ಮುಗಿಲ ಮುದ್ದಿಸಿದ ಗಾಳಿ ನೆಲಕೂ ಮೋಡದ ಮುತ್ತುಗಳನು ದಾಟಿಸಿತು,
ಜೊತೆ ಸುರಿದ ಮಳೆಹನಿ ಧರೆಯ ಎದೆಯಲೂ ಅನುರಾಗದಲೆಯ ಮೀಟಿಸಿತು./
ಇಳೆಯ ಗಾಢವಾಗಿ ಚುಂಬಿಸಿದ ಗಾಳಿಗೆ ಈ ಇರುಳೆಲ್ಲಿ ನಿದ್ದೆ?,
ನಾಚಿದ ಭೂಮಿಯ ಮೈಯಂತೂ ಅಂಗುಲಂಗುಲವೂ ಒದ್ದೆ//
ನಿನ್ನ ಕನಸಲ್ಲೆ ನನ್ನ ನಿತ್ಯದ ಜಾಗರಣೆ,
ಹುಡುಕುವವರಿಗೆ ನಾನು ನಿನ್ನ ಕಣ್ಕನ್ನಡಿಯಲಿ ಸಿಗದಿದ್ದರೆ ನನ್ನಾಣೆ./
ನಿನ್ನ ಭಾವದರಮನೆಯಲ್ಲಿ ನಾ ಸದಾ ಬಂಧಿ,
ನನ್ನ ಖಾಯಂ ವಿಳಾಸ ನಿನ್ನ ಬೆಚ್ಚನೆ ಎದೆಯೆ ತಾನೆ?...
ಅಲ್ಲೆಂದೆಂದೂ ನಾನು ಗರ್ಭಗುಡಿಯೆದುರು ಮಂಡಿಯೂರಿದ ನಂದಿ.//
-🙂