07 June 2010

ನಿನ್ನೊಲವು....

ಆಗ ತಾನೇ ಅರಳಿದ ಪಾರಿಜಾತದಷ್ಟು ಪರಿಮಳ,
ಮುಟ್ಟಿದರೂ ಕರಗಿ ಕೈಜಾರೋ ಇಬ್ಬನಿಯಷ್ಟು ಶೀತಲ/
ನಿನ್ನ ಉಸಿರ ಬೆಚ್ಚನೆ ಅನುಭೂತಿ,
ನನ್ನೊಳಗೆ ರೋಮಾಂಚನ ಹುಟ್ಟಿಸುವ ನಿನ್ನೆಡೆಗಿನ ಪ್ರೀತಿ//


ಹೇಳಲಾಗದ ಎದೆಯೊಳಗಿನ ಮಾತ ಸುಮ್ಮನೆ ಕೇಳಿಸಿಕೋ,
ಕೇಳಲಾಗದ ಮನದ ಮಿಡಿತವ ಹಾಗೆಯೇ ಊಹಿಸಿಕೋ/
ಊಹೆಗೂ ನಿಲುಕದ್ದು ನಿನ್ನೆಡೆಗಿನ ನನ್ನೊಲವು,
ಮಾತಿನಲ್ಲಿ ಹೇಗೆ ವಿವರಿಸಲಿ?
ನಾ ಕಾಣುವ ಕನಸ ಬಣ್ಣ ಹಲವು//


ಮುತ್ತಿನ ಹಂಗಿಲ್ಲ,
ಮಾತಿನ ಹರಕತ್ತಿಲ್ಲ/
ಆದರೂ ಮತ್ತು ಹುಟ್ಟಿಸಿದೆ,
ಮೆತ್ತಗೆ ಆವರಿಸಿದೆ...
ಒಲವೆ,,,ನಿನ್ನೊಲವು//

No comments: