21 August 2011

ಕಾದು ಕುಳಿತ ಕರುನಾಡಿಗೆ ಇನ್ಯಾರು ಗತಿ?

ಅರ್ಜೆಂಟಾಗಿ ಬಿಪಿ ಏರಿಸಿಕೊಂಡ ಬೂಸಿಯ ಪರಪ್ಪನ ಅಗ್ರಹಾರದ ದಾರಿಯಲ್ಲೆ ಇರುವ 'ಸಾಗರ್ ಅಪೋಲೊ'ದಲ್ಲಿ ತುರ್ತು ಚಿಕಿತ್ಸೆ ಪಡೆದರಂತೆ! ಅವರಿಗೇನಾದರೂ ಆದುಗೀದರೆ ಮುಂದೆ ಐದು ತಿಂಗಳ ನಂತರದ ಅವರ ಪುನರಾಗಮನಕ್ಕಾಗಿ ಕಾತರದಿಂದ ಕಣ್ಣು ಬಿಟ್ಟುಕೊಂಡೆ ಕಾದು ಕೂತ ಬಡ ಕರ್ನಾಟಕದ-ನಿಸ್ಸಹಾಯಕ ಕನ್ನಡಿಗರ ಗತಿಯೇನು? ಎಂದು ಅವರ 'ಮಾನಸಿಕ'ಪುತ್ರ ಎಂ ಪಿ ರೇಣುಕಾಚಾರ್ಯ ಅಲಿಯಾಸ್ 'ರಸಿಕ ಕುಲತಿಲಕ' ರೇಣು ತನ್ನ ಆಪ್ತಸಖಿ ಜಯಲಕ್ಷ್ಮಿಯನ್ನ ಕರಡಿಯಂತೆ ತಬ್ಬಿಕೊಂಡು ಉಮ್ಮಳಿಸಿ ಬಂದ ದುಃಖ ತಡಿಯೋಕಾಗದೆ ಒಂದೇ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರಿಟ್ಟರಂತೆ!

ಮೊನ್ನೆ ಮೊನ್ನೆಯಷ್ಟೆ ರೇಣುಕನ 'ಮಾನಸಿಕ' ಅಸ್ವಸ್ಥ್ಯತೆಯ ಸೋಂಕನ್ನ ತಾವೂ ತಗುಲಿಸಿಕೊಂಡಂತೆ ಅಣ್ಣಾ ಹಜಾರೆಗೆ ಬಹಿರಂಗ ಬೆಂಬಲ ಸೂಚಿಸಿ,ಆಮೇಲೆ ತಾವು ಕರೆಕೊಟ್ಟ ಪ್ರತಿಭಟನೆಗೆ ತಾವೆ ಬಾರದೆ ತಲೆತಪ್ಪಿಸಿಕೊಂಡು ;ಮರುದಿನ ಈಗಷ್ಟೆ ಇನ್ಸ್ಟೆಂಟ್ ಜ್ಞಾನೋದಯವಾಗಿ ಭೋದಿ ಮರದಡಿಯಿಂದ ಹಾಗ್ಹಾಗೆ ನೇರ ಎದ್ದೊಡಿ ಬಂದವರ ಮುಖಭಾವದಲ್ಲಿ "ಬೀದಿಗಿಳಿದು ಹೋರಾಡೋದು ಸಂವಿಧಾನ ಬಾಹಿರ...ಕಾಯಿದೆಯೇನಿದ್ದರೂ ಸಂಸತ್ತೆ ರೂಪಿಸಬೇಕು" ಎಂಬ ಹಿತವಚನಗಳನ್ನುದುರಿಸಿದ್ದ ಬೂಸಿಯರಿಗೆ ಸದ್ಯಕ್ಕೆ ಕಾಡುತಿರೋದು ಕೇವಲ ಈ ಮಾನಸಿಕ ಅಸ್ವಸ್ಥ್ಯತೆ ಮಾತ್ರವ? ಇಲ್ಲ ಕಟ್ಟಾ ತನ್ನೆಲ್ಲ ಹಲ್ಲು ಬಿಟ್ಟುಕೊಂಡು ತಮ್ಮನ್ನೂ ತಾನಿರುವ ಸ್ವರ್ಗಕ್ಕೆ ತೆರೆದ ತೋಳುಗಳಿಂದ ಆಹ್ವಾನಿಸುತ್ತಿರುವಂತೆ ನಿತ್ಯ ಕೆಟ್ಟ ಕನಸೇನಾದರೂ ಪದೆಪದೆ ಬೀಳುತ್ತಿರೋದೂ ಕೂಡ ಕಾರಣವಿದ್ದೀತ?

'ಲೋಕಾಯುಕ್ತ ತನಿಖೆ'ಗೆ ಸಿಕ್ಕ ಸಮ್ಮತಿ ಹಾಗು 'ಭದ್ರಾ ಮೇಲ್ದಂಡೆ ಅವ್ಯವಹಾರದ' ಸುದ್ದಿ ನಿಧಾನವಾಗಿ ತನ್ನ ರೆಕ್ಕೆ ಚಾಚುತ್ತಿರೋದನ್ನ ನೋಡಿದರೆ ಅವರ ಕರುಣಾಜನಕ ಸ್ಥಿತಿಗೆ ಮರುಕ ಎಲ್ಲೆಲಿಂದಲೊ ಉಕ್ಕಿ ಬರುತ್ತದೆ.ಕ'ಮಲ' ಪಕ್ಷದ 'ಶಿಸ್ತಿನ ಸಿಪಾಯಿಗೆ' ಹೀಗಬಾರದಿತ್ತು,ಅಯ್ಯೋ ಪಾಪ?!

No comments: