31 January 2009

ನೆನಪ ಜಾತ್ರೆ...

ಮಿಡಿದ ಕಂಬನಿಗೆ ಪಶ್ಚಾತಾಪವಿಲ್ಲ,

ಮುಳ್ಳ ಮೊನೆಯಲ್ಲೇ ಇರಿದವರ ಬಗ್ಗೆ ನಂಜೇನಿಲ್ಲ/

ತಟ್ಟಿದ್ದು ಬೆನ್ನನ್ನೂ ಇಲ್ಲ ತಲೆಯನ್ನೂ...ಅದೆಲ್ಲ ಗೌಣ,

ಬೆಳೆಯೋ ಛಲ ಮೂಡಿಸಿದ ಎಲ್ಲರಿಗೂ ಕೃತಜ್ನ್ಯತೆಯ ಮುಗುಳ್ನಗೆ ಜೊತೆಗೆರಡು ಕ್ಷಣ ಮೌನ//

ಸವೆದರೂ ಸವಿಯಾಗಿಯೇ ಉಳಿಯೋದು,

ನೆನಪು ಮಾತ್ರ/

ಅಳಿಸಲಾಗದಂತೆ ಮನದ ಭಿತ್ತಿ ಮೇಲೆ ಮೂಡಿ ಕಾಡೋದು.... ಬರೇ ಅದರ ಮಾರ್ದವ ಚಿತ್ತಾರ//

29 January 2009

ಕದ್ದರೂ ಕಳ್ಳನಲ್ಲ...

ಗೊತ್ತು ನನ್ನ ಅಗತ್ಯ ನಿನಗಿಲ್ಲ,
ಆದರೆ ನನಗೋ ಇದು ಬಿಟ್ಟು ಬೇರೇನೂ ಗೊತ್ತಿಲ್ಲ/
ಇನ್ನೆಲ್ಲೂ ಹರಿದಾಡದಲ್ಲ ಕಳ್ಳ ಮನಸು,
ಯಾವಾಗಲೂ ನಿನ್ನದೇ ಅಂತೆ ಅದಕ್ಕೆ ಕಳ್ಳ ಕನಸು//


ನಕ್ಕಾಗ ಇರುಳಲ್ಲಿ ನಕ್ಷತ್ರ,
ಹಗಲ ಹೊಸ್ತಿಲಲ್ಲಿ ಬೆಳಗಿ ಬಣ್ಣದ ಚಿತ್ತಾರ/
ಚಳಿಗೆ ಮುದುಡಿ ಚಡಪಡಿಸುವಾಗ ನಾನು,
ನೆನಪಾಗಿದ್ದು ಕೇವಲ ನೀನು//


ಪದಕ್ಕೆ ಪದ ಪೋಣಿಸಿ ಕವನ ಕಟ್ಟಿ ಗೆದ್ದೆ,
ಅಕ್ಷರದ ಖಜಾನೆಗೆ ಕನ್ನ ಹಾಕಿ ಚೂರಾದರೂ ಕದ್ದೆ/
ಆದರೆ...ನಿನ್ನೊಲವ ಗೆಲ್ಲಲಾಗಲಿಲ್ಲ,
ನಿನ್ನ ಮನದ ಭಂಡಾರ ದೋಚಲಾಗಲಿಲ್ಲ//

27 January 2009

ಅಲ್ಪ ತೃಪ್ತ....

ಹೇಳೋಕೆ ನಾಚಿಕೆ ಎನಿಸಿದರೆ,

ಸಂಜ್ಞೆಯ ಇಶಾರೆ ತೋರಿ ನೀ ತಾಕು/

ಅದೂ ತುಟ್ಟಿ ಎಂದೆನಿಸಿದರೆ,

ತುಟಿಯಂಚಿಂದ ಒಂದೇ ಒಂದು ನಗುವನ್ನಾದರೂ ಬಿಸಾಕು...ನನಗಷ್ಟೇ ಸಾಕು//

ನಿರ್ಮಲ ಪ್ರೀತಿಯ ಗುರಿ ನಲಿವನು ಉಡುಗಿಸೋದಲ್ಲ,

ಮೆಚ್ಚಿದ ಜೀವದ ತುಟಿ ಮೇಲಿನ ನಗುವ ಒಣಗಿಸೋದಲ್ಲ/

ಅವರ ಸಂತಸದಲ್ಲೇ ಸಂಭ್ರಮಿಸುತ್ತ,

ನಿರಾಕರಣೆಯ ನೋವಲ್ಲೂ ನಗುವ ಯತ್ನವದರದು....ತನ್ನೊಲವನ್ನು ಸಂತೈಸುತ್ತ//

ಪ್ರೀತಿಯಲ್ಲಿ ಬಿದ್ದ ಜೀವ,

ಹತ್ತಿಯಂತೆ ಮೃದು ಸದಾ/

ದಕ್ಕಿದರೆ ಒಲವು ಸಂತಸದಲ್ಲಿ ಹಗೂರ,

ಕೈತಪ್ಪಿದರೆ ಅಶ್ರುಧರೆಗೆ ನೆನೆದು ಒದ್ದೆ...ಬಲು ಭಾರ//

26 January 2009

हकीकत..

अश्कों के समंदर में,
डूबता टूटी नाव/
एक दम बेसहारेसे हुवे हम आज,
भरता नही इनकार ज़काम का गाव//

-एक बहुडा

ಮೌನ ಗಾನ..

ಮೌನ ವೀಣೆ ಮಿಡಿದರೆ ಯಾವ ರಾಗ ಹೊಮ್ಮೀತು?,
ಕಲ್ಲಿನ ಕೊಳಲ ಊದಿದರೆ ಅದ್ಯಾವ ನಾದ ಉಲಿದೀತು?/
ಎದೆ ತಾಳದ ಸದ್ದಿಗೆ ಮಾತ್ರ ಅದು ಗೊತ್ತು,
ಒಲವೆನ್ನೋದು ಕೂಡ ಹೀಗೇನೆ...ಅದೋ ಮುಸ್ಸಂಜೆ ಕಟ್ಟಿದ ಜೇಡನ ಬಲೆಯಲ್ಲಿ ಮುಂಜಾನೆ ಪೋಣಿಸಿದ ಹಿಮ ಮಣಿಯ ಮುತ್ತು//

25 January 2009

ಲೆಕ್ಖಾಚಾರ ಬೇಕಿಲ್ಲ..ಅಲ್ಲಾ?

ಕಣ್ಣಂಚಲ್ಲಿ ಕಂಡಿದ್ದ ಆತಂಕದ ಛಾಯೆ,

ಹಣೆ ಮೇಲೆ ಸಾಲುಗಟ್ಟಿದ್ದ ಬೆವರ ಮಣಿ ಮಾಲೆ...ತುಟಿಗಳ ಅವ್ಯಕ್ತ ಕಂಪನ/

ಹೇಳಲಾಗದ-ಹೇಳಲೇ ಬೇಕಿದ್ದ ನಿನ್ನೊಳಗಿನ ತಲ್ಲಣ,

ನೆನಪಾಗಿದೆ ನನಗೆ.. ನಾವಿಬ್ಬರೂ ಮನದ ಮುಸುಕ ಕಳೆದ ಆ ದಿನ!//

ಲೆಕ್ಖವಿಡುವ ಖಯಾಲಿಯೇಕೆ?,

ದಿನ-ಘಂಟೆಗಳ ತಪಶೀಲು ಒಪ್ಪಿಸಬೇಕೆ?/

ಪ್ರೀತಿಸುವ ನಿರಂತರ ಅನುಭೂತಿಯ ಮಾಧುರ್ಯಕೆ,

ಎಣಿಕೆಯ ಬೇಲಿ ಹಾಕಲೇಬೇಕೆ...ನೀನೆ ಹೇಳು?//

24 January 2009

ಮೋಹಕ ನೆನಪಾದ ಖುಷಿ

ಸುರಗಿಯ ಸುವಾಸನೆ,

ಮನೆ ಹಿಂದಿನ ಗುಡ್ಡದಲ್ಲಿ ಹಾಡೋ ನವಿಲ ಉಲಿ

ಬೇಲಿಯಾಚೆ ಕೊಂದರೂ ಮತ್ತರಳೋ ಕೇದಿಗೆಯ ನರುಗಂಪು,

ಸದಾ ಕಾಡುವಂತೆ...ನನ್ನ ನೆನಪಲ್ಲಿ ನೀನು//

ಕನಸಿನ ಕಡಲಲ್ಲಿ ಬೆಳ್ಳಿಮೀನಾಗಿ ಚಿಮ್ಮಿ,

ನನಸಿನ ಹೊಂಗೆ ಮರದ ನೆರಳಲ್ಲಿ ಹೊಮ್ಮಿ/

ಮುಂಜಾವಲ್ಲಿ ಮುಗುಳ್ನಗೋ ಪಾರಿಜಾತದ ಕಂಪಂತೆ,

ಹಾಗೆ ಸುಮ್ಮನೆ ನೀ ನೆನಪಾಗಿ ಕಾಡುತಿರು...ದೂರದಿಂದಲೇ ನನ್ನ ಹೀಗೆ ನೋಡುತಿರು//

ನಿನ್ನೊಲವಿನ ಬಿಂದು...

ಪರಿಧಿಯಾಗಿಯೇ ಉಳಿಯುತೀನಿ,

ಕೇಂದ್ರವಾಗೋ ಖಯಾಲಿಯಿಲ್ಲ/

ಗ್ರಹವಾಗಿಯೇ ಸುತ್ತುವೆ ನಿನ್ನ,

ನಕ್ಷತ್ರವಾಗಿ ನಿಯಂತ್ರಿಸೋ ಇರಾದೆ ನನಗಿಲ್ಲ//

ಸವಿ ನೆನಪು...

ಮತ್ತೇನಿಲ್ಲ ಬರೇ ನೆನಪಿನ ಸೆಳೆತ ಈ ಹೊತ್ತು,

ಮಾದಕ ವ್ಯಸನವಿಲ್ಲದೆಯೂ ಅದೊಂಥರಾ ನಿನ್ನದೇ ಮತ್ತು/

ಬೇಡ ಅನ್ನೋದಾದರೂ ಹೇಗೆ,

ನನಗೋ ಇದು ಹೊಸ ಬಗೆ...ಮತ್ತದೇ ಹಳೆ ನೆನಪು//

22 January 2009

ಕನಸುಗಾರ....

ಕನಸಿದ್ದವು ಕಣ್ಣಲ್ಲಿ ಸಾವಿರ,

ಭ್ರಮೆಯ ಬೆನ್ನೇರಿ ಬಳಲಿದ ಧೀರ ಅವ ಸರದಾರ/

ಅದೇನೇ ಗೊಂದಲವಿದ್ದರೂ,

ಸುಭಾಷರ ಸಾಹಸಕ್ಕೆ ಸಾಟಿಯೇ ಇಲ್ಲ ಇನ್ನಾರೂ//

ನೇತಾಜಿ ಹುಟ್ಟಿ ಇಂದಿಗೆ ಭರ್ತಿ ೧೧೩ ವರ್ಷ ( ಜನವರಿ ೨೩,೧೨:೧೩ ಮಧ್ಯಾಹ್ನ )

21 January 2009

ದುಸ್ವಪ್ನ....

ಮೌನ ಕಣಿವೆಯೊಳಗಿಂದ ನೋವಿನ ಚೀತ್ಕಾರ,

ಮನದ ಭಿತ್ತಿ ಮೇಲೆ ನೆತ್ತರ ಹನಿ ಚಿತ್ತಾರ/

ನಿನ್ನ ಕೈ ಜಾರಿ ತಳಕಾಣದ ಕತ್ತಲ ಕೂಪಕ್ಕೆ ಜಾರಿದ ಕೆಟ್ಟ ಕನಸು,

ಅದು ನಿಜವಾಗದಿರಲಿ...ಎಂದು ಹಂಬಲಿಸಿತು ಬೆದರಿ ಮನಸು//

19 January 2009

ಭಾರದ ಇಳಿಕೆ...

ಎದೆಯೊಳಗೆ ಅದುಮಿಡಲಾಗದ ಕನಸ ರಾಶಿ,
ಬೀದೀಲಿ ಹರವಿ ಮಾರ ಹೊರಟೆ/
ನನಗೇನೋ ಇದು ನೋವ ಮನಭಾರ ಕಳೆವ ಮಾರ್ಗ,
ನಿನಗೋ ಕಾಣೋದು ಕೇವಲ ಹಾಳು ಕಾಡು ಹರಟೆ...ಅಲ್ಲವಾ?//

जूती दर्पण..

कहते है के आईना कभी जूट नही बोलता,
पर मेरे दर्पण का हालात ऐसा क्यों है बाला/
जब बी हु मई उस में जाक्था,
थो मेरे मनहूस चहरे के बदले में आपका सू रथ ही क्यों ये धिकाथा?//

सूका मन का रेगिस्थान...

मई बना दीवाना इस्तेफाक से,

अचानक जगा इश्क अन्हूनी भूक से/

ज़िंदगी के अनजान राहों में न आप हमें मिल थे,

हमारी सूकी मन की रेत में अरमान के फूल नही किलते//

18 January 2009

ಗುರಿತಪ್ಪಿದ ಬಾಳು....

ಒಡೆದ ಕನ್ನಡಿಯ ಸಾವಿರ ಚೂರು,
ಭಗ್ನ ಮನಸ್ಸಿನ ಒಡಕು ಬಿಂಬ ನೂರಾರು/
ಒಲವಿನ ನಡು ಕಡಲಲ್ಲಿ ನಾನು ಅನಾಥ ನಾವೆ,
ನಲಿವಿನ ಮಾರುತದ ನಿರೀಕ್ಷೆಯಿದ್ದರೂ....ಹಾಯಿಯತ್ತ ಬೀಸಿದ್ದು ಬರಿಯ ನೋವೆ//

17 January 2009

अस्सूवों का प्यासा...ಕಣ್ಣೀರಿನ ಕಾವಲುಗಾರ

चाहे चोर समजे हमें ये बेरहम दुनिया,
चुराना है मुझे आपके ओ सारे आंसू/
जो तद्पाते है आपको,
हेवाजा तन हायियोंमे//

(ಚಾಹೆ ಚೋರ್ ಸಮ್ಜೆ ಹಮೆ ಏ ಬೇರೆಹಂ ದುನಿಯಾ,
ಚುರಾನಾ ಹೈ ಹಮೆ ಆಪ್ಕೆ ಓ ಸಾರೆ ಆಸೂ/
ಜೋ ತಡ್ಪಾತೆ ಹೈ ಆಪ್ ಕೊ,
ಅಕ್ಸರ್ ತನಹಾಯಿಯೋಮೆ//)

ತಿರುಕನ ಕನಸು...

ಹಾಡುವ ಹಂಬಲವಿದ್ದರೂ ಒಲವಿನ ರಾಗ...ಪಾಪಿ ನಾನು ಮೂಕ,
ಕೊಡುವ ಇಂಗಿತವೂ ಇದೆ...ಆದರೆ ನಾನೇ ಪ್ರೀತೀಲಿ ತಿರುಕ/
ಇದರ ಅರಿವು ನಿನಗೂ ಇದೆ,
ಹೊಂದಬಾರದೆ?
ಸುಳ್ಳಾದರೂ ಒಂದು ವರಕೊಡುವ ಇರಾದೆ//

16 January 2009

ಹಾಡುವ ಮೊದಲು..

ಪಿಸುಗುಟ್ಟಿದರೂ ಸಾಕು,

ಎದೆ ಮಿಡಿತವಾಗಿ ಉಳಿದು ಕೊಳ್ಳುತೀನಿ/

ಸುಮ್ಮನೆ ಕನವರಿಸಿ ಕನಸಲೆ ಕೈಗೆ ಕೈ ಸೋಕು,

ಗದ್ದಲ ಅದೆಷ್ಟೇ ಇದ್ದರೂ ಕೇಳಿಸಿಕೊಳ್ಳುತೀನಿ...ನೀ ಹಾಡದ ಆ ಮೌನದ ಹಾಡ//

15 January 2009

ಒಲವ ಪಾರಿಜಾತ

ಪಾರಿಜಾತ ನನ್ನೊಲವಿನ ಹೂವು,
ಅದಕ್ಕೂ ನನಗೂ ಇವೆ ಸಾಮ್ಯತೆ ಹಲವು/
ಇಬ್ಬರೂ ಬೇಗ ಬಾಡುತ್ತೇವೆ,
ಅದೋ ಮಂಜಿನ ಹನಿ ಕಾಣದೆ...ನಾನೋ ನಿನ್ನೆದೆ ಧ್ವನಿ ಕೇಳದೆ//

हकीकत....

करता हु कुछ थो हु आदत से मजबूर,

धाम बी तोड़ ने तैयार हु जो आप के कातिर/

इंतनी बेशर्मी कबी न थी,

चाहत का बीक मांगते आया में अब तुम्हारी महफिल//

जिंदा लाश...

जिंदा हु में लेकिन,
जिंदगी कहा है?/
किल्तेहे होट आदत से...लेकिन मुस्कराहट मारी है,
सिर्फ़ तुम्हारे बिना//

14 January 2009

ಪ್ರೀತಿಯ ಮರುಳ...

ಕೇಳದೆ ವರ ಕೊಡುವ ಕಾಮಧೇನು ಸಿಕ್ಕಿದ್ದರೆ,

ಕಲ್ಪವ್ರಕ್ಷ ಗರಿಚಾಚಿ ಮನದಾಸೆ ವಿಚಾರಿಸಿದ್ದರೆ/

ನಿನ್ನೊಂದೆ ಒಂದು ಸ್ಪರ್ಶಕ್ಕೆ ಹಪಾಹಪಿಸಿ ಬೇಡುತ್ತೀನಿ,

ನನ್ನೆದೆ ಮೇಲೆ ನೀ ಮೆಟ್ಟಿ ನಡೆದರೂ ಸರಿ...ನಿನ್ನ ಕಾಲಾದರೂ ಸೋಕಲಿ ಎಂದು ಕೇಳುತ್ತೀನಿ//

हां अमीर हु में...ನಾನೂ ಆದೆ ಶ್ರೀಮಂತ..

ना मिला इतनी मोव्लत,
जो आप के सामने कुल्लम कुल्ला बय्याँ कर सकू मेरी दिल की दोव्लाथ/
गरीब ही सही में दुनिया के नज़र में,
बना जरूर अमीर....पाकर न कोने वाली आप की मुस्कराहट//

(ನಾ ಮಿಲಾ ಇತನೀ ಮೊವ್ಲತ್,
ಜೋ ಆಪ್ ಕೆ ಸಾಮನೆ ಕುಲ್ಲಂ ಕುಲ್ಲಾ ಬಯಾನ್ ಕರ್ ಸಾಕೂ ಮೇರಿ ದಿಲ್ ಕಿ ದೊವ್ಲತ್/
ಗರೀಬ್ ಹೀ ಸಹಿ ಮೇ ದುನಿಯಾ ಕೆ ನಜರ ಮೇ,
ಬನಾ ಜರೂರ್ ಅಮೀರ್.... ಪಾಕರ್ ನ ಕೋನೆವಾಲಿ ಆಪ್ ಕಿ ಮುಸ್ಕುರಾಹತ)

हाल-ऐ-दिल.....ನನ್ನೆದೆ ಕಲಹ...

