ಖಾಲಿ ಕಾಗದ ಮನಸು,
ಕಲೆಯಾದರೂ ಪರವಾಗಿಲ್ಲ...ಒಲವಿನ ಕೆಂಪು ಶಾಯಿ ಅದರ ಮೇಲೆ ಸಿಡಿಸು/
ನಿರುಪಯೋಗಿ ಅಂತ ಎಸೆದರೂ ಚಿಂತೆಯಿಲ್ಲ ನಂತರ,
ಬೇಕಿಲ್ಲ ಈ ಪಾವಿತ್ರ್ಯದ ಸೋಗು...ಹುಸಿ ಅಂತರ//
ಸುಳಿವಿರದ ಸಂಚಿಗೆ,
ಮುಗುಳ್ನಗು ಸೂಸೊ ತುಟಿಯಂಚಿಗೆ/
ನಾನು ಬಲಿಯಾದದ್ದು ಹೌದು,
ತುಂಟ ಕಳೆಯ...ನಿನ್ನ ಕಣ್ಣ ಮಿಂಚಿಗೆ//
ಹುಸಿ ನಿರೀಕ್ಷೆಯ ಬೋಳೆ ದಾಸ,
ಹಳೆ ನೆನಪುಗಳ ಭಾವದ ಜೊತೆ ನಿತ್ಯ ಸಹವಾಸ/
ಗೆದ್ದೇ ಗೆಲ್ಲುವ ಅದಮ್ಯ ಭರವಸೆ,
ನಿನ್ನೊಲವಲಿ ಸೆರೆಯಾಗೊ ಅದುಮಿಟ್ಟ ಆಸೆ....ನನಗೆ//
No comments:
Post a Comment