27 June 2010

ನೀನಿರದೆ ಏನೂ ಇಲ್ಲ...

ನಿನ್ನ ಕನಸುಗಳನ್ನು ಕೊಡು,
ಅವಕ್ಕೆ ಬಣ್ಣ ಹಚ್ಚಿ ಮರಳಿಸುತ್ತೇನೆ....
ಬತ್ತಿರುವ ಭಾವಗಳನ್ನು ಕೊಡು,
ಅವುಗಳನ್ನು ನವಿರಾಗಿ ಕೆರಳಿಸುತ್ತೇನೆ/
ಮುದುಡಿದ ಮೊಗ್ಗುಗಳನು ಮತ್ತೆ ಅರಳಿಸೋಣ ಬಾ,
ಬಾಡಿರುವ ಹೂಗಳ ಮೊಗದಲೂ ಕಳೆಯ ಮಳೆ ಸುರಿಸೋಣ ಬಾ//


ನೀನಿರದ ನೆನಪಿನ ಚಿತ್ರಗಳಲಿ ಬಣ್ಣವಿಲ್ಲ...
ನೀ ಬರದ ಕನಸುಗಳ ಆವರಣದಲಿ ಸಂತಸದ ರಂಗಿಲ್ಲ/
ವಿರಹದ ನೋವನ್ನು ಮತ್ತೊಮ್ಮೆ ಕೊಡಲಾದರೂ ನೀ ಹೀಗೆಯೇ ಬರುತ್ತಿರು...
ಆ ನೋವಿಗೆ ಒಲವಿನ ಮುಲಾಮು ಸವರಲಾದರೂ ನೀ ಹೀಗೆ ಬರುತ್ತಲೇ ಇರು,
ನಿನ್ನ ನಗುವ ನನ್ನೆದೆಯಲಿ ಹೀಗೆ ಸುರಿಯತ್ತಲೇ ಇರು//


ಕಮರಿದ ಕಣ್ಕಾಂತಿಯಲಿ ಹತಾಶೆಯ ಹೊಳಪೇಕೆ?
ಬಾಡಿದ ತುಟಿಗಳಲಿ ಬಿಳುಚಿದ ಬಿಳುಪೇಕೆ?/
ನೀ ನಿಟ್ಟುಸಿರಿಟ್ಟರೆ ನಿಂತೀತು ನನ್ನುಸಿರು.
ನಗುತಲೆ ಇರಬೇಕು ನೀನು ಅಳಿದು ಹೋದರೂನು ನನ್ನುಸಿರು//ನಿನ್ನೆದೆಯಲಿ ನನ್ನೊಲವಿನ ರಾಗ,
ನಿನ್ನ ನುಡಿಯಲಿ ನನ್ನದೇ ಮನದ ಹಾಡು/
ಸದಾ ಮೌನವಾಗಿ ಹರಿಯುತ್ತಲೇ ಇರುವಾಗ,
ಚಿಂತೆಯೇಕೆ? ಇನ್ನಾದರೂ ಚೂರು ನಕ್ಕುಬಿಡು//

26 June 2010

ನೀನಿಲ್ಲದೆ...

ನೀನೆಷ್ಟೇ ದೂರವಿಟ್ಟರೂ ಅಗಲಿ ಅರೆಕ್ಷಣ ಇರಲಾರೆ,
ನಿನ್ನೆದುರೆ ಸುಳಿವೆ....ಆದರೆ ನಿನಗೆ ಕಾಣಲಾರೆ,
ನಿನ್ನುಸಿರಲೇ ಅವಿತಿರುವೆ....ಆದರೂ ನಿನ್ನ ಕಾಡಲಾರೆ/
ನಿನ್ನೆಡೆಗಿನ ಹಾದಿ ಅದೆಷ್ಟೇ ದೂರ ಆದರೇನು?
ಬರಿಗಾಲಲ್ಲೇ ಬಂದೇನು....
ನಿನ್ನ ಸಾಮಿಪ್ಯಕ್ಕಾಗಿ ಕಾತರಿಸಿಯೇನು//

23 June 2010

ನೆನಪ ಚಿತ್ರ ಮುಸುಕಲ್ಲ....

ನೆನಪಿನ ಚಿತ್ರಗಳಿಗೆ ಕಟ್ಟು ಹಾಕಿಸಿ,
ಮನದ ಭಿತ್ತಿಯ ಮೇಲೆ ಸಾಲಾಗಿ ತೂಗು ಹಾಕಿದ್ದೇನೆ/
ತಪ್ಪಿ ಎಲ್ಲಾದರೂ ಈ ಕಡೆಗೊಮ್ಮೆ ಸುಳಿದಾಗ...ಮರೆಯದೆ ಒಮ್ಮೆ ಅದರೊಳಗೆ ಇಣುಕಿ ನೋಡು,
ಪ್ರತಿ ಗಾಜಿನಲೂ ನಿನ್ನದೇ ಪ್ರತಿಬಿಂಬ ಕಂಡೀತು//

13 June 2010

ಮೆಲುವಾಗಿ....

ಮೋಡ ಹೊದಿಸಿದ ಚಾದರ ಹೊದ್ದ ಮಿಣುಕು ತಾರೆಗಳೆ,
ಛಳಿಯ ಇಳಿರಾತ್ರಿಯಲಿ/
ನನ್ನೋಳವಿಗೂ ಅದನು ಸ್ವಲ್ಪ ಹೊದಿಸಿ,
ಆ ಎದೆಯ ಅಂಗಳಕೂ ಇಷ್ಟು ಬೆಚ್ಚನೆಯ ಬೆಳಕ ಹರಿಸಿ//ಇಬ್ಬನಿ ಪೋಣಿಸಿದ ಮುಂಜಾವ ಪಾರಿಜಾತ ಮೊಗ್ಗುಗಳೆ/
ನನ್ನೆದೆ ನಿಧಿಯ ತುಟಿಯ ಮೆಲುವಾಗಿ ಮುದ್ದಿಸಿ,
ಆ ಅಪರೂಪದ ಕಂಗಳ ಬರಿ ನೋಟದಲೆ ಚುಂಬಿಸಿ//

11 June 2010

ninnade...

ಮೌನದಲೆಗಳ ಗಾನ,
ನವಿರು ಮಳೆಹನಿಯ ಸ್ನಾನ/
ಮೋಹಕ ಪರಿಮಳದ ಪಾರಿಜಾತ,
ಅವೆಲ್ಲದರಿಂದ ಮಿಗಿಲಾಗಿ ನೀನೆ ನನಗಿಷ್ಟ...ಈಗಲಾದರೂ ಕೇಳಿಸಿತ?//

07 June 2010

ನಿನ್ನೊಲವು....

ಆಗ ತಾನೇ ಅರಳಿದ ಪಾರಿಜಾತದಷ್ಟು ಪರಿಮಳ,
ಮುಟ್ಟಿದರೂ ಕರಗಿ ಕೈಜಾರೋ ಇಬ್ಬನಿಯಷ್ಟು ಶೀತಲ/
ನಿನ್ನ ಉಸಿರ ಬೆಚ್ಚನೆ ಅನುಭೂತಿ,
ನನ್ನೊಳಗೆ ರೋಮಾಂಚನ ಹುಟ್ಟಿಸುವ ನಿನ್ನೆಡೆಗಿನ ಪ್ರೀತಿ//


ಹೇಳಲಾಗದ ಎದೆಯೊಳಗಿನ ಮಾತ ಸುಮ್ಮನೆ ಕೇಳಿಸಿಕೋ,
ಕೇಳಲಾಗದ ಮನದ ಮಿಡಿತವ ಹಾಗೆಯೇ ಊಹಿಸಿಕೋ/
ಊಹೆಗೂ ನಿಲುಕದ್ದು ನಿನ್ನೆಡೆಗಿನ ನನ್ನೊಲವು,
ಮಾತಿನಲ್ಲಿ ಹೇಗೆ ವಿವರಿಸಲಿ?
ನಾ ಕಾಣುವ ಕನಸ ಬಣ್ಣ ಹಲವು//


ಮುತ್ತಿನ ಹಂಗಿಲ್ಲ,
ಮಾತಿನ ಹರಕತ್ತಿಲ್ಲ/
ಆದರೂ ಮತ್ತು ಹುಟ್ಟಿಸಿದೆ,
ಮೆತ್ತಗೆ ಆವರಿಸಿದೆ...
ಒಲವೆ,,,ನಿನ್ನೊಲವು//

06 June 2010

थाड़प...

कथा थो हमसे कुछ हुई न थी,
नजाने आपने हमको क्यों भुलादिया/
अकेले थो हम पहलेसे ही थे,
अचा हुवा आपने अहसास दिलादिया//प्यार से बड़ा कोई धोका नहीं होता,
बे वाफी सेव बड़ा कोई तौफा नहीं होता/
कभी न तुक्रना सच्ची वफाई को,
क्यों की इस्ससे बड़ा कोई भरोसा नहीं होता//बेहद तदापाताथा,
फिर भी अपना था वो जुदाई का ग़म/
आकिर वो भी कोखे हुवा जुदा,
टीक आप ही की ताराहा//