15 November 2010

ಮರೆಯೋದು ಹೇಗೆ?

ಮತ್ತೆ ಮರಳಿ ಬೀಳೊ ಕನಸು,

ಪುನಃ ನಾ ಮನಸೊಳಗೆ ಗುನುಗುವ ಹಾಡು/

ನಿನ್ನಲೆ ನೆಟ್ಟಿರುವಾಗ ನನ್ನ ಮನಸು,

ಅದರ ಕನ್ನಡಿಯಲಿ ಮೂಡಿರುವ ಬಿಂಬ ನಿನ್ನದೇನ?

ನೀನೆ ಬಂದಿಲ್ಲೊಮ್ಮೆ ನೋಡು//


ನೀ ಸಾಲ ಕೊಟ್ಟಿರುವ ನಸುನಗೆ ಜಾಲದಲಿ ಸಿಲುಕಿದ ಮನಸಿಗೆ,

ಕಾಲದ ಪರಿವೆಯಿಲ್ಲದೆ ಹಗಲಲೂ ನಾ ಕಾಣುವ ನಿನ್ನದೆ ಕನಸಿಗೆ/

ಬಲಿಯಾದ ನಾನು ನಿನ್ನೊಳಗೆ ಲೀನವಾಗಿ ಹೋದರೆ,

ಈಗಲೇ ಹೇಳಿ ಬಿಡುತ್ತೇನೆ ಕೇಳು...
ಅದಕ್ಕೆ ನಾನಂತೂ ಹೊಣೆಯಲ್ಲ//

4 comments:

ನಾಗರಾಜ್ .ಕೆ (NRK) said...

SaalugaLu binnavaagi poNisidira, aadare yekataanate kaaNa siguttide.

Anagha Kirana ಅನಘ ಕಿರಣ said...

ನಿಜ ,ಬರುಬರುತ್ತ ನನ್ನೊಳಗಿನ ಭಾವಗಳಿಗೂ ತುಕ್ಕು ಹಿಡಿತಿವೆಯೇನೋ ಅನಿಸುತ್ತಿದೆ.

venkat.bhats said...

"ನಿನ್ನಲೆ ನೆಟ್ಟಿರುವಾಗ ನನ್ನ ಮನಸು,ಅದರ ಕನ್ನಡಿಯಲಿ ಮೂಡಿರುವ ಬಿಂಬ ನಿನ್ನದೇನ?

ನೀನೆ ಬಂದಿಲ್ಲೊಮ್ಮೆ ನೋಡು" ಎನ್ನುವ ಸಾಲುಗಳು ಮತ್ತೆ ಮತ್ತೆ ನೆನಪಾಗುವಂತ ಒಲವ ದನಿ. ಹೀಗೇ ಸಾಗಲಿ ಭಾವಯಾನ..

Anagha Kirana ಅನಘ ಕಿರಣ said...

ಭಾವಗಳ ಬಂಧನ ಬಿಡಿಸಿಕೊಳ್ಳಲಾಗದಷ್ಟು ಬಿಗಿಯಾಗಿರುವಾಗ,ಸೆಣಸುವ ಸಾಹಸ ಮಾಡುವ ಬದಲು ಹಾಗೆ ಸುಮ್ಮನೆ ಶರಣಾಗುವುದೆ ಜಾಣತನ ಅಲ್ಲವ?