19 December 2014

ಮೊನ್ನೆ ನಿಜವಾಗಿಯೂ ಅತ್ಯಾಚಾರ ಆಗಿದ್ದು ಕನ್ಯೆ ತೀರ್ಥಹಳ್ಳಿಯ ಮೇಲೆ! ಸರದಿ ಪ್ರಕಾರ ಅದನ್ನ ಮಾಡಿ ಮುಗಿಸಿದ್ದು ಭಾಜಪದ ಭಂಡರು.......


ರಾಜ್ಯದಾದ್ಯಂತ ತೀರ್ಥಹಳ್ಳಿಯನ್ನ ಆಗಬಾರದ ಕಾರಣಕ್ಕೆ ಸುದ್ದಿಯಾಗಿಸಿದ ಭಾಜಪ ಭಂಡರ ತೆವಲಿನ 'ನಂದಿತಾ ಸಾವು' ಪ್ರಕರಣವನ್ನ ಶತಾಯಗತಾಯ ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಹೇಗಾದರೂ ಸರಿ ಜೀವಂತವಾಗಿಡುವ ಬಿಜೆಪಿ ಸ್ಥಳಿಯ ಮುಖಂಡರೆಂಬ ನಾಲಾಯಕ್ಕರ ಪ್ರಯತ್ನದ ಮುಂದುವರೆದ ಭಾಗವಿದು. ನಂದಿತಾಳ ಸಮಯಸಾಧಕ ಅಪ್ಪ ಕೃಷ್ಣಮೂರ್ತಿಯ ಜೀವನಾಧಾರವಾಗಿದ್ದ ಬಾಳೆಬೈಲಿನ ದಿನಸಿ ಅಂಗಡಿಗೆ ಕಳೆದ 12ನೇ ತಾರೀಕಿನ ಬೆಳಗ್ಯೆ 3 ರ ಸುಮಾರಿಗೆ ಬೆಂಕಿ ಇಡಲಾಗಿದೆ.ಸಚಿವರೂ ಆಗಿರುವ ಸ್ಥಳಿಯ ಶಾಸಕರು ತಕ್ಷಣ ಕ್ಷೇತ್ರಕ್ಕೆ ಹಿಂದಿರುಗಿ ಬರಲಾಗದ ಇಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದರೆ ಇನ್ನೊಂದು ಸುತ್ತಿನಲ್ಲಿ ಊರನ್ನ ಉದ್ರೇಕಿಸಲು ಬಿಜೆಪಿಯ ಕಳ್ಳ ಭಡವರು ಬೆಳಗಾವಿ ಅಧಿವೇಶನದ ಸಮಯ ಸಾಧಿಸಿ ಅಂಗಡಿ ಸುಟ್ಟಿದ್ದಾರೆ. ಸಿಐಡಿ ವರದಿಯಲ್ಲಿ ತಮ್ಮ ವಿರುದ್ಧವೆ ಹೊರಬಂದ ಸತ್ಯವನ್ನ ಅರಗಿಸಿಕೊಳ್ಳಲಾಗದ ಬಿಜೆಪಿಯವರು ಪ್ರಕರಣವನ್ನ ಜೀವಂತವಾಗಿರಿಸಲು ನಡೆಸಿದ ಕುತಂತ್ರ ಇದು ಎನ್ನುವುದು ಸ್ಥಳಿಯರ ಗುಮಾನಿ.ಅಲ್ಲದೆ ಮೊನ್ನೆ ಮೊನ್ನೆ ನವೆಂಬರ್ ತಿಂಗಳ ಅಂತ್ಯದಲ್ಲಿ ಪ್ರಕರಣದ ಸಿಬಿಐ ತನಿಖೆಗಾಗಿ ಬಿಜೆಪಿ ನಡೆಸಿದ ಹಾಸ್ಯಾಸ್ಪದ ನಿರಶನಕ್ಕೆ ಬೆರಳೆಣಿಕೆಯಷ್ಟು ಜನರೂ ಬಂದು ಭಾಗವಹಿಸದೆ ಜನ ಬೆಂಬಲ ಇಲ್ಲದ ಆ ಪ್ರಹಸನ "ನ್ಯಾಯ ಸಿಗುವವರೆಗೂ"(?) ಎನ್ನುವ ಘೋಷಣೆಯ ಬ್ಯಾನರನ್ನ ಐದನೆ ದಿನಕ್ಕೆ ಅಬ್ಬೇಪಾರಿಯಂತೆ ಅಲ್ಲಿಯೇ ಬಿಟ್ಟು ಎದ್ದೋಡಿ ಬರುವಂತಾದ ಅದರ ಮುಖಂಡರಿಗೆ ಆದ ಮುಖಭಂಗದ ಅಡ್ಡ ಪರಿಣಾಮ ಇದು ಅಷ್ಟೇ.ಇಂತಹ ಹೊತ್ತಿನಲ್ಲಿ ಸಾಬರು ಅಪ್ಪಿತಪ್ಪಿಯೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು ಎನ್ನುವುದು ಮೆದುಳಿದ್ದ ಎಲ್ಲರಿಗೂ ಅರ್ಥವಾಗುವ ಸರಳ ಸತ್ಯ. ಇನ್ನು ಬಿಜೆಪಿಯವರು ಬಾಯಿಪಾಠ ಮಾಡಿಸಿದ ದಿನಕ್ಕೊಂದು ಸುಳ್ಳನ್ನ ಮಾತು ಕಲಿತ ಗಿಳಿಯಂತೆ ಆಡಿ ಆಡಿ ಹೈರಾಣಾಗಿ ಹೋಗಿರುವ ಭಂಡ ಅಪ್ಪ ಕೃಷ್ಣಮೂರ್ತಿಗೆ ಜೀವನಾಧಾರವಾಗಿದ್ದ ಅಂಗಡಿಯನ್ನೆ ಅದೆ ದ್ವೇಷದ ಅಧ್ವಾರ್ಯುಗಳು ಊರೊಟ್ಟಿಗೆ ಹಚ್ಚಿದ ಬೆಂಕಿ ಅಪೋಷನ ತೆಗೆದು ಕೊಂಡಿರುವುದು ವಿಪರ್ಯಾಸ ಹಾಗೂ ವ್ಯಂಗ್ಯ. 'ಕಳ್ಳನ ಹೆಂಡತಿ ಯಾವತ್ತೂ ಮುಂಡೆ' ಅನ್ನುವ ಗಾದೆಗೆ ಅತ್ಯುತ್ತಮ ಉದಾಹರಣೆ ಇದು.
ಬದುಕಿದ್ದಾಗ ನಿಜವಾಗಿಯೂ ಆಗಿರದಿದ್ದ ಮಾನಭಂಗ ಹಾಗೂ ಅತ್ಯಾಚಾರವನ್ನ ಸತ್ತ ನಂತರ ನಂದಿತಾಳ ಮೇಲೆ ಬಿಜೆಪಿಯ ಆರಗ ಜ್ಞಾನೇಂದ್ರ, ಸಂದೇಶ ಜವಳಿ, ಸಂಸದೆ ಶೋಭಕ್ಕ ಎಂಬ ಚಿಲ್ಲರೆ ಬುದ್ಧಿಯ ಹೆಂಗಸು, ಸಂಸದೆಯ ಅಪ್ಪ(?) ಎಂದು ಹೇಳಿಕೊಂಡು ತಿರುಗುವ ಬೂಸಿಯ. ನಂದಿತಾಳ ಚಿಕ್ಕಪ್ಪ ಭಜರಂಗದಳದ ಸಂತೋಷನೆನ್ನುವ ಹಡಬೆ, ಬಾಳೆಬೈಲು ರಾಘವೇಂದ್ರನೆನ್ನುವ ಬಚ್ಚಾಲಿ ಹಾಗೂ ಸ್ವತಃ ನಂದಿತಾಳ ಅಪ್ಪ ನಿರಂತರವಾಗಿ ಮಾಧ್ಯಮಗಳಲ್ಲಿ ಸರದಿಯಂತೆ ಮಾಡಿ ಮುಗಿಸಿದ್ದರು.ಈಗ ಇದನ್ನ ಮಾಡಿಸಿದ ಪುಣ್ಯಾತ್ಮನೆ ಇಂದು ಮುಂಜಾನೆ ಪತ್ರಿಕಾಗೋಷ್ಠಿ ಕರೆದು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಕೆರೆದೇ ಕೆರೆದ. ಆದರೆ ಇಂತಹ ಮಗುವನ್ನ ತಾನೆ ಚಿವುಟಿ, ತಾನೆ ತೊಟ್ಟಿಲು ತೂಗುವ ಮೊಸಳೆ ಕಣ್ಣೀರಿನ ಮಂದಿಯ ಆಟಾಟೋಪಗಳನ್ನ ಅರವತ್ತರ ದಶಕದಲ್ಲಿಯೆ ವಜ್ರಮುನಿಯ ನಟನೆಯಲ್ಲಿ ತೆರೆಯ ಮೇಲೆಯೇ ನೋಡಿ ನೋಡಿ ಬೇಸತ್ತಿರುವ ತೀರ್ಥಹಳ್ಳಿಯ ಮಂದಿ ಇಂದಿನ ಹಗಲುವೇಷವನ್ನ ನೋಡಿ ಕ್ಯಾಕರಿಸಿದರೆ ಹೊರತು ಕ್ಯಾರೆ? ಎನ್ನಲಿಲ್ಲ. ಒಂದೊಮ್ಮೆ ಪೊಲೀಸರು ಸರಿಯಾಗಿ ಸಕ್ರಿಯರಾದದ್ದು ಹೌದೇ ಆದರೆ, ಎಲ್ಲಕ್ಕೂ ಮೊದಲು ಈ ಗಡವನನ್ನೆ ಮುಕಳಿ ಮೇಲೆ ಒದ್ದು ಗೂಂಡಾ ಕಾಯಿದೆಯ ಮೇಲೆ ಒಳಗೆ ತಳ್ಳಿಯಾರು ಎನ್ನುವ ಭೀತಿಯೂ ಸ್ವತಃ ಆತನಿಗಿದ್ದೇ ಇದೆ ಹಾಗೂ ಆ ಒಳ ಭೀತಿಯೆ ಈಗ ಇಂತಹ ದುಷ್ಕೃತ್ಯವನ್ನ ಆತನಿಂದ ಆಗ ಮಾಡಿಸಿದೆ. ಹೀಗಾದರೂ ಸಾಬರ ಮೇಲೆ ಮತ್ತೊಂದು ಗೂಬೆ ಕೂರಿಸುವ ಬಿಜೆಪಿಯ ಹುಟ್ಟು ಗೂಬೆಗಳನ್ನ ಮೊದಲು ಒದ್ದು ಮುಲಾಜಿಲ್ಲದೆ ಒಳಗೆ ಹಾಕದಿದ್ದರೆ ಮುಂದಿನ ಚುನಾವಣೆಯವರೆಗೂ ಹೀಗೆ ದಿನಕ್ಕೊಬ್ಬರ ಮನೆಯನ್ನ ಸುಟ್ಟಾರಿವರು.
No comments: