ಗಾಳಿ ಚುಂಬಿಸಿದ ಹೂಗಳ ಕಂಗಳಲಿ/
ಮೋಹಕ ಒಲವಿನದೆ ಕಾತರ//
ಎಲೆಗಳ ನಡುವೆ ಪಿಸುಗುಡುವ ಗಾಳಿ,
ಹೂಗಳ ಕಿವಿಯಲ್ಲೂ ಗುಟ್ಟೊಂದ ಹೇಳಿ/
ಅವುಗಳನ್ನೂ ನಾಚಿಸಿತು,
ಕೆನ್ನೆ ಕೆಂಪಾಗಿಸಿತು//
ಸದ್ದಿರದೆ ಹಾಸಿದ ಗಾಳಿಯ ಚಾದರ,
ಚಳಿಗೆ ನಡುಗುವ ಭಾವಗಳ ಹೊದಿಸಿ/
ಬೆಚ್ಚಗಾಗಿಸಿತು,
ತುಟಿ ತುದಿಗಳ ಮುದ್ದಿಸಿ ಇನ್ನೂ ಬಿಸಿ ಹೆಚ್ಚಗಾಗಿಸಿತು//
28 May 2010
26 May 2010
ನೀನು...ನಿನ್ನ ನೆನಪು
ಹಳೆಯ ಸವಿ ನೆನಪುಗಳು ಕಣ್ಣಿಗೆ ನೀರಪರದೆ ಹಾಕುವಾಗ,
ಒಳಗೊಳಗೇ ನನಗೇಕೋ ತಳಮಳ/
ಎಲ್ಲಾದರೂ ವಿಸ್ಮಯ ಘಟಿಸಿ ನೀನೀಗಲೆ ಬಂದರೆ,
ನಿನ್ನ ಬಿಂಬವ ತುಂಬಿದ ಆಲಿಗಳು ಮರೆಮಾಚಿಯಾವೋ ಎನ್ನುವ ಕಳವಳ//
ಕಾಯುವುದರಲ್ಲಿ ಸುಖವಿದೆ ನಿಜ,
ಆದರೆ ಇನ್ನೆಷ್ಟು ಅಂತ ಕಾಯಲಿ?/
ಸಾಯುವುದರಲ್ಲಿ ನೆಮ್ಮದಿಯಿದೆ ದಿಟ,
ಅನುಕ್ಷಣ ಇನ್ನೆಷ್ಟು ಅಂತ ಸಾಯಲಿ?//
ಹಟ್ಟೆಯ ಮೇಲೆ ಮುಟ್ಟುವ ಜೇನುಗಳಂತಹ ನೆನಪುಗಳ ದಾಳಿಯಿಂದ ತಪ್ಪಿಸಿಕೊಳ್ಳಲಾರೆ,
ನಿಜದ ಅರಿವಿದ್ದರೂ ಅದನು ಒಪ್ಪಿ ಅಪ್ಪಿಕೊಳ್ಳಲಾರೆ/
ನಿನ್ನ ಹಾದಿಯ ನಿರೀಕ್ಷೆಯಲ್ಲೇ ಬಾಳಪಥ ಸಾಗಿಸುವುದರಲ್ಲಿ ಒಂದು ಸುಖವಿದೆ,
ಇನ್ಯಾವುದಕ್ಕೆ ಉಪಯೋಗವಾಗದಿದ್ದರೂ..ಉಸಿರು ನಿಂತ ಮೇಲೆ ಅದೇ ಸೊಡರೆನ್ನ ಸುಡಲಿದೆ//
ಮುತ್ತುಗದ ಎಲೆಯಂತೆ ಅರಳಿದ್ದ ಮನಸ್ಸು,
ನಾಚಿಕೆಮುಳ್ಳಿನಂತೆ ಮುದುಡಿ ಮುರುಟಿ ಹೋಗಿದೆ/
ನಿನ್ನ ಜೊತೆಯಿಲ್ಲದೆ ಅದು ಅರಳೀತಾದರೂ ಹೇಗೆ?,
ನೀನೆ ಹೇಳು?//
ಗೊತ್ತು ನೀನು ಸಾಗಿದ್ದು...ಅದು ಹಿಂದಿರುಗಿ ಬರಲಾಗದ ಏಕಮುಖ ರಸ್ತೆ,
ಆದರೂ ನನ್ನ ಭಾವುಕ ನೇತ್ರಗಳಲ್ಲಿ ತೀರದ ನಿರೀಕ್ಷೆ/
ವಾಸ್ತವದ ಅರಿವಿದ್ದರೂ ಅದನ್ನೋಪ್ಪಲು ತಯಾರಿಲ್ಲದ ಮೊಂಡ ನಾನು,
ಎಂದೆಂದಿಗೂ ನಿನ್ನ ಹಾದಿಯ ಕಾಯುತಲೇ ಇರುವೆನು//
ಹೊಂಗೆಯ ನೆರಳಿನಂತೆ ತಂಪು,
ಅರೆಬಿರಿದ ಸುರಗಿಯ ಹೂಗಳಿಗಿಂತ ಕಂಪು/
ದೂರದಿಂದೆಲ್ಲೋ ಕಾಣದಿರುವೆಡೆಯಿಂದ ಗಾಳಿಯಲಿ ತೇಲಿ ಬರುವ ಮುರಳಿಯ ನಾದಕ್ಕಿಂತ ಇಂಪು,
ನನ್ನೊಳಗಿರುವ ನೀನು...ನಿನ್ನ ನೆನಪು//

ಸುಮ್ಮನಿರಲಾರದೆ...
ಹೊತ್ತಿಗೆ ಮುಂಚೆ ಮೂಡಿಬಂದ ಚಂದಿರ ಇಂದೇಕೊ ಹಸಿರೊ ಹಸಿರು,
ಇದು ವಾಸ್ತವವೋ ಇಲ್ಲ ಬಣ್ಣಗುರುಡಾದ ನನ್ನ ಭ್ರಮೆಯೋ!/
ಅದೆಲ್ಲೋ ಭೂಮಿಯ ಇನ್ನೊಂದು ಅಂಚಿನಲ್ಲಿ ಬೆಚ್ಚಗಿರುವ ನಿನಗೆ,
ಅವನ ಕೈಯಲ್ಲಿ ಇನ್ನಷ್ಟು ಬೆಚ್ಚಗಿನ ಮುತ್ತುಗಳ ಕಳಿಸಿದ್ದೇನೆ...ಮರೆಯದೆ ಪಡೆದುಕೊ//
ಮನಸಲಿ ಮೂಡುವ ನೆನಪುಗಳಿಗೂ ನಿನ್ನದೇ ಪರಿಮಳ,
ಎದೆಯ ಮೇಲೆ ಬರೆಸಿರುವ ನಿನ್ನ ಹೆಸರ ಹಚ್ಚೆಯಲೂ ನಿನ್ನದೇ ಮೈಗಂಧದ ಮೃದು ತಾಳ/
ಹಣೆಯೆಲ್ಲ ನಿನ್ನೊಲವು ಬರೆದಿರದೆ ಬೋಳಾದರೂನು,
ಕೆಲವೇ ದಿನಗಳಾದರೂ ಜೊತೆ ನಡೆದ ಹೆಜ್ಜೆಗಳ ಸದ್ದು ನನ್ನ ಜೊತೆಗೇ ಇದೆಯಲ್ಲ...
ನನಗದೆ ಸಾಕು//

ನೋವಿನೊಂದು ಎಳೆ....
ನಾಲ್ಕೇ ನಾಲ್ಕು ಹೆಜ್ಜೆಯಷ್ಟೇ ದೂರ ....ಬಹಳ ಸುಂದರ,
ನೀ ನನ್ನ ಜೊತೆಯಿರೆ ಈ ಬಾಳು/
ಎರಡು ಘಳಿಗೆಯೂ ಘೋರ....ನಿರಂತರ ಬೇಸರ,
ನೀನಿರದೆ ಜೊತೆಗೆ...ಹೇಗೆ ನಾ ಬಾಳಲಿ ಹೇಳು?//
ನೀ ನನ್ನ ಜೊತೆಯಿರೆ ಈ ಬಾಳು/
ಎರಡು ಘಳಿಗೆಯೂ ಘೋರ....ನಿರಂತರ ಬೇಸರ,
ನೀನಿರದೆ ಜೊತೆಗೆ...ಹೇಗೆ ನಾ ಬಾಳಲಿ ಹೇಳು?//
25 May 2010
ಹೇಳದಿರಲಾರೆ...
ಖಾಲಿ ಹಾಳೆಯ ಮೇಲೆ ಮೂಡಿಸುವ ಪ್ರತಿ ಪದ....
ಅದು ಹೇಗೋ ನಿನ್ನ ಹೆಸರೇ ಆಗಿರುತ್ತದೆ/
ಮನದ ಮರದ ತೊಗಟೆಯಲ್ಲಿ ಕೆತ್ತಿದ ಎಲ್ಲ ಚಿತ್ರಗಳೂ,
ನಿನ್ನ ಮುದ್ದು ಮೊಗವೇ ಆಗಿರುತ್ತದೆ//
ಎದ್ದ ಕೂಡಲೇ ನಿನ್ನ ಬಿಂಬ ಕಾಣದಿದ್ದರೆ,
ಅದೇಕೋ ತಳಮಳ/
ನಿನ್ನ ಕಣ್ಣಲಿ ಪ್ರತಿಬಿಂಬವಾಗುವ ಮನದಾಳದ ಆಸೆ ನಿನಗೂ ಹೇಳಲಾ?,
ಧೈರ್ಯ ಸಾಲದು..ಅದನ್ನೂ ನಿನ್ನಿಂದಲೇ ಕಡ ಕೇಳಲ?!/

24 May 2010
ನೆನಪು ನೆನಪು...
ಕಡಲ ಆಳದಲಿ ಚಿಪ್ಪುಗಳೊಳಗೆ ಅಡಗಿ ಕುಳಿತ ಸಾಲು ಮುತ್ತುಗಳು.../
ಗಾಳಿಯಲ್ಲಿ ನೀನಿತ್ತ ಒಂದೇ ಒಂದು ಮುತ್ತಿಗೆ ಸಾಟಿಯೇ...?//
ಕರಿ ಕತ್ತಲಲ್ಲಿ ದಿಕ್ಕೆಟ್ಟು ಹೆದರಿ,
ಹಾದಿ ತಪ್ಪಿ ನಿಂತಿದ್ದ ನನ್ನನು/
ಸಾಂತ್ವಾನಗೊಳಿಸಿದ್ದು,
ಅದು...ನಿನ್ನ ಕಣ್ಣ ಹೊಂಬೆಳಕು//
ಹಣೆಯ ಮೇಲಿನ ಬೆವರ ಹನಿ ಸಾಲು,
ಕಣ್ಣ ತಾಕುವಂತಿದ್ದ ಜೊಂಪೆ ಕೂದಲು/
ಆಳದಲ್ಲೆಲ್ಲೋ ತುಂಟ ನಗುವಿದ್ದ ಕಡು ಕಪ್ಪು ಕಂಗಳು.
ನೀನೆಂದರೆ...ನನಗೆ ನೆನಪಾಗೋದು ಇದೇನೇ//

13 May 2010
ಕರಗಿದ ಕನಸು...
ಬಿಸಿಲ ಬಿಸಿಯೂ ತಾಕುತ್ತಿಲ್ಲ,
ಉರಿ ಸೆಕೆಗೂ ನನ್ನನು ಮಣಿಸುವ ತಾಖತ್ತಿಲ್ಲ/
ನಿನ್ನ ಒಲವ ಬೇಗೆಯಲ್ಲಿ ನೀರಾಗಿ ಹೋಗಿದ್ದೇನೆ,
ಕರಗಿ ಹರಿಯಲು ಇನ್ನೇನು ತಾನೇ ಬಾಕಿ ಉಳಿದಿದೆ?//
ಬಂಡೆ ಮೇಲೆ ಬರೆದ ಅಕ್ಷರಗಳೆಲ್ಲ ಮಳೆಗೆ ಕರಗಿ ಹೋದವು,
ಮರದ ಮೈಯಲ್ಲಿ ಕೊರೆದ ಒಲವ ಹೆಸರು ಒಣಗಿ ಹೋದವು/
ಮುತ್ತಿನ ನೆನಪೊಂದೆ ಶಾಶ್ವತ,
ಆದರೆ ಅದು ಕೊಟ್ಟದ್ದೋ..ಇಲ್ಲ ಪಡೆದದ್ದೋ ಎನ್ನುವ ಸಣ್ಣ ಗೊಂದಲ//

09 May 2010
ಮತ್ತೇರಿದೆ... ಮುತ್ತಿನದೆ....
ಹಿಮಗಿರಿಯ ಎತ್ತರದಲಿ ಆಗುವ ಪುಳಕ,
ಕಣ್ಣಲೆ ಸೋಕಿ ನೀ ತಂದ ರೋಮಾಂಚನಕ್ಕೆ ಸಾಟಿಯೇ?/
ಕಡಲ ಆಳದಲಿ ಚಿಪ್ಪುಗಳೊಳಗೆ ಅಡಗಿ ಕುಳಿತ ಸಾಲು ಮುತ್ತುಗಳು,
ಗಾಳಿಯಲಿ ನೀನಿತ್ತ ಒಂದೇ ಒಂದು ಮುತ್ತಿಗೆ ಸಾಟಿಯೇ...?//
ಕಣ್ಣಲೆ ಸೋಕಿ ನೀ ತಂದ ರೋಮಾಂಚನಕ್ಕೆ ಸಾಟಿಯೇ?/
ಕಡಲ ಆಳದಲಿ ಚಿಪ್ಪುಗಳೊಳಗೆ ಅಡಗಿ ಕುಳಿತ ಸಾಲು ಮುತ್ತುಗಳು,
ಗಾಳಿಯಲಿ ನೀನಿತ್ತ ಒಂದೇ ಒಂದು ಮುತ್ತಿಗೆ ಸಾಟಿಯೇ...?//
08 May 2010
ಒಂದು ಭಾವುಕ ಸಂಜೆ...
ಮೌನದ ಕಾಯ ಹೊರ ಹೊಮ್ಮಿಸಿದ,
ಭಾವುಕ ಸ್ವೇದ ಬಿಂದುಗಳು/
ಒಳ ಮನವ ಮೆಲ್ಲಗೆ ಸೋಕಿ,
ನೆನಪುಗಳನ್ನೆಲ್ಲ ಆರ್ದ್ರವಾಗಿಸಿವೆ//
ಹಳೆಯ ಕಡತಗಳಲ್ಲಿ ಅಡಗಿ ಕುಳಿತಿದ್ದ,
ನೆನಪಿನೋಲೆಯೊಂದರ ಮಾಸಲು ಅಕ್ಷರಗಳು/
ಕಣ್ಣ ಬಿಂಬಕ್ಕೆ ಬಿದ್ದ ಕಂಬನಿಯ ಪರದೆಯ ಹಿಂದೆ,
ಇನ್ನಷ್ಟು ಮಬ್ಬಾಗಿ ಕಂಡವು//
ಭಾವುಕ ಸ್ವೇದ ಬಿಂದುಗಳು/
ಒಳ ಮನವ ಮೆಲ್ಲಗೆ ಸೋಕಿ,
ನೆನಪುಗಳನ್ನೆಲ್ಲ ಆರ್ದ್ರವಾಗಿಸಿವೆ//
ಹಳೆಯ ಕಡತಗಳಲ್ಲಿ ಅಡಗಿ ಕುಳಿತಿದ್ದ,
ನೆನಪಿನೋಲೆಯೊಂದರ ಮಾಸಲು ಅಕ್ಷರಗಳು/
ಕಣ್ಣ ಬಿಂಬಕ್ಕೆ ಬಿದ್ದ ಕಂಬನಿಯ ಪರದೆಯ ಹಿಂದೆ,
ಇನ್ನಷ್ಟು ಮಬ್ಬಾಗಿ ಕಂಡವು//
07 May 2010
ಗಾಳಿ ತೀಡಿದ ಕುರುಳು...
ಮೌನದ ಬಲೆಯಲ್ಲಿ ಸೆರೆಯಾದ ಚೆಮ್ಮೀನು,
ಬಾನಂಚಿನಲ್ಲಿ ಮಿನುಗೊ ಬೆಳ್ಳಿ ಚುಕ್ಕಿಯೆ ನೀನು?/
ಚಿತ್ತಾರದಲ್ಲಿ ಕಳೆದು ಹೋದ ಬಣ್ಣದ ಒಂದೇ ಎಳೆ,
ನಿನ್ನ ಬದುಕಿನ ಭಿತ್ತಿಯಲಿ ತುಂಬುವ ಆಸೆಯಿದೆ ನಾಳೆ//
ಬಾನಂಚಿನಲ್ಲಿ ಮಿನುಗೊ ಬೆಳ್ಳಿ ಚುಕ್ಕಿಯೆ ನೀನು?/
ಚಿತ್ತಾರದಲ್ಲಿ ಕಳೆದು ಹೋದ ಬಣ್ಣದ ಒಂದೇ ಎಳೆ,
ನಿನ್ನ ಬದುಕಿನ ಭಿತ್ತಿಯಲಿ ತುಂಬುವ ಆಸೆಯಿದೆ ನಾಳೆ//
05 May 2010
ನೊಂದು ಬೆಂದ ಸಂತ್ರಸ್ತ ಮನ...
ನಿನ್ನ ತುಟಿಗಳ ಸೋಕಿ ಹೊರಸುರಿವ ಮಾತುಗಳದೆ ಭಾಗ್ಯ,
ಕ್ಷಣಕ್ಕೊಮ್ಮೆ ಆಡಿ ನಿನ್ನೆವೆ ತಾಕುವ ರೆಪ್ಪೆಗಳ ಅದೃಷ್ಟವ ನೋಡಿದೆಯ?/
ಪದೇಪದೇ ನಿನ್ನ ಹಣೆಯ ಚುಂಬಿಸೋ ಕುರುಳುಗಳಿಗಂತೂ ಇಲ್ಲವೇ ಇಲ್ಲ ಭಯ,
ಅದ ಸರಿಸುವ ನೆಪದಲಿ ನಿನ್ನ ಮೊಗವ ಸೋಕುವ ತುಂಟ ಬೆರಳುಗಳಿಗೆ ಸಿಕ್ಕ ಆ ಸೌಭಾಗ್ಯದ...
ನೂರರಲ್ಲಿ ಒಂದು ಪಾಲು ಎಂದಾದರೊಮ್ಮೆ ನೀ ನನಗೂ ನೀಡಲಾರೆಯ?
ಹೇಳು..ಈ ಮೌನ ಸರಿಯ?//

Subscribe to:
Posts (Atom)