ಜಗತ್ತಿನ ಇತಿಹಾಸದಲ್ಲಿ ಬಹುಸಂಖ್ಯಾತ ಪರಧರ್ಮೀಯರನ್ನ ಇಸ್ಲಾಂ ಅನುಯಾಯಿಗಳು ಧೀರ್ಘಾವಧಿಯವರೆಗೆ ನಿರಂಕುಶವಾಗಿ ಆಳಿದ್ದು ಬಹುಷಃ ಸ್ಪೇನ್ ಹೊರತು ಪಡಿಸಿದರೆ ಅದು ಕೇವಲ ಭಾರತದಲ್ಲಿಯೆ.ಕ್ರೈಸ್ತ ಮತಾವಲಂಬಿಗಳ ಸ್ಪೇನ್ ಕ್ರಿಸ್ತಶಕ 711ರಿಂದ ಸರಿಸುಮಾರು ಎಂಟು ಶತಮಾನಗಳ ಕಾಲ ಇಸ್ಲಾಂ ಜಗತ್ತಿನ ಭಾಗವಾಗಿತ್ತು ಅನ್ನುವುದು ಇಂದಿಗೂ ಮುಸ್ಲಿಂ ಜಗತ್ತಿಗೆ ಕಡುಹೆಮ್ಮೆಯ ವಿಚಾರ.ಆದರೆ ಕ್ರಿಸ್ತಶಕ 1492ರಲ್ಲಿ ಈ ನಿರಂಕುಶತೆಗೆ ಲಗಾಮು ಬಿದ್ದು ಸ್ಪೇನ್ ಮರಳಿ ಕ್ಯಾಥೊಲಿಕ್ ಪಂಥಾನುಯಾಯಿಗಳ ತೆಕ್ಕೆಗೆ ಜಾರಿದ್ದು ಹಾಗು ಅವರು ಇಸ್ಲಾಮಿ ಕಾಲಮಾನದ ಕರುಹು ಉಳಿಯದಂತೆ ಎಲ್ಲಾ ಪಳೆಯುಳಿಕೆಗಳನ್ನ ನಿರ್ದಾಕ್ಷಿಣ್ಯವಾಗಿ ಧರ್ಮಾಂಧತೆಯಿಂದಲೆ ಬುಡಸಹಿತ ಕಿತ್ತು ಹಾಕಿದ್ದನ್ನ ಮಾತ್ರ ಜಾಣತನದಿಂದ ನೆನಪಿಸಿಕೊಳ್ಳಲು ಮರೆಯುತ್ತಾರೆ! ಇದೇನೆ ಇದ್ದರೂ ಈ ಹೊತ್ತಲ್ಲಿ ಹಿಂದಿರುಗಿ ನೋಡಿದಾಗ ಏಳು ಶತಮಾನಗಳ ಕಾಲ ಭಾರತವನ್ನು ಆಳಿ ಅನಂತರ ಇಲ್ಲಿಯೆ ಬೀಡು ಬಿಟ್ಟ ಇಸ್ಲಾಮಿನಿಂದ ಭಾರತ ಪಡೆದುಕೊಂಡದ್ದೇನು? ಅದರ ಕೊನೆಯ ನಿಶಾನಿಯನ್ನೂ ಇನ್ನಿಲ್ಲವಾಗಿಸಿ ಸ್ಪೇನ್ ಕಳೆದು ಕೊಂಡದ್ದೇನು ಅನ್ನುವುದನ್ನ ಸುಲಭವಾಗಿ ಅಂದಾಜಿಸಬಹುದು.
ಕುತ್ಬುದ್ದೀನ್ ಐಬಕ್ಕನಿಂದ ಮೊದಲುಗೊಂಡು ಗುಲಾಮಿ ಸಂತತಿ-ಖಿಲ್ಜಿ ಸಂತತಿ-ತುಘಲಕ್ ಸಂತತಿ-ಸಯ್ಯದ್ ಸಂತತಿ-ಲೋಧಿ ಸಂತತಿ ಹಾಗೂ ಕಟ್ಟಕಡೆಯಲ್ಲಿ ಮೊಘಲರ ಸಂತತಿಯ ಕೊನೆಯ ಬಾದಶಹ ಎರಡನೆ ಬಹದ್ದೂರ್'ಷಾನ ವರೆಗೂ ಇಸ್ಲಾಂ ಭಾರತೀಯ ನೆಲದಲ್ಲಿ ನಿರಂಕುಶ ಅಟ್ಟಹಾಸವನ್ನ ಮೆರೆದದ್ದು ಅಳಿಸಿ ಹಾಕಲಾಗದ ಐತಿಹಾಸಿಕ ಸತ್ಯ.ಈ ಏಳುನೂರು ವರ್ಷಗಳಲ್ಲಿ ಭಾರತೀಯ ಉಪಖಂಡದ ಬಹುಭಾಗ ದೆಹಲಿ ಗದ್ದುಗೆಯ ನೆರಳಿನಲ್ಲಿತ್ತು.ಹಿಂದೂ ಕೃತಿ-ಸಂಸ್ಕೃತಿಗಳು ಇಸ್ಲಾಮಿ ಕ್ರಿಯಾಶೀಲತೆಯಿಂದ ಅನೇಕ ಉತ್ತಮ ಅಂಶಗಳನ್ನು ಕಡಪಡೆದುಕೊಂಡವು.ವಿಶೇಷವಾಗಿ ಭಾಷೆಯ ದೃಷ್ಟಿಯಿಂದ ಗಮನಾರ್ಹ ಹೊಸತನಗಳು ಗೋಚರಿಸಿದವು.ಸಂಗೀತದಲ್ಲಿ ಅರಬ್ ಮೂಲದ ವಿದೇಶಿ ತಂತಿವಾದ್ಯಗಳು ಇಲ್ಲಿನ ಸಾಂಪ್ರದಾಯಿಕ ವಾದ್ಯಗಳ ಜೊತೆಯಾಗಿ ಇಲ್ಲಿನ ಮೂಲ ಸಂಗೀತದ ಮೆರುಗು ಹೆಚ್ಚಿತು.ಸಾಹಿತ್ಯವೂ ಸಮೃದ್ಧವಾಗಿ ವಿಕಸಿಸಿತು.ಖವ್ವಾಲಿ-ಗಜಲ್ ಅಮದಾದರೆ ಕಥಕ್-ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅವಿಷ್ಕರಣೆಯಾಗಿ ಭಾರತೀಯ ಸಾಂಸ್ಕೃತಿಕ ಜಗತ್ತು ಹೊಸತನವನ್ನ ಹೊತ್ತುಕೊಳ್ಳುವಂತಾಯಿತು.ಸಂಗೀತ-ಸಾಹಿತ್ಯ ಮಹಮದ್ ಪೈಗಂಬರನ ಉಕ್ತ ದೈವವಾಣಿಯ ಪ್ರಕಾರ ಇಸ್ಲಾಮಿ ಅನುಯಾಯಿಗಳಿಗೆ ಹರಾಮ್ ಎಂದು ಖುರಾನ್ ಹೇಳುವುದರಿಂದ ಅರೆಬ್ಬಿಯಾದಲ್ಲಿ ಅದರ ವಿಕಸನದ ಸ್ಥಿತಿ ಅಕ್ಷರಶಃ ಕೋಮಾಸ್ಥಿತಿಯಲ್ಲಿತ್ತು.ಹೀಗಾಗಿ ಭಾರತದ ನೆಲದಲ್ಲಿ ಇಸ್ಲಾಮಿ ಕ್ರಿಯಾಶೀಲರಿಗೆ ಹೊಸಗಾಳಿ ಸಿಕ್ಕಂತಾಗಿ ತಮ್ಮ ಪ್ರತಿಭೆಯನ್ನೆಲ್ಲ ಅವರು ಇಲ್ಲಿ ಪ್ರದರ್ಶಿಸಿ ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳಲು ಅವಕಾಶವಾಯಿತು.ಇನ್ನು ವಾಸ್ತುಶಿಲ್ಪದ ಕಥೆಯೂ ಹೆಚ್ಚು ಕಡಿಮೆ ಅಂತದ್ದೆ.ಮರಳುಗಾಡಿನ ನೆಲದಲ್ಲಿ ಪ್ರಾಕೃತಿಕ ನಿರ್ಬಂಧಕ್ಕೆ ಒಳಗಾಗಿದ್ದ ಅವರ ಸೌಂದರ್ಯಪ್ರಜ್ಞೆಗೆ ಭಾರತ ಒಂದು ತೆರೆದ ವೇದಿಕೆಯಂತಾಗಿ ತಡೆಯಿಲ್ಲದೆ ಅವರ ಪ್ರತಿಭೆ ಇಲ್ಲಿ ಪ್ರಕಾಶಿಸತೊಡಗಿತು.ಸ್ಪೇನ್'ನಲ್ಲಿನ ಇಸ್ಲಾಮಿ ವಾಸ್ತುಶಿಲ್ಪವೂ ಇದರ ಮುಂದೆ ಮಂಕು ಅನ್ನುವುದನ್ನು ನಾವು ಮರೆಯುವಂತಿಲ್ಲ.ವಾಸ್ತುಶಿಲ್ಪ ಶಾಸ್ತ್ರದಲ್ಲಿ ಹೊಸ ಇಂಡೋ-ಇಸ್ಲಾಮಿಕ್ ಶೈಲಿಯ ಕಟ್ಟಡಗಳು ತಲೆಯೆತ್ತಿ ನಿಲ್ಲುವಂತಾಯಿತು.ವಿಸ್ಮಯಕಾರಿ ಬಿಜಾಪುರದ ಗೋಲಗುಮ್ಮಟ,ಗೋಲ್ಕೊಂಡಾದ ಚಾರ್'ಮಿನಾರ್.ಲಾಹೋರಿನ ಲಾಲ್ ಮಸ್ಜಿದ್,ಗುಲಬರ್ಗಾದ ಬುಲಂದ್ ದರ್ವಾಜಾ,ದೆಹಲಿಯ ಕೆಂಪು ಕೋಟೆ,ಶ್ರೀನಗರದ ಶಾಲಿಮಾರ್ ಹೂದೋಟ ಇವೆಲ್ಲ ಇಸ್ಲಾಮಿನಿಂದ ಭಾರತೀಯತೆಗೆ ಸಂದ ವಿಶೇಷ ಕೊಡುಗೆಗಳು.ಇದಲ್ಲದರಿಂದ ಭಾರತ ಬಹಳಷ್ಟು ಪಡೆದುಕೊಂಡಿತೆ ವಿನಃ ಕಳಕೊಂಡದ್ದು ನಗಣ್ಯ.
ಅದೇಕಾಲಕ್ಕೆ ಒತ್ತಾಯದ ಸರಣಿ ಮತಾಂತರಗಳು,ಅದಕ್ಕೆ ಒಪ್ಪದ ಮೂಲಧರ್ಮೀಯರ ಮೇಲೆ ನಿರಂತರವಾಗಿ ಎಸಗಲಾದ ಜಜಿಯಾದಂತಹ ದೌರ್ಜನ್ಯ (ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚೀಲರು ಎಂಬ ಚಿತ್ರದುರ್ಗ ಸೀಮೆಯ ಬೇಡರ ಸಾಮೂಹಿಕ ಮತಾಂತರ ಹಾಗೂ ದಕ್ಷಿಣಕನ್ನಡ ಜೆಲ್ಲೆಯಂಚಿಂದ ಹಿಡಿದು ಮಲಬಾರಿನವರೆಗೂ ನಡೆದ ಬೆಸ್ತಕುಲದ ಮರಕ್ಕಲರ ಬಲವಂತದ ಮತಾಂತರಗಳು ಅತ್ಯಂತ ಹೇಯವಾಗಿದ್ದವು).ಸನಾತನ ಧಾರ್ಮಿಕ ಶ್ರದ್ಧಾಕೇಂದ್ರಗಳ ಧ್ವಂಸ ಹಾಗು ಮಸೀದಿಗಳಾಗಿ ಅವುಗಳ ಪರಿವರ್ತನೆ (ಉದಾಹಾರಣೆಗೆ ಕಾಶಿಯ ವಿಶ್ವನಾಥ ಮಂದಿರ ಗ್ಯಾನವ್ಯಾಪಿ ಮಸೀದಿಯಾದದ್ದು-ಅವಧದ ರಾಮಲಲ್ಲಾನ ದೇವಾಲಯ ಬಾಬರಿ ಮಸೀದಿಯಾದದ್ದು-ರಾವಳಪಿಂಡಿಯ ಕಟಾಸರಾಜ ದೇಗುಲದ ನಿರ್ಮೂಲನೆ-ಆಗ್ರಾದ ತೇಜೋಮಂದಿರದ ತಾಜ್'ಮಹಲ್ ಪರಿವರ್ತನೆ-ಮಥುರೆಯ ಕೃಷ್ಣ ದೇಗುಲ ಇಸ್ಲಾಮಿ ಶ್ರದ್ಧಾಕೇಂದ್ರವಾಗಿದ್ದನ್ನು ಗಮನಿಸಬಹುದು) ಕಾಶಿ,ಮಥುರಾ,ಅಯೋಧ್ಯ,ಸೋಮನಾಥ,ಢಾಕಾ,ಗೊಲ್ಕಂಡಾ,ಕೇರಳದ ಕೊಚ್ಚಿನ್ ಪ್ರಾಂತ್ಯದ ಒಳನಾಡುಗಳಲ್ಲಿ, ಕಾಶ್ಮೀರದ ಸರ್ವಜ್ಞಪೀಠದ (ಸದ್ಯ ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿದೆ) ದೇವಾಲಯಗಳ ಮೇಲಿನ ಉದ್ದೇಶಪೂರ್ವಕ ಧಾಳಿ ಇವೆಲ್ಲ ಮತಾಂಧತೆಯ ಅತಿರೇಕಗಳಾಗಿದ್ದವು ಎನ್ನುವುದನ್ನು ಮರೆಯುವ ಹಾಗಿಲ್ಲ.
