17 August 2011

ನಗಲಾರದೆ ಅಳಲಾರದೆ...


"ನಾಳೆ ಮಹಾತ್ಮಗಾಂಧಿ ಪ್ರತಿಮೆ ಬಳಿ ಹತ್ತಾರು ಸಾವಿರ ಜನರ ಸೇರಿಸಿ,ಅಣ್ಣಾ ಹಜಾರೆಯವರ ಜನಲೋಕಪಾಲಕ್ಕೆ ತುಂಬು ಹೃದಯದ ಬೆಂಬಲ ಸೂಚಿಸಿ ಪಕ್ಷಾತೀತವಾದ ಹೋರಾಟ ಮಾಡಲಾಗುವುದು!" ಅಂದಿದ್ದಾರೆ ಮಾಜಿ ಮುಖ್ಯ'ಕಂತ್ರಿ' ಬೂ ಸಿ ಯ! (ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ.ಇದೂ ಒಂದು ಅವರ ಹೊಸ ಬೂಸಿಯೇ.ಅಲ್ಲಾ ಅಬಲೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಉಮೇಶ್ ರೆಡ್ಡಿ ಧರಣಿ ಕೂತರೆ...ಸರಣಿ ಮಹಿಳ ಅತ್ಯಾಚಾರ ವಿರೋಧಿಸಿ ಚಾರ್ಲ್ಸ್ ಶೋಭರಾಜ್ ಉಪವಾಸ ಕೂತರೆ...ಭೂಮಿ ಡೀನೋಟಿಫಿಕೇಶನ್ ವಿರೋಧಿಸಿ ಸ್ವಂತ(?) ಮಗನೊಂದಿಗೆ ಕಟ್ಟಾ ನಾಯ್ಡು ಸರಕಾರದ ವಿರುದ್ಧ ಸಮರ ಸಾರಿದರೆ ಆಗಬಹುದಾದ ಕೆಕರುಮೆಕರು ಕನ್ನಡಿಗರಿಗಾಗುತ್ತಿದೆ.ಇದೇನು ಅಕಾಲದಲ್ಲಿ 'ಹಾಸ್ಯೋತ್ಸವ"?! ಆಣೆ ಹಾಕೊ ದಿವಸ ಧರ್ಮಸ್ಥಳದಿಂದ ಮಂಜುನಾಥ ತಲೆ ತಪ್ಪಿಸಿಕೊಂಡು ಓಡಿ ಹೋದ ಹಾಗೆ ನಾಳೆಗೆ ಬೆಚ್ಚಿಬಿದ್ದು ಗಾಂಧಿಯೂ ಕೋಲೂರಿಕೊಂಡು ಇವತ್ತು ರಾತ್ರಿಯೇ ಓಡಿ ಹೋಗಿ ಬೂಸಿಯ ಕೈಯಿಂದ ಬಚಾವಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ...

No comments: