ಹನಿ ಹನಿಯಲ್ಲೂ ಒಲವ ಹೊತ್ತು ನಿರಂತರ ಸಾಗರಮುಖಿಯಾಗೋ ನದಿಗಿರದ ಬೇಸರ,
ನಿತ್ಯ ಮೂಡುತ ಗೋಗೆರೆದರೂ ಭೂಮಿ ಮನವ ಗೆಲ್ಲಲಾಗದ ನೇಸರ/
ಇವರಿಬ್ಬರೇ ಸ್ಫೂರ್ತಿ,
ನಿನ್ನ ಅಸಡ್ಡೆಯ ಮೌನಕ್ಕೂ ತಲೆ ಕೆಡಿಸಿಕೊಳ್ಳದ....ನನ್ನ ಛಲ ಬಿಡದ ಪ್ರಯತ್ನಕ್ಕೆ//
ಉದುರಿದ ಮಾತೆಲ್ಲ ಮುತ್ತಾಗುವಂತಿದ್ದರೆ?
ಮೂಡಿದ ಬೆವರ ಸಾಲೆ ಮೂಗ ನತ್ತಾಗುವಂತಿದ್ದರೆ?/
ಸಾಕೆ ಸಾಕು,
ಅದರಲ್ಲೇ ನಿನ್ನ ಚಲುವು ಪರಿಪೂರ್ಣ//
ಒಲವೆನ್ನೋದು ಒಂದು ಕಾಯಿಲೆ,
ನೀನೆ ಹೇಳು? ಇನ್ನೆಷ್ಟೂ ಅಂತ ನಾನಾದರೂ ಕಾಯಲಿ?/
ನರಳಿ ನರಳಿ ನನಗೂ ಸಾಕಾಗಿ ಹೋಗಿದೆ....
ಪ್ರೀತಿಯ ನೆರಳಿನಾಸರೆ ತುರ್ತಾಗಿ ಬೇಕಿದೆ//
No comments:
Post a Comment