आकिर क्यों ये ख़याल मुझे अक्सर सताए,

जानते हुवे बी हमारी बीच की धुरी...नजदीक होना दिल चाहे/

शायद सच को सामना करने की हिम्मत मुज में ना रही,

या फ़िर पगला गया हु मै इन्तजार में तुम्हारे//

(ಆಕಿರ್ ಕ್ಯೂ ಏ ಖಯಾಲ್ ಮುಜ್ಹೆ ಅಕ್ಸರ್ ಸತಾಯೇ,

ಜಾನ್ ತೇ ಹೂವೆ ಬೀ ಹಮಾರಿ ಬೀಚ್ ಕೀ ದೂರಿ...ನಜ್ದೀಕ್ ಹೋನಾ ದಿಲ್ ಚಾಹೆ/

ಶಾಯದ್ ಸಚ್ಕೊ ಸಾಮ್ನಾ ಕರ್ನೆ ಕಿ ಹಿಮ್ಮತ್ ಮುಜ್ ಮೇ ನಾ ರಹಿ,

ಯಾ ಫಿರ್ ಪಗ್ಲಾಗಯಾ ಹು ಮೈ ಇನ್ಥಜಾರ್ ಮೇ ತುಮ್ಹಾರೆ//)

13 January 2009

अरमान अपने अपने...ಒಂದು ಲಹರಿ...

गिरते पथ को बी है जड़ से बेपनाह मोहब्बत,

तरस न काये सावन...न मिला ज़िंदगी की बदोव्लाथ/

हमारी ही तरह वो बेबी है प्यासा,

बस धो ही धो भून्ध चाहत का//

(ಗಿರ್ತೆ ಪತ್ ಕೊ ಬೀ ಹೈ ಜಡ ಸೆ ಬೆಪನಾಹ ಮೊಹೊಬ್ಬತ್,

ತರಸ್ ನ ಕಾಯೇ ಸಾವನ್...ನ ಮಿಲಾ ಜಿನ್ದಗಿ ಕಿ ಬದೊವ್ಲತ್/

ಹಮಾರೀ ಹಿ ತರಹ ವೋ ಬೇಚಾರಾ ಬಿ ಹೈ ಪ್ಯಾಸ,

ಬಸ್ ದೋ ಹಿ ದೋ ಬೂಂದ್ ಚಾಹತ್ ಕ//)

ಹುಚ್ಚು ಮೋಹ..

ಗಾಯದ ಮೇಲೆಯೇ ಮತ್ತೊಂದು ಬರೆ,

ಬಿರಿದ ಪಾದಗಳಲ್ಲೇ ಕಾದ ಮರಳ ತೆರೆ ದಾಟಿದರೆ...ಧುತ್ತನೆ ಎದುರಾದ ಲವಣದ ತೊರೆ/

ನಿನ್ನೆಡೆಗಿನ ಸೆಳೆತಕ್ಕೆ ಬಲಿಯಾದ ಪತಂಗ ನಾನು,

ಉರಿಯ ಅರಿವಿದ್ದರೂ...ಇನ್ನೊಮ್ಮೆ ಹಾಗೆ ಸಾಯಲು ತಯಾರು//

12 January 2009

है यही तमन्ना...ಮುಚ್ಚಿದಲಾಗದ ಕನಸು...

