ಕಣ್ಣಿಗೆ ಯಾವ ಕಡಿವಾಣವೂ ಇಲ್ಲ.
ನೋಟಕೆ ತಡೆ ಹಾಕುವ ಕೋಟೆಯನ್ನು ಯಾರೂ ಕಟ್ಟಿಲ್ಲ/
ದೃಷ್ಠಿ ನಿನ್ನತ್ತ ಅದಾಗಿಯೆ ಅದು ನೆಟ್ಟು,
ನಿನ್ನಲ್ಲೆ ನೆಲೆಸಿದರೆ ಅದು ನನ್ನ ತಪ್ಪು ಹೇಗಾಗುತ್ತೆ?//
ಆದರೂ ಇದರಲ್ಲಿ ನನ್ನದೂ ಒಂಚೂರು ತಪ್ಪಿದೆ...
ನಿನ್ನ ಕನಸಿನ ಕೋಟೆಗೆ ಸೆರೆಯಾಗುವೆನೆಂಬ ಅರಿವಿದ್ದರೂ ನಾ ಲಗ್ಗೆ ಹಾಕಬಾರದಿತ್ತು/
ನಿನ್ನ ಒಲವ ತಿಳಿಗೊಳದಿಂದ ಹೊರ ಬಂದರೆ ಉಸಿರು ಸಿಗದೆ ಒದ್ದಾಡ ಬೇಕೆಂಬ ಅರಿವಿದ್ದರೂ ಸಹ,
ದೂರಮಾಡುವ ಗಾಳದ ಮೊನೆ ಕಚ್ಚಬಾರದಿತ್ತು//
ಸುತ್ತಲಿನ ಸೌಂದರ್ಯಕ್ಕೆ ಸೊಬಗು ಸಿಗೋದು ನೀ ನನ್ನ ಉಸಿರು ತಾಕುವಷ್ಟು ಹತ್ತಿರವಿದ್ದರೆ...
ಕಳೆದುಕೊಂಡರೂ ವಿಷಾದವೆನಿಸದೆ ವಿಚಿತ್ರ ಸಂಭ್ರಮವಾಗೋದು...
ನನಗೆ ಅರಿವಿಲ್ಲದಂತೆ ನೀ ನನ್ನ ಮನಸ ಕದ್ದರೆ/
ಟನ್ನಿನಷ್ಟು ಬೇಕಿಲ್ಲ.ಕ್ವಿಂಟಾಲ್ ನಷ್ಟನ್ನೂ ನಾ ಕೇಳ್ತಿಲ್ಲ...
ಕಿಲೋ ಸಹ ಬೇಡ...ಗ್ರಾಮ್ನಷ್ಟರ ಆಸೆಯೂ ಇಲ್ಲ,
...ಔನ್ಸ್ ಸಿಕ್ಕರೂ ಸಾಕು...
ಕೊಡುತೀಯ ಒಲವ? ಮೊಗೆದು ಮನಸ ಚಟಾಕು?!//
31 December 2010
Subscribe to:
Post Comments (Atom)
No comments:
Post a Comment