ಇರುಳು ಕಳೆದು ನೆಲಕೆ ಬೆಳಕಿನ ಬುಗ್ಗೆ ಸುರಿದರೂನು
ನಿನ್ನೊಲವ ಬೆಳಕಿಲ್ಲದ ಮನಸೆಲ್ಲ ಬರಿ ಕತ್ತಲೆ....
ಇಬ್ಬನಿಯ ತೆರೆ ಸರಿದು ಭುವಿ ತಂಪಾದರೂನು
ನನ್ನವೆರಡು ಕಂಗಳಲ್ಲಿ ಮಡುಗಟ್ಟಿದ ಸುಡುವ ಹನಿ ಪರದೆಯನ್ನು
ನಿನ್ನೆದೆಯ ನೆಲದಲ್ಲೇ ನಾ ಬಿತ್ತಲೆ?/
ನೆನಪಿನ ಜಾತ್ರೆಯಲ್ಲೂ ಒಂಟಿಯಾಗಿ ಅಲೆಯುವ
ನನ್ನ ಮನಕ್ಕೆ ನಿನ್ನೆದೆಯಲ್ಲೆ ಇರುವ ಚಡಪಡಿಕೆ,
ಕನಸಿನೊಂದಿಗೆ ಜಾರುವ ನಿಶಬ್ದದ ಇರುಳ ತಂಪಿನಲ್ಲೂ
ನನಗೆ ಕೇವಲ ನಿನ್ನದೆ ಕನವರಿಕೆ//
ಊರಿಗೆಲ್ಲ ಇಂದು ಹಬ್ಬ...
ನೀ ತೊರೆದ ನಂತರ ಸಂಕಟದ ಸೂತಕದಲ್ಲಿ
ಮಂಕಾಗಿರೋದು ನಾನೊಬ್ಬನೇ ಒಬ್ಬ,
ನಲಿವಿನಂಚಲೂ ನೋವಿದೆ....
ನಿನ್ನ ನೆನಪು ಹುಟ್ಟಿಸುವ ಸಂಭ್ರಮಕ್ಕೂ
ನೀ ದೂರಾಗಿರುವ ಸಂಕಟದ ನೆರಳು ಚಾಚಿದೆ/
ನನ್ನದಿದು ಗುಣಪಡಿಸಲಾಗದಂತೆ ಬಲಿತು ಹೋದ ಹಳೆಯ ಖಾಯಿಲೆ...
ನೀನೆ ಈ ರೋಗಕ್ಕೆ ಮೂಲ,
ನಿನ್ನ ನೆನಪೆ ಇದಕ್ಕೆ ಮದ್ದು ಅನ್ನೋದು
ಇನ್ನೂ ಕುತೂಹಲ....
ಕೈಕೊಡವಿ ಹೋಗುವ ಭರದಲ್ಲಿ ನೆನಪುಗಳನ್ನೇನಾದರೂ
ಒಂದುವೇಳೆ ನೀನಿಲ್ಲೆ ಮರೆಯದೆ ಹೋಗಿದ್ದಿದ್ಧರೆ ನನ್ನ ಗತಿಯೇನಾಗುತ್ತಿತ್ತು ಹೇಳು?//
06 October 2011
Subscribe to:
Post Comments (Atom)
No comments:
Post a Comment