಗಲಿಲ್ಲ. ನಿಸ್ಸಹಾಯಕರಾದ ಅವರು ಕೋಟೆ ಬಾಗಿಲು ತೆರೆದು ತಮ್ಮ ಶರಣಾಗತಿಯನ್ನ ಸೂಚಿಸುವ ಹೊತ್ತಿಗೆ ಅವರ ಪಡೆಯ ತೊಂಬತ್ತಮೂರು ಯೋಧರು ಸತ್ತಿದ್ದರೆ, ಎದುರಾಳಿ ಮುಸಲ್ಮಾನರ ಪಡೆಯಲ್ಲಿ ಹತ್ತೊಂಬತ್ತು ಮಂದಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. 


ಶರಣಾದ ಯಾರೊಬ್ಬರೂ ಸಹ ಮತಾಂತರಕ್ಕೆ ಸಮ್ಮತಿಸದೆ ತಮ್ಮ ಸರ್ವಸ್ವವನ್ನೂ ತ್ಯಜಿಸಿ ಊರು ಬಿಡುತ್ತೇವೆ ಅಂದರು. ಅವರ ಗಡಿಪಾರಿಗೆ ಮಹಮದ್ ಸಹ ಸಮ್ಮತಿಸಿದ. ಅದಕ್ಕೂ ಮೊದಲು ವಿಚಾರಣೆಯ ಒಂದು ಪ್ರಹಸನವನ್ನ ನಡೆಸಲಾಯಿತು. ಮೂಲತಃ ವ್ಯಾಪಾರಿಗಳಾಗಿದ್ದ ಆ ಯಹೂದಿ ಪಂಗಡದ ಮುಖ್ಯಸ್ಥ ಕಿನಾನ್ ಹಾಗೂ ಅವನ ಹೆಂಡತಿ ಸಫೀಯಾಳನ್ನ ಹೆಡೆಮುರಿ ಕಟ್ಟಿ ಮಹಮದನ ಮುಂದೆ ಎಳೆದು ತರಲಾಯಿತು. ಮೆಕ್ಕಾದ ಮಂದಿಗೆ ಸಾಲವಾಗಿ ಕೊಡುತ್ತಿದ್ದ ಚಿನ್ನದ ಬಟ್ಟಲುಗಳನ್ನ ಅದೆಲ್ಲಿಟ್ಟಿರುವೆ? ಎಂದು ಮಹಮದ್ ಕಿನಾನ್'ನನ್ನು ಪ್ರಶ್ನಿಸಿದ. ಆದರೆ ಆತ ತನಗೆ ಗೊತ್ತಿಲ್ಲ ಎಂದು ಮಾರುತ್ತರಿಸಿದ. ಜಪ್ತಿಯ ವೇಳೆಯಲ್ಲಿ ಚಿನ್ನದ ಬಟ್ಟಲುಗಳು ಕಿನಾನ್ ನಿವಾಸದ ಹಗೇವಿನಲ್ಲಿ ಪತ್ತೆಯಾದವು. ಇದನ್ನೆ ನೆಪ ಮಾಡಿದ ಮಹಮದ್ ಕಿನಾನ್'ನನ್ನು ಸುಳ್ಳು ಹೇಳಿದ ಅಪರಾಧಕ್ಕಾಗಿ ಅತ್ಯಂತ ಕ್ರೂರವಾಗಿ ಸಾರ್ವಜನಿಕ ಸ್ಥಳದಲ್ಲಿ ಮರಣದಂಡನೆಗೆ ಒಳಪಡಿಸಿದ. ಮೊದಲಿಗೆ ಅವನ ಕಣ್ಣು ಹಾಗೂ ನಾಲಗೆಯನ್ನ ಕೀಳಲಾಯಿತು. ಅನಂತರ ನೆಲದ ಮೇಲೆ ಮಲಗಿಸಿ ಬೆಂಕಿಯ ಉಂಡೆಗಳನ್ನ ತರಿಸಿ ಜೀವಂತವಿರುವಾಗಲೆ ಎದೆಯ ಮೇಲೆ ಸುರಿಯಲಾಯಿತು. ಕಿನಾನ್ ಜೀವಂತ ಸುಟ್ಟು ಕರಕಲಾದ. ಇಷ್ಟಾದರೂ ಮಹಮದನ ವಿಕೃತಿ ನಿಂತಿರಲಿಲ್ಲ. ಅರೆಬೆಂದ ಕಿನಾನ್ ದೇಹವನ್ನ ರುಂಡ ಹಾಗೂ ಮುಂಡ ಕಡಿದು ಪ್ರತ್ಯೇಕವಾಗಿಸಲು ಆತ ಆಜ್ಞಾಪಿಸಿದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಪ್ಪತ್ತೇಳರಲ್ಲಿ.ಅನಂತರ ಮಹಮದ್ ತನ್ನ ನೀಗ್ರೋ ಬಂಟ ಬಿಲಾಲನನ್ನು ಕರೆದು ಕಿನಾನ್ ಎಳೆಯ ಹೆಂಡತಿಯನ್ನ ಎಳೆದು ತರಲು ಸೂಚನೆಯಿತ್ತ. ಹದಿನೇಳು ವರ್ಷದ ಸಫಿಯಾಳನ್ನು ಹಾಗೂ ಅವಳ ದಾಸಿಯನ್ನ ವಿಛಿದ್ರವಾಗಿ ಭಯಾನಕ ಸ್ವರೂಪದಲ್ಲಿದ್ದ ಕಿನಾನ ಸುಟ್ಟ ದೇಹವನ್ನ ತೋರಿಸುತ್ತಲೆ ಬಿಲಾಲ್ ಎಳೆದುಕೊಂಡು ಬಂದ. ಆಕೆಯ ದಾಸಿ ಈ ಬೀಭತ್ಸ ದೃಶ್ಯವನ್ನು ಕಂಡು ಹುಚ್ಚಳಂತೆ ಬೊಬ್ಬಿಡ ತೊಡಗಿದಳು. ಅವಳಿಗೆ ತೀವೃವಾಗಿ ಮಾನಸಿಕ ಅಘಾತವಾಗಿತ್ತು. ಹುಚ್ಚು ಕೆದರಿದಂತೆ ಭೋರಿಟ್ಟು ಅಳುತ್ತಿದ್ದ ಅವಳನ್ನ ದೂರ ಸಾಗಿಸಲು ಮಹಮದ್ ಸೂಚನೆ ಕೊಟ್ಟ. ಅವರನ್ನು ಹೆಣದ ಮುಂದಿನಿಂದ ಕರೆದುಕೊಂಡು ಬಂದ ಬಿಲಾಲನಿಗೆ ಛೀಮಾರಿ ಬಿತ್ತು. ಸಫಿಯಾ ಬಂದು ಎದುರು ನಿಲ್ಲುತ್ತಿದ್ದಂತೆ ಸಂತುಷ್ಟನಾದ ಮಹಮದ್ ಅವಳನ್ನು ಸಂತೈಸುತ್ತಾ ಹತ್ತಿರ ಬಂದ. ಅವಳ ಮೈಮೇಲೆ ತನ್ನ ಮೇಲು ಹೊದಿಕೆಯನ್ನ ಹೊದೆಸಿ ಸೂಚ್ಯವಾಗಿ ಅವಳಿನ್ನು ತನ್ನವಳು ಎನ್ನುವುದನ್ನ ಎಲ್ಲರಿಗೂ ಸ್ಪಷ್ಟ ಪಡಿಸಿದ. ಹದಿನೇಳು ವರ್ಷದ ಎಳೆ ಚಲುವೆ ಬಲವಂತವಾಗಿ ಅರವತ್ತರ ಮುದುಕ ಮಹಮದನನ್ನು ತನ್ನ ಗಂಡ ಕಿನಾನನ ದೇಹ ಇನ್ನೂ ಸಂಪೂರ್ಣ ಬೂದಿಯಾಗುವ ಮೊದಲೆ ಮದುವೆಯಾಗಿ ತನ್ನ ಲೈಂಗಿಕ ನಿಷ್ಠೆಯನ್ನು ಬದಲಿಸ ಬೇಕಾಯಿತು! ವಿವಾಹವನ್ನ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಮಹಮದ್ ಮಾಡಿಕೊಂಡನೆಂದೂ, ನೆರೆದ ಎಲ್ಲರಿಗೂ ಔತಣಕೂಟವನ್ನು ಏರ್ಪಡಿಸಲಾಗಿತ್ತಂದೂ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ಇನ್ನೂರಾ ನಲವತ್ತೊಂದರಲ್ಲಿ ವಿವರಿಸುತ್ತಾನೆ. ಈ ಒತ್ತಾಯದ ಮದುವೆಗೆ ಮೊದಲು ಸಮ್ಮತಿ ಇಲ್ಲದಿದ್ದರೂ, ಸಫಿಯಾ ಅನಿವಾರ್ಯವಾಗಿ ತನ್ನ ವಿಧಿಯನ್ನ ಒಪ್ಪಿಕೊಂಡು ಆದಷ್ಟು ಉತ್ಸಾಹದಿಂದಲೆ ವಿವಾಹದ ವಿಧಿಗಳಲ್ಲಿ ಪಾಲ್ಗೊಂಡಳು. ಆದರೆ ಆಕೆಯ ಯಾವೊಬ್ಬ ಇಷ್ಟ ಮಿತ್ರರೂ ಸಹ ಅವಸರದ ಕೂಡಿಕೆಯಂತಹ ಈ ಹಾದರ ಸಮಾನ ಮದುವೆಗೆ ಅಭಿಮಾನ ಅಥವಾ ಗೌರವವನ್ನು ತೋರಿಸಲಿಲ್ಲ ಎನ್ನುತ್ತಾರೆ ಅವರು.ಮದುವೆಯ ನಂತರ ಆತ ಕೆಲಕಾಲ ಅಲ್ಲಿಯೆ ಮಧುಚಂದ್ರ ಮಾಡಿಕೊಂಡು ಉಳಿದ. ಸ್ಥಳಿಯಯರು ಆತನಿಗೆ ಹೆದರಿ ಆಜ್ಞಾನುವರ್ತಿಗಳಾಗಿದ್ದರೆ ವಿನಃ ಅವರಲ್ಲಿ ಆತನ ಬಗ್ಗೆ ಅಂತಹ ಗೌರವಾದರಗಳೊಂದೂ ಇದ್ದಿರಲಿಲ್ಲ. ಅಂತಹ ಸಮಯದಲ್ಲಿ ಸಫಿಯಾಳ ನಡತೆಗೆ ತದ್ವಿರುದ್ಧವಾದ ಝೈನಬ್ ಎಂಬ ಸೋತ ಯಹೂದಿ ಪಡೆಯ ಇನ್ನೊಬ್ಬ ಮಹಿಳೆಯ ಪ್ರಕರಣವನ್ನು ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ಘಮದ್'ನ ಪುಟ ಸಂಖ್ಯೆ ಮುನ್ನೂರಾ ಎಪ್ಪಂತ್ತೆಂಟರಲ್ಲಿ ವಿವರಿಸುತ್ತಾರೆ. ಝೈನಬ್ ಈ ಯುದ್ಧದಲ್ಲಿ ಯೋಧರಾಗಿದ್ದ ತನ್ನ ಗಂಡ, ಅಪ್ಪ ಹಾಗೂ ಒಡ ಹುಟ್ಟಿದ ಮೂವರು ಸಹೋದರರನ್ನು ಕಳೆದುಕೊಂಡು ದುಃಖಿತಳಾಗಿದ್ದಳು. ಅವಳೊಳಗೆ ಅತೀವ ವೇದನೆ ಹಾಗೂ ಪ್ರತಿಕಾರ ಭಾವ ಹೊಗೆಯಾಡುತ್ತಿದ್ದರೂ ಸಹ ಮೇಲ್ನೋಟಕ್ಕೆ ಸರ್ವೇ ಸಾಧಾರಣವಾಗಿ ಎಲ್ಲರಂತೆಯೆ ಇದ್ದಳು. ಆಕೆ ಮಹಮದ್ ಹಾಗೂ ಅವನ ಪರಿವಾರಕ್ಕೆ ಒಂದು ರಾತ್ರಿ ಔತಣಕೂಟವನ್ನ ಏರ್ಪಡಿಸಿ ಆಹ್ವಾನಿಸಿದಳು. ಅದಕ್ಕಾಗಿ ಕುರಿಯೊಂದನ್ನ ಕಡಿದು ಊಟದ ವ್ಯವಸ್ಥೆ ಮಾಡಲಾಗಿತ್ತು. ಮಹಮದ್ ತನ್ನ ಅನುಯಾಯಿಗಳೊಂದಿಗೆ ಸಂತೋಷದಿಂದಲೆ ಆ ಭೋಜನಕೂಟಕ್ಕೆ ಹಾಜರಾದ. ಝೈನಬ್ ತಾನೆ ಖುದ್ದಾಗಿ ಅಡುಗೆ ಮಾಡಿದ್ದು ಉಪ್ಪು, ಖಾರದ ಜೊತೆ ಸ್ವಲ್ಪ ಕಟು ವಿಷವನ್ನೂ ಸಹ ಸೇರಿಸಿ ಮಾಂಸವನ್ನ ಬೇಯಿಸಿದ್ದಳು! ಹೀಗಾದರೂ ತನ್ನ ಸೇಡನ್ನ ತೀರಿಸಿಕೊಳ್ಳಲು ಆಕೆ ನಿರ್ಧರಿಸಿಬಿಟ್ಟಿದ್ದಳು. 
ಆದರೆ ಊಟದ ಮೊದಲಿಗೆ ಬಟ್ಟಲಿನಿಂದ ಒಂದು ತುಂಡು ಮಾಂಸ ತೆಗೆದು ಜಗಿದಾಗ ಅದರ ರುಚಿ ವ್ಯತ್ಯಾಸದಿಂದಲೆ ಮಹಮದನಿಗೆ ಅನುಮಾನ ಬಂದಿತು. ಆತ ಅದನ್ನ ಉಗಿದನಷ್ಟೆ ಅಲ್ಲ 'ತಾಳಿ' ಎಂದು ಊಟಕ್ಕೆ ಅಣಿಯಾಗಿದ್ದ ಎಲ್ಲರನ್ನೂ ಕೂಗಿ ಎಚ್ಚರಿಸಿದನು. ಆತ ವಿಷದ ಸಂಗತಿಯನ್ನ ಹೇಳುವ ಹೊತ್ತಿಗಾಗಲೆ ಸ್ವಲ್ಪ ಮಾಂಸ ತಿಂದಾಗಿದ್ದ ಬಿಷರ್ ಎಂಬಾತ ವಿಷದ ನಂಜೇರಿ ಸತ್ತು ಬಿದ್ದ. ಆದರೆ ಝೈನಬ್ ಈ ಬಗ್ಗೆ ಯಾವುದೆ ಪಶ್ಚಾತಾಪವನ್ನ ವ್ಯಕ್ತ ಪಡಿಸಲಿಲ್ಲ. "ನೀನು ನಿಜವಾಗಿಯೂ ದೇವ ಪ್ರವಾದಿಯೇ ಆಗಿದ್ದಿದ್ದರೆ, ಊಟಕ್ಕೂ ಮೊದಲೆ ವಿಷ ಬೆರೆಸಿದ ಸಂಗತಿಯನ್ನ ದಿವ್ಯ ದೃಷ್ಟಿಯಿಂದ ಅರಿತು ತನ್ನವರ ಜೀವ ಉಳಿಸುತ್ತಿದ್ದೆ. ನಿನ್ನದು ಬರಿ ಢೋಂಗಿ" ಎಂದು ಬಹಿರಂಗವಾಗಿ ಆಕೆ ಆತನನ್ನ ಜರೆದು ತನ್ನ ಸೇಡಿನ ಕಾರ್ಯವನ್ನ ಸಮರ್ಥಿಸಿಕೊಂಡಳು. ಸಾಲದ್ದಕ್ಕೆ, ಬಿಷರ್ ಬದಲು ನಿನ್ನಂತಹ ಪಾಪಿಗಳು ಸತ್ತಿದ್ದರೆ ಸುಖವಿತ್ತು. ಆಗ ನಾವು ಯಹೂದಿಗಳು ನೆಮ್ಮದಿಯಿಂದ ನಾಲ್ಕು ಕಾಲ ಬಾಳುತ್ತಿದ್ದೆವು ಎಂದು ಹೇಳಿ ಆತನನ್ನ ಕೆರಳಿಸಿದಳು. ಆಕೆಯನ್ನ ಕೂಡಲೆ ಬಂಧಿಸಿ ಕತ್ತು ಕಡಿದು ಹತ್ಯೆ ಮಾಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್' ಕೃತಿಯ ಪುಟ ಸಂಖ್ಯೆ ಏಳುನೂರಾ ನಲವತ್ತೆರಡರಲ್ಲಿ.


ಈ ಘಟನೆಯ ನಂತರ ಅಲ್ ಕಮಾಸ್'ನಿಂದ ಮದೀನಾಕ್ಕೆ ಮರಳಲು ಮಹಮದ್ ನಿರ್ಧರಿಸಿದ. ಹಿಂದಿರುಗುವಾಗ ತುಸು ಬಳಸು ಹಾದಿ ಹಿಡಿದು ಅಲ್ ವಠಾತ್ ಹಾಗೂ ಸುಲಲಿಮ್ ಎನ್ನುವ ಇನ್ನೆರಡು ಯಹೂದಿ ನೆಲೆಗಳನ್ನೂ ಸಹ ದೋಚಲಾಯಿತು. ಅಲ್ಲಿನ ನಿವಾಸಿಗಳನ್ನ ಸೆದೆ ಬಡಿದು ಅವರ ಚಿರಾಚರ ಆಸ್ತಿಗಳನ್ನ ಲೂಟಿ ಮಾಡಲಾಯಿತು. ಆದರೆ ಹತ್ಯೆ ಮಾಡುವ ಗೋಜಿಗೆ ಮಾತ್ರ ಹೋಗದೆ ಕಪ್ಪಕಾಣಿಕೆ ಪಡೆದು ಅವರನ್ನೆಲ್ಲ ಜೀವ ಸಹಿತ ಬಿಡಲಾಯಿತು. ದಾರಿಯಲ್ಲಿ ಸಿಕ್ಕ ಇನ್ನೂ ಎಂಟು ಸಣ್ಣಪುಟ್ಟ ಯಹೂದಿ ವಸತಿಗಳು ಮುಸಲ್ಮಾನರ ಪುಂಡಾಟಿಕೆಯಿಂದ ಹೀಗೆ ಕಿರುಕುಳಕ್ಕೆ ತುತ್ತಾದವು. ಒಟ್ಟಿನಲ್ಲಿ ಮದೀನಾದ ಉತ್ತರಕ್ಕಿದ್ದ ಎಲ್ಲ ಯಹೂದಿ ನೆಲೆಗಳ ಮೇಲೂ ತನ್ನ ಅಧಿಕಾರವನ್ನ ಸ್ಥಾಪಿಸಿಯೆ ಮಹಮದ್ ಮದೀನಾಕೆ ಹಿಂದಿರುಗಿದ್ದ. ಖೈಬರ್ ಮೇಲಿನ ದೆಂಡಯಾತ್ರೆಯ ನಂತರ ಮಹಮದನ ಆರ್ಥಿಕ ಪರಿಸ್ಥಿತಿಯಲ್ಲಿ ವಿಪರೀತ ಸುಧಾರಣೆ ಕಂಡು ಬಂತು. ವಾಡಿಕೆಯಂತೆ ಹೊಡೆಯಲಾಗಿದ್ದ ಒಟ್ಟು ಕೊಳ್ಳೆಯಲ್ಲಿ ಐದನೆ ಒಂದು ಭಾಗವನ್ನ ಪ್ರವಾದಿಯ ಪಾಲೆನ್ನುವ ನೆಲೆಯಲ್ಲಿ ಆತನಿಗೆ ಒಪ್ಪಿಸಲಾಗಿತ್ತು. ಯಹೂದಿಗಳ ಜಮೀನು ಜಾನುವಾರುಗಳೂ ಸಹ ಆತನ ವಶಕ್ಕೆ ಪ್ರತ್ಯೇಕವಾಗಿ ಬಂದಿದ್ದವು. ಅದನ್ನ ಗೇಣಿಗೆ ಕೊಟ್ಟು ಅದರ ಆದಾಯದ ಸರಿ ಅರ್ಧ ಭಾಗವನ್ನ ತನಗೆ ತಂದೊಪ್ಪಿಸುವಂತೆ ಸ್ಥಳಿಯರೊಂದಿಗೆ ಮಹಮದ್ ಕರಾರು ಮಾಡಿಕೊಂಡ. ಇದು ಆತನ ನಿತ್ಯದ ಆಡಳಿತ ಖರ್ಚಿನ ಜೊತೆಗೆ ಹಿಂಡುಗಟ್ಟಲೆ ಹೆಂಡಿರ ನಿರ್ವಹಣೆಗೂ ಸಹ ಧಾರಾಳವಾಗಿ ಸಾಕಾಗುವಷ್ಟಾಗಿತ್ತು. ಖೈಬರ್'ನ ಯಹೂದಿಗಳನ್ನ ಅವರ ಜಮೀನಿಗೆ ಗೇಣಿ ಒಕ್ಕಲುಗಳನ್ನಾಗಿ ನೇಮಿಸಲಾಯಿತು! ಅದರ ಆದಾಯದ ಅರ್ಧ ಪಾಲನ್ನ ಅವರು ಮಹಮದನ ಪದತಲಕ್ಕೆ ತಂದು ಅರ್ಪಿಸಲು ವ್ಯವಸ್ಥೆ ಮಾಡಲಾಯಿತು. ಅವರನ್ನ 'ಜಿಮ್ಮಿ' ಅಂದರೆ ಇಸ್ಲಾಮಿ ಪ್ರದೇಶದಲ್ಲಿ ಆಶ್ರಯ ಪಡೆದ ಕಾಫಿರ ಕುಲದವರೆಂದು ಘೋಷಿಸಲಾಯಿತು. ಅವರೆಲ್ಲರ ರಕ್ಷಣೆಯ ಭಾರವನ್ನು ಮಹಮದನ ಮುಸಲ್ಮಾನ ಪಡೆಯೆ ವಹಿಸಿಕೊಂಡಿತು. ಗೇಣಿಯ ಜೊತೆಗೆ ಪ್ರತ್ಯೇಕವಾಗಿ ಅವರು ತಮ್ಮ ರಕ್ಷಣಾ ಕರವಾದ ಝಜಿಯಾವನ್ನು ಬೇರೆ ಇನ್ನು ಮುಂದೆ ತೆರುವಂತಾಯಿತು ಎನ್ನುತ್ತಾರೆ ಇರಿಹಾಸಕಾರ ಡೋಝಿ ತಮ್ಮ ಕೃತಿ "ವೈಡ್ ಫೂಟ್'ನೋಟ್"ನ ಪುಟ ಸಂಖ್ಯೆ ನೂರಾ ಇಪ್ಪತ್ತಮೂರರಲ್ಲಿ. ಹೀಗೆ ಇಸ್ಲಾಮಿ ಇತಿಹಾಸದ ಪ್ರಥಮ 'ದಾರ್ ಉಲ್ ಇಸ್ಲಾಂ' ಪ್ರದೇಶವಾಗಿ ಖೈಬರ್ ಅಸ್ತಿತ್ವಕ್ಕೆ ಬಂದರೆ ಅಲ್ಲಿನ ಯಹೂದಿಗಳು ಅದರ ಪ್ರಾಥಮಿಕ 'ಜಿಮ್ಮಿ'ಗಳಾಗಿ ಗುರುತಿಸಲ್ಪಟ್ಟರು. ಅವರ ಪೂರ್ವಜರ ಸ್ವಂತ ನೆಲದಲ್ಲಿ ಅವರೆ ಪರತಂತ್ರದಲ್ಲಿ ಬಾಳುವ ದುಸ್ಥಿತಿ ಈ ಮೂಲಕ ಅವರಿಗೆ ಒದಗಿ ಬಂದಿತ್ತು. ಒಂದು ವೇಳೆ ಇಂತಹ ಜಿಮ್ಮಿಗಳು ಇಸ್ಲಾಮನ್ನ ಒಪ್ಪಿಕೊಂಡು ಮತಾಂತರವಾದರೆ ಅವರು ಯಾವುದೆ ತಲೆಗಂದಾಯ ಕೊಡದೆ ನಿರಾಳರಾಗಿ ಬಾಳಬಹುದಾಗಿತ್ತು. ಆದರೆ ಮಾತೃಧರ್ಮದ ಅಭಿಮಾನವಿದ್ದವರು ಮಾತ್ರ ಸಾಲಸೋಲ ಮಾಡಿಯಾದರೂ ತಲೆಗಂದಾಯ ಕೊಟ್ಟರೆ ಮಾತ್ರ ಅವರಿಗೆ ಆ ಪ್ರದೇಶದಲ್ಲಿ ನೆಲೆಸಲು ಅವಕಾಶ ಮುಕ್ತವಾಗಿರುತ್ತಿತ್ತು. ಈ ಹೊಸ ವ್ಯವಸ್ಥೆಯಿಂದ ಒಂದೆ ಕಲ್ಲಿಗೆ ಮೂರು ಮೂರು ಹಕ್ಕಿಗಳನ್ನ ಹೊಡೆದಂತಾಯಿತು. ಮೊದಲನೆಯದಾಗಿ ಗೆದ್ದ ಪ್ರದೇಶಗಳಲ್ಲಿ ಅನಗತ್ಯ ಪ್ರಾಣಹಾನಿ ಎಸಗುವುದು ತಪ್ಪಿತು ಹಾಗೂ ಅವರ ಭೂಮಿಯಲ್ಲಿ ಅವರನ್ನೆ ಜೀತಕ್ಕೋ, ಗೇಣಿಗೋ ನೇಮಿಸಿಕೊಳ್ಳಬಹುದಾಗಿತ್ತು, ಎರಡನೆಯದಾಗಿ ಅದರಿಂದ ಒಂದು ತಕ್ಕಮಟ್ಟಿನ ಆದಾಯ ತಲೆಗಂದಾಯ 'ಝಜಿಯಾ'ದ ರೂಪದಲ್ಲಿ ಕಾಲಕಾಲಕ್ಕೆ ಮಹಮದನ ಖಜಾನೆಗೆ ಬಂದು ಬೀಳುತ್ತಿತ್ತು ಹಾಗೂ ಕಡೆಯದಾಗಿ ಅವರು ಒಂದೊಮ್ಮೆ ಬೇಸತ್ತು ಮತಾಂತರಕ್ಕೆ ಒಪ್ಪಿಕೊಂಡರೆ ಸಹಜವಾಗಿ ಮುಸಲ್ಮಾನರ ಸಂಖ್ಯಾ ಬಲ ಹೆಚ್ಚುತ್ತಿತ್ತು! ಹೀಗಾಗಿ ಯಾವ ದೃಷ್ಟಿಕೋನದಿಂದ ನೋಡಿದರೂ ಇದು ಮಹಮದನಿಗೆ ಲಾಭದ ಬಾಬತ್ತೆ ಆಗಿತ್ತು.ಈ ಲೂಟಿಯ ಸಂಪತ್ತಿನಲ್ಲಿ ಆತ ಖೈಬರ್ ಯುದ್ಧದಲ್ಲಿ ಪಾಲ್ಗೊಳ್ಳದ ತನ್ನ ಬಂಧು ಹಾಗೂ ಅಬಿಸೀನಿಯಾದಿಂದ ಮದೀನಾಕ್ಕೆ ವಲಸೆ ಬಂದು ಅಲ್ಲಿ ನವ ಮುಸಲ್ಮಾನನಾಗಿದ್ದ ಜಾಫರ್ ಎನ್ನುವವನಿಗೂ ಒಂದು ಪಾಲನ್ನ ನೀಡಿದ. ಉಮ್ ಹಲೀಮ್ ಹಾಗೂ ಸುಂದರಿ ಸಫಿಯಾಳನ್ನು ಮದುವೆಯಾದ ನಂತರ ಮಹಮದನ ಅಂತಃಪುರ ಒಂಬತ್ತು ಹೆಂಡಿರು ಹಾಗೂ ಇಬ್ಬರು ಸೂಳೆಯರಿಂದ ಕಿಕ್ಕರಿದು ತುಂಬಿತ್ತು. ಆ ಪ್ರತಿ ಹೆಂಡತಿಗೂ ಸಹಾಯಕಳಾಗಿ ನೇಮಿಸಲಾಗಿದ್ದ ಸ್ತ್ರೀ ಗುಲಾಮರ ಮೇಲಿನ ಲೈಂಗಿಕ ಹಕ್ಕು ಸಹ ಅವನಿಗೆ ಸೇರಿತ್ತು. ಈ ಎಲ್ಲಾ ಮಹಮದನ ಮೆರೆದಾಟ ಮದೀನಾದ ಕೆಲವು ಮೂಲನಿವಾಸಿಗಳಲ್ಲಿ ಅಸಹನೆ ಹುಟ್ಟಿಸಿತು. ವಾಸ್ತವದಲ್ಲಿ ಅವರು ಎಲ್ಲರಿಗೂ ಮೊದಲೆ ಇಸ್ಲಾಮನ್ನ ಒಪ್ಪಿಕೊಂಡಿದ್ದರಷ್ಟೆ ಅಲ್ಲ, ಆತನಿಗೆ ನಿರಾಶ್ರಿತನಾಗಿದ್ದಾಗ ಆಶ್ರಯಕೊಟ್ಟು ಬದುಕನ್ನು ಕಟ್ಟಿಕೊಳ್ಳಲು ನೆಲೆ ಬೆಲೆ ನೀಡಿ ಆದರಿಸಿದ್ದರು. ಆದರೆ ತನ್ನ ಬಂಧು ಬಾಂಧವರು ಅಬಿಸೀನಿಯಾದಿಂದ ಅಲ್ಲಿಗೆ ಮರುವಲಸೆ ಬಂದ ನಂತರ ಆತನ ಚರ್ಯೆಯಲ್ಲಿ ಆದ ವಿಪರೀತವಾದ ಬದಲಾವಣೆ ಅವರಲ್ಲಿ ಅಸಹನೆಯನ್ನ ಹುಟ್ಟು ಹಾಕಿತ್ತು. ಆತನ ಎದ್ದು ಕಾಣುವ ತಾರತಮ್ಯದ ನಡುವಳಿಕೆಗಳ ಬಗ್ಗೆ ಅವರೆಲ್ಲಾ ಕುಪಿತರಾಗಿದ್ದರು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಂಬತ್ತ ನಾಲ್ಕರಲ್ಲಿ.


ಅತನಿಗೆ ತಕ್ಕ ಪಾಠ ಕಲಿಸಲು ಅವರೆಲ್ಲಾ ಗುಪ್ತವಾಗಿ ಲಬಿಡ್ ಎನ್ನುವ ಮಂತ್ರವಾದಿಯ ಮೊರೆ ಹೋದರು. ಆತ ಮಹಮದನ ಕೆಲವು ಕೂದಲ ಎಳೆಗಳನ್ನ ಸಂಪಾದಿಸಿ ಅದನ್ನ ಖರ್ಜೂರದ ಮರದ ಒಂದು ರೆಂಬೆಗೆ ಹನ್ನೊಂದು ಗಂಟುಗಳೊಂದಿಗೆ ಬಿಗಿದು ಬಾವಿಯೊಂದರಲ್ಲಿ ಮುಚ್ಚಿ ಅದರ ಮೇಲೆ ಕಲ್ಲನ್ನ ಹೇರಿದ. ಆತನ ಮಾಂತ್ರಿಕತೆಯ ಮಾಟ ಪ್ರಭಾವ ಬೀರಿತು. ಮಹಮದ್ ಅಕಾಲಿಕವಾಗಿ ವಿಪರೀತ ನಿತ್ರಾಣನಾಗಿ ಅರಿಯಲಾಗದ ಖಾಯಿಲೆಯಿಂದ ಬಹಳಷ್ಟು ನರಳಿದ. ಹಸಿವು ನೀರಾಡಿಕೆಗಳೆ ನಿಂತು ಹೋದಂತಾಗಿದ್ದ ಆತನಲ್ಲಿ ವಿಪರೀತವಾಗಿದ್ದ ಲೈಂಗಿಕ ವಾಂಛೆಗಳು ಸಹ ಆಶ್ಚರ್ಯಕರವಾಗಿ ಬತ್ತಿ ಹೋದವು! ಆತ ತನ್ನ ಹೆಂಡತಿಯನ್ನ ದೂರವಿಡಲು ಹೆಣಗಾಡಿದ, ಅವರನ್ನ ಬೇಕಂತಲೆ ಕಡೆಗಣಿಸ ತೊಡಗಿದ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆತನ ಸಹಾಯಕ್ಕೆ ಬಂದವ ಯಕ್ಷ ಗ್ರಾಬ್ರಿಯಲ್. ಆತ ಈ ಮಾಟದ ಮೂಲವನ್ನ ಹುಡುಕಿ ಹೇಳುತ್ತಲೆ ಆ ಬಾವಿಯನ್ನ ಹುಡುಕಿಸಿ ಕೂದಲು ಗಂಟು ಹಾಕಿದ್ದ ಖರ್ಜೂರದ ರೆಂಬೆಯನ್ನ ಮೇಲೆ ತೆಗಯಲಾಯಿತು. ಗಂಟುಗಳೆಲ್ಲವನ್ನೂ ಬಿಡಿಸುತ್ತಲೆ ಆಶ್ಚರ್ಯಕರವಾಗಿ ಆತನ ದೈಹಿಕ ಆರೋಗ್ಯ ಸುಧಾರಿಸ ಹತ್ತಿತು. ಹೀಗೆ ಆ ಲಬಿಡ್'ನ ಮಾಟದಿಂದ ಪಾರಾದ ಎನ್ನುತ್ತದೆ ಖುರ್ಹಾನಿನ ಸುರಾ ಸಂಖ್ಯೆ ೧೩೩ ಹಾಗೂ ೧೪೪.


ಲಬಿಡ್'ನನ್ನು ಕೊಲ್ಲಲಾಯಿತೋ? ಇಲ್ಲವೆ ಹಾಗೆ ಬಿಟ್ಟು ಗಡಿಪಾರು ಮಾಡಿ ಓಡಿಸಲಾಯಿತೋ? ಎನ್ನುವುದರ ಬಗ್ಗೆ ಸೂಕ್ತ ಧಾಖಲೆಗಳು ಲಭ್ಯವಿಲ್ಲ. ಖೈಬರ್ ಪ್ರಾಂತ್ಯದ ಲೂಟಿ ಮುಸಲ್ಮಾನರಿಗೆ ಅದೆಷ್ಟು ಲಾಭಕಾರಿಯಾಗಿತ್ತೆಂದರೆ ಏಕಾಏಕಿ ಅವರ ಬಡತನವೆಲ್ಲ ತೊಲಗಿ ಹೋಗಿ ದಾರಿದ್ರ್ಯದ ಜಾಗದಲ್ಲಿ ಸಿರಿ ಸಂಪತ್ತು ಕುಣಿದಾಡ ತೊಡಗಿತು. ಇತಿಹಾಸಕಾರ ಅಲ್ ಬುಖಾರಿ ಆಯೇಷಾಳ ಉದ್ಘಾರವೊಂದನ್ನ ಹೇಳುವ ಮೂಲಕ ಈ ಲಾಭದಾಯಿತ್ವವನ್ನ ಹೀಗೆ ವಿವರಿಸಿದ್ದಾನೆ. ಎಳೆಯ ಹುಡುಗಿ ಆಯೇಷಾ ತನ್ನ ವಯೋ ಸಹಜವಾದ ಆಸೆಬುರುಕ ಧ್ವನಿಯಲ್ಲಿ ಹೇಳುವಂತೆ "ಇನ್ನು ಮುಂದೆ ನಾವು ಬೇಕಾದಷ್ಟು ಖರ್ಜೂರದ ಹಣ್ಣುಗಳನ್ನ ನಿಯಂತ್ರಣವಿಲ್ಲದೆ ಮನ ಬಂದಷ್ಟು ತಿನ್ನಬಹುದು!". ಈ ಯುದ್ಧದ ನಂತರ ಇನ್ನೂ ಸುಮಾರು ಒಂದು ಡಝನಿನಷ್ಟು ಯಹೂದಿ ನೆಲೆಗಳನ್ನ ಮಹಮದ್ ಅಲ್ಪಾವಧಿಯಲ್ಲಿ ಲೂಟಿ ಹೊಡೆದ. ಅದರಲ್ಲಿ ಸಮೀಪದ ಫಡಕ್ ಎನ್ನುವ ಸ್ಥಳವೂ ಸೇರಿತ್ತು. ಫಲವಂತಿಕೆಯಿಂದ ಕೂಡಿದ್ದ ಅಲ್ಲಿನ ಜಮೀನನ್ನ ಇನ್ಯಾರಿಗೂ ಹಂಚದೆ ಕೇವಲ ತನ್ನ ಉಪಯೋಗಕ್ಕೆ ಮಾತ್ರ ಮಹಮದ್ ಮೀಸಲಿರಿಸಿಕೊಂಡ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಇನ್ನೂರಾ ನಲವತ್ತೆರಡರಲ್ಲಿ.ಈ ಹಂತದಲ್ಲಿ ಆತನಿಗೆ ಪ್ರಬಲ ಪ್ರತಿರೋಧ ಎದುರಾದ್ದದ್ದು ವಾಡ್ ಅಲ್ ಖುರಾಕ್ ಎನ್ನುವ ಯಹೂದಿ ವಸತಿಯಲ್ಲಿ ಮಾತ್ರ. ಅವರು ಶರಣಾಗತಿ, ಗಡಿಪಾರು, ಮತಾಂತರ ಯಾವುದಕ್ಕೂ ರಾಜಿಯಾಗದೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಧೀಮಂತವಾಗಿ ಹೋರಾಡಿದರು. ಅನ್ಯ ಮಾರ್ಗವಿಲ್ಲದೆ ಸೋತು ಸೆರೆಯಾದ ನಂತರ ಬೆನ್ ಕೊರೈಝ್'ರಂತೆಯೆ ಅವರೆಲ್ಲರ ಹತ್ಯೆಯನ್ನೂ ಸಹ ಜರುಗಿಸಿ ಅವರ ಸಕಲ ಆಸ್ತಿ ಪಾಸ್ತಿಗಳನ್ನೂ ಜಪ್ತು ಮಾಡಿಕೊಂಡು ಮದೀನಾದ ತನ್ನ ಖಜಾನೆಯ ಸಿರಿಯನ್ನ ಮಹಮದ್ ಹೆಚ್ಚಿಸಿಕೊಂದ.


( ಇನ್ನೂ ಇದೆ.)

No comments: