ಹೂವಿನ ಎಸಳಿನ ನವಿರು,
ಜಿಂಕೆಯ ಕಣ್ಣಿನ ಚಲುವು....ಗಾಳಿಯಲಿ ದೂರದಿಂದ ತೇಲಿಬರುವ ಹಾಡು//
ಕನಸಲಿ ಸುಮ್ಮನೆ ಬಂದು,
ನೋಡುತ ನಿಂತು ನಿ ಚಿನ್ನ....ಎಡೆಬಿಡದೆ ಹೀಗೆ ನನ್ನ ಕಾಡು/
ಅದೇನೋ ಮೋಡಿ ನಿನ್ನ ನೆನಪಲೆ,ಅದ್ಯಾವ ಮಾಯೆ ಎಂದು ನಾ ಹಾಡಲಿ?
ಅದೆಲ್ಲೇ ಹೇಗೆ ನೀನಿದ್ದರೂ,
ನನ್ನ ಮನಸಲಿ ನೀನೆ...ನೀನೆ ಅದು ನೀನೆ ತಾನೆ?//
ಕಿರುಬೆರಳ ಮೊನೆಯಲ್ಲಂದು,
ತೋಳಿನ ಮೇಲೆ ನೀ ಗೀಚಿ...ಬರೆದಂತ ಚುಕ್ಕಿಯಿರದ ರಂಗೋಲಿ/
ಇಂದ್ಯಾಕೋ ಮನಸಲಿ ಮೂಡಿ,
ಮತ್ತೊಮ್ಮೆ ಮಾಡಿದೆ ಮೋಡಿ,
ನಿನ್ನ ನೆನಪ ಹೊತ್ತ ನಾವೆ ಹೀಗೆ ಸಾಗುತುರಲಿ//
No comments:
Post a Comment