31 January 2013

"ನೇರ"ವಾಗಿ ಮೂರೂ"ಬಿಟ್ಟ" ಈ ಗತಿಗೆಟ್ಟ "ದಿಟ್ಟ"ರು ಊರಿಗೇ ದೊಡ್ಡವರು......


ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಕರುನಾಡಿನಲ್ಲಿ ನಡೆಯುತ್ತಿರುವ ಕೆಲವು ಪತರಕರ್ತ ಪರದೇಶಿಗಳ ನಿತ್ಯ ನಾಟಕಕ್ಕೆ ಕೊನೆಯೆ ಇದ್ದಂತೆ ಕಾಣುತ್ತಿಲ್ಲ. ಕರಿಮುಸುಡಿಯ ಪದ್ಮನಾಭನಗರದ ಮುಸುವನ ಕರ ಪತ್ರಿಕೆ, ರಾಣಿರಸ್ತೆಯ ಇಶ್ಶಿಶ್ಶಿ ಭಟ್ಟನ ಕಪ್ರ, ಅವನದ್ದೆ ಸಂಪಾದಕತ್ವದ ಕ್ರೆಸಂಟ್ ರಸ್ತೆಯ ಪಿಸುಂಟು ಸುವರ್ಣಕ್ಕ, ಹಾಕಿ ಮೈದಾನದ ಹತ್ತಿರದ ಹಾಕಿದ್ದನ್ನೆ ಹಾಕಿ ತೌಡುಕುಟ್ಟುವ ಟಿವಿ ಒಂಬತ್ತು ಇವೆಲ್ಲ ಪೈಪೋಟಿಗೆ ಬಿದ್ದವಂತೆ ಕನ್ನಡಿಗ ಓದುಗ ಹಾಗೂ ವೀಕ್ಷಕರ ಅಭಿರುಚಿಯನ್ನ ಮನಸಾ ಕೆಡಿಸುತ್ತಿವೆ. ಇವರು ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರಾ! ಅಂತ ನಾವು ಓದುಗರೂ/ ನೋಡುಗರು ಕಣ್ ಕಣ್ ಬಿಡುವ ಹೊತ್ತಿನಲ್ಲಿ ಈ ಗಡವರೆಲ್ಲ ಇನ್ನಷ್ಟು ಕೆಳಕ್ಕಿಳಿದು "ನಾವು ಇದಕ್ಕಿಂತ ಕೆಳ ಮಟ್ಟಕ್ಕಿಳಿಯಬಲ್ಲೆವು" ಅನ್ನೋದನ್ನ ನಾಚಿಕೆ ಬಿಟ್ಟು ಸಾಬೀತು ಮಾಡಿಯಾಗಿರುತ್ತದೆ. ಈ ಒಂದು ವಿಷಯದಲ್ಲಿ ಇವರೆಲ್ಲರೂ ತುಂಬಾ ಫಾಸ್ಟು. ಉದಹಾರಣೆಗೆ ಭಟ್ಟನ ರಿಯಲ್ ಎಸ್ಟೇಟ್ ಕಾಸಿನ ದಾಹಕ್ಕೆ "ನಿತ್ಯ" ನಿಮ್ಮ ಮನೆಯ ಟಿವಿ ಪರದೆಯ ಮೇಲೆ "ಸುವರ್ಣ"ಕ್ಕನ ಕೃಪೆಯಿಂದ ಕಂಡಕಂಡ ಕಂಮಂಗಿಗಳ ಉಚಿತ ದರ್ಶನವಾದದ್ದು ನಿಮಗೆ ನೆನಪಿದ್ದೇ ಇದೆ. ಇತ್ತೀಚೆಗೆ ವಿಶಿಲ್ ಭಟ್ಟ ಹಾಗೂ ಕರಿಮುಸುಡಿಯ ಆದಿಮಾನವನ ನಡುವೆ ನಡೆದ ಹೀನ ಕಚ್ಚಾಟವೆ ಇದಕ್ಕೊಂದು ಅತ್ಯುತ್ತಮ ಸ್ಯಾಂಪಲ್. ಕರ್ರಗೆ ಮಿಂಚುತ್ತಿರುವ ಕರುನಾಡಿನ "ಚಂಡಾ"ಳನೊಬ್ಬನ ಮುರಿದ ಮನೆಯಲ್ಲಿ ಇವರಿಬ್ಬರೂ ಸೇರಿ ಗಳ ಹಿರಿದು ಹಿರಿದು ಚಳಿ ಕಾಯಿಸಿಕೊಂಡರು. ಕಾಸುಕೊಟ್ಟು ಈ ಕರ್ಮಾಂತರಗಳನ್ನೆಲ್ಲ ಈ ಕನ್ನಡಿಗರು ಹಲ್ಲುಕಚ್ಚಿ ಸಹಿಸಿಕೊಂಡು ನೋಡಬೇಕಾಯಿತು. ಕಂಡವರ ಮನೆ ಹೊತ್ತಿ ಉರಿದರೆ ಇವರಿಗೆ ಎಲ್ಲಿಲ್ಲದ ರಣೋತ್ಸಾಹ ಉಕ್ಕುಕ್ಕಿ ಬರುತ್ತದೆ. ಅದೇ ಕರಿಮುಸುಡಿಯವನ ಮನೆ ಕಥೆ ಎಕ್ಕುಟ್ಟಿ ಹೋಗಿದ್ದಾಗ, ಲಿಂಬೆಹುಳಿಯಂತಹ ಆ ಕಾಲದ ಆ(ಯೋ)ರೋಗ್ಯ ಮಂತ್ರಿಯ ಜೊತೆ ರಾಣಿರಸ್ತೆಯ ಅರ್ಧನಾರೀಶ್ವರ ಕರೆವೆಣ್ಣೊಂದನ್ನ ದೆಹಲಿಯ ಚಳಿಗೆ ಬೆಚ್ಚಗಾಗಲು ಜಂಟಿಯಾಗಿ ಬಳಸಿಕೊಂಡಾಗ, ಜನತೆಯನ್ನ ಭರ್ಜರಿಯಾಗಿ ಬೋಳಿಸಿದ ಜನಾರ್ಧನ ರೆಡ್ಡಿಯಿಟ್ಟ ಸ"ಗಣಿ"ಯನ್ನ ಗೋರಿಕೊಂಡು ಇದೇ ವಿಷ್ಪರ್ ಭಟ್ತ ಎರಡೂ ಕೈಯಲ್ಲಿ ತಿಂದದ್ದು ಲೋಕಾಯುಕ್ತ ತನಿಖೆಯಲ್ಲಿ ಸಾಧಾರ ಸಿಕ್ಕಿ ಹಾಕಿಕೊಂಡಾಗ ಮಾತ್ರ ಯಾವ "ಒಂಬತ್ತನೆ" ನಂಬರಿನ "ಸಮಯ"ಸಾಧಕ "ಸುವರ್ಣ"ಕ್ಕನ ಸಂಬಂಧಿಗಳು ಈ ಬಗ್ಗೆ ವಾರಗಟ್ಟಲೆ ಅತ್ಲಾಗಿರಲಿ ಒಂದೈದು ನಿಮಿಷ ತಜ್ಞ(?)ರನ್ನ ಎತ್ತಾಕಿಕೊಂಡು ಬಂದು ಪ್ಯಾನಲ್ ಚರ್ಚೆ ನಡೆಸಿದ್ದು ನನಗಂತೂ ನೆನಪಿಲ್ಲ, ನಿಮ್ಗ್ಯಾರಿಗಾದರೂ ಇದೆಯ? ಬೀದಿ ಬದಿ ನಾಯಿ ಹೇತರೂ ಅದನ್ನ "ಬ್ರೇಕಿಂಗ್ ನ್ಯೂಸ್" ಮಾಡುವ ಈ ಮೂರು ಬಿಟ್ಟ ಇಂತಹ ಚೀಪ್ "ಪಬ್ಲಿಕ್" ಮಂದಿಯನ್ನ "ನಿತ್ಯಾ" ಪ್ರಕರಣದಲ್ಲಿ ಕಂಡೆ ಕನ್ನಡಿಗ ಹೇಸಿಕೊಂಡಿದ್ದ. "ಕಾಳಿ"ಬೋಳೀರನ್ನೆಲ್ಲ ಕರೆತಂದು ಕಂಡ ಕಂಡ ವಿಷಯಗಳಲ್ಲೆಲ್ಲ ಕೆರೆದೇ ಕೆರೆದರೂ ನಾಡಿಗಾಗಲಿ, ನೆಲದ ಜನತೆಗಾಗಲಿ ಈ ದರಿದ್ರದವರಿಂದ ಮೂರುಕಾಸಿನ ಪ್ರಯೋಜನವಂತೂ ಆಗಲಿಲ್ಲ. ಇದ್ದಿದ್ದರಲ್ಲಿ "ಜನಶ್ರೀ"ಯೊಂದು ಚೂರು ವಾಸಿ. ಇನ್ನು "ಕಸ್ತೂರಿ"ಯ ಕೆಟ್ಟವಾಸನೆ ಕಸ್ತೂರ್ಬಾ ರಸ್ತೆಯಿಂದಾಚೆಗೆ ಇನ್ನೂ ಹರಡಲು ಪರದಾಡಲಾಗುತ್ತಿದೆ. ಯಾಕೋ ಅದಕ್ಕಿನ್ನೂ ಮಲರೋಗ ವಾಸಿಯಾದ ಹಾಗಿಲ್ಲ. ಇವತ್ತಿನ ದಿನವನ್ನೆ ತೆಗೆದುಕೊಳ್ಳಿ "ದುನಿಯ"ದಲ್ಲಿ ಇದೇ ಅತಿಮುಖ್ಯ ಸಂಗತಿಯೇನೋ ಎಂಬಂತೆ ಸ್ವಯಂಘೋಷಿತ "ಕರಿಚಿರತೆ"ಯೊಂದರ ಅಧಿಕೃತ/ ಅನಧಿಕೃತ ಸಂಸಾರಗಳ ವಿಭಿನ್ನ ಧಾಟಿಯ ಆವೃತ್ತಿಗಳನ್ನ "ಸುವರ್ಣ"ಕ್ಕನ ಜೊತೆ "ಒಂಬತ್ತ"ರಲ್ಲೂ ನೋಡಿ ಅದಾಗಲೆ ರೋಸಿಹೋಗಿದ್ದ ಕನ್ನಡಿಗ ಮಲಗುವ ಹೊತ್ತಿಗೆ ಸುವರ್ಣಕ್ಕನ ಅಂಗಳದಲ್ಲಿ ನಡೆದ ಜಂಗಿಕುಸ್ತಿಯ ನೇರ ಪ್ರಸಾರವನ್ನ ಬೇಡದಿದ್ದರೂ ತೋರಿಸಿ ತಲೆಹಡೆದರು. ಕಾಸು ಕೊಟ್ಟ ತಪ್ಪಿಗೆ ಈ ಖದೀಮರ ತೆವಲುಗಳನ್ನೆಲ್ಲ ಕಂಡು ನಲಿಯುವ ಒತ್ತಾಯದ ಶಿಕ್ಷೆ ಬಡ ವೀಕ್ಷಕರದ್ದು. ಸಚಿವ ಸೋಮಣ್ಣರಿಗೆ ಇನ್ನೊಬ್ಬ "ವ್ಯಭಿಚಾರಿ" ಸಚಿವ ಮೊನ್ನೆ ರಾತ್ರಿ ಖಾಸಗಿಯಾಗಿ ಕಪಾಳಮೋಕ್ಷ ಮಾಡಿದ್ದ ಅನ್ನುವ ಬ್ರೇಕಿಂಗ್ ಸುದ್ದಿಯೆ ಈ ಅಧ್ವಾನಗಳಿಗೆಲ್ಲ ನೇರ ಕಾರಣ. ಅದಕ್ಕೆ ಸಮಜಾಯಷಿ ಕೊಡಲು ಬಂದ ಸರ್ವರ್ ಸೋಮನ ಗ್ಯಾಂಗ್ ಕಂಡು ಬೆಚ್ಚಿ ಬೆದರಿದ ಚೋರಗುರು ವಿಶ್ಶಿಶ್ಶಿ ಭಟ್ಟ ಹಿಂದಿನ ಬಾಗಿಲಿಂದ ತನ್ನ ಕದ್ದ ಬೆಂಜ್ ಕಾರಿನಲ್ಲಿ ಓಡಿ ಹೋಗಿ ಪಾರಾದ. ಅವನ ಚಾಂಡಾಲ ಶಿಷ್ಯಂದಿರಾದ ಮೂರುನಾಮದ ರಂಗ ಹಾಗು ಹನುಮಕ್ಕ ಇಬ್ಬರೂ ಸಿಕ್ಕಿಬಿದ್ದರು. ಇಷ್ಟಾಗಿಯೂ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬಂತೆ ಸೋಮನ ಪುಂಡ ಪಡೆಯ ಶೂರನೊಬ್ಬನ ಹದಿನೈದು ಕ್ಷಣದ ಶೌರ್ಯವನ್ನ ಪದೆಪದೆ ಪ್ರಸಾರ ಮಾಡಿ ತಾವು ಸಾಚ ಎಂದು ಅವಲತ್ತುಕೊಳ್ಳುವ ಎಂದಿನ ಹೀನಕಾರ್ಯಕ್ಕೆ ರಂಗ ಮತ್ತು ಹನುಮ ಕೈ ಹಾಕಿದರು. ಸಾಲದ್ದಕ್ಕೆ ನೇರ ಪ್ರಸಾರದಲ್ಲಂತು ದೊಡ್ಡ ದೊಂಡೆಯಲ್ಲಿ ಪತ್ರಿಕಾ ಸ್ವಾತಂತ್ರದ ಕುರಿತು ಸೋಮನಿಗೂ, ಅವರ ಬೆಂಬಲಕ್ಕೆ ಬಂದಿದ್ದ ಶಿವನಗೌಡ ನಾಯಕನಿಗೂ ಮಾತಾಡಲೆ ಬಿಡದೆ ಬೊಬ್ಬಿಟ್ಟರು. ಇನ್ಯಾರದೋ ತಪ್ಪಾಗಿದ್ದರೆ ಇನ್ನಷ್ಟು ಎಳೆಯುತ್ತಿದ್ದ ಚರ್ಚೆಯನ್ನ ಇವತ್ತು ಚುಟುಕಾಗಿ ಮೊಟಕುಗೊಳಿಸಿ ಮೇಲೆದ್ದರು! ಇದೇ ಹನುಮಕ್ಕನೆಂಬ ಕಪಿ ತಮ್ಮ ಚಾನಲ್ಗಳ ಹರಾಮಿ ದಂಧೆಗೆ "ಅಭಿರುಚಿ ಹೀನ ಕನ್ನಡಿಗರೆ" ಕಾರಣ ಅಂತ ಇತ್ತೀಚೆಗೆ "ಕಪ್ರ"ದಲ್ಲಿ ಊಳಿಟ್ಟಿತ್ತು. ಆಗ್ಲೆ ಯಾರಾದರೂ ಕನ್ನಡದ ಮಾನದ ಹೊಣೆಹೊತ್ತ ದೊಣೆನಾಯಕರ್ಯಾರಾದರೂ ಸರಿಯಾಗಿ ವಿಚಾರಿಸಿಕೊಳ್ಳಬೇಕಾಗಿತ್ತು, ಅವರೆಲ್ಲ ವಸೂಲಿಯಲ್ಲಿ ಬ್ಯುಸಿಯಾಗಿದ್ದರಿಂದ ಈ ಕಪಿ ಅರಾಮಾಗಿ ಅನ್ನಬಾರದ್ದನ್ನ ಅಂದಿದ್ದರೂ ಪಾರಾಯ್ತು. ನಾಳೆಯೂ ನೋಡಿ ಬೇಕಾದರೆ "ಕಪ್ರ"ದಲ್ಲಿ ತಮ್ಮ ಸಾಚಾತನಕ್ಕೆ ಸಾಬೂಬು ಕೊಟ್ಟುಕೊಂಡು ಇಡಿ ಪ್ರಕರಣವನ್ನೆ ತಿರುಚದಿದ್ದರೆ ಕೇಳಿ, ನಂಬಲು ನೀವು "ಹೆಪ್ರ"ರಾಅಗಿರಬೇಕಷ್ಟೆ. ಇಲ್ಲಿ ಸರ್ವರ್ ಸೋಮನ ಸುಭಗತನದ ಬಗ್ಗೆ ಪುರಾವೆ ಒದಗಿಸೋದು ನನ್ನ ಉದ್ದೇಶವಲ್ಲ. ಈ ಊರಿಗೆ ನೀತಿ ಬೋಧಿಸುವ ಕಮಂಗಿಗಳ ಕಂತ್ರಿ ಬುದ್ಧಿಯನ್ನ ಕ್ಯಾಕರಿಸಲಷ್ಟೆ ಹೊರಟಿದ್ದೇನೆ. ನಿಮಗೂ ಅಸಹ್ಯ ಉಕ್ಕಿ ಬಂದರೆ ಈ "ಕಲಾವಿದ"ರ ಮುಖಕ್ಕೆ ಒಳಗಿನ ಕಫವನ್ನೆಲ್ಲ ಎಳೆದು ಉಗಿಯಲು ಹಿಂದುಮುಂದು ನೋಡಬೇಡಿ.

No comments: