ಬಾನಿನ ಬಸಿರಿಗೆ ತುಂಬಿ ತಿಂಗಳು,
ಬಾಣಂತನಕ್ಕೆ ತವರಲೇ ತಂಗಲು/
ಕಾತರಿಸಿ ಉಲಿವ ಸಂಭ್ರಮದ ದನಿ,
ಇದೋ ಈ...ಮಳೆಹನಿ//
26 February 2010
24 February 2010
ಹೇಳುವೆಯ?
ಮೊದಲ ಮುತ್ತ ಮತ್ತು ಇನ್ನೂ ಕಳೆದಿಲ್ಲ,
ಸೋಕಿದ ಉಸಿರ ಬಿಸಿ ಇನ್ನೂ ಆರಿಲ್ಲ/
ಮತ್ತಗೆ.....ಮೌನದಲಿರೋವಾಗ ಆವರಿಸುವೆಯಲ್ಲ,
ಅದು ನೀನೋ? ನಿನ್ನ ನೆನಪೂ?//
ಸೋಕಿದ ಉಸಿರ ಬಿಸಿ ಇನ್ನೂ ಆರಿಲ್ಲ/
ಮತ್ತಗೆ.....ಮೌನದಲಿರೋವಾಗ ಆವರಿಸುವೆಯಲ್ಲ,
ಅದು ನೀನೋ? ನಿನ್ನ ನೆನಪೂ?//
23 February 2010
ಕಂಪನ..ಕಂಪನ...
ಬೀಸೋ ಗಾಳಿಯಲಿ ಹುಡುಕಿದೆ ನಿನ್ನ ಹೆಜ್ಜೆ,
ಮೌನದಲೂ ಮೊಳಗಿ ಮನ ಕಲಕಿದ್ದು ನಿನ್ನದೇ ಗೆಜ್ಜೆ/
ಏಕಾಂಗಿಯಾಗಿದ್ದರೂ ನಾನೊಂಟಿಯಲ್ಲ,
ನೆರಳಾಗಿ ನಿನ್ನ ನೆನಪೇ ಜೋತೆಗಿದೆಯಲ್ಲ//
ನೀರಲಿ ಮೂಡಿದ ನಿನ್ನ ಹೆಸರು,
ಗಾಳಿಯಲಿ ಬರೆದ ನನ್ನುಸಿರಲಿ/
ಹುಟ್ಟಿಸುತಿರಲಿ ಹೀಗೆಯೇ ರೋಮಾಂಚನ,
ಹಗಲ ಹೊಳಪೇ ತುಂಬಿರಲಿ ನಿನ್ನುರುಳಲೂ ಅನುಕ್ಷಣ//
ಮೌನದಲೂ ಮೊಳಗಿ ಮನ ಕಲಕಿದ್ದು ನಿನ್ನದೇ ಗೆಜ್ಜೆ/
ಏಕಾಂಗಿಯಾಗಿದ್ದರೂ ನಾನೊಂಟಿಯಲ್ಲ,
ನೆರಳಾಗಿ ನಿನ್ನ ನೆನಪೇ ಜೋತೆಗಿದೆಯಲ್ಲ//
ನೀರಲಿ ಮೂಡಿದ ನಿನ್ನ ಹೆಸರು,
ಗಾಳಿಯಲಿ ಬರೆದ ನನ್ನುಸಿರಲಿ/
ಹುಟ್ಟಿಸುತಿರಲಿ ಹೀಗೆಯೇ ರೋಮಾಂಚನ,
ಹಗಲ ಹೊಳಪೇ ತುಂಬಿರಲಿ ನಿನ್ನುರುಳಲೂ ಅನುಕ್ಷಣ//
27 December 2009
ನೀ ಬಾಡದಿರು ನಿನ್ನ ನೆನಪುಗಳಂತೆ...
ನನ್ನ ಮನದ ಗೂಡಲ್ಲಿ ನೀನು ಬಂದು ನಿಂತಾಗ,
ಮನದ ಮನೆಯ ಹೊಸ್ತಿಲಲಿ ನಿನ್ನ ನೆರಳು ಬಿದ್ದಾಗ/
ಎದೆಯ ಚಿಪ್ಪಲಿ ಬಿದ್ದ ಹನಿಗಳೆಲ್ಲ ಮುತ್ತಾಯ್ತು,
ಮುತ್ತೆ ಮತ್ತಲಿ ಹೊಳೆವ ನೆನಪುಗಳ ನತ್ತಾಯ್ತು//
ಮನದ ಮನೆಯ ಹೊಸ್ತಿಲಲಿ ನಿನ್ನ ನೆರಳು ಬಿದ್ದಾಗ/
ಎದೆಯ ಚಿಪ್ಪಲಿ ಬಿದ್ದ ಹನಿಗಳೆಲ್ಲ ಮುತ್ತಾಯ್ತು,
ಮುತ್ತೆ ಮತ್ತಲಿ ಹೊಳೆವ ನೆನಪುಗಳ ನತ್ತಾಯ್ತು//
08 December 2009
ಎದೆ ಗೂಡಲ್ಲಿ ಮಂಕು ದೀಪ.....
ಸುಳಿದಾಡದೆ ಸದ್ಧಾದ ಹಾಗೆ,
ಮರೆತೆಲ್ಲೋ ಕಳೆದೆ ಹೋದ ಹಾಗೆ/
ಮನಸಿನ ಗಣಿಯಾಳದಲ್ಲಿ,
ಮುಕ್ಕಾಗದೆ ಉಳಿದದ್ಧನ್ನು
ನೆನಪೆನ್ನಲೇ.....ಬರಿದೆ ನಿರೀಕ್ಷೆಯೆನ್ನಲೆ?//
25 November 2009
ನೆನಪಾಗಿ ಕಾಡಿದೆ....
ಮರಳಿ ಬಾರದ ಹಾಗೆ,
ಭಾವನೆಗಳ ಒದ್ದು ಹೀಗೆ/
ಹೋದಮೇಲೂ....
ನೋವಿನ ಸೆಳಕಾಗಿ ಕಾಡುತಿದೆ
ನಿನ್ನದೇ ನೆನಪು//
ಭಾವನೆಗಳ ಒದ್ದು ಹೀಗೆ/
ಹೋದಮೇಲೂ....
ನೋವಿನ ಸೆಳಕಾಗಿ ಕಾಡುತಿದೆ
ನಿನ್ನದೇ ನೆನಪು//
09 November 2009
ಏಕಾಂತದ ನಿಟ್ಟುಸಿರು...
ಆಗತಾನೆ ಅರಳಿದ ಪಾರಿಜಾತದ ಮೇಲೆ,
ಇರುಳು ಹನಿದ ಹನಿ ಇಬ್ಬನಿ/
ಹೂವ ಮೋಹಕೆ ಸೆರೆಯಾಗಿ...
ಅದರಲೇ ಕರಗಿ ಲೀನವಾಯ್ತು//
ಇಬ್ಬನಿಯ ಹೊದಿಕೆ ಕಸಿಯಲು ಬಾನಿಗೂ ಭೂಮಿಗೂ ನಡುವೆ ,
ಹುಸಿ ಗುದ್ದಾಟ/
ನೋಡಿ ಕಲಿಯ ಬಾರದೆ ವಿವೇಕ?...
ಬೆಚ್ಚಗೆ ನಿನ್ನನೇ ಹೊದ್ದ ನನ್ನ...ಇಬ್ಬರಿಗೂ ಸಮಪಾಲು//
ಸ್ಪರ್ಶಕ್ಕೊಂದು ಅರ್ಥ,
ಸಿಕ್ಕಾಗಲೆಲ್ಲ ಜಗಳವನ್ನೇ ಅಭಿನಯಿಸಿದರೂ...ಚೂರೂ ಕುಂದಿಲ್ಲ ನಿನ್ನೆಡೆಗಿನ ಪ್ರೀತಿ/
ಹೇಳೋಕೆ ಬರೋದಿಲ್ಲ ಆದರೇನು?
ನೀನಾದರೂ ಒದಬಾರದಿತ್ತೆ ನನ್ನ ಕಣ್ಣಿನ ಭಾಷೆ?//
ಜೀವಿಸೋಕೆ ಇರುವ ಏಕೈಕ ಕಾರಣ ನೀನೆ,
ನನ್ನ ಬದುಕ ಗುರಿಯ ಕೊನೆ/
ಒಂಟಿಯಾಗೆ ಕೊನೆಯುಸಿರೆಳೆವಾಗ ಮುಗುಳ್ನಗಲು ,
ನಿನ್ನವೆರಡು ಕಂಗಳಿದ ಜಾರೋ ಬಿಸಿ ಹನಿಗಳು...ನನ್ನ ಕೆನ್ನೆಗಳ ತೋಯಿಸಲಿ ಸಾಕು//
ನಡುವೆ ತುಸು ಗಾಳಿಯೂ ಸುಳಿಯದಂತೆ,
ತಬ್ಬಿಕೊಳ್ಳುವ ಆಸೆ/
ಅದ ನೆರವೇರಿಸಲಾದರೂ ನೀ ಬಂದೆ ಬರುವೆ,
ನನಗಿದೆ ಆ ಭರವಸೆ//
ಬೀಸುವ ಗಾಳಿಯ ಬಿಸಿಯುಸಿರು,
ಹದ ಬಿದ್ದ ಮಳೆಗೆ ಚಿಮ್ಮಿ ಚಿಗುರೊಡೆದ ಹಸಿರು/
ನೇಗಿಲು ಸೀಳಿ ನೋಯಿಸಿದರೂ...
ಒಡಲು ತುಂಬಿ ಮುಗುಳ್ನಗುವ ಇಳೆಯ ಬಸಿರು,
ನನ್ನ ಒಂಟಿ ಬಾಳಲಿ...ನನಗೆ ನೀನು ,ನಿನ್ನ ನೆನಪು//
ಕಣ್ಣನ್ಚಿಂದ ಸುರಿದ ಸೋನೆ,
ನಿಶ್ಚಲ ಮೌನದ ಕೊಳವ ಕಲಕಿ...ಉಮ್ಮಳಿಸಿ ಬಂದ ಬಿಕ್ಕಳಿಕೆ/
ಒಬ್ಬಂಟಿತನದ ನೋವ ಮರೆಸೋ,
ಆಪ್ತ ಸಂಗಾತಿಗಳಾದವು//
ಇರುಳು ಹನಿದ ಹನಿ ಇಬ್ಬನಿ/
ಹೂವ ಮೋಹಕೆ ಸೆರೆಯಾಗಿ...
ಅದರಲೇ ಕರಗಿ ಲೀನವಾಯ್ತು//
ಇಬ್ಬನಿಯ ಹೊದಿಕೆ ಕಸಿಯಲು ಬಾನಿಗೂ ಭೂಮಿಗೂ ನಡುವೆ ,
ಹುಸಿ ಗುದ್ದಾಟ/
ನೋಡಿ ಕಲಿಯ ಬಾರದೆ ವಿವೇಕ?...
ಬೆಚ್ಚಗೆ ನಿನ್ನನೇ ಹೊದ್ದ ನನ್ನ...ಇಬ್ಬರಿಗೂ ಸಮಪಾಲು//
ಸ್ಪರ್ಶಕ್ಕೊಂದು ಅರ್ಥ,
ಸಿಕ್ಕಾಗಲೆಲ್ಲ ಜಗಳವನ್ನೇ ಅಭಿನಯಿಸಿದರೂ...ಚೂರೂ ಕುಂದಿಲ್ಲ ನಿನ್ನೆಡೆಗಿನ ಪ್ರೀತಿ/
ಹೇಳೋಕೆ ಬರೋದಿಲ್ಲ ಆದರೇನು?
ನೀನಾದರೂ ಒದಬಾರದಿತ್ತೆ ನನ್ನ ಕಣ್ಣಿನ ಭಾಷೆ?//
ಜೀವಿಸೋಕೆ ಇರುವ ಏಕೈಕ ಕಾರಣ ನೀನೆ,
ನನ್ನ ಬದುಕ ಗುರಿಯ ಕೊನೆ/
ಒಂಟಿಯಾಗೆ ಕೊನೆಯುಸಿರೆಳೆವಾಗ ಮುಗುಳ್ನಗಲು ,
ನಿನ್ನವೆರಡು ಕಂಗಳಿದ ಜಾರೋ ಬಿಸಿ ಹನಿಗಳು...ನನ್ನ ಕೆನ್ನೆಗಳ ತೋಯಿಸಲಿ ಸಾಕು//
ನಡುವೆ ತುಸು ಗಾಳಿಯೂ ಸುಳಿಯದಂತೆ,
ತಬ್ಬಿಕೊಳ್ಳುವ ಆಸೆ/
ಅದ ನೆರವೇರಿಸಲಾದರೂ ನೀ ಬಂದೆ ಬರುವೆ,
ನನಗಿದೆ ಆ ಭರವಸೆ//
ಬೀಸುವ ಗಾಳಿಯ ಬಿಸಿಯುಸಿರು,
ಹದ ಬಿದ್ದ ಮಳೆಗೆ ಚಿಮ್ಮಿ ಚಿಗುರೊಡೆದ ಹಸಿರು/
ನೇಗಿಲು ಸೀಳಿ ನೋಯಿಸಿದರೂ...
ಒಡಲು ತುಂಬಿ ಮುಗುಳ್ನಗುವ ಇಳೆಯ ಬಸಿರು,
ನನ್ನ ಒಂಟಿ ಬಾಳಲಿ...ನನಗೆ ನೀನು ,ನಿನ್ನ ನೆನಪು//
ಕಣ್ಣನ್ಚಿಂದ ಸುರಿದ ಸೋನೆ,
ನಿಶ್ಚಲ ಮೌನದ ಕೊಳವ ಕಲಕಿ...ಉಮ್ಮಳಿಸಿ ಬಂದ ಬಿಕ್ಕಳಿಕೆ/
ಒಬ್ಬಂಟಿತನದ ನೋವ ಮರೆಸೋ,
ಆಪ್ತ ಸಂಗಾತಿಗಳಾದವು//
Subscribe to:
Posts (Atom)