26 March 2013

ಮನಸೋಲ್ಲಾಸ...


ಅಕಾಶವಾಣಿಯ ದಕ್ಷಿಣ ಭಾರತದಾದ್ಯಂತ ಪಸರಿಸಿರುವ ಎಫ್ ಎಂ ರೈನ್'ಬೋ ಜಾಲದಲ್ಲಿ ಪ್ರತಿನಿತ್ಯ ರಾತ್ರಿ ಭಾರತೀಯ ಸಮಯ ಹನ್ನೊಂದರಿಂದ ಹನ್ನೆರಡರವರೆಗೆ "ಸದರನ್ ಮೆಲೋಡಿಸ್" ಅನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಸರಿ ಸುಮಾರು ಒಂದು ನಾಲ್ಕು ತಿಂಗಳಿಂದ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಆತಿಥ್ಯವನ್ನ ದಕ್ಷಿಣಭಾರತದ ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಹರಡಿರುವ ರೈನ್'ಬೋ ವಿಭಾಗಗಳು ಸರದಿ ಪ್ರಕಾರ ವಹಿಸುತ್ತವೆ. ಸಾಮಾನ್ಯವಾಗಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನ ತಲಾ ನಾಲ್ಕು ಗೀತೆಗಳನ್ನ ಪ್ರತಿ ಕಂತು ಒಳಗೊಂಡಿರುತ್ತದೆ. ಖಾಸಗಿ ಎಫ್ ಎಂಗಳ ವಟಗುಟ್ಟುವ ಕಾರ್ಯಕ್ರಮಗಳಿಂದ ರೋಸತ್ತವರಿಗೆ ಇದೊಂದು ಒಳ್ಳೆಯ ರಿಲೀಫ್. ನಿಮ್ಮ ಊರಿನಲ್ಲಿ ಅದರ ವ್ಯಾಪ್ತಿ ಇಲ್ಲದಿದ್ದರೆ ಇಲ್ಲಿದೆ http://www.voicevibes.net/  ಹೈದರಾಬಾದ್ ಎಫ್ ಎಂ ರೈನ್'ಬೋದ ನೇರ ಪ್ರಸಾರದ ಅಂತರ್ಜಾಲ ಕೊಂಡಿ.ಅಂತೆಯೆ ಭಾರತೀಯ ಸಿನೆಮಾದ ಶತಮಾನೋತ್ಸವದ ಸವಿನೆನಪಿಗಾಗಿ ವಿವಿಧಭಾರತಿಯ ಮುಂಬೈ ಕೇಂದ್ರ "ಭಾರತೀಯ ಸಿನೆಮಾಕೆ ಛಮಕ್ತೇ ಸಿತಾರೆ" ಅನ್ನುವ ಸರಣಿಯನ್ನ ಮೊನ್ನೆ ಶನಿವಾರದಿಂದ ಆರಂಭಿಸಿದೆ. ಪ್ರತಿ ಶನಿವಾರ ಮಧ್ಯಾಹ್ನ ಭಾರತೀಯ ಕಾಲಮಾನ ೧ಕ್ಕೆ ಹಾಗೂ ಅದರ ಮರು ಪ್ರಸಾರವನ್ನ ರಾತ್ರಿ ೯ಕ್ಕೆ ಕೇಳಬಹುದು. ದಾದಾ ಸಾಹೇಬ್ ಫಾಲ್ಕೆಯಿಂದ ಆರಂಭವಾಗಿರುವ ಈ ಚೇತೋಹಾರಿ ಸರಣಿಯ ಎರಡನೆ ಕಂತು ಇದೆ ೩೦ಕ್ಕೆ ಪ್ರಸಾರವಾಗಲಿದೆ. ಮೇಲಿನ ಕೊಂಡಿಯಲ್ಲಿಯೆ ಇದರ ಅಂತರ್ಜಾಲ ಸಂಪರ್ಕವೂ ಸಿಗುತ್ತದೆ.

No comments: