08 March 2009

ಅದೇಕೋ ಹೀಗನಿಸುತ್ತೆ....

ಹೆಪ್ಪುಗಟ್ಟಿದ ನೆನಪಿನ ಮಾರ್ದವ ಇಬ್ಬನಿಹನಿಗಳ,

ನಿನ್ನ ಬೆಚ್ಚನೆಯ ಉಸಿರ ಬಿಸಿಗೆ ಕರಗಿಸುವ ಹಂಬಲ/

ನನ್ನ ಹುಂಬ ಹೃದಯಕ್ಕೆ,

ಅದೇನೋ ವಿವರಿಸಲಾಗದ ಖುಷಿ ತಂದುಕೊಟ್ಟಿದೆ//

ಮುಸುಕಲಿ ಬಿಡು ಮಬ್ಬು ಮುಸುಕು,

ನಿನ್ನ ಮನಗೆಲ್ಲುವ ಕಲ್ಪನೆಯ ಬದುಕು/

ಅದೇನೇ ಆಕ್ಷೇಪ ನಿನ್ನೆದೆಯಲ್ಲಿ ಕಾವು ಕೂತಿದ್ದರೂ,

ಒಪ್ಪಿಗೆಯ ಹೂಮರಿಗಳು ಹುಟ್ಟಿಯಾವು ಎಂಬ ದೂರದ ನಿರೀಕ್ಷೆ ನನಗಿದೆ//

ಮುಗಿಲ ಚುಂಬಿಸೋ ಮೋಡ,

ನೀಲಿಬಾನಿಗೆಲ್ಲ ಪರದೆ ಹಾಕಿ/

ತನ್ನ-ಮುಗಿಲ ನಡುವಿನ ಸಂಬಂಧವ,

ಇನ್ನಷ್ಟು ಗಾಢ...ನಿಗೂಢವಾಗಿಸಿದೆ ನೋಡು//

ಸುರಗಿಗಿಂತ ಸುವಾಸನೆ,

ಪಾರಿಜಾತಕ್ಕಿಂತ

ಪರಮಾಪ್ತ/

ಮಲ್ಲಿಗೆಗಿಂತ ಮೋಹಕ,

ನಿನ್ನ ಬೆವರ ಘಮ//

No comments: