28 October 2011

ವಲಿ....( ಭಾಗ-10 )

ಮಹಮದ್ ಯಹೂದಿಗಳ ಪವಿತ್ರಗ್ರಂಥವಾದ 'ತಾಲ್'ಮಡ್'ನಲ್ಲಿ ಬರುವ ಹಲವಾರು ದಂತಕಥೆಗಳನ್ನು ಖುರಾನಿನಲ್ಲೂ ಮಕ್ಕಿ-ಕಾ-ಮಕ್ಕಿ ಬಳಸಿಕೊಂಡಿರುವ ಉದಾಹಾರಣೆಗಳನ್ನು ಇತಿಹಾಸಕಾರ ಕ್ಲೇರ್ ಸಾಧಾರವಾಗಿ ನೀಡುತ್ತಾನೆ.ಮಹಮದ್ ಯಹೂದಿ ಹಾಗೂ ಕ್ರಿಸ್ತಮತಾವಲಂಭಿಗಳಿಗೆ ತಮ್ಮತಮ್ಮ ಧರ್ಮಗ್ರಂಥಗಳನ್ನೆ ಆಧರಿಸಿ ಅವುಗಳ ಸಂದೇಶಗಳನ್ನು ಪಾಲಿಸಬೇಕೆಂದು ಆರಂಭದಲ್ಲಿ ಕರೆಯಿತ್ತಿದ್ದ.ಸುರಾ 5/72 ಹಾಗೂ 5/47ರಲ್ಲಿ ಇದನ್ನು ಕಾಣಬಹುದು.ಈ ಉದಾರ ನೀತಿಯನ್ನ ಯಹೂದಿ ಹಾಗು ಕ್ರೈಸ್ತರಿಗೆ ನೀಡುತ್ತ ಸುರಾ 42/3-53,ಹಾಗೂ 42/115ರಲ್ಲಿ 'ನಿಮ್ಮ ದೇವ ನಮ್ಮ ಹಾಗೂ ನಿಮ್ಮ ಪ್ರಭುವೂ ಆಗಿರುತ್ತಾನೆ!' ಎನ್ನುವ ಮೂಲಕ ನೀಡಿದ್ದಾನೆ.

ಆದರೆ ಕ್ರಮೇಣ ಇಸ್ಲಾಂ ಪ್ರಬಲಗೊಳ್ಳುತ್ತಿದ್ದಂತೆ ತನ್ನ ಈ ಉದಾರ ನೀತಿಯನ್ನು ಮಹಮದ್ ಮುಲಾಜಿಲ್ಲದೆ ಬದಲಿಸಿದ.ಎಲ್ಲಿಯೂ ಕ್ರೈಸ್ತ ಅಥವಾ ಯಹೂದಿ ಧರ್ಮಗ್ರಂಥಗಳ ಹೆಸರನ್ನು ಉಲ್ಲೇಖಿಸದೆ (ಆತನಿಗೆ ಅರಿವಿದ್ದ ಇತರ ಧರ್ಮಗ್ರಂಥಗಳು ಅವೆರಡು ಮಾತ್ರ ಎನ್ನುವುದು ಇತಿಹಾಸಕಾರ ಅಲ್ ತಮೀಮಿಯ ಅಂಬೋಣ) ಖುರಾನ್ ಮೂಲಕ ದೇವರು ಈ ಹಿಂದೆ ಉಪದೇಶಿತವಾದ ಎಲ್ಲಾ ಧರ್ಮಗ್ರಂಥಗಳನ್ನು ರದ್ದುಪಡಿಸಿದ್ದಾನೆ! ಎಂದು ಸಾರಿದ.ಇಷ್ಟಕ್ಕೆ ನಿಲ್ಲಿಸದೆ ಖುರಾನ್ ಅಂತಿಮ ದೈವ ಸಂದೇಶವಾಗಿದ್ದು ತಾನು ಅಂತಿಮ ಪ್ರವಾದಿ ಎಂದೂ ಘೋಷಿಸಿಕೊಂಡ.ಇದಕ್ಕೆ ಪೂರಕವಾಗಿ ತನ್ನ ಅಂತಿಮ ಮೆಕ್ಕಾಯಾತ್ರೆಯ ಸಮಯದಲ್ಲಿ ಕಾಬಾದ ಬಳಿ ಯಹೂದಿ ಮತ್ತು ಕ್ರೈಸ್ತರು ಇನ್ನೆಂದೂ ಸುಳಿಯಬಾರದು ಎಂದು ಪ್ರತಿಬಂಧಿಸಿದ್ದನ್ನು ಅಲ್ ಮುಬಾರಕಿ ಎತ್ತಿ ತೋರಿಸುತ್ತಾನೆ.

ಇಷ್ಟಲ್ಲದೆ ಕ್ರಿಸ್ತನ ಹುಟ್ಟು ಹಾಗೂ ಆತನ ಶಿಲುಬೆಗೇರಿಸಿದ ವಧೆಯನ್ನು ಮಹಮದ್ ಸಾರಾಸಗಟಾಗಿ ಅಲ್ಲಗೆಳೆದ.ಸುರಾ 19/1 ಹಾಗೂ 5/109ಗಳ ಮೂಲಕ ದೈವಾನುಗ್ರಹದಿಂದ ಮೇರಿಮಾತೆಯ ಒಡಲಲ್ಲಿ ಕ್ರಿಸ್ತನ ಜೀವಾಂಕುರವಾಯಿತು ಎಂದ.ದೇವರ ಕೃಪೆಯಿಂದ ಇನ್ನೂ ಜನಿಸಿ ತೊಟ್ಟಿಲಲ್ಲಿದ್ದಾಗಲೆ ತಾನು ದೇವರ ಸೇವಕ ಎಂಬುದು ಅವನಿಗೆ ಅರಿವಾಗಿ ಕ್ರಿಸ್ತ ತಾನು ದೇವದೂತನೆಂದು ಸಾರಿದ ಎಂದ.ಎಸುವಿನಿಂದ ತನಗೊಂದು ಧರ್ಮಗ್ರಂಥ ಕೊಡಲ್ಪಟ್ಟಿದೆ ಎಂದ ಮಹಮದ್ ತನ್ನ ಮರಣಕ್ಕೆ ಹಲವು ವರ್ಷ ಮೊದಲು ಮದೀನಾದಲ್ಲಿ ಸುರಾ 3/32-57ರ ಮೂಲಕ ಕ್ರಿಸ್ತನ ಜನನ,ಜೀವನ ಹಾಗೂ ಮರಣಗಳ ಕುರಿತ ತನ್ನ ವ್ಯಾಖ್ಯಾನಗಳನ್ನು ಪುನರುಚ್ಚರಿಸಿದ.ಈ ಮೂಲಕ ಮಹಮದ್ ಏಸುವಿನ ಜನನ,ಮರಣ ಹಾಗೂ ಆತ ಸಾರಿದ ತತ್ವಗಳ ಬಗ್ಗೆ ಕ್ರಿಸ್ತ ಮತಾವಲಂಭಿಗಳಲ್ಲಿದ್ದ ಪುರಾತನ ನಂಬಿಕೆಗಳನ್ನ ನಿರಾಕರಿಸಿದ.ಕ್ರಿಸ್ತನನ್ನು ಅವನ ಪ್ರಕಾರ ಯಹೂದಿಗಳು ಶಿಲುಬೆಗೆ ಏರಿಸಿಯೆ ಇರಲಿಲ್ಲ! ವಧೆಯಾಗದೆ ಆತ ದೇವರ ಕೈಹಿಡಿದು ಸಶರೀರನಾಗಿ ಸ್ವರ್ಗಆರೋಹಣ ಮಾಡಿದ ಎಂದು ಅವನು ಸುರಾ 4/155-159 ಹಾಗೂ 5/109-110ಗಳ ಮೂಲಕ ಆತ ಸಾಧಿಸಿದ.

ಮಹಮದನ ಈ ಹೊಸ ಉಪಖ್ಯಾನದ ಹಿನ್ನೆಲೆಯಲ್ಲಿ ಪ್ರಾಯಶಃ ಏಸುವಿನ ಕೊಲೆಯ ಆರೋಪದಿಂದ ಯಹೂದಿಗಳನ್ನು ಮುಕ್ತಗೊಳಿಸಿ ಅವರನ್ನೂ ಇಸ್ಲಾಮಿನತ್ತ ಸೆಳೆದುಕೊಳ್ಳುವ ಹುನ್ನಾರ ಅಡಗಿತ್ತು ಎನ್ನುವ ಊಹೆ ಇತಿಹಾಸಕಾರ ಕ್ಲೇರನದ್ದು.ಇದೇನೆ ಇದ್ದರೂ ಮಹಮದ್ ಏಸು ಒಬ್ಬ ಪ್ರವಾದಿಯೆಂದು ಸಾಧಿಸಿ ಆತನ ಕೊಲೆಯಾಗದೆ ನೇರ ದೇವರೆ ಕೈಹಿಡಿದು ಆತನ ಸ್ವರ್ಗಾರೋಹಣ ಮಾಡಿಸಿದ ಎಂದು ಸಾರಿದ್ದು ವಿಶೇಷ ಮಹತ್ವ ಪಡೆಯುತ್ತದೆ.

ಹೀಗಿರುವಾಗ ಮೆಕ್ಕಾದಲ್ಲಿ ಪ್ರತಿವರ್ಷದಂತೆ ಜರಗುವ ವರ್ಷಾವಧಿಯ ಪವಿತ್ರ ಯಾತ್ರೆಗೆ ಮದೀನದ ನವ ಮತಾಂತರಿತರೂ ಯಾತ್ರೆ ಕೈಗೊಂಡು ಕಾಬಾದ ಆರಾಧನೆಗೆ ಸಿದ್ಧರಾದರು.ಆದರೆ ಅವರ ಮತಾಂತರದ ಸುದ್ದಿ ಖುರೈಷಿಗಳಿಗೇನಾದರೂ ತಿಳಿದ್ದಿದ್ದೆ ಹೌದಾಗಿದ್ದಲ್ಲಿ ಅವರು ಖುರೈಶಿಗಳೊಂದಿಗೆ ಹೊಡೆದಾಟ ಹಾಗು ರಕ್ತಪಾತಕ್ಕೂ ಈ ಬಾರಿ ಅಣಿಯಾಗಿಯೇ ಹೋಗಬೇಕಿತ್ತು! ಆದರೆ ಮಹಮದನಿಗೆ ಇಂತಹದ್ದೊಂದು ತಿಕ್ಕಾಟ ಬೇಕಿರಲಿಲ್ಲ.ಹಾಗೊಂದು ವೇಳೆ ಹೊಡೆದಾಟವಾದರೆ ಅದರಿಂದ ತನ್ನ ಗುರಿ ಸಾಧನೆಗೆ ಘೋರ ಧಕ್ಕೆ ಬಂದೊದಗುತ್ತದೆ ಎಂಬ ಅರಿವು ಅವನಿಗಿತ್ತು.ಹೀಗಾಗಿ ಅದಕ್ಕೂ ಮೊದಲೆ ಆತ ಮದೀನಾದ ನವಮತಾಂತರಿಗಳನ್ನು ಗುಪ್ತವಾಗಿ ಸಂಧಿಸಿದ.ಅವರ ಸಂಖ್ಯೆ,ಧರ್ಮನಿಷ್ಠೆ ಹಾಗೂ ಮನೋಗುಣ ಅರಿಯುವ ಪ್ರಯತ್ನ ಇದಾಗಿತ್ತು.ಆತ ಅವರನ್ನು ಅಕಾಬಾದಲ್ಲಿಯೆ ಸಂಧಿಸಿದ.ಮಧ್ಯರಾತ್ರಿ ನಡೆದ ಆ ಸಭೆಯಲ್ಲಿ ಮತಾಂತರಿತ ಎಪ್ಪತ್ತೆರಡು ಮದೀನಾವಾಸಿಗಳನ್ನು ಉದ್ದೇಶಿಸಿ ಮಹಮದ್ ಖುರಾನ್ ದೈವವಾಣಿಗಳನ್ನು ಸಾದರ ಪಡಿಸಿದ.ತನ್ನ ರಕ್ಷಣೆಯ ಪ್ರತಿಜ್ಞೆಯನ್ನು ಅವರೆಲ್ಲರಿಂದಲೂ ಮಾಡಿಸಿಕೊಂಡ! ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ತ್ರಾಂಗ್.ಈ ಪೈಕಿ ಹನ್ನೆರಡು ಮೂಲ ಮತಾಂತರಿತರನ್ನು ಅವರೆಲ್ಲರ ನಾಯರನ್ನಾಗಿ ಆತ ನೇಮಿಸಿದ,ಇದನ್ನೆ 'ಎರಡನೆ ಅಲ್ ಅಕಾಬಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.

ಆದರೆ ಗುಪ್ತಚಾರರ ಮೂಲಕ ಈ ಗುಪ್ತ ಸಭೆಯ ಸುದ್ದಿ ಖುರೈಶಿಗಳನ್ನು ಮಿಂಚಿನಂತೆ ಮುಟ್ಟಿತು.ಅವರು ಆ ಎಲ್ಲಾ ಮತಾಂತರಿತ ಮದೀನ ನಿವಾಸಿಗಳನ್ನು ಸೆರೆ ಹಿಡಿಯಲು ಅತ್ತ ಧಾವಿಸುವಷ್ಟರಲ್ಲಿ ಆ ಎಲ್ಲಾ ಯಾತ್ರಿಕರೂ ಅಲ್ಲಿಂದ ಕಾಲುಕಿತ್ತಾಗಿತ್ತು.ಆದರೆ ಈ ಘಟನೆಯ ನಂತರ ಮಹಮದನಿಗೆ ಶಾಂತಿ ಎನ್ನುವುದು ಮೆಕ್ಕಾದಲ್ಲಿ ಅಕ್ಷರಶಃ ಮರೀಚಿಕೆಯೆ ಆಯಿತು.ಖುರೈಷಿಗಳ ಇಮ್ಮಡಿಗೊಂಡ ಆಕ್ರೋಶ ನಾನಾ ಕೋಟಲೆಗಳಾಗಿ ಅವನ ಮೇಲೆರಗಿತು.ಮಹಮದ್ ಹಾಗೂ ಅವನ ಸ್ಥಳೀಯ ನಿವಾಸಿ ಅನುಯಾಯಿಗಳ ಮೇಲೆ ಹಿಂಸೆ ಹೆಚ್ಚಾಯಿತು.ಹೀಗಾಗಿ ಮತ್ತೆ ಆತ ಮೆಕ್ಕಾವನ್ನು ತೊರೆಯಲು ನಿರ್ಧರಿಸಿದ.ಸುರಕ್ಷತೆಯ ಖಾತ್ರಿಯಿರುವ ತನ್ನ ನವ ಹಿಂಬಾಲಕರಿರುವ ಮದೀನಕ್ಕೆ ತೆರಳಲು ಆತ ನಿರ್ಧರಿಸಿದ.ತನ್ನ ಮತಬಾಂಧವರಿಗೂ ಆತ ಇದೆ ಅಪ್ಪಣೆಯನ್ನು ರವಾನಿಸಿದ.ಅಕಾಬಾದಲ್ಲಿ ಮದೀನಾವಾಸಿಗಳಿಂದ ಮಾಡಿಸಿಕೊಂಡಿದ್ದ ಪ್ರತಿಜ್ಞೆ ಅವನ ಈ ನಿರ್ಧಾರಕ್ಕೆ ಬಲತುಂಬಿತ್ತು.ಮನೆ-ಮಠ ತೊರೆದು ಮೆಕ್ಕಾದಿಂದ ನೂರಾ ಎಂಬತ್ತು ಮೈಲಿ ದೂರದಲ್ಲಿದ್ದ ಮದೀನಕ್ಕೆ ಕೈಗೊಂಡ ಆ ವಲಸೆ ಅವರೆಲ್ಲರಿಗೂ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿತು.ಪ್ರಯಾಸಕರವಾಗಿದ್ದ ಆ ಪ್ರಯಾಣದಲ್ಲಿ ಸುಮಾರು ಇನ್ನೂರು ಮಂದಿ ವಲಸೆ ಹೋದರೆಂದು ಇತಿಹಾಸಕಾರ ಅಲ್ ಮುಬಾರಕಿ ತಿಳಿಸುತ್ತಾನೆ.ಅತ್ಯಂತ ಗುಟ್ಟಾಗಿ ಕೈಗೊಂಡಿದ್ದ ಈ ಪಯಣ ಸುಮಾರು ಎರಡು ತಿಂಗಳಲ್ಲಿ ಮುಗಿಯಿತು! ಹೇಗೊ ಸುರಕ್ಷಿತವಾಗಿ ಮದೀನಾ ತಲುಪಿಕೊಂಡ ಅವರನ್ನು ಮದೀನಾದ ಮುಸ್ಲೀಮರು ಆದರ ಹೊತ್ತ ಅಂತಃಕರಣದಿಂದ ಬರಮಾಡಿಕೊಂಡರು.

ಇತ