14 February 2009

ಉಸಿರಾಗುಳಿ ನನ್ನಲಿ...

ಮುಟ್ಟಿಗೊತ್ತಿಲ್ಲ,

ಮುತ್ತಿಡುವ ಮಾತೆ ಹುಟ್ಟಿಲ್ಲ/

ಎದುರಿಂದ ದೂರಾದರೂನು...ನಿನ್ನ ಕನಸ ಕಾಣೋದೆ ನನಗಿಷ್ಟ,

ನಿನ್ನುಸಿರ ಕಂಪಲ್ಲಿ ತೇಲೋದೆ ಮನದ ಅಭೀಷ್ಟ//

ಮುಗಿಲಿನಿಂದ ಉದುರೋ ಇಬ್ಬನಿಯ ಹನಿ,

ಕೇಳುತ ಬೆಳಕಿನೊಡೆಯನ ಪಿಸುದನಿ/

ಅವನದೇ ರಶ್ಮಿಗೆ,

ಮತ್ತಷ್ಟು ರಂಗಾಯಿತು//

ಕೂಡಿಟ್ಟ ಕನಸಿನ ಖಜಾನೆ,

ಲೂಟಿ ಆಗಿರೋದು ನಿಜಾನೆ/

ಒಲವು ನಿನ್ನೊಳಗೂ ಅಂತರ್ಗಾಮಿ ಎಂಬ ಅರಿವು ನನಗಿದೆ,

ಆದರೆ ನಿನ್ನ ಮನಸನರಿಯೋದಾದರೂ ಹೇಗೆ?//

ಮೌನ ಕದಡಿದ ಪಿಸುಮಾತು,

ಹೇಳೋದಿನ್ನೇನೂ ಉಳಿದಿಲ್ಲ/

ಉಸಿರಾಗುಳಿದರೆ ಸಾಕು,

ಇದಕ್ಕಿಂತ ಹೆಚ್ಚು ಬೇಡಿಕೆ....ಇಲ್ಲವೇ ಇಲ್ಲ//

No comments: