ಅದೇ ರಾತ್ರಿ,
ಅದೇ ಹಗಲು/
ಮತ್ತದೇ ನಿನ್ನ...ಕೇವಲ ನಿನ್ನದೇ ನೆನಪು,
ಅದನ್ನೇ ಮತ್ತೆ ಮತ್ತೆ ಹಾಡೋ ಕಿಸಬಾಯಿದಾಸ ನಾನು//
ಎಲ್ಲೂ ಕಾಣದ ಹುಚ್ಚು ಪ್ರೀತಿಯೇನಲ್ಲ,
ಬೇರೆಲ್ಲರಿಗಿಂತ ಖಂಡಿತ ಹೆಚ್ಚು ಪ್ರೀತಿ ಅನ್ನೋದು ಮಾತ್ರ ನಿಜ/
ಇಷ್ಟೆಲ್ಲಾ ಪರಿ ಪರಿಯಾಗಿ ಮೊರೆಯಿಡುತ್ತಿದ್ದರೂ,
ಇನ್ನೂ ಮೌನವಾಗೆ ಇದ್ದು ನೀಡುತಲೇ ಇರಬೇಕೆ ನನಗೆ ಸಾಜಾ//
ಇತ್ತೀಚಿಗೆ ನಾನಿರೋ ಊರಲ್ಲಿ ನೂರಾರು ಕೀಚಕರು,
ಮುಂದೊಮ್ಮೆಯ ಅನಾಹುತಗಳ ಊಹಿಸದೇ ಸಾವಿರಾರು ಮರಗಳ ಕೊಂದರು/
ಈಗೀಗ ಮನಸೊಳಗೂ ಬರಡು ಜಾಲಿಯಂತೆ ಹಬ್ಬುತಿರುವಾಗ,
ಹೊರಗೂ ಹಸಿರು ಮಾಯವಾಗಿ ಬೆಂಗಾಡಾದರೆ ಸಹಿಸೋದು ಹೇಗೆ?//
ಕಣ್ಬಿಟ್ಟೆ ಕನಸ ಕಾಣೋ ಮರುಳು,
ನನ್ನ ನೆನಪಾಗಿ ಮನಸು ಆರ್ದ್ರಗೊಂಡರೆ....ಬಾಳ ಯಾವುದೇ ತಿರುವಿನಲ್ಲಾದರೂ ಒಮ್ಮೆ ಹಿಂದೆ ಹೊರಳು/
ನಾನು ಅಲ್ಲೇ ನಿಂತು ಕಾಯುತಿರುತೀನಿ,
ಒಂದೇ-ಒಂದು ನಗೆಹೂ ಚಲ್ಲಿದರೂ ಸಾಕು...ನೆಲಕ್ಕೆ ಸೋಕುವ ಮುನ್ನ ಬೆಚ್ಚಗೆ ಬೊಗಸೆಯಲ್ಲಿ ಹಿಡಿಯುತೀನಿ//
08 February 2009
Subscribe to:
Post Comments (Atom)
No comments:
Post a Comment