18 February 2009

ಕೇಳದೆ?

ಚಿಮ್ಮುತಿದೆ ಹೊರ ಹೊಮ್ಮುತಿದೆ ಅನುರಾಗದ ಚಿಲುಮೆ,

ತಂಪೆರೆವ ಮಳೆ ಬಾರದಿರೋ ಎದೆ ಭಾವದ ಕುಲುಮೆ/

ಬೀಸುವ ಗಾಳಿಯ ಪಿಸುದನಿ ಕೇಳೆಯ?

ಮನದ ಹುನ್ನಾರದ ಕಾತರ ಕಾಣೆಯ?//

ವೇದನೆಯ ಅಲೆಗಳ ಮೇಲೆ ನಾ ತೇಲುವ ನಾವೆ,

ನೀನಿರದ ಪಯಣದ ಕೊನೆಗೆ ಗುರಿ ಕೇವಲ ಸಾವೆ/

ಮುಳುಗುವ ಮೋಹದ ಒಡಕಿನ ಭಯವಿದೆ,

ನಿನ್ನೆದೆ ಆಸರೆ ನೆರಳಿನ ಮೊರೆಯಿದೆ//

ನಿನ್ನ ಜೊತೆಯೇ ಬೇಕು ಬಾಳಿಗೆ/

ಮನದ ಮನೆಯ ಕೊಡುವೆಯ ಬಾಡಿಗೆ?//