21 February 2009

ಕನಸು...

ಮೋಹಜಾಲದಲ್ಲಿ ನನ್ನ...ಜೇಡನಂತೆ ಸಿಲುಕಿಸೊ ಮುನ್ನ,

ಹನಿ ದಯೆ ಬರಲಿಲ್ಲವೇ?/

ಒಪ್ಪಿ ಬಂದ ಬಂಧಿ ನಾನು...ಒಲವ ಫಾಶಿ ಹಾಕಿದರೂನು,

ನಗುತಲೆ ಸಹಿಸುವೆನು//

ಗುಟ್ಟಿನ್ನೇನೂ ಉಳಿಯದಾಗಿದೆ,

ನಿಜವೆಲ್ಲ ಬೆತ್ತಲಾಗಿದೆ/

ಹುಸಿ ಮೌನ ಇನ್ನು ಬೇಕೆಬೇಕ?,

ಇನ್ನೂ ನೀ ನನ್ನ ಕಾಡಬೇಕ?//

ಒಲವಿನ ಹಿನ್ನೀರಲ್ಲಿ ತೇಲುವ ಒಂಟಿ ದೋಣಿ ಹೊಯ್ದಾಟ,

ಕಿತ್ತ ನೋವಿದ್ದರೂ ನಗುತಲೆ ವಿಷಾದ ಮರೆವ ಮಲ್ಲಿಗೆಯ ಅರೆ ಬಿರಿತ/

ಗಿರಿ ನೆತ್ತಿಗೆ ಮುತ್ತಿಡೋ ಮೇಘದ ತುಡಿತ,

ಮಧುರವಾಗಿ ಉಲಿವ ಹಕ್ಕಿಯ ಹೃದಯದ ಮಿಡಿತ...ನನಗಿಷ್ಟ..ನಿನ್ನಷ್ಟೆ//

ಮಲಗು ನೀ ಮೋಹಕವಾಗಿ...ಪುಟ್ಟ ಹಸುಳೆಯಂತೆ,

ಅದರಲಿ ಬರುವ ಕನಸು ನನ್ನವೇ...ಕೇವಲ ನನ್ನವೇ ಆಗಿರಲಿ/

ಬಾಳ ದೀರ್ಘ ಪಯಣದ ಹಾದೀಲಿ ನಿನ್ನ ಆಯ್ಕೆ ಇನ್ಯಾರೇ ಆಗಿದ್ದರೂ,

ನನ್ನ ನೆನಪಾದಾಗೊಮ್ಮೆ....ತುಟಿಯಂಚಲಿ ಹಾಗೆ ಕಿರು ನಗೆ ಬರಲಿ////

No comments: