ಭಾವದ ನಡು ಕಡಲಲ್ಲಿ,
ದಿಕ್ಕೆಟ್ಟು ದೆಸೆ ತಪ್ಪಿದ ಅನಾಥ ದೋಣಿ/
ಎಲ್ಲರಿಗೆ ನಾ ಬೇಡವಾಗಿದ್ದರೂ,
ನನಗೆಲ್ಲರೂ ಬೇಕೇಬೇಕು....ಒಲವ ಮಂಜಿನಹನಿಯಲ್ಲಿ ತೋಯಿಸಲು//
ಪಿಸು ಮಾತಲೇ ಮನೆ ಕಟ್ಟಲ?
ನಸುನಗುವಲ್ಲೇ ಅದ ಶೃಂಗರಿಸಲ?/
ಆ ಮನೆ ನಿನಗಿಷ್ಟವಾಗಿ ತುಸು ನಕ್ಕರೂ ಸಾಕು....
ನನ್ನ ಈ ಕನಸು ಧನ್ಯ//
ನಾಳೆ ಬರಲಿರುವ ದಾರಿ ಒಂದು ಕನಸು,
ಕಳೆದು ಹೋಗಿರೋ ನೆನ್ನೆಗಳಷ್ಟೇ ಸತ್ಯ ಹಾಗು ಬಾಳಿನ ಸೊಗಸು/
ನೆನಪಿನ ಕೊಂಬೆಗೆ ಕಟ್ಟಿದ ಉಯ್ಯಾಲೆ ನನ್ನ ಮನಸು,
ಅದ್ರ ಮೇಲೆ ತೂಗೋದು ಕೇವಲ ನೀನು....ನಿನ್ನ ಮನಸು//
ಮನ ಮುದಗೊಂಡಾಗ ನಗಬೇಕು,
ದುಃಖಒತ್ತರಿಸಿ ಬಂದಾಗ ಅಳಬೇಕು/
ಭಾವನೆಗಳಿಗೂ ವೇಳಾಪಟ್ಟಿ ಹಾಕೋ ಹರಕತ್ತು ಏಕೆ?
ಪ್ರೇಮ ನಿವೇದನೆಗೂ ಪ್ರತ್ಯೇಕ ದಿನದ ಹಂಗಾದರೂ ಏಕೆ?//
ಆದರೂ....ನಿಮ್ಮ ಪ್ರೀತಿ ನಿಮ್ಮ ಕೈಸೇರಲಿ
No comments:
Post a Comment