ಉಸಿರಿರೋವರೆಗೂ,
ಎದೆ ತುಂಬ ಒಲವಿರೋದು ಖಾತ್ರಿ/
ನೆನಪಿನ ರಾಜಬೀದಿಯುದ್ದಕೂ,
ನಿನ್ನದೆ ವಿರಹದ ಜಾತ್ರಿ//
ಬದುಕ ಪುಸ್ತಕದ ಪುಟಗಳಲ್ಲಿ ನವಿರು ವಾಸನೆ,
ನಿನ್ನ ಬೆವರ ಘಮವನ್ನೇ ನೆನಪಿಸುವ ಮಧುರ ಯಾತನೆ/
ಅಚಾನಕ್ ಯಾವುದೋ ಹಾಳೆಯ ನಡುವೆ ಸಿಗುವ ನವಿಲುಗರಿ ಮರಿ ಮಾಡಿದೆ,
ಥೇಟ್ ನನ್ನೆದೆಯಲ್ಲಿ ನೀ ಮಾಡಿದಂತೆ....ವಿಷಾದದ ಕಾವಿಗೆ//
No comments:
Post a Comment