ಕ್ರಿಸ್ತಶಕ 1498ರಲ್ಲಿ ವಾಸ್ಕೋ-ಡಾ-ಗಾಮನ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಯುರೋಪಿಯನ್ ವ್ಯಾಪಾರಿಗಳು ಮುಂದೆ ಇಡಿ ದೇಶವನ್ನೆ ರಾಜಕೀಯವಾಗಿ ಪ್ರಭಾವಿಸುವ ಮಟ್ಟಿಗೆ ಬೆಳೆದು,ಕಡೆಗೊಮ್ಮೆ ಕ್ರಿಸ್ತಶಕ 1622ರಲ್ಲಿ ಭಾರತ ಉಪಖಂಡ ಹೊಕ್ಕ ವಣಿಕರ ಸೋಗಿನ ಬ್ರಿಟಿಶ್ ಅತಿಕ್ರಮಣಕಾರರು ಕ್ರಮೇಣ ಬಲಿತು ಕ್ರಿಸ್ತಶಕ 1857 ರಲ್ಲಿ ಮೊಘಲರ ಕೊನೆಯ ನಾಮ್-ಕೆ-ವಾಸ್ತೆ ಬಾದಶಹನನ್ನು ಮಾಂಡಲೆಯ ಸೆರೆಮನೆಗೆ ಗಡಿಪಾರು ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳುವ ಮೂಲಕ ಭಾರತೀಯ ಇಸ್ಲಾಮಿ ಸಾಮ್ರಾಜ್ಯಶಾಹಿಯ ಸೂರ್ಯ ಕೊನೆಗೂ ಮುಳುಗಿದ.ಆದರೆ ಕತ್ತಲಾದ ನಂತರವೂ ಅಲ್ಲಲ್ಲಿ ತಾರೆಗಳು ಹೊಳೆಯುವಂತೆ ಮೊಗಲ್ ಸಾಮಂತ ಸರದಾರರು ದೇಶದ ಅಲ್ಲಲ್ಲಿ ಒಂದೊ ಪ್ರಬಲ ಬ್ರಿಟಿಷರ ಸ್ನೇಹ ಸಾಧಿಸಿಯೋ ಇಲ್ಲವೆ ವೈರ ಕಟ್ಟಿಕೊಂಡೊ ಸ್ವತಂತ್ರವಾಗಿ,ತಮ್ಮ ಆಳ್ವಿಕೆಯನ್ನ ದೇಶ ರಾಜಕೀಯವಾಗಿ ಕ್ರಿಸ್ತಶಕ 1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ ಪಡೆದ ಎರಡುವರ್ಷಗಳ ನಂತರದವರೆಗೂ ಉಳಿಸಿಕೊಂಡೆ ಬಂದರು.ಆಗಲೂ ಅವರಲ್ಲಿ ಕೆಲವರು ತಮ್ಮ ಧರ್ಮನಿಷ್ಠೆಗೆ ಅನುಸಾರವಾಗಿ ಸನಾತನ ಧರ್ಮಾನುಯಾಯಿಗಳ ಮೇಲೆ ಜಿದ್ದು ಸಾಧಿಸುವಂತೆ ನಡೆದುಕೊಂಡದ್ದೂ ಇತ್ತು.ಉದಾಹಾರಣೆಗೆ ಅಲ್ಪಾವಧಿಗೆ ಮೈಸೂರನ್ನು ಆಳಿದ ಟಿಪ್ಪೂ ಸುಲ್ತಾನ ಬಹಿರಂಗವಾಗಿ ಹಿಂದೂ ಶ್ರದ್ಧಾಕೇಂದ್ರವಾಗಿದ್ದ ಶೃಂಗೇರಿ ಶಾರದಾ ಪೀಠಕ್ಕೆ ಉದಾರ ದೇಣಿಗೆ ನೀಡುತ್ತಿದ್ದ ಅನ್ನುವುದು ಹೌದಾದರೂ (ಹಿಂದೂಗಳೇ ಆಗಿದ್ದ ಮರಾಠರು ಸಂಪತ್ತು ದೋಚುವ ದುರಾಸೆಯಿಂದ ಶೃಂಗೇರಿಗೆ ಧಾಳಿಯಿಟ್ಟು,ಮೂಲ ಶಾರದೆಮೂರ್ತಿಯನ್ನೆ ದ್ವಂಸ ಮಾಡಿ ಬರ್ಭರವಾಗಿ ಲೂಟಿ ಎಸಗಿದ್ದ ದಿನಗಳವು), ಅದೆ ಟಿಪ್ಪು ಮಲಬಾರ್ ಹಾಗೂ ಕೊಡಗಿನಲ್ಲಿ ಒತ್ತಾಯದಿಂದ ಕತ್ತಿಮೊನೆಯಂಚಲ್ಲಿ ಎಸಗಿದ್ದ ಮತಾಂತರಗಳನ್ನ ಮರೆಯುವುದು ಹೇಗೆ? ಅವನ ದಾನ ಬಹುಸಂಖ್ಯಾತ ಹಿಂದೂ ಪ್ರಜೆಗಳನ್ನ ಓಲೈಸಲು ಅವರ ಶ್ರದ್ಧಾಕೇಂದ್ರಗಳನ್ನ ಆತ್ಮೀಯವಾಗಿಟ್ಟುಕೊಳ್ಳುವ ಸರಳ-ಶುದ್ಧ ರಾಜಕೀಯ ನಡೆಯಾಗಿತ್ತು ಅನ್ನುವುದು ಸ್ಪಷ್ಟ.ಹಾಗೆಯೆ ಮತಾಂತರಗಳೂ ಕಟ್ಟರ್ ಇಸ್ಲಾಮಿಯಾಗಿ ಅವನ ಧರ್ಮಶ್ರದ್ಧೆ ವಿಧಿಸಿದ್ದ ಕರ್ತವ್ಯವೂ ಆಗಿತ್ತು.ನಮ್ಮ ಇಂದಿನ ಸಾಮಾಜಿಕ ಸಂಹಿತೆ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಇತಿಹಾಸದ ಘಟನಾವಳಿಗಳನ್ನ ಒರೆಗೆ ಹಚ್ಚುವುದರಿಂದ ಆಗುವ ಎಡವಟ್ಟುಗಳು ಇವು ಅನ್ನೋದು ಸ್ಪಷ್ಟ.ಈಗಿನ ಜಾತ್ಯಾತೀತತೆಯ ಕಲ್ಪನೆಯೂ ಇದ್ದಿರದಿದ್ದ ಅಂದಿನ ಸಾಮಾಜಿಕ ಪರಿಸ್ಥಿತಿಗೆ ಬಹುಷಃ ಅದು ತಪ್ಪೆನಿಸುತ್ತಿರಲಿಲ್ಲವೇನೊ,ಆದರೆ ಇಂದಿನ ನಾಗರೀಕ ಕಾನೂನಿನ ಅಡಿಯಲ್ಲಿ ಅದು ಪ್ರಮಾದವಾಗಿ ಗೋಚರಿಸುತ್ತದೆ.
(ಇನ್ನೂ ಇದೆ)
13 October 2011
12 October 2011
ಭಾರತೀಯತೆ ಮತ್ತು ಪರಕೀಯತೆ....
ಭಾರತೀಯತೆ ಮತ್ತು ಪರಕೀಯತೆ....
ಭಾರತೀಯ ನೆಲದ ಮೇಲೆ ವಿದೇಶಿ ಆಕ್ರಮಣದ ಚರಿತ್ರೆಯನ್ನ ಅಧಿಕೃತವಾಗಿ ಅವಲೋಕಿಸುವುದಾದರೆ ನಾವು ಇನ್ನೂ ಹಿಂದೆ ಕ್ರಿಸ್ತಪೂರ್ವಕ್ಕೆ ಹೋಗುವುದು ಅನಿವಾರ್ಯ.ಪ್ರಪಂಚವನ್ನೆ ಗೆಲ್ಲುವ (ಅಂದಿನ ಪ್ರಪಂಚದ ಕಲ್ಪನೆ ಗ್ರೀಕ್-ಸ್ಪೇನ್'ನ ಜನವಸತಿ,ಉತ್ತರದ ಅನಾಗರೀಕ ಯುರೋಪು-ಪೂರ್ವದ ಹಿಮಾಚ್ಛಾದಿತ ಯುರೋಪ್ ಹಾಗೂ ಉತ್ತರ ಆಫ್ರಿಕೆಯ ಕೆಲಭಾಗ ಹಾಗು ಅರೇಬಿಯಾ-ಪರ್ಶಿಯ-ಇಂಡಿಯ ಇಷ್ಟಕ್ಕೆ ಸೀಮಿತವಾಗಿತ್ತು.ಭಾರತಕ್ಕೆ ಮೊದಲು 'ಇಂಡಿಯ' ಅಂದವರು ಗ್ರೀಕರು.ಸಿಂಧೂನದಿಯನ್ನ ಇಂಡಸ್ ಎಂದು ಕರೆದ ಅವರು ಅದರ ತೀರದಲ್ಲಿ ವಾಸವಿದ್ದ ಎಲ್ಲರನ್ನೂ ಸಾರಾಸಗಟಾಗಿ ಇಂಡಿಯನ್ನರು ಎಂದು ಗುರುತಿಸಿದರು ಅನಂತರದ ದಿನಗಳಲ್ಲಿ ಯುರೂಪಿನಾದ್ಯಂತ ಅದೆ ಹೆಸರು ಖಾಯಂ ಆಯಿತು.) ವಿಶ್ವಕ್ಕೆ ನಿಜವಾದ ಅರ್ಥದಲ್ಲಿ ಸಾಮ್ರಾಟನಾಗುವ ಮಹತ್ವಾಕ್ಷಾಂಶೆ ಹೊಂದಿದ್ದ ಅಪರೂಪದ ಸಾಹಸಿ-ನಿಜವಾದ ಅರ್ಥದಲ್ಲಿ ಕನಸುಗಾರ ಅಲೆಕ್ಸಾಂಡರ್ ಮೊತ್ತಮೊದಲಿಗೆ ಇಲ್ಲಿನ ಸಂಪತ್ತು ಹಾಗೂ ಅಧಿಕಾರ ವಿಸ್ತರಣೆಯ ಉದ್ದೇಶದಿಂದ ಧಾಳಿ ಸಂಘಟಿಸಿದ್ದ.ಇಸ್ಲಾಂ ಹುಟ್ಟುವ ಸಾವಿರ ವರ್ಷದ ಹಿಂದೆಯೆ ಗ್ರೀಕರ ಈ ಸಾಹಸಿ ನೆಲಮಾರ್ಗದಿಂದಲೆ ಹೊರಟು ಪರ್ಶಿಯವನ್ನ ಗೆದ್ದು (ಇಂದಿನ ಇರಾಕ್) ಅಲ್ಲಿ ತನ್ನ ದಣಿದಿದ್ದ ಸೈನ್ಯವನ್ನ ಬಹುತೇಕ ಬರಾಕಸ್ತುಗೊಳಿಸಿ ಪರ್ಷಿಯಾದ ಉತ್ಸಾಹಿ ತರುಣರನ್ನೆ ಹೆಚ್ಚಾಗಿ ಹೊಂದಿದ್ದ ಹೊಸ ಸೈನ್ಯವನ್ನ ಕಟ್ಟಿ ಸಿಂದೂನದಿಯ ಎಲ್ಲೆ ಬಂದು ಮುಟ್ಟಿದ.
ಆಗಿನ ಭೂಪಟದ ಪ್ರಕಾರ ಪರ್ಶಿಯ ಭಾರತದ ನೆರೆದೇಶವಾಗಿತ್ತು (ಧರ್ಮಾಧರಿತವಾಗಿ ದೇಶ ವಿಭಜನೆಯಾಗುವವರೆಗೂ ಪರ್ಶಿಯ ಭಾರತದ ನೆರೆದೇಶವೆ ಆಗಿತ್ತು). ಅಲೆಕ್ಸಾಂಡರ್ ಉದ್ದೇಶ ಗಂಗೆಯನ್ನು ಮುಟ್ಟಿ ಅದರ ಪ್ರವಾಹದ ದಿಕ್ಕಿನಲ್ಲೆ ಸಾಗಿ ಅನಂತರ ಸಾಗರ ತೀರ ಸೇರಿ ಬಂದದಾರಿಯಲ್ಲೆ ಹಿಂದಿರುವುದಾಗಿತ್ತು.ಆದರೆ ಅವನ ಆತ್ಮಸ್ಥೈರ್ಯ ಕುಗ್ಗುವಂತ ಘಟನೆಗಳು ಒಂದಾದರ ಮೇಲೆ ಒಂದು ನಡೆದುದರಿಂದ ಸಾಮ್ರಾಟ ತನ್ನ ಈ ಯೋಜನೆಯನ್ನ ಬಿಟ್ಟು ಸ್ವದೇಶಕ್ಕೆ ಹಿಂದಿರುಗಲೆ ಬೇಕಾಯಿತು.ಮೊದಲನೆಯದಾಗಿ ಅವನ ಜೀವವೆ ಆಗಿದ್ದು ಗ್ರೀಸಿನಿಂದ ಪರ್ಷಿಯಾದವರೆಗೂ ಜೊತೆನೀಡಿದ್ದ ಕುದುರೆ ಭ್ಯೂಸಿಫಲಾಸ್ ಅತೀವ ಬಳಲಿಕೆಯಿಂದ ಅಸುನೀಗಿತು,ಎರಡನೆಯದಾಗಿ ಗಂಗೆಯ ಇಕ್ಕೆಡೆಗಳಲ್ಲೂ ನೆಲೆ ನಿಂತಿದ್ದ ಅನೇಕ ಭಾರತೀಯ ಬುಡಕಟ್ಟುಗಳನ್ನ ಮಣಿಸಿ ಮುಂದೆ ಸಾಗುವುದು ಸವಾಲಿನ ಕೆಲಸವಾಗಿತ್ತು,ಮೂರನೆಯದಾಗಿ ಭಾರತೀಯ ರಾಜ ಪುರೂರವನ ಸ್ವರಕ್ಷಣೆಯ ಯುದ್ದಾಹ್ವಾನ ಅಲೆಕ್ಸಾಂಡರ್ ಚಿಂತೆ ಹೆಚ್ಚಿಸಿತ್ತು ಹಾಗೂ ಕೊನೆಯದಾಗಿ ಸಾವಿರಾರು ಮೈಲಿ ಹೋರಾಡುತ್ತಾ ಬಂದು ವಿಭಿನ್ನ ಹವಾಮಾನಗಳನ್ನ ಎದುರಿಸಿ ಅವನ ಬಹುತೇಕ ಮೂಲಸೈನಿಕರು ಬಳಲಿ ನಿತ್ರಾಣರಾಗಿ ಹೋಗಿದ್ದರು.ಹೀಗಾಗಿ ಪುರೂರವನನ್ನು ಮಣಿಸಿದರೂ ಕೇವಲ ಕಪ್ಪಪಡೆದು ಸ್ವದೇಶದ ಹಾದಿ ಹಿಡಿಯಲು ಅಲೆಕ್ಸಾಂಡರ್ ನಿರ್ಧರಿಸಿ ತನ್ನ ಒಡನಾಡಿಗಳಿಗೆ ತನ್ನೊಂದಿಗೆ ಬರುವ ಅಥವಾ ಇಲ್ಲೇ ಉಳಿಯುವ ಸ್ವಾತಂತ್ರ ನೀಡಿದ.ಅನೇಕ ಗ್ರೀಕರು ಮರಳಿ ಹೋಗಲಿಕ್ಕೆ ಇಚ್ಚಿಸದೆ ಇಲ್ಲೆ ಉಳಿದು ಭಾರತೀಯ ಮುಖ್ಯವಾಹಿನಿಯಲ್ಲಿ ಬೆರೆತು ಹೋದರು.
ಇಲ್ಲಿ ಆಗಷ್ಟೆ ವೇದಕಾಲ ಮುಗಿದು ದೇವತಾರಾಧನೆ ಪ್ರಕೃತಿಪೂಜೆಯಿಂದ ವಿಗ್ರಹಾರಾಧನೆಗೆ ವಿಕಸಿಸಿತ್ತು.ಇಲ್ಲಿನ ಧಾರ್ಮಿಕತೆಯನ್ನೆ ಕ್ರಮೇಣ ಅನುಸರಿಸತೊಡಗಿದ ಇಲ್ಲುಳಿದ ಗ್ರೀಕರು ತಮ್ಮ ಮೂಲ ಆರಾಧನಾ ಕ್ರಮವನ್ನು ಕೊಂಚ ಮಾರ್ಪಡಿಸಿ ಕೊಳ್ಳಬೆಕಾಯಿತಷ್ಟೇ.ಇದು ಹೆಚ್ಚಿನ ಗೊಂದಲಕ್ಕೆ ಎಡೆ ಮಾಡಿ ಕೊಡಲಿಲ್ಲ ,ಏಕೆಂದರೆ ಕ್ರೈಸ್ತ ಧರ್ಮ ಬೆತ್ಲಹೆಮ್'ನಲ್ಲಿ ಉಗಮವಾಗಲು ಇನ್ನೂ ಮೂರೂಕಾಲು ಶತಮಾನ ಬಾಕಿಯಿದ್ದ ದಿನಗಳವು.ಅದು ಹುಟ್ಟಿ ಬೆಳೆದು ಗ್ರೀಕನ್ ಸಾಮ್ರಾಜ್ಯದ ನಂತರ ಪ್ರವರ್ಧಮಾನಕ್ಕೆ ಬಂದ ರೋಮನ್ ಸಾಮ್ರಾಜ್ಯದ ರಾಜಧರ್ಮವಾಗುವವರೆಗೂ ಯುರೋಪಿನಲ್ಲಿ ಭಾರತದಂತೆ ವಿಗ್ರಹಾರಾಧನೆ ಚಾಲ್ತಿಯಲ್ಲಿತ್ತು.ಇಲ್ಲಿಯೆ ಉಳಿದ ಗ್ರೀಕರ ಮುಂದಿನ ಸಂತತಿ "ಚಿತ್ಪಾವನ ಬ್ರಾಮ್ಹಣ" ಸಮುದಾಯವಾಗಿದೆ.ದೈಹಿಕವಾಗಿ ಅವರಲ್ಲಿ ಉಳಿದ ಕುರುಹುಗಳು ಅವರ ಮೂಲವನ್ನು ಸ್ಪಷ್ಟಪಡಿಸುತ್ತವೆ.ಮುಂದಿನ ದಿನಗಳಲ್ಲಿ ಗುಜರಾತದಿಂದ ಆರಂಭಿಸಿ ಕೇರಳದವರೆಗೂ ಕರಾವಳಿಯಲ್ಲಿ ಹರಡಿ ಕೊಂಡ ಈ ಸಮುದಾಯದ ಸದಸ್ಯರ ನೀಲಿ-ಹಸಿರು-ಬೂದು ಕಣ್ಣುಗಳು,ಹಾಲುವರ್ಣದ ಚರ್ಮ,ಕೆಂಚು ಕೂದಲು,ಎದ್ದುಕಾಣುವ ಮುಖಚರ್ಯೆ....ಇವೆಲ್ಲ ಅವರ ತಲೆಮಾರುಗಳ ಹಿಂದಿನ ಗ್ರೀಕನ್ ವಂಶವಾಹಿಗಳ ಕೊಡುಗೆಯಾಗಿ ಉಳಿದುಹೋಗಿದೆ.ಇವರೂ ಸಹ ಇಲ್ಲಿನವರನ್ನ ಮತಾಂತರಿಸದೆ ತಾವೆ ಇಲ್ಲಿನ ಮತಕ್ಕೆ ಮಾರು ಹೋಗಿ ಈಗ ನೂರಕ್ಕೆ ನೂರು ಶೇಕಡಾ ಭಾರತೀಯರೆ ಆಗಿಹೋಗಿದ್ದಾರೆ ಅನ್ನುವುದು ನಿಮ್ಮ ಗಮನಕ್ಕಿರಲಿ.
ಮತ್ತೆ ಕ್ರಿಸ್ತಶಕ 1175ರ ಇಸ್ಲಾಮಿ ದೊರೆ ಮಹಮದ್ ಘೋರಿಯ ಧಾಳಿಗೆ ಮರಳೋಣ.ಮಹಮದ್ ಬಿನ್ ಗಜನಿಯ ಕೊನೆಧಾಳಿಯ ನಂತರ ಭಾರತಕ್ಕೆ ನುಗ್ಗಿದ ಮತ್ತೊಬ್ಬ ಇಸ್ಲಾಮಿ ಅರಸು ಈತ.ಆ ಮೊದಲ ಧಾಳಿಯಲ್ಲಿ ಮುಲ್ತಾನನ್ನು ಆಕ್ರಮಿಸಿದ ಘೋರಿ ಸತತ ಏಳು ಬಾರಿ ಭಾರತದ ಉತ್ತರ ಭೂಭಾಗಗಳನ್ನ ಲೂಟಿ ಹೊಡೆದ.ಮೊದಲ ಧಾಳಿಯ ನಂತರ ಕ್ರಿಸ್ತಶಕ 1178ರಲ್ಲಿ ಗುಜರಾತಿನ ಸೋಮನಾಥ ದೇವಾಲಯದತ್ತ ನುಗ್ಗುವ ಯತ್ನದಲ್ಲಿದ್ದಾಗ ಘೋರಿ ಅಲ್ಲಿನ ದೊರೆ ಎರಡನೆ ಭೀಮದೇವನಿಂದ ತೀವ್ರ ಪ್ರತಿರೋಧ ಎದುರಿಸಿದನಾದರೂ ಸೋಲೊಪ್ಪಿಕೊಳ್ಳಲಿಲ್ಲ.ಆದರೆ ತನ್ನ ಮೂರನೆ ಧಾಳಿಯ ತರೈನ್ ಸಮರದಲ್ಲಿ ಪ್ರಥ್ವಿರಾಜ ಚೌಹಾನನ ಎದುರು ನಾಚಿಕೆಗೇಡಿನ ಸೋಲನ್ನ ಆತ ಎದುರಿಸಿ ತೀವ್ರವಾಗಿ ಗಾಯಗೊಂಡು ಕಾಬೂಲಿಗೆ ಓಡಿ ಹೋಗಬೇಕಾಯಿತು.
ಆದರೆ ಮುಂದಿನ ವರ್ಷ ನಡೆದ ಯುದ್ದದಲ್ಲಿ ಪರಿಣಾಮ ವ್ಯತಿರಿಕ್ತವಾಗಿ ಘೋರಿ ಯುದ್ಧ ಗೆದ್ದ.ಆಗ ಕನೋಜು ಪ್ರತಿಹಾರರ ಆಡಳಿತ ಕೇಂದ್ರವಾಗಿದ್ದರೂ ಇಂದಿನಂತೆ ಇಂದ್ರಪ್ರಸ್ಥದ (ಇಂದಿನ ದೆಹಲಿ) ಮೇಲಿನ ಒಡೆತನ ಭಾರತದ ಸಾಮ್ರಾಟರು ಯಾರು ಎಂಬುದನ್ನು ನಿರ್ಧರಿಸುತ್ತಿತ್ತು.ಹೀಗಾಗಿ ಘೋರಿ ಪ್ರಥ್ವಿರಾಜನನ್ನು ಮಣಿಸಿದ ನಂತರ ಇಂದ್ರಪ್ರಸ್ಥ,ಕನೋಜು,ಕಾಶಿ,ಅಜ್ಮೇರ್,ಗುಜರಾತ್,ಗೌಡ ದೇಶ (ಇಂದಿನ ಬೆಂಗಾಲ) ,ಗುಜರಾತ್ ಎಲ್ಲವನ್ನ ದೋಚಿದ.....ಮತ್ತೆ "ಕತ್ತಿ ಇಲ್ಲವೆ ಖುರಾನ್"ನ ಅನುಸಾರ ಸೆರೆ ಸಿಕ್ಕವರನ್ನ ಬಲವಂತದಿಂದ ಮತಾಂತರಕ್ಕೆ ಒಳಪಡಿಸಲಾಯಿತು.ಇಲ್ಲಿಯವರೆಗೂ ಕೇವಲ ಲೂಟಿಗೆ ಸೀಮಿತವಾಗಿದ್ದ ಇಸ್ಲಾಂ ಧಾಳಿಕೋರತನ ಘೋರಿ ತನ್ನ ತುರ್ಕಿ ಮೂಲದ ಗುಲಾಮ ಕುತ್ಬುದ್ದೀನ್ ಐಬಕ್'ನನ್ನು ತಾನು ಗೆದ್ದ ಭಾರತೀಯ ನೆಲೆಗಳ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಭಾರತೀಯ ನೆಲದಲ್ಲಿಯೆ ಇಸ್ಲಾಂ ಆಳ್ವಿಕೆ ಜಾರಿಗೆ ಬರುವಂತಾಗಲು ಮೂಲವಾಯಿತು.ಕ್ರಿಸ್ತಶಕ 1206ರಲ್ಲಿ ಘೋರಿ ಶಾಶ್ವತವಾಗಿ ಗೋರಿ ಹೊಕ್ಕ ನಂತರ ಕುತ್ಬುದ್ದೀನ್ ಐಬಕ್ ಸ್ವತಂತ್ರನಾದ.ಭಾರತೀಯ ನೆಲದಲ್ಲಿ ಅಧಿಕೃತವಾಗಿ ಅವನ ಗುಲಾಮಿ ಸಂತತಿಯ ಆಳ್ವಿಕೆ 'ಇಸ್ಲಾಮಿ ರಾಜಧರ್ಮ'ದೊಂದಿಗೆ ಹೀಗೆ ಆರಂಭವಾಯ್ತು.
(ಇನ್ನೂ ಇದೆ...)

11 October 2011
ಇಸ್ಲಾಂ ಧಾಳಿಕೋರತನ ಹಾಗು ಭಾರತೀಯರೊಂದಿಗಿನ ಅದರ ಆರಂಭಿಕ ಕದನ....
ದಕ್ಷಿಣದಲ್ಲಿ ಇಸ್ಲಾಂ ವ್ಯಾಣಿಜ್ಯದ ಕಾರಣಗಳ ಮೂಲಕ ಕ್ರಿಸ್ತಶಕ 646ರಲ್ಲಿ ದೇಶದೊಳಗೆ ತನ್ನ ಮೊದಲ ಹೆಜ್ಜೆಯೂರುತ್ತಿದ್ದಾಗ ಭಾರತ ಉಪಖಂಡದಲ್ಲಿದ್ದ ರಾಜಕೀಯ ಪರಿಸ್ಥಿತಿಯನ್ನ ನಾವು ಅರಿತುಕೊಳ್ಳಬೇಕು.ಕೇರಳದ ಚೇರರು ಸ್ವತಂತ್ರರಾಗಿ ಮೆರೆಯುತ್ತಿದ್ದ ಕಾಲವದು.ಇಂದಿನ ತಮಿಳುನಾಡಿನ ಬಹುಪಾಲು ಕಂಚಿಯಿಂದ ಆಳುತ್ತಿದ್ದ ಪಲ್ಲವರ ಅಧೀನದಲ್ಲಿತ್ತು.ಕೊಂಗನಾಡಿನ ಕೆಲಭಾಗಗಳೂ ಸೇರಿ ದಕ್ಷಿಣ ತಮಿಳುನಾಡು ತಂಜಾವೂರು ಕೇಂದ್ರಿತ ಚೋಳರ ಆಳ್ವಿಕೆಯಲ್ಲಿತ್ತು.ಚೋಳರು ಪಲ್ಲವರ ಸಾಮಂತರಾಗಿದ್ದರು.ಇನ್ನುಳಿದಂತೆ ಪೂರ್ವದ ಕರಾವಳಿಗಳೂ ಸೇರಿದಂತೆ ದಕ್ಷಿಣ ಹಾಗೂ ಪಶ್ಚಿಮ ಭಾರತದ ಬಹುಪಾಲು ಬಾದಾಮಿಯ ಚಾಲುಕ್ಯರ ಸಾಮ್ರಾಜ್ಯದಲ್ಲಿ ಸೇರಿಹೋಗಿದ್ದವು.ದೇಶದ ಉತ್ತರದ ಭೂಭಾಗ ಹರ್ಷ ಚಕ್ರವರ್ತಿಯ ಅಧೀನದಲ್ಲಿದ್ದು ಅವನ ಆಳ್ವಿಕೆಯ ಗುರ್ಜರ ಸಂಸ್ಥಾನ ತನ್ನ ಕೊನೆಗಾಲದ ಅಂಚಿಗೆ ಬಂದು ಮುಟ್ಟುವ ಸ್ಥಿತಿಯಲ್ಲಿತ್ತು.ಸಾಮ್ರಾಟರೆನಿಸಿದ್ದ ಗುರ್ಜರ-ಚಾಲುಕ್ಯ-ಪ್ರತಿಹಾರ-ಪಲ್ಲವರನ್ನ ಧಿಕ್ಕರಿಸಿ ಚೋಳ-ಪಾಂಡ್ಯ-ಚೇರ-ಕದಂಬ ಮುಂತಾದ ಮನೆತನಗಳು ಒಂದೊ ಹೊಸತಾಗಿ ಸಾಮ್ರಾಜ್ಯ ಕಟ್ಟಲು,ಇಲ್ಲವೆ ಅಧೀನ ಸಾಮ್ರಾಟರಿಂದ ಸ್ವತಂತ್ರ ಘೋಷಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದರು.
ಆರ್ಥಿಕವಾಗಿ ಭಾರತ ಭೂಮಿ ಸಮೃದ್ಧವಾಗಿತ್ತು ಹಾಗು ಇಲ್ಲಿನ ವಣಿಕ ಸಾರ್ಥಗಳು (ಕ್ಯಾರವಾನ್) ದಕ್ಷಿಣದ ಕಂಚಿಯಿಂದ ವಾಯುವ್ಯದ ಸಮರಖಂಡದವರೆಗೂ (ಇಂದಿನ ಉಜ್ಬೇಕಿಸ್ತಾನ), ನೈರುತ್ಯದ ಮುಸ್ಸೇರಿ ಪಟ್ಟಣದಿಂದ ಗಂಗಾ ಬಯಲು ದಾಟಿ ಈಶಾನ್ಯದ ಬ್ರಮ್ಮದೇಶದವರೆಗೂ ಸೊತ್ತು ಸರಂಜಾಮುಗಳನ್ನ ಹೊತ್ತು ಬಿಕರಿ ಮಾಡುತ್ತಿದ್ದವು.ಸಾಲದ್ದಕ್ಕೆ ಸಮುದ್ರ ಮಾರ್ಗಗಳ ಮೂಲಕ ಆಗ್ನೇಯ ದೇಶಗಳಿಗೂ ಹೋಗುವ ಸಾರ್ಥಗಳೂ ಅಸ್ತಿತ್ವದಲ್ಲಿದ್ದವು.ಆದರೆ ಪಶ್ಚಿಮ ಕರಾವಳಿಯಿಂದ ಯಾವುದೆ ಸರಕುಗಳನ್ನ ನೇರವಾಗಿ ಹೊತ್ತೊಯ್ದು ಮಾರಲು ಅರಬ್ಬಿಗಳ ಆಕ್ಷೇಪ ಜಾರಿಯಲ್ಲಿತ್ತು.ಆಗಷ್ಟೆ ಕಣ್ತೆರೆದಿದ್ದ ಇಸ್ಲಾಮಿಗೆ ಧರ್ಮಾಂತರವಾಗಿದ್ದ ಅರಬ್ ಜಗತ್ತಿನ ವಣಿಕರು ಭಾರತೀಯ ಸಿರಿಯ ಮೇಲೆ ಕಣ್ಣಿಡಲಾರಂಭಿಸಿದ್ದರು.ಅರಬ್ ಜಗತ್ತಿನಲ್ಲಿ ಸಿರಿಯಾದ ದಮಸ್ಕಾಸ್,ಇರಾಕಿನ ಬಾಗ್ದಾದ್,ಪರ್ಷಿಯಾದ ತೆಹರಾನ್ ರಾಜಧಾನಿಗಳಾಗಿ ಮೆರೆಯುತ್ತಿದ್ದವು.ಆದರೂ ಯಾರಿಂದಲೂ ಆಳಿಸಿಕೊಳ್ಳಲು ಇಚ್ಚಿಸದ ಹಲವಾರು ಬುಡಕಟ್ಟುಗಳು ತಮಗೆ ತೋಚಿದ ಹಾಗೆ ಕಾನೂನು ಕಟ್ಟಳೆಗಳನ್ನು ತಮ್ಮ ಸಮಾಜದೊಳಗೆ ರೂಪಿಸಿಕೊಂಡಿದ್ದವು.ಎಲ್ಲದ್ದಕ್ಕೂ ಇಸ್ಲಾಮಿನ ನೆಲೆಗಟ್ಟು ಕಡ್ಡಾಯವೆ ಆಗಿಹೋಗಿತ್ತು.
ಮೊತ್ತಮೊದಲಿಗೆ ಭಾರತೀಯ ಉಪಖಂಡವನ್ನ ಹಿಂದುಸ್ತಾನವೆಂದೂ,ಇಲ್ಲಿನ ನಿವಾಸಿಗಳನ್ನ ಸಾರಾಸಗಟಾಗಿ ಹಿಂದೂಗಳೆಂದೂ ಗುರುತಿಸಿದವರು ಅರಬ್ಬಿಗಳೆ.ಸಿಂಧೂ ನದಿಯ ಸುತ್ತಮುತ್ತಲವರೆಗೆ ಆಗಾಗ ಧಾಳಿಯಿಡುತ್ತಿದ್ದ ಅರಬ್ ಬುಡಕಟ್ಟುಗಳ ಬಾಯಲ್ಲಿ ಸಿಂಧೂ ಹಿಂದೂವಾಗಿ ಉಚ್ಚಾರಿತವಾಗಿ ಸದ್ಯ ಅದೆ ಇಲ್ಲಿನ ಮೂಲ ಧರ್ಮದ ಹೆಸರಾಗಿ ಉಳಿದು ಹೋಗಿದೆ!
ಹೀಗಿದ್ದಾಗ ಭಾರತದ ಮೇಲೆ ಆರಂಭದಲ್ಲಿ ಧಾಳಿಯಿಟ್ಟವನು ಮಹಮದ್ ಬಿನ್ ಕಾಸಿಂ.ಕ್ರಿಸ್ತಶಕ 714ರ ಅಂತ್ಯದಲ್ಲಿ ಇವನ ನೇತೃತ್ವದಲ್ಲಿ ಇಸ್ಲಾಮಿ ಧರ್ಮಾನುಯಾಯಿಗಳಿಂದ ಭಾರತದ ಮೇಲೆ ಮೊದಲ ಆಕ್ರಮಣ ನಡೆಯಿತು.ದೇವಳದಿಂದ (ಇಂದಿನ ಕರಾಚಿ) ರಾಜ್ಯಭಾರ ಮಾಡುತ್ತಿದ್ದ ದಾಹಿರ ರಾಜ ಸಾಂಪ್ರದಾಯಿಕವಲ್ಲದ ಹಾಗು ಕ್ರೌರ್ಯಕ್ಕೆ ಹೆಚ್ಚು ಒತ್ತು ಕೊಡುವ ಅರಬ್ಬೀ ಬುಡಕಟ್ಟುಗಳ ಯುದ್ದ ಶೈಲಿಯಿಂದ ನಜ್ಜುಗುಜ್ಜಾಗಿ ಹೋದ.ಮೂಲಸ್ಥಾನದಲ್ಲಿದ್ದ (ಇಂದಿನ ಮುಲ್ತಾನ್) ಕೊನಾರ್ಕದಲ್ಲಿರುವಂತಹದ್ದೆ ಸೂರ್ಯ ದೇವಾಲಯ ಇವರ ಧಾಳಿಯ ಅಂಗವಾಗಿದ್ದ ಧರ್ಮ ಶ್ರದ್ಧೆಗೆ ಬಲಿಯಾಗಿ ;ಮೂರ್ತಿ ಭಂಜನೆಗೆ ಸಿಲುಕಿ ಸರ್ವನಾಶವಾಗಿ ಹೋಯಿತು.ಕತ್ತಿಯಂಚಲ್ಲಿ ಸುಲಿಗೆಗಳು ನಡೆದವಾದರೂ ಮತಾಂತರದಂತಹ ಅತಿರೇಕ ಆಗಿನ್ನೂ ಅಡಿಯಿಟ್ಟಿರಲಿಲ್ಲ.ಆದರೆ ಧಾಳಿಗೆ ಸಿಲುಕಿದ್ದ ಇಂದಿನ ಸಿಂಧ್ ಪ್ರಾಂತ್ಯದಲ್ಲಿದ್ದ ಅನೇಕ ದೇವಾಲಯಗಳಲ್ಲಿ ವ್ಯಾಪಕ ಮೂರ್ತಿ ಭಂಜನೆಗಳು ನಡೆದವು.
ಆಂತರಿಕ ಐಕ್ಯತೆ ಇಲ್ಲದ ಭಾರತದ ಪಾಳೆಪಟ್ಟುಗಳು ಇನ್ನೊಂದು ರಾಜ್ಯದಮೇಲಾದ ಪರಧರ್ಮೀಯರ ಪೈಶಾಚಿಕ ಮಟ್ಟದ ಧಾಳಿಯನ್ನ ಕಂಡೂ ಕಾಣದ ಹಾಗೆ ಇದ್ದರು.ಇದು ಅವರ ರಾಜಕೀಯ ನಡೆಯಾಗಿತ್ತು.ಸಿಂಧ್'ನ ಸರಹದ್ದು ಮೀರಲು ಯತ್ನಿಸಿ ಮಾಳವ ರಾಜ್ಯಕ್ಕೆ ಮುಗಿಬಿದ್ದ ಆರಬ್ಬಿ ಧಾಳಿಕೋರರನ್ನ ರಾಜ ಭೋಜರಂತಹ ದೊರೆಗಳು ಹಿಮ್ಮೆಟ್ಟಿಸಿದ್ದರಿಂದ ಮುಂದಿನ ಮೂರುನೂರು ವರ್ಷ ಯಾವುದೆ ತಂಟೆ ತಕರಾರುಗಳು ಸಿಂಧೂ ನದಿಯ ಪೂರ್ವತೀರವನ್ನ ಪ್ರವೇಶಿಸಲಾಗಲಿಲ್ಲ.ಆದರೆ ಕೊರಾಸನ್'ನ ದೊರೆ ಸಬಕ್ತಗಿನ್ ಬೌದ್ಧಧರ್ಮದ ಹಿಡಿತದಲ್ಲಿದ್ದ ಕಾಬೂಲನ್ನ ಆಕ್ರಮಿಸಿ ಅಲ್ಲಿಗೆ ಇಸ್ಲಾಮನ್ನು ಒತ್ತಾಯದಿಂದ ಹೇರಿದ.ಅನಂತರ ಅವನ ಗಮನ ಭಾರತದ ಸಂಪತ್ತಿನತ್ತ ಹರಿಯಿತು.ಭಟಿಂಡದ ರಾಜ ಜಯಪಾಲ ಅದಾಗ ತಾನೆ ಅಳಿವಿನಂಚಿನಲ್ಲಿದ್ದ ಪ್ರತಿಹಾರ ಸಾಮ್ರಾಜ್ಯದ ಸಾಮ್ರಾಟ ರಾಜ್ಯಪಾಲನ ಸಹಕಾರ ಪಡೆದು ಚಾಂದೆಲರ ರಾಜ ದಂಗಣನ ಜೊತೆ ಮೈತ್ರಿ ಸಾಧಿಸಿ ಸಬಕ್ತಗೀನನ ಸೈನ್ಯವನ್ನ ಕ್ರಿಸ್ತಶಕ 991ರಲ್ಲಿ ಹಿಮ್ಮೆಟ್ಟಿಸಲು ಶತಪ್ರಯತ್ನ ಮಾಡಿದನಾದರೂ ಅದು ಫಲ ಕೊಡದೆ ಕೈಚೆಲ್ಲ ಬೇಕಾಯಿತು.
ಸಬಕ್ತಗೀನನ ಮಗ ಮಹಮದ್ ಬಿನ್ ಗಜನಿಯ ಮುಂದಿನ ಅಟ್ಟಹಾಸದ ಧಾಳಿಯ ಪರ್ವ ಆರಂಭಗೊಂಡಂತೆಯೆ ಭಾರತೀಯ ಜನಾಂಗಗಳು ಒತ್ತಾಯದ ಮತಾಂತರಕ್ಕೆ ಒಳಪಡಲು ಆರಂಭಿಸಿದವು.ಅಲ್ಲಿಯ ತನಕ ಹೇರಿಕೆಯ ಮತಾಂತರ ಭಾರತೀಯರ ಪಾಲಿಗೆ ಕೇಳಿಯೂ ಗೊತ್ತಿರದ ಹೊಸ ವಿಚಾರವಾಗಿತ್ತು.ಬೌದ್ಧ ಹಾಗೂ ಜೈನ ಧರ್ಮಾನುಸರಣೆ ಕೇವಲ ಐಚ್ಚಿಕವಾಗಿತ್ತೆ ಹೊರತು ಹೇರಿಕೆಯಲ್ಲ.
"ಕತ್ತಿ ಇಲ್ಲವೆ ಖುರಾನ್"ಎಂಬ ನೇರ ಬೆದರಿಕೆಗೆ ಮಣಿದು ಜೀವ ಉಳಿಸಿಕೊಳ್ಳಲು ಇಸ್ಲಾಂ ಅನುಸರಣೆಗೆ ಇಳಿದವರೇ ಹೆಚ್ಚು.ಕ್ರಿಸ್ತಶಕ 997ರಿಂದ ಆರಂಭವಾದ ಗಜನಿ ಮಹಮದನ ನಿರಂತರ ಆಕ್ರಮಕ ದಂಡಯಾತ್ರೆಗಳು 1027 ರವರೆಗೂ ಕಾಶ್ಮೀರ,ಪಂಜಾಬ್,ಮಾಳವಾ,ಕಂಗ್ರಾ,ತಾನೇಶ್ವರ,ಕನೂಜು,ಮಥುರೆ,ಗ್ವಾಲಿಯರ್ ಹಾಗು ಸೋಮನಾಥ ದೇವಾಲಯಗಳ ಮೇಲೆಲ್ಲಾ ನಿರಂತರ ಹದಿನೇಳು ಬಾರಿ ನಡೆದವು.ಭಾರತದೊಳಗೆ ಅಷ್ಟು ದೂರ ಸಾಗಿ ಬಂದು ಲೂಟಿ ಹೊಡೆಯುವಾಗ ಅವನು ಅನೇಕ ಹಿಂದೂ ಸಾಮ್ರಾಜ್ಯಗಳ ಸರಹದ್ದನ್ನ ದಾಟಿಕೊಂಡೆ ಬರಬೇಕಾಗಿತ್ತು ಅನ್ನೋದು ನಿಮ್ಮ ನೆನಪಿನಲ್ಲಿರಲಿ.ಅದೆ ವೇಳೆಗೆ 'ತಮ್ಮ ಮನೆ ಮಾತ್ರ ಸುರಕ್ಷಿತವಾಗಿದ್ದರಾಯ್ತು...ಅಕ್ಕಪಕ್ಕದವರು ಬೇಕಿದ್ರೆ ಹಾಳು ಬಿದ್ದು ಹೋಗಲಿ!" ಎಂಬ ಆ ರಾಜ್ಯಗಳ ರಾಜರ ಹಾಗು ಪ್ರಜೆಗಳ ಮನಸ್ಥಿತಿಯ ಹಿಂದಿರುವ ಸ್ವಾರ್ಥವನ್ನೂ ಮರೆಯದಿರಿ! ಈ ಹೊಟ್ಟೆಕಿಚ್ಚಿನ ಫಲವಾಗಿ ಕೆಲವೆ ಸಾವಿರ ರಕ್ತ ಪಿಪಾಸುಗಳ ಜೊತೆಗೂಡಿ ಭಾರತದ ಸಿರಿ ಸಂಪತ್ತನ್ನ ಲೂಟಿ ಮಾಡಿ,ಅಮಾಯಕರನ್ನ ಒತ್ತಾಯದಿಂದ ಬಲವಂತವಾಗಿ ಮತಪರಿವರ್ತನೆಗೆ ಒಳಪಡುವ ಹಾಗೆ ಹಿಂಸಿಸಿದ ಮಹಮದ್ ಬಿನ್ ಗಜನಿ ಇಷ್ಟು ಯಶಸ್ವಿ ಧಾಳಿಯನ್ನ ಸಂಘಟಿಸಲು ಸಾಧ್ಯವಾಗುತ್ತಿರಲಿಲ್ಲ ಅನ್ನುವುದಂತೂ ಸತ್ಯ.
ಇದಕ್ಕೂ ಭಾರತದಲ್ಲಿನ ಇಸ್ಲಾಮಿನ ಕಥೆಗೂ ನೇರಾನೇರ ಸಂಬಂಧವಿರುವ ಕಾರಣ ಐತಿಹಾಸಿಕ ನೆಲೆಗಟ್ಟಿನಿಂದಲೂ ಅನಿವಾರ್ಯವಾಗಿ ಭಾರತೀಯ ಇಸ್ಲಾಮನ್ನು ಅವಲೋಕಿಸಬೇಕಿದೆ.ಅದೇನೆ ಧಾಳಿ ಮಾಡಿದ್ದರೂ ಮಹಮದ್ ಬಿನ್ ಗಜನಿ ಮರಳಿ ಸ್ವದೇಶಕ್ಕೆ ಹೋಗಿ 1030ರಲ್ಲಿ ಅಲ್ಲಿಯೆ ತನ್ನ ಕೊನೆಯುಸಿರನ್ನೆಳೆದ.ಇಲ್ಲಿನ ರಾಜ್ಯವನ್ನ ಆಳುವ ಯಾವ ಅಭಿಲಾಷೆಯೂ ಅವನ ಧಾಳಿಯ ಹಿಂದೆ ಇದ್ದಿರಲಿಲ್ಲ.ಹೀಗಾಗಿ ಅಧಿಕೃತ ಇಸ್ಲಾಂ ಪ್ರಭುತ್ವದ ಆರಂಭಕ್ಕಾಗಿ ಭಾರತ ಭೂಮಿ ಇನ್ನೂ ಒಂದೂಕಾಲು ಶತಮಾನ ಕಾಯಬೇಕಾಯಿತು...ಮಹಮದ್ ಘೋರಿ ಧಾಳಿಯಿಡುವ ತನಕ.....
(ನಾಳೆಗೆ....)

ಭಾರತದ ನೆಲದಲ್ಲಿ ಇಸ್ಲಾಂ...
ವಿದೇಶಿ ಛಾಪಿನ ಧರ್ಮಗಳಲ್ಲಿ ಮೊದಲಿಗೆ ಭಾರತದ ನೆಲದಲ್ಲಿ ನೆಲೆಯೂರಲು ಸಾಧ್ಯವಾದದ್ದು ಯಹೂದಿ ಧರ್ಮಕ್ಕೆ.ಮದ್ಯಪ್ರಾಚ್ಯದಲ್ಲಿ ಆರಂಭವಾಗಿದ್ದ ಇಸ್ಲಾಮಿ ಹಾಗೂ ಕ್ರೈಸ್ತ ಧರ್ಮ ಯುದ್ದ (ಕ್ರುಸೇಡ್)ದ ಬಲಿಪಶುಗಳಾಗಿದ್ದ ಯಹೂದ್ಯರು ಮೊದಲಿಗೆ ಒಂದೂವರೆ ಸಾವಿರ ವರ್ಷದಿಂದೀಚೆಗೆ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದರು,ಇಂದಿನ ಕೇರಳದ ಕರಾವಳಿಯಲ್ಲಿ ಹಾಗು ಪೂರ್ವಕರಾವಳಿಯ ಮೂಲಕ ತ್ರಿಪುರ ಹಾಗು ನಾಗಾಲ್ಯಾಂಡಿನ ಗುಡ್ಡಗಾಡುಗಳಲ್ಲಿ ಇವರು ನೆಲೆಯೂರಿದರು.ಅನಂತರದ ಸರದಿ ಜತುರಾಷ್ಠನ ಅನುಯಾಯಿಗಳಾದ ಪರ್ಶಿಯನ್ನರದ್ದು.ಅರಬ್ಬಿಯಾದ ತುಂಬಾ ತನ್ನ ತೋಳ್ಬಲದಿಂದ ನೆಲೆ ಸ್ಥಾಪಿಸಿಕೊಂಡಿದ್ದ ಇಸ್ಲಾಂ ಪರ್ಷಿಯಾದ ರಾಜಗದ್ದುಗೆಯನ್ನ ಅಲುಗಾಡಿಸಿ ಅಲ್ಲಿನ ರಾಜಧರ್ಮವಾದ ಮೇಲೆ ನಿಷ್ಟಾವಂತ ಅಗ್ನಿ ಆರಾಧಕರಾದ ಪರ್ಶಿಯನ್ನರಿಗೆ ದೇಶಭ್ರಷ್ಟರಾಗುವ ಹೊರತು ಇನ್ಯಾವುದೆ ಆಯ್ಕೆಗಳು ಉಳಿದಿರಲಿಲ್ಲ,ಹೀಗಾಗಿ ಅವರಲ್ಲಿ ಬಹುತೇಕರು ಸ್ವಧರ್ಮ ಭ್ರಷ್ಟರಾಗಲು ಇಚ್ಚಿಸದೆ ಭಾರತ ಉಪಖಂಡದ ಗುಜರಾತ್ ಹಾಗು ಮಹಾರಾಷ್ಟ್ರದ ಕರಾವಳಿಗಳಿಗೆ ರಾಜಕೀಯ ಆಶ್ರಯ ಬಯಸಿ ಗುಳೆ ಬಂದರು,ಇವೆರಡೂ ಧರ್ಮಾನುಯಾಯಿಗಳು ಕೇವಲ ಇಲ್ಲಿ ನೆಲೆ ಕಂಡುಕೊಂಡು ಮುಖ್ಯವಾಹಿನಿಯಲ್ಲಿ ಬೆರೆತುಹೋದರೆ ವಿನಃ ತಮ್ಮ ಧರ್ಮ ಪ್ರಚಾರದ ಯಾವುದೆ ಒಳ ಉದ್ದೇಶಗಳನ್ನ ಹೊಂದಿರಲಿಲ್ಲ ಅನ್ನೋದು ಗಮನಾರ್ಹ.ಇದರ ಬಗ್ಗೆ ಒಂದು ಕುತೂಹಲ ಹುಟ್ಟಿಸುವ ಕಥೆ ಚಾಲ್ತಿಯಲ್ಲಿದೆ.ಗುಜರಾತಿನ ಅಂದಿನ ಸನಾತನ ರಾಜನ ಬಳಿ ಆಶ್ರಯ ಬಯಸಿ ಬಂದ ಪರ್ಶಿಯನ್ನರ ಮುಖಂಡನಿಗೆ ರಾಜ 'ನಿಮ್ಮನ್ನ ಹೇಗೆ ನಂಬೋದು?' ಅಂದನಂತೆ.ಆವಾಗ ರಾಜನ ಪಾಕಶಾಲೆಯಿಂದ ಒಂದು ಲೋಟ ಹಾಲನ್ನು ತರಿಸಲು ಕೋರಿದ ಆ ಪರ್ಶಿಯನ್ನರ ಮುಖಂಡ ತನ್ನ ಚೀಲದಿಂದ ಚಮಚೆ ಸಕ್ಕರೆ ತೆಗೆದು ಅದಕ್ಕೆ ಬೆರೆಸಿ 'ನೋಡಿ ಹಾಲಲ್ಲಿ ಸಕ್ಕರೆ ಬೆರೆತಂತೆ ನಿಮ್ಮೊಂದಿಗೆ ಬೇರೆಯುತ್ತೇವೆ!'ಎಂದು ಉತ್ತರಿಸಿದನಂತೆ.ಹೀಗೆ ರಾಜನ ಮನಗೆದ್ದ ಪರ್ಷಿಯನ್ನರು ಕೊನೆಗೂ ತಮ್ಮ ನುಡಿಗೆ ಬದ್ಧರಾಗಿಯೆ ಉಳಿದರು.ಇಂದಿಗೂ ಗುಜರಾತಿನ ಸೂರತ್ ಹಾಗು ಮಹಾರಾಷ್ಟ್ರದ ಮುಂಬೈನ ಆರ್ಥಿಕ ಪ್ರಪಂಚದಲ್ಲಿ ಪಾರಸಿ ವ್ಯಾಪಾರಿಗಳದ್ದೆ ರಾಜ್ಯಭಾರ.ಹೀಗಿದ್ದರೂ ಅವರನ್ನ ಧರ್ಮಾಧರಿತವಾಗಿ ಗುರುತಿಸಲಾಗದಂತೆ ಸಮಾಜದ ಐಕ್ಯತೆಯಲ್ಲಿ ಆ ಸಮುದಾಯ ಲೀನವಾಗಿ ಹೋಗಿದೆ.ಉದಾಹಾರಣೆಗೆ ಟಾಟಾ ಉದ್ಯಮ ಸಮುದಾಯವನ್ನೆ ಗಮನಿಸಿ.
ಆದರೆ ಭಾರತಕ್ಕೆ ಇಸ್ಲಾಮಿನ ಆಗಮನದ ಕಥೆ ತುಸು ವಿಭಿನ್ನವಾಗಿದೆ.ಎಲ್ಲರೂ ಆದು ಬಲಪ್ರಯೋಗದ ಮೂಲಕ,ಹೆಚ್ಚಾಗಿ ಗಜನಿ ಮಹಮ್ಮದನ ಅತಿಕ್ರಮಣದದಿಂದ ಭಾರತವನ್ನ ಹೊಕ್ಕಿತು ಅಂತಲೆ ಭಾವಿಸಿದ್ದಾರೆ.ಆದರೆ ವಾಸ್ತವ ಅದಲ್ಲ.ಇಸ್ಲಾಂ ಭಾರತದ ಭೂಮಿಗೆ ಅಡಿಯಿಟ್ಟದ್ದು ನೈಋತ್ಯ ಕರಾವಳಿಯ ಮೂಲಕ.ಗಜನಿ ಮಹಮದನ ಅತಿಕ್ರಮನಕ್ಕೂ ಎರಡೂವರೆ ಶತಮಾನದ ಹಿಂದೆಯೆ ಕೇರಳದ ಕರಾವಳಿ ತೀರದಲ್ಲಿರುವ ಅಂದಿನ ಮುಸ್ಸೇರಿ ಪಟ್ಟಣ (ಇಂದಿನ ಕೊಲ್ಲಂ)ದ ಮೂಲಕ ಇಸ್ಲಾಂ ಭಾರತವನ್ನ ಪ್ರವೇಶಿಸಿತ್ತು.ಅದು ಅಂದಿನ ಕೇರಳದ ಪ್ರಮುಖ ರೇವುಪಟ್ಟಣವಾಗಿತ್ತು.ಅಂದಿನ ಕೇರಳ ಚಂದ್ರಗಿರಿಯ ದಕ್ಷಿಣಕ್ಕಿರುವ ತಂಬುರದಿಂದ ಭಾರತಭೂಮಿಯ ತುತ್ತತುದಿಗಿರುವ ಶಚೀಂದ್ರಂ (ಈಗ ತಮಿಳುನಾಡಿಗೆ ಸೇರಿದೆ) ವರೆಗೆ ವ್ಯಾಪಿಸಿದ್ದು ಐದು ಮುಖ್ಯ ರಾಜ್ಯಗಳಾಗಿ ಹಂಚಿಹೋಗಿತ್ತು.
ಆ ಎಲ್ಲಾ ಪಾಳೆಪಟ್ಟುಗಳು ನಡು ಕೇರಳದಲ್ಲಿರುವ ಕೊಡುಂಗಲ್ಲೂರು ಸ್ಥಿತ ಚೇರ ರಾಜಮನೆತನದ ಸಾಮ್ರಾಜ್ಯಕ್ಕೆ ಅಧೀನವಾಗಿದ್ದು ರಾಜಕೀಯವಾಗಿ ಅಲ್ಲಿನ ವರ್ಮನ್ ಗದ್ದುಗೆಗೆ ನಿಷ್ಠವಾಗಿದ್ದವು.ಹೀಗಿದ್ದಾಗ ಅಲ್ಲಿನ ರಾಜ ರಾಮವರ್ಮ ಕುಲಶೇಕರನಿಗೆ ಒಂದು ರಾತ್ರೆ ಆಕಾಶದಿಂದ ತಾರೆಯೊಂದು ಎರಡಾಗಿ ಒಡೆದು ಬೀಳುವ ಅಪರೂಪದ ದೃಶ್ಯ ಕಂಡುಬಂತು.ಅದನ್ನ ಅನಿಷ್ಟದ ಶಕುನವಾಗಿ ಚಿಂತಿಸಿದ ರಾಜ 'ಚೇರಮಾನ ಪೆರುಮಾಳ್" (ಶ್ರೀಸಾಮಾನ್ಯರು ಅವನನ್ನ ಕರೆಯುತ್ತಿದ್ದುದೆ ಹಾಗೆ) ಆಸ್ಥಾನದ ಜೋತಿಷಿಗಳಲ್ಲಿ ಈ ಬಗ್ಗೆ ವಿಚಾರಿಸಿದ.ಸೂಕ್ತ ಉತ್ತರ ದೊರೆಯದೆ ಖಿನ್ನನಾಗಿದ್ದ.ಆಗ ಅಲ್ಲಿಗೆ ಅರಬ್ಬಿಗಳ ವ್ಯಾಪಾರಿ ನಿಯೋಗವೊಂದು ವ್ಯಾಪಾರದ ಅನುಮತಿ ಕೋರಲು ಅವನ ಆಸ್ಥಾನಕ್ಕೆ ಬಂದಿತ್ತು.ಆ ನಿಯೋಗದ ಮುಖಂಡ ಈ ಸಮಸ್ಯೆಯನ್ನ ಮಹಮದ್ ಪೈಗಂಬರ್ ಇಸ್ಲಾಮನ್ನು ಅಲ್ಲಾಹನಿಂದ ಪ್ರೇರಿತನಾಗಿ ಭೋದಿಸ ತೊಡಗಿದ್ದಕ್ಕೆ ಸಮೀಕರಿಸಿದ.ಕಾಕತಾಳೀಯವಾಗಿ ಕನಸು ಬಿದ್ದ ಕಾಲಕ್ಕೂ ಪೈಗಂಬರನ ಪ್ರವಾದಿತನದ ಸ್ವಘೋಷಣೆಗೂ ಕಾಲದಲ್ಲಿ ಸಾಮ್ಯತೆ ಕಂಡು ಬಂತು.ಕ್ರಿಸ್ತ ಶಕ 639ಕ್ಕೆ ಕನಸು ಬಿದ್ದದ್ದು, ಪ್ರವಾದಿ ಭೋದನೆಗೆ ಆರಂಭಿಸಿದ್ದು ಕ್ರಿಸ್ತಶಕ 638ಕ್ಕೆ.ಹೀಗಾಗಿ ಆ ವಿವರಣೆ ರಾಜನಿಗೆ ಸಮಂಜಸ ಎನ್ನಿಸಿ ಅವನು ಇಸ್ಲಾಂ ಬಗ್ಗೆ ಒಲವು ತಾಳಿದ.ಮೆಕ್ಕಾ ಯಾತ್ರೆಗೆ ಮನಸನ್ನೂ ಮಾಡಿದ.
ಆದರೆ ಸಾಮಾಜಿಕ ಬಂಡಾಯವನ್ನ ಊಹಿಸಿ ಇದನ್ನ ಬಹಿರಂಗಪಡಿಸದೆ ಮೊದಲಿಗೆ ತನ್ನ ರಾಜ್ಯದ ಐದು ಭಾಗಗಳನ್ನ ಸರಿಸಮವಾಗಿ ಐವರು ಸಂಬಂಧಿಗಳಿಗೆ ಹಂಚಿ ಯಾತ್ರೆಯ ನೆಪದಲ್ಲಿ ಹಡಗಿನ ಮೂಲಕ ಚೆರಮಾನ ಪೆರುಮಾಳ್ ಮೆಕ್ಕಾಗೆ ಅದೆ ಅರಬ್ಬೀ ವ್ಯಾಪಾರಿ ತಂಡದೊಂದಿಗೆ ಹೊರಟ.ಒಂದು ಊಹೆಯ ಪ್ರಕಾರ ಅವನಿಗೆ ಪ್ರವಾದಿಗಳ ದರ್ಶನವೂ ಆಯಿತು,ಆದರೆ ಈ ಬಗ್ಗೆ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಇದು ಊಹಾಪೋಹವಷ್ಟೆ ಅಂದು ಕೊಳ್ಳಬೇಕಿದೆ.ಅಲ್ಲಿ ಇಸ್ಲಾಮಿಗೆ ಧರ್ಮಾಂತರಗೊಂಡ ರಾಜ ಅಲ್ಲಿಯೇ ನಾಲ್ಕು ಸಂವತ್ಸರ ಕಳೆದ ಅನಂತರ ಮರಳಿ ಪ್ರವಾದಿಯ ನೇರ ಶಿಷ್ಯ 'ಮೌಲಿಕ್ ಇಬಾನುದ್ದೀನ್' ಜೊತೆಗೂಡಿ ಭಾರತದತ್ತ ಮುಖಮಾಡಿ ಹಡಗೇರಿದ.ಆದರೆ ದುರಾದೃಷ್ಟವಶಾತ್ ಆಮಶಂಕೆಗೆ ಬಲಿಯಾಗಿ ಆತ ತೀರ ನಿತ್ರಾಣಗೊಂಡ.ತನ್ನ ಕೊನೆಯನ್ನ ಊಹಿಸಿದ ಆತ ಅಲ್ಲಿಯೆ ಹಡಗಿನಲ್ಲಿ ಚರ್ಮದ ಮೇಲೆ ಐದು ಪತ್ರಗಳನ್ನು ತನ್ನ ರಾಜಮುದ್ರೆಯೊಂದಿಗೆ ಬರೆದು ತನ್ನ ಐವರು ಉತ್ತರಾಧಿಕಾರಿಗಳಿಗೆ ತಲುಪಿಸುವಂತೆ ಮೌಲಿಕ್ ಇಬಾನುದ್ದೀನರಿಗೆ ಹೇಳಿ ಅಸುನೀಗಿದ.ಹೀಗೆ ಅಂತ್ಯವಾಯ್ತು ಪ್ರಪ್ರಥಮ ಭಾರತೀಯ ಮತಾಂತರಿತ ಮುಸ್ಲೀಮನ ಜೀವನ.ಈ ಮತಾಂತರ ಸ್ವ ಇಚ್ಛೆಯದಾಗಿತ್ತು ಹಾಗೂ ಬಲವಂತದ ಯಾವ ಕುರುಹೂ ಅಲ್ಲಿರಲಿಲ್ಲ ಅನ್ನೋದು ನೆನಪಿಡಬೇಕಾದ ಅಂಶ.
ಹೀಗೆ ಸತ್ತ ರಾಜಾ ರಾಮವರ್ಮ ಕುಲಶೇಕರನನ್ನು ಒಮನ್ನಿನ ಸಲಾಲದಲ್ಲಿ ಇಸ್ಲಾಂ ಪ್ರಕಾರ ಸಮಾಧಿಮಾಡಲಾಯಿತು.ಅವನ ಶಿಫಾರಸ್ಸು ಪತ್ರ ಹಿಡಿದು ಮುಸ್ಸೇರಿ ಪಟ್ಟಣ ಮುಟ್ಟಿದ ಮೌಲಿಕ್ ಇಬಾನುದ್ದೀನನಿಗೆ ಸತ್ತ ತಮ್ಮ ಹಿರಿಯನ ಆಶಯದಂತೆ ಅವನ ಉತ್ತರಾಧಿಕಾರಿಗಳು ಧರ್ಮಪ್ರಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು ಹಾಗೂ ರಾಜ್ಯದ ಐದು ಪ್ರಮುಖ ಭಗವತಿ ದೇವಾಲಯಗಳನ್ನ ಮಸೀದಿಗಾಗಿ ಬಿಟ್ಟು ಕೊಟ್ಟರು.
ಹೀಗೆ ಅಧಿಕೃತವಾಗಿ ಆರಂಭವಾದ ಭಾರತದ ಮೊತ್ತಮೊದಲ ಮಸೀದಿ 'ಚೇರಮಾನ ಪಳ್ಳಿ' ಎಂಬ ಹೆಸರಿನಲ್ಲಿ ಕೋಡಂಗಲ್ಲೂರಿನಲ್ಲಿ ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿದೆ.ಇಲ್ಲಿನ ವಾಸ್ತು ಪಕ್ಕಾ ಕೇರಳದ ಇನ್ನಿತರ ದೇವಾಲಯಗಳಂತೆಯೆ ಇದೆ.ಮಸೀದಿಯ ಹಿಂದೆ ದೇವಾಲಯದ ಹಿಂದಿರುವಂತೆ ಕೊಳವೂ ಇದೆ.ಇಂದಿಗೂ ಅಲ್ಲಿನ ರಂಜಾನ್ ಸಹಿತ ಧಾರ್ಮಿಕ ಸಮಾರಂಭಗಳಿಗೆ ರಾಜ ಮನೆತನದವರು ಖಾಯಂ ವಿಶೇಷ ಆಹ್ವಾನಿತರು (ಅವರೇನೂ ಧರ್ಮಬದಲಿಸಿಕೊಂಡಿಲ್ಲ,ಹಿಂದೂಗಳಾಗಿಯೆ ಇದ್ದಾರೆ).ಇದರ ಹೊರತು ಕೊಲ್ಲಂ-ಕಾಸರಗೋಡು ಹಾಗು ಕನ್ಯಾಕುಮಾರಿ ಬಳಿ ಇನ್ನಿತರ ದೇವಸ್ಥಾನಗಳು ಮಸೀದಿಗಳಾಗಿ ಪರಿವರ್ತಿತವಾದವು.ಇದು ಆರಂಭದ ಕಥೆ.ಆರಂಭದಲ್ಲಿ ಸೌಮ್ಯವಾಗಿದ್ದ ಇಸ್ಲಾಂ ಪ್ರಸರಣೆ ಅನಂತರದ ದಿನಗಳಲ್ಲಿ ಮಾತ್ರ ದುಂಡಾವರ್ತಿಗೆ ಮೊರೆ ಹೋದದ್ದು ದುರದೃಷ್ಟಕರ.ಇದೆ ಮಾದರಿಯಲ್ಲಿ ಸಿರಿಯನ್ ಕ್ರಿಸ್ತರು ಕೇರಳದ ಮೂಲಕವೆ ಕ್ರೈಸ್ತ ಧರ್ಮವನ್ನೂ ಭಾರತಕ್ಕೆ ತಂದಿದ್ದರು ಆದರೆ ಅದು ಇಸ್ಲಾಮಿನ ಮೂಲಭೂತವಾದಕ್ಕೆ ಅಂಟಿಕೊಳ್ಳದೆ ಸೌಮ್ಯ ಮಾರ್ಗದಲ್ಲೆ ತನ್ನ ಜನಪ್ರಿಯತೆಯನ್ನ ಹೆಚ್ಚಿಸಿಕೊಂಡಿತ್ತು.ಪುರಾತನ ಕಾಲದಿಂದಲೂ ದೇಶದ ಸಮುದ್ರ ವ್ಯಾಪಾರದ ದ್ವಾರವಾಗಿ ವಿಶಾಲ ಕರಾವಳಿಯಲ್ಲಿ ಹರಡಿಕೊಂಡ ಕೇರಳ ವಿದೇಶಿಯರೊಂದಿಗೆ ಆರ್ಥಿಕ ನಂಟು ಹೊಂದಿದ್ದರಿಂದ ಈ ಎಲ್ಲಾ ಘಟನಾವಳಿಗಳಿಗೆ ಕೇರಳವೆ ರಂಗಸ್ಥಳವಾಗುವಂತಾಯಿತು.
(ಉಳಿದದ್ದು-ನಾಳೆಗೆ....)

10 October 2011
ನನ್ನ ದೃಷ್ಟಿಯಲ್ಲಿ ಇಸ್ಲಾಂ...
ನಾಳಿದ್ದು ಶುಕ್ರವಾರದಿಂದ ಈ ಮೊದಲೆ ಹೇಳಿದಂತೆ "ಇಸ್ಲಾಂ'ನ ಆತ್ಮಕಥೆ"ಯ ತಲೆಗಟ್ಟಿನಲ್ಲಿ "ಮಹಮದ್ ಪೈಗಂಬರ್ ಹಾಗು ಖಲೀಫರು" (ಲೇಖಕ: ಆಗುಂಬೆ ಎಸ್,ನಟರಾಜ್) ಇಂದ ದಿನಕ್ಕೊಂದು ಪುಟವನ್ನ ಇಲ್ಲಿ ಪ್ರಕಟಿಸಲಿದ್ದೇನೆ.ಇದೊಂದು ಇತಿಹಾಸದ ನಿಷ್ಪಕ್ಷಪಾತ ನಿರೂಪಣೆ ಆಗಿರುತ್ತದೆ.ಆ ಹಿನ್ನೆಲೆಯಲ್ಲಿ 'ಇಸ್ಲಾಂ' ಕುರಿತು ವಯಕ್ತಿಕವಾಗಿ ನನ್ನ ನಿಲುವು ಹಾಗು ಅಭಿಪ್ರಾಯವನ್ನ ಅದಕ್ಕಿಂತ ಮೊದಲೆ ಜಾಹೀರು ಮಾಡೋದು ಉತ್ತಮ ಅಂದುಕೊಂಡಿದ್ದೇನೆ.ಎಲ್ಲಾ ಸಂಗತಿಗಳನ್ನು ಸಂಕುಚಿತ ಮನೋಭಾವನೆಯಿಂದಲೆ ನೋಡಿ ಪ್ರತಿಕ್ರಿಯೆ ನೀಡುವ ಅನೇಕರು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ನನ್ನ ದೃಷ್ಟಿಕೋನಕ್ಕೆ ಇನ್ಯಾರದೊ ಬೇಕಾಬಿಟ್ಟಿ ಚೌಕಟ್ಟು ಬಲವಂತವಾಗಿ ಹೇರಿಕೆಯಾಗುವ ಮುನ್ನ ನಾನೆ ಖಚಿತವಾಗಿ ಬಿಡಿಸಿ ಹೇಳೋದರಿಂದ ಗೊಂದಲ ಪ್ರಿಯರ ಸದ್ದನ್ನ ಆರಂಭದಲ್ಲೆ ಅಡಗಿಸಲಷ್ಟೆ ಈ ವಿವರಣೆ.
ಭಾರತದ ಸಾಂಸ್ಕೃತಿಕ ನೆಲೆಗಟ್ಟು ಗೋಚರವಾಗಿಯೊ-ಅಗೋಚರವಾಗಿಯೊ ಇಂದು ಇಲ್ಲಿ ವಾಸಿಸುವ ಎಲ್ಲಾ ಜನಾಂಗೀಯರ ಮೇಲೆ ಜಾತಿ-ಮತ-ಲಿಂಗಾತೀತವಾಗಿ ತನ್ನ ಪ್ರಭಾವ ಬೀರಿಯೆ ಇದೆ,ಬಹುಷಃ ಅದನ್ನ ವ್ಯಕ್ತ ಪಡಿಸುವ ರೀತಿನೀತಿಗಳು ಹಾಗು ಅವುಗಳ ಪರಿಮಾಣದಲ್ಲಿ ಕೊಂಚ ವ್ಯತ್ಯಾಸ ಇದ್ದಿರಬಹುದೇನೊ ಅಷ್ಟೆ.ಮೂಲತಃ ಸೋ-ಕಾಲ್ಡ್ 'ಹಿಂದೂ ಧರ್ಮ' ಅಸ್ತಿತ್ವದಲ್ಲಿ ಇರಲಿಲ್ಲ! ಇಲ್ಲಿನ ವಿಭಿನ್ನ ಬುಡಕಟ್ಟುಗಳ ಆಚರಣೆಯಲ್ಲಿ ಹಲವಾರು ಸಾಮ್ಯತೆಗಳು ಎದ್ದು ಕಾಣುವಂತಿತ್ತು.ಕಾಲಾನುಕ್ರಮದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಟ್ಟುಪಾಡುಗಳು ದೇಶದಾದ್ಯಂತ ಹರಡಿದ್ದ ಎಲ್ಲಾ ಪಾಳೆಪಟ್ಟುಗಳ ಆಳುವ ವರ್ಗಕ್ಕೆ ಸ್ವೀಕಾರಾರ್ಹವಾಯಿತು."ಯಥಾ ರಾಜ,ತಥಾ ಪ್ರಜಾ" ಎಂಬುದಕ್ಕೆ ಪುರಾವೆಯಾಗಿ ನಿಧಾನವಾಗಿ ಅವರಿಂದ ಆಳಿಸಿಕೊಳ್ಳುವವರೂ ಅದೇ ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮ ಜೀವನದಲ್ಲಿ ಅನುಸರಿಸತೊಡಗಿದರು.ಮರಳುಗಾಡಿನಲ್ಲಿ ಉಗಮವಾದ ಯಹೂದಿ-ಕ್ರೈಸ್ತ-ಇಸ್ಲಾಮಿ ಧರ್ಮಗಳು ಈ ದೇಶದಲ್ಲಿ ಹರಡಿಕೊಳ್ಳುವ ತನಕ ಬಹುತೇಕ ಇದೆ ಇಲ್ಲಿನ ಎಲ್ಲಾ ಮೂಲ ನಿವಾಸಿಗಳ 'ಮಾತೃ ಧರ್ಮ'ವಾಗಿತ್ತು.ವಿಶಾಲಾರ್ಥದಲ್ಲಿ ಇದನ್ನು 'ಸನಾತನ ವೈದಿಕ ಧರ್ಮ' ಅಂತ ಗುರುತಿಸೋಣ.
ಆರಂಭದಲ್ಲಿ ಇಲ್ಲಿನ ನೆಲದಲ್ಲಿ ಹುಟ್ಟಿದ್ದ ಪ್ರಕೃತಿ ಆರಾಧನೆ (ಸಿಂಧೂ ಕಣಿವೆ ನಾಗರೀಕತೆ ಕಾಲದ್ದು) ಅನಂತರ ವೇದಗಳು ಅಸ್ತಿತ್ವಕ್ಕೆ ಬಂದ ಹಾಗೆ ನಿಧಾನವಾಗಿ ದೇವತಾರಾಧನೆಗೆ ತಿರುಗಿ ಅಲ್ಲಿಂದ ದೇವರನ್ನು ವಿಗ್ರಹ ಬಿಂಬಗಳಲ್ಲಿ ಪ್ರತಿಷ್ಥಾಪಿಸಿ ಆರಾಧಿಸುವವರೆಗೆ ವಿಕಸನ ಹೊಂದಿ ತನ್ನ ಉತ್ಕೃಷ್ಟತೆಗೆ ಬಂದು ಮುಟ್ಟಿತ್ತು.ಆಗಲೂ ಮತಾಂಧತೆಯ ತಿಕ್ಕಾಟ ಇಲ್ಲದಿರಲಿಲ್ಲ ಪ್ರಮುಖವಾಗಿ ಶೈವಾರಾಧಕರ ಹಾಗೂ ವೈಷ್ಣವಾರಾಧಕರ ನಡುವೆ ತಮ್ಮ ನಂಬಿಕೆಯೆ ಶ್ರೇಷ್ಠ ಎಂದು ಸಾಧಿಸಲು ಮೆಲುಗೈಗಾಗಿ ಪರಸ್ಪರ ಕಾದಾಟ ಸಾಮಾನ್ಯವಾಗಿದ್ದವು,ಆದರೆ ಅದು ಹಿಂಸೆಯ ಅತಿರೇಕದ ಹಂತಕ್ಕೆ ಏರಿರುತ್ತಿರಲಿಲ್ಲ..ಇವರ ಆಚರಣೆಗಳನ್ನ ಒಪ್ಪಲು ತಯಾರಿಲ್ಲದ ಕಾಡುಮೇಡಿನ ಬುಡಕಟ್ಟಿನವರು ಮಾತ್ರ ಇಬ್ಬರಿಗೂ ಸಮಾನ ಶತ್ರುಗಳಾಗಿದ್ದರು ಅನ್ನೋದು ಕುಚೋದ್ಯ.
ಈ ನಡುವೆ ಸಾಹಸಿ ರಾಜರು ತಮ್ಮ ರಾಜಕೀಯ ಮಹತ್ವಾಕ್ಷಾಂಶೆಗಳನ್ನ ಹೊತ್ತು ಭಾರತೀಯ ಉಪಖಂಡದ ಹೊರಗೂ ;ಅಂದರೆ ಇವತ್ತಿನ ಬರ್ಮಾ,ಇಂಡೋನೇಷಿಯ,ನೇಪಾಳ,ಥಾಯ್'ಲ್ಯಾಂಡ್,ಕಾಂಬೋಡಿಯ,ಮಲೇಶಿಯ,ಶ್ರೀಲಂಕ,ಮಾಲ್ಡೀವ್ಸ್,ಮರೀಷಸ್,ಅಫಘನಿಸ್ತಾನಗಳವರೆಗೂ ರಾಜ್ಯದ ಪರಿಧಿಯನ್ನ ವಿಸ್ತರಿಸಲು ತೊಡಗಿದಾಗ ನಿಧಾನವಾಗಿ ಈ ಸಂಸ್ಕೃತಿ ಅಲ್ಲಿನ ನೆಲಗಳಿಗೂ ಹರಡಿ ಹೋಯಿತು.ವೇದಕಾಲದಿಂದಲೂ ಈ ಎಲ್ಲಾ ರಾಜ್ಯಗಳೊಂದಿಗೆ ವ್ಯಾಪಾರ ಹಾಗೂ ವೈವಾಹಿಕ ಸಂಬಂಧಗಳು ಆಳವಾಗಿ ಇದ್ದಿದ್ದರಿಂದಲೂ ಈ ಅತಿಕ್ರಮಣಗಳು ಕೇವಲ ಬೆಲೆಬಾಳುವ ಸಂಪತ್ತಿನ ಸಂಗ್ರಹದ ಕಾರಣಕ್ಕಷ್ಟೆ ಸೀಮಿತವಾಗಿರುತ್ತಿದ್ದು ಅಲ್ಲಿನ ಆಳುವವರನ್ನ ಸಾಮಂತರನ್ನಾಗಿಸಿ ತಮ್ಮ ವಿಜಯದ ಸಂಕೇತವಾಗಿ ತಾವು ನಂಬುವ ದೈವದ ಬೃಹತ್ ದೇವಾಲಯಗಳನ್ನ ಅಲ್ಲಿ ಕಟ್ಟಿಸಿ-ಆ ಕುರಿತ ಶಾಸನ ಕೆತ್ತಿಸಿ ,ಅವರು ಕೊಡುವ ಕಪ್ಪ ಹೊತ್ತು ಮರಳಿ ತಾಯ್ನಾಡಿಗೆ ಬರುವುದರಲ್ಲಿ ಎಲ್ಲಾ ಮುಗಿದು ಹೋಗಿರುತ್ತಿತ್ತು.ಹೀಗೆ ಸನಾತನ ಧರ್ಮ ಪೂರ್ವಏಷ್ಯಾದಲೆಲ್ಲ ವ್ಯಾಪಿಸಿತ್ತು.
ಈ ಏಕಸಾಮ್ಯತೆಗೆ ಮೊದಲ ಸವಾಲು ಎದುರಾದದ್ದು ಇಲ್ಲಿಯೆ ಹುಟ್ಟಿದ್ದ ಬೌದ್ಧ ಹಾಗೂ ಜೈನ ಧರ್ಮಗಳಿಂದಲೆ ಆಗಿದ್ದರೂ ಅದು ವೈದಿಕತೆಯ ಪಾರಮ್ಯಕ್ಕೆ ಹೇಳಿಕೊಳ್ಳುವಂತ ಹಾನಿಯನ್ನೇನೂ ಮಾಡಲಾಗಲಿಲ್ಲ.ಯಾಕಂದರೆ ಜನ ಮಾನಸಕ್ಕೆ ಹತ್ತಿರವಾಗಲು ಪೌರಾಣಿಕತೆಯ ಲೇಪ ಹಚ್ಚಿಕೊಳ್ಳುವ ಹಂಬಲದಲ್ಲಿ ಹೊಸತಾಗಿ ಹುಟ್ಟಿದ್ದ ಈ ಎರಡೂ ಧರ್ಮಗಳ ಪಂಡಿತರು ಸನಾತನದ ಪುರಾಣ ಕಥೆಗಳನ್ನೆ ಕೊಂಚ ಬದಲಿಸಿ ಹೊಸಧರ್ಮಗಳಿಗೆ ಅಳವಡಿಸಿಕೊಂಡದ್ದರಿಂದ ಶ್ರೀಸಾಮಾನ್ಯರಿಗೆ ಅವು ಹೊಸತೆನಿಸದೆ ಆಳದಲ್ಲಿ ತಾವು ಪಾಲಿಸುತ್ತಿರುವ ಧರ್ಮಾಚರಣೆಗಳ ವಿಸ್ತರಣೆ ಎನ್ನಿಸಿದ್ದರಿಂದ ಸನಾತನ ವೈದಿಕತೆ ಇನ್ನೂ ಸಶಕ್ತವಾಗಿ ಉಳಿದಿತ್ತು....ಆದರೆ ಈ ಪಾರಮ್ಯ ಉಳಿದದ್ದು ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಭಾರತಕ್ಕೆ ಕಾಲಿಡುವ ತನಕ ಮಾತ್ರ....

08 October 2011
'ದಿನಕ್ಕೊಂದು ಪುಟ'
'ಇಸ್ಲಾಂ ಮರುಭೂಮಿಯ ಬುಡಕಟ್ಟಿಗೆ ಹೇಳಿಮಾಡಿಸಿದ ಧರ್ಮಾಚರಣೆ ;ಅದರ ಆಶಯಗಳು-ನಿಯಮಾವಳಿಗಳು ಅದನ್ನ ಹೆಚ್ಚು ಸ್ಪುಟಗೊಳಿಸುತ್ತವೆ' ಅನ್ನುವ ನನ್ನ ನಿರ್ಧಾರಕ್ಕೆ ಕಾರಣವಾದದ್ದು ಆಗುಂಬೆ ಎಸ್.ನಟರಾಜ್'ರವರು ಬರೆದ "ಮಹಮದ್ ಪೈಗಂಬರ್ ಹಾಗು ಖಲೀಫರು" ಎಂಬ ಇಸ್ಲಾಮಿನ ಆತ್ಮಕಥೆ.
ಬೆಂಗಳೂರಿನಲ್ಲಿ ಕಳೆದಬಾರಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದಲ್ಲಿ ಬೆಳಕು ಕಂಡಿದ್ದ ಈ ಹೊತ್ತಗೆಯನ್ನ (ಹಂಸ ಪ್ರಕಾಶನ) ಹಿಂದೆಂದೋ ಕುತೂಹಲಕ್ಕಾಗಿ ಓದಿದ್ದ ಖುರಾನ್ ಹಾಗು ಹದೀಸ್'ಗಳೊಂದಿಗೆ ಹೋಲಿಸಿ ಓದಿದಾಗ ಇದು ಇನ್ನಷ್ಟು ಧೃಡವಾಯಿತು.ಬಹುಷಃ ನಿಮ್ಮೆಲ್ಲರ ಭಾವನೆಗಳು ಇದಕ್ಕೆ ವ್ಯತರಿಕ್ತವಾಗಿದ್ದರಲೂಬಹುದು.ಮುಂದಿನ ಶುಕ್ರವಾರದಿಂದ ಅದೇ ಹೊತ್ತಗೆಯ ಪ್ರತಿಯೊಂದು ಪುಟವೂ ಇಲ್ಲಿ 'ದಿನಕ್ಕೊಂದು ಪುಟ'ದಂತೆ ಪ್ರಕಟಿಸುತ್ತೇನೆ.ಗೊತ್ತಿಲ್ಲದ ಅನೇಕ ಸಂಗತಿಗಳನ್ನ ಓದುವ ಸುಖವೂ ನಿಮ್ಮದಾಗಲಿ.

06 October 2011
ನಿನ್ನೆದೆಯಲ್ಲೆ ಇರುವ ಚಡಪಡಿಕೆ........
ಇರುಳು ಕಳೆದು ನೆಲಕೆ ಬೆಳಕಿನ ಬುಗ್ಗೆ ಸುರಿದರೂನು
ನಿನ್ನೊಲವ ಬೆಳಕಿಲ್ಲದ ಮನಸೆಲ್ಲ ಬರಿ ಕತ್ತಲೆ....
ಇಬ್ಬನಿಯ ತೆರೆ ಸರಿದು ಭುವಿ ತಂಪಾದರೂನು
ನನ್ನವೆರಡು ಕಂಗಳಲ್ಲಿ ಮಡುಗಟ್ಟಿದ ಸುಡುವ ಹನಿ ಪರದೆಯನ್ನು
ನಿನ್ನೆದೆಯ ನೆಲದಲ್ಲೇ ನಾ ಬಿತ್ತಲೆ?/
ನೆನಪಿನ ಜಾತ್ರೆಯಲ್ಲೂ ಒಂಟಿಯಾಗಿ ಅಲೆಯುವ
ನನ್ನ ಮನಕ್ಕೆ ನಿನ್ನೆದೆಯಲ್ಲೆ ಇರುವ ಚಡಪಡಿಕೆ,
ಕನಸಿನೊಂದಿಗೆ ಜಾರುವ ನಿಶಬ್ದದ ಇರುಳ ತಂಪಿನಲ್ಲೂ
ನನಗೆ ಕೇವಲ ನಿನ್ನದೆ ಕನವರಿಕೆ//
ಊರಿಗೆಲ್ಲ ಇಂದು ಹಬ್ಬ...
ನೀ ತೊರೆದ ನಂತರ ಸಂಕಟದ ಸೂತಕದಲ್ಲಿ
ಮಂಕಾಗಿರೋದು ನಾನೊಬ್ಬನೇ ಒಬ್ಬ,
ನಲಿವಿನಂಚಲೂ ನೋವಿದೆ....
ನಿನ್ನ ನೆನಪು ಹುಟ್ಟಿಸುವ ಸಂಭ್ರಮಕ್ಕೂ
ನೀ ದೂರಾಗಿರುವ ಸಂಕಟದ ನೆರಳು ಚಾಚಿದೆ/
ನನ್ನದಿದು ಗುಣಪಡಿಸಲಾಗದಂತೆ ಬಲಿತು ಹೋದ ಹಳೆಯ ಖಾಯಿಲೆ...
ನೀನೆ ಈ ರೋಗಕ್ಕೆ ಮೂಲ,
ನಿನ್ನ ನೆನಪೆ ಇದಕ್ಕೆ ಮದ್ದು ಅನ್ನೋದು
ಇನ್ನೂ ಕುತೂಹಲ....
ಕೈಕೊಡವಿ ಹೋಗುವ ಭರದಲ್ಲಿ ನೆನಪುಗಳನ್ನೇನಾದರೂ
ಒಂದುವೇಳೆ ನೀನಿಲ್ಲೆ ಮರೆಯದೆ ಹೋಗಿದ್ದಿದ್ಧರೆ ನನ್ನ ಗತಿಯೇನಾಗುತ್ತಿತ್ತು ಹೇಳು?//

Subscribe to:
Posts (Atom)