तमीज के दायरे पार कर निकलने पे तुला,

दिल का हाल एय्लान करने चला/

इश्क ने हमें इतनी बेशरम बनादी,

छुपे जस्बथों को...जुबान पर लाया में बाला//

( ತಮೀಜ್ ಕೆ ದಾಯರೇ ಪಾರ್ ಕರ್ ನಿಕಲ್ನೇ ಪೆ ತುಲಾ,

ದಿಲ್ ಕಾ ಹಾಲ್ ಎಯ್ಲಾನ್ ಕರ್ನೆ ಚಲಾ/

ಇಷ್ಕ್ ನೇ ಹಮೆ ಇತನೀ ಬೇಷರಂ ಬನಾದೀ,

ಚುಪೇ ಬಸ್ಬಾತೊನ್ ಕೋ.....ಜುಬಾನ್ ಪರ್ ಲಾಯಾ ಮೇ ಬಲಾ//)

11 January 2009

ಕಣ್ಣೋಟದ ಚೂರಿಯಿಂದ ದಯವಿಟ್ಟು ನನ್ನನ್ನು ಇರಿ....

ಹೊರಬಿದ್ದ ನಿಟ್ಟುಸಿರಿಗೆ ಅನುಕಂಪ ಬೇಕಿಲ್ಲ,

ನನಸಾಗದ ಕನಸಿಗೂ ಕರುಣೆಯ ನಿರೀಕ್ಷೆಯಿಲ್ಲ/

ಮೊನಚು ನೋಟದಿಂದ ಒಂದೊಮ್ಮೆ ಇರಿದರೂ ಸರಿ,

ನನ್ನತ್ತ ನಿನ್ನ ಕಣ್ಣು ಹರಿದರೆ ಸಾಕು ಒಂದೇ ಒಂದುಸಾರಿ//

10 January 2009

कुईश...ಒಂದೇ ಒಂದಾಸೆ

कुछ लम्हा परेशान,

कही जस्बात बेजुबान/

इसी में तड़प न है शायद अपनी नसीब,

हो सके तो बदल लू इसे...तुम्हें करलू बेहद करीब//

[ಕುಚ್ ಲಮ್ಹಾ ಪರೆಷಾನ್,

ಕಹೀ ಜಸ್ಬಾತ್ ಬೇ ಜುಬಾನ್/

ಇಸೀ ಮೇ ತಡಪ್ನಾ ಹೈ ಶಾಯದ್ ಅಪನೀ ನಸೀಬ್,

ಹೊಸಕೆ ತೋ ಬದಲಲೂ ಇಸೇ....ಕರ್ಲೂ ತುಮ್ಹೇ ಬೇಹದ್ ಕರೀಬ್//]

ಮರೆತೀಯ ಜೋಕೆ!

ಕಾಲಕ್ಕೆ ಕುದುರೆಯ ಗೊರಸುಗಳು,
ಅದೆಷ್ಟೇ ವೇಗವಾಗಿ ಓಡಿದರೂ/
ನನ್ನೊಲವು ಮುಪ್ಪಾಗದು,
ಒಂದೊಮ್ಮೆ ನೀನೆ ನನ್ನ ಮರೆತರೂ//

06 January 2009

ಮಳೆಬಿಲ್ಲು...

ಮೋಡದ ತೆರೆಯಾಗಿಯಾದರೂ ಕಂಡು ಮರೆಯಾಗು,
ಎಳೆಬಿಸಿಲ ಹೊಂಗಿರಣವಾಗಿ ಒಮ್ಮೊಮ್ಮೆಯಾದರೂ ಸೋಕು/
ಜೀವಾನಿಲವಾಗಿ ಉಸಿರನೆ ತುಂಬಿರುವೆ,
ಅಪರೂಪಕೆ ಬರುವ ಮಳೆಯಂತೆ ನನ್ನ ನೆನಪ ತೋಯಿಸಿದರೂ ಸಾಕು//

04 January 2009

ಮೂಕ ನಾನು....

ಹೇಳಲೇ ಬೇಕ ಪದಗಳಲ್ಲಿ,
ಮಾತಿನ ಮನೆ ಕಟ್ಟಲೇ ಬೇಕ?/
ನಿನ್ನ -ನನ್ನ ನಡುವಿನ ಭಾವಕೆ,
ಹೇಳು...ನುಡಿಗಳ ಗೋರಿ ತೋಡಲೇ ಬೇಕ?//