24 July 2024

ಮಡಿಯನ್ ಕ್ಷೇತ್ರಪಾಲನ ಕ್ಷೇತ್ರ ಮಹಾತ್ಮೆ.

ಕೇವಲ ಎಪ್ಪತ್ತು ವರ್ಷಗಳ ಹಿಂದೆ ತುಳುನಾಡಿನ ಭಾಗವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಯೊಳಗಿದ್ದ ಕಾಙ್ಞನಗಾಡು ಮೂಲತಃ ನನ್ನೂರು ತೀರ್ಥಹಳ್ಳಿಯ ಕೆಳದಿಯ ನಾಯಕರ ಆಡಳಿತದಲ್ಲಿದ್ದ ಹೊಸದುರ್ಗವಾಗಿತ್ತು.😇 ಈಗ ಮಲಯಾಳಿಗಳ ಸುಪರ್ದಿಯಲ್ಲಿರುವ ಈ ಊರಿನ ಕ್ಷೇತ್ರಪಾಲನ ದೇವಸ್ಥಾನ ಇದು.👍 



ಇದನ್ನ "ಶ್ರೀಮಡಿಯನ್ ಕೋಲಂ ಕ್ಷೇತ್ರಪಾಲ ಕ್ಷೇತ್ರ" ಅಂತ ಕರೆಯುತ್ತಾರೆ.🙂 ಮಲಯಾಳಂ ಭಾಷೆಯಲ್ಲಿ ಮಡಿಯನ್ ಅಂದರೆ ಸೋಮಾರಿ ಅಂತ ಅರ್ಥ.😁 ಹಿಂದೆ ಬಡಗಿನಿಂದ ತೆಂಕಿಗೆ ಅಂದರೆ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನತ್ತ ತನ್ನ ಪರಿವಾರ ಗಣಗಳೊಂದಿಗೆ ಸಾಗುತ್ತಿದ್ದ ಈಶ್ವರ ಇಲ್ಲಿಗೆ ಬಂದೊಡನೆˌ ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ತಯ್ಯಾರಿಸುತ್ತಿದ್ದ ತುಪ್ಪದ ನೆಯ್ಯಪ್ಪದ ಸುವಾಸನೆಗೆ ಮನಸೋತು ಅದನ್ನು ತಿನ್ನದೆ ಅಲ್ಲಿಂದ ಕದಲಲಾರೆ ಎಂದು ಹಟ ಹಿಡಿದು ಕೂತನಂತೆ.🫢 ಹಾಗೆ ಅವನು ಕೂತಲ್ಲೆ ಭದ್ರಕಾಳಿ ಗುಡಿಯ ಪ್ರಾಂಗಣದೆದುರು ಅವರ ದೇಗುಲವಿದೆ.😌 


ಅವನ ತಿಂಡಿಪೋತ ಗುಣ ನೋಡಿ ಪರಿವಾರ ಗಣಗಳು ನಮ್ಮ ಈಶ್ವರ ಮಡಿಯ ಅಂತ ಹಂಗಿಸಿದವಂತೆ ಹೀಗಾಗಿ ಇಲ್ಲವನ ಹೆಸರು "ಮಡಿಯನ್" ಅಂತಾಯಿತು.😊 ಇಲ್ಲಿನ ವಿಶೇಷ ಏನೆಂದರೆˌ ನಿತ್ಯ ಉಷಾ ಪೂಜೆ ಮಾಡುವವರು ಮೀನು ಹಿಡಿವ ಮರಕ್ಕಲರು.🥺 


ಮಧ್ಯಾಹ್ನದ ಒಂದು ಸುತ್ತಿನ ಪೂಜೆ ಮಾಡಿದ ನಂತರ ಬ್ರಾಹ್ಮಣರಿಗೆ ಅವರು ಗರ್ಭಗುಡಿಯ ಉಸ್ತುವರಿ ಬಿಟ್ಟು ಕೊಡ್ತಾರೆ.👌 ಮತ್ತೆˌ ಮಧ್ಯಾಹ್ನದಾರತಿ - ಸಂಧ್ಯಾರತಿ ಹಾಗೂ ರಾತ್ರಿಯ ಮಹಾಮಂಗಳಾರತಿ ಬ್ರಾಹ್ಮಣ ಅರ್ಚಕರ ಹೊಣೆ.✋ ಇಂದಿಗೂ ಸಂಪ್ರದಾಯ ಹೀಗೆನೆ ಇರೋದು.😎 ವರ್ಷಕ್ಕೊಮ್ಮೆ ಜಾತ್ರೆ ಆಗ ನೆಯ್ಯಪ್ಪ ಪ್ರಸಾದ ವಿಶೇಷ.😅 



ಮಳೆಯ ಇರುಚಲಿನಲ್ಲಿ ಬೆಳಗಿನ ವಾಕಿಂಗಿಗೆ ಅಂತ ಹತ್ತು ಕಿಲೋಮೀಟರ್ ನಡೆದೆ ಹೋಗಿದ್ದ ನಾನು ಅಲ್ಲಿಗೆ ಭೇಟಿ ಕೊಟ್ಟಾಗˌ ಪ್ರೀವೆಡ್ಡಿಂಗ್ ಶೂಟ್ ಅನ್ನೋ ಇತ್ತೀಚಿನ ಐಲಾಕ್ಕಿಳಿದಿದ್ದ ನಾಲ್ವರ ತಂಡ ಹಾಗೂ ವಧು - ವರರ ಹೊರತು ಇನ್ನೊಂದು ಹುಳ ಇರಲಿಲ್ಲ.😎 ಮೌನವೊಂದನ್ನ ಬಿಟ್ಟು.😇

No comments: