14 October 2010

ಕರಗಿದ ಭಾವಗಳು..

ಮರಳಿ ಪ್ರೀತಿ ವಿನಿಮಯ ಮಾಡಿಕೊಳ್ಳೋಣ,
ನಿನ್ನ ಬೇಸರಗಳನ್ನೆಲ್ಲಾ ಕೊಡು...ನನ್ನ ನಲಿವುಗಳ ಬದಲಿಗೆ/
ಕಣ್ಣ ಆರ್ದ್ರತೆಯಲ್ಲಿ ಕರಗಿ..
ನೋಟ ಸ್ಪರ್ಶಿಸುವ ಮಾರ್ದವತೆಗೆ ಸೋತು ತನ್ಮಯರಾಗೋಣ ಬಾ,
ವಿಷಾದದ ಆವರಣ ಕಳಚಿ...ನಸು ನಗುವರಳಿಸೋಣ ಮೊದಲಿಗೆ//


ನಿನ್ನ ಕಣ್ಣಲ್ಲಿ ಅಡಗಿರಿಸಿರುವ ನೋವನ್ನೆಲ್ಲ ಹೀರುತೀನಿ,
ನೀ ನೊಂದರೆ ನಾನೂ ಬಿಕ್ಕಿಬಿಕ್ಕಿ ಚೀರುತ್ತೀನಿ/
ನಿನ್ನ ಅಣತಿಗೆ ಕಾದು ಅದರಂತೆಯೆ ಬಾಳುತೀನಿ,
ನಿನ್ನ ಕಣ್ತುಂಬಿ ಬಂದಾಗಲೆಲ್ಲ...
ನಾನೆ ಕಂಬನಿಯಾಗಿ ಕೆಳಗುರುಳುತೀನಿ//

1 comment:

ನಾಗರಾಜ್ .ಕೆ (NRK) said...

ತುಂಬಾ ಸುಂದರವಾಗಿ ಹೆಣೆದ ಕವನ . . . .
" ಎಲ್ಲರ ಮನದ ನೋವು ಕರಗಿ
ನಲಿವಿನ ಹೂ ಅರಳಲಿ . . . ."