26 June 2009

ವ್ಯಾಕುಲ ಒಲವು..

ಸಾವೊಂದೇ ಪರಿಹಾರ,

ವ್ಯಾಕುಲವಾಗಿಸಿ ಹಿಂಸೆ ಕೊಡುವ ಒಂಟಿತನಕ್ಕೆ/

ಎಲ್ಲವೂ ಹೆಸರಿಗೆ ಮಾತ್ರ ಇರುವ,

ಸಂತೃಸ್ತ ಮನಕ್ಕೆ//

ಇರುಳ ಜೋಳಿಗೆಯಿಂದ

ಹಗಲು ಪಡೆದ ಕೈಸಾಲ/

ಮೋಹಕ ಚಲುವ ಖನಿ...ಮಾರ್ದವ ಮುಂಜಾವು//

21 June 2009

ಅವನಿ....ಮತ್ತವನು.....

ಅವನಿಗೆ ಅವನಿಯೆಂದರೆ

ಅದೇನೋ ಒಂಥರಾ...ಹುಚ್ಚು ಪ್ರೀತಿ/

ಅದಕ್ಕೆ ಕೊಂಚ ಮಳೆಯ ಮುತ್ತ ಹನಿವ,

ಆಗಾಗ ಒತ್ತರಿಸಿ ಬಂದಾಗ ಮೀರಿ ಅದರ ಮಿತಿ//

ವಸುಂಧರೆಯ ಒಡಲಲ್ಲಿ,

ವಸಂತ ಬಿತ್ತಿದ ಒಲವಿನ ಬೀಜ/

ಕಾತರ ತುಂಬಿದ ಮೊಳಕೆಯೊಡೆದು,

ಮುಗುಳ್ನಗುತಿದೆ..ನಿನ್ನಂತೆ...ನನ್ನೊಲವಂತೆ//

18 June 2009

ಅಕಾರಣ...

ಹೇಳಲೇ ಬೇಕೆನ್ನುವ ಮಾತನ್ನು ಒಳಗೆ ಅದುಮಿಟ್ಟುಕೊಳ್ಳೋ ಹಠ,
ಒಲವ ಮರೆಯಲಾಗದೆ ನೆನಪ ನಾವೆಯಲ್ಲೇ ತೇಲೋ ಚಟ/
ಮುನಿಸಿಗೇನೋ ಇದೆ ಕಾರಣ,
ಆದರೆ...ಹೊಸೆಯದೆಯೂ ಇರಲಾರೆ ವಿರಹ ತುಂಬಿದ ಕವನ//

13 June 2009

ಹಾಲು ಸುಟ್ಟಿದೆ....

ಒಲೆಯ ಮೇಲಿಟ್ಟ ಹಾಲು ಮರೆಯಲು ಕಾರಣ,
ಮತ್ತೆ ನೆನಪಾದ ಹಳೆ ಹಾಡೊಂದರ ಸಾಲು/
ಉಕ್ಕದಿದ್ದರೇನು ಕಡಿಮೆ ಉರಿಗೆ....ಸುಟ್ಟು ಅದು ಕರಟ ಬಾರದೇನು?
ಬೇಡವೆಂದರೂ ಮತ್ತೆ ಮತ್ತೆ ನೆನಪಾಗಿ ನನ್ನ ಕಾಡುವಂತೆ ನೀನು//

02 June 2009

ಒಲವಿದೆ ನಿನ್ನೆಡೆಗೆ...

ಪ್ರೀತಿಸುವವರನ್ನು ದ್ವೇಶಿಸಬಹುದೇ?
ಪ್ರೀತಿಯನ್ನು ದ್ವೇಶಿಸಬಹುದೇ?
ಅದರಲ್ಲೂ ನನ್ನಂತೆ ಉನ್ಮತ್ತನಾಗಿ ಪ್ರೀತಿಸುವವನನ್ನು?//



ಬೀಸುವ ಗಾಳಿಯ ಬಿಸಿಯುಸಿರು,
ಹದವಾಗಿ ಬಿದ್ದ ಮಳೆಗೆ ಚಿಗುರೊಡೆದ ಹಸಿರು/
ನೇಗಿಲ ಮೊನೆ ಸೀಳಿ ನೋಯಿಸಿದರೂ....ಒಡಲ ತುಂಬಿ
ಮುಗುಳ್ನಗುವ ಇಳೆಯ ಬಸಿರು,
ನನ್ನ ಒಂಟಿ ಬಾಳಲಿ ನೀನು...ನಿನ್ನ ನೆನಪು//