04 February 2009

ಸತ್ತರೂ ವ್ಯಾಮೋಹಿ...

ಕರುಳು ತೂತಾಗುವಂತೆ ಕುಡಿಯೋಕೆ,
ಪಡಖಾನೆಗೆ ಹೋಗಬೇಕೆ?/
ಮನದ ಕಪಾಟಿನಲ್ಲಿ ಜತನವಾಗಿಟ್ಟಿರೋ ನೋವಿನ ಭರ್ತಿ ಶೀಷೆಯೇ ಇದೆಯಲ್ಲ....ಅದೇ ಸಾಲದೇ,
ಗುಟುಕು ಗುಟುಕಾಗಿ ಹೀರಿ ಅನುಕ್ಷಣ ಸಾಯೋಕೆ?//


ಕಳೆದುಕೊಳ್ಳಲಾದರೂ ಏನಿತ್ತು?,
ನಿನ್ನ ಕೈ ಬಡಿತ ನನ್ನ ಬಾಳ ಬಾಗಿಲ ಮೇಲೆ ಬೀಳೋತನಕ?/
ಗಳಿಸೋಕೆ ಇನ್ನೇನು ತಾನೆ ಉಳಿದಿದೆ,
ಸಂತೃಪ್ತ ನಾನು...ಜೊತೆಗೆ ನೀನಿರುವುದೇ ನಾಕ//


ಇನ್ನೇನೆ ನುಡಿದರೂ ಅದು ಕೃತಕ,
ಕಣ್ಣ ಭಾಷೆಯಲ್ಲಿ ಹೇಳಿದ ಒಂದೇ-ಒಂದು ಮಾತು ಸಾಕಿತ್ತು/
ಅರ್ಥ ಮಾಡಿಕೊಳ್ಳೋದು ಕಷ್ಟವೇನೂ ಆಗುತ್ತಿರಲಿಲ್ಲ,
ನಿನಗೂ ಇದ್ದಿದ್ದರೆ ನನ್ನಂತೆ ಒಲವ ಹಿಂದೋಡೊ ಹರಕತ್ತು//

No comments: