ಹೊತ್ತಿಗೆ ಮುಂಚೆ ಮೂಡಿಬಂದ ಚಂದಿರ ಇಂದೇಕೊ ಹಸಿರೊ ಹಸಿರು,
ಇದು ವಾಸ್ತವವೋ ಇಲ್ಲ ಬಣ್ಣಗುರುಡಾದ ನನ್ನ ಭ್ರಮೆಯೋ!/
ಅದೆಲ್ಲೋ ಭೂಮಿಯ ಇನ್ನೊಂದು ಅಂಚಿನಲ್ಲಿ ಬೆಚ್ಚಗಿರುವ ನಿನಗೆ,
ಅವನ ಕೈಯಲ್ಲಿ ಇನ್ನಷ್ಟು ಬೆಚ್ಚಗಿನ ಮುತ್ತುಗಳ ಕಳಿಸಿದ್ದೇನೆ...ಮರೆಯದೆ ಪಡೆದುಕೊ//
ಮನಸಲಿ ಮೂಡುವ ನೆನಪುಗಳಿಗೂ ನಿನ್ನದೇ ಪರಿಮಳ,
ಎದೆಯ ಮೇಲೆ ಬರೆಸಿರುವ ನಿನ್ನ ಹೆಸರ ಹಚ್ಚೆಯಲೂ ನಿನ್ನದೇ ಮೈಗಂಧದ ಮೃದು ತಾಳ/
ಹಣೆಯೆಲ್ಲ ನಿನ್ನೊಲವು ಬರೆದಿರದೆ ಬೋಳಾದರೂನು,
ಕೆಲವೇ ದಿನಗಳಾದರೂ ಜೊತೆ ನಡೆದ ಹೆಜ್ಜೆಗಳ ಸದ್ದು ನನ್ನ ಜೊತೆಗೇ ಇದೆಯಲ್ಲ...
ನನಗದೆ ಸಾಕು//
26 May 2010
Subscribe to:
Post Comments (Atom)
No comments:
Post a Comment