22 April 2011
'ದಿಗ್ವಿಜಯಾಸ್ತ್ರ' ಬಿಡುತ್ತಿರುವ ಕಾಣದ 'ಕೈ'
ಜನಲೋಕಪಾಲಕ್ಕೆ ಲೋಕಾಪವಾದ ತರುವ ಯತ್ನದಲ್ಲಿ ಆಳುವ ಮಂದಿ ನಿರತ,ಒಂದೊಮ್ಮೆ ಶಾಸನ ಜಾರಿಯಾದರೆ ಇವಕ್ಕೆಲ್ಲಿ ಉಳಿಗಾಲ? ಆದರೆ ಅದನ್ನ ಆಗದಂತಾಗಿಸಲು ಬೆನ್ನಿನ ಹಿಂದಿಂದ 'ದಿಗ್ವಿಜಯಾಸ್ತ್ರ' ಬಿಡುತ್ತಿರುವ ಕಾಣದ 'ಕೈ'ಯೊಂದು ಸಮಾನಾಸಕ್ತ ಖದೀಮರ ಜೊತೆ ಸೇರಿ ಕುರಿಮಂದೆಯಂತಹ ಜನತೆಯ ಕಿವಿ ಮೇಲೆ 'ಕಮಲದ' ಹೂ ಮಡಗುವ ಯತ್ನದಲ್ಲಿದೆ...ಹೊಲಸು ರಾಜಕೀಯ.ಹೇಸಿಗೆಯೆಂದರೆ ನಾಯೊಂದು ಬೊಗಳಿದರೂ ಅದನ್ನ ಮಹಾನ್ 'ದಿಗ್ವಿಜಯ'ವಾಣಿಯಂತೆ ಬಿಂಬಿಸುವ,ಕಂಡ ಕಂಡ ಅಂಡೆಪಿರ್ಕಿಗಳ ಹತಾಶೆಯ ಊಳಿಗೆಲ್ಲ ಮೈಕು ಹಿಡಿದು ಸ್ವಯಂ ರೋಮಾಂಚಿತರಾಗುತ್ತಿರುವ ನಮ್ಮ ಮಾಧ್ಯಮಗಳು ಸಂತೆಗೆ ಮುಂಚೆಯೆ ಮೂರು ಕಾಸಿಗೆ ಬಿಕರಿ ಆಗಿರುವುದು...
ರಾಗ ಹಳೆಯದೆ...
ಚಂದ್ರ ಬರದ ಇರುಳಿನಲ್ಲೂ ನನ್ನ ಎದೆಯಂಗಳ ಮಾತ್ರ....
ನಿರಂತರ ಬೆಳಕಲ್ಲಿ ಮಿಂದಿತು ನಿನ್ನ ನಗೆಯ ದೀಪದ ಕೃಪೆಯಿಂದ,
ಇರುಳು ಕದ್ದ ಹಗಲಿನ ನೆಮ್ಮದಿಯೆ...
ನಿದಿರೆಯೆಡೆಯಲ್ಲಿ ಬಂದು ಕಾಡುವ ಕನಸು/
ನಿತ್ಯವೂ ನೀನೆ ಅದರ ಹುಟ್ಟಿಗೆ ಕಾರಣವಾಗಿ...
ಇನ್ನಷ್ಟು ಸಂತಸದ ಮಳೆಯ ನನ್ನೆದೆಯಲ್ಲಿ ಸುರಿಸು,
ಬಾ ಇನ್ನಷ್ಟು ಮನಸ ಆರ್ದ್ರವಾಗಿಸು...
ನೀನಿತ್ತಿದ್ದ ಖುಷಿಯ ಕ್ಷಣಗಳನ್ನ ಮೆಲಕು ಹಾಕುತ್ತಲೆ ಅರಿವಿಗೆ ಬಾರದಂತೆ,
ನನ್ನ ಬಾಳು ಸಂತಸದ ಜಾತ್ರೆಯಲ್ಲಿ ಕಳೆದೆಹೋಗಿದೆ//
ಮೆಲ್ಲ ಮೆಲ್ಲ ನೀನಿಟ್ಟ ಹೆಜ್ಜೆಯ ಗುರುತುಗಳಷ್ಟೆ ಈಗ ಉಳಿದಿರುವ ನನ್ನ ಹೃದಯದಲ್ಲಿ....
