31 October 2015

ವಲಿ - ೨೦







ಮಸೀದಿಯಲ್ಲಿ ಪ್ರಾರ್ಥನೆಯ ಹೊತ್ತಿನಲ್ಲಿ ಮಹಮದ್ ತನ್ನ ಅನುಯಾಯಿಗಳನ್ನ ಉದ್ದೇಶಿಸಿ "ಆಕ್ಷೇಪಣೆ, ಪ್ರಚೋದನೆ ಹಾಗೂ ಪ್ರೋತ್ಸಾಹ"ಗಳನ್ನೊಳಗೊಂಡ ಭಾವಪೂರ್ಣ ಪ್ರವಚನಗಳನ್ನು ನೀಡುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಡೋಝಿ. ತನ್ನ ಭಾವಪೂರ್ಣ ಬೋಧನಾ ಶೈಲಿಯಿಂದ ಅವರೆಲ್ಲರನ್ನೂ ಆತ ಪರವಶಗೊಳಿಸುತ್ತಿದ್ದ. ಅವರೊಳಗಿನ ಭಾವನೆಗಳೂ ಸಹ ಈ ಸತ್ವಪೂರ್ಣ ಪ್ರವಚನಗಳಿಂದ ಉದ್ರೇಕಗೊಳ್ಳುತ್ತಿತ್ತು. ನರಕದ ಭಯಂಕರ ಜ್ವಾಲೆ ಸೂಸುವ ಬಾಗಿಲ ವರ್ಣನೆಯನ್ನ ಅವನ ಬಾಯಿಂದ ಕೇಳುವಾಗಲೆ ಅನೇಕರು ಭಯಭೀತರಾಗಿ ತತ್ತರಿಸುತ್ತಿದ್ದರು. ಸ್ವರ್ಗದ ವರ್ಣನೆ ಅವರೆಲ್ಲರ ಮನಸ್ಸಿಗೆ ಶಜವಾಗಿ ಆಹ್ಲಾದವನ್ನೀಯುತ್ತಿದ್ದವು. ಹೀಗೆ ಭಾವೋದ್ರೇಕಿಸಿ ಆತ ಅನೇಕರ ಅಭಿಮಾನ ಗಳಿಸಿಕೊಳ್ಳುವುದರಲ್ಲಿ ಸಫಲನಾಗಿದ್ದ.



ಕೇವಲ ಭಾವೋದ್ರೇಕಿಸುವುದು ಮಾತ್ರವಲ್ಲ, ಇದರೊಂದಿಗೆ ತನ್ನ ನಿರಂಕುಶ ಅಧಿಕಾರ ಚಲಾವಣೆ ಹಾಗೂ ನ್ಯಾಯ ಪಾಲನೆಯಲ್ಲೂ ಆತ ಹಿಡಿತ ಸಾಧಿಸಿದ್ದ. ಇದಕ್ಕೊಂದು ಉದಾಹರಣೆಯನ್ನ ಇತಿಹಾಸಕಾರ ಅಲ್ ಮುಬಾರಖಿ ನೀಡುತ್ತಾನೆ. ಅಲ್ ಮುಜುದ್ದೀರ್ ಎನ್ನುವ ಔಸ್ ಬುಡಕಟ್ಟಿಗೆ ಸೇರಿದ್ದ ವ್ಯಕ್ತಿಯೊಬ್ಬ ತನ್ನ ಮತಾಂತರಕ್ಕೂ ಮೊದಲು ತನ್ನ ವಿರೋಧಿ ಖಜ್'ರಝ್ ಬುಡಕಟ್ಟಿಗೆ ಸೇರಿದ್ದ ಸುವೈದ್ ಎನ್ನುವ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ. ಅರೇಬಿಯಾದ ಸಹಜ ನಾಗರೀಕ ನಡುವಳಿಕೆಯಂತೆ ಸುವೈದ್'ನ ಮಗ ಅಲ್ ಹಾರಿಥ್ ತನ್ನ ತಂದೆಯ ಸಾವಿಗೆ ತಕ್ಕ ಪ್ರತಿಕಾರ ಮಾಡಲು ಕಾತರಿಸುತ್ತಲಿದ್ದ. ಆದರೆ ಕಾಲಾಂತರದಲ್ಲಿ ಇಬ್ಬರೂ ಅನುಕ್ರಮವಾಗಿ ಇಸ್ಲಾಮನ್ನ ಸ್ವೀಕರಿಸಿದ್ದ ನಂತರ ಮುಸಲ್ಮಾನನೊಬ್ಬ ಇನ್ನೊಬ್ಬ ಮುಸಲ್ಮಾನನ ಕೊಲೆ ಮಾಡುವ ಹಾಗಿಲ್ಲ ಎನ್ನುವ ನಿಯಮಕ್ಕೆ ಇಷ್ಟವಿಲ್ಲದಿದ್ದರೂ ಬದ್ಧನಾಗುಳಿಯಬೇಕಾಯಿತು.



ಆದರೆ ದ್ವೇಷ ಎನ್ನುವ ಧಗೆ ಅವನನ್ನ ನಿತ್ಯ ಸುಡುತ್ತಿತ್ತು. ಹೀಗಾಗಿ ಅವ ಅಂತಹ ಅಪರೂಪದ ಅವಕಾಶವೊಂದಕ್ಕಾಗಿ ಪ್ರತಿಕಾರಕ್ಕಾಗಿ ಹೊಂಚು ಹಾಕಿ ಕಾದಿದ್ದ. ಅಂತಹ ಅವಕಾಶ ಅವನಿಗೆ ಸಿಕ್ಕಿತು ಕೂಡಾ. ಓಹೋದ್ ಯುದ್ಧ ಭೂಮಿಯಲ್ಲಿ ಜೊತೆಜೊತೆಯಾಗಿಯೆ ಮುಸಲ್ಮಾನ ಪಡೆಯ ಯೋಧರಾಗಿ ಅವರಿಬ್ಬರೂ ಹೋರಾಡಲು ತೆರಳಿದ್ದರು. ಅಲ್ಲಿ ಸಮಯ ಸಾಧಿಸಿ ಅಲ್ ಮಜುದ್ದಾರ್'ನನ್ನು ಹತ್ಯೆ ಮಾಡಿದ ಹಾರಿಥ್. ಆದರೆ ಅವನ ದುರಾದೃಷ್ಟಕ್ಕೆ ಇನ್ನೊಬ್ಬ ಸಹ ಯೋಧ ಅದನ್ನ ಗಮನಿಸಿ ಅದನ್ನ ಮುಂದೆ ಮಹಮದನ ಗಮನಕ್ಕೆ ತಂದ. ಹೀಗಾಗಿ ಶತ್ರು ದಾಳಿಯಿಂದ ಈ ಸಾವು ಸಹಜವಾಗಿ ಉಂಟಾಗಿದೆ ಎನ್ನುವ ಕಥೆ ಕಟ್ಟುವ ಹಾರಿಥ್ ಆಲೋಚನೆ ಹಳಿ ತಪ್ಪಿತು.


ಈ ಯುದ್ಧ ಮುಗಿಸಿ ಬರುವಾಗ ಮಹಮದ್ ಸಹ ಸೋತು ಸುಣ್ಣವಾಗಿ ದೈಹಿಕವಾಗಿಯೂ ಘಾಸಿಯಾಗಿದ್ದರಿಂದ ಈ ಬಗ್ಗೆ ವಿಚಾರಣೆ ನಡೆಸುವ ಗೋಜಿಗೆ ಹೋಗಿರಲಿಲ್ಲ. ಇನ್ನು ಮರಳಿ ಬಂಡ ನಂತರ ಹಾರಿಥ್ ಕೂಡಾ ಕೆಲಕಾಲ ಮದೀನ ಬಿಟ್ಟು ತನ್ನ ಹಳ್ಳಿಗೆ ತೆರಳಿದ್ದ. ಅಲ್ಲಿಗೆ ಹೋಗಿದ್ದವ ಮತ್ತೆ ಮರಳಿದಾಗ ತನಗೆ ವಿಪತ್ತು ಕಾದಿದೆ ಎನ್ನುವ ವಿಚಾರ ಅವನ ಅರಿವಿಗೆ ಬಂದಿತು. ಆದರೂ ಧೈರ್ಯ ಮಾಡಿ ಆತ ಮಹಮದನ ಸನ್ನಿಧಾನಕ್ಕೆ ತೆರಳಿ ತನ್ನ ಶರಣಾಗತಿಯನ್ನ ಪ್ರಕಟಿಸಿದ ಹಾಗೂ ಪ್ರಾಮಾಣಿಕವಾಗಿ ಆದ ಅಕೃತ್ಯದ ಹಿನ್ನೆಲೆ ವಿವರಿಸಿ ದೀನನಾಗಿಯೆ ಕ್ಷಮೆ ಬೇಡಿದ. ವಾಸ್ತವವಾಗಿ ಅರೇಬಿಯಾದ ಬುಡಕಟ್ಟುಗಳ ನಡುವಿನ ಗುಣ ನಡತೆಯ ನೈತಿಕತೆಯ ಮಾನದಂಡದಲ್ಲಿ ಅವನ ಈ ನಡುವಳಿಕೆಯಲ್ಲಿ ತಪ್ಪೇನೂ ಇರಲಿಲ್ಲ.



ಆದರೆ ಮಹಮದ್ ಆ ನೀತಿಯನ್ನ ಬದಲಿಸಿದ್ದ. ಹೀಗಾಗಿ ಇತ್ತ ಹಾರಿಥ್ ತಲೆ ಕಾಣುತ್ತಿದ್ದಂತೆ ಕ್ಷುದ್ರನಾದ ಆತ ಔಸ್ ಬುಡಕಟ್ಟಿನ ಮುಖಂಡ ಜಮೀಮ್'ನನ್ನು ಕಂಡು ತಕ್ಷಣ ಈ ಅಲ್ ಮುಜುದ್ದರ್ ಕೊಲೆಗಡುಕ ಅಲ್ ಹಾರಿಥ್'ನನ್ನು ಓಹೋದ್ ಯುದ್ಧದಲ್ಲಿ ಮಾಡಿದ ಕೊಲೆ ಆರೋಪದ ಕಾರಣ ಮಸೀದಿ ಬಾಗಿಲ ಬಳಿ ಕರೆದೊಯ್ದು ಇವನ ತಲೆ ಕಡೆಯಿರಿ ಎಂದು ಆಜ್ಞಾಪಿಸಿದ. ಅಲ್ ಹಾರಿಥ್ ಕ್ಷಮೆಗಾಗಿ ಪರಿಪರಿಯಾಗಿ ಯಾಚಿಸಿದ. ಇದಕ್ಕೆ ಬದಲಾಗಿ ಮಹಮದ್ ಹೂಡುವ ಯಾವುದೆ ಬೇಡಿಕೆಯನ್ನ ಪೂರೈಸಲು ತಾನು ಸಿದ್ಧನೆನ್ನುವುದನ್ನೂ ಸಹ ಆತ ಖಚಿತ ಪಡಿಸಿದ. ಆದರೆ ಮನ ಕರಗದ ಮಹಮದ್ ತನ್ನ ಮರಣದಂಡನೆಯ ಆಜ್ಞೆಯನ್ನೆ ಪುನರುಚ್ಛರಿಸಿದ. ಆತನ ಯಾವುದೆ ಯಾಚನಾಪೂರಿತ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಅದರಂತೆ ಜಮೀಮ್ ಆತನನ್ನ ಎಳೆದೊಯ್ದು ಮಸೀದಿ ಬಳಿ ತಲೆ ಕಡಿವ ಕಾರ್ಯ ನೆರವೇರಿಸಿದ.  ಇದನ್ನ ಪ್ರತ್ಯಕ್ಷವಾಗಿ ಕಂಡ ಸಾಕ್ಷಿಗಳಾದ ಸತ್ತವನ ಮಕ್ಕಳು ಹೆದರಿ ಹೌಹಾರಿದರು. ಮಹಮದನಿಗೆ ಎದುರು ಮಾತನಾಡುವ ಧೈರ್ಯ ಅವರ್ಯಾರಿಗೂ ಉಳಿದಿರಲಿಲ್ಲ. ಹೀಗೆ ಧಾರ್ಮಿಕ ನೇತಾರನಾಗಿ ತನ್ನ ಪರಮಾಧಿಕಾರವನ್ನ ಮಹಮದ್ ಸ್ಥಾಪಿಸಿದ ಎನ್ನುತ್ತದೆ "ಆಕ್ಸ್'ಫರ್ಢ್ ಎನ್'ಸೈಕ್ಲೋಪೀಡಿಯಾ ಆಫ್ ಮಾರ್ಡರ್ನ್ ಇಸ್ಲಾಮಿಕ್ ವರ್ಡ್" ಹೊತ್ತಗೆಯ ನೂರಾ ಐವತ್ತೊಂಬತ್ತನೆಯ ಪುಟದ ವಿವರಣೆ.


ಕ್ರಮೇಣ ಮಹಮದನ ಅನೇಕ ನಡೆ ನುಡಿಗಳು ಮುಸಲ್ಮಾನರ ಜೀವನದಲ್ಲಿ ಇಂದಿಗೂ ಜಾರಿಯಲ್ಲಿರುವ ಸಾಮಾಜಿಕ ಕಟ್ಟಳೆಗಳಾಗಿ ರೂಪುಗೊಂಡವು. ಕಾಲಕಾಲದಲ್ಲಿ ಉದ್ಭವಿಸಿದ ಅನೇಕ ಸಾಮಾಜಿಕ ಸಮಸ್ಯೆಗಳ ನಿರ್ವಹಣೆಗೆ ಮಹಮದ್ ತೆಳೆದ ನಿಲುವುಗಳು ಹಾಗೂ ಗೊಂದಲಗಳ ನಿವಾರಣೆಗೆ ಆತ ರೂಪಿಸಿದ ಕಟ್ಟಳೆಗಳು ದೈವವಾಣಿಯ ಮೊಹರಿನೊಂದಿಗೆ ಚಿರ ನೀತಿಗಳಾಗಿ ಚಾಲ್ತಿಗೆ ಬಂದವು. ತನ್ನ ಮಹಮದ್ ಕೃತಿಯ ಪುಟ ಸಂಖ್ಯೆ ಇನ್ನೂರಾ ನಲವತ್ತೇಳರಲ್ಲಿ ಮೌಲಾನಾ ವಾಹಿದುದ್ದೇನ್ ಖಾನ್ ಈ ಬಗ್ಗೆ ಒಂದು ದೃಷ್ಟಾಂತ ನೀಡಿದ್ದಾರೆ.



ಓಹೋದ್ ಯುದ್ಧದಲ್ಲಿ ಹೋರಾಡಿ ಮಡಿದಿದ್ದ ಮುಸಲ್ಮಾನ ಯೋಧ ಸಾಅದ್ ಎಂಬ ಯೋಧನ ಪತ್ನಿ ಮತ್ತು ಅವಳೆರಡು ಮಕ್ಕಳು ನಿರಾಶ್ರಿತರಾಗಿದ್ದರು. ಪತಿಯ ಸಾವಿನ ನಂತರ ಅವನ ಆಸ್ತಿಯನ್ನ ಆತನ ಅಣ್ಣ ಕಬಳಿಸಿ ಇವರನ್ನ ಬೀದಿಗೆ ತಳ್ಳಿ ನಿರ್ಗತಿಕರನ್ನಾಗಿಸಿ ಬಿಟ್ಟಿದ್ದ. ಅವಳು ಇದನ್ನ ಪ್ರತಿಭಟಿಸಿ ನಿಂತಳು. ಅವಳಿಗೆ ಅದು ಅನಿವಾರ್ಯವೂ ಆಗಿತ್ತು. ಸೀದಾ ಮಹಮದನ ಎದುರು ಆಕೆ ಈ ದೂರನ್ನ ಒಯ್ದು ನ್ಯಾಯಕ್ಕಾಗಿ ಪ್ರಾರ್ಥಿಸುವಂತೆಯೂ ಇರಲಿಲ್ಲ. ಲಿಂಗಾನುಸಾರ ಆಕೆಗೆ ಆ ಅಧಿಕಾರವಿರಲಿಲ್ಲ. ಹೀಗಾಗಿ ಬುದ್ಧಿವಂತಳಾದ ಅವಳೊಂದು ಉಪಾಯ ಹೂಡಿದಳು. ಮಹಮದನಿಗೆ ಆಕೆ ಊಟದ ಆಹ್ವಾನವನ್ನ ಕಳುಹಿಸಿದಳು. ಅವಳ ಆಮಂತ್ರಣವನ್ನ ಸ್ವೀಕರಿಸಿದ ಮಹಮದ ಗೊತ್ತಾದ ದಿನ ತನ್ನ ಇಪ್ಪತ್ತು ಅನುಯಾಯಿಗಳೊಂದಿಗೆ ಆಕೆಯ ಮನೆಗೆ ಬಂದು ಬಡವಿಯಾಗಿದ್ದ ಆಕೆಯ ಆತಿಥ್ಯವನ್ನು ಸ್ವೀಕರಿಸಿದ. ತನ್ನ ಪತಿಯ ಸಾವಿನ ಶೋಕವನ್ನ ಆ ಸಂದರ್ಭ ಬಳಸಿಕೊಂಡ ಆಕೆ ಹೊರ ಹಾಕಿ ಆಕ್ರಂದಿಸಿದಳು. ಕಣ್ಣೀರು ಮಿಡಿದ ಆಕೆಯನ್ನ ಕಾಣುವಾಗ ಮಹಮದನ ಮನಸ್ಸು ಸಹ ಕರಗಿತು. ತಾನೂ ಕೊಂಛ ಶೋಕಿಸಿ ಸಂತಾಪ ಸೂಚಿಸಿದ.


ಆಗ ಆಕೆ ನಡೆದ ವಾಸ್ತವವನ್ನ ಬಿಡಿಸಿಟ್ಟಳು. ತನ್ನ ಹಕ್ಕಿನ ಆಸ್ತಿಯನ್ನ ಬಾವ ಕಬಳಿಸಿ ಮಾಡಿದ ಅನ್ಯಾಯವನ್ನ ಮನಮುಟ್ಟುವಂತೆ ಬಣ್ಣಿಸಿದಳು. ಇದನ್ನು ಆಲಿಸಿದ ಆತನ ಮನ ಮಿಡಿಯಿತು. ಅದಕ್ಕಾತ 'ದೇವರು ಆಸ್ತಿ ಹಂಚಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವನು, ಆದರೆ ಈವರೆಗೆ ಅಂತಹ ಯಾವುದೆ ದೈವವಾಣಿ ನನಗೆ ದೊರಕಿಲ್ಲ" ಎಂದು ಹೇಳಿ ಆಕೆಯನ್ನ ತಪ್ಪದೆ ಮರುದಿನ ತನ್ನ ಬಿಡಾರಕ್ಕೆ ಬರುವಂತೆ ಆಹ್ವಾನಿಸಿ ಹಿಂದಿರುಗಿದ.



ಆಕೆ ಮರುದಿನ ಆತನ ಹೊಸ್ತಿಲಲ್ಲಿ ಕಾಣಿಸುವಾಗಲೆ ಆತನ ಮೈ ನಡುಗಿದಂತಾಗಿ ಆತ ಆವೇಶಭರಿತನಾದ. ಆತನ ನಾಲಗೆಯಿಂದ ಸ್ಪಷ್ಟವಾಗಿ ದೈವವಾಣಿ ಮೊಳಗತೊಡಗಿತು!. ಉದ್ವೇಗದಲ್ಲಿ ಅವನ ಹಣೆ ಬೆವರುಗಟ್ಟಿಹೋಗಿತ್ತು. ತನ್ನೆದುರು ಸಾಅದನ ಅಣ್ಣನನ್ನು ಕರೆತರಲು ಆಜ್ಞಾಪಿಸಿದ ಮಹಮದ್. ಆತ ಅಲ್ಲಿಗೆ ಬಂದೊಡನೆ "ಸಾಅದ್ ಬಿಟ್ಟು ಹೋದ ಒಟ್ಟು ಆಸ್ತಿಯ ಮೂರನೆ ಎರಡು ಭಾಗಗಳನ್ನು ಅವನ ಸಂತಾನಕ್ಕೂ, ಎಂಟನೆ ಒಂದು ಭಾಗವನ್ನು ಅವನ ವಿಧವೆಗೂ ಹಾಗೂ ಉಳಿದದ್ದು ಅದೇನೆ ಇದ್ದರೂ ಅದನ್ನ ಅವನಣ್ಣನಿಗೂ ಕೊಡ ತಕ್ಕಡ್ಡು" ಎನ್ನುವ ಅಂತಿಮ ತೀರ್ಪನ್ನ ಆತ ಹೊರಡಿಸಿದ. ಇದರಿಂದ ಸಂತೃಪ್ತಳಾದ ಆಕೆ "ತಕ್ಬೀರ್" ಅಂದರೆ ದೇವರು ದೊಡ್ಡವನು ಎಂದು ಆನಂದಭರಿತಳಾಗಿ ಕೂಗಿದಳು. ಮುಂದೆ ಆಸ್ತಿಯ ಹಂಚಿಕೆ ವಿಷಯವಾಗಿ ಮಹಮದ್ ಹೊರಡಿಸಿದ ಅನೇಕ ನಿರ್ಣಯಗಳಿಗೆ ಇದು ಮೂಲವಾಯಿತು.



ಕ್ರಿಸ್ತಶಕ ೬೨೫ರ ಏಪ್ರಿಲ್ ತಿಂಗಳಿನಲ್ಲಿ ಮಹಮದ್ ಅರಬ್ಬಿಗಳೆ ಆಗಿದ್ ಬೆನ್ ಅಸದ್ ಬುಡಕಟ್ಟಿನವರೊಂದಿಗೆ ಕಾಳಗ ಜರುಗಿಸಿದ. ಈ ಬೆನ್ ಅಸದರು ಆರ್ಥಿಕವಾಗಿ ಬಲವಾಗಿದ್ದು ಖುರೈಷಿಗಳೊಂದಿಗೆ ಸ್ನೇಹಪೂರ್ಣವಾಗಿದ್ದುದೆ ಈ ಕಾಳಗ ಶುರುವಾಗಲು ಕಾರಣವಾಗಿತ್ತು. ಅರೆಬಿಯಾದ ನಡು ಭಾಗದ ಮರುಭೂಮಿ ಅವರ ಹಿಡಿತದಲ್ಲಿತ್ತು. ಅವರೂ ಕೂಡ ಖುರೈಷಿಗಳಂತೆ ಮಹಮದ್ ಎಂದರೆ ಸಿಡಿದು ಬೀಳುತ್ತಿದ್ದರು. ಆತನ ಏಳ್ಗೆ ಅವರಲ್ಲಿ ಅಸಹನೆ ಮೂಡಿಸಿತ್ತು. ಸೂಕ್ತ ಸಮಯ ಕಾದು ಅವರೊಡನೆ ಸೇರಿ ಮದೀನವನ್ನು ಆಕ್ರಮಿಸುವ ಇರಾದೆ ಅವರಿಗಿತ್ತು. ಈ ಸಂಗತಿ ತನ್ನ ಗೂಢಚರರ ಮೂಲಕ ಮಹಮದನ ಅರಿವಿಗೆ ಬಂತು. ಹೀಗಾಗಿ ಅವರ ಮೇಲೆ ತಾನೆ ಮೊದಲು ಬೀಳಲು ನಿರ್ಧರಿಸಿದ ಮಹಮದ್ ತನ್ನ ಪಡೆಯನ್ನ ಇದಕ್ಕಾಗಿ ಸಜ್ಜುಗೊಳಿಸಿದ.

ಅಬು ಸೆಲಂ ನೇತೃತ್ವದಲ್ಲಿ ಮಹಮದ್ ನೂರಾ ಐವತ್ತು ಯೋಧರ ಪಡೆಯನ್ನ ಬೆನ್ ಅಸಾದರ ಮೇಲೆ ಬೀಳಲು ಕಳುಹಿಸಿದ. ಈ ಧಾಳಿಯ ವಿಷಯವನ್ನ ಗುಪ್ತವಾಗಿಡಲಾಗಿತ್ತು. ಆದರೆ ಅವರ ದುರಾದೃಷ್ಟಕ್ಕೆ ಆಗ ಯಾವೊಬ್ಬ ಶತ್ರುವೂ ಕಾಣ ಸಿಗಲಿಲ್ಲ. ಆದರೆ ಅವರ ಒಂಟೆಗಳು ಮೇಯುತಿದ್ದವು ಇವರ ಕೈವಶವಾಯಿತು. ಆ ಒಂಟೆಗಳ ಹಿಂಡನ್ನ ಮದೀನದತ್ತ ಓಡಿಸಿಕೊಂಡು ಬಂದ ಅಬು ಸೆಲಂ ಸಂಪ್ರದಾಯದಂತೆ ಮಹಮದನಿಗೆ ದೇವರ ಹಾಗೂ ಪ್ರವಾದಿಯ ಭಾಗವಾದ ಐದನೆ ಒಂದರಷ್ಟನ್ನೊಪ್ಪಿಸಿ ಉಳಿದದ್ದನ್ನ ಎಲ್ಲರೊಂದಿಗೂ ಸರಿಸಮನಾಗಿ ಹಂಚಿಕೊಂಡ.


ಬೆನ್ ಅಸದರಂತೆಯೆ ಅಹ್ಯಾದ್ ಎನ್ನುವ ಇನ್ನೊಂದು ಅರಬ್ಬಿ ಬುಡಕಟ್ಟಿನವರೂ ಮಹಮದನ ಪಾರಮ್ಯವನ್ನ ಮುಲಾಜಿಲ್ಲದೆ ತಿರಸ್ಕರಿಸಿ ವಿರೋಧಿಸುತ್ತಿದ್ದರು. ಆವರು ಮೆಕ್ಕಾದಿಂದ ಮದೀನಾ ಹಾದಿಯಾಗಿ ಬರುವಾಗ ಎರಡು ದಿನ ಅಂತರವಾಗುವಲ್ಲಿ ತಮ್ಮ  ವಸತಿ ನಿರ್ಮಿಸಿಕೊಂಡು ಅನಾದಿ ಕಾಲದಿಂದ ವಾಸಿಸುತ್ತಿದ್ದರು. ಸುಫ್ಯಾನ್ ಇಬ್ನ್ ಖಾಲಿದ್ ಅವರ ಮುಖಂಡನಾಗಿದ್ದ. ಓಹೋದ್ ಯುದ್ಧದ ಖುರೈಷಿ ಪರ ಪಡೆಯ ಸಕ್ರಿಯ ಯೋಧನಾಗಿದ್ದ ಆತ ಮಹಮದನ ಮೇಲೆ ಮುಗಿ ಬೀಳುವ ಹಂಚಿಕೆಯೊಂದನ್ನ ಹಾಕಿದ್ದ. ಈ ಆಕ್ರಮಣದ ಯೋಜನೆಯ ಸಂಗತಿ ಪುನಃ ಗೂಢಚರರ ಮೂಲಕ ಮಹಮದನ ಅರಿವಿಗೆ ಬಂದು ಅವರಿಗಿಂತ ಮೊದಲು ತಾನೆ ಮುಗಿಬಿದ್ದು ಅಹ್ಯಾನರ ಸೊಕ್ಕಡಗಿಸಲು ಮಹಮದ್ ತೀರ್ಮಾನಿಸಿದ.



ಸುಫ್ಯಾನ್ ಇಬ್ನ್ ಖಾಲಿದ್ ಸಾಮಾಜಿಕವಾಗಿ ಅರೆಬಿಯಾದ ಆ ಕಾಲದ ಒಬ್ಬ ಬಲಿಷ್ಠ ಮುಖಂಡನಾಗಿದ್ದ. ಆತನನ್ನ ಕೊಂದು ಕೆಡವಿದರೆ ಆತನ ಬೆಂಬಲಿಗರೆಲ್ಲ ಮೆತ್ತಗಾಗಿಯೆ ಆಗುತ್ತಾರೆ ಎನ್ನುವ ಅಭಿಪ್ರಾಯ ಮಹಮದನದಾಗಿತ್ತು. ಇದಕ್ಕಾಗಿ ಆತ ತನ್ನ ನೆಚ್ಚಿನ ಬಂಟ ಅಬ್ದುಲ್ಲಾ ಇಬ್ನ್ ಓನೈಸನನ್ನು ನೇಮಿಸಿದ. ಅಬ್ದುಲ್ಲ ಮಾರುವೇಷದಲ್ಲಿ ಅಲ್ಲಿಗೆ ಸಾಗಿ ಖಾಲಿದನ ಮನೆಯಲ್ಲಿ ಆಳಾಗಿ ಕೆಲಸಕ್ಕೆ ಸೇರಿದ. ಅನಂತರ ಉಪಾಯದಿಂದ ಸಮಯ ಸಾಧಿಸಿ ಆತನ ತಲೆ ಕಡಿದು ಲಗುಬಗೆಯಿಂದ ಮದೀನದತ್ತ ದೌಡಾಯಿಸಿದ. ತನ್ನನ್ನ ಬೆನ್ನಟ್ಟಿ ಬಂದ ವಿರೋಧಿಗಳಿಂದ ಅತಿ ಚಾಣಾಕ್ಷತೆಯಿಂದ ಪಾರಾಗಿ ಸುರಕ್ಷಿತವಾಗಿ ಮುಟ್ಟಿದ.


ಅಲ್ಲಿ ಮಹ್ಮದನನ್ನು ಭೇಟಿಯಾಗಿ ತನ್ನ ಕಾರ್ಯದ ಯಶಸ್ಸನ್ನು ಅರುಹಿ ಈ ಖಾಲೀದನ ರುಂಡವನ್ನ ಸಾಕ್ಷಿಯಾಗಿ ಆತನ ಮುಂದೆ ಚೆಲ್ಲಿದ. ಆಗ ಸಂಪ್ರೀತನಾದ ಮಹಮದ್ ಓನೈಸನನ್ನು ಉದ್ದೇಶಿಸಿ "ಪುನರುತ್ಥಾನದ ದಿನ, ಇದು ನನ್ನ ಹಾಗೂ ನಿನ್ನ ನಡುವೆ ಜ್ಞಾಪಕಾರ್ತವಾಗಿ ಉಳಿಯುವುದು" ಎಂದವನನ್ನು ಕೊಂಡಾಡಿ ಆಶೀರ್ವದಿಸಿದ! ಅಬ್ದುಲ್ಲಾ ಸಹ ಆ ಖಾಲಿದನನ್ನ ಕೊಂದ ಕತ್ತಿಯನ್ನ ತನಗೆ ಸಂದ ಮೆಚ್ಚುಗೆಯ ಪದಕದಂತೆ ಕೊನೆ ತನಕ ಇಟ್ಟುಕೊಂಡಿದ್ದ. ಆತನ ಸಾವಿನ ನಂತರ ಆತನ ಅಂತಿಮ ಇಚ್ಛೆಯಂತೆ ಆತನ ಹೆಣದೊಂದಿಗೆ ಇದನ್ನೂ ಸಹ ಹೂಳಲಾಯಿತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್.


ಹೀಗೆ ತಾನೆ ಕಳುಹಿಸಿ ಉಪಾಯವಾಗಿ ತನ್ನ ಬಂಟನ ಮೂಲಕ ಮಹಮದ್ ತನ್ನ ವೈರಿಯ ಕೊಲೆ ಮಾಡಿಸಿದ್ದು ಅರೇಬಿಯಾದ  ಯಾರೊಬ್ಬರ ವಿರೋಧವನ್ನೂ ಸಹ ಗಳಿಸದಿದ್ದುದು ಒಂದು ವಿಶೇಷ ಸಂಗತಿಯಾಗಿತ್ತು ಎನ್ನುತ್ತಾರೆ ಸರ್ ಮ್ಯೂರ್. ಆದರೆ ಬೆನ್ ಅಹ್ಯಾನರು ಮಾತ್ರ ನಿರೀಕ್ಷೆಗೆ ವಿರುದ್ಧವಾಗಿ ಸೆಟೆದು ನಿಂತರು. ಅವರಲ್ಲಿ ಪ್ರತಿಕಾರದ ಭಾವ ಕುಡಿಯೊಡೆಯಿತು. ಅವರು ಅದಕ್ಕೆ ತಕ್ಕಂತೆ ಸೇಡು ತೀರಿಸಕು ಹೊಂಚು ಹಾಕುತ್ತಿದ್ದಾಗ ಮಹಮದ್ ತನ್ನ ಆರು ಅನುಯಾಯಿಗಳನ್ನ ಮೆಕ್ಕದತ್ತ ಮತಾಂತರ ಪರಮೋದ್ದೇಶದಿಂದ ಕಳುಹಿಸಿರುವ ಸಂಗತಿ ಅವರಿಗೆ ತಿಳಿದು ಬಂತು. ಉದ್ದೇಶ ಮೆಕ್ಕಾ ಅಸುಪಾಸಿನ ಮಂದಿಯನ್ನ ಪ್ರಭಾವಿಸಿ ತನ್ನ ನೂತನ ಮತಕ್ಕೆ ಸೆಳೆಯುವುದೆ ಆಗಿದ್ದರೂ ಕೂಡ ಅವರು ಮಹಮದನ ಪರ ಬೇಹುಗಾರಿಕೆ ಮಾಡಲು ಬಂದಿರಬಹುದು ಎನ್ನುವ ಶಂಕೆಯೂ ಸಹ ಉಳಿದವರಿಗೆ ಇದ್ದೇ ಇತ್ತು.


ಹೀಗಾಗಿ ಮೆಕ್ಕಾ ಮುಟ್ಟುವ ಮುಂಚೆಯೆ ಅವರನ್ನ ಸೆರೆ ಹಿಡಿಯಲಾಯಿತು. ಯಾವ ವಿಚಾರಣೆಯೂ ಇಲ್ಲದೆ ಬರ್ಬರವಾಗಿ ಶಿಕ್ಷಿಸಿ ಅವರಲ್ಲಿ ನಾಲ್ವರನ್ನ ಸಾವಿನ ಮನೆಗೂ ದೂಡಲಾಯಿತು. ಇನ್ನುಳಿದ ಇಬ್ಬರಲ್ಲಿ ಖೊಬೈಕ್ ಹಾಗೂ ಝೈದ್ ಎನ್ನುವ ಇಬ್ಬರು ಸೇರಿದ್ದರು. ಮೆಕ್ಕಾದ ಆರಾಧನಾ ದಿವಸಗಳು ನಡೆಯುತ್ತಿದ್ದುದರಿಂದ ಅದು ಮುಗಿಯುವವರೆಗೆ ವಿನಾಯತಿ ನೀಡಿ ಅನಂತರ ಮುಲಾಜಿಲ್ಲದೆ ಅವರ ಕತ್ತನ್ನೂ ಕೂಡಾ ಕತ್ತರಿಸಿ ಹಾಕಲಾಯಿತು. ಸಾಯುವ ಮುನ್ನ ಬಡಪಾಯಿಗಳು ತಮ್ಮನ್ನ ವ್ಯಥಾ ಹಿಂಸಿಸಿ ಹತ್ಯೆ ಮಾಡಿದ ಬೆನ್ ಅಹ್ಯಾನರಿಗೆ ಹಿಡಿ ಹಿಡಿ ಶಾಪ ಹಾಕುತ್ತಲೆ ಸತ್ತರು. ಅದರಿಂದ ಭಯಬೀತರಾದ ಶಾಪಗ್ರಸ್ತರು ಮುಂದೆ ತಮ್ಮ ಮಕ್ಕಳಿಗೆ ಈ ಶಾಪದ ಪ್ರಭಾವ ತಟ್ಟಬಾರದು ಎನ್ನುವ ಉದ್ದೇಶದಿಂದ ಕುಟುಂಬದ ಕಿರಿಯರ ಕೈಗೆ ಕತ್ತಿ ನೀಡಿ ಸತ್ತವರ ದೇಹವನ್ನ ಛಿದ್ರವಾಗಿಸಿದರು ಎನ್ನುತ್ತಾರೆ ಇತಿಹಾಸಕಾರ ಮ್ಯೂರ್. ಹೀಗೆ ಮಾಡಿದರೆ ಶಾಪದ ಪ್ರಭಾವ ಇಲ್ಲವಾಗುತ್ತದೆ ಎನ್ನುವ ನಂಬಿಕೆ ಅರೆಬಿಯಾದ ಬುಡಕಟ್ಟುಗಳಲ್ಲಿತ್ತು.



ಅದೆ ತಿಂಗಳು ಇನ್ನೊಂದು ಅತಿ ಘೋರವಾದ ಘಟನೆ ಜರುಗಿತು. ನೆಝಡ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಬೆನ್ ಅಮೀರ್ ಹಾಗೂ ಬೆನ್ ಸುಲೈಮ್ ಬುಡಕಟ್ಟಿನವರಿಗೆ ಸಂಬಂಧಿಸಿದಂತೆ ಈ ಅಘಾತಕಾರಿ ಘಟನೆ ಜರುಗಿತು. ಅವರಿಗೆ ತಲೆಮಾರುಗಳಿಂದ ಮೆಕ್ಕಾದ ಖುರೈಷಿಗಳೊಂದಿಗೆ ವೈರತ್ವವಿತ್ತು. ಹೀಗಾಗಿ ಅವರು ಖುರೈಷಿಗಳ ಹೊಸ ವೈರಿಯಾಗಿದ್ದ ಮಹಮದನ ಸ್ನೇಹಕ್ಕಾಗಿ ಹಾತೊರೆದರು. ಅವರ ಮುಖಂಡರಾಗಿದ್ದ ಅಬು ಬೇರ್ ಹಾಗೂ ಅಮೀರ್ ಇಬ್ನ್ ಅಥ್ ತೋಪೈಲ್ ಸ್ನೇಹಾಪೇಕ್ಷೆಯಿಂದ ಮಹಮದನನ್ನು ಕಾಣಲು ಬಂದರು. ಜೊತೆಗೆ ಅವರು ಸ್ನೇಹದ ಕೊಡುಗೆಯಾಗಿ ಕೆಲವು ಒಂಟೆ ಹಾಗೂ ಕುದುರೆಗಳನ್ನೂ ಸಹ ತಂದಿದ್ದರು. ಆದರೆ ಅವರು ಕೊಡಮಾಡಿದ ಆ ಕೊಡುಗೆಗಳನ್ನಾತ ಸುತಾರಂ ಸ್ವೀಕರಿಸಲು ನಿರಾಕರಿಸಿದ. ಒಂದೊಮ್ಮೆ ಅವರು ಇಸ್ಲಾಂ ಸ್ವೀಕರಿಸಿದರೆ ಆ ಬಗ್ಗೆ ಯೋಚಿಸಬಹುದು ಎಂದು ಆತ ಉತ್ತರಿಸಿದ.



ಆದರೆ ಮಹಮದನ ಈ ಸೊಕ್ಕಿನ ನಡೆಯಿಂದ ರೋಷತಪ್ತರಾದ ಅವರು ಅದಕ್ಕೊಪ್ಪದ ಅವರು ತನ್ನ ಆಪ್ತರೊಂದಿಗೆ ಈ ಬಗ್ಗೆ ಚರ್ಚಿಸಿ ಅಂತಹ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ ಎನ್ನುವ ಸಲಹೆಯನ್ನ ಆತನಿಗೆ ಕೊಟ್ಟರು. ಅವರಾದರೂ ಮಹಮದನಿಗೆ ಬುದ್ಧಿ ಹೇಳಿಯಾರು. ಆಗಲಾದರೂ ಆತ ಇದಕ್ಕೊಪ್ಪಿಯಾನು ಎನ್ನುವ ಆಶಾವದ ಅವರದ್ದಾಗಿತ್ತು. ಆದರೆ ತೀರಾ ಅನಾಗರೀಕರಾಗಿದ್ದ ಕಾಡು ಮನುಷ್ಯರಂತಹ ನಝಡ್ ವಾಸಿಗಳ ಕ್ರೂರ ನಡುವಳಿಕೆಗಳ ಬಗ್ಗೆ ಮಹಮದನಿಗೆ ಚೆನ್ನಾಗಿ ಅರಿವಿದ್ದರೂ, ಆತ ಅವರ ಕೋರಿಕೆಯಂತೆ ತನ್ನ ಆಪ್ತರಲ್ಲಿ ಕೆಲವರನ್ನ ಸಂಧಾನಕ್ಕಾಗಿ ಅವರ ಅಪೇಕ್ಷೆಯಂತೆಯೆ ಅಲ್ಲಿಗೆ ಕಳುಹಿಸಿಲು ಒಪ್ಪಿದ. ಆದರೆ ಅವರ ಸುರಕ್ಷತೆಯ ಬಗ್ಗೆ ಸಂಶಯ ವ್ಯಕ್ತ ಪಡಿಸಿದಾಗ ಅದರ ಜವಾಬ್ದಾರಿ ತನ್ನದೆಂದು ಅಬು ಬೇರ್ ಭಾಷೆ ಕೊಟ್ಟ.


ಅವನ ಮಾತು ನಂಬಿದ ಮಹಮದ್ ಅಬು ಅಮೀರನಿಗೊಂದು ಪತ್ರ ಬರೆಸಿ ತನ್ನವರಾದ ನಲವತ್ತು ಮಂದಿಯನ್ನ ಅವನಲ್ಲಿಗೆ ಕಳುಹಿಸಿದ. ಬೀರಮಾನ್ ಎನ್ನುವ ಮಾರ್ಗ ಮಧ್ಯದ ಸ್ಥಳವೊಂದರಲ್ಲಿ ಅವರ ತಂಡ ರಾತ್ರಿ ತಂಗಿತು. ತಮ್ಮಲ್ಲಿ ಒಬ್ಬನನ್ನು ದೂತನನ್ನಾಗಿಸಿ ಅಮೀರನಲ್ಲಿಗೆ ಆ ಮಹಮದನ ಪತ್ರವನ್ನು ಕಳುಹಿಸಿದರು. ಆದರೆ ಅದಾಗಲೆ ಮಹಮದನ ನಿಲುವಿನಿಂದ ಸಿಟ್ಟಿಗೆದ್ದಿದ್ದ ಅಮೀರ ಕನಿಷ್ಠ ಆ ಪತ್ರವನ್ನು ಒಡೆದು ನೋಡುವ ಗೋಜಿಗೂ ಹೋಗದೆ ಆ ದೂತನನ್ನು ವಧಿಸುವಂತೆ ಆಜ್ಞಾಪಿಸಿದ. ಜೊತೆಗೆ ಆ ಮದೀನದ ತಂಡದ ಎಲ್ಲಾ ಮುಸಲ್ಮಾನರನ್ನೂ ಕೊಂದೆಸೆಯಲು ಆಜ್ಞಾಪಿಸಿದ. ಅವನ ಆಜ್ಞೆಯಂತೆ ದೂತರನ್ನ ಕೊಂದದ್ದು ಹೌದಾದರೂ, ಆತನ ಹಿಂಬಾಲಕರು ತಮ್ಮ ನಾಯಕ ಅಬು ಬೇರನ ಭರವಸೆಯ ವಿರುದ್ಧವಾಗಿ ಇಂತಹ ಹೀನ ಕೃತ್ಯವನ್ನೆಸಗಲು ಒಪ್ಪಲಿಲ್ಲ. ಆ ಆಜ್ಞೆಯನ್ನವರು ಧಿಕ್ಕರಿಸಿದರು. ಆಗ ಅನಿವಾರ್ಯವಾಗಿ ಅಮೀರ ಅಬು ಸಲೈಮ್ ಎಂಬಾತನ ನೆರವು ಕೋರಿದ. ಆತ ಬದರ್ ಯುದ್ಧದಲ್ಲಿ ಮಹಮದನ ಯೋಧರಿಂದ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಡವನಾಗಿದ್ದರಿಂದ ರೋಷದಿಂದಲೆ ಇದಕ್ಕೆ ಸಮ್ಮತಿಸಿದ.



ಮಹಮದನ ನಲವತ್ತು ಬಂಟರ ಮೇಲೂ ರಾತ್ರೋ ರಾತ್ರಿ ಮುಗಿಬಿದ್ದ ಅಬು ಸಲೈಮ್ ಪ್ರಯಾಣದ ಆಯಾಸದಿಂದ ದಣಿದು ಮಲಗಿದ್ದವರಲ್ಲಿ ಕೇವಲ ಇಬ್ಬರನ್ನ ಬಿಟ್ಟು ಉಳಿದವರೆಲ್ಲರ ರುಂಡವನ್ನ ಚೆಂಡಾಡಿದ. ಈ ಹತ್ಯಾಕಾಂಡದ ವಿಷಯ ಅರಿವಾದ ಕೂಡಲೆ ಮಹಮದನ ಮನಸ್ಸು ವ್ಯಗ್ರಗೊಂಡಿತು.



( ಇನ್ನೂ ಇದೆ.)

30 October 2015

ವಲಿ - ೧೯








ತಮ್ಮೆಡೆಗೆ ಖುರೈಷಿಗಳ ಪಡೆ ಸಾಗಿ ಬರುತ್ತಿದ್ದಂತೆ ಇತ್ತ ಮಹಮದ್ ತನ್ನ ಪ್ರಾರ್ಥನಾ ವಿಧಿಗಳನ್ನ ಪೂರೈಸಿ ತಾನೂ ಸಮರ ಸನ್ನದ್ಧನಾದ. ಅರಬ್ ಬುಡಕಟ್ಟಿನ ಯುದ್ಧ ನೀತಿ ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ದ್ವಂದ್ವ ಯುದ್ಧ ಪರಸ್ಪರ ಇಬ್ಬಿಬ್ಬರ ನಡುವೆ ಆರಂಭಗೊಂಡಿತು. ಖುರೈಷಿಗಳ ಸೇನಾನಾಯಕನಾದ ಥಲ್ಲಾ ಮೊದಲು ಪಡೆಯ ಮುಂದೆ ಸಾರಿ ಜೋರಾಗಿ ರಣ ಕಹಳೆಯನ್ನು ಊದಿದ. ಇದು ಯುದ್ಧಾರಂಭದ ಮುನ್ಸೂಚನೆಯಾಗಿತ್ತು. ಅವನ ರಣಕಹಳೆಯ ಧ್ವನಿ ಇನ್ನೂ ಅಡಗಿರಲಿಲ್ಲ ಒಮ್ಮೆಗೆ ಮುನ್ನುಗ್ಗಿದ ಅಲಿ ಅವನ ಹುಟ್ಟನ್ನೆ ಕತ್ತು ಕಡಿದು ಒಮ್ಮೆಗೆ ಅಡಗಿಸಿ ಬಿಟ್ಟ.


ಆಗ ಖುರೈಷಿಗಳ ಪಡೆಯಿಂದ ಇನ್ನೊಬ್ಬ ಯುವಕ ಒತ್ತೆಮನ್ ಮುಂದೆ ಕಣದತ್ತ ಧುಮುಕಿದ. ಅವನನ್ನ ಎದುರಿಸುವ ಆವೇಶ ಹಂಝಾನಲ್ಲಿ ಉಕ್ಕಿ ಬಂತು. ಹಂಝಾನ ವೀರಾವೇಶದೆದುರು ಒತ್ತೆಮನ್ನನ ಯಾವುದೆ ಆಟ ನಡೆಯಲಿಲ್ಲ. ನೋಡು ನೋಡುತ್ತಿದ್ದಂತೆ ಒತ್ತೆಮನ್, ಥಲ್ಲಾ, ಥಲ್ಲಾನ ಇಬ್ಬರು ಸಹೋದರರು ಹಾಗೂ ಮೂವರು ಮಕ್ಕಳು ಈ ದ್ವಂದ್ವ ಹೋರಾಟದಲ್ಲಿ ನೆಲ ಕಚ್ಚಿದರಷ್ಟೇ ಅಲ್ಲ ಕೊನೆಯುಸಿರನ್ನೂ ಸಹ ಎಳೆದರು.


ಇದನ್ನ ನೋಡುತ್ತಲೆ ಸಾಂಪ್ರದಾಯಿಕವಾದ ಕ್ರಮಕ್ಕೆ ಜೋತು ಬಿದ್ದು ಹೀಗೆ ಸೈನ್ಯದ ವೀರರನ್ನೆಲ್ಲಾ ಕಳೆದುಕೊಳ್ಳುವುದಕ್ಕಿಂತಾ ಒಮ್ಮೆಗೆ ಪಡೆಗೆ ಪಡೆಯೆ ಮುನ್ನುಗ್ಗಿ ವೈರಿ ಸೈನ್ಯವನ್ನು ಹೊಸಕಿ ಹಾಕಬಹುದಲ್ಲ! ಎನ್ನುವ ವಿವೇಕದ ಅರಿವು ಖುರೈಷಿ ಪಾಳಯಕ್ಕೆ ಮೂಡಿತು. ಅದರಂತೆಯೆ ಯುದ್ಧ ನೀತಿಯನ್ನ ಬದಲಿಸಿ ಕಾದಾಟ ಆರಂಭಿಸಲಾಯಿತು. ಪೂರ್ಣ ಪ್ರಮಾಣದ ಸಮರ ಕಳೆಗಟ್ಟಿತು. ಖುರೈಷಿಗಳ ನಾಯಕನಾಗಿದ್ದ ಖಾಲಿದ್ ಅತ್ಯಂತ ತ್ವರಿತವಾಗಿ ತಾಳ್ಮ ಹಾಗೂ ಅತಿ ಜಾಣ್ಮೆಯಿಂದ ಮಹಮದನ ನೇತೃತ್ವದ ದಳವನ್ನು ಸುತ್ತುವರೆದು ಮಹಮದನ ಹಿಂಭಾಗದಿಂದ ಘೇರಾಯಿಸಿದ. ಈ ಅನಿರೀಕ್ಷಿತವಾದ ತಮ್ಮವರಿದ್ದ ದಿಕ್ಕಿನಿಂದಲೆ ಎರಗಿಬಂದ ಮಾರಾಣಾಂತಿಕ ಹೊಡೆತವನ್ನ ತಾಳಲಾರದೆ ಮಹಮದನ ಮೆಚ್ಚಿನ ಬಂಟ ಮಸೂದ್ ಅಸುನೀಗಿದ.



ಅಬು ಸಫ್ಯಾನನ ಮಡದಿ ಪ್ರತಿಕಾರ ತಪ್ತೆ ಹಿಂದ್ ನೇಮಿಸಿದ್ದ ಯೋಧ ವಹೀಶ್ ತನ್ನ ಉದ್ದದ್ದ ಭಲ್ಲೆಯಿಂದ ಬೀಸಿ ಹೊಡೆದು ಹಂಝಾನನ್ನು ಕುದುರೆಯಿಂದ ಕೆಳಗೆ ಕೆಡವಿದ. ಅವನು ತನಗೆ ಹಿಂದ್ ಹಣ ಪಾವತಿಸಿ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದ. ಅವಳ ಪ್ರತಿಕಾರ ಈಗ ಬಹುಮಟ್ಟಿಗೆ ತೀರುವ ಹಂತಕ್ಕೆ ಬಂದಿತ್ತು. ಎಲ್ಲೆಲ್ಲೂ ವಿರೋಧವನ್ನೆದುರಿಸಿದ ಮಹಮದನ ಪಡೆ ಶತ್ರುಗಳ ಹೊಡೆತದ ಭೀಕರತೆ ಸಹಿಸಲಾರದೆ ಸಹಜವಾಗಿ ಹಿಮ್ಮೆಟ್ಟಿತು. ಸಿಕ್ಕ ಸಿಕ್ಕ ಹಾದಿಬೀದಿ ಹಿಡಿದು ಮುಸಲ್ಮಾನ ಯೋಧರು ಬೆಟ್ಟ ಕಣಿವೆ ಕಳ್ಳು ಬಿದ್ದು ಓಡ ತೊಡಗಿದರು. ಒಂದು ಎತ್ತರದ ಸ್ಥಳದಲ್ಲಿ ಹತಾಶನಾಗಿ ನಿಂತು ಇದನ್ನೆಲ್ಲ ವೀಕ್ಷಿಸುತ್ತಿದ್ದ ಸೇನಾನಾಯಕ ಮಹಮದ್ ಅತಿ ಚಾಣಾಕ್ಷತನದಿಂದ ಹಾಗೂ ಸಮಯಾವಧಾನದಿಂದ ಖಾಲಿದ್ ತನ್ನೆಡೆಗೆ ಮಾಡಿದ ಆಕ್ರಮಣದಿಂದ ಕೂದಲೆಳೆಯ ಅಂತರದಿಂದ ಪಾರಾದ.


ಅದರ ಅರಿವಿಲ್ಲದ ಖಾಲಿದ್ ಮರಳಿ ಅಲ್ಲೆ ಅವನ ಸುತ್ತಲೆ ಕೊಂಚ ಸಮಯ ಅಲೆದಾಡಿದರೂ ಬೋರಲು ಬಿದ್ದಂತೆ ನಟಿಸುತ್ತಿದ್ದ ಮಹಮದನ ಮುಖ ಕಾಣದೆ ಅಲ್ಲಿಂದ ಕಾಲ್ತೆಗೆದ ಕಾರಣ ಈತ ಜೀವ ಉಳಿಸಿಕೊಂಡ. ಖಾಲಿದ್ ಅತ್ತ ಸಾಗುತ್ತಲೆ ಎದ್ದ ಮಹಮದ್ ಹಿಮ್ಮೆಟ್ಟಿ ಕಂಗಾಲಾಗಿ ಓಡುತ್ತಿದ್ದ ಮುಸಲ್ಮಾನ ಯೋಧರನ್ನ ಕೂಗಿ ಕೂಗಿ ಕರೆಯುತ್ತಾ "ಎಲ್ಲಿಗೆ ಹೋಗುತ್ತೀರಿ! ಎಲ್ಲಿಗೆ ಹೋಗುತ್ತೀರಿ! ಓಡದಿರಿ ವಾಪಾಸ್ಸು ಬನ್ನಿ!! ನಾನು ದೇವರ ಪ್ರವಾದಿ!!!" ಎಂದು ಹುರಿದುಂಬಿಸುವಂತೆ ಚೀರಾಡತೊಡಗಿದ. ಆದರೆ ಪ್ರವಾದಿಯ ಕರೆಗೆ ಹೆದರಿ ಓಡುತ್ತಿದ್ದ ಯಾರೂ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲಿಲ್ಲ! ಸದ್ಯಕ್ಕೆ ಅವರೆಲ್ಲರಿಗೆ ತಮ್ಮ ಪ್ರಾಣ ಉಳಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು. ಹೀಗಾಗಿ ಉಸಿರು ಬಿಟ್ಟು ಅಲ್ಲಿಂದ ಎಲ್ಲರೂ ನಿಟ್ಟೋಟ ಹೂಡಿದರು.


ಇತ್ತ ಈ ಪ್ರಹಸನ ನಡೆಯುತ್ತಿದ್ದಂತೆ ಖುರೈಷಿಗಳ ಒಂದು ಪಡೆ ಮಹಮದನತ್ತ ನುಗ್ಗಿ ಬಂತು. ಆತನ ಸುರಕ್ಷತೆಗೆ ಸುತ್ತುವರೆದಿದ್ದ ಕೆಲವು ಮುಸಲ್ಮಾನ ಯೋಧರ ಮೇಲೆ ಬಾಣಗಳ ಸುರಿಮಳೆಗೈಯಲಾಯಿತು. ಖುರೈಷಿ ಯೋಧನಾದ ಇಬ್ನ್ ಕಮಿಯಾ ಮುನ್ನುಗ್ಗಿ ಬಂದು ಮಹಮದನೂ ಸೇರಿದಂತೆ ಅವರೆಲ್ಲರಿಗೂ ತನ್ನ ಖಡ್ಗದ ಹೊಡೆತದ ರುಚಿ ತೋರಿಸಿದ. ಮಹಮದನಿಗೂ ಹಣೆ ಹಾಗೂ ಕೆನ್ನೆಯ ಮೇಲೆ ಮಾರಾಣಾಂತಿಕ ಹೊಡೆತಗಳು ಬಿದ್ದವು. ಆತ ತನ್ನ ಕುದುರೆಯಿಂದ ಕೆಳಗುರುಳಿದ.


ಆತ ಹಾಗೆ ಕೆಳಗೆ ಬಿದ್ದರೂ ಸಹ ಮಿಸುಗಾಡದಿರುವುದನ್ನ ಕಂಡ ಇಬ್ನ್ ಕಮಿಯಾ ಸಂತೋಷದಿಂದ ಮಹಮದ್ ಸತ್ತನೆಂದು ದೊಡ್ಡ ಧ್ವನಿಯಲ್ಲಿ ಘೋಷಿಸಿದ. ತನ್ನ ಸಂಬಂಧಿಕರಿಗೆಲ್ಲಾ ಕೂಗುತ್ತಾ ಈ ಸುದ್ದಿ ಸಾರಿದ. ಖುರೈಷಿಗಳ ಉದ್ದೇಶ ಸಫಲವಾದಂತಾಗಿತ್ತು. ಹೀಗಾಗಿ ಯುದ್ಧದ ರಂಗು ಸಹಜವಾಗಿ ಬದಲಾಯಿತು. ಮಹಮದನೆ ಸತ್ತ ಮೇಲೆ ಮದೀನಾದತ್ತ ನುಗ್ಗಿ ಅದನ್ನ ದೋಚುವತ್ತ ಅವರಿಗ್ಯಾರಿಗೂ ಆಸಕ್ತಿ ಉಳಿಯಲಿಲ್ಲ. ಹೀಗಾಗಿ ಅವರು ಮದೀನಾವನ್ನು ಸೂರೆ ಹೊಡೆಯಲಿಲ್ಲ. ಇತ್ತ ಗಾಯಗೊಂಡ ಮಹಮದನನ್ನು ಎತ್ತಿಕೊಂಡ ಅವನ ಬೆಂಬಲಿಗರು ಯುದ್ಧರಂಗದಿಂದ ಕಾಲ್ಕಿತ್ತರು.


ಮಹಮದನ ಸಂಗಡಿರರು ಆತನನ್ನ ಇತರ ಗಾಯಾಳು ಸೈನಿಕರನ್ನೂ ಸಹ ಉಪಚರಿಸುತ್ತಿದ್ದ ಬೆಟ್ಟದ ಇನ್ನೊಂದು ಭಾಗಕ್ಕೆ ಕೊಂಡೊಯ್ದರು. ಅಲ್ಲಿ ಶುದ್ಧ ನೀರಿನಲ್ಲಿ ಅವನ ಕೆನ್ನೆ ಹಾಗೂ ಹಣೆಗಾಗಿದ್ದ ರಕ್ತ ಗಾಯವನ್ನು ತೊಳೆದು ತೆಗೆಯಲಾಯಿತು. ಆತ ವಿಪರೀತ ನಿತ್ರಾಣನೂ ಹತಾಶನೂ ಆಗಿದ್ದ. ಈ ಉಪಚಾರ ನಡೆಯುತ್ತಿರುವಾಗಲೆ "ದೇವರ ಪ್ರವಾದಿಯನ್ನು ಹೀಗೆ ನಡೆಸಿಕೊಂಡ ಅಧರ್ಮಿಗಳು ಅದು ಹೇಗೆ ತಾನೆ ಉದ್ಧಾರವಾದಾರು? ಪ್ರವಾದಿಯ ಮುಖವನ್ನು ಅವನ ರಕ್ತದಿಂದ ತೋಯ್ದ ಆ ಕೈಗಳು ನರಕದ ಬೆಂಕಿಯಲ್ಲಿ ಸುಡಲಿ, ಅವರ ಪಾಪಾತ್ಮಗಳನ್ನ ದೇವರ ಕ್ರೋಧಾಗ್ನಿ ದಹಿಸಲಿ!" ಎಂದು ಶಪಿಸಿದ ಎನ್ನುತ್ತಾರೆ ತಮ್ಮ 'ದ ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಇನ್ನೂರಾ ಅರವತ್ತೆರಡರಲ್ಲಿ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್.



ಇತ್ತ ಯುದ್ಧ ಭೂಮಿಯಲ್ಲಿ ಮಹಮದನ ಶವಕ್ಕಾಗಿ ಖುರೈಷಿಗಳು ಜಾಲಾಡುತ್ತಿದ್ದರು. ಅದವರಿಗೆ ದೊರಕದೆ ಹೋದಾಗ ಸಹಜವಾಗಿ ಅವನ ಇನ್ನಿಲ್ಲವಾಗುವಿಕೆ ಸಂಶಯವಾಗಿ ಉಳಿಯಿತವರಿಗೆ. ಈ ಸಿಟ್ಟಿನಲ್ಲಿಯೆ ಸತ್ತವರ ಶವಗಳನ್ನ ಬರ್ಬರವಾಗಿ ಛಿದ್ರಗೊಳಿಸುತ್ತಾ ಸಾಗಿದರವರು. ಹಿಂದ್ ಪೂರ್ತ ಸ್ವಯ ಕಳೆದುಕೊಂಡಂತಾಗಿದ್ದಳು. ಹಂಝಾನ ಶವವನ್ನ ಹಿತ್ತು ಎಳೆದಾಡಿ ಚಿಂದಿ ಮಾಡಿ ಸುಖಿಸಿದಳು. ಸಾಲದ್ದಕ್ಕೆ ಆತನ ಯಕೃತ್ತನ್ನ ಹಸಿ ಹಸಿಯಾಗಿಯೆ ಕಿತ್ತು ಚೀಪಿ ತನ್ನ ಘನ ಘೋರ ಪ್ರತಿಜ್ಞೆಯನ್ನು ಪೂರೈಸಿಕೊಂಡಳು! ಶವದ ಬೆರಳು ಹಾಗೂ ಚರ್ಮಗಳನ್ನ ಕಿತ್ತು ತನ್ನ ತೋಳಬಂಧಿಯಂತೆ ಕಟ್ಟಿಕೊಂಡಳು. ಆ ಕ್ಷಣದಲ್ಲಿ ಅವಳ ವಿವೇಕ ಪೂರ್ತಿ ಇನ್ನಿಲ್ಲವಾಗಿತ್ತು.



ಖುರೈಷಿ ನಾಯಕ ಅಬು ಸಫ್ಯಾನ್ ಹಾಗೂ ಓಹಾದ್ ಬೆಟ್ಟದ ಬುಡದಲ್ಲಿ ನಿಂತು ಮಹಮದ್, ಅಬು ಬಕರ್ ಹಾಗೂ ಓಮರ್'ನ ಹೆಸರನ್ನ ಕೂಗಿ ಕರೆದರೂ ಕೇವಲ ತಮ್ಮದೆ ಕಂಠ ಪ್ರತಿಧ್ವನಿಸಿತಲ್ಲದೆ ಅವರ್ಯಾರಿಂದಲೂ ಯಾವುದೆ ಪ್ರತಿಕ್ರಿಯೆ ಕೇಳಿ ಬರಲಿಲ್ಲ. ಯಾವ ಮಾರುತ್ತರವನ್ನೂ ಕಾಣದೆ ಅವರೆಲ್ಲಾ ಸತ್ತರೆಂದು ಅಬು ಸಫ್ಯಾನ್ ತನ್ನ ಪಡೆಗಳಿಗೆ ಸಾರಿದ. ಆದರೆ ಆದ ಈ ಅವಮಾನವನ್ನ ತಾಳಿಕೊಳ್ಳುವ ತಾಳ್ಮೆ ಇಲ್ಲದ ಓಮರ್ ಇನ್ನೊಂದು ದಿಕ್ಕಿನಿಂದ "ನಾವ್ಯಾರೂ ಸತ್ತಿಲ್ಲ!, ನಮ್ಮನ್ನು ಕೊಲ್ಲಲು ನಿಮ್ಮಿಂದ ಸಾಧ್ಯವೂ ಇಲ್ಲ!" ಎಂದು ಮಾರುತ್ತರಿಸಿದ. ಆಗ ಅಬು ಸಫ್ಯಾನ್ ಹೌಹಾರಿ "ಹೌದಾ! ಸರಿ ಅದನ್ನ ಇದೆ ಯುದ್ಧ ಕಣದಲ್ಲಿ ಇದೆ ದಿನ ಮುಂದಿನ ವರ್ಷ ಸಂಧಿಸಿ ನಿರ್ಧರಿಸೋಣ?!" ಎಂದು ಪ್ರತಿಕ್ರಿಯಿಸಿದ. ಗೆದ್ದ ಖುರೈಷಿ ಸೈನ್ಯ ಯುದ್ಧವನ್ನ ಅಲ್ಲಿಗೆ ಮೊಟಕುಗೊಳಿಸಿ ಮೆಕ್ಕಾದತ್ತ ಪ್ರಯಾಣ ಆರಂಭಿಸಿದರು.



ಅವರ ನಿರ್ಗಮನವನ್ನು ಖಚಿತ ಪಡಿಸಿಕೊಂಡ ನಂತರ ಮಹಮದ್ ಹಾಗೂ ಸಂಗಡಿಗರು ಬೆಟ್ಟವನ್ನ ಇಳಿದು ಕೆಳಗೆ ಬಂದರು. ಅವರ ಸೋತ ಪಡೆ ಮದೀನಾಕ್ಕೆ ಮರಳಿತು. ಆದರೆ ಈ ಹೊತ್ತಿಗೆ ಖುರೈಷಿಗಳ ಗೆಲುವಿನ ಸುದ್ದಿ ಮದೀನಾ ಮುಟ್ಟಿ ಮೆಕ್ಕಾದ ಈ ವಿಜಯಿ ಪಡೆ ಒಂದು ವೇಳೆ ನಮ್ಮ ನಗರದ ಮೇಲೆ ಧಾಳಿಯಿಟ್ಟರೆ ಗತಿಯೇನು? ಎಂದು ಮದೀನಾ ನಿವಾಸಿಗಳೆಲ್ಲಾ ಆತಂಕಿತರಾಗಿದ್ದರು. ಮೆಕ್ಕಾದ ಸೇನೆ ಮರಳಿದ ಸುದ್ದಿ ಕೇಳಿದ ಅವರಿಗೆ ಅದರ ಬಗ್ಗೆ ಸಂಶಯ ಉಳಿದಿತ್ತಾದರೂ ಆತಂಕದ ನಡುವೆಯೂ ಅವರು ತುಸು ನೆಮ್ಮದಿ ಪಟ್ಟರು.


ಇಡಿ ರಾತ್ರಿ ಮಸೀದಿಯ ಬಳಿ ಹೆಂಗಸರ ರೋಧನೆ ನಡೆದಿತ್ತು. ಅದರ ಅನುರಣದ ಹಿನ್ನೆಲೆಯಲ್ಲಿ ಇರುಳಿಡಿ ಮಹಮದನೂ ಮಲಗಲಾರದೆ ಒದ್ದಾಡಿದ. ಬೆಳಗ್ಯೆ ಮಸೀದಿ ಪ್ರವೇಶಿಸುವಾಗ, ಅದ್ಯಾರು ರಾತ್ರಿ ಹಾಗೆ ರೋಧಿಸುತ್ತಿದ್ದುದು? ಎಂದು ವಿಚಾರಿಸಿದಾಗ ಹಂಝಾನ ಸಾವಿನ ಹಿನ್ನೆಲೆಯಲ್ಲಿ ಹೆಂಗೆಳೆಯರು ಹೀಗೆ ರೋಧಿಸಿದ್ದರು ಎಂದು ತಿಳಿದು ಬಂತು. ಅವರನ್ನು ಸಂತೈಸಿದ ಮಹಮದ್ ಮನೆಗೆ ಸಾಗ ಹಾಕಿದ. ಅಂದಿನಿಂದ ಮುಸಲ್ಮಾನ ಪ್ರಪಂಚದ ಸಂಪ್ರದಾಯಗಳಿಗೆ ಇದೊಂದು ಹೊಸ ಸೇರ್ಪಡೆಯಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಕ್ರಮೇಣ ಯಾವ ಮುಸಲ್ಮಾನ ಸತ್ತರೂ ಸಹ ಮೊತ್ತಮೊದಲಿಗೆ ಹಂಝಾನ ಸ್ಮರಣಾರ್ಥ ರೋಧಿಸಿ ಅನಂತರ ಸತ್ತವರ ಸಂತಾಪ ಸೂಚಕವಾಗಿ ಅಳುವ ಕ್ರಮ ಜಾರಿಯಲ್ಲಿದೆ.



ಮದೀನಾದಲ್ಲಿ ಆವರಿಸಿದ್ದ ಆತಂಕ ಹಾಗೂ ತನ್ನೊಳಗೆ ಮಡುಗಟ್ಟಿದ್ದ ಪ್ರತಿಕಾರದ ಬೆಂಕಿಯನ್ನ ತಣಿಸುವ ಸಲುವಾಗಿ ಮಹಮದ್ ಮೆಕ್ಕಾದ ಖುರೈಷಿಗಳನ್ನ ಬೆನ್ನಟ್ಟುವ ನಿರ್ಧಾರಕ್ಕೆ ಬಂದ. ಇದಕ್ಕಾಗಿ ಆತ ಕೇವಲ ತನ್ನವರಲ್ಲದೆ ಇನ್ನಿತರ ಮದೀನಾ ವಾಸಿಗಳ ಸಹಾಯವನ್ನೂ ಸಹ ಅಪೇಕ್ಷಿಸಿದ. ಗಾಯಗೊಂಡು ಘಾಸಿಯಾಗಿದ್ದರೂ ಸಹ ಆತನೆ ಮುಂದಾಳತ್ವ ವಹಿಸಿಕೊಂಡು ಕುದುರೆಯೇರಿದ. ತನ್ನ ಸಂಗಡಿಗರೊಂದಿಗೆ ಆತ ಹೋಗುವಾಗ ದಾರಿಯಲ್ಲಿ ಹಮ್ರಾ ಅಲ್ ಅಸದ್ ಎನ್ನುವ ಸ್ಥಳದಲ್ಲಿ ಎರಡು ಮೃತ ದೇಹಗಳು ಕಾಣಸಿಕ್ಕವು. ಅವರಿಬ್ಬರೂ ಖುರೈಷಿಗಳ ಚಲನ ವಲನದ ಮೇಲೆ ಕಣ್ಣಿಡಲು ಕಳುಹಿಸಲಾಗಿದ್ದ ಮಹಮದನ ಗೂಢಚರರಾಗಿದ್ದರು. ಅವರ ಬಗ್ಗೆ ಸಂಶಯಗೊಂಡ ಖುರೈಷಿಗಳು ಅವರಿಬ್ಬರನ್ನೂ ಸೆರೆ ಹಿಡಿದು ಬರ್ಬರವಾಗಿ ಕೊಂದೆಸೆದು ಹೋಗಿದ್ದರು. ಸೈನ್ಯ ಆ ಸ್ಥಳದಲ್ಲಿ ಭರ್ಜರಿ ಖರ್ಜೂರದ ತೋಟಗಳನ್ನ ಕಂಡರು. ಸುಸ್ತಾಗಿದ್ದ ಅವರಿಗೆಲ್ಲಾ ಅದರ ಸೇವನೆ ತೃಪ್ತಿ ತಂದಿತು. ಎರಡು ಮೂರು ದಿನಗಳವರೆಗೆ ಅಲ್ಲಿಯೇ ಬೀಡು ಬಿಟ್ಟ ಮಹಮದನ ಸೇನೆ ತನ್ನ ಆರಂಭ ಶೂರತ್ವವನ್ನ ಅಲ್ಲಿಯೆ ಕೈಬಿಟ್ಟು ಮದೀನದತ್ತ ಮರಳಿತು.


ಹಮ್ರಾ ಅಲ್ ಅಸದ್'ನಲ್ಲಿ ಮಹ್ಮದನಿಗೂ ಒಬ್ಬ ವೈರಿ ಸೆರೆ ಸಿಕ್ಕಿದ. ಅಬು ಅಝಾ ಎನ್ನುವ ಆತ ಒಬ್ಬ ಉತ್ತಮ ಕವಿಯಾಗಿದ್ದ. ಬದರ್ ಯುದ್ಧದಲ್ಲಿ ಸೆರೆಯಾಗಿದ್ದರೂ ಅವನನ್ನ ಮಹಮದ್ ಕ್ಷಮಿಸಿ ಬಿಡುಗಡೆ ಮಾಡಿದ್ದ. ತನಗೆ ಐವರು ಪುತ್ರಿಯರಿದ್ದಾರೆಂದು ಅಂಗಲಾಚಿದ್ದಾಗ ಇನ್ನು ಮುಂದೆ ತನ್ನ ವಿರುದ್ಧ ಸೆಣೆಸ ಕೂಡದು ಎನ್ನುವ ಶರತ್ತನ್ನ ವಿಧಿಸಿ ಮಹಮದ್ ಕವಿ ಅಝಾನನ್ನು ಬಿಟ್ಟು ಕಳಿಸಿದ್ದ. ಆದರೆ ಈ ಬಾರಿ ಆತನ ನಸೀಬು ಸಂಪೂರ್ಣ ಕೆಟ್ಟಿತ್ತು. ಆತನ ಯಾವುದೆ ಆರ್ತ ಮನವಿಗೂ ಮನ್ನಣೆ ನೀಡದ ಮಹಮದ್ ಆತನ ತಲೆ ಕಡಿಯಲು ಆಜ್ಞಾಪಿಸಿದ.


ಅದೇ ಬಗೆಯಲ್ಲಿ ದುರ್ದೆಸೆ ತಂದುಕೊಂಡವ ಮತ್ತೊಬ್ಬ ಖುರೈಷಿ ಯೋಧ ಮುಆವಿಯಾ ಎಂಬಾತ. ಆತ ಮೆಕ್ಕಾಗೆ ಮರಳುವ ಹಾದಿಯಲ್ಲಿ ದಿಕ್ಕು ತಪ್ಪಿ ಮದೀನಾ ಬಂದು ತಲುಪಿದ್ದ! ಆತ ಮೂರು ದಿನಗಳ ಕಾಲ ಮಹಮದನ ಅಳಿಯ ಒತ್ತಮನ್ ಮನೆಯಲ್ಲಿ ಆಶ್ರಯ ಪಡೆದಿದ್ದ. ನಾಲ್ಕನೆ ದಿನ ಮರಳಿ ಮೆಕ್ಕಾದ ಹಾದಿ ಹಿಡಿಯುವಾಗ ಮಹಮದ ಕೈಗೆ ಸಿಕ್ಕಿ ಬಿದ್ದ. ಆತನ ಈ ವಿಸ್ತರಿಸಿದ ಮದೀನಾ ವಾಸದ ಕಥೆ ಕೇಳಿ ಕ್ರೋಧಿತನಾದ ಮಹಮದ್ ಆತನ ತಲೆ ಕಡಿಯಲು ಆಜ್ಞಾಪಿಸಿದ.


ಓಹೋದ್ ರಣರಂಗದಲ್ಲಿ ಮಡಿದ ಮುಸಲ್ಮಾನರ ಬಗ್ಗೆ ಮಹಮದ್ ಉದಾತ್ತವಾಗಿ ನುಡಿದು ಅವರೆಲ್ಲರ ಗುಣಗಾನ ಮಾಡಿದ. ಅವರೆಲ್ಲರೂ ಹುತಾತ್ಮರಾಗಿ ಸವ್ರಗ ಸೇರಿದ್ದು ಅಲ್ಲಿ ದೇವರ ಪ್ರೀತಿಯ ಕಟಾಕ್ಷಕ್ಕೆ ಪಾತ್ರರಾಗಿದ್ದಾರೆ ಎಂದು ಮಹಮದ್ ಸಾರಿದ. ಖುರ್ಹಾನಿನ ಸುರಾಗಳ ಮೂಲಕ ಓಹೋದ್ ಯುದ್ಧ ನಂತರದ ದೈವ ಸಂದೇಶಗಳನ್ನವನು ಸಾರಿದ. ಸುರಾ ೩/೧೪೪೪, ೩/೧೨೧-೧೮೦ರಲ್ಲಿ ನಾವಿದನ್ನ ಕಾಣಬಹುದು.



( ಇನ್ನೂ ಇದೆ.)

29 October 2015

ವಲಿ - ೧೮







ಕ್ರಿಸ್ತಶಕ ೬೨೪ರ ಮೇ ತಿಂಗಳಿನಲ್ಲಿ ಮಹಮದ್ ಕೆಲವು ಸಣ್ಣಪುಟ್ಟ ಕಾದಾಟಗಳಲ್ಲಿ ಭಾಗವಹಿಸಿದ. ಆದರೆ ಅದರಲ್ಲಿ ಯಾವುವೂ ಸಫಲವಾಗದೆ ಲಾಭದ ಚಿಕ್ಕಾಸು ಸಹ ಹುಟ್ಟಲಿಲ್ಲ. ಖರಝ್'ರಟ್ ಅಲ್ ಖುದರ್'ನ ಬಯಲಿನಲ್ಲಿ ಅರೇಬಿಯಾದ ಪ್ರಬಲ ಘಟಾಫನ್ ಬುಡಕಟ್ಟಿನ ಯೋಧರು ಜಮಾಯಿಸಿರುವ ಸಂಗತಿ ತಿಳಿದು ತನ್ನ ಯುದ್ಧಾಸಕ್ತ ಪಡೆಯನ್ನು ಕರೆದುಕೊಂಡು ಕಾಲು ಕೆರೆದುಕೊಂಡು ಜಗಳ ತೆಗೆಯಲು ಅಲ್ಲಿಗೂ ಮಹಮದ್ ಧಾವಿಸಿದ. ಆದರವರು ಅಲ್ಲಿರಲಿಲ್ಲ. ಅವರು ಮೇಯಲು ಬಿಟ್ಟಿದ್ದ ಐನೂರು ಒಂಟೆಗಳು ಹಾಗೂ ಅವನ್ನ ಕಾಯುತ್ತಿದ್ದ ತರುಗಾಹಿ ಹುಡುಗರನ್ನಷ್ಟೆ ಹೊತ್ತು ಮದೀನಾಕ್ಕೆ ಹಿಂದಿರುಗಬೇಕಾಯಿತು.


ಅದಾಗಿ ಒಂದು ತಿಂಗಳ ನಂತರ ಮುಸಲ್ಮಾನ ಪಡೆ ಸುಲೈಮ್ ಹಾಗೂ ಬಹ್ರಾನ್ ಬುಡಕಟ್ಟಿನವರ ಮೇಲೆ ಧಾಳಿ ಸಂಘಟಿಸಿತು. ಆದರೆ ಯುದ್ಧ ಮಾಡುವಷ್ಟು ಆರ್ಥಿಕ ಚೈತನ್ಯವಿಲ್ಲದ ಆ ಎರಡೂ ಅಲೆಮಾರಿ ಬುಡಕಟ್ಟಿನವರು ಅದರ ಸೂಚನೆಯನ್ನು ಮೊದಲೆ ಅರಿತಿದ್ದು ಬೆಟ್ಟ ಗುಡ್ಡಗಳಲ್ಲಿ ತಲೆ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡರು. ಮೆಕ್ಕಾದ ಖುರೈಷಿಗಳಿಗೆ ಮಾತ್ರ ಆಗಾಗ ಕಿವಿಮುಟ್ಟುತ್ತಿದ್ದ ಮಹಮದನ ಇಂತಹ ಆಕ್ರಮಣದ ಸುದ್ದಿಗಳು ಮುಂದೊಮ್ಮೆ ತಮ್ಮ ಮೇಲೆ ಎರಗಬಹುದಾದ ಬೃಹತ್ ವಿಪತ್ತಿನ ರಂಗ ತಾಲೀಮಿನಂತೆ ಭಾಸವಾಗಿ ಅವರಲ್ಲಿ ಆತಂಕ ಮೂಡತೊಡಗಿತು.


ಅಲ್ಲದೆ ಅರೇಬಿಯಾದ ಪಶ್ಚಿಮ ತೀರಕ್ಕೆ ಸಾಗಬೇಕಾಗಿದ್ದ, ಅಲ್ಲಿಂದ ಹೊರದೇಶಗಳ ಗಡಿ ದಾಟಿ ಅಲ್ಲಿಗೆ ರಫ್ತಾಗಬೇಕಿದ್ದ ಅವರ ಕ್ಯಾರವಾನುಗಳಿಗೆಲ್ಲಾ ಹೆದ್ದಾರಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಮಹಮದನ ಪಡೆಯ ದೆಸೆಯಿಂದ ಕಂಟಕ ಒದಗಿ ಬಂದಿತ್ತು. ಮದೀನಾಕ್ಕೆ ಸಮೀಪದಲ್ಲಿಯೆ ಸುಳಿದು ಹೋಗ ಬೇಕಾದ ಕ್ಯಾರವಾನುಗಳ ಸುರಕ್ಷತೆ ಹಾಗೂ ತಮ್ಮ ವ್ಯಾಪಾರಿ ಹಿತಾಸಕ್ತಿಗಳ ಕುರಿತು ಅವರೆಲ್ಲಾ ಚಿಂತಿತರಾದರು. ಈ ಸಂಕಟದಿಂದ ಪಾರಾಗಲು ಪೂರ್ವದಿಕ್ಕಿನಿಂದ ಇರಾಖ್ ಮಾರ್ಗವಾಗಿ ಸಾಗಲು ಸಾಧ್ಯವಿದ್ದಿತ್ತಾದರೂ ಮಾರ್ಗ ಮಧ್ಯೆ ವಿಪರೀತ ನೀರಿನ ಕೊರತೆ ಇದ್ದು ಅದು ಕಾರ್ಯ ಸಾಧುವಾಗಿರಲಿಲ್ಲ. ಆದರೂ ಅನಿವಾರ್ಯವಾಗಿ ಅದೆ ದಾರಿಯಲ್ಲಿ ಸಾಗಲು ಅವರು ನಿರ್ಧರಿಸಿ ಅದಕ್ಕಾಗಿ ಜೊತೆಯಲ್ಲಿ ನೀರಿನ ಚರ್ಮದ ಚೀಲಗಳನ್ನ ಹೊತ್ತ ಪ್ರತ್ಯೇಕ ಒಂಟೆಗಳನ್ನ ಕೊಂಡೊಯ್ಯಲು ನಿರ್ಧರಿಸಿದರು. ದಾರಿಯ ಪರಿಚಯ ಅಷ್ಟಾಗಿ ಇಲ್ಲದ್ದರಿಂದ ಆ ದಾರಿಯಾಗಿ ಹೋಗಿ ಬಂದು ದಾರಿಯ ಬಗ್ಗೆ ಅರಿತಿದ್ದ ಒಬ್ಬ ಅರಬ್ಬಿ ಮಾರ್ಗದರ್ಶಿಯನ್ನವರು ಹೊಸತಾಗಿ ನೇಮಿಸಿಕೊಂಡರು.

ಖುರೈಷಿಗಳ ಈ ಉಪಾಯ ಗೂಢಚರರ ಮೂಲಕ ಮಹಮದನ ಕಿವಿ ಮುಟ್ಟಲು ಹೆಚ್ಚು ಸಮಯ ತಗುಲಲಿಲ್ಲ. ಕೂಡಲೆ ಆತ ಕಾರ್ಯಪ್ರವರ್ತನಾದ. ಅವರು ಚಾಪೆ ಕೆಳಗೆ ನುಸುಳಿದರೆ ತಾನು ರಂಗೋಲಿ ಕೆಳಗೆಯೆ ನುಸುಳಲು ಆತ ನಿರ್ಧರಿಸಿದ. ತನ್ನ ನೆಚ್ಚಿನ ಬಂಟ ಝೈದ್'ನನ್ನು ಈ ಕ್ಯಾರವಾನ್ ಮೇಲೆ ಧಾಳಿ ಎಸಗಲು ನೇಮಿಸಿ ಪಡೆಯೊಂದನ್ನು ಅವನೊಂದಿಗೆ ಪೂರ್ವದ ದಾರಿಯತ್ತ ಕಳಿಸಿದ. ನೂರು ಯೋಧರನ್ನ ಹೊಂದಿದ್ದ ಝೈದ್'ನ ಈ ಪಡೆ ಕ್ಯಾರವಾನ್ ಸಾಗುವ ಹಾದಿಯಲ್ಲಿ ಹೊಂಚು ಹಾಕಿ ಕಾದಿದ್ದು ನಿಖರವಾದ ಧಾಳಿ ಸಂಘಟಿಸಿ ಯಶಸ್ವಿಯಾಗಿ ಕೊಳ್ಳೆ ಹೊಡೆದು ಲೂಟಿ ಮಾಡಿದ ಸ್ವತ್ತುಗಳೊಂದಿಗೆ ಕ್ಯಾರವನ್ನನ್ನೆ ಮದೀನದತ್ತ ತಿರುಗಿಸಿತು. ಖುರೈಷಿಗಳು ಓಡಿ ತಪ್ಪಿಸಿಕೊಂಡರಾದರೂ ಅವರ ಸ್ವತ್ತುಗಳೆಲ್ಲಾ ಮುಸಲ್ಮಾನರ ಪಾಲಾಗಿದ್ದವು. ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಸ್ತ್ರಗಳು, ಉಣ್ಣೆ ವಸ್ತುಗಳೊಂದಿಗೆ ಇನ್ನೂ ಅನೇಕ ಬೆಲೆ ಬಾಳುವ ಸ್ವತ್ತುಗಳನ್ನ ವಶಪಡಿಸಿಕೊಳ್ಳಲಾಗಿತ್ತು. ವಾಡಿಕೆಯಂತೆ ಅದರಲ್ಲಿ ಐದನೆ ಒಂದು ಭಾಗವನ್ನ ದೇವರ ಹಾಗೂ ದೇವರ ಪ್ರವಾದಿಯ ಪಾಲಿನ ಹೆಸರಿನಲ್ಲಿ ಮೀಸಲಿರಿಸಿ ಉಳಿದದ್ದನ್ನ ಆ ನೂರು ಮಂದಿಯೂ ಸರಿಸಮವಾಗಿ ಹಂಚಿಕೊಂಡರು. ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತನ್ನ "ಲೈಫ್ ಆಫ್ ಮಹಮದ್" ಕೃತಿಯಲ್ಲಿ ಹೇಳುವ ಪ್ರಕಾರ ಅದು ಅತ್ಯಂತ ಹೆಚ್ಚು ಸಿರಿಯನ್ನ ಕೊಳ್ಳೆ ಹೊಡೆಯಲಾಗಿದ್ದ ಮೊತ್ತ ಮೊದಲ ಪ್ರಕರಣವಾಗಿತ್ತು.



ಮುಂದೆ ಸದ್ಯದ ಭವಿಷ್ಯದಲ್ಲಿ ಮಹಮದ್ ಯಾವುದೆ ದೊಡ್ಡ ಧಾಳಿಗಳನ್ನ ಸಂಘಟಿಸುವತ್ತ ಆಸಕ್ತಿ ತೋರಿಸಲಿಲ್ಲ. ಮುಸಲ್ಮಾನರ ಈ ಧಾಳಿಯ ದೆಸೆಯಿಂದ ಅವರೆಲ್ಲರ ಬಾಳ್ವೆಯಲ್ಲಿ ಚೂರು ಗೆಲುವು ಕಂಡಿತ್ತು. ಆರ್ಥಿಕವಾಗಿ ಅವರ ಬದುಕು ಸುಧಾರಣೆಯ ಹಾದಿಗೆ ಬಂದಿತ್ತು. ಹೀಗಾಗಿ ಅಂತಹ ಲೂಟಿಗೆ ಸದ್ಯೋಭವಿಷ್ಯದಲ್ಲಿ ಇಳಿಯುವ ಅಗತ್ಯ ಅವನಿಗೆ ಕಂಡು ಬರಲಿಲ್ಲ. ಆದರೆ ಈ ಹೊತ್ತಿನಲ್ಲಿ ಮಹಮದ್ ಒಂದು ಭೀಭತ್ಸವಾದ ಹಾಗೂ ಕರುಣಾಜನಕವಾದ ಕ್ರೌರ್ಯಪೂರಿತ ಕೃತ್ಯವನ್ನು ನಡೆಸಿದ. ಕಾಅಬ್ ಇಬ್ನ ಅಶ್ರಫ್ ಎನ್ನುವ ಬೆನ್ ಅನ್ ನದೀರ್ ಯಹೂದಿ ಬುಡಕಟ್ಟಿಗೆ ಸೇರಿದ್ದ ಯುವಕನೊಬ್ಬನ ದುಸ್ಥಿತಿಯ ಕಥೆಯನ್ನ ಇತಿಹಾಸಕಾರ ಅಲ್ ಮುಬಾರಖಿ ಇಲ್ಲಿ ಉಲ್ಲೇಖಿಸುತ್ತಾನೆ. ಆತ ಒಬ್ಬ ಉತ್ತಮ ಕವಿಯಾಗಿದ್ದ ನವ ಮತಾಂತರಿತ ಮುಸಲ್ಮಾನನಾಗಿದ್ದರೂ ಅವನಿಗೆ ಮಹಮದನ ಬಗ್ಗೆ ಅಂತಹ ಸದಾಭಿಪ್ರಾಯವೇನೂ ಇದ್ದಿರಲಿಲ್ಲ. ಮೊದಲು ಮಹಮದನ ನಿಷ್ಠಾವಂತನೆ ಆಗಿದ್ದರೂ ಸಹ ಯಾವಾಗ ಜುರೇಸಲಂನಿಂದ ಮೆಕ್ಕಾದ ಕಡೆಗೆ ಪ್ರಾರ್ಥನೆಯ ದಿಕ್ಕನ್ನ ಬದಲಿಸಲು ಮಹಮದ್ ಆಜ್ಞೆ ನೀಡಿದ್ದನೋ, ಅಂದಿನಿಂದ ಅವನ ಮನಸ್ಸು ಮುರಿದುಹೋಗಿತ್ತು. ಈ ಕರ್ಮಕ್ಕೆ ನಾನ್ಯಾಕೆ ಜಾತಿ ಕೆಡೆಸಿಕೊಂಡು ಕುಲದಿಂದ ಹೊರಗೆ ಹಾಕಿಸಿ ಕೊಳ್ಳಬೇಕಾಗಿತ್ತು? ಎಂದಾತ ಪರಿತಪಿಸಿದ. ಮತಾಂತರವಾದದ್ದಕ್ಕೆ ವ್ಯಥೆಪಟ್ಟ ಆತ ತನ್ನೆಲ್ಲಾ ಸಂಕಟಗಳನ್ನು ಕವನಗಳ ಮೂಲಕ ವ್ಯಕ್ತ ಪಡಿಸಿ ಅವುಗಳನ್ನ ತನ್ನ ಸುಶ್ರಾವ್ಯ ಕಂಠದಲ್ಲಿ ಹಾಡ ತೊಡಗಿದ.



ತಾನು ಮಹಮದನ ಕಣ್ಣು ತಪ್ಪಿಸಿ ಮೆಕ್ಕಾಗೆ ತೆರಳಿ ಅಲ್ಲಿ ಖುರೈಷಿಗಳನ್ನ ಮಹಮದನ ಮೇಲೆ ಯುದ್ಧಕ್ಕಾಗಿ ಪ್ರಚೋದಿಸುವಂತೆ ಹಾಡಿದ. ಗೋಳಿಟ್ಟು ರೋಧಿಸಿದ. ಒಟ್ಟಿನಲ್ಲಿ ಅವರನ್ನು ಮಹಮದನ ವಿರುದ್ಧ ಪ್ರತಿಕಾರ ತೆಗೆದುಕೊಳ್ಳಲು ಉದ್ರೇಕಿಸುವಂತೆ ಹಾಡಿಯೇ ಹಾಡಿದ. ಅಲ್ಲಿಂದ ಮರಳಿ ಧೈರ್ಯವಾಗಿಯೆ ಮದೀನಾಕ್ಕೂ ಬಂದ. ತನ್ನ ಕವಿತ್ವದ ಎಲ್ಲೆಯನ್ನ ಇನ್ನಷ್ಟು ವಿಸ್ತರಿಸಿ ಮುಸಲ್ಮಾನ ಮಹಿಳೆಯರ ದೇಹ ಸೌದರ್ಯವನ್ನೂ ಬಗೆಬಗೆಯಲ್ಲಿ ಬಣ್ಣಿಸಿ ಕವನ ರಚಿಸಿದ. ನವ ಧರ್ಮಾಚರಣೆಯನ್ನ ಬೇಕಂತಲೆ ಕೈ ಬಿಟ್ಟ. ಒಟ್ಟಿನಲ್ಲಿ ಫಕೀರನಂತೆ ತನ್ನ ನೀತಿ ನಿಯಮಗಳಿಗೆ ಬದ್ಧನಾಗಿ ಬಾಳಲು ಆರಂಭಿಸಿದ ಆತ ಮಹಮದನ ಪಾಲಿಗೆ ಮಾತ್ರ ದೊಡ್ಡ ತಲೆ ನೋವಾಗಿ ಬಿಟ್ಟ.



ಇದರಿಂದ ರೊಚ್ಚಿಗೆದ್ದ ಮಹಮದ್ ಇವನನ್ನು ಹೀಗೆ ಮುಂದುವರೆಯಲು ಬಿಡದೆ ಮೊಳಕೆಯಲ್ಲಿಯೆ ಚಿವುಟಿ ಹಾಕಲು ನಿರ್ಧರಿಸಿದ. ಹೀಗೆಯೆ ಬಿಟ್ಟರೆ ತನಗೂ ತನ್ನ ನೂತನ ಧರ್ಮಕ್ಕೂ ಕಂಟಕ ಕಾದಿದೆ ಅಂತನಿಸಿತವನಿಗೆ. ಹೀಗಾಗಿ ಅವನ ಮನೋಭಿಲಾಷೆಯಂತೆ ಒಬ್ಬ ಹಂತಕನನ್ನು ಈ ಕವಿಯನ್ನು ಕೊಲ್ಲಲು ನೇಮಕ ಮಾಡಲಾಯಿತು. ಕಾಕತಾಳೀಯವೆಂಬಂತೆ ಮುಸ್ಲಾಮನೆಂಬುವವನ ಮಗನಾಗಿದ್ದ ಆತನ ಹೆಸರೂ ಸಹ ಮಹಮದನೆಂದೆ ಇತ್ತು! ಆತ ತನ್ನ ನಾಲ್ಕು ಅನುಚರರನ್ನ ಕಟ್ಟಿಕೊಂಡು ಕವಿ ಕಾಅಬನ ಮನೆಯತ್ತ ಹೊರಟ. ವಿಚಿತ್ರ ಗಮನಿಸಿ ಕೊಲ್ಲ ಹೊರಟವನ ಹಾಗೂ ಕೊಲ್ಲ ಕಳಿಸಿದವನ ಹೆಸರು "ಮಹಮದ್" ಹಾಗೂ ಅವರು ಕೊಲ್ಲಲು ಹೊರಟ ವ್ಯಕ್ತಿಯ ಹೆಸರು "ಕಾಅಬ್"!. ಇದು ಮುಂದೊಂದು ದಿನ ನಡೆಯುವ ಐತಿಹಾಸಿಕ ಕಾಬಾ ಸ್ವಾಧೀನದ ಪ್ರಾತ್ಯಕ್ಷಿಕೆಯಂತೆಯೆ ಅನ್ನಿಸುತ್ತದೆ.


ಮೊದಲು ಕಾಅಬ್'ನ ಮಲ ಸಹೋದರ ನೈಲಾನನ್ನವರು ಸರಿಯಾಗಿ 'ವಿಚಾರಿಸಿ'ಕೊಂಡರು. ಅವನನ್ನ ಮುಂದೆ ಬಿಟ್ಟು ಅವನ ಮೂಲಕವೆ ಕಾಅಬ್'ನನ್ನು ಮನೆಯಿಂದ ಹೊರಗೆ ಕರೆಸಿ ತಕ್ಕ ಶಾಸ್ತಿ ಮಾಡುವುದು ಅವರ ಉಪಾಯವಾಗಿತ್ತು. ಅದರಂತೆಯೆ ಸುಸೂತ್ರವಾಗಿ ಉಪಾಯವನ್ನ ಜಾರಿಗೆ ತಂದು ಕಾಅಬ್'ನ ತಲೆಯನ್ನ ಕಡಿದು ಮಹಮದನ ಸನ್ನಿಧಿಗೆ ಅದನ್ನ ಒಪ್ಪಿಸಿ ವಿನೀತರಾಗಿ ನಿಂತರು. ಕಾಅಬ್ ಸಂಪಾದಿಸಿದ್ದ ಆಸ್ತಿಯೆಲ್ಲಾ ಈ ಕೃತ್ಯದ ಮೂಲಕ ನೈಲಾನ ಪಾಲಾಗಿತ್ತು. ಆದರೆ ಈ ಬಗೆಯಲ್ಲಿ ಬೆನ್ನಿಗೆ ಚೂರಿ ಹಾಕಿ ಕಾಅಬ್ ಸಂಪಾದನೆಯನ್ನೆಲ್ಲಾ ಈ ನೈಲಾ ದೋಚಿದ್ದು ಕಾಅಬ್'ನ ಸ್ವಂತ ಸಹೋದರ ಮುಹೈಸಾನಿಗೆ ಸರಿ ಎನ್ನಿಸಲಿಲ್ಲ. ಅದರ ಕುರಿತು ಆಕ್ಷೇಪವನ್ನಾತ ಮಾಡಿದಾಗ ನೈಲಾ "ಮಹಮದನೇನಾದರೂ ಕಾಅಬನ ಬದಲು ನಿನ್ನನ್ನು ಕೊಲ್ಲಲು ತಿಳಿಸಿದ್ದರೂ ಸಹ ನಾನು ಹಿಂಜರಿಯದೆ ಅದನ್ನೆ ಮಾಡುತ್ತಿದ್ದೆ!" ಎಂದಾಗ ಅವನಿಗೆ ದಿಗ್ಭ್ರಮೆಯಾಯಿತು. ಪರಮ ಪುಕ್ಕಲನಾಗಿದ್ದ ಆತ 'ನಿನ್ನ ಹೊಸ ಧರ್ಮದ ಕಥೆ ಇಲ್ಲಿಗೆ ಬಂದು ನಿಂತಿದೆಯ? ಹಾಗಿದ್ದರೆ ಇದೊಂದು ಅದ್ಭುತ ಧರ್ಮವೆ ಸರಿ!" ಅಂದವನೆ ಶರತ್ತಿಲ್ಲದೆ ಮಹಮದನ ಮುಂದೆ ಸಾಗಿ ತಾನೂ ಇಸ್ಲಾಂ ಸ್ವೀಕರಿಸಿದ ಎನ್ನುತ್ತಾರೆ ತಮ್ಮ "ದ ಲೈಫ್ ಆಫ್ ಮಹಮದ್' ಕೃತಿಯ ಇನ್ನೂರಾ ನಲವತ್ತೊಂಬತ್ತನೆಯ ಪುಟದಲ್ಲಿ ಸರ್ ವಿಲಿಯಂ ಮ್ಯೂರ್.


ಯಹೂದಿಗಳು ಕಾಲ ಕ್ರಮೇಣ ಮಹಮದನ ಆಕ್ರಮಣಕಾರಿ ಮನೋಭಾವ ಹಾಗೂ ನಡೆ-ನುಡಿಗಳಿಂದ ಜೀವ ಭಯ ಸಾರುವ ಅನೇಕ ಸಂದರ್ಭಗಳನ್ನು ಎದುರಿಸಬೇಕಾಯಿತು. ಪದೆ ಪದೆ ಮುಸಲ್ಮಾನರಿಂದ ತಮ್ಮ ಬುಡಕಟ್ಟುಗಳ ಮೇಲಾಗುತ್ತಿದ್ದ ಹಿಂಸಾಚಾರಗಳಿಂದ ಅವರೆಲ್ಲಾ ತಲ್ಲಣಿಸಿದರು. ಹೀಗಾಗಿ ಇರುಳಿನ ವೇಳೆ ತಮ್ಮ ಮನೆ ಮಠಗಳಿಂದ ಹೊರ ಬರಲೆ ಅವರೆಲ್ಲಾ ಹೆದರುವಂತಾಯಿತು. ಅಸ್ಮಾ ಹಾಗೂ ಕಾಅಬ್'ನಿಗಾದ ಗತಿ ತಮಗೂ ಬಂದರೂ ಬರ ಬಹುದು ಎನ್ನುವ ಭಯದ ವಾತಾವರಣ ಅವರ ವಸತಿಯನ್ನ ಆಕ್ರಮಿಸಿತು. ಹೀಗಾಗಿ ಇದಕ್ಕೊಂದು ತಡೆ ಒಡ್ದಲು ನಿರ್ಧರಿಸಿದ ಅವರೆಲ್ಲ ನಿಯೋಗ ಒಂದನ್ನು ಕಟ್ಟಿಕೊಂಡು ಮಹಮದನನ್ನು ಭೇಟಿಯಾಗಿ "ಹಿಂದೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದವನ್ನು ಮುರಿದ್ದಾದರೂ ಏಕೆ? ತಮ್ಮವರಲ್ಲೊಬ್ಬನಾಗಿದ್ದ ಕಾಅಬ್'ನನ್ನು ವ್ಯಥಾ ಹತ್ಯೆ ಮಾಡಬೇಕಿತ್ತೆ?" ಎಂದು ಪ್ರಶ್ನಿಸಿದರು. ಅದಕ್ಕೆ ಮಹಮದ್ "ನನ್ನ ಮೇಲೆ ಕೆಟ್ಟ ಕೆಟ್ಟದಾಗಿ ಇಲ್ಲ ಸಲ್ಲದ್ದನೆಲ್ಲಾ ಕವನವಾಗಿ ರಚಿಸಿ ಹಾಡಿದ್ದಕ್ಕೆ ಕಾಆಬ್'ನನ್ನು ಕೊಲ್ಲಬೇಕಾಯಿತು. ಇನ್ಯಾರಾದರೂ ಅಂತಹ ಧ್ರಾಷ್ಟ್ಯಕ್ಕೆ ಇಳಿದರೆ ಅವರಿಗೂ ಮುಲಾಜಿಲ್ಲದೆ ಅದೆಶಿಕ್ಷೆ ವಿಧಿಸುವುವೆ" ಎಂದು ಉತ್ತರಿಸಿದ. ಅದೆ ಹೊತ್ತಿನಲ್ಲಿ ಕೆಲವು ಶರತ್ತುಗಳೊಡನೆ ಅವರೆಲ್ಲರೊಂದಿಗೆ ಹೊಸ ಶಾಂತಿ ಒಪ್ಪಂದವನ್ನೇನ್ನೋ ಆತ ಏರ್ಪಡಿಸಿಕೊಂಡ ಆದರೆ ಇದರಿಂದ ಯಾಹೂದಿ ಬುಡಕಟ್ಟುಗಳಲ್ಲಿ ನೆಲೆಸಿದ್ದ ಅಭದ್ರತೆ ಹಾಗೂ ಆತಂಕದ ವಾತಾವರಣ ಕರಗಲಿಲ್ಲ.


ಕ್ರಿಸ್ತಶಕ ೬೨೪ರ ನವೆಂಬರ್ ತಿಂಗಳಿನಲ್ಲಿ ಮಹಮದ್ ಮೂರನೆ ಬಾರಿ ಲಗ್ನವಾದ, ಓಮರ್'ನ ಮಗಳು ಹಫ್ಸಾ ಆತನ ನೂತನ ಮಡದಿಯಾಗಿ ಮನೆ ತುಂಬಿದಳು. ವಾಸ್ತವವಾಗಿ ಇಪ್ಪತ್ತು ವರ್ಷ ಪ್ರಾಯದ ಅವಳಿಗೂ ಇದು ಎರಡನೆ ವಿವಾಹವಾಗಿತ್ತು. ಅದೂವರೆಗೂ ಆಕೆ ಖೋನಿಸ್ ಎಂಬಾತನ ವಿಧವೆಯಾಗಿದ್ದಳು. ಖಾಯಿಲೆಯಿಂದ ನರಳಿದ್ದ ಖೋನಿಸ್ ಏಳು ತಿಂಗಳ ಹಿಂದೆ ತೀರಿ ಹೋಗಿದ್ದ. ಈ ಮದುವೆಯ ಕಾರಣ ಅಬು ಬಕರನಂತೆ ಓಮರ್ ಕೂಡಾ ಮಹಮದನ ಆಪ್ತ ವಲಯಕ್ಕೆ ಸೇರಿ ಹೋದ. ಅದಾದ ನಂತರ ಮೊದಲ ಪತ್ನಿ ಖತೀಜಾಳಿಂದ ತಾನು ಪಡೆದಿದ್ದ ಹದಿನೆಂಟು ವರ್ಷದ ಮಗಳು ಫಾತಿಮಾಳನ್ನು ತನ್ನ ದೊಡ್ಡಪ್ಪ ಅಬು ತಾಲೀಬನ ಮಗ ಅಲಿಗೆ ಕೊಟ್ಟು ಮಹಮದ್ ವಿವಾಹ ನಡೆಸಿದ. ಇತಿಹಾಸಕಾರ ಮ್ಯೂರ್ ಬಣ್ಣಿಸುವಂತೆ ಅಲಿ ಒಬ್ಬ "ಸರಳ ಸಾಧು ಹಾಗು ಆಕಾಂಕ್ಷೆಗಳಿಲ್ಲದ" ವ್ಯಕ್ತಿಯಾಗಿದ್ದ. ಮುಂದಿನ ಎರಡು ವರ್ಷಗಳಲ್ಲಿ ಆಕೆ ಎರಡು ಗಂಡು ಮಕ್ಕಳನ್ನು ಹೆತ್ತು ಮಹಮದನ ವಂಶವನ್ನು ಬೆಳೆಸಿದಳು. ಇಸ್ಲಾಮಿನ ಚರಿತ್ರಾರ್ಹ ವ್ಯಕ್ತಿಗಳಾದ 'ಹಸನ್' ಹಾಗೂ 'ಹುಸೈನ್' ಈ ಅಲಿ ಹಾಗೂ ಫಾತಿಮಾ ದಂಪತಿಗಳ ಸುಪುತ್ರರು. ಇವರದ್ದೆ ಸೈಯದ್ ವಂಶವಾಗಿ ಮುಂದೆ ಖ್ಯಾತವಾಯಿತು. ಇವರ ಅನುಯಾಯಿಗಳನ್ನೆ ಇಂದು ಶಿಯಾ ಪಂಥೀಯರು ಎಂದು ಗುರುತಿಸಲಾಗುತ್ತದೆ.


ಕ್ರಿಸ್ತಶಕ ೬೨೫ರಲ್ಲಿ ಮದೀನಾಕ್ಕೆ ವಲಸೆ ಬಂದು ಮಹಮದ್ ಮೂರು ವರ್ಷಗಳನ್ನ ಕಳೆದಾಗಿತ್ತು. ಈಗ ಆತನ ಮೇಲೆ ಖುರೈಷಿ ಪಡೆಗಳ ಪ್ರತಿಕಾರದ ಕಣ್ಣು ಮತ್ತೊಮ್ಮೆ ಬಿತ್ತು. ತಮ್ಮೊಳಗೆ ಯುದ್ಧ ನಿಷ್ಕರ್ಷಿಸಿ ಸ್ಥಳಿಯ ಬೆಂದ್'ನಿ ಬುಡಕಟ್ಟಿನವರೊಂದಿಗೂ ಯುದ್ಧ ಸಂಧಿ ಮಾಡಿಕೊಂಡ ಅವರು ಮೂರು ಸಾವಿರ ಯೋಧರ ಭರ್ಜರಿ ಪಡೆಯನ್ನೆ ಕಟ್ಟಿ ಒಂದು ದೊಡ್ಡ ಕದನದ ಸಿದ್ಧತೆಯಲ್ಲಿಯೆ ಗಂಭೀರವಾಗಿ ತೊಡಗಿದರು. ಹೀಗೆ ಸಿದ್ಧವಾಗಿ ಹೊರಟ ಖುರೈಷಿಗಳ ಪಡೆಯಲ್ಲಿ ಕೇವಲ ಪುರುಷರಷ್ಟೆ ಇಲ್ಲದೆ ಮುಖಂಡ ಅಬು ಸಫ್ಯಾನನ ಇಬ್ಬರು ಹೆಂಡಿರೂ ಸಹ ಹೊರಟಿದ್ದರು. ಹಿಂದ್ ತನ್ನ ತಂದೆಯನ್ನ ಬದರಿನಲ್ಲಿ ಕೊಂದ ಹಂಝಾನ ಹುಟ್ಟಡಗಿಸಲು ಕಾತರಳಾಗಿದ್ದು ಅದಕ್ಕಾಗಿ ಪ್ರತ್ಯೇಕವಾಗಿ ಒಬ್ಬ ಯೋಧನನ್ನು ನೇಮಿಸಿಕೊಂಡಿದ್ದಳು.



ಇವಳಿಂದ ಸ್ಪೂರ್ತಿ ಪಡೆದ ಇನ್ನೂ ಕೆಲವು ಖುರೈಷಿ ಹೆಂಗಸರು ಅವಳ ಮೇಲ್ಪಂಕ್ತಿಯನ್ನು ಅನುಸರಿಸಿ ಪಡೆಯನ್ನ ಹಿಂಬಾಲಿಸಿದರು. ನಗಾರಿ ಬಾರಿಸಿ, ವೀರ ಗೀತೆ ಹಾಡಿ, ಆಶ್ವಾಸನಾ ಪೂರಿತ ವಿಜಯದ ರಣ ಕಹಳೆಯನ್ನ ಮೊಳಗಿಸುತ್ತಾ ಅವರೆಲ್ಲಾ ಯೋಧರನ್ನ ಹುರಿದುಂಬಿಸಿದರು. ಮುಂದೆ ಕದನದಲ್ಲಿ ಗಾಯಗೊಂಡವರ ದೈಹಿಕ ಉಪಚಾರಗಳನ್ನೂ ಈ ಎಲ್ಲಾ ಮಹಿಳಾ ಮಣಿಗಳು ಯುದ್ಧಭೂಮಿಯಲ್ಲಿ ಮಾಡಿದರು. ಬಟ್ಟೆ ಬರೆ ಹೊಲೆದರು. ಅಡುಗೆ ಮಾಡಿ ಬಡಿಸಿದರು. ಗಾಯಾಳುಗಳನ್ನು ಶುಶ್ರೂಷೆ ಮಾಡಿದರು. ಕೆಳ ಬಿದ್ದ ಖುರೈಷಿ ಧ್ವಜವನ್ನ ಎತ್ತಿ ಕಟ್ಟಿದರು. ಹಿಮ್ಮೆಟ್ಟಿ ಹಿಂದೋಡುತ್ತಿದ್ದ ಸೈನಿಕರನ್ನ ಹುರಿದುಂಬಿಸಿ ಮತ್ತೆ ರಣಾಂಗಣಕ್ಕೆ ಅಟ್ಟಿದರು.



ಪಶ್ಚಿಮದ ಸಮುದ್ರ ತೀರದ ಹೆದ್ದಾರಿ ಬಳಸಿ ಸಾಗಿದ ಮೆಕ್ಕಾದ ಈ ಖುರೈಷಿಗಳ ಬೃಹತ್ ಸೈನ್ಯ ಮದೀನಾ ಹೊರ ವಲಯ ಓಹೋದ್ ಎಂಬ ವಿಶಾಲವಾದ ಬಯಲಿನಲ್ಲಿ ಬೀಡು ಬಿಟ್ಟಿತ್ತು. ಅದಕ್ಕಾಗಿ ಅವರು ಹತ್ತು ದಿನಗಳ ಪ್ರಯಾಣ ಮಾಡಿ ದಣಿದಿದ್ದರು. ಬೆಟ್ಟ ಗುಡ್ಡಗಳಿಂದ ಮದೀನಾದ ದಿಕ್ಕಿನತ್ತ ಆಕ್ರಮಣ ಎಸಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇತ್ತ ಪಶ್ಚಿಮಕ್ಕೆ ಸಿರಿಯಾ ದೇಶಕ್ಕೆ ಸಾಗುವ ಹೆದ್ದಾರಿಯಿದ್ದು ಅಲ್ಲಿಗೂ ಯುದ್ಧವನ್ನ ವಿಸ್ತರಿಸಿದಲ್ಲಿ ಜನನಿಬಿಡವಾಗಿದ್ದ ಆ ಪ್ರದೇಶ ಆತಂಕಕಾರಿಯಾಗಿ ಬದಲಾಗುವ ಸಾಧ್ಯತೆ ಇತ್ತು. ಹೀಗಾಗಿ ಹೇಗಾದರೂ ಸರಿ ಮಹಮದನ ಸೈನ್ಯವನ್ನೆ ಉಪಾಯದಿಂದ ಇಲ್ಲಿಗೆ ಎಳೆದು ತಂದು ಹೋರಾಡಿದಲ್ಲಿ ವಿಜಯ ನಮಗೆ ಕಟ್ಟಿಟ್ಟ ಬುತ್ತಿ ಎಂದು ಅವರೆಲ್ಲಾ ಎಣಿಕೆ ಹಾಕಿದರು.


ಇತ್ತ ಇವರ ಲಗ್ಗೆಯ ಸುದ್ದಿ ಅರಿತ ಮಹಮದ್ ತನ್ನ ಹಿತೈಷಿಗಳೊಂದಿಗೆ ಯುದ್ಧದ ಸಾಧ್ಯಾಸಾಧ್ಯತೆಗಳನ್ನ ಸಮಾಲೋಚಿಸಿದ. ಅವರೆಲ್ಲರ ಅಭಿಪ್ರಾಯ ಒಮ್ಮತದಿಂದ ಕೂಡಿತ್ತು. ನಾವು ನಗರದೊಳಗಡೆಯೆ ಇದ್ದು ಕಾದಾಡುವುದು ಕ್ಷೇಮ. ಒಂದುವೇಳೆ ಖುರೈಷಿಗಳೇನಾದರೂ ಇಲ್ಲಿಗೆ ದಾಳಿ ಇಟ್ಟರೆ ಸುಲಭವಾಗಿ ಅವರನ್ನ ಮಣಿಸಬಹುದು ಎಂದರು ಅವರೆಲ್ಲಾ. ರಕ್ಷಣೆಯ ದೃಷ್ಟಿಯಿಂದ ಇದು ನಿಜವೂ ಆಗಿತ್ತು. ಅಲ್ಲದೆ ಅಸಂಖ್ಯವಾಗಿರುವಂತೆ ಕಾಣಿಸುವ ಅವರ ಬೆನ್ನಟ್ಟಿ ಹೋದಲ್ಲಿ ನಷ್ಟ ನಮಗೆ ಹೊರತು ಅವರಿಗಲ್ಲ ಎನ್ನುವ ಹಿತನುಡಿಯನ್ನೂ ಕೆಲವರು ಹೇಳಿದರು. ಆದರೆ ಅವರ ಈ ನಿಲುವು ಕೆಲವು ಯುವಕರಿಗೆ ಸರಿಬರಲಿಲ್ಲ. ಹಾಗೊಂದು ವೇಳೆ ಶತ್ರುವನ್ನ ನಾವೆ ಹೇಡಿಗಳಂತೆ ಕಾದು ಕುಳಿತುಕೊಂಡರೆ ಇಡಿ ಅರೇಬಿಯಾವೆ ತಮ್ಮನ್ನ ಹೀಯ್ಯಾಳಿಸಿಕೊಂಡು ಗಹಗಹಿಸುತ್ತದೆ ಎಂದವರು ಮಹಮದನಿಗೆ ಎಚ್ಚರಿಸಿದರು. ಜೊತೆಗೆ ಇದರಿಂದ ವೈರಿಗಳ ಹುಮ್ಮಸ್ಸು ಗರಿಗೆದರಿ ತಮ್ಮ ಮೇಲೆ ಇನ್ನೂ ಹೆಚ್ಚಿನ ಶೌರ್ಯದಿಂದ ಎರಗಿ ಆಕ್ರಮಿಸಿ ಅಪರಿಮಿತ ಹಿಂಸೆಗೆ ಗುರಿ ಮಾಡಬಹುದು ಎಂದವರು ಅಭಿಪ್ರಾಯ ಪಟ್ಟರು. ಅವರ ಅಭಿಪ್ರಾಯವನ್ನು ಮನ್ನಿಸಿದ ಮಹಮದ್ ಸ್ವತಃ ತಾನೆ ಶಸ್ತ್ರಾಸ್ತ್ರ ಹಿಡಿದು ಪಡೆಯನ್ನ ಹುರಿದುಂಬಿಸುತ್ತಾ ಓಹೋದ್'ನ ಹಾದಿ ಹಿಡಿದ.




ಬದಲಾದ ತನ್ನ ನಿಲುವಿನ ಅನುಸಾರ ಆತ ಅಬ್ದುಲ್ಲಾನ ಯಹೂದಿ ಪಡೆಯ ಸಹಕಾರವನ್ನು ನಿರಾಕರಿಸಿದ. ಯಾರು ತನ್ನ ಮತ ಸ್ವೀಕರಿಸಲಿಲ್ಲವೋ, ನನ್ನ ಮತಭಾಂಧವರಾಗಿಲ್ಲವೋ ಅಂತವರ ಸಹಾಯದಿಂದ ಅವಿಶ್ವಾಸಿಗಳ ಮೇಲೆ ಹೋರಾಡುವುದು ಬೇಕಾಗಿಲ್ಲ ಎಂದಾತ ಸ್ಪಷ್ಟವಾಗಿ ತಿಳಿಸಿದ. ಇತ್ತ ಯುದ್ಧರಂಗದಲ್ಲಿ ಮುಸಲ್ಮಾನರ ಹಾಗೂ ಖುರೈಷಿಗಳ ಪಡೆಗಳು ಬೀಡು ಬಿಟ್ಟ ಸ್ಥಳದ ಮಧ್ಯೆ ಇದ್ದ ಒಂದು ಬೆಟ್ಟ ಅವೆರಡನ್ನೂ ನೈಸರ್ಗಿಕವಾಗಿ ಬೇರ್ಪಡಿಸಿದ್ದವು. ಮಾರನೆ ದಿನ ಖುರೈಷಿ ಪಡೆ ಬೆಟ್ಟಗುಡ್ದಗಳಿಂದ ಆವರಿಸಿದ್ದ ನಡುವಿನ ಕಣಿವೆಗಳಲ್ಲಿ ಸಾಗಿತು. ಓಹೋದ್ ಹಾಗೂ ಮದೀನಾದ ನಡುವಿನ ಅಂತರ ಕೇವಲ ಮೂರು ಮೈಲಿಯದ್ದಾಗಿತ್ತು. ಅದು ಇಳಿಜಾರಾಗಿದ್ದ ಒಂದು ಬೆಟ್ಟ ಆವೃತ್ತ ಪ್ರದೇಶವಾಗಿತ್ತು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಆದರೆ ಇನ್ನಿತರ ಕಾಲದಲ್ಲಿ ಕೇವಲ ಕಲ್ಲು ತುಂಬಿ ಬರಡಾಗಿರುವ ಒಂದು ನದಿ ಪಾತ್ರದಲ್ಲಿ ಮಹಮದನ ಪಡೆ ಬೀಡು ಬಿಟ್ಟದ್ದನ್ನವರು ಕಂಡರು.



( ಇನ್ನೂ ಇದೆ.)

26 October 2015

ವಲಿ - ೧೭








ಬದರ್ ವಿಜಯದ ನಂತರ ಮುಸಲ್ಮಾನರಲ್ಲಿನ ನಡುವಳಿಕೆಯಲ್ಲಿ ಬರ್ಬರತೆ ಕ್ರಮೇಣ ಹೆಚ್ಚಿತು. ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ಇದಕ್ಕೆ ಅಸ್ಮಾ ಎಂಬ ಮಹಿಳೆಯ ಉದಾಹರಣೆ ಕೊಟ್ಟು ವಿವರಿಸಿದ್ದಾನೆ. ಅಸ್ಮಾ ಮದೀನಾದ ಸ್ಥಳಿಯ ಔಸ್ ಬುಡಕಟ್ಟಿಗೆ ಸೇರಿದ್ದ ಒಬ್ಬ ಸುಂದರ ಹಾಗೂ ಶಿಕ್ಷಿತ ಮಹಿಳೆಯಾಗಿದ್ದಳು. ಕವಿತ್ವ ಅವಳಿಗೆ ಒಲಿದಿತ್ತು. ಆಕೆ ಇಸ್ಲಾಮಿನ ಹೆಸರಿನ ಡಂಭಾಚಾರವನ್ನ ನೇರಾನೇರ ವಿರೋಧಿಸುತ್ತಿದ್ದಳಲ್ಲದೆ ಸಾರ್ವಜನಿಕವಾಗಿಯೂ ಅದರ ಹುಳುಕುಗಳನ್ನ ಸತರ್ಕವಾಗಿ ಖಂಡಿಸಲು ಎಂದಿಗೂ ಹೆದರುತ್ತಿರಲಿಲ್ಲ. ಬದರ್ ಯುದ್ಧದ ನಂತರ ಆಕೆಯೂ ಸಂಬಂಧಿಗಳನ್ನ ಕಳೆದುಕೊಂಡು ಸಂತೃಸ್ತಳಾಗಿದ್ದಳು. ತಮ್ಮದಲ್ಲದ ಈ ಕಾಳಗದಲ್ಲಿ ಮಹಮದನೆಂಬ ಅನಾಮಧೇಯನ ಪಡೆ ಸೇರಿ ವಿನಾಕಾರಣ ಸತ್ತು ಹೋದ ತನ್ನ ಬಂಢುವಿನ ಮೂರ್ಖತನವನ್ನ ನೆನೆದು ಆಕೆ ಒಂದು ಕವನ ರಚಿಸಿದಳು.



ಅದರಲ್ಲಿ ಸಹಜವಾಗಿ ಮಹಮದನನ್ನು ಕಟುವಾಗಿ ಖಂಡಿಸಲಾಗಿತ್ತು. ಈ ಕವನ ಬಾಯಿಂದ ಬಾಯಿಗೆ ಹರಡಿ ನವ ಧಾರ್ಮಿಕರಾದ ಮುಸಲ್ಮಾನರ ಕಿವಿಯನ್ನೂ ಸಹ ಹೋಗಿ ಮುಟ್ಟಿತು. ವಿಷಯ ವಾಸ್ತವವೆ ಆಗಿದ್ದರೂ ಅದನ್ನ ಜೀರ್ಣಿಸಿಕೊಳ್ಳಲಾಗದ ಮತಿಗೆಟ್ಟ ಮುಸಲ್ಮಾನರು ತಮ್ಮ ಪ್ರವಾದಿಯನ್ನ ಹೀಯ್ಯಾಳಿಸಿದ ಆಸ್ಮಾಳ ಬಗ್ಗೆ ವಿಪರೀತ ರೋಷಗೊಂಡರು. ಅವರ ಪಿತೂರಿಗಳು ಅಸ್ಮಾಳ ವಿರುದ್ಧ ಶುರುವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.


ಆ ಪಿತೂರಿಕೋರರ ಪಡೆಯಲ್ಲಿ ಓಮೈರ್ ಎಂಬ ಹುಟ್ಟು ಕುರುಡನೂ ಒಬ್ಬನಿದ್ದ. ತಮಾಷೆಯೆಂದರೆ ಅಸ್ಮಾ ರಚಿಸಿದ ಅನೇಕ ಕವನಗಳನ್ನ ಹಾಡಿಕೊಂಡೆ ಆತ ಭಿಕ್ಷಾಟನೆ ಮಾಡಿ ತನ್ನ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಆತ ತಾನು ಅವಳ ಹುಟ್ಟಡಗಿಸುವುದಾಗಿ ಧರ್ಮೋನ್ಮಾದದಲ್ಲಿ ಪಣ ತೊಟ್ಟ. ಮಧ್ಯರಾತ್ರಿಯಲ್ಲಿ ಅಸ್ಮಾಳ ಮನೆಗೆ ಕಳ್ಳನಂತೆ ನುಸುಳಿ ಆಕೆ ತನ್ನ ಪುಟ್ಟ ಬಾಲೆಯ ಜೊತೆ ಗಾಢ ನಿದ್ದೆಯಲ್ಲಿದ್ದಾಗ ಎದೆಗೆ ಇರಿದು ಕೊಂದನಲ್ಲದೆ ಎಳೆಯ ಮಗುವನ್ನೂ ಕತ್ತರಿಸಿ ಹಾಕಿದ ಓಮೈರ್. ಮಾರನೆ ದಿನ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಇತ್ತು. ಅಸ್ಮಾಳ ಕೊಲೆ ಅದಾಗಲೆ ಸುದ್ದಿಯೂ ಆಗಿತ್ತು. ತನ್ನ ಪ್ರವಚನ ಮುಗಿದ ನಂತರ ಮಹಮದ್ ಓಮೈರ್'ನನ್ನು ಉದ್ದೇಶಿಸಿ "ನೀನು ಅಸ್ಮಾಳನ್ನು ಕೊಲೆಗೈದೆ ಅಲ್ಲವೆ?" ಎಂದು ಪ್ರಶ್ನಿಸಿದ. ಅದಕ್ಕೆ ಆತ " ಹೌದು, ಇದಕ್ಕೆ ಭಯ ಪಡಬೇಕೆ?" ಎಂದು ಕೇಳಿದ. ಆಗ ಮಹಮದ್ ತೀರಾ ಉಡಾಫೆಯಿಂದ "ಹಾಗೇನೂ ಇಲ್ಲ! ಕೇವಲ ಕೆಲವು ಮೇಕೆಗಳು ಒಂದಕ್ಕೊಂದು ಹೊಡೆದಾಡಿಕೊಳ್ಳಬಹುದು ಅಷ್ಟೆ!!" ಎಂದು ಮಾರುತ್ತರ ನೀಡಿದ. "ದೇವರಿಗೆ ಹಾಗೂ ಅವನ ಪ್ರವಾದಿಗೆ ಸಹಾಯ ಮಾಡಿದ ವ್ಯಕ್ತಿಯನ್ನ ನೀವು ನೋಡಬೇಕೆ? ನೋಡಿ ಅವನಿಲ್ಲೆ ಇದ್ದಾನೆ!" ಎಂದು ನೆರೆದಿದ್ದವರನ್ನು ಉದ್ದೇಶಿಸಿ ಅವನು ಉದ್ಘರಿಸಿದ. ಎಲ್ಲರೂ "ಈ ಕುರುಡನೆ!" ಎಂದು ಗುಸುಗುಸು ನಡೆಸಿದರು. ಆಗ "ಕುರುಡನೆನ್ನದಿರಿ! ಓಮೈರ್ ಎಂದು ಕರೆಯಿರಿ" ಎಂದ ಮಹಮದ್.


ಅಸ್ಮಾಳನ್ನು ಸಮಾಧಿ ಮಾಡಿ ಹಿಂದಿರುಗುತ್ತಿದ್ದ ಅವಳ ಮಕ್ಕಳು ದಾರಿಯಲ್ಲಿ ಸಿಕ್ಕ ಓಮೈರ್'ನನ್ನು ಕಂಡು ತಮ್ಮ ತಾಯಿಯ ಕೃಪೆಯಿಂದಲೆ ಬದುಕುತ್ತಿದ್ದ ನೀನು ಈಗ ಅವಳನ್ನೆ ಕೊಂದದ್ದು ನ್ಯಾಯವೆ? ಎಂದು ಪ್ರಶ್ನಿಸಿದರು. ಅವರ ಬಹಿರಂಗದ ಆಪಾದನೆಯಿಂದ ವಿಚಲಿತನಾದ ಓಮೈರ್ "ಅಸ್ಮಾ ಮಾಡಿದ ತಪ್ಪನ್ನೆ ನಿಮ್ಮಲ್ಲಿ ಇನ್ಯಾರು ಮಾಡಿದರೂ ನಾನು ಅವರಿಗೂ ಅದೆ ಗತಿ ಕಾಣಿಸುತ್ತೇನೆ! ಇಡಿ ಕುಟುಂಬವನ್ನೆ ಹತ್ಯೆ ಮಾಡುತ್ತೇನೆ" ಎಂದು ಭಿಡೆಯಿಲ್ಲದೆ ಹೆದರಿಸಿದ. ಅಲ್ಲಿ ನೆರೆದಿದ್ದವರಲ್ಲಿ ಯಾರೂ ತಮ್ಮ ಸಹಾಯಕ್ಕೆ ಬಾರದ್ದನ್ನು ಕಂಡು ಅವರೆಲ್ಲಾ ತೆಪ್ಪಗಾದರು. ಮಹಮದ್ ಹಾಗೂ ಅವನ ಅಲ್ಪಾನುಯಾಯಿಗಳ ಮಿತಿಮೀರಿದ ಧರ್ಮೋತ್ಸಾಹ ಕಂಡು ಅವರು ಅದುರಿ ಹೋದರು. ಅವರ ವ್ಯಾಪಾರ ವಹಿವಾಟುಗಳೆಲ್ಲಾ ಮುಸಲ್ಮಾನರ ಪ್ರದೇಶದಿಂದ ಸುತ್ತುವರೆದಿತ್ತು. ಹೀಗಾಗಿ ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಧರ್ಮಾಂತ್ರವನ್ನು ಅವರು ಆಯ್ದುಕೊಂಡರು. ವ್ಯಥಾ ರಕ್ತಪಾತವಾಗಿ ಸಾಯುವುದಕ್ಕಿಂತ ಮುಸಲ್ಮಾನರಾಗಿ ಬದುಕುವ ನಿರ್ಧಾರವನ್ನ ಕೈಗೊಂಡರು. ಹೀಗೆ ಅಸ್ಮಾಳೆಂಬ ಬಂಡುಕೋರ ಕವಯತ್ರಿಯ ಇಡಿ ಕುಟುಂಬ ಆಕೆ ವಿರೋಧಿಸುತ್ತಿದ್ದ ಅದೆ ಇಸ್ಲಾಮಿನ ಅಡಿಯಾಳಾಯಿತು.


ಇದೆ ರೀತಿಯ ಇನ್ನೊಂದು ಪ್ರಕರಣವನ್ನ ಸರ್ ಮ್ಯೂರ್ ಒದಗಿಸಿದ್ದಾರೆ. ಅದು ವೃದ್ಧ ಯಹೂದಿ ಅಫಾಕನದು. ಬೆನ್ ಅಮರ್ ಎನ್ನುವ ಯಹೂದಿ ಬುಡಕಟ್ಟಿಗೆ ಸೇರಿದ್ದ ಅಫಾಕ್ ವಯೋವೃದ್ಧನಾಗಿದ್ದ. ಆತ ತನ್ನ ಅನುಭದ ಆಧಾರದಲ್ಲಿ ಮಹಮದ್ ಹಾಗೂ ಅವನ ಅನುಯಾಯಿಗಳ ಕಾಪಠ್ಯವನ್ನೆಲ್ಲಾ ತರ್ಕಬದ್ಧವಾಗಿ ಜನರಿಗೆ ತಿಳಿಸಿ ಕೊಡತೊಡಗಿದ. ಅವನ ಟೀಕಾ ಪ್ರಹಾರದಿಂದ ಮಹಮದ್ ನಿಜವಾಗಲೂ ಕೆಂಗೆಟ್ಟ. ಹೀಗೆ ಇದು ಮುಂದುವರೆದರೆ ತನ್ನ ಧರ್ಮ ಅರಳುವ ಮುನ್ನವೆ ಬಾಡಿ ಹೋಗುವ ಅಪಾಯದ ಮುನ್ಸೂಚನೆ ಅವನಿಗೆ ಸಿಕ್ಕಿತು. ಆಗ ಅತ ಶುಕ್ರವಾರದ ಪ್ರಾರ್ಥನೆಯ ಪ್ರವಚನದ ನಂತರ ಇದನ್ನ ಪ್ರಸ್ತಾಪಿಸಿ ಆರ್ದ್ರನಾಗಿ "ನನ್ನನ್ನು ಅಫಾಕನ ಉಪದ್ರದಿಂದ ಪಾರು ಮಾಡುವವರು ಯಾರೂ ಇಲ್ಲವೆ?" ಎಂದು ಬಹಿರಂಗವಾಗಿ ಗೋಳಿಟ್ಟ. ಅವನ ಈ ಕರೆಯಿಂ<ದ ಕೆರಳಿದ ಅಲಿ ಹೊಂಚು ಹಾಕಿ ಆ ಮುದುಕ ಮನೆಯ ಪಡಸಾಲೆಯಲ್ಲಿ ಒಬ್ಬನೆ ಮಲಗಿರುವ ಹೊತ್ತನ್ನ ಸಾಧಿಸಿ ಏಕಾಏಕಿ ಒಳನುಗ್ಗಿ ಅವನ ತಲೆಯನ್ನ ಕಡಿದು ಹಾಕಿದ! ಅಲ್ಲಿಗೆ ಮಹಮದ್ ನಿಟ್ಟುಸಿರು ಬಿಡುವಂತಾಯ್ತು.



ಮುಸಲ್ಮಾನರ ಇಂತಹ ಅನ್ಯಾಯದ ಹಾಗೂ ದೌರ್ಜನ್ಯಪೂರಿತ ನಡುವಳಿಕೆ ಹಾಗೂ ರಕ್ತ ಪಿಪಾಸುತನವನ್ನ ಕಂಡ ಯಹೂದಿಗಳ ಸಮೂಹದಲ್ಲಿ ಭಯ ಆವರಿಸಿತು. ಎಲ್ಲಕ್ಕಿಂತ ಮಿಗಿಲಾಗಿ ನಿರಾಶ್ರಿತರಾಗಿ ಇಲ್ಲಿಗೆ ಬಂದು ಈಗ ಗುಡಾರ ಹೊಕ್ಕ ಒಂಟೆಯಂತೆ ತಮ್ಮ ಬುಡಕ್ಕೆ ಬಿಸಿ ನೀರು ಕಾಯಿಸುತ್ತಿರುವ ಇವರ ಉಪಟಳ ಆತಂಕವನ್ನೂ ಸಹ ತಂದಿತು. ಅಲ್ಲದೆ ಈ ಆತಂಕಕ್ಕೆ ಸಕಾರಣಗಳೂ ಸಹ ಇದ್ದವು.


ಬದರ್ ಯುದ್ಧ ಮುಗಿದು ಇನ್ನೂ ಒಂದು ತಿಂಗಳೂ ಸಹ ಸರಿಯಾಗಿ ಮುಗಿದಿರಲಿಲ್ಲ, ಆಗಲೆ ಮದೀನಾದ ಬೆನ್ ಕುನೈಖ್ ಯಹೂದಿ ಬುಡಕಟ್ಟಿನವರೊಂದಿಗೆ ಮಹಮದನ ನಡುವೆ ವಿವಾದವೊಂದು ಉದ್ಭವಿಸಿತು. ಆಗಿನ್ನೂ ಮಹಮದನ ಮಗಳನ್ನ ಮದುವೆಯಾಗದೆ ಇನ್ನೂ ದೊಡ್ಡಪ್ಪನ ಮಗ ಮಾತ್ರನಾಗಿದ್ದ ಅಲಿ ಬದರ್ ಯುದ್ಧದ ಗೆಲುವಿನ ನಂತರ ದೊರೆತ ಯುದ್ಧ ಕೊಳ್ಳೆಯಲ್ಲಿ ಎರಡು ಒಂಟೆಗಳ ಪಾಲನ್ನು ಗಿಟ್ಟಿಸಿದ್ದ. ಆತ ಈ ಕೈನುಖ್ ಬುಡಕಟ್ಟಿನವರ ಜೊತೆ ವ್ಯಾಪಾರ ವ್ಯವಹಾರ ಆರಂಭಿಸಿ ಅವರಿಂದ ಸರಕನ್ನು ಖರೀದಿಸಿ ಅವನ್ನ ಈ ಒಂಟೆಗಳ ಮೇಲೆ ಹೇರಿಕೊಂಡು ಪರ ಊರುಗಳಿಗೆ ಸಾಗಿಸಿ ಮಾರಾಟ ಮಾಡುವ ಹಂಚಿಕೆ ಹಾಕಿದ್ದ.



ಹುಟ್ಟಾ ವ್ಯಾಪಾರಿಗಳಾಗಿದ್ದ ಯಹೂದಿಗಳೂ ಸಹ ಇದನ್ನ ತಿರಸ್ಕರಿಸಲಿಲ್ಲ. ಅಲಿ ತನ್ನ ಒಂಟೆಯನ್ನ ಮದೀನಾದ ಸಂತೆ ಬಯಲಿನಲ್ಲಿ ಅಡ್ಡಾಡಲು ಬಿಟ್ಟಿದ್ದ. ಇದನ್ನ ನೋಡಿದ ಬದರ್ ಯುದ್ಧದ ಇನ್ನೊಬ್ಬ ಅಪ್ರತಿಮ ವೀರನೆಂದು ಹೆಸರುವಾಸಿಯಾಗಿದ್ದ ಹಂಝಾ ಅವನ್ನ ಹಿಡಿದು ತನ್ನ ಮನೆಗೆ ಅಕ್ರಮವಾಗಿ ಓಡಿಸಿಕೊಂಡು ಹೋದ! ಅಲ್ಲಿ ಅವನ್ನ ಅಂದೆ ಕಡಿಸಿ ತನ್ನ ಇಷ್ಟ ಮಿತ್ರರಿಗೂ ಹಾಗೂ ಕೆಲವು ಯಹೂದಿಗಳಿಗೂ ಭರ್ಜರಿ ಮಾಂಸದ ಔತಣವನ್ನ ಹಾಕಿಸಿದ. ಹೆಂಡ ಹೊಳೆಯಾಗಿ ಹರಿಯಿತು.



ಇತ್ತ ಅಲಿ ತನ್ನ ಒಂಟೆಗಳನ್ನ ಅರಸುತ್ತಾ ಬಂದಾಗ ಅಲ್ಲಿ ಅವನ್ನ ಕಾಣದೆ ಅಚ್ಚರಿ ಪಟ್ಟ. ಅಲ್ಲಿನವರಿಂದ ನೈಜ ವಿಷಯ ಅಲಿಗೆ ಸ್ಪಷ್ಟವಾಯಿತು. ಆತ ಕೂಡಲೆ ಮಹಮದನಿಗೆ ದೂರಿತ್ತ. ವಿಚಾರಣೆಗಾಗಿ ಸ್ವತಃ ಮಹಮದ್ ಅಲಿಯೊಂದಿಗೆ ಹಂಝಾನ ಮನೆಗೆ ಬಂದರೆ ಅಲ್ಲಿ ಕಂಡ ದೃಶ್ಯ ಹೇಸಿಗೆ ಹುಟ್ಟಿಸುವಂತಿತ್ತು. ಕಂಠ ಪೂರ್ತಿ ಮದ್ಯ ಕುಡಿದು ಮತ್ತಾಗಿದ್ದ ಹಂಝಾ ತನ್ನದೆ ವಾಂತಿಯಲ್ಲಿ ಬಿದ್ದು ಹೊರಳಾಡುತ್ತಿದ್ದ. ಸಾಲದ್ದಕೆ ಮೈಮೇಲೆ ಕಿಂಚಿತ್ತೂ ಪ್ರಜ್ಞೆ ಇಲ್ಲದ ಆತ ಮಹಮದನಿಗೆ ಕೊಡಬೇಕಾದ ಕನಿಷ್ಠ ಗೌರವವನ್ನೂ ಕೊಡದೆ ಅಸಭ್ಯವಾಗಿ ನಡೆದುಕೊಂಡ. "ನೀನು ನನ್ನ ಅಪ್ಪನ ಗುಲಾಮನಾಗಿದ್ದವನಲ್ಲವೆ?" ಎಂದು ಎಲ್ಲರೆದುರು ಹೀಯ್ಯಾಳಿಸಿದ. ಈ ಸುದ್ದಿ ಎಲ್ಲೆಡೆ ಹರಡಿ ಬೆನ್ ಕೈನುಖ್ ಗುಂಪಿಗೂ ಮುಟ್ಟಿತು. ಸಹಜವಾಗಿ ಅವರೆಲ್ಲಾ ಅದನ್ನ ಆಡಿಕೊಂಡು ಹಾಸ್ಯ ಮಾಡಿಕೊಂಡು ಮಹಮದನ ಟೊಳ್ಳು ಪ್ರವಾದಿತನವನ್ನ ಗೇಲಿ ಮಾಡಿದರು. ಅವರ ಗುಂಪಿನಲ್ಲಿ ಇದೊಂದು ಹಾಸ್ಯ ಚಟಾಕಿಯಾಗಿ ಚಾಲನೆಗೂ ಸಹ ಬಂತು.


ಈ ಘಟನೆ ಹಾಗೂ ಹಂಝಾನ ದುರ್ನಡತೆ ಮಹಮದನಿಗೆ ಕುಡಿತದ ದುಶ್ಪರಿಣಾಮಗಳನ್ನ ಸ್ಪಷ್ಟವಾಗಿ ಅರಿಯುವಂತೆ ಮಾಡಿದವು. ಈ ಕಾರಣದಿಂದಲೆ ಇಸ್ಲಾಮಿನಲ್ಲಿ ಮದ್ಯ ವಿರೋಧಿ ಭಾವನೆಯನ್ನ ಆತ ಬಿತ್ತಿದ. ಮದ್ಯಪಾನ ನಿಷೇಧ ಕುರಿತ ಸುರಾಗಳು ಅವನಿಂದ ಹೊರಬಂದವು. ದೈವವಾಣಿಯ ಮೂಲಕ ಪಾನ ನಿಷೇಧಕ್ಕೆ ಆತ ಒಂದು ಅಧಿಕೃತತೆಯನ್ನ ನೀಡಿದ ಎನ್ನುತ್ತಾರೆ ಇತಿಹಾಸಕಾರ ಮಾರ್ಗೋಲಿಯತ್.


ಕ್ರಮೇಣ ಮಹಮದನ ಉರಿಗಣ್ಣಿಗೆ ತನ್ನನ್ನ ಗೇಲಿ ಮಾಡಿ ತಮ್ಮ ಮನರಂಜನೆಯ ಸಂಜೆಗಳಲ್ಲಿ ಹಾಡಿಕೊಂಡ ಬೆನ್ ಕೈನುಖ್ ಯಹೂದಿಗಳು ಬಿದ್ದರು. ಅವರ ಕುಲಕಸುಬು ಚಿನ್ನ ಬೆಳ್ಳಿಯ ಆಭರಣ ತಯಾರಿಕೆಯ ಸೊನೆಗಾರಿಕೆ ಆಗಿತ್ತು. ಖುದ್ದಾಗಿ ಮಹಮದ್ ಅವರ ಬಿಡಾರಗಳತ್ತ ಸಾಗಿ ತನ್ನ ಇಸ್ಲಾಮಿನತ್ತ ಸಾಗಿ ಬರುವಂತೆ ಅವರನ್ನ ಮೆದುವಾಗಿ ಆಗ್ರಹಿಸಿದ." ತಾನು ದೇವರ ಪ್ರವಾದಿ ಎಂದು ಈಗಾಗಲೆ ಸಾಬೀತಾಗಿಯಾಗಿದೆ. ನೀವೆಲ್ಲರೂ ನನ್ನ ಧರ್ಮಕ್ಕೆ ಸೇರುವುದು ಅನಿವಾರ್ಯ. ಇಲ್ಲದೆ ಹೋದ ಪಕ್ಷದಲ್ಲಿ ಬದರ್ ಯುದ್ಧದಲ್ಲಿ ಖುರೈಷಿಗಳಾದ ಪಾಡನ್ನ ಸ್ವಲ್ಪ ನೆನಪಿಸಿಕೊಳ್ಳಿ! ಅದು ಯಾವಾಗಲಾದರೂ ನಿಮ್ಮನ್ನೂ ಸಹ ಆವರಿಸಿಕೊಳ್ಳಬಹುದು?!" ಎಂದು ನೇರವಾಗಿಯೆ ಎಚ್ಚರಿಸಿದ. ಇದಕ್ಕೆಲ್ಲ ಮೂರುಕಾಸಿನ ಬೆಲೆಯನ್ನೂ ನೀಡದ ಆ ಯಹೂದಿಗಳು ಅವನ ಆದೇಶವನ್ನು ಧಿಕ್ಕರಿಸಿದರು. ಆದರೆ ಅದೆ ಅವರಿಗೆ ಮುಳುವಾಯಿತು.


ಸಕಾರಣವೊಂದು ಸಿಗದೆ ಅವರ ಮೇಲೆ ಎರಗಲು ಮಹಮದ್ ಹಾಗೂ ಅವನ ಗುಂಪಿಗೆ ಸಾಧ್ಯವಂತೂ ಇರಲಿಲ್ಲ. ಆದರೆ ಅತಿ ಶೀಘ್ರವಾಗಿ ಅಂತಹ ಸಕಾರಣವೊಂದು ಒದಗಿ ಬಂತು. ಮುಸಲ್ಮಾನ ಮಹಿಳೆಯೊಬ್ಬಳು ಆಭರಣ ಮಾಡಿಸಲು ಬೆನ್ ಕೈನುಕ್'ರ ಬೀದಿಗೆ ಹೋಗಿದ್ದಳು. ಆಗ ಅಲ್ಲಿದ್ದ ಕುಚೇಷ್ಟೆಯ ಯಹೂದಿ ಯುವಕನೊಬ್ಬ ಆಕೆಗೂ ಅರಿವಾಗದಂತೆ ಸೂಜಿಯೊಂದಕ್ಕೆ ದಾರ ಪೋಣಿಸಿಕೊಂಡು ಮೆಲ್ಲಗೆ ಅವಳ ಮೇಲು ಹೊದಿಕೆಯನ್ನ ಅವಳ ಲಂಗದ ತುದಿಯ ಜೊತೆ ಸೇರಿಸಿ ಹೊಲೆದು ಬಿಟ್ಟ. ಅಮಾಯಕಳಾದ ಆಕೆ ಇದನ್ನರಿಯದೆ ಕೂತಲ್ಲಿಂದ ಮೇಲೆದ್ದಾಗ ಅವಳ ಲಂಗವೂ ಅವಳೊಂದಿಗೆ ಮೇಲೆದ್ದಿತು. ಪುಕ್ಕಟೆ ಮನರಂಜನೆ ಕಂಡವರಂತೆ ಅಲ್ಲಿದ್ದ ಕೆಲವರು ಇದನ್ನ ಕಂಡು ನಗ ತೊಡಗಿದರು. ಆಕೆ ಅವಮಾನದಿಂದ ಕುಸಿದು ಹೋದಳು.


ನಾಚಿಕೆಯಿಂದ ನರಳಿದ ಆಕೆ ಮರಳಿ ಬಂದು ತನ್ನ ಗಂಡನಿಗೆ ಆ ವಿಷಯ ಅರುಹಿದಾಗ ಆತ ಕ್ರೋಧಗೊಂಡು ಆ ಯಹೂದಿಯನ್ನ ಹುಡುಕಿಕೊಂಡು ಹೋಗಿ ಕತ್ತರಿಸಿ ಬಂದ. ಇದರಿಂದ ರೋಷಗೊಂಡ ಸತ್ತ ಯುವ ಯಹೂದಿಯ ಸಹೋದರರು ಈ ಮುಸಲ್ಮಾನನನ್ನು ಹಿಡಿದು ಕೊಂದರು. ಈ ಸಂಗತಿ ಮದೀನಾದ ಇತರ ಮುಸಲ್ಮಾನರ ಕಿವಿಗೆ ಬಿದ್ದೊಡನೆ ಅವರು ಅದನ್ನು ಮಹಮದನ ಕಿವಿಗೆ ಹಾಕಿದರು. ಆತ ತಡ ಮಾಡದೆ ಬೆನ್ ಕೈನುಖ್ ವಸತಿಗೆ ತನ್ನ ಪಡೆಯೊಂದಿಗೆ ಮುತ್ತಿಗೆ ಹಾಕಿದ. ಅವರೊಂದಿಗೆ ಬದರ್ ಯುದ್ಧ ಕಾಲದಲ್ಲಿ ಮಾಡಿಕೊಂಡಿದ್ದ ಶಾಂತಿ ಒಪ್ಪಂದಗಳಿಗೆಲ್ಲಾ ಆಗ ಬೆಲೆ ಬರಲಿಲ್ಲ. ಅವರು ಕೋಟೆ ಬಾಗಿಲನ್ನ ಭದ್ರ ಪಡಿಸಿಕೊಂಡರಾದರೂ ಆಹಾರ, ನೀರು ಹಾಗೂ ಮತ್ತಿತರ ಅಗತ್ಯ ವಸ್ತುಗಳ ಅಭಾವ ಕ್ರಮೇಣ ಎದುರಾದಂತೆ ಕೆಂಗೆಟ್ಟರು. ಮುಸಲ್ಮಾನರ ಪಡೆ ಅವರಿಗೆ ತಕ್ಕ ಶಾಸ್ತಿ ಹಗಲಿರುಳು ಮಾಡಲು ಅವರ ಕೋಟೆಯ ಹೊರಗೆ ಮುತ್ತಿಗೆ ಹಾಕಿಯೆ ಕುಳಿತಿತ್ತು.


ಪರಿಸ್ಥಿತಿ ಹೀಗಿದ್ದರೂ ಇನ್ಯಾವ ಬುಡಕಟ್ಟಿನ್ಹ ಯಹೂದಿಗಳೂ ಸಹ ಅವರ ಸಹಾಯಕ್ಕೆ ಧಾವಿಸಿರಲಿಲ್ಲ. ಹೊರಗಿನಿಂದ ಇಂತಹ ಯಾವುದೆ ಸಹಾಯ ಬಾರದೆ ಅವರು ಕೆಂಗೆಟ್ಟರು. ಅದರ ಜೊತೆಗೆ ಅಲ್ಲಿಯತನಕ ಅವರೊಂದಿಗೆ ಶಾಂತಿ ಹಾಗೂ ಸಹಬಾಳ್ವೆಯಲ್ಲಿದ್ದ ಖಜರಝ್ ಬುಡಕಟ್ಟಿನ ಅರಬ್ಬರು ಹಾಗೂ ಅವರ ಮುಖಂಡ ಮದೀನಾದ ಗಣ್ಯ ವ್ಯಕ್ತಿ ಅಬ್ದುಲ್ ಇಬ್ನ್ ಒಬೈ ಕೂಡಾ ಈ ಹಂತದಲ್ಲಿ ಅವರ ಕೈ ಬಿಟ್ಟದ್ದು ಅವರನ್ನ ಕೆಂಗೆಡಿಸಿತ್ತು. ಮುತ್ತಿಗೆ ಎರಡು ವಾರಗಳಿಗೆ ವಿಸ್ತರಿಸಿದ ನಂತರ ಅವರು ತೀರಾ ನಿತ್ರಾಣರಾಗ ತೊಡಗಿದರು. ಇಂತಹ ಚಿಂತಾಜನಕ ಸ್ಥಿತಿಯಲ್ಲಿ ಮುಸಲ್ಮಾನರಿಗೆ ಶರಣಾಗುವುದರ ಹೊರತು ಅವರಿಗೆ ಇನ್ಯಾವ ಮಾರ್ಗೋಪಾಯಗಳೂ ಸಹ ಉಳಿಯಲಿಲ್ಲ. ಹಾಗೆ ಕೋಟೆಯಿಂದ ಬೇಷರತ್ತಾಗಿ ಹೊರ ಬಂದ ಅವರನ್ನೆಲ್ಲ ಬೆನ್ನ ಹಿಂದೆ ಕೈ ಬಿಗಿದು ಪ್ರಾಣಿಗಳಂತೆ ಮದೀನಾ ಮಾರುಕಟ್ಟೆಯ ಬಳಿಯಿದ್ದ ಸಾರ್ವಜನಿಕ ವಧಾಸ್ಥಾನಕ್ಕೆ ಎಳೆದೊಯ್ಯಲಾಯಿತು. ಅರಬಿಯನ್ ಸಾಮಾಜಿಕ ಕಟ್ಟಳೆಗಳಂತೆ ಈ ರೀತಿ ಸಾರ್ವಜನಿಕ ವಧೆಯನ್ನ ಕಳ್ಳ - ಕಾಕರಿಗೆ ಹಾಗೂ ದರೋಡೆಕೋರರಿಗೆ ವಿಧಿಸುವ ಪದ್ಧತಿ ಇತ್ತು. ಆದರೆ ಇವರ್ಯಾರೂ ಅಂತಹ ಯಾವುದೆ ಅಪರಾಧವನ್ನ ಎಸಗಿರಲಿಲ್ಲ.



ಆ ಹಂತದಲ್ಲಿ ಅವರ ಕರುಣಾಜನಕ ಸ್ಥಿತಿ ನೋಡಲಾಗದೆ ಅಬ್ದುಲ್ ಇಬ್ನ್ ಒಬೈ ಅಲ್ಲಿಗೆ ಬಂದು ಮಹಮದನಲ್ಲಿ ಅವರೆಲ್ಲರ ಪರವಾಗಿ ಕ್ಷಮಾಯಾಚನೆಯ ಪ್ರಸ್ತಾವನೆಯನ್ನ ಮುಂದಿಟ್ಟ. ಅವರನ್ನ ಕ್ಷಮಿಸುವುದು ಪುಣ್ಯಕಾರ್ಯ ಅದಕ್ಕಾಗಿ ನಾನು ಒತ್ತೆ ಹಣ ಕೊಡಲು ತಯ್ಯಾರಿದ್ದೇನೆ ಎಂದಾತ ಹೇಳಿದ. ಯಹೂದಿಗಳೊಂದಿಗೆ ತಲೆಮಾರುಗಳಿಂದ ತಾವು ಮದೀನಾ ವಾಸಿಗಳು ಹೊಂದಿದ್ದ ಸ್ನೇಹ ಸಂಬಂಧ ಹೀಗೆ ಕೊನೆಯಾಗುವುದು ಅವನ ಪಾಲಿಗೆ ಸಹಿಸಲಸಾಧ್ಯವಾಗಿತ್ತು. ಅಬ್ದುಲ್ಲಾ ಹೀಗಾಗಿಯೆ ಹಟ ಬಿಡದೆ ಮಹಮದನ ಕೈಹಿಡಿದು ಬೇಡಿ ಅಂಗಲಾಚಿದ. ಯುದ್ಧದ ಹೊತ್ತಲ್ಲಿ ಅವನ ಪಡೆ ಸೇರಿ ಅವನಿಗೆ ಸಯಾಯ ಮಾಡಿದ ಯಹೂದಿಗಳ ನಡೆಯನ್ನವನಿಗೆ ನೆನಪಿಸಿದ. ಅವರು ಕ್ಷಮಾರ್ಹರು ಎಂದು ಪರಿಪರಿಯಾಗಿ ಅಂಗಲಾಚಿ ವಿನಂತಿಸಿದ. ಇದೀಗ ಕೊನೆಯದಾಗಿ ನುಡಿದ ಮಾತಿಗೆ ಮಹಮದ್ ಮಣಿಯಬೇಕಾಯಿತು. ಆಗವನು ಅಬ್ದುಲ್ಲಾನ ಮಾತಿಗೆ ಒಲಿದ.


ಆದರೆ ಯಹೂದಿಗಳಿಗೆ ಪ್ರಾಣ ಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ಅವರೆಲ್ಲರನ್ನೂ ಮುಲಾಜಿಲ್ಲದೆ ಮದೀನಾ ನಗರದಿಂದ ಗಡಿಪಾರು ಮಾಡಲಾಯಿತು. ಹಾಗೆ ಮನೆ ಮಠ ಕಳೆದುಕೊಂಡ ಯಹೂದಿಗಳು ಅಲ್ಲಿಂದ ಠಿಕಾಣಿ ಕಿತ್ತು ತಮ್ಮ ಅನಾದಿ ಕಾಲದ ಆಸ್ತಿ ಪಾಸ್ತಿಗಳನ್ನೆಲ್ಲ ಇದ್ದಂತೆಯೆ ಬಿಟ್ಟು ಸಿರಿಯಾದ ಗಡಿಯತ್ತ ನಿರಾಶ್ರಿತರಾಗಿ ಸಾಗಿ ಹೋದರು. ಪ್ರಾಣವೊಂದನ್ನ ಬಿಟ್ಟು ಇನ್ನೇನನ್ನೂ ಅಲ್ಲಿಂದ ಕೊಂಡೊಯ್ಯಲು ಅವರಿಗೆ ಅನುಮತಿ ನೀಡಲಿಲ್ಲ ಮಹಮದ್. ಆದರೆ ಅವರೆಲ್ಲರೂ ಸೊನೆಗಾರರಾಗಿದ್ದರಿಂದ ಕೇವಲ ವಾಸವಿದ್ದ ಮನೆ ಹಾಗೂ ಸ್ವಲ್ಪಮಟ್ಟಿನ ಚಿನ್ನ ಬೆಳ್ಳಿ, ಅದನ್ನ ಅಭರಣ ಮಾಡುವ ಸಲಕರಣೆಗಳು ಮಾತ್ರ ಮುಸಲ್ಮಾನರ ಕೈವಶವಾಯಿತು. ಅವರ್ಯಾರೂ ರೈತಾಪಿಗಳಲ್ಲದೆ ಇದ್ದುದ್ದರಿಂದ ಭೂಮಿಯ ಒಡೆತನವನ್ನವರು ಹೊಂದಿರಲಿಲ್ಲ. ಹೀಗಾಗಿ ಹೊಲ, ತೋಟ ಹಾಗೂ ಜಾನುವಾರುಗಳು ಸಿಗುವ ಸಾಧ್ಯತೆಗಳಿರಲಿಲ್ಲ.


ಹೀಗಾದ ನಂತರ ಯಹೂದಿ ಸಮುದಾಯದೊಳಗೆ ಮಹಮದನ ಯೋಜನೆಗಳ ಬಗ್ಗೆ ಶಂಕೆ ಹಾಗೂ ಭಯ ಮೂಡ ತೊಡಗಿತು. ಅವರೆಲ್ಲಾ ಈ ನೂತನ ಧರ್ಮ ಇಸ್ಲಾಮಿನ ಅಟ್ಟಹಾಸ ಕಂಡು ಅದುರಿ ಹೋದರು. ಕೇವಲ ನಿರಾಶ್ರಿತನಾಗಿ ಆಶ್ರಯ ಅರಸಿಕೊಂಡು ಬಂದು ಈಗ ತಮ್ಮ ಸಮಾಜವನ್ನೆ ನಿಯಂತ್ರಿಸುವ ಮಟ್ಟಿಗೆ ಪ್ರಭಾವಿಯಾದ ಮಹಮದನ ಬಗ್ಗೆ ಸ್ವತಃ ಮದೀನಾದ ಗಣ್ಯರು ಆತಂಕಿತರಾದರು. ಸಾಲದ್ದಕ್ಕೆ ಬದರ್ ಯುದ್ಧದ ಸಂದರ್ಭದಲ್ಲಿ ಯಹೂದಿಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನ ಈ ಘಟನೆಯ ನಂತರ ಏಕಪಕ್ಷೀಯವಾಗಿ ಅಳಿಸಿಹಾಕಲಾಗಿದೆ ಎನ್ನುವ ಮಹಮದನ ಬಂಟ ಓಬೈದನ ಬಹಿರಂಗ ಹೇಳಿಕೆ ಯಹೂದಿ ಸಮುದಾಯದಲ್ಲಿ ದುಗುಡವನ್ನು ಹೆಚ್ಚಿಸಿದವು.


ಇತ್ತ ದಾಂಪತ್ಯ ಸುಖ ತೊರೆವ ಪ್ರತಿಜ್ಞೆ ಮಾಡಿಯೂ ಏನೂ ಮಾಡದೆ ಕೆಂಗೆಟ್ಟಿದ್ದ ಮೆಕ್ಕಾದ ಖುರೈಷಿ ನಾಯಕ ಅಬು ಸಫ್ಯಾನ್ ಇನ್ನಷ್ಟು ಕಾಲ ಈ ಸ್ವಯಂ ಹೇರಿಕೆಯ ಒತ್ತಾಯದ ಬ್ರಹ್ಮಚರ್ಯ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ! ಹೀಗಾಗಿ ಕ್ರಿಸ್ತಶಕ ೬೨೪ರ ಏಪ್ರಿಲ್ ತಿಂಗಳಿನಲ್ಲಿ ತನಗೂ, ತಮ್ಮವರಿಗೂ ಆದ ಸೋಲು ಹಾಗೂ ಅವಮಾನದ ಸೇಡು ತೀರಿಸಿಕೊಳ್ಳಲು ಇನ್ನೂರು ಯೋಧರ ಸೇನಾ ತುಕುಡಿಯೊಂದನ್ನ ತೆಗೆದುಕೊಂಡು ಆತ ಮದೀನಾದತ್ತ ಚಲಿಸಿದ. ಮದೀನ ಬಳಿಯ ಬೆನ್ ಅನ್ ಅದಿರ್ ಎನ್ನುವ ಯಹೂದಿ ಬುಡಕಟ್ಟಿನವರಿಗೆ ಸೇರಿದ ಜಾಗದಲ್ಲಾತ ಠಿಕಾಣಿ ಹೂಡಿದ. ಆದರೆ ಮಹಮದನ ಹೆದರಿಕೆ ಇದ್ದ ಅವರ ಮುಖಂಡ ಅಲ್ಲಿ ತಂಗಲು ಈ ಸೈನ್ಯಕ್ಕೆ ಸಮ್ಮತಿ ನೀಡಲಿಲ್ಲ. ಇದರಿಂದ ಬೇಸತ್ತ ಸಫ್ಯಾನ್ ಅಲ್ಲಿಯೂ ನಿಲ್ಲಲಾಗದೆ ಹೊರಟು ಹತಾಶೆಯಿಂದ ಮದೀನಾದ ಹೊರವಲಯದಲ್ಲಿದ್ದ ಕೆಲವು ಖರ್ಜೂರದ ತೋಟಗಳ ಹಾಗೂ ಮನೆಗಳ ಮೇಲೆ ಧಾಳಿ ನಡೆಸಿದ. ಅವನ ಈ ಧಾಳಿಯಲ್ಲಿ ಬದರ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಕೆಲವು ಮುಸಲ್ಮಾನ ಯೋಧರು ಸಿಕ್ಕಿ ಸತ್ತರು. ಹೀಗಾದರೂ ತನ್ನ ಸೇಡು ತೀರಿ ಪ್ರತಿಜ್ಞೆ ಪೂರೈಸಿದೆ ಎಂದು ಹೇಳಿಕೊಳ್ಳುತ್ತಾ ಆತ ಮೆಕ್ಕಾದ ಹಾದಿ ಹಿಡಿದ. ಇತ್ತ ಮದೀನ ನಗರ ಮಧ್ಯದಲ್ಲಿದ್ದ ಮಹಮದನಿಗೆ ಈ ಏಕಾಏಕಿ ಧಾಳಿಯ ಸುದ್ದಿ ತಿಳಿಯುತ್ತಲೆ ಆತ ಅವರ ಖುರೈಷಿ ಪಡೆಯನ್ನ ಬೆನ್ನಟ್ಟಿದ. ಆದರೆ ಆ ವೇಳೆಗಾಗಲೆ ಅದು ಬಹಳ ದೂರ ಸಾಗಿ ಹೋಗಿತ್ತು. ಇನ್ನೂ ಅವರನ್ನ ಬೆನ್ನಟ್ಟಿ ಸಾಗುವುದು ಸಲ್ಲದ ಅಪಾಯವನ್ನ ಮೈಮೇಲೆ ಎಳೆದುಕೊಂಡಂತಾಗುವ ಸಂಭವವಿತ್ತು. ಹೀಗಾಗಿ ಮಹಮದ್ ಬರಿಗೈಯಲ್ಲಿ ಮದೀನಾಕ್ಕೆ ಹಿಂದಿರುಗಬೇಕಾಯಿತು.



( ಇನ್ನೂ ಇದೆ.)

25 October 2015

ವಲಿ - ೧೬







ಈ ಯುದ್ಧದಲ್ಲಿ ಮೆಕ್ಕಾದ ಪ್ರಮುಖ ಖುರೈಷಿ ಮುಖಂಡರು ಹಾಗೂ ಯೋಧರು ಹತರಾದರು. ಅಬು ಝಹಲ್ ಅಂತವರಲ್ಲೊಬ್ಬನಾಗಿದ್ದ. ಆತ ಗಾಯಗೊಂಡು ಬಿದ್ದಿದ್ದಾಗ ಆತನ ತಲೆಯನ್ನು ಏಕಾಏಕಿ ಕಡಿದು ಅದನ್ನ ತಂದು ಮಹಮದನ ಕಾಲ ಬುಡದಲ್ಲಿ ಎಸೆಯಲಾಯಿತು. ತನ್ನನ್ನ ಮೆಕ್ಕಾದಿಂದ ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಝಾಹಲ್'ನ ರುಂಡವನ್ನ ಕಾಣುತ್ತಲೆ ಮಹಮತ್ ಉನ್ಮತ್ತನಾದ. "ದೇವರ ಶತ್ರುವಿನ ತಲೆ! ದೇವರೆ! ನೀನಿಲ್ಲದೆ ಬೇರೆ ದೇವರಿಲ್ಲ! ಇಲ್ಲಾ ಇಲ್ಲಾ! ಬೇರೆ ಇನ್ಯಾರೂ ಇಲ್ಲ?!" ಎಂದು ಕಿರುಚಿ ಹೇಳುತ್ತಾ ಆತ ಸಂಭ್ರಮಿಸಿದ. ಆ ತಲೆಯನ್ನು ಕಡಿದು ತಂದಿದ್ದ ಮುಸಲ್ಮಾನ ಯೋಧ ಅಬ್ದುಲ್ಲಾನನ್ನ ತಬ್ಬಿ ಮುತ್ತಿಟ್ಟು "ಈ ತಲೆ ಅರೇಬಿಯಾದ ಯಾವುದೆ ಉತ್ತಮ ತಳಿಯ ಒಂಟೆಯ ತಲೆಗಿಂತ ಹೆಚ್ಚು ಉತ್ಕೃಷ್ಟವೂ ಸಮ್ಮತವೂ ನನ್ನ ಪಾಲಿಗೆ!" ಎಂದು ಅವನನ್ನು ಅಭಿನಂದಿಸಿಸಿದ.


ಇತ್ತ ಖುರೈಷಿ ಪಡೆಯ ಸ್ಥಿತಿ ಚಿಂತಾಜನಕವಾಗಿತ್ತು. ಸತ್ತವರ ಸಂಖ್ಯೆ ಮುಸಲ್ಮಾನರ ಸಾವಿನ ಹೋಲಿಕೆಯಲ್ಲಿ ಹೆಚ್ಚಾಗಿತ್ತು. ಅಬ್ದುಲ್ ಬುಖಾರಿ ಎಂಬ ಬಾಲ್ಯದಿಂದಲೂ ಅನಾಥನಾಗಿದ್ದ ಮಹಮದನ ಬಗ್ಗೆ ಕರುಣೆ ತೋರಿದ್ದ ಆರ್ದ್ರ ಹೃದಯದವನೂ ಸತ್ತು ಬಿದ್ದಿದ್ದ. ತನ್ನ ಕಷ್ಟದ ದಿನಗಳಲ್ಲಿ ತನ್ನತ್ತ ಕರುಣೆಯ ಮಳೆ ಸುರಿಸಿದ್ದ ಆತನನ್ನ ಕೊಲ್ಲ ಕೂಡದು ಎನ್ನುವ ನಿರ್ದೇಶನವನ್ನೇನೋ ಮಹಮದ್ ಮುಸಲ್ಮಾನ ಯೋಧರಿಗೆ ಮೊದಲೆ ಕೊಟ್ಟಿದ್ದ. ಆದರೆ ರಣಾಂಗಣದ ಪರಿಸ್ಥಿತಿ ಅವನ ನಿರೀಕ್ಷೆಗೆ ವಿರುದ್ಧವಾಗಿತ್ತು. ಒಂಟೆಯೊಂದರ ಮೇಲೆ ಕೂತು ಹೋರಾಡುತ್ತಿದ್ದ ಅವನನ್ನು ಹಾಗೂ ಅವನ ಸಂಗಾತಿಯನ್ನ ಮೊದಲಿಗೆ ಹೊಡೆದುರುಳಿಸಲು ಮುಸಲ್ಮಾನನೊಬ್ಬ ಹಿಂಜರಿದ. ಆದರೆ ಮಹಮದನ ಅಪ್ಪಣೆ ಕೇವಲ ಬುಖಾರಿಗೆ ಮಾತ್ರ ಅನ್ವಯವಾಗುತ್ತಿದ್ದುದರಿಂದ ಅವನ ಸಂಗಾತಿಯನ್ನ ಕೊಲ್ಲಲೇನೂ ಅಡ್ಡಿಯಿರಲಿಲ್ಲ. ಅದಕ್ಕಂತ ಆತ ಮುನ್ನುಗಿದಾಗ ಬುಖಾರಿ ಅವನನ್ನು ತಡೆದು 'ಅವನ ತಲೆ ತೆಗೆಯುವುದೆ ಆದರೆ ಅದಕ್ಕೂ ಮೊದಲು ನನ್ನನ್ನ ಕೊಲ್ಲಬೇಕು!' ಎಂದು ಹೇಳಿದ. ಆಗ ಬೇರೆ ಉಪಾಯ ಕಾಣದೆ ಇಬ್ಬರನ್ನೂ ಕಡಿದುರುಳಿಸಲಾಯಿತು.


ಯುದ್ಧ ಮುಗಿದಾದ ಮೇಲೂ ಸೆರೆ ಸಿಕ್ಕವರನ್ನ ಹಿಂಸಿಸಿ ಕೊಂದರು ಮುಸಲ್ಮಾನರು. ಇದು ಯುದ್ಧ ನೀತಿಗೆ ಸಂಪೂರ್ಣ ವಿರುದ್ಧವಾಗಿತ್ತು. ಆದರೆ ಖುರೈಷಿಗಳಿಂದ ತಮಗಾಗಿದ್ದ ಅವಮಾನ ಹಾಗೂ ತೊಂದರೆಗೆ ಹಳೆಯ ವೈರತ್ವವನ್ನ ಮನದೊಳಗೆ ಕಾದಿರಿಸಿಕೊಂಡಿದ್ದ ಮಹಮದನ ಬಂಟರು, ಅದೊಂದಕ್ಕೂ ಬೆಲೆ ಕೊಡದೆ ಅತಿ ಕ್ರೂರವಾಗಿ ಸೆರೆಯಾಳುಗಳ ಅಂಗ ಛೇದ ಮಾಡಿ ಅವರೆಲ್ಲರನ್ನೂ ವಿಕೃತವಾಗಿ ಹಿಂಸಿಸಿ ಕೊನೆಗಾಣಿಸಿದರು. ಹೀಗೆ ಕ್ರೂರವಾಗಿ ಕೊಂದ ಎಲ್ಲರನ್ನೂ ಒಂದೆ ಹಳ್ಳ ತೋಡಿ ಸಾಮೂಹಿಕವಾಗಿ ಹೆಣಗಳನ್ನು ಅದರಲ್ಲಿ ಅಡ್ಡಾದಿಡ್ದಿಯಾಗಿ ಎಸೆದು ದಫನ್ ಮಾಡಲಾಯಿತು. ಅಂತಹ ಹೆಣದ ರಾಶಿಯಲ್ಲಿ ಮಹಮದನ ಪಕ್ಷ ಸೇರಿದ್ದ ಅಬು ಹಥೈಫ್'ನ ತಂದೆ ಓತ್ಬಾನದ್ದೂ ಸಹ ಶವವಿತ್ತು. ತನ್ನ ತಂದೆ ಇಸ್ಲಾಂ ಸ್ವೀಕರಿಸದೆ ಸತ್ತದ್ದಕ್ಕಾಗಿ ಹಥೈಫ್ ವಿಪರೀತ ದುಃಖ ಪಟ್ಟ. ಆಗ ಅವನ್ನನ್ನ ಸಂತೈಸಿದ ಮಹಮದ್ ಅವನ ಇಂದಿನ ದುಸ್ಥಿತಿಗೆ ಅವನನ್ನೆ ಹೊಣೆ ಮಾಡಿ ಇದರಲ್ಲಿ ನಿನ್ನ ತಪ್ಪೇನೂ ಇಲ್ಲ ಎಂದು ಹಥೈಫ್'ನನ್ನು ಸಂತೈಸಿದ.


'ದೇವರನ್ನೂ ಹಾಗೂ ದೇವದೂತನಾದ ನನ್ನನ್ನು ನಂಬಿದ್ದರೆ ನಿಮಗೆ ಇಂತಹ ಹೀನಾಯ ಸಾವು ಬರುತ್ತಿರಲಿಲ್ಲ" ಎಂದು ಪ್ರತಿ ಕಳೆಬರವನ್ನು ಹೊಂಡಕ್ಕೆ ಎಸೆಯುವಾಗಲೂ ಮಹಮದ್ ಉಧ್ಘರಿಸ ಹತ್ತಿದ. ಇದನ್ನು ಕೇಳಿದ ಮುಸಲ್ಮಾನನೊಬ್ಬ 'ಸತ್ತವರ ಬಗ್ಗೆ ಹೀಗೆ ಬಿರು ನುಡಿಯಬಹುದೆ?' ಎಂದು ಪ್ರಶ್ನಿಸಿದ್ದಕ್ಕೆ "ಹೌದು ಖಂಡಿತವಾಗಿಯೂ. ಏಕೆಂದರೆ ಅವರಿಗೆ ಅವರ ಸುಳ್ಳು ದೇವರು ನೀಡಿದ ಆಶ್ವಾಸನೆಗಳೆಲ್ಲಾ ಇಂದು ಸುಳ್ಳಾಗಿವೆ!" ಎಂದು ಮಹಮದ್ ಅಧಿಕಾರಯುತವಾಗಿ ನುಡಿದ.


ಯುದ್ಧ ಮುಗಿದ ಮಾರನೆಯ ದಿನ ಯುದ್ಧದ ಸರಕಿನ ಲೂಟಿಯನ್ನ ಎಲ್ಲರಿಗೂ ಹಂಚಲಾಯಿತು. ನೂರಾ ಹದಿನೈದು ಒಂಟೆಗಳು ಹದಿನಾಲ್ಕು ಕುದುರೆಗಳು, ಅಸಂಖ್ಯ ಬಟ್ಟೆ ಬರೆ ಹಾಗೂ ಶಸ್ತ್ರಾಸ್ತ್ರಗಳು ಈ ಲೂಟಿಯಲ್ಲಿ ಒಳಗೊಂಡಿದ್ದವು. ಹಂಚಿಕೆಯಲ್ಲಿ ವಾದ ವಿವಾದಗಳು ತಲೆದೋರಿ ಭಿನ್ನಾಭಿಪ್ರಾಯ ಹುಟ್ಟಿತು. ಆಗ ಮಹಮದ್ ಮಧ್ಯೆ ಪ್ರವೇಶಿಸಿ ತಾನು ದೇವರ ಮೊರೆ ಹೋಗಿದ್ದು ಈ ಬಗ್ಗೆ ತನಗೆ ದೈವವಾಣಿ ಆಗಿದೆ ಎಂದು ಘೋಷಿಸಿದ. ಆಗ ಅವನಿಗೆ ಸಿಕ್ಕಿದ ಖುರ್ಹಾನಿನ ಸುರಾ ೮/೧, ೮/೪೨ರ ಪ್ರಕಾರ ಅವನು "ಲೂಟಿಯಾದ ಎಲ್ಲಾ ವಸ್ತುಗಳೂ ಸಹ ದೇವರಿಗೆ ಸಂದ ಜಯವಾಗಿದೆ. ಹಾಗೂ ಅವನಿಗೆ ಸಿಕ್ಕಿದ ವಿಜಯದಿಂದಾಗಿದೆ. ಆದ್ದರಿಂದ ಸಕಲವೂ ಈಗ ದೇವರದ್ದೆ. ಅದರಲ್ಲಿ ಐದನೆ ಒಂದು ಭಾಗವನ್ನು ದೇವರಿಗೂ ಅವನ ಪ್ರವಾದಿಗೂ ಕೊಡತಕ್ಕಡ್ಡು. ಉಳಿದದ್ದು ಅದು ಏನೆ ಇದ್ದರೂ ಎಲ್ಲರೂ ಸರಿಸಮವಾಗಿ ಹಂಚಿಕೊಳ್ಳತಕ್ಕದ್ದು" ಎಂದು ಸಾರಿದ.


ಮಹಮದನ ದಂಡಯಾತ್ರೆ ಕೊನೆಗೊಂಡು ಆತ ತನ್ನ ಸೈನ್ಯದೊಡನೆ ಮದೀನದತ್ತ ಚಲಿಸಿದ. ಸೆರೆಯಾಳುಗಳಲ್ಲಿ ಕೆಲವರನ್ನ ಕೈಕಾಲು ಕಟ್ಟಿ ಸುಡು ಬಿಸಿಲಿನಲ್ಲಿಯೆ ಬರಿಗಾಲಿನಲ್ಲಿ ನಡೆಸಿಕೊಂಡು ಒಂಟೆಗಳ ಕಾಲಡಿ ಎಳೆದೊಯ್ಯಲಾಯಿತು. ಹಾದಿ ಮಧ್ಯ ಅಲ್ ಬದಿಲ್ ಎಂಬಲ್ಲಿ ವಿಶ್ರಾಂತಿಗಾಗಿ ತಂಗಲಾಯಿತು. ಇರುಳು ಕಳೆದ ನಂತರ ಮರು ಬೆಳಗ್ಯೆ ಯುದ್ಧಾಪರಾಧಿಗಳ ವಿಚಾರಣೆಗಾಗಿ ಸೆರೆ ಸಿಕ್ಕ ಖುರೈಷಿಗಳನ್ನ ಸಾಲಾಗಿ ಮಹಮದನ ಮುಂದೆ ತಂದು ಮಂಡಿಯ ಮೇಲೆ ನಿಲ್ಲಿಸಲಾಯಿತು. ತನ್ನ ಮುಂದೆ ಕೆಡವಿದ ಪ್ರತಿಯೊಬ್ಬ ಖುರೈಷಿಯ ಮುಖವನ್ನೂ ಮಹ್ಮದ್ ದಿಟ್ಟಿಸಿದ. ಅವನ ತೀಕ್ಷ್ಣ ಕಣ್ಣುಗಳು ಆನ್ ನದರ್ ಎಂಬ ಯುವಕನ ಮೇಲೆ ಬಿತ್ತು. ವಿಕ್ ದಾದ್ ಎನ್ನುವ ಅವನ ಬಂಧುವೆ ರಣಾಂಗಣದಲ್ಲಿ ಕೊಲ್ಲದೆ ಅವನನ್ನ ಸೆರೆ ಹಿಡಿದಿದ್ದ. ಅವನ ಸಾವನ್ನ ಬಯಸದೆ ಮಹಮದನ ಮುಂದೆ 'ನೆದರ್ ನನ್ನ ಸೆರೆಯಾಳು' ಎಂದು ನುಡಿಯುವ ಕ್ಷಣದಲ್ಲಿಯೆ 'ಇವನ ತಲೆ ಕಡಿಯಿರಿ!' ಎಂದು ಮಹಮದ್ ಘರ್ಜಿಸಿದ. ಕತ್ತಿ ಹಿಡಿದು ಇಂತಹ ಆಜ್ಞೆಗಾಗಿಯೆ ಕಾದು ನಿಂತಿದ್ದ ಅಲಿ ಕೂಡಲೆ ಈ ದೈವವಾಣಿಯನ್ನು ನಿಯತ್ತಾಗಿ ನೆರವೇರಿಸಿದ!



ಎರಡು ದಿನ ಇನ್ನೂ ಪಯಣ ಮಾಡ ಬೇಕಿತ್ತವರು. ಆ ನಡುವೆ ಒಕ್ಬಾ ಎನ್ನುವ ಇನ್ನೊರ್ವ ಸೆರೆಯಾಳಿಗೂ ಮಹಮದ ವಾಣಿ ಅದೆ ಅವಸ್ಥೆಯನ್ನ ದಯಪಾಲಿಸಿತು. ಅವನ ಏಕೈಕ ತಪ್ಪು ಇಷ್ಟಾದರೂ ಮಹಮದನ ಏಕ ದೈವವನ್ನೂ - ಅವನ ಪ್ರವಾದಿತ್ವವನ್ನು ಧಿಕ್ಕರಿಸಿದ್ದು ಮಾತ್ರ ಆಗಿತ್ತು! ಆತ ಸಾಯುವ ಮುನ್ನ ಮೆಕ್ಕಾದಲ್ಲಿಯೆ ಉಳಿದಿರುವ ತನ್ನ ಮಗಳ ಗತಿ ಏನು? ಎಂದು ಮಹಮದನ ಮುಂದೆ ಅಂಗಲಾಚಿದ. ಮಹಮದ್ ಅದಕ್ಕೆ ತೀಕ್ಷ್ಣವಾಗಿ "ನರಕದ ಬೆಂಕಿಯ ಜ್ವಾಲೆಗೆ ಆಕೆಯನ್ನ ದೂಡಲಾಗುವುದು!" ಎನ್ನುವುದನ್ನ ಖಚಿತಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್.


ಎಲ್ಲಾ ಐವತ್ತು ಸೆರೆಯಾಳುಗಳಿಗೂ ಸಹ ಒಬ್ಬೊಬರಾಗಿ ಸರದಿಯಂತೆ ಇದೆ ಗತಿ ಕಾಣಿಸಲು ಮಹಮದ್ ಮೊದಲು ನಿರ್ಧರಿಸಿದ್ದ ಎನ್ನುತ್ತಾರೆ ಸರ್ ಮ್ಯೂರ್. ಆದರೆ ಮೆಕ್ಕಾದಿಂದ ತನ್ನ ಮಾವ ಅಬು ಲೆಹಾಬನ ಸಂದೇಶವೊಂದು ಬಂದು ಮುಟ್ಟಿದ್ದು, ಮಿತ್ರ ಹಾಗೂ ಮಾವ ಅಬು ಬಕರನ ಔದಾರ್ಯದ ಮಾತಿಗೆ ಒಪ್ಪಿಕೊಂಡದ್ದು ಹಾಗೂ ಅದೆ ಸಮಯದಲ್ಲಿ ತನಗೆ ಬೇಕಾದಂತೆ ಒಂದು ದೈವವಾಣಿಯನ್ನ ಆತ ಬರಿಸಿಕೊಂಡಿದ್ದು ಇವೆಲ್ಲಾ ಸೇರಿ ಆತ ಈ ಮರಣ ದಂಡನೆಯ ಕಠಿಣ ನಿರ್ಧಾರವನ್ನು ಹಿಂತೆಗೆದುಕೊಂಡು ಒತ್ತೆ ಹಣವನ್ನು ಸುಲಿದು ಅವರನ್ನೆಲ್ಲಾ ಹುಡುಕಿಕೊಂಡು ಬರುವ ಮೆಕ್ಕಾದ ದೂತರಿಗೆ ಜೀವಂತವಾಗಿ ಒಪ್ಪಿಸಲು ತಯ್ಯಾರಾದ. ತನಗೆ ಒದಗಿದ ದೈವವಾಣಿಯಂತೆ ತಾನು ಇವರೆಲ್ಲರ ಪ್ರಾಣದಾನ ಮಾಡಲು ನಿರ್ಧರಿಸುತ್ತಿರುವುದಾಗಿ ಆತ ಘೋಷಿಸಿದ. ತನ್ನ ವಿಜಯಿ ಸೈನ್ಯದೊಂದಿಗೆ ಮದೀನಾ ನಗರವನ್ನ ತಲುಪಿದಾಗ ಅವನಿಗಲ್ಲಿನ ನಾಗರೀಕರು ವೀರೋಚಿತ ಸ್ವಾಗತವನ್ನ ಕೋರಿದರು. ಆದರೆ ಆತನಿಗೆ ಆ ಗೆಲುವಿನಲ್ಲೂ ಒಂದು ದುಃಖ ಕಾದಿತ್ತು. ಬಹುಕಾಲದ ಅನಾರೋಗ್ಯದಿಂದ ನರಳುತ್ತಿದ್ದ ಮಗಳು ರೊಕೈಯ್ಯಾ ರೋಗ ಉಲ್ಬಣಗೊಂಡು ತನ್ನ ಪ್ರಾಣವನ್ನ ತ್ಯಜಿಸಿದ್ದಳು.



ಹೊಸ ನಿರ್ಧಾರ ತೆಳೆದಾದ ಮೇಲೆ ಮಹಮದ್ ಹಾಗೂ ಅವನ ಅನುಯಾಯಿಗಳು ಸೆರೆಯಾಳುಗಳನ್ನ ಪ್ರೀತ್ಯಾದರದಿಂದಲೆ ಕಂಡರು. ಅಕ್ಕರೆಯ ಮೂಲಕ ಅವರನ್ನ ಮತಾಂತರಿಸುವ ಒಳ ಉದ್ದೇಶ ಮಹಮದನಿಗಿತ್ತು. ಈ ಉದ್ದೇಶ ಅಂದು ಕೊಂಡಷ್ಟು ಸಫಲವಾಗದಿದ್ದರೂ ಸಹ ಅವರಲ್ಲಿ ಕೆಲವರು ಇಸ್ಲಾಮಿನತ್ತ ವಾಲಲು ನಿರ್ಧರಿಸಿದರು. ಅಂತವರಿಗೆ ಕೂಡಲೆ ಬಿಡುಗಡೆಯ ಭಾಗ್ಯ ಸಿಕ್ಕಿತು. ಆದರೆ ಉಳಿದವರನ್ನ ಮಾತ್ರ ಖುರೈಷಿ ಬಂಧು ಮಿತ್ರರು ಸೂಕ್ತ ಒತ್ತೆ ಹಣ ಪಾವತಿಸಿ ಬಿಡಿಸಿಕೊಂಡು ಹೋಗ ಬೇಕಾಯಿತು!


ಹೀಗಾಗಿ ಬದರ್ ಯುದ್ಧ ಮುಸಲ್ಮಾನ ಚರಿತ್ರೆಯಲ್ಲಿಯೆ ಒಂದು ಅಭೂತಪೂರ್ವವೂ ಹಾಗೂ ಹೆಸರುವಾಸಿಯೂ ಆಗುಳಿಯಿತು.  ಅಲ್ ಮುಬಾರಖಿ ಅದರಲ್ಲಿ ಭಾಗವಹಿಸಿ ಬದುಕುಳಿದು ಬಂದ ಎಲ್ಲಾ ಮುನ್ನೂರು ಮಂದಿಯ ಹೆಸರುಗಳನ್ನ ಜತನದಿಂದ ದಾಖಲಿಸಿರಿಸಿದ. ಪ್ರೊಫೆಸರ್ ಮಾರ್ಗೋಲಿಯತ್ ತಮ್ಮ 'ಮಹಮದ್' ಗ್ರಂಥದಲ್ಲಿ ಬದರ್ ಯುದ್ಧದಲ್ಲಿನ ಮಹಮದನ ಗೆಲುವನ್ನ ಹೀಗೆ ವಿಶ್ಲೇಷಿಸಿದ್ದಾರೆ:


"ಶಿಸ್ತು ಮತ್ತು ದೃಢತೆಗಳೆ ಯುದ್ಧಗಳ ಗೆಲುವಿಗೆ ಮೂಲ ಕಾರಣ. ಅವು ಮಹಮದನ ನೇತೃತ್ವದ ಮುಸಲ್ಮಾನ ಸೈನಿಕರಲ್ಲಿತ್ತು. ಮೆಕ್ಕಾದ ಖುರೈಷಿಗಳಲ್ಲಿ ಅದು ಕಾಣಲಿಲ್ಲ. ದೇವರಿಗಾಗಿ ಹೋರಾಡಿ ಅವನ ಪಥದಲ್ಲಿ ಅವನಿಗೋಸ್ಕರ ಒಂದೊಮ್ಮೆ ಸಾವನ್ನಪ್ಪಿದರೆ ಸ್ವರ್ಗದ ಬಾಗಿಲು ಕಾದುಕೊಂಡು ತೆರೆದಿರುತ್ತದೆ. ಸುಡು ಬಿಸಿಲ ಮರಳುಗಾಡಿನ ಈ ಮರುಭೂಮಿಯ ಕಡು ಬಡತನದ ದುಸ್ತರ ಜೀವನವನ್ನ ನಡೆಸುವುದಕ್ಕಿಂತ, ಆ ಸ್ವರ್ಗದಲ್ಲಿ ಆನಂದವಾಗಿ ಸುಖ ಪಡುವುದೆ ಎಷ್ಟೋ ಮೇಲು! ಎಂದು ಮರುಳ ಮುಸಲ್ಮಾನರು ಭಾವಿಸಿದರು. ಅಲ್ಲಿನ ಅತ್ಯಾಕರ್ಷಕ ಹೂ ತೋಟದಲ್ಲಿ ಅಡ್ಡಾದುತ್ತಾ ಸುಂದರಿಯರ ಸಾಂಗತ್ಯ ಸವಿಯುವ ಪರಮ ಸುಖ ಈ ಬರಡು ಭೂಮಿಯ ಮೇಲೆ ಎಂದಾದರೂ ದೊರಕಲು ಸಾಧ್ಯವೆ?" ಎಂದು ಅವರೆಲ್ಲಾ ತರ್ಕಿಸಿದರು. ಸಾಲದ್ದಕ್ಕೆ ಜೀವದ ಹಂಗು ತೊರೆದು ಯಾರು ಈ ನಿರ್ಣಾಯಕ ಯುದ್ಧದಲ್ಲಿ ಹೋರಾಡುವುದಿಲ್ಲವೋ ಅವರೆಲ್ಲಾ ನರಕದ ತಾಮ್ರವರ್ಣದ ಬಿರು ಬೆಂಕಿಗೆ ಬಿದ್ದು ಸಾಯುವರು ಎಂದು ಬೇರೆ ದೈವವಾಣಿಯನ್ನುದುರಿಸಿ ಮಹಮದ್ ಅವರನ್ನ ಹಿತವಾಗಿ ಮಾನಸಿಕವಾಗಿ ಬೆದರಿಸಿದ್ದ!"



ತನ್ನ ಅಳಿವು ಉಳಿವಿನ ಪ್ರಶ್ನೆಗೆ ಉತ್ತರವಾಗಲಿದ್ದ ಈ ಯುದ್ಧ ಮಹಮದನ ಜೀವನದಲ್ಲಿಯೆ ಅತ್ಯಂತ ಮಹತ್ವ ಪೂರ್ಣ ಹಾಗೂ ಪರಿಣಾಮಕಾರಿಯಾಗಿತ್ತು ಎನ್ನುತ್ತಾರೆ ಮಾರ್ಗೋಲಿಯತ್. ಅವನು ಸಾರುತ್ತಿದ್ದ ತತ್ವಗಳಿಗೆ, ಏಕ ದೈವ ವಾದಕ್ಕೆ, ಸ್ವಯಂ ಘೋಷಿತ ಪ್ರವಾದಿತ್ವಕ್ಕೆ ಸಿಕ್ಕಿದ ಅಧಿಕೃತ ದೈವಿಕ ಮನ್ನಣೆ ಇದೆಂದು ಮಹಮದ್ ಸಾರಿದ. ತಾನು ದೇವರಲ್ಲಿ ಇಟ್ಟ ವಿಶ್ವಾಸ ತನಗೆ ಈ ಬೃಹತ್ ಗೆಲುವಿನ ರೂಪದಲ್ಲಿ ದೊರಕಿದೆ ಎಂದುಾತ ಅಲ್ಲಾಹನ ಮಹಿಮೆಯನ್ನ ಕೊಂಡಾಡಿದ. ಅವನ ಈ ಉಪಕಾರ ಸ್ಮರಣೆಯ ದ್ಯೋತಕವಾಗಿ ಓತಪ್ರೋತವಾಗಿ ಅವನ ಬಾಯಿಯಿಂದ ಸುರಾಗಳ ಮಳೆ ಸುರಿಯಿತು. ಸುರಾ ೮/೪೭, ೮/೪೨, ೫/೨೪, ೮/೫-೮, ೮/೧೨, ೮/೯, ೫೪/೪೫, ೨೨/೧೯, ೮/೪೯, ೮/೧೭ ಇವೆಲ್ಲವೂ ಆ ಸಂದರ್ಭದ ಅಮೂಲ್ಯ ಕೊಡುಗೆಗಳು ಎನ್ನುತ್ತಾನೆ ತನ್ನ 'ಸೀಲ್ಡ್ ನೆಕ್ಟರ್' ಕೃತಿಯಲ್ಲಿ ಇತಿಹಾಸಕಾರ ಅಲ್ ಮುಬಾರಖಿ.



ಇತ್ತ ಮೆಕ್ಕದಲ್ಲಿ ಮಾತ್ರ ಖುರೈಷಿಗಳ ಪರಿಸ್ಥಿತಿ ಹೀನಾಯವಾಗಿತ್ತು. ಅವರ ಸೈನ್ಯದ ಸೋಲು ಸಮುದಾಯದ ಪಾಲಿಗೆ ಅತ್ಯಂತ ಶೋಚನೀಯ ಹಾಗೂ ನಾಚಿಕೆಗೇಡಿನ ಸಂಗತಿಯಾಗಿತ್ತು. ನಾಚಿಕೆಯಿಂದ ಅವರ ಒಳ ಮನ ಹಿಂಡಿ ಹೋಗಿದ್ದರೆ ಸೇಡಿನ ಜ್ವಾಲೆ ಅವರ ಹೃದಯವನ್ನ ಬೇಯುವಂತೆ ಮಾಡಿತ್ತು. ಅವರೆಲ್ಲರ ಎದೆ ಬೆಂಕಿಯ ಬೀಡಾಗಿತ್ತು. ಅವರ ಮುಖಂಡ ಹಾಗೂ ಇದಕ್ಕೆಲ್ಲಾ ಮೂಲ ಕಾರಣನಾಗಿದ್ದ ಅಬು ಸಫ್ಯಾನ ಈ ವೇಳೆ ಒಂದು ಘೋರ ಪ್ರತಿಜ್ಞೆಯನ್ನೆ ಮಾಡಿದ. ತಾನು ಮಹಮದನ ಹುಟ್ಟಡಗಿಸುವವರೆಗೂ ತನ್ನ ದಾಂಪತ್ಯ ಸುಖವನ್ನೆ ತ್ಯಜಿಸುತ್ತಿರುವುದಾಗಿ ಶೋಕ ಸಭೆಯಲ್ಲಿ ಆತ ಘೋಷಿಸಿದ!



ಸರಿಸುಮಾರು ಒಂದು ತಿಂಗಳವರೆಗೆ ಅವರೆಲ್ಲರ ಶೋಕದ ಪರ್ವ ನಿರಂತರವಾಗಿ ಮುಂದುವರೆಯಿತು. ಪ್ರತಿಯೊಂದು ಮನೆಯಲ್ಲೂ ಕಣ್ಣೀರ ಕೋಡಿ ಹರಿಯದ ದಿನವಿರಲಿಲ್ಲ. ಎಲ್ಲೆಡೆ ದುಃಖ ಮಡುಗಟ್ಟಿತ್ತು. ಕಾಲ ಕಳೆದಂತೆ ಅವರ ಸಂಯಮದ ಕಟ್ಟೆ ಒಡೆಯುವ ಹಂತಕ್ಕೆ ಬಂದು ಮುಟ್ಟಿತ್ತು. ಆದರೆ ಈ ಶೋಕದ ಗಾಳಿ ಅಧಿಕೃತವಾಗಿ ಅಬು ಸಫ್ಯಾನನ ಮಎಯನ್ನ ಮಾತ್ರ ಹೊಕ್ಕಿರಲಿಲ್ಲ! ಆತ ತನ್ನ ಹೆಂಡತಿ ಹಿಂದ್'ಳನ್ನ 'ಅಲ್ಲವೆ ಅದ್ಯಾಕೆ ರೋಧಿಸುತ್ತಿಲ್ಲ ನೀನು! ನಿನ್ನ ನಿನ್ನ ತಂದೆ ಓತ್ಬಾ ಹಾಗೂ ಸಹೋದರನ ಹತ್ಯೆಗೆ ಶೋಕ ಆಚರಿಸುವುದಿಲ್ಲವೆ?' ಎಂದು ಆತ ಪ್ರಶ್ನಿಸಲು, ಅವಳು ಇವನ ಪೌರುಷ ಕೆಣಕುವಂತೆ "ಹೆಣ್ಣಾಗಿ ಹಿಂದೆ ಕಣ್ಣೀರು ಮಿಡಿಯುತ್ತಿದ್ದೆ ನಿಜ! ಆದರೆ ಈಗ ಈ ಹಿಂದ್'ಳ ಘನತೆಗೆ ಅದು ಶೋಭಿಸುವುದಿಲ್ಲ. ನೀವೆಲ್ಲರೂ ಒಂದಾಗಿ ಸೇರಿ ಆ ಮಹಮದನ ನಡು ಮುರಿಯುವವರೆಗೂ ನಾನು ಒಂದು ತೊಟ್ಟು ಕಂಬನಿಯನ್ನೂ ಸುರಿಸುವುದಿಲ್ಲ!" ಎಂದು ಬಿಟ್ಟಳು.



ಇತ್ತ ಮೆಕ್ಕಾದ ಶೊಚನೀಯ ಶೊಕಗ್ರಸ್ಥ ಪರಿಸ್ಥಿತಿ ಹೀಗೆ ಸಾಗುತ್ತಿದ್ದರೆ ಅತ್ತ ಮದೀನಾದಲ್ಲಿ ಖುಷಿ ಕಾಲು ಮುರಿದುಕೊಂಡು ಬಿದ್ದಿತ್ತು. ತನ್ನ ವಿಜಯವನ್ನ ಸಹಜವಾಗಿ ತನ್ನ ಬೋಧನೆಯ ಧರ್ಮದ ವಿಜಯವೆಂದು ಮಹಮದ್ ಸಾರಲು ಆರಂಭಿಸಿದ್ದ. ಅದು ಸ್ವಾಭಾವಿಕವೂ ಆಗಿತ್ತು. ಇದರಿಂದ ಆಂತರಿಕವಾಗಿ ಮಹಮದನ ಶಕ್ತಿ ಇಮ್ಮಡಿಸಿತು. ಆದರೆ ಅವನ ಧರ್ಮವನ್ನ ಒಪ್ಪದೆ ಅದರೆಡೆಗೆ ಆರ್ಷಿತರಾಗದಿರುವವರ ಮನದಲ್ಲಿ ಮಾತ್ರ ಇದರಿಂದ ಆತಂಕದ ಕಾರ್ಮೋಡಗಳು ಕವಿದವು. ಅಲ್ಲಾಹನಲ್ಲಿ ಅವಿಶ್ವಾಸ ಇಟ್ಟುಕೊಂಡ ಕಾರಣಕ್ಕೇನೆ ಖುರೈಷಿಗಳು ಅವನ ಪಡೆಯಿಂದ ಸೋತು ಸುಣ್ಣವಾದರು ಎನ್ನುವ ಗಾಳಿಸುದ್ದಿಗೆ ಅವರೆಲ್ಲಾ ತಲ್ಲಣಗೊಂಡರು.



ಅಂತವರಲ್ಲಿ ಮದೀನಾದ ಮುಖಂಡ ಅಬ್ದುಲ್ ಇಬ್ನ್ ಒಬೈ ಕೂಡಾ ಒಬ್ಬನಾಗಿದ್ದ. ಪ್ರಭಾವಿಯಾಗಿದ್ದ ಆತ ಇನ್ನೂ ಇಸ್ಲಾಮಿನತ್ತ ಆಸಕ್ತಿ ಬೆಳೆಸಿಕೊಂಡಿರಲಿಲ್ಲ. ಅವನಂತೆಯೆ ತಟಸ್ಥರಾಗಿದ್ದ ಅದೆಷ್ಟೋ ಮದೀನಾ ನಿವಾಸಿಗಳಿದ್ದರು. ಅವರು ಅತ್ತಲಾಗೆ ತಮ್ಮ ಮೂರ್ತಿ ಪೂಜೆಯ ಅರೆ ವೈದಿಕ ವಿಧಿಗಳನ್ನ ಬಿಡಲೂ ಇಲ್ಲ ಹಾಗಂತ ಮಹಮದನ ಹೊಚ್ಚ ಹೊಸ ಬೋಧನೆಗಳನ್ನ ವಿರೋಧಿಸಲೂ ಇಲ್ಲ. ಆದರೆ ಈ ಬದರ್ ಯುದ್ಧದ ಮುಸಲ್ಮಾನರ ವಿಜಯ ಅವರಲ್ಲಿ ಹೊಸ ಧರ್ಮದ ಬಗ್ಗೆ ಗಮನ ಸೆಳೆಯುವಂತೆ ಮಾಡಿತು.


ಮದೀನಾ ಹಾಗೂ ಅದರ ಆಸುಪಾಸಿನ ಯಹೂದಿಗಳು ಈ ಯುದ್ಧದ ಬಳಿಕ ಮಹಮದನ ಶಕ್ತಿಯನ್ನ ಗೌರವಿಸಲಾರಂಭಿಸಿದರು. ಆದರೆ ಅವನ ಮತಕ್ಕೆ ಸೇರುವ ಮನಸೊಂದನ್ನ ಮಾತ್ರ ಅವರ್ಯಾರೂ ಮಾಡಲಿಲ್ಲ. ಜೊತೆಗೆ ಅವನ ಬೆನ್ನ ಹಿಂದೆ ಹಾಗೂ ಪರೋಕ್ಷವಾಗಿ ಅವನನ್ನೂ ಅವನ ಧರ್ಮವನ್ನೂ ಟೀಕಿಸುವುದನ್ನೂ ಸಹ ನಿಲ್ಲಿಸಲಿಲ್ಲ.  ಮಹಮದನಿಗೂ ಇದರ ಅರಿವಿತ್ತು. ತನ್ನ ಕಾರ್ಯ ಸಾಧನೆಗೆ ಈ ಯಹೂದಿಗಳು ಮಗ್ಗುಲ ಮುಳ್ಳಾಗಿದ್ದಾರೆ ಎಂದೆ ಆತ ಭಾವಿಸಿದ್ದ. ಆದರೆ ತನ್ನ ತೋಳ್ಬಲವನ್ನ ಸಾಬೀತು ಪಡಿಸಿದ ಬದರ್ ಯುದ್ಧದ ನಂತರ ಅವರಲ್ಲಿ ಅನೇಕರು ಮೇಲ್ನೋಟಕ್ಕಾದರೂ ಅವನ ಭಕ್ತರಾಗಿ ಪರಿವರ್ತಿತರಾಗಿದ್ದರು.



ಹೀಗಾಗಿ ಈ ಶರಣಾಗತಿಯ ಆ ಹೊತ್ತಿನ ಉಪಯೋಗವನ್ನ ಸಶಕ್ತವಾಗಿ ಪಡೆದುಕೊಳ್ಳಲು ಅವನು ಮುಂದಾದ. ಅಂತಹ ಕೆಲವರನ್ನ ಆತ ತನ್ನ ಗೂಢಚಾರರಾಗಿ ನೇಮಿಸಿಕೊಂಡ. ಯಹೂದಿ ಸಮಾಜ ಹಾಗೂ ಇನ್ನಿತರ ಅವಿಶ್ವಾಸಿ ಸಮುದಾಯದಲ್ಲಿ ಆಗಾಗ ನುಸುಳಿ ಅವರ ಅಭಿಪ್ರಾಯಗಳನ್ನ ಸಂಗ್ರಹಿಸಿ, ಇಸ್ಲಾಮಿನ ವಿರುದ್ಧ ಅವರೇನಾದರೂ ಪಿತೂರಿ ಹೂಡಿದರೆ ಅದನ್ನ ತಿಳಿಸುವ ಹೊಣೆಗಾರಿಕೆಯನ್ನವರಿಗೆ ವಹಿಸಲಾಯಿತು. ಕೈತುಂಬ ಕಾಸು ತರುವ ಆ ಸುಲಭದ ಚಾಡಿಕೋರತನಕ್ಕೆ ಅವರೂ ಸಹ ಬಲಿ ಬಿದ್ದರು. ಅವರ ಗುಪ್ತ ಮಾಹಿತಿ ಹಾಗೂ ನಿಖರವಾದ ಬಾತ್ಮಿಗಳ ದೆಸೆಯಿಂದ ಮಹಮದನಿಗೆ ಅವಿಶ್ವಾಸಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಸಹಜವಾಗಿ ಸೂಕ್ತವಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಯಿತು.


( ಇನ್ನೂ ಇದೆ.)

24 October 2015

ವಲಿ - ೧೫







ಕ್ಯಾರವಾನ್ ಲೂಟಿಯನ್ನೆ ಮೂಲಮಂತ್ರ ಮಾಡಿಕೊಂಡ ಮಹಮದನ ದಂಡಯಾತ್ರೆಗಳು ಕ್ರಮೇಣ ಹೆಚ್ಚಿದವು. ಇಂತಹ ಚುರುಕಿನ ಕೊಳ್ಳೆ ಸಂಗ್ರಹದ ಸಂದರ್ಭದಲ್ಲಿಯೆ ಮೆಕ್ಕಾದ ಖುರೈಷಿ ಮುಖಂಡ ಅಬು ಸಫ್ಯಾನನ ಭರ್ಜರಿ ಕ್ಯಾರವಾನ್ ಒಂದು ದೂರದ ಸಿರಿಯಾದವರೆಗೆ ಸಾಗಿ ಲಾಭದಾಯಕವಾದ ವ್ಯಾಪಾರ ಮಾಡಿಕೊಂಡು, ಬೆಲೆಬಾಳುವ ಸ್ವತ್ತುಗಳೊಡನೆ ಮೆಕ್ಕಾಕ್ಕೆ ಮರಳಿ ಬರುತ್ತಿರುವ ಸಂಗತಿ ತನ್ನ ಗೂಡಚರರಿಂದ ಮಹಮದನಿಗೆ ತಿಳಿಯಿತು. ಕ್ಷಣವೂ ತಡ ಮಾಡದೆ ಆತ ಕಾರ್ಯಪ್ರವರ್ತನಾದ. ಕೂಡಲೆ ಸಿರಿಯಾದಿಂದ ಮೆಕ್ಕಾ ನಡುವಿನ ಹೆದ್ದಾರಿಯ ಎಲ್ಲಾ ಇನ್ನಿತರ ಬುಡಕಟ್ಟಿನ ಮುಖಂಡರೊಂದಿಗೆ ಸಂಧಿ ಮಾಡಿಕೊಂಡ. ಅದರ ಪ್ರಕಾರ ಅವರು ಈ ಇಬ್ಬರ ನಡುವಿನ ಹೋರಾಟದಲ್ಲಿ ತಟಸ್ಥರಾಗಿ ಉಳಿಯುವ ನಿರ್ಧಾರ ತಳೆಯಬೇಕಿತ್ತು. ಈ ನಡುವೆ ಈ ಸಂಧಿ, ಕುತಂತ್ರ ಹಾಗೂ ಆಕ್ರಮಣದ ಸುದ್ದಿ ತನ್ನ ಗೂಢಚರರ ಮೂಲಕ ಅಬು ಸಫ್ಯಾನನಿಗೂ ತಿಳಿಯಿತು. ಆತ ತಕ್ಷಣ ಮೆಕ್ಕಾದ ತನ್ನ ಬಂಧುಗಳಿಗೆ ಸುದ್ದಿ ರವಾನಿಸಿ ತನ್ನ ಹಾಗೂ ಕ್ಯಾರವಾನಿನ ರಕ್ಷಣೆಗೆ ಒಂದು ಸೈನಿಕ ಪಡೆಯನ್ನ ರವಾನಿಸುವಂತೆ ಕೋರಿಕೆ ಸಲ್ಲಿಸಿದ.


ಇತ್ತ ಮಹಮದ ತನ್ನ ಅನುಯಾಯಿಗಳ ಸಭೆ ಕರೆದು. ತನಗೆ ಅಬು ಸಫ್ಯಾನನ ಕ್ಯಾರವಾನ್ ಕೊಳ್ಳೆ ಹೊಡೆಯಲು ದೈವಾನುಮತಿ ಸಿಕ್ಕಿದೆ ಎಂದು ಸಾರಿದ. ಅವನ ಉತ್ತೇಜನದ ಹುರಿದುಂಬಿಸುವ ಮಾತುಗಳು ಅವರೆಲ್ಲರ ರಣೋತ್ಸಾಹವನ್ನು ಹೆಚ್ಚಿಸಿದವು. ಅರಬ್ಬರ ರಕ್ತದಲ್ಲಿಯೆ ಕೊಳ್ಳೆ ಹೊಡೆಯುವ ಹಾಗೂ ಹೋರಾಡುವ ಗುಣವಿದ್ದು ಅದು ಸಹಜವಾಗಿ ಮದೀನದ ವಾಸಿಗಳಿಗೂ ಇದ್ದೇ ಇತ್ತು. ಅವರೆಲ್ಲಾ ತಮ್ಮ ಬುಡಕಟ್ಟಿನ ರೀತಿ ರಿವಾಜಿನಂತೆ ಹೋರಾಟಕ್ಕೆ ಜಾತಕ ಪಕ್ಷಿಗಳಂತೆ ಕಾಯ ತೊಡಗಿದರು. ಹೀಗಾಗಿ ಆತನ ಪಡೆಯಲ್ಲಿ ನವ ಮುಸಲ್ಮಾನರಾಗದಿದ್ದವರೂ ಸಹ ಸೇರಲು ಅತೀವ ಆಸೆ ಪಟ್ಟರು. ಆದರೆ ಮಹಮದ್ ಹುಷಾರಾಗಿ ಕೇವಲ ತನ್ನ ಕುಲ ಬಾಂಧವರಿಗಷ್ಟೆ ತನ್ನ ಪಡೆಯಲ್ಲಿ ಜಾಗ ನೀಡಿದ. ತನ್ನ ನೂತನ ಮತಾಅವಲಂಭಿಗಳಿಗೆ ಮಾತ್ರ ಈ ದೈವವಾಣಿ ಅನ್ವಯಿಸುತ್ತದೆ ಎಂದು ಘೋಷಿಸಿದ. ಆ ದೈವವಾಣಿ ೮/೧-೭೩ರ ಮೂಲಕ ಮಹಮದನಿಗೆ ಅಲ್ಲಾಹನ ಲೂಟಿಯ ಆಜ್ಞೆಯಾಗಿ ಸಿಕ್ಕಿತು.


ಕ್ರಿಸ್ತಶಕ ೬೩೨ರ ಜನವರಿ ೮ ರಂದು ಮಹಮದನ ಪಡೆ ಮದೀನಾದಿಂದ ಯುದ್ಧ ರಂಗಕ್ಕೆ ಹೊರಟಿತು. ಇತಿಹಾಸಕಾರ ವಿಲಿಯಂ ಮ್ಯೂರನ ಪ್ರಕಾರ ಆದರಲ್ಲಿ ಮುನ್ನೂರ ಐದು ಮಂದಿ ಯೋಧರಿದ್ದರು. ಎರಡು ದಿನಗಳ ನಿರಂತರ ನಡುಗೆಯ ನಂತರ ಬದರ್ ಎನ್ನುವ ಸ್ಥಳದಲ್ಲಿ ಈ ಪಡೆ ತಂಗಿತು. ಇತ್ತ ಅಬು ಸಫ್ಯಾನನೂ ಅದೆ ಹಾದಿಯಾಗಿ ಬದರ್ ಮೂಲಕ ಬರುವಾಗ ಅವನಿಗೆ ಮಹಮದನ ಪಡೆ ತನ್ನ ಕ್ಯಾರವಾನನ್ನೆ ನಿರೀಕ್ಷಿಸುತ್ತಾ ಠಿಕಾಣಿ ಹೂಡಿರುವ ವಿಷಯ ತಿಳಿಯಿತು. ಅವನು ಚಾಣಾಕ್ಷತೆಯಿಂದ ಹೆದ್ದಾರಿ ಮಾರ್ಗವಾಗಿ ಸಾಗದೆ ಬದರ್ ಸುತ್ತುವರೆದು ಇನ್ನೊಂದು ಅಡ್ಡ ದಾರಿಯ ಮೂಲಕ ಮೆಕ್ಕಾದತ್ತ ಚಲಿಸಿದ. ಈ ನಡುವೆ ಆತನ ಬೇಹುಗಾರ ಮೊದಲೆ ಮೆಕ್ಕಾ ಮುಟ್ಟಿ ಮಹಮದನ ಆಕ್ರಮಣದ ಸುದ್ದಿಯನ್ನ ಅಲ್ಲಿನವರಿಗೆ ಅರುಹಿದ್ದರಿಂದ ಅಲ್ಲಿನವರು ಯುದ್ಧ ಸನ್ನದ್ಧರಾಗಿ ನಿಂತರು.



ತಾವು ರಕ್ತ ಬಸಿದು ಬೆವರಾಗಿ ಹರಿಸಿ ಕಷ್ಟದಲ್ಲಿ ಸಂಪಾದಿಸಿ ತಂದ ಸೊತ್ತನ್ನ ಹೀಗೆ ಕ್ಷಣಾರ್ಧದಲ್ಲಿ ಹದ್ದಿನಂತೆ ಮೇಲೆರಗಿ ಬಂದು ಕಿಂಚಿತ್ತೂ ದ್ರವ್ಯ ಸಾಮಗ್ರಿಗಳನ್ನ ಬಿಡದೆ ಮಹಮದ್ ಲೂಟಿ ಮಾಡಿಕೊಂಡು ಹೋಗುವುದು ಅವರ ಪಾಲಿಗೆ ಸಹಿಸಲಿಕ್ಕೆ ಅಸಾಧ್ಯವಾಗಿತ್ತು. ಹೀಗಾಗಿ ಈ ಸಾರಿ ನಿರ್ಣಾಯಕವಾಗಿ ಅವನ ಉಪಟಳಕ್ಕೊಂದು ಅಂತ್ಯ ಕಾಣಿಸಲು ಅವರೆಲ್ಲಾ ನಿರ್ಧರಿಸಿದರು. ಊರಿನ ಪ್ರತಿಯೊಬ್ಬ ಖುರೈಷಿ ಯುವಕನೂ ಶಸ್ತ್ರ ಸನ್ನದ್ಧನಾಗಿ ಹೊರಟ. ಯಾರು ವಯೋವೃದ್ಧರಾಗಿ ಅಸಹಾಯಕರಾಗಿದ್ದರೋ ಅವರು ತಮ್ಮ ಪರವಾಗಿ ಇನ್ನೊಬ್ಬರನ್ನ ನೇಮಿಸಿದರು. ಹೀಗೆ ಮೆಕ್ಕಾದಲ್ಲೆ ಉಳಿದರೂ ಸಹ ತನ್ನ ಪರವಾಗಿ ಯೋಧನನ್ನ ನೇಮಿಸಿ ಕಳಿಸಿದ್ದವರಲ್ಲಿ ಮಹಮದನ ದೊಡ್ಡಪ್ಪ ಅಬು ಲೆಹಾಬ್ ಸಹಿತ ಸೇರಿದ್ದ.



ಆದರೆ ತಾವು ಇನ್ನೂ ಹೊರಡುವ ಮೊದಲೆ ಆಬು ಸಫ್ಯಾನ ಅಡ್ಡ ದಾರಿಯ ಮೂಲಕ ಮೆಕ್ಕಾದತ್ತ ಚಲಿಸುತ್ತಿರುವ ಇನ್ನೊಂದು ಸುದ್ದಿ ಅವರಿಗೆ ಬಂದು ಮುಟ್ಟಿತು. ಹೀಗಾಗಿ ತಾವು ವ್ಯಥಾ ಮಹಮದನ ಮುಂದೆ ಹೋಗಿ ಕಾಳಗ ಜರುಗಿಸಬೇಕೆ? ಅಥವಾ ಅರ್ಧ ದಾರಿಯಿಂದ ಹಿಂದುರುಗಿ ಹೋಗೋಣವೆ? ಎನ್ನುವ ಜಿಜ್ಞಾಸೆಯಲ್ಲವರು ತೊಡಗಿದರು. ಅವರಲ್ಲಿ ಹಿರಿಯರು ಮಹಮದ್ ಹಾಗೂ ಅವನ ಜೊತೆಯಲ್ಲಿರುವ ಎಲ್ಲರೂ ತಮ್ಮ ಖುರೈಷಿ ಬುಡಕಟ್ಟಿನವರೆ ತಾನೆ? ನಾವೇ ನಮ್ಮವರನ್ನ ಅದೇಕೆ ಹಿಂಸಿಸಿ ಸಂತೋಷ ಪಡೋದು! ಎನ್ನುವ ವಾದ ಹೂಡಿದರು. ಆದರೆ ಬಿಸಿರಕ್ತದ ಯುವಕರಿಗೆ ಈ ವಿತಂಡವಾದ ಸಮ್ಮತವಾಗಿರಲಿಲ್ಲ. ಕಾರಣವಿಲ್ಲದೆ ಕಾಲು ಕೆರೆದುಕೊಂಡು ಬರುವುದನ್ನೆ ಪ್ರವೃತ್ತಿ ಮಾಡಿಕೊಂಡಿರುವ ಮಹಮದನ ಹುಟ್ಟಡಗಿಸಬೇಕೆಂದು ಅವರೆಲ್ಲಾ ವಾದಿಸಿದರು. ಅವನು ಹೀಗೆಲ್ಲ ಸಿರಿವಂತಿಕೆಯನ್ನ ಅಕ್ರಮವಾಗಿ ಗಳಿಸಿ ಬಲವಂತನಾಗುವ ಮುನ್ನವೆ ಮಟ್ಟ ಹಾಕುವುದೆ ಸರಿ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ಪಡೆ ಯುದ್ಧಾಗಂಣಕ್ಕೆ ಮುನ್ನಡೆಯಿತು. ಇತ್ತ ಅಬು ಸಫ್ಯಾನ್ ಸುರಕ್ಷಿತವಾಗಿ ಮೆಕ್ಕಾ ಮುಟ್ಟಿ ಆಗಿತ್ತು!



ಮಹಮದ್ ಬದರ್ ಬಂದ ದಿನದಲ್ಲಿಯೆ ಆತನಿಗೆ ತನ್ನ ಗುರಿ ತಪ್ಪಿರುವುದು ಅರಿವಿಗೆ ಬಂತು. ಸಾಲದ್ದಕ್ಕೆ ಖುರೈಷಿಗಳ ಪಡೆಯನ್ನ ಎದುರಿಸುವ ಅನಿವಾರ್ಯತೆ ಬೇರೆ ಸೃಷ್ಟಿಯಾಗಿತ್ತು. ಈ ಆಪತ್ತಿನ ಕ್ಷಣದಲ್ಲಿಯೂ ಆತ ಧೃತಿ ಗೆಡಲಿಲ್ಲ. ತನ್ನ ಹಿತೈಷಿಗಳೂ ಹಾಗೂ ಅತ್ಯಾಪ್ತರೂ ಆಗಿದ್ದ ಅಬು ಬಕರ್ ಹಾಗೂ ಉಮರ್'ನೊಡನೆ ಖಾಸಗಿಯಾಗಿ ಚರ್ಚಿಸಿದನಾತ. ಯುದ್ಧ ಬೇಕೆ? ಬೇಡವೆ? ಅನ್ನುವ ಅವನ ಅಂತರಂಗದ ಪ್ರಶ್ನೆಗೆ ಅವರಿಬ್ಬರೂ ಸಮ್ಮತಿ ಸೂಚಕವಾಗಿಯೆ ತಲೆ ಆಡಿಸಿದರು. ಖುರೈಷಿಗಳಿಂದ ಧರ್ಮಾಂತರವಾದ ಕಾರಣಕ್ಕೆ ತಮಗಾದ ಅವಮಾನ ಹಾಗೂ ಗಡಿಪಾರಿನ ಕುರಿತು ಅವರೊಳಗೂ ದ್ವೇಷಾಸೂಯೆ ಹೊಗೆಯಾಡುತ್ತಿದ್ದು ಸೂಕ್ತ ಪ್ರತಿಕಾರ ಜರುಗಿಸುವ ಆಸೆ ಅವರಿಗೂ ಸಹ ಇತ್ತು.


ಹೀಗಾಗಿ ಮಹಮದ್ ಯುದ್ಧದತ್ತ ಚಿತ್ತ ನೆಟ್ಟ. ಅದನ್ನ ದೇವರ ಹೆಸರಿನಲ್ಲಿ ಅಧಿಕೃತಗೊಳಿಸಲು ಉತ್ತೇಜನದ ನುಡಿಗಳೊಂದಿಗೆ ಯುದ್ಧವನ್ನ ತನ್ನ ಪಡೆಯ ಮುಂದೆ ಸಾರಿದ. 'ದೇವರ ದಯದಿಂದ ಮುನ್ನುಗ್ಗಿರಿ. ದೇವರು ಎರಡರಲ್ಲಿ ಒಂದನ್ನು ನಿಮಗೆ ನೀಡಲು ಆಶ್ವಾಸನೆ ನೀಡಿರುತ್ತಾನೆ. ಆತ ಸೈನ್ಯ ಅಥವಾ ಕ್ಯಾರವಾನನ್ನು ನನ್ನ ಕೈಗೆ ನೀಡುವನು!. ಓ ದೇವರೆ! ರಣರಂಗದಲ್ಲಿ ಹರಡಿರುವ ಹೆಣಗಳ ದೃಶ್ಯವನ್ನು ನಾನು ನೋಡುತ್ತಿರುವ ಹಾಗೆ ಕಾಣುತ್ತಿದೆ!' ಎಂದು ಉತ್ಸಾಹ ಹೆಚ್ಚಿಸುವ ನುಡಿಗಳನ್ನೆ ಆತ ನುಡಿದ. ಮಹಮದ್ ತನ್ನ ಶತ್ರು ಸೈನ್ಯದ ಸಂಖ್ಯಾಬಲ, ಅವರ ಶಸ್ತ್ರ ಶಕ್ತಿಯ ಮಾಹಿತಿ ಹಾಗೂ ಇನ್ನಿತರ ಸರಂಜಾಮಿನ ವಿವರಗಳನ್ನ ಬೇಹುಗಾರರಿಂದ ಕೇಳಿ ಅರಿತ. ತನ್ನ ಸೈನ್ಯದ ಸುರಕ್ಷಿತ ಠಿಕಾಣಿಗೆ ಸೂಕ್ತ ಸ್ಥಳವನ್ನ ಅರಸಲು ಅಲಿಯನ್ನ ಕಳುಹಿಸಿದ.


ಇತಿಹಾಸಕಾರ ರೊನಾಲ್ಡ್ ಬ್ರಾಡ್'ಹಾರ್ಸ್ಟ್ ತನ್ನ ಕೃತಿ 'ದ ಟ್ರಾವೆಲ್ಸ್ ಆಫ್ ಇಬ್ನ್'ನಲ್ಲಿ ಹೇಳುವಂತೆ ಬದರ್ ಒಂದು ಬಯಲು ಪ್ರದೇಶವಾಗಿತ್ತು. ಸುತ್ತಲೂ ಬೆಟ್ಟಗುಡ್ಡಗಳು ಆವರಿಸಿದ್ದವು. ಪುಟ್ಟ ನೀರಿನ ಝರಿಯೊಂದು ಪೂರ್ವ ದಿಕ್ಕಿನ ಕಡೆಯಿಂದ ಇಳಿದು ಬಯಲಿನತ್ತ ಹರಿದು ಸಾಗುತ್ತಿತ್ತು. ಸಾಗುವ ಹಾದಿಯಲ್ಲಿ ಅದು ಅನೇಕ ನೀರಿನ ಬುಗ್ಗೆ ಹಾಗೂ ಹೊಂಡಗಳನ್ನ ಅಲ್ಲಲ್ಲಿ ಉಂಟು ಮಾಡುತ್ತಲಿತ್ತು. ಮೊದಲಿಗೆ ಮಹಮದ್ ಅಂತಹ ಒಂದು ನೀರಿನ ಬುಗ್ಗೆಯ ಬಳಿಯೆ ತನ್ನ ಸೈನ್ಯದೊಂದಿಗೆ ಬೀಡು ಬಿಟ್ಟಿದ್ದ. ಆದರೆ ಆ ಪ್ರದೇಶದ ಸಂಪೂರ್ಣ ಪರಿಚಯವಿದ್ದ ಮಹಮದನ ಅನುಚರ ಅಲ್ ಹೊಬಾಬ್ ಈ ಝರಿಯ ಮುಖವನ್ನು ಹಿಡಿದು ಬೆಟ್ಟದಾಚೆ ಹೊರಟರೆ ಅಲ್ಲಿ ಸಮೃದ್ಧವಾದ ನೀರಿನ ಆಸರೆ ಇದೆಯೆಂದೂ, ಅಲ್ಲಿಗೆ ಹೋದರೆ ಸೈನ್ಯದ ಸಕಲ ಅಗತ್ಯಗಳಿಗೂ ಅಗತ್ಯವಾದಷ್ಟು ನೀರು ಸಿಕ್ಕಬಹುದೆಂದು ಮಾಹಿತಿ ನೀಡಿದ. ಅವನ ಅ ಸಲಹೆಯಂತೆ ಮುಂದೆ ಸಾಗಲು ಸಮ್ಮತಿಸಿದ ಮಹಮದ್. ಈ ಕೆಳಗಿನ ಬುಗ್ಗೆಗಳು ಹಾಗೂ ನೀರಿನ ಹೊಂಡಗಳು ಖುರೈಷಿಗಳ ಉಪಯೋಗಕ್ಕೆ ಸಿಗದಿರಲಿ ಎನ್ನುವ ಉದ್ದೇಶದಿಂದ ಅವುಗಳನ್ನೆಲ್ಲಾ ಮರಳು ತುಂಬಿಸಿ ಮುಚ್ಚಿಸಿದ. ಅನಂತರ ಸೈನ್ಯ ಮುಂದೆ ಎತ್ತರಕ್ಕೆ ಪ್ರಯಾಣ ಬೆಳಸಿತು.



ಅಲ್ಲಿ ಬಂಟ ತಿಳಿಸಿದ ಹಾಗೆ ಅಪಾರ ನೀರಿನ ಖಜಾನೆಯಿದ್ದ ಝರಿಯ ಮೂಲ ಸಿಕ್ಕಿತು. ಸಂಪ್ರೀತನಾದ ಮಹಮದ್ ಅಲ್ಲಿಯೆ ಠಿಕಾಣಿ ಹೂಡಿದ. ಅವನಿಗೋಸ್ಕರ ಖರ್ಜೂರದ ಗರಿಗಳಿಂದ ಅನುಯಾಯಿಗಳು ತತ್ಕಾಲಿಕವಾದ ಗುಡಿಸಲೊಂದನ್ನ ನಿರ್ಮಿಸಿದರು. ರಾತ್ರಿಯಾಗುತ್ತಿದ್ದಂತೆ ಬಲವಾದ ಕಾವಲನ್ನೂ ಸಹ ಒದಗಿಸಿದರು. ಎರಡು ದಿನಗಳ ನಿರಂತರ ನಡುಗೆಯ ಆಯಾಸ ಬೇರೆ ಆಗಿತ್ತು, ಆ ರಾತ್ರಿ ಬಾನು ಕಪ್ಪಾಗಿ ಒಳ್ಳೆಯ ಮಳೆ ಸುರಿಯಿತು ಈ ತಂಪಿನ ನಡುವೆಯೂ ದೇಹಾಯಾಸದ ದೆಸೆಯಿಂದ ಅವರೆಲ್ಲ ಗಾಢವಾಗಿ ಮಲಗಿ ನಿದ್ರಿಸಿ ವಿಶ್ರಾಂತಿ ತೆಗೆದುಕೊಂಡರು.


ಇತ್ತ ಮೊದಲಿನ ಜಿಜ್ಞಾಸೆಯ ಮೇಲೆ ಯುದ್ಧ ಬೇಕೋ? ಬೇಡವೋ? ಎನ್ನುವ ಒಡಕು ನಾದ ಖುರೈಷಿಗಳ ಪಡೆಯಲ್ಲಿಯೂ ಸಹ ಆ ಒಡಕನ್ನ ವಿಸ್ತರಿಸಿತ್ತು. ಹಿರಿಯರು ಕೆಲವರು ಎಷ್ಟಾದರೂ ಆತ ನಮ್ಮ ಬುಡಕಟ್ಟಿನವನೆ, ವ್ಯಥಾ ರಕ್ತಪಾತವೇಕೆ? ನಾವು ಮರಳಿ ಮೆಕ್ಕಾ ಸೇರಿಕೊಳ್ಳೋಣ ಎನ್ನುವ ವಾದವನ್ನ ಹೂಡಿದರು. ಅವರ ಈ ವಾದಕ್ಕೆ ಸಮ್ಮತಿ ಸೂಚಿಸಿದವ ತರುಣ ಓಮೈರ್ ಮಾತ್ರ. ಅಪ್ರತಿಮ ಬಿಲ್ಲುಗಾರನಾಗಿದ್ದ ಆತ ಮಾರುವೇಷದಲ್ಲಿ ಮಹಮದನ ಠಿಕಾಣಿಯನ್ನ ಒಂದು ಸುತ್ತು ಹಾಕಿ ಬಂದಿದ್ದ! ಅವರ ಯುದ್ಧ ಪಿಪಾಸುತನ ಹಾಗೂ ಕೆಚ್ಚೆದೆಯಿಂದ ಕಾದಾಡುವ ರಣೋತ್ಸಾಹದ ನುಡಿಗಳು ಅವನನ್ನ ಆತಂಕಿತನಾಗಿಸಿದ್ದವು. ಕೊನೆ ಉಸಿರಿರುವ ತನಕ ಹೋರಾಡುವ ಮಹಮದನ ಪಡೆಯ ಕೆಚ್ಚೆದೆಯ ನಿರ್ಧಾರವನ್ನು ಕಂಡು ಬೆಚ್ಚಿಬಿದ್ದಿದ್ದನಾತ. ಅದನ್ನ ಇದ್ದ ಹಾಗೆಯೆ ಇಲ್ಲಿ ಬಂದು ಆತ ಅರುಹಿದ. ಅವನ ಮಾತುಗಳನ್ನ ಕೇಳುತ್ತಲೆ ಅನೇಕ ಖುರೈಷಿಗಳ ಜಂಘಾಬಲವೆ ಉಡುಗಿತು. ವ್ಯಾಪಾರಿಗಳಾಗಿದ್ದ ಅವರಿಗೆ ಕಾದಾಟ ಅಷ್ಟು ಆಸಕ್ತಿಯ ವಿಚಾರ ಆಗಿರಲಿಲ್ಲ. ಆದರೆ ಹಿಂದೊಮ್ಮೆ ಒತ್ತೆಯಾಳುಗಳಾಗಿ ಸೆರೆ ಸಿಕ್ಕು ಪವಿತ್ರ ದಿನಗಳಲ್ಲಿ ಮಹಮದನ ಅನುಚರರಿಂದ ದೈಹಿಕ ಹಿಂಸೆಯನ್ನ ಅನುಭವಿಸಿದ್ದ ಅಬು ಝಹಾಲ್ ಹಾಗೂ ಅಮೀರ್ ಇಬ್ನ ಅಲ್ ಹದ್ರಾಮಿ ಮಾತ್ರ ಈ ಹೇಡಿತನದ ಮಾತುಗಳಿಂದ ಕೆರಳಿ ನಿಂತರು. ಇವರೆಲ್ಲರ ಹೇಡಿತನವನ್ನ ಮನಸೋ ಇಚ್ಛೆ ಜರಿದರು. ಆಗ ಮರಳಿ ಜಾಗ್ರತವಾಯಿತು ಮತ್ತೆ ಖುರೈಷಿಗಳ ಪೌರುಷ. ಯುದ್ಧ ಮಾಡುವ ಅಂತಿಮ ನಿರ್ಧಾರ ತೆಳೆಯಲಾಯಿತು. ಬದರ್'ನತ್ತ ಸೈನ್ಯವನ್ನ ಖುರೈಷಿಗಳು ಮುನ್ನಡೆಸಿದರು.


ಮಹಮದ್ ವಾಸ್ತವದಲ್ಲಿ ಸಣ್ಣ ಸೈನಿಕ ಪಡೆಯೊಂದಿಗೆ ಅಂದಾಜಿಲ್ಲದೆ ಖುರೈಷಿಗಳ ದೊಡ್ದದಾಗಿರಬಹುದಾದ ಸಾಧ್ಯತೆ ಇರುವ ಸೈನ್ಯವನ್ನ ಎದುರಿಸಲು ಬಂದಿದ್ದ. ಆತ ತಂಗಲು ಆಯ್ಕೆ ಮಾಡಿಕೊಂಡಿದ್ದ ಸ್ಥಳ ಅತ್ಯುತ್ತಮವಾಗಿತ್ತು. ಆದರೆ ಸಂಖ್ಯಾ ಬಲದ ಆಧಾರದ ಮೇಲೆ ಪರಿಗಣಿಸಿದಾಗ ಆಯಕಟ್ಟಿನ ಸ್ಥಳದಲ್ಲಿ ಬೀಡು ಬಿಟ್ಟಿದ್ದರೂ ಸಹ ಖುರೈಷಿಗಳ ಅಪಾರ ಪ್ರಮಾಣದ ಸೈನ್ಯವನ್ನು ವಾಸ್ತವವಾಗಿ ಎದುರಿಸುವುದು ಕಠಿಣ ಎನ್ನುವ ಅರಿವು ಅವನಿಗಿತ್ತು. ಹೀಗಾಗಿ ತನ್ನ ಕದನ ಕಲಿಗಳ ಮನೋಸ್ಥೈರ್ಯ ಹೆಚ್ಚಿಸಲು ಅವನು ದೈವವಾಣಿಯ ಮೊರೆ ಹೋದ. " ಓ ದೇವನೆ! ಈ ನಿನ್ನ ಸಣ್ಣ ಪಡೆ ಒಂದುವೇಳೆ ನಾಶವಾದರೆ ಮತ್ತೆ ವಿಗ್ರಹಾರಾಧನೆ ಗೆಲ್ಲುತ್ತದೆ. ನಿನ್ನ ಪವಿತ್ರ ಆರಾಧನೆ ಈ ಲೋಕದಿಂದ ಕಣ್ಮರೆಯಾಗುತ್ತದೆ" ಎಂದು ಕಳಕಳಿಯಿಂದ ಆತ ಪ್ರಾರ್ಥಿಸಿದ.


ಆತನ ಆರ್ತ ಮೊರೆಗೆ ಅತನ ಬಾಯಿಯಿಂದಲೆ ದೇವರು ಉತ್ತರವನ್ನೂ ಸಹ ಕೊಟ್ಟರು! ತನ್ನ ಸಂಪೂರ್ಣ ಬೆಂಬಲ ಹಾಗೂ ಭರವಸೆಗಳನ್ನ ಅಲ್ಲಾಹ ಮಹಮದನ ಮೂಲಕ ಮಹಮದನಿಗೇನೆ ಮುಟ್ಟಿಸಿದ!! ಅದು ಸುರಾ ೮/೧೨ ಹಾಗೂ ೮/೯ರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಸುರಾ ೫೪/೪೫, ೨೨/೧೯, ೮/೪೮ ಹಾಗೂ ೮/೪೯ರಲ್ಲಿ ಅದನ್ನ ಗಮನಿಸಬಹುದು. ಹೀಗಾಗಿ ಖುರೈಷಿ ಸೈನ್ಯವೆ ಮುಂದಾಗಿ ಯುದ್ಧಾಹ್ವಾನ ನೀಡಲಿ, ಅಲ್ಲಿಯವರೆಗೆ ನಾವು ಕಾದುಕೊಂಡಿರೋಣ ಎಂದು ಮುಸಲ್ಮಾನರೆಲ್ಲ ನಿರ್ಧರಿಸಿ ಕಾದು ಕುಳಿತರು.



ಈ ಎರಡೂ ಪಡೆಯ ಮುಖಾಮುಖಿಯ ಕಾದಾಟ ಇನ್ನೇನು ಕೆಲವೆ ಕ್ಷಣಗಳಲ್ಲಿ ಆರಂಭವಾಗುವ ಸಮಯ ಒದಗಿ ಬಂದಾಗ ಖುರೈಷಿಗಳ ಪಡೆಯಿಂದ ಮಿತಿಮೀರಿದ ಉತ್ಸಾಹದಲ್ಲಿ ಕೆಲವು ಶೂರರು ಮಹಮದನ ಪಡೆಗಳತ್ತ ರಣೋತ್ಸಾಹದಿಂದ ನುಗ್ಗಿ ಬಂದರು. ಹಾಗೆ ಮಹಮದನ ಪಾಳಯಕ್ಕೆ ನುಗ್ಗಿದವರಲ್ಲಿ ಅಲ್ ಅಸಾದ್ ಸಹ ಒಬ್ಬನಾಗಿದ್ದ. ಆ ಝರಿಯ ಮೂಲದ ನೀರನ್ನ ಕುಡಿದೆ ಬರುತ್ತೇನೆ ಎನ್ನುವ ಬಡಾಯಿ ಕೊಚ್ಚಿಕೊಳ್ಳುತ್ತಾ ಆತ ಮುನ್ನುಗಿದ. ಆದರೆ ಅಲ್ಲಿ ಅಡಗಿ ಕುಳಿತುಕೊಂಡಿದ್ದ ಹಂಝಾ ಅವನ ಕಾಲನ್ನ ಕತ್ತರಿಸಿ ಬೀಳಿಸಿದ. ಆದರೂ ಪಟ್ಟು ಬಿಡದ ಆತ ತೆವಳಿಕೊಂಡೆ ಹೋಗಿ ನೀರು ಕುಡಿದು ತನ್ನ ಮಾತನ್ನ ಸಾರ್ಥಕಗೊಳಿಸಿಕೊಂಡ. ಇದನ್ನ ಕಂಡು ಕೆರಳಿದ ಹಂಝಾ ಅವನ ರುಂಡವನ್ನ ಚಂಡಾಡಿ ತನ್ನ ಆಕ್ರೋಶವನ್ನ ಹೊರಹಾಕಿದ.


ಅರಬ್ಬರ ಯುದ್ಧನೀತಿಯಂತೆ ಒಬ್ಬೊಬ್ಬರು ಒಬ್ಬೊಬ್ಬ ಯೋಧರನ್ನ ಆಯ್ದುಕೊಂಡು ಅವರೊಂದಿಗೆ ಮಾತ್ರ ಕಾದಾಡಬಹುದಿತ್ತು. ಆ ವಯಕ್ತಿಕ ಕಾಳಗದ ಪರಿಪಾಠ ಇಲ್ಲಿಯೂ ಸಹ ಮುಂದುವರೆಯಿತು. ಖುರೈಷಿ ಪಡೆಯಿಂದ ಶೈಬಾ, ಓತ್ಬಾ ಹಾಗೂ ಒತ್ಬಾನ ಮಗ ಅಲ್ ವಲೀದ್ ಮುನ್ನುಗಿದರು. ಹಂಝಾ, ಒಬೈದ್ ಹಾಗೂ ಅಲಿ ಅವರನ್ನ ಕತ್ತರಿಸಿ ಹಾಕಿದರು. ದೇಹದಿಂದ ಬೇರ್ಪಟ್ಟ ಅವರ ತಲೆಗಳು ಭೀಕರವಾಗಿ ಚಲ್ಲಾಡಿಕೊಂಡು ಬಿದ್ದವು. ಖುರೈಷಿಗಳಿಗೆ ಇದು ನಡುಕ ಹುಟ್ಟಿಸಿತು. ತಮ್ಮ ಯೋಧರ ಸಾವು ಕಂಡ ಅವರು ಅಧೀರರಾದರೆ ,ಇತ್ತ ಖುರೈಷಿಗಳ ಸಾವಿನಿಂದ ಹೆಚ್ಚಿನ ಸ್ತೈರ್ಯ ಹಾಗೂ ಉತ್ಸಾಹ ದೊರೆತ ಮಹಮದನ ಯೋಧರು ಇನ್ನಷ್ಟು ವೀರಾವೇಶದಿಂದ ಕಾದಾಡಿದರು. ಅವರನ್ನೆಲ್ಲ ಹುರಿದುಂಬಿಸುತ್ತಾ ಹಿನ್ನೆಲೆಯಲ್ಲಿಯೆ ಇದ್ದ ಮಹಮದ್ ರಣಾಂಗಣದ ತುಂಬಾ ಓಡಾಡಿದ. ಕಡೆಗೆ ವಿಜಯ ಮಾಲೆ ಮುಸಲ್ಮಾನರ ಕೊರಳಿಗೆ ಬಿತ್ತು.



( ಇನ್ನೂ ಇದೆ.)