09 May 2009
ಎದೆ ಗಾಯ...
ನಾನು ತಹತಹಿಸುವ ಕಿರು ಮೀನು/
ನಿರೀಕ್ಷೆಯ ಉಪ್ಪು ನೀರು ತಾಗಿ...
ಉರಿವ ಎದೆಗಾದ ಗಾಯದ ನೋವ,
ನಿವಾರಿಸುವ ಕೃಪೆ ತೋರಬಾರದೆ ನೀನು//
08 May 2009
ಸುಮ್ಮನೆ ಒಂದಷ್ಟು ಹರಟೆ...
ಆತ್ಮೀಯರೇ
ನಾಳೆ ಅಂದರೆ ದಿ ೯/೦೫/೦೯ ರಂದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ನಾನು
ಸಾಹಿತಿ ನಾ ಡಿ'ಸೊಜರೊಂದಿಗೆ ನಡೆಸಿಕೊಟ್ಟ ಅರ್ಧಘಂಟೆ ಅವಧಿಯ ಸಂದರ್ಶನ ಪ್ರಸಾರವಾಗುತ್ತದೆ ಸಾಧ್ಯವಾದರೆ ವೀಕ್ಷಿಸಿ.
ಸಮಯ-ಭಾರತದಲ್ಲಿ: ಮಧ್ಯಾಹ್ನ ೨;೦೦ ಘಂಟೆಗೆ.
[ಮರುಪ್ರಸಾರ : ಡಿ ೧೦/೦೬/೦೯
ಆದಿತ್ಯವಾರ ರಾತ್ರಿ ೧೦:೦೦ ಘಂಟೆಗೆ]
ಸಂಯುಕ್ತ ರಾಷ್ಟ್ರಗಳಲ್ಲಿ; ನಡುರಾತ್ರಿ ೧:೩೦ಕ್ಕೆ ಪಶ್ಚಿಮ ತೀರ ಹಾಗು ನಡುರಾತ್ರಿ ೨:೩೦ಕ್ಕೆ ಪೂರ್ವ ತೀರ
[ಮರುಪ್ರಸಾರ: ದಿ ೧೦/೦೫/೦೯ ರಂದು ಬೆಳಿಗ್ಯೆ ೯:೩೦ಕ್ಕೆ ಪಶ್ಚಿಮತೀರ ಹಾಗು ಬೆಳಿಗ್ಯೆ ೧೦:೩೦ಕ್ಕೆ ಪೂರ್ವತೀರ]
-ನಿಮ್ಮವ -
ಶ್ರೀಹರ್ಷ ಹೆಗಡೆ
06 May 2009
ಅರಳಲಿ ಕನಸ ಹೂವು....
ಪುಣ್ಯ ಸಿಕ್ಕೀತು,
ಮಾಡುತೀಯ ದಯವಿಟ್ಟು ನನಗೊಂದು ಉಪಕಾರ/
ಧರೆಯ ಇನ್ನೊಂದು ಅಂಚಿನಲ್ಲಿದೆ...
ನನ್ನೊಲವಿನ ಜೀವ,
ಅಲ್ಲೀಗ ಇರುಳು...
ಕಳೆದ ರಾತ್ರಿ ನಾ ಕಂಡ ಅಪೂರ್ಣ ಕನಸ ಆ ಮನಸಿಗೂ ದಾಟಿಸಿಬಿಡು......
ಅದಲ್ಲಿ ಮತ್ತೆ ಅರಳಲಿ//
ಅಭಿಲಾಷೆ...
ಕನಸ ಆಕಾಶದ ವಿಸ್ತಾರ...
ನಿನಗೂ ತೋರಿಸುವ ಆಸೆಯಿದೆ/
ಹೇಳಲೇ ಬೇಕು...
ಎಂಬ ಹಂಬಲವಿದೆ ಎದೆಯೊಳಗೆ ಕಾವಿಗೆ ಕೂತ ಭಾವಗಳ ಬಿಡಿಸಿ,
ಮನಸಿಟ್ಟು ನೀನು ಕೇಳದೆ ಇದ್ದರೂನು!//
05 May 2009
ಹುಟ್ಟದೆ ಬೇಸರ?
ಗುಳಿ ಬಿದ್ದ ಕೆನ್ನೆ ಕಣಿವೆ...ಕಾಮನಬಿಲ್ಲು,
ಕಳೆದೆ ಹೋಗಿದೆ ಮನಸು ಅದರಲ್ಲೆಲ್ಲೋ/
ಹುಡುಕಿ ತರುವ ಹಠ ನನಗಂತೂ ಇಲ್ಲ,
ಅದಲ್ಲೇ ದಿಕ್ಕೆತು ಅಲೆಯಲಿ ...
ಎಂಬ ಆಸೆ ಅದಮ್ಯ ಹಂಬಲ//
ನಿತ್ಯ ಹುಟ್ಟಿ,
ಮತ್ತೆ ಕರಗಿ...
ಮರಳಿ ನಗುವ ನೇಸರ/
ಹಾಡಿದ ಅರುಣ ರಾಗವನ್ನೇ...
ಪದೇಪದೇ ಗುನುಗಲು,
ಹುಟ್ಟದೆ ನಿನಗೆ ಬೇಸರ?//
03 May 2009
ನಶೆಯ ಹನಿ..
ಅದೆಲ್ಲೋ ಅಡಗಿದ್ದ ಅಕ್ಷಾ೦ಕ್ಷೆ ಅರಳಿಸಿದ ನಿನ್ನ ಸಾಮಿಪ್ಯ,
ಕನವರಿಸುತ್ತಿದ್ದ ಕನಸುಗಳ ಕೆರಳಿಸಿದ ನಿನ್ನ ಸಾನಿಧ್ಯ/
ಹನಿ ಮಧುವನ್ನೂ ಮುಟ್ಟದ,
ನನ್ನನ್ನೂ ಚಿತ್ತಾಗಿಸಿ...ಉನ್ಮತ್ತನಾಗಿಸಿದೆ////
02 May 2009
ಪಡೆವೆನೆ?
ಜಾರಿ ಬೀಳಲೋ?
ಬೇಡವೋ ಎಂಬ ಬಿನ್ನಾಣ ಹೊತ್ತು,
ನೇಸರನ ಪ್ರಭೆಗೆ ಮಿಂಚಿ ಹೊಳೆವ ಇಬ್ಬನಿ ನತ್ತು/
ಇನ್ನೇನು ಕ್ಷಣದಲಿ...
ಕರಗಿ ಕಥೆಯಾಗಲಿದೆ//
ಸುತ್ತಿಬಳಸಿ ಹೇಳಲು ಬರೋಲ್ಲ,
ಸುಳ್ಳೇ ಹಾಡಿ ಹೊಗಳಲು ಕವಿಯೂ ನಾನಲ್ಲ/
ನನ್ನದೇನಿದ್ದರೂ....ನಿನ್ನೆದೆಯ ಗೆಲ್ಲೋ ಹಂಬಲ,
ನಿನ್ನೊಲವ ಪಡೆದೇ ತೀರುವ...ತ್ರಿವಿಕ್ರಮ ಛಲ//