25 July 2024

ವಡಕ್ಕುನಾಥನೂ - ತೃಶೂರು ರೌಂಡಿನ ರೌಂಡೂ.👍

ನನ್ನ ಯಾವುದೆ ತೃಶೂರು ಭೇಟಿಯೂ ಇಲ್ಲಿನ ವಡಕ್ಕುನಾಥನ ಸನ್ನಿಧಿಯ ವಿಶಾಲ ದೇವಾಲಯದ ಆವರಣದ ಭೇಟಿಗಳಿಲ್ಲದೆ ಪರಿಪೂರ್ಣವಾಗಿಲ್ಲ. ದಕ್ಷಿಣ ಏಷಿಯಾದಲ್ಲೆ ಅತ್ಯಂತ ದೊಡ್ಡದಾಗಿರುವ ವೃತ್ತವಾಗಿರುವ ಹದಿನೇಳು ರಸ್ತೆಗಳು ಸಂಧಿಸುವ "ತೃಶೂರು ರೌಂಡ್" ಅಥವಾ ಸ್ವರಾಜ್ ರೌಂಡ್ ನಡು ಮಧ್ಯದಲ್ಲಿ ವಡಕ್ಕುನಾಥನ ದೇವಸ್ಥಾನ ಇದೆ.🙂


ಅರವತ್ತೈದು ಎಕರೆ ವಿಸ್ತೀರ್ಣದ ಈ ಬೃಹತ್ ವೃತ್ತದ ಹೊರ ವ್ಯಾಸದ ಸುತ್ತಳತೆ ಬರೋಬ್ಬರಿ ಎರಡು ಕಿಲೋಮೀಟರ್. ನಡು ಮಧ್ಯ ನಾಲ್ಕು ದಿಕ್ಕಿಗೂ ನಾಲ್ಕು ಪ್ರತ್ಯೇಕ ದ್ವಾರಗಳಿರುವ ವಡಕ್ಕುನಾಥನ ಬೃಹತ್ ದೇಗುಲ ಸಂಕೀರ್ಣವಿದ್ದರೆˌ ಅವನ ಎಡ ಮಗ್ಗುಲಿಗೆ ತೆಕ್ಕಿನ್ ಕಾಡು ಮೈದಾನವಿದೆˌ ಬಲ ಭಾಗದಲ್ಲಿ ಅರ್ಚಕ ಪರಿವಾರಗಳ ವಸತಿ ಮತ್ತದರ ಒತ್ತಿಗೆ ದೊಡ್ಡ ಉದ್ಯಾನವನವಿದೆ. ವಡಕ್ಕುನಾಥ ಅಂದರೆ ಉತ್ತರದ ಒಡೆಯ ಎಂದರ್ಥ.🙏


ಇಲ್ಲಿನ ಪ್ರಮುಖ ಹತ್ತು ದೇವಸ್ಥಾನಗಳ ದೌಲತ್ತು ಪ್ರದರ್ಶನದ "ತೃಶೂರು ಪೂರಂ" ಅಂದರೆ ತೃಶೂರು ಜಾತ್ರೆ ಜಗತ್ಪ್ರಸಿದ್ಧ. ಆನೆಗಳ ಮೇಳವಾಗಿರುವ ಇದರಲ್ಲಿ ಮುಖ್ಯವಾಗಿ ಪರಮಕ್ಕಾವು ಭಗವತಿ ಹಾಗೂ ತಿರುವಾಂಬಾಡಿ ಭಗವತಿ ದೇವಸ್ಥಾನಗಳ ದೊಡ್ಡಸ್ತಿಕೆಯ ಪೈಪೋಟಿಯ ಮೇಲಾಟದ ಬೃಹತ್ ಪ್ರದರ್ಶನದ ಸಂದರ್ಭ ಅದು. ಚೈತ್ರಮಾಸದ ಪೂರ್ವಾಷಾಢ ನಕ್ಷತ್ರದಲ್ಲಿ ಆಚರಿಸಲಾಗೋ ಈ ಉತ್ಸವ ಈ ಸಲ ಎಪ್ರಿಲ್ ಮೂರನೆ ವಾರ ನಡೆದಿತ್ತು. ನಾನಾಗ ಬೆಂಗಳೂರಲ್ಲೆ ಇದ್ದೆ.😇



ಪರಿವಾರ ದೇವತೆಗಳೊಂದಿಗೆ ಈಶ್ವರನ ಸನ್ನಿಧಿಯಿರುವ ವಡಕ್ಕುನಾಥ ದೇವಸ್ಥಾನದ ಆವರಣದೊಳಗೆ ಅಯ್ಯಪ್ಪˌ ಶಾಸ್ತಾನ್ˌ ನಾಗಬನˌ ಭೂತಸ್ಥಾನˌ ಮೂಲಸ್ಥಳ ಇವೆಲ್ಲಾ ಪ್ರತ್ಯೇಕವಾಗಿವೆ. ಕೊಚ್ಚಿನ್ ದೈವಸ್ವಂ ಬೋರ್ಡು ಇದರ ಮೇಲುಸ್ತುವಾರಿ ನಡೆಸುತ್ತದೆ.   ದೇವಸ್ಥಾನದ ಒಳಾವರಣದಲ್ಲಿ ಹಾಕುವ ಒಂದು ಪ್ರದಕ್ಷಿಣೆ ಒಂದು ಕಿಲೋಮೀಟರ್ ದೂರವಾಗಿದ್ದರೆ - ಹೊರಾವರಣದ್ದು ಎರಡು ಕಿಲೋಮೀಟರ್. ಸಂಜೆ ಸಾಮಾನ್ಯವಾಗಿ ನಾನು ಹೊರ ಆವರಣವನ್ನೆ ಐದು ಸುತ್ತು ಹಾಕುತ್ತಿದ್ದೆ. ದೂರದ ಸ್ಥಳಗಳಿಗೆ ಹೋಗುವಷ್ಟು ಬಿಡುವಿಲ್ಲದೆ ಕೆಲಸ ಬಿಗಿಯಾಗಿದ್ದರೆˌ ಬೆಳಗ್ಯೆಯೂ ಐದು ಸುತ್ತು ಇದೆ ರೌಂಡಿನ ಹೊರಾವರಣದಲ್ಲಿ ಹಾಕಿ ದಿನದ ವಾಕಿಂಗ್ ಕೋಟ ಮುಗಿಸುತ್ತಿದ್ಧೆ.😌



ಮಳೆ - ಚಳಿ - ಬೇಸಿಗೆ ಮೂರೂ ಕಾಲದಲ್ಲಿ ಇಲ್ಲಿಗೆ ನಿರಂತರವಾಗಿ ಬಂದಿದ್ಧೇನೆ. ಇಲ್ಲಿನ ತೇವಾಂಶ ಭರಿತ ವಾತಾವರಣದಲ್ಲಿ ಬೆವರ ಸ್ನಾನದಲ್ಲಿ ಮಿಂದಿದ್ದೇನೆ. ಕೇರಳದ ಸಾಂಸ್ಕೃತಿಕ ರಾಜಧಾನಿಯಾಗಿರುವ ರಾಜ್ಯದ ನಡು ಮಧ್ಯದಲ್ಲಿ ಏಕೀಕರಣ ಪೂರ್ವದಲ್ಲಿ ಕೊಚ್ಚಿನ್ ಸಂಸ್ಥಾನದ ಭಾಗವಾಗಿದ್ದ ತೃಶೂರು ಕೇರಳ ರಾಜ್ಯದಲ್ಲೆ ನನಗೆ ಆಪ್ತವಾದ ಊರು.❤️

24 July 2024

ಇದೆ ಭಾರತ.

ಈ ಒಂದು ದೇಶ - ಒಂದು ಭಾಷೆ - ಒಂದು ಧರ್ಮ ಅಂತ ಪೇಡುವ "ಸಂಘ"ಕಟುಕರು ಹಾಗೂ ಅವರ ಬಾಲಂಗೋಚಿ ಬ್ಲೂಜೆಪಿಯ ಭಂಡ ಭಕ್ತಾದಿಗಳಿಗೆ ಈ ನೆಲದ ಧಾರ್ಮಿಕˌ ಭಾಷಿಕ  ಹಾಗೂ ಸಾಂಸ್ಕೃತಿಕ ವೈವಿದ್ಯತೆಯ ಅರಿವೂ ಇಲ್ಲˌ ಇಲ್ಲಿನ ಹಲವು ಬಗೆಯ ವಿವಿಧತೆಯ ಬಗ್ಗೆ ಕನಿಷ್ಠ ಆದರವೂ ಅವರ ಭಯೋತ್ಪಾದಕ ಮನದಲ್ಲಿಲ್ಲ.😌 


ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ತಾನು ಕಿತ್ತು ಗುಡ್ಡೆ ಹಾಕಿದ್ದು ಏನು? ಅಂತ ವಿವರಿಸಿ ಮತ ಯಾಚಿಸುವ ಬದಲು ಏನೂ ಘನಂದಾರಿ ಗೆಣಸು ಕೆತ್ತಿರದ ಕಾರಣಕ್ಕೆ "ತೇಜಸ್ವಿ ಯಾದವ್ ಶ್ರಾವಣದಲ್ಲಿ ಮೀನು ತಿಂದ! ಹಿಂಗಾಗಿ ನನ್ನ ಕೊಳಕು ಮೂತಿಗೆ ಮುತ್ತಿಡಿ?!" ಅಂತ ಬಡಬಡಿಸಿದ್ದ ಇಂತಹ ಮಂಡೆಬಾತ ಅಂಡೆಪಿರ್ಕಿಸ್ ಭಕ್ತಾದಿ ಪೀಡೆಗಳ ಅನೈತಿಕ ಅಪ್ಪ ಪಿಶಾಚಿ ನರೀಂದ್ರ ಬುರುಡೆದಾಸ ಮುದಿ @narendramodi ಅನ್ನೋ ನರಹಂತಕ ಮಾಡಿದ್ದೂ ಅದನ್ನೆ. ಈಗ ತನ್ನ ಸಿಂಹಾಸನ ಅಲ್ಲಾಡುವ ಹೊತ್ತು ಬಂದಿರೋವಾಗ ಸಾಬರ ವಿರುದ್ಧ ಧರ್ಮದ ಗಾಳಿ - ಗಂಧ ಅರಿಯದ ತನ್ನ ಪುಂಡ ಬೆಂಬಲಿಗರ ಪಡೆಯನ್ನ ಛೂ ಬಿಟ್ಟ ಅಯೋಗ್ಯ ಅಜಯ ಕಮಂಗಿ ಭ್ರಷ್ಟ @myogiadityanath ಅನ್ನೋ ಸೈಕೋಪಾತ್ ಮಾಡಿದ್ದುˌ ಮೂರು ರಾಜ್ಯಗಳ ಮೂರೂ ಬಿಟ್ಟ ಬ್ಲೂಜೆಪಿ ಸರಕಾರಗಳು @pushkardhami @CMOfficeUP @CMMadhyaPradesh ಉದ್ದೇಶ ಪೂರ್ವಕವಾಗಿ ನಾಜಿ಼ ಜರ್ಮನಿಯಂತೆ ಕಂಡಕಂಡ ಅಂಗಡಿಯವರೆಲ್ಲ ಬೋರ್ಡಲ್ಲಿ ಹೆಸರು ಬರೆಯಬೇಕಂತ ಒತ್ತಾಯಿಸಿ ಇವುಗಳೆ ಕರೆಯುವ ಭಾರತಮಾತೆಯ ತಾಯ್ಗಂಡರಾಗಲು ಹೊರಟಿದ್ದು ಇದಕ್ಕೆ ಸಾಕ್ಷಿ.😕


ಹಾಗಿರೋವಾಗˌ ಅಂತಹ ಮನೆಹಾಳರ ಅನ್ನ ಇಟ್ಟ ನಾಡಿನ ಜಂತಿ ಎಣಿಸುವ ಕೊಳೆತ ಮನಸ್ಥಿತಿಯ ಹಿಂ"ಬಾಲಕ"ರಿಗೆ ಪಳಯಂಗಡಿಯಲ್ಲಿರೋ ಮಾಡಾಯಿ ಕಾವು ದೇವಸ್ಥಾನವನ್ನೊಮ್ಮೆ ತೋರಿಸಬೇಕು. ಪಣಿಕ್ಕರನೆಂಬ ಕುತಂತ್ರಿ ಮಳಯಾಳಿ ಏಳು ದಶಕಗಳ ಹಿಂದೆ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ತುದಿಯಲ್ಲಿದ್ದ ಪಯ್ಯನೂರು ಹೋಬಳಿಯಲ್ಲಿದ್ದ ಈ ತುಳುನಾಡಿನ ಭಾಗವನ್ನು ಅಂದಿನ ಮಲಬಾರು ಜಿಲ್ಲೆಗೆ ಧಾರೆ ಎಳೆದ. ವಾಸ್ತವದಲ್ಲಿ ಪಳಯಂಗಡಿ ಪೇಟೆಯ ದಕ್ಷಿಣಕ್ಕಿರುವ ತಂಬುರ ಗ್ರಾಮದಂಚಿನ ಹೊಳೆ ದಕ್ಷಿಣದ ಮಲಯಾಳಂ ನುಡಿಯ ಕೇರಳದ ಮಲಬಾರು ಹಾಗೂ ಉತ್ತರದ ತುಳುನಾಡಿನ ನೈಜ ಗಡಿಯಾಗಿತ್ತು.👍


ಹೀಗೆ ಆರಂಭದಲ್ಲಿ ಮಲಬಾರು ಜಿಲ್ಲೆ ಹಾಗೂ ಅನಂತರ ವಿಭಜನೋತ್ತರ ಮಲಬಾರು ಪ್ರದೇಶದ ಕಣ್ಣೂರು ಜಿಲ್ಲೆಯ ಭಾಗವಾಗಿದ್ದ ತುಳುವ ಕಾಸರಗೋಡು ತಾಲೂಕನ್ನ ೧೯೮೨ರಲ್ಲಿ ಹೊಸದಾಗಿ ಜಿಲ್ಲೆಯ ದರ್ಜೆಗೇರಿಸಿ ಕಣ್ಣೂರಿನಿಂದ ಪ್ರತ್ಯೇಕಿಸಿದರೂ ಸಹˌ ಈ ಪಯ್ಯನೂರು ಹೋಬಳಿಯನ್ನ ಮಾತ್ರ ಒಡೆದಾಳುವ ಕುತಂತ್ರದ ಮುಂದುವರೆದ ಭಾಗವಾಗಿ ಕಣ್ಣೂರು ತಾಲೂಕಿನ ಭಾಗವಾಗಿ ಮುಂದುವರೆಸಿ ಅನಂತರ ಸ್ವತಂತ್ರವಾಗಿ ತಾಲೂಕಿನ ದರ್ಜೆಗೆ ಏರಿಸಲಾಗಿದೆˌ ಇದು ಚಿಲ್ಲರೆ ರಾಜಕೀಯದ ಸಂಗತಿ ಅಂತ ಇಟ್ಕಳಿ.😇


ಪಳಯಂಗಡಿ ಈ ಪ್ರದೇಶದ ಪ್ರಮುಖ ಪೇಟೆ. ಇದು ಪಯ್ಯನೂರಿನಿಂದ ದಕ್ಷಿಣಕ್ಕಿದೆ. ಇಲ್ಲಿನ ಮಾಡಾಯಿಕಾವು ಭಗವತಿ ಕ್ಷೇತ್ರ ದೇವಸ್ಥಾನಕ್ಕೆ ನನ್ನ ಬೆಳಗಿನ ವಾಕಿಂಗಿನ ಭಾಗವಾಗಿ ಭೇಟಿ ಕೊಟ್ಟಿದ್ದೆ. ಇದನ್ನ ಶ್ರೀತಿರುವಾರುಕಾಟ್ಟುಕಾವು ಭಗವತಿ ಅಂಬಿಲ ಅಂತಲೂ ಕರಿತಾರೆ. ಬಹಳ ಕಾರಣಿಕದ ಕ್ಷೇತ್ರವೆಂದು ನಂಬಲಾಗುವ ಇಲ್ಲಿನ ಭಗವತಿಯ ಶೇಕಡಾ ೯೯ರಷ್ಟು ಭಕ್ತಾದಿಗಳ ಪಡೆಯು ತುಳುವ - ಕೊಡವ - ಕನ್ನಡಿಗರದ್ದೆ ಹೊರತು ಮಲಯಾಳಿಗಳದ್ದಲ್ಲ.🤔


ಪಳಯಂಗಡಿಯಲ್ಲಿ ರೈಲು ನಿಲ್ದಾಣವಿದ್ದು ಮಂಗಳೂರಿನಿಂದ ಹೊರಡುವ ಅನೇಕ ದೂರ ಹಾದಿಯ ರೈಲುಗಳು ಇಲ್ಲಿ ನಿಲುಗಡೆ ನೀಡುತ್ತವೆ. ಮಂಗಳೂರಿಂದ ಒಂದೂಕಾಲು ತಾಸಿನ ದೂರದಲ್ಲಿ ಪಳಯಂಗಡಿ ಇದೆ. ರೈಲ್ವೆ ನಿಲ್ದಾಣದ ಹೊರಗೆ ಬಂದರೆ ಮೂರು ಕಿಲೋಮೀಟರ್ ಅಂತರದಲ್ಲಿರುವ ಬಸ್ ನಿಲ್ದಾಣದತ್ತ ಸಾಗುವ ಬಸ್ಗಳು ಧಾರಾಳವಾಗಿ ಸಿಗುತ್ತವೆ. ಅಲ್ಲಿಂದ ಮುಂದೆ ಪಯ್ಯನೂರು ಸಾಗುವ ಬಸ್ ಹಿಡಿದರೆ ಮಾಡಾಯಿ ಕಾವು ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಪಳಯಂಗಡಿವರೆಗೆ ರೈಲಲ್ಲಿ ಹೋಗಿದ್ದ ನಾನು ಇರಚಲು ಮಳೆಯಲ್ಲಿ ರೈಲ್ವೆ ನಿಲ್ದಾಣದಿಂದಲೆ ನಡೆಯತ್ತಾ ಮಾಡಾಯಿಕಾವು ಹೋಗಿ ಮುಟ್ಟಿದ್ದೆ.👌



ಮಾಟ - ಮಂತ್ರಗಳ ಬಾಧಿತರಿಗೆ ಅಭಯಧಾಮವಾಗಿರುವ ಮಾಡಾಯಿಕಾವಿನ ಭಗವತಿ ಸನ್ನಿಧಿಯಲ್ಲಿ ನಿತ್ಯವೂ ಕೋಳಿ ಮಾಂಸವನ್ನೆ ಇಲ್ಲಿನ ದೇವಿಗೆ ನೈವೇದ್ಯವಾಗಿ ಅರ್ಪಿಸಿˌ ಅನಂತರ ಕಾಳುಮೆಣಸು ಗುದ್ದಿ ಹಾಕಿ - ನೆನೆಸಿದ ಹೆಸರುಕಾಳು ಬೆರೆಸಿ - ಹುರಿದ ಈರುಳ್ಳಿ ಹಾಗೂ ಕರಿಬೇವು - ಹೆಸರುಬೇಳೆ ಒಗ್ಗರಿಸಿದ ಸಣ್ಣಗೆ ಕತ್ತರಿಸಿದ ಕೋಳಿಮಾಂಸವನ್ನ ಉಪ್ಪು-ಅರಿಶಣದ ಜೊತೆಗೆ ಒಟ್ಟುಮಾಡಿ ಹಬೆಯಲ್ಲಿ ಬೇಯಿಸಿದ ಪಲ್ಯದಂತಹ ಈ ಖಾದ್ಯವನ್ನ ಹಾಗೂ ಪಿಡಿಚೆ ಬೆಲ್ಲದ ಹುಗ್ಗಿಯನ್ನ ತಲಾ ನೂರು ರೂಪಾಯಿಗಳಿಗೆ ಪ್ರಸಾದವಾಗಿ ಬರುವ ಭಕ್ತಾದಿಗಳಿಗೆ ಮಾರಲಾಗುತ್ತದೆ.✋



ಅಂದಹಾಗೆˌ ದೇವಸ್ಥಾನದ ಪಾಕಶಾಲೆಯಲ್ಲಿ ಈ ಖಾದ್ಯದ ತಯಾರಿ ಮಾಡುವವರು ಸ್ಥಾನಿಕ ಬ್ರಾಹ್ಮಣರು. ಅದನ್ನ ನೈವೇದ್ಯಕ್ಕಿಡುವವರು ಶಿವಳ್ಳಿಯವರು. ಹೊರಗೆ ಕೌಂಟರಿನಲ್ಲಿ ನೈವೇದ್ಯ ನೆರವೇರಿದ ನಂತರ ಮಾರುವವರು ನಂಬೂದರಿಗಳು. ಅಲ್ಲಿಗೆ ಈ ಬ್ಲೂಜೆಪಿಯ ಆಹಾರ ರಾಜಕೀಯದ ಬಡಾಯಿ ಪುಕುಳಿ ಬಾಯಿ ಇಲ್ಲದ್ದು ಅನ್ನೋದಕ್ಕೆ ಈ ಮಾಡಾಯಿಕಾವು ಭಗವತಿಯ ಸನ್ನಿದಿ ಸಾಕ್ಷಿಯಾಗಿ ನಿಂತಿದೆ. ಹೀಗಾಗಿˌ ಈ ದೇಶ ಒಂದೂ ಅಲ್ಲ ( ಇದು ದೇಶವಲ್ಲ ಒಕ್ಕೂಟ ಇದರ ಭಾಗವಾಗಿರುವ ರಾಜ್ಯಗಳೆಲ್ಭ ದೇಶಗಳೆ.) - ಹಿಂದೂಧರ್ಮ ಏಕಾಚರಣೆಯದೂ ಅಲ್ಲ ( ಇಲ್ಲಿ ಕಡಲ ಮೀನು ಮೆಲ್ಲುವ ಸಾರಸ್ವತರೂ - ಕುರಿ ಮಾಂಸ ಬಯಸಿ ಬೇಯಿಸಿ ತಿನ್ನುವ ಕಾಶ್ಮೀರಿ ಪಂಡಿತರೂ - ಕುಕ್ಕುಟ ಮಾಂಸವಿಲ್ಲದೆ ಊಟ ಮುಗಿಸದ ಮೈಥಿಲಿ ಬ್ರಾಹ್ಮಣರೂ - ಗಂಗೆಯೊಡಲ ಸಿಹಿ ನೀರಿನ ಮತ್ಸ್ಯ ಪ್ರಿಯರಾದ ಬಂಗಾಳಿ ಬ್ರಾಹ್ಮಣರೂ ಇದ್ದಾರೆ.) - ಇಲ್ಲಿ ಯಾವುದೆ ಒಂದು ರಾಷ್ಟ್ರಭಾಷೆ ಅಂತಿಲ್ಲ ( ಭಾರತದ ಸಂವಿಧಾನದ ಎಂಟನೆ ಶೆಡ್ಯೂಲಿನಲ್ಲಿನಲ್ಲಿರೋ ಎಲ್ಲವೂ ರಾಷ್ಟ್ರಭಾಷೆಗಳೆˌ ಇಲ್ಲದವೂ ಸಾಂಸ್ಕೃತಿಕವಾಗಿ ಮಾನ್ಯವಾದವುಗಳೆ.). ಒಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಎನ್ನುವ ಕಿಡಿಗೇಡಿಗಳ ಕೂಟವೆ ಈ ದೇಶಕ್ಕಂಟಿರುವ ಒಂದು ಪೀಡೆ ಹಾಗೂ ಮೆತ್ತಿರವ ಕಳಂಕ. ಮತ್ತಿದು ಅರ್ಥವಾದಷ್ಟು ಬೇಗ ನಮ್ಮ - ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.🙏

ಮಡಿಯನ್ ಕ್ಷೇತ್ರಪಾಲನ ಕ್ಷೇತ್ರ ಮಹಾತ್ಮೆ.

ಕೇವಲ ಎಪ್ಪತ್ತು ವರ್ಷಗಳ ಹಿಂದೆ ತುಳುನಾಡಿನ ಭಾಗವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಯೊಳಗಿದ್ದ ಕಾಙ್ಞನಗಾಡು ಮೂಲತಃ ನನ್ನೂರು ತೀರ್ಥಹಳ್ಳಿಯ ಕೆಳದಿಯ ನಾಯಕರ ಆಡಳಿತದಲ್ಲಿದ್ದ ಹೊಸದುರ್ಗವಾಗಿತ್ತು.😇 ಈಗ ಮಲಯಾಳಿಗಳ ಸುಪರ್ದಿಯಲ್ಲಿರುವ ಈ ಊರಿನ ಕ್ಷೇತ್ರಪಾಲನ ದೇವಸ್ಥಾನ ಇದು.👍 



ಇದನ್ನ "ಶ್ರೀಮಡಿಯನ್ ಕೋಲಂ ಕ್ಷೇತ್ರಪಾಲ ಕ್ಷೇತ್ರ" ಅಂತ ಕರೆಯುತ್ತಾರೆ.🙂 ಮಲಯಾಳಂ ಭಾಷೆಯಲ್ಲಿ ಮಡಿಯನ್ ಅಂದರೆ ಸೋಮಾರಿ ಅಂತ ಅರ್ಥ.😁 ಹಿಂದೆ ಬಡಗಿನಿಂದ ತೆಂಕಿಗೆ ಅಂದರೆ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನತ್ತ ತನ್ನ ಪರಿವಾರ ಗಣಗಳೊಂದಿಗೆ ಸಾಗುತ್ತಿದ್ದ ಈಶ್ವರ ಇಲ್ಲಿಗೆ ಬಂದೊಡನೆˌ ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ತಯ್ಯಾರಿಸುತ್ತಿದ್ದ ತುಪ್ಪದ ನೆಯ್ಯಪ್ಪದ ಸುವಾಸನೆಗೆ ಮನಸೋತು ಅದನ್ನು ತಿನ್ನದೆ ಅಲ್ಲಿಂದ ಕದಲಲಾರೆ ಎಂದು ಹಟ ಹಿಡಿದು ಕೂತನಂತೆ.🫢 ಹಾಗೆ ಅವನು ಕೂತಲ್ಲೆ ಭದ್ರಕಾಳಿ ಗುಡಿಯ ಪ್ರಾಂಗಣದೆದುರು ಅವರ ದೇಗುಲವಿದೆ.😌 


ಅವನ ತಿಂಡಿಪೋತ ಗುಣ ನೋಡಿ ಪರಿವಾರ ಗಣಗಳು ನಮ್ಮ ಈಶ್ವರ ಮಡಿಯ ಅಂತ ಹಂಗಿಸಿದವಂತೆ ಹೀಗಾಗಿ ಇಲ್ಲವನ ಹೆಸರು "ಮಡಿಯನ್" ಅಂತಾಯಿತು.😊 ಇಲ್ಲಿನ ವಿಶೇಷ ಏನೆಂದರೆˌ ನಿತ್ಯ ಉಷಾ ಪೂಜೆ ಮಾಡುವವರು ಮೀನು ಹಿಡಿವ ಮರಕ್ಕಲರು.🥺 


ಮಧ್ಯಾಹ್ನದ ಒಂದು ಸುತ್ತಿನ ಪೂಜೆ ಮಾಡಿದ ನಂತರ ಬ್ರಾಹ್ಮಣರಿಗೆ ಅವರು ಗರ್ಭಗುಡಿಯ ಉಸ್ತುವರಿ ಬಿಟ್ಟು ಕೊಡ್ತಾರೆ.👌 ಮತ್ತೆˌ ಮಧ್ಯಾಹ್ನದಾರತಿ - ಸಂಧ್ಯಾರತಿ ಹಾಗೂ ರಾತ್ರಿಯ ಮಹಾಮಂಗಳಾರತಿ ಬ್ರಾಹ್ಮಣ ಅರ್ಚಕರ ಹೊಣೆ.✋ ಇಂದಿಗೂ ಸಂಪ್ರದಾಯ ಹೀಗೆನೆ ಇರೋದು.😎 ವರ್ಷಕ್ಕೊಮ್ಮೆ ಜಾತ್ರೆ ಆಗ ನೆಯ್ಯಪ್ಪ ಪ್ರಸಾದ ವಿಶೇಷ.😅 



ಮಳೆಯ ಇರುಚಲಿನಲ್ಲಿ ಬೆಳಗಿನ ವಾಕಿಂಗಿಗೆ ಅಂತ ಹತ್ತು ಕಿಲೋಮೀಟರ್ ನಡೆದೆ ಹೋಗಿದ್ದ ನಾನು ಅಲ್ಲಿಗೆ ಭೇಟಿ ಕೊಟ್ಟಾಗˌ ಪ್ರೀವೆಡ್ಡಿಂಗ್ ಶೂಟ್ ಅನ್ನೋ ಇತ್ತೀಚಿನ ಐಲಾಕ್ಕಿಳಿದಿದ್ದ ನಾಲ್ವರ ತಂಡ ಹಾಗೂ ವಧು - ವರರ ಹೊರತು ಇನ್ನೊಂದು ಹುಳ ಇರಲಿಲ್ಲ.😎 ಮೌನವೊಂದನ್ನ ಬಿಟ್ಟು.😇