ನಿನ್ನ ನೆನಪಿನ ಪರಿಮಳವೂ ಉಳಿದೆ ಹೋಗಿದೆ,
ಹೊಳೆವ ಬಾನಂಚಿನ ಚಂದಿರನನ್ನೂ ಮಂಕಾಗಿಸುವ,
ನಿನ್ನೊಂದು ಮುಗುಳ್ನಗೆಯನ್ನ ಮತ್ತೆ ಕಾಣಲು ಮನಸು ಕಾತರಿಸುತಿದೆ/
ಬಿಡುವಿರದ ಇರುಳ ಕನಸುಗಳ ಜಾತ್ರೆಯಲ್ಲಿ ನಿತ್ಯ ನೀನೆ ಉತ್ಸವ ಮೂರ್ತಿ...
ಸರಿ ಹೊತ್ತಲ್ಲಿ ಒಡೆದ ನಿದ್ದೆಯಲ್ಲಿ ಅಗಲಿಕೆಯ ನೋವಿನ ಕಹಿ ಮಡುಗಟ್ಟಿತ್ತು,
ಕಾಲಾತೀತನಾಗಿ-ದೇಶಾತೀತನೂ ಆಗಿ...
ಅಲೆಯುತ್ತ ದಿಕ್ಕು ತಪ್ಪಿದ ನನ್ನ ಉಡಾಳ ಬಾಳಿಗೆ ನೀನು ತಡೆಬೇಲಿ ಹಾಕಿದ್ದರೆ ಖುಷಿ ಖಂಡಿತ ಹುಟ್ಟುತ್ತಿತ್ತು//
ಹಗಲಿಗೆ ಬೆಳಕಿನ ಸ್ನಾನ ಮಾಡಿಸುವ ಸೂರ್ಯ....
ಸಂಜೆ ಮರಳಿ ಹೋಗುವ ಮುನ್ನ ಭೂಮಿಯ ತುಟಿ ಚುಂಬಿಸಿ ಅವಳ ಕೆನ್ನೆಯಲ್ಲಿ ಕೆಂಪು ಹೊಮ್ಮಿಸಿದ,
ಕತ್ತಲ ಕಾಡಿಗೆ ಹಚ್ಚಿಕೊಳ್ಳುವ ಅವಳ ಕಂಗಳಲ್ಲಿ ನಾಚಿಕೆ ತುಳುಕಿಸಿದ/
ಮುತ್ತು ಸುರಿವ ಮೋಡಗಳ ಮೋಹಕ ಪ್ರೀತಿಗೆ....
ಧರಿತ್ರಿ ನಾಚಿ ನೀರಾದಳು,
ಬೆಟ್ಟ ಸಾಲುಗಳ ಬೆತ್ತಲಿನ ಉಬ್ಬು ತಗ್ಗುಗಳಲ್ಲಿ ಉಕ್ಕಿದ ಸಂತಸದ ಬುಗ್ಗೆ ....
ಸಂಕೋಚದ ಎಲ್ಲೆ ಮೀರಿ ನೆಲದೆದೆಯಲ್ಲಿ ನದಿಯಾಗಿ ಹರಿದಾಗ ಇಳೆ ಸೋತು ಶರಣಾದಳು//

21 April 2011
ಮಳೆ ಹಾಡು...
ಮಳೆಯಿಂದ ಮನವೂ ಪ್ರಫುಲ್ಲ,
ಆದರೆ ಕೊರತೆ ಇಷ್ಟೆ...
ಉಕ್ಕುತ್ತಿರುವ ಈ ಸಂತಸದ ಹೊನಲಲ್ಲಿ ಮೀಯಲು ಜೊತೆಗೆ ನೀನಿಲ್ಲಿಲ್ಲ/
ಖಾಲಿ ಪುಟಗಳ ತುಂಬಾ ನೀನೆರಚಿದ್ದ ಒಲವಿನ ಹಲವು ರಂಗು,
ಮನದ ಪುಸ್ತಕದ ತುಂಬಾ ಚಿತ್ತಾರಗಳ ಮೂಡಿಸಿವೆ...
ಗಾಳಿ ಗೀಚಿದ ಸಾಲಿಗೆ,ಮೋಡ ಹೊಸೆದ ರಾಗಕೆ.....
ಇಳೆಯ ಇನಿದನಿ ಬೆರೆತು ,ಮಳೆಯ ಹಾಡಾಯ್ತು//
ಹನಿಹನಿಯಲ್ಲೂ ಒಲವ ಸಿಂಚನ,ಭೂಮಿ ಮೇಲೆ ಬಾನಿಗೆಷ್ಟು ಪ್ರೀತಿ....
ಎಷ್ಟು ಸೊಗಸಾಗಿರುತ್ತಿತ್ತು ಬಾಳು,
ನಾನೂ ನನ್ನೆದೆಯ ಮೋಹವನ್ನೆಲ್ಲ ನಿನ್ನೆದೆಗೆ ದಾಟಿಸುವಂತಿದ್ದರೆ....
ಅದೇ ರೀತಿ/
ಮೋಡ ಕವಿದ ಆಗಸದ ಆಚೆ ಕಡೆ ಅಡಗಿ ಕಣ್ಣಾಮುಚ್ಚಾಲೆಯಾಡುವ ಚಂದಿರನಿಗೂ,
ಭೂಮಿಯ ಒಲವನ್ನು ಗೆಲ್ಲುವ ಒಳಆಸೆಯಿದೆ...
ಗಾಳಿ ಸೋಕಿದ ಮೋಡಗಳು ಇಳೆಯ ಅಂದದ ಕಥೆ ಕೇಳಿ ರೋಮಾಂಚಿತವಾಗಿ,
ಅವಳೊಡನೆ ಸೇರಲು ಕಾತರದಿಂದ ಧರೆಗಿಳಿದು ಬಂದವು//
ತೆಂಕಣ ಸುಳಿಗಾಳಿಗೆ ಕಡಲು ಬರಸೆಳೆದು ಮುತ್ತನಿತ್ತಾಗ,
ನಮ್ಮೂರಲ್ಲಿ ಬಾನು ಬಿರಿದು ಭುವಿಗೆ ಮಳೆ ಮಲ್ಲಿಗೆ ಸುರಿಯುತ್ತಿತ್ತು....
ನಿಮ್ಮೂರಲ್ಲೂ ಹಾಗೇನ?,
ಮುಗಿಲು ಮುತ್ತಿಟ್ಟ ಭೂಮಿಯೆದೆಯಂಗಳದಿಂದ ಹೊರಹೊಮ್ಮಿದ ಪರಿಮಳ,
ನಿನ್ನ ಮೈಗಂಧದಂತೆ ಹಿತವಾಗಿತ್ತು/
ಮನಸನ್ನರಳಿಸಿದ ಮಳೆ ಹನಿಗಳಲ್ಲಿ ಅಡಗಿದ ತಂಪು,
ನನಗೆ ನಿನ್ನೊಲವನ್ನ ಗಾಢವಾಗಿ ನೆನಪಿಸಿ ರೋಮಾಂಚಿತನನ್ನಾಗಿಸಿತು..
ಮೋಡ ಗೀಚಿದ ಮಳೆ ಹಾಡಿದ ಹನಿಗಳ ಹಾಡಿನಲ್ಲಿ,
ನಿನ್ನ ಗುಂಗಲೆ ಸದಾ ಮಗ್ನ ನನ್ನ ಮನಸಿಗೆ......
ಕೇಳಿ ಬಂದದ್ದು - ನನ್ನವೆರಡು ಕಿವಿ ತುಂಬಿಸಿದ್ದು ಕೇವಲ ನಿನ್ನೆದೆಯ ಸುನಾದ//

Subscribe to:
Posts (Atom)