24 February 2009

शायद तुम एहसास करपाते...

अगर मई कहूं के तुम मेरे जान हो,

थो शायद मई जूटा लागू/

पर हकीकत थो ये है,

की तुम्हारी काथिर ही....अपनी साँस बी है लागू//

ನಿರಂತರ ವಿಷಾದ..

ಭಾವ ಯಾನದಲ್ಲಿ...ತೂತು ತೆಪ್ಪ ನಂಬಿದ ಪಯಣ/

ಇದ್ದರೇನು ಹಾಡೋ ಹಂಬಲ?

ಮನಸು ತಂತಿ ಹರಿದ ಒಡಕು ವೀಣಾ/

ಮುರಿದ ಬಾಳೆ ಬಳುವಳಿ ನನಗೆ,

ನೋವ ಮರೆತು ನಗುವುದಾದರೂ ಹೇಗೆ?//

21 February 2009

ಕನಸು...

ಮೋಹಜಾಲದಲ್ಲಿ ನನ್ನ...ಜೇಡನಂತೆ ಸಿಲುಕಿಸೊ ಮುನ್ನ,

ಹನಿ ದಯೆ ಬರಲಿಲ್ಲವೇ?/

ಒಪ್ಪಿ ಬಂದ ಬಂಧಿ ನಾನು...ಒಲವ ಫಾಶಿ ಹಾಕಿದರೂನು,

ನಗುತಲೆ ಸಹಿಸುವೆನು//

ಗುಟ್ಟಿನ್ನೇನೂ ಉಳಿಯದಾಗಿದೆ,

ನಿಜವೆಲ್ಲ ಬೆತ್ತಲಾಗಿದೆ/

ಹುಸಿ ಮೌನ ಇನ್ನು ಬೇಕೆಬೇಕ?,

ಇನ್ನೂ ನೀ ನನ್ನ ಕಾಡಬೇಕ?//

ಒಲವಿನ ಹಿನ್ನೀರಲ್ಲಿ ತೇಲುವ ಒಂಟಿ ದೋಣಿ ಹೊಯ್ದಾಟ,

ಕಿತ್ತ ನೋವಿದ್ದರೂ ನಗುತಲೆ ವಿಷಾದ ಮರೆವ ಮಲ್ಲಿಗೆಯ ಅರೆ ಬಿರಿತ/

ಗಿರಿ ನೆತ್ತಿಗೆ ಮುತ್ತಿಡೋ ಮೇಘದ ತುಡಿತ,

ಮಧುರವಾಗಿ ಉಲಿವ ಹಕ್ಕಿಯ ಹೃದಯದ ಮಿಡಿತ...ನನಗಿಷ್ಟ..ನಿನ್ನಷ್ಟೆ//

ಮಲಗು ನೀ ಮೋಹಕವಾಗಿ...ಪುಟ್ಟ ಹಸುಳೆಯಂತೆ,

ಅದರಲಿ ಬರುವ ಕನಸು ನನ್ನವೇ...ಕೇವಲ ನನ್ನವೇ ಆಗಿರಲಿ/

ಬಾಳ ದೀರ್ಘ ಪಯಣದ ಹಾದೀಲಿ ನಿನ್ನ ಆಯ್ಕೆ ಇನ್ಯಾರೇ ಆಗಿದ್ದರೂ,

ನನ್ನ ನೆನಪಾದಾಗೊಮ್ಮೆ....ತುಟಿಯಂಚಲಿ ಹಾಗೆ ಕಿರು ನಗೆ ಬರಲಿ////

20 February 2009

ಗೀಚೋದು ಯಾರು...ಒಲವ ಹಣೆ ಬರಹ...

ಖಾಲಿ ಕಾಗದ ಮನಸು,

ಕಲೆಯಾದರೂ ಪರವಾಗಿಲ್ಲ...ಒಲವಿನ ಕೆಂಪು ಶಾಯಿ ಅದರ ಮೇಲೆ ಸಿಡಿಸು/

ನಿರುಪಯೋಗಿ ಅಂತ ಎಸೆದರೂ ಚಿಂತೆಯಿಲ್ಲ ನಂತರ,

ಬೇಕಿಲ್ಲ ಈ ಪಾವಿತ್ರ್ಯದ ಸೋಗು...ಹುಸಿ ಅಂತರ//

ಸುಳಿವಿರದ ಸಂಚಿಗೆ,

ಮುಗುಳ್ನಗು ಸೂಸೊ ತುಟಿಯಂಚಿಗೆ/

ನಾನು ಬಲಿಯಾದದ್ದು ಹೌದು,

ತುಂಟ ಕಳೆಯ...ನಿನ್ನ ಕಣ್ಣ ಮಿಂಚಿಗೆ//

ಹುಸಿ ನಿರೀಕ್ಷೆಯ ಬೋಳೆ ದಾಸ,

ಹಳೆ ನೆನಪುಗಳ ಭಾವದ ಜೊತೆ ನಿತ್ಯ ಸಹವಾಸ/

ಗೆದ್ದೇ ಗೆಲ್ಲುವ ಅದಮ್ಯ ಭರವಸೆ,

ನಿನ್ನೊಲವಲಿ ಸೆರೆಯಾಗೊ ಅದುಮಿಟ್ಟ ಆಸೆ....ನನಗೆ//

18 February 2009

ಕೇಳದೆ?

ಚಿಮ್ಮುತಿದೆ ಹೊರ ಹೊಮ್ಮುತಿದೆ ಅನುರಾಗದ ಚಿಲುಮೆ,

ತಂಪೆರೆವ ಮಳೆ ಬಾರದಿರೋ ಎದೆ ಭಾವದ ಕುಲುಮೆ/

ಬೀಸುವ ಗಾಳಿಯ ಪಿಸುದನಿ ಕೇಳೆಯ?

ಮನದ ಹುನ್ನಾರದ ಕಾತರ ಕಾಣೆಯ?//

ವೇದನೆಯ ಅಲೆಗಳ ಮೇಲೆ ನಾ ತೇಲುವ ನಾವೆ,

ನೀನಿರದ ಪಯಣದ ಕೊನೆಗೆ ಗುರಿ ಕೇವಲ ಸಾವೆ/

ಮುಳುಗುವ ಮೋಹದ ಒಡಕಿನ ಭಯವಿದೆ,

ನಿನ್ನೆದೆ ಆಸರೆ ನೆರಳಿನ ಮೊರೆಯಿದೆ//

ನಿನ್ನ ಜೊತೆಯೇ ಬೇಕು ಬಾಳಿಗೆ/

ಮನದ ಮನೆಯ ಕೊಡುವೆಯ ಬಾಡಿಗೆ?//

ಒಲವು ವೇಳಾಪಟ್ಟಿಯಲ್ಲ...

ಭಾವದ ನಡು ಕಡಲಲ್ಲಿ,

ದಿಕ್ಕೆಟ್ಟು ದೆಸೆ ತಪ್ಪಿದ ಅನಾಥ ದೋಣಿ/

ಎಲ್ಲರಿಗೆ ನಾ ಬೇಡವಾಗಿದ್ದರೂ,

ನನಗೆಲ್ಲರೂ ಬೇಕೇಬೇಕು....ಒಲವ ಮಂಜಿನಹನಿಯಲ್ಲಿ ತೋಯಿಸಲು//

ಪಿಸು ಮಾತಲೇ ಮನೆ ಕಟ್ಟಲ?

ನಸುನಗುವಲ್ಲೇ ಅದ ಶೃಂಗರಿಸಲ?/

ಆ ಮನೆ ನಿನಗಿಷ್ಟವಾಗಿ ತುಸು ನಕ್ಕರೂ ಸಾಕು....

ನನ್ನ ಈ ಕನಸು ಧನ್ಯ//

ನಾಳೆ ಬರಲಿರುವ ದಾರಿ ಒಂದು ಕನಸು,

ಕಳೆದು ಹೋಗಿರೋ ನೆನ್ನೆಗಳಷ್ಟೇ ಸತ್ಯ ಹಾಗು ಬಾಳಿನ ಸೊಗಸು/

ನೆನಪಿನ ಕೊಂಬೆಗೆ ಕಟ್ಟಿದ ಉಯ್ಯಾಲೆ ನನ್ನ ಮನಸು,

ಅದ್ರ ಮೇಲೆ ತೂಗೋದು ಕೇವಲ ನೀನು....ನಿನ್ನ ಮನಸು//

ಮನ ಮುದಗೊಂಡಾಗ ನಗಬೇಕು,

ದುಃಖಒತ್ತರಿಸಿ ಬಂದಾಗ ಅಳಬೇಕು/

ಭಾವನೆಗಳಿಗೂ ವೇಳಾಪಟ್ಟಿ ಹಾಕೋ ಹರಕತ್ತು ಏಕೆ?

ಪ್ರೇಮ ನಿವೇದನೆಗೂ ಪ್ರತ್ಯೇಕ ದಿನದ ಹಂಗಾದರೂ ಏಕೆ?//

ಆದರೂ....ನಿಮ್ಮ ಪ್ರೀತಿ ನಿಮ್ಮ ಕೈಸೇರಲಿ

15 February 2009

ಕನಸಿನಲ್ಲಿ ಕಾಡಬಾರದೆ? ನನಸಿನಲ್ಲಿ ಕಾಣಬಾರದೆ? ನನ್ನ ರೆಪ್ಪೆ ಬಡಿತವನ್ನು...ನನ್ನ ಎದೆಯ ಮಿಡಿತವನ್ನು...ಕೇಳಬಾರದೆ? ಏನನಾದರೂ ಹೇಳಬಾರದೇ?

14 February 2009

ಉಸಿರಾಗುಳಿ ನನ್ನಲಿ...

ಮುಟ್ಟಿಗೊತ್ತಿಲ್ಲ,

ಮುತ್ತಿಡುವ ಮಾತೆ ಹುಟ್ಟಿಲ್ಲ/

ಎದುರಿಂದ ದೂರಾದರೂನು...ನಿನ್ನ ಕನಸ ಕಾಣೋದೆ ನನಗಿಷ್ಟ,

ನಿನ್ನುಸಿರ ಕಂಪಲ್ಲಿ ತೇಲೋದೆ ಮನದ ಅಭೀಷ್ಟ//

ಮುಗಿಲಿನಿಂದ ಉದುರೋ ಇಬ್ಬನಿಯ ಹನಿ,

ಕೇಳುತ ಬೆಳಕಿನೊಡೆಯನ ಪಿಸುದನಿ/

ಅವನದೇ ರಶ್ಮಿಗೆ,

ಮತ್ತಷ್ಟು ರಂಗಾಯಿತು//

ಕೂಡಿಟ್ಟ ಕನಸಿನ ಖಜಾನೆ,

ಲೂಟಿ ಆಗಿರೋದು ನಿಜಾನೆ/

ಒಲವು ನಿನ್ನೊಳಗೂ ಅಂತರ್ಗಾಮಿ ಎಂಬ ಅರಿವು ನನಗಿದೆ,

ಆದರೆ ನಿನ್ನ ಮನಸನರಿಯೋದಾದರೂ ಹೇಗೆ?//

ಮೌನ ಕದಡಿದ ಪಿಸುಮಾತು,

ಹೇಳೋದಿನ್ನೇನೂ ಉಳಿದಿಲ್ಲ/

ಉಸಿರಾಗುಳಿದರೆ ಸಾಕು,

ಇದಕ್ಕಿಂತ ಹೆಚ್ಚು ಬೇಡಿಕೆ....ಇಲ್ಲವೇ ಇಲ್ಲ//

11 February 2009

ಹೂವಿನ ಮೋಡಿ....

ಆಗ ತಾನೆ ಅರಳಿದ ಮೋಹಕ ದಾಸವಾಳದ ಮುಂದೆ,

ಮತಿಗೆಟ್ಟು ಮೈಮರೆತು ಹಾರೋ ಪೆದ್ದು ದುಂಬಿಗಳ ಮಂದೆ/

ಮೀಸಲು ಇನ್ನೂ ಮುರಿಯುವ ಮೊದಲೇ,

ನೋಡಿದಿರಾ ವಯ್ಯಾರಿ ಹೂವಿನ ರಗಳೆ!

10 February 2009

जालिम कयाल...

ये बी खूब रही,

हमारे आशिक..... कुद हमारी ही कातिल बने/

उफ़ इन जुल्मी तयार,

आँखोंकी तीर ही कुछ औरोंसे बारी पड़ी//

ಒಲವ ಅನ್ವೇಷಣೆ...

ಹನಿ ಹನಿಯಲ್ಲೂ ಒಲವ ಹೊತ್ತು ನಿರಂತರ ಸಾಗರಮುಖಿಯಾಗೋ ನದಿಗಿರದ ಬೇಸರ,

ನಿತ್ಯ ಮೂಡುತ ಗೋಗೆರೆದರೂ ಭೂಮಿ ಮನವ ಗೆಲ್ಲಲಾಗದ ನೇಸರ/

ಇವರಿಬ್ಬರೇ ಸ್ಫೂರ್ತಿ,

ನಿನ್ನ ಅಸಡ್ಡೆಯ ಮೌನಕ್ಕೂ ತಲೆ ಕೆಡಿಸಿಕೊಳ್ಳದ....ನನ್ನ ಛಲ ಬಿಡದ ಪ್ರಯತ್ನಕ್ಕೆ//

ಉದುರಿದ ಮಾತೆಲ್ಲ ಮುತ್ತಾಗುವಂತಿದ್ದರೆ?

ಮೂಡಿದ ಬೆವರ ಸಾಲೆ ಮೂಗ ನತ್ತಾಗುವಂತಿದ್ದರೆ?/

ಸಾಕೆ ಸಾಕು,

ಅದರಲ್ಲೇ ನಿನ್ನ ಚಲುವು ಪರಿಪೂರ್ಣ//

ಒಲವೆನ್ನೋದು ಒಂದು ಕಾಯಿಲೆ,

ನೀನೆ ಹೇಳು? ಇನ್ನೆಷ್ಟೂ ಅಂತ ನಾನಾದರೂ ಕಾಯಲಿ?/

ನರಳಿ ನರಳಿ ನನಗೂ ಸಾಕಾಗಿ ಹೋಗಿದೆ....

ಪ್ರೀತಿಯ ನೆರಳಿನಾಸರೆ ತುರ್ತಾಗಿ ಬೇಕಿದೆ//

09 February 2009

ಬಚ್ಚಿಟ್ಟ ಮಾತು...

ಹೇಳಲಾಗದಂತಾ ಮಾತು...ಎದೆಯ ಚಿಪ್ಪೊಳಗೆ ಕುಲಿತಿಳಿದು,

ಆಗಲೀ ಮುತ್ತಾಗಲಿ ಎಂದೆಂದಿಗೂ/

ಉಸಿರು ತುಂಬುವ ತಂಗಾಳಿ,

ಮೆಲ್ಲನೆ ಅದನೂ ಸೋಕಿ..ಸಾಗಲಿ ಸುಳಿದಾಡಲಿ ನಿನ್ನ ತಾಕಲಿ//

ನಾನು ಸತ್ತರೆ ಏನು? ಆ ಮುತ್ತಿನ ಒಡೆತನ ನಿನ್ನದೇ ತಾನೆ?

ನೀ ಹುಡುಕಿ ತೆಗೆಯಿವಿಯೋ....ಇಲ್ಲ ಸುಮ್ಮನಿರುವೆಯೋ ನಾನಂತೂ ಕಾಣೆ!

ದೊಡ್ಡದಾಯಿತು ಹಗಲು,

ಇರುಳಿಗೆ ಅದೇಕೋ ಕಿರಿದಾಗುವ ತೆವಲು/

ನೋಡು...ಅದೂ ನಿನ್ನಂತೆ ಕಡು ಸ್ವಾರ್ಥಿ,

ಬಯಸಿದಾಗ ಬರದೆ ಓಡೋಡಿ.....ತನಗನಿಸಿದಾಗ ಬಂದಿದ್ದು ಕಾಡೋದೇ ಆದರೆ ರಿವಾಜು-ರೀತಿ//

ಚಳಿ ಮುಗಿಯುವುದರ ಸಂಕೇತ ,

ಸದಾ ನಳನಳಿಸೋ ಮರಗಳು ಎಲೆಯುದುರಿ ಬೋಳಾಗೋ ಅಕಾಲ ದುಃಖ/

ನನಗಂತೂ ಇದು ಹೊಸತೇನಲ್ಲ,

ಬಗಲಿನಲ್ಲೇ ಭದ್ರವಾಗಿದೆ...ನಿರಾಕರಣೆಯ ನೋವಿನ ತಂಬಾಕು ತುಂಬಿಟ್ಟುಕೊಂಡಿರುವ ವಿಷಾದದ ಹುಕ್ಕ//

ಚಿಟ್ಟೆ ಕಾಣುವಷ್ಟು ಪ್ರಪಂಚ,

ಕಣ್ತುಂಬಿಸಿಕೊಳ್ಳೋ ಭಾಗ್ಯ ನಸು ನಗುವ ಹೂವಿಗಿಲ್ಲ/

ಆದರೇನು?

ತನ್ನಲ್ಲೇ ಬ್ರಂಹಾನ್ಡ ತೋರಿಸುವ ಚಾತುರ್ಯ ಅದಕಿದೆಯಲ್ಲ...ಥೇಟು ನಿನ್ನಂತೆ!//

ಧ್ಯಾನಕ್ಕೂ ಇಲ್ಲಿ ಬೆಲೆ ಇದೆ...

ದುಂಬಿಯ ಧ್ಯಾನವ ಕಂಡು,

ಹೂವಿನ ಮನಸೂ ಕರಗಿ...ಸವಿಯಾದ ಮಕರಂದ ಸ್ಪುರಿಸಿ ಮುಗುಳ್ನಕ್ಕ ಹಾಗೆ/

ನೀನೂ ಅರೆ ಕ್ಷಣ ನನ್ನತ್ತ ತಿರುಗಿ,

ಕಿರುನಗೆಯನ್ನಾದರೂ ಹರಿಸದಿದ್ದರೆ ಹೇಗೆ?//

08 February 2009

ನೆನೆಪ ನಾವೆ....

ಹೂವಿನ ಎಸಳಿನ ನವಿರು,

ಜಿಂಕೆಯ ಕಣ್ಣಿನ ಚಲುವು....ಗಾಳಿಯಲಿ ದೂರದಿಂದ ತೇಲಿಬರುವ ಹಾಡು//

ಕನಸಲಿ ಸುಮ್ಮನೆ ಬಂದು,

ನೋಡುತ ನಿಂತು ನಿ ಚಿನ್ನ....ಎಡೆಬಿಡದೆ ಹೀಗೆ ನನ್ನ ಕಾಡು/

ಅದೇನೋ ಮೋಡಿ ನಿನ್ನ ನೆನಪಲೆ,ಅದ್ಯಾವ ಮಾಯೆ ಎಂದು ನಾ ಹಾಡಲಿ?

ಅದೆಲ್ಲೇ ಹೇಗೆ ನೀನಿದ್ದರೂ,

ನನ್ನ ಮನಸಲಿ ನೀನೆ...ನೀನೆ ಅದು ನೀನೆ ತಾನೆ?//

ಕಿರುಬೆರಳ ಮೊನೆಯಲ್ಲಂದು,

ತೋಳಿನ ಮೇಲೆ ನೀ ಗೀಚಿ...ಬರೆದಂತ ಚುಕ್ಕಿಯಿರದ ರಂಗೋಲಿ/

ಇಂದ್ಯಾಕೋ ಮನಸಲಿ ಮೂಡಿ,

ಮತ್ತೊಮ್ಮೆ ಮಾಡಿದೆ ಮೋಡಿ,

ನಿನ್ನ ನೆನಪ ಹೊತ್ತ ನಾವೆ ಹೀಗೆ ಸಾಗುತುರಲಿ//

ನೀನೆ ಕೇಳದ ಮೇಲೆ...

ಅದೇ ರಾತ್ರಿ,
ಅದೇ ಹಗಲು/
ಮತ್ತದೇ ನಿನ್ನ...ಕೇವಲ ನಿನ್ನದೇ ನೆನಪು,
ಅದನ್ನೇ ಮತ್ತೆ ಮತ್ತೆ ಹಾಡೋ ಕಿಸಬಾಯಿದಾಸ ನಾನು//ಎಲ್ಲೂ ಕಾಣದ ಹುಚ್ಚು ಪ್ರೀತಿಯೇನಲ್ಲ,
ಬೇರೆಲ್ಲರಿಗಿಂತ ಖಂಡಿತ ಹೆಚ್ಚು ಪ್ರೀತಿ ಅನ್ನೋದು ಮಾತ್ರ ನಿಜ/
ಇಷ್ಟೆಲ್ಲಾ ಪರಿ ಪರಿಯಾಗಿ ಮೊರೆಯಿಡುತ್ತಿದ್ದರೂ,
ಇನ್ನೂ ಮೌನವಾಗೆ ಇದ್ದು ನೀಡುತಲೇ ಇರಬೇಕೆ ನನಗೆ ಸಾಜಾ//ಇತ್ತೀಚಿಗೆ ನಾನಿರೋ ಊರಲ್ಲಿ ನೂರಾರು ಕೀಚಕರು,
ಮುಂದೊಮ್ಮೆಯ ಅನಾಹುತಗಳ ಊಹಿಸದೇ ಸಾವಿರಾರು ಮರಗಳ ಕೊಂದರು/
ಈಗೀಗ ಮನಸೊಳಗೂ ಬರಡು ಜಾಲಿಯಂತೆ ಹಬ್ಬುತಿರುವಾಗ,
ಹೊರಗೂ ಹಸಿರು ಮಾಯವಾಗಿ ಬೆಂಗಾಡಾದರೆ ಸಹಿಸೋದು ಹೇಗೆ?//ಕಣ್ಬಿಟ್ಟೆ ಕನಸ ಕಾಣೋ ಮರುಳು,
ನನ್ನ ನೆನಪಾಗಿ ಮನಸು ಆರ್ದ್ರಗೊಂಡರೆ....ಬಾಳ ಯಾವುದೇ ತಿರುವಿನಲ್ಲಾದರೂ ಒಮ್ಮೆ ಹಿಂದೆ ಹೊರಳು/
ನಾನು ಅಲ್ಲೇ ನಿಂತು ಕಾಯುತಿರುತೀನಿ,
ಒಂದೇ-ಒಂದು ನಗೆಹೂ ಚಲ್ಲಿದರೂ ಸಾಕು...ನೆಲಕ್ಕೆ ಸೋಕುವ ಮುನ್ನ ಬೆಚ್ಚಗೆ ಬೊಗಸೆಯಲ್ಲಿ ಹಿಡಿಯುತೀನಿ//

06 February 2009

ಏಕಾಂತವೂ ಶಿಕ್ಷೆ ಕೆಲವೊಮ್ಮೆ...

ಬೆಳಗಾದರೆ ಸಾಕು,

ಮತ್ತದೇ ನಿನ್ನದೇ ನೆನಪು/

ಕನಸಲ್ಲಂತೂ ಎಡೆಬಿಡದೆ ಕಾಡಿರುತ್ತಿ,

ನನಸಲ್ಲೂ ಹೀಗೆ...ಹಿಂಸೆ ಕೊಡಲೇ ಬೇಕ?//

ಹೊತ್ತು ಸರಿಯುತ್ತಲೇ ಇತ್ತು,

ಹಗಲಿಗೂ ಮುಸ್ಸಂಜೆಗೆ ದಿನದ ಲೆಖ್ಖ ಕೊಡುವ ಬಾಬತ್ತು/

ಇಷ್ಟೊಂದು ನಿಬಿಡ ಜಗತ್ತಿನಲ್ಲಿ ನಾನೊಬ್ಬನೇ ಪಾಪಿ ಏಕಾಂಗಿ,

ನೀನೂ ಇಲ್ಲ ಜೊತೆಗೆ...ಸತ್ತಾದರೂ ಹೋಗಿದ್ದಾರೆ ನಾನು ಎಷ್ಟೋ ಚೆನ್ನಾಗಿತ್ತು//

04 February 2009

कुछ बात अदूरी...

ज़ख्म बरते नही,

सिर्फ़ चुप जाते है/

मंजिल पाने की मोकाम पर,

होटोंतक बेवजा...अश्क बेहजाते है//

ಸತ್ತರೂ ವ್ಯಾಮೋಹಿ...

ಕರುಳು ತೂತಾಗುವಂತೆ ಕುಡಿಯೋಕೆ,
ಪಡಖಾನೆಗೆ ಹೋಗಬೇಕೆ?/
ಮನದ ಕಪಾಟಿನಲ್ಲಿ ಜತನವಾಗಿಟ್ಟಿರೋ ನೋವಿನ ಭರ್ತಿ ಶೀಷೆಯೇ ಇದೆಯಲ್ಲ....ಅದೇ ಸಾಲದೇ,
ಗುಟುಕು ಗುಟುಕಾಗಿ ಹೀರಿ ಅನುಕ್ಷಣ ಸಾಯೋಕೆ?//


ಕಳೆದುಕೊಳ್ಳಲಾದರೂ ಏನಿತ್ತು?,
ನಿನ್ನ ಕೈ ಬಡಿತ ನನ್ನ ಬಾಳ ಬಾಗಿಲ ಮೇಲೆ ಬೀಳೋತನಕ?/
ಗಳಿಸೋಕೆ ಇನ್ನೇನು ತಾನೆ ಉಳಿದಿದೆ,
ಸಂತೃಪ್ತ ನಾನು...ಜೊತೆಗೆ ನೀನಿರುವುದೇ ನಾಕ//


ಇನ್ನೇನೆ ನುಡಿದರೂ ಅದು ಕೃತಕ,
ಕಣ್ಣ ಭಾಷೆಯಲ್ಲಿ ಹೇಳಿದ ಒಂದೇ-ಒಂದು ಮಾತು ಸಾಕಿತ್ತು/
ಅರ್ಥ ಮಾಡಿಕೊಳ್ಳೋದು ಕಷ್ಟವೇನೂ ಆಗುತ್ತಿರಲಿಲ್ಲ,
ನಿನಗೂ ಇದ್ದಿದ್ದರೆ ನನ್ನಂತೆ ಒಲವ ಹಿಂದೋಡೊ ಹರಕತ್ತು//

03 February 2009

अदूरी बात...अदूरी रात...

दुनिया चाहे जोबी कहे,

जस्बातों के गुलाम होना है हमें/

शायद एइत्राज हो आपको,

पर अदूरी बात पूरा सुनाना ही है हमें//

ಎದೆಯೊಳಗಿನ ಚಿತೆ....

ಒಲೆಯ ಮೇಲಿರಿಸಿದ ಹಾಲನ್ನು ಪದೇ ಪದೇ ಮರೆಯುತ್ತೇನೆ,
ಆದರೆ ಉರಿ ಕಿರಿದಾಗಿರೋದರಿಂದ ಅದು ಉಕ್ಕೋದಿಲ್ಲ/
ನಿನ್ನ ನಿರಾಕರಣೆಯ ನೆನಪ ಬೇಗುದಿಯೂ ಹೀಗೆ,
ದುಃಖ ಒತ್ತರಿಸಿ ಬಂದರೂ ನಾನು ಬಿಕ್ಕುವುದಿಲ್ಲ//


ಇರುಳು ಸತ್ತ ಸಂಕಟ,
ಹಗಲು ಹೆತ್ತ ಸಂತಸ/
ಇವುಗಳೆರಡರ ಸಮ ಭಾವ,
ಮೋಡದ ಮರೆಯಲಿ ಸಿಂಧೂರ ಉಡುಗಿ ಹೋದ ಮೂಡಣದ ವೈಧವ್ಯದ್ದು//

02 February 2009

ಕಣ್ಣೀರ ತೆರೆಯಾಚೆ.....

ಕಣ್ಣ ಕನ್ನಡಿಯಲ್ಲಿ ಕಂಡ,

ಕಣ್ಣೀರ ಹನಿಯಲ್ಲಿ ಮಿಂದ/

ಪ್ರತಿಬಿಂಬ ನಿನ್ನದೇ,

ಹೀಗಿದ್ದರೂ... ಅದರಲ್ಲಿ ಅಡಗಿರುವ ಯಾಚನೆ ನಿನಗೆ ಕಾಣದೆ?//

01 February 2009

ರೋಗಿ ನಾನು...

ಸುಮ್ಮನೆ ಕುಳಿತರೂ ಇರಲಾಗುತ್ತಿಲ್ಲ,

ನಿನ್ನನೇ ಎಲ್ಲೆಲ್ಲೂ ಕಾಣುವ ಮೋಡಿ ನನ್ನ ತಾಗಿದೆ/

ಪೂರ್ತಿ ಹುಚ್ಚೋ...ಅರೆ ಮರುಳೋ,

ನಿರ್ಧರಿಸಿ ಚಿಕಿತ್ಸೆ ನೀಡಬೇಕಿರುವುದು ನೀನೆ ತಾನೆ//

ಎಷ್ಟು ಹೇಳಿದರೂ ಕಡಿಮೆಯೇ....

ಕೇಳಿದ್ದಕ್ಕಿಂತ ಹೆಚ್ಚು ಸಂತಸ,

ಆಶಿಸಿದ್ದಕ್ಕೂ ಮಿಗಿಲು ಉಲ್ಲಾಸ/

ತುಂಬಿ ಕೊಟ್ಟಿರುವ,

ಬೆಂಗಳೂರು ಎಂಬ ಮಾಯೆಗೆ ನೂರು ನಮನ//