09 February 2009

ಬಚ್ಚಿಟ್ಟ ಮಾತು...

ಹೇಳಲಾಗದಂತಾ ಮಾತು...ಎದೆಯ ಚಿಪ್ಪೊಳಗೆ ಕುಲಿತಿಳಿದು,

ಆಗಲೀ ಮುತ್ತಾಗಲಿ ಎಂದೆಂದಿಗೂ/

ಉಸಿರು ತುಂಬುವ ತಂಗಾಳಿ,

ಮೆಲ್ಲನೆ ಅದನೂ ಸೋಕಿ..ಸಾಗಲಿ ಸುಳಿದಾಡಲಿ ನಿನ್ನ ತಾಕಲಿ//

ನಾನು ಸತ್ತರೆ ಏನು? ಆ ಮುತ್ತಿನ ಒಡೆತನ ನಿನ್ನದೇ ತಾನೆ?

ನೀ ಹುಡುಕಿ ತೆಗೆಯಿವಿಯೋ....ಇಲ್ಲ ಸುಮ್ಮನಿರುವೆಯೋ ನಾನಂತೂ ಕಾಣೆ!

ದೊಡ್ಡದಾಯಿತು ಹಗಲು,

ಇರುಳಿಗೆ ಅದೇಕೋ ಕಿರಿದಾಗುವ ತೆವಲು/

ನೋಡು...ಅದೂ ನಿನ್ನಂತೆ ಕಡು ಸ್ವಾರ್ಥಿ,

ಬಯಸಿದಾಗ ಬರದೆ ಓಡೋಡಿ.....ತನಗನಿಸಿದಾಗ ಬಂದಿದ್ದು ಕಾಡೋದೇ ಆದರೆ ರಿವಾಜು-ರೀತಿ//

ಚಳಿ ಮುಗಿಯುವುದರ ಸಂಕೇತ ,

ಸದಾ ನಳನಳಿಸೋ ಮರಗಳು ಎಲೆಯುದುರಿ ಬೋಳಾಗೋ ಅಕಾಲ ದುಃಖ/

ನನಗಂತೂ ಇದು ಹೊಸತೇನಲ್ಲ,

ಬಗಲಿನಲ್ಲೇ ಭದ್ರವಾಗಿದೆ...ನಿರಾಕರಣೆಯ ನೋವಿನ ತಂಬಾಕು ತುಂಬಿಟ್ಟುಕೊಂಡಿರುವ ವಿಷಾದದ ಹುಕ್ಕ//

ಚಿಟ್ಟೆ ಕಾಣುವಷ್ಟು ಪ್ರಪಂಚ,

ಕಣ್ತುಂಬಿಸಿಕೊಳ್ಳೋ ಭಾಗ್ಯ ನಸು ನಗುವ ಹೂವಿಗಿಲ್ಲ/

ಆದರೇನು?

ತನ್ನಲ್ಲೇ ಬ್ರಂಹಾನ್ಡ ತೋರಿಸುವ ಚಾತುರ್ಯ ಅದಕಿದೆಯಲ್ಲ...ಥೇಟು ನಿನ್ನಂತೆ!//

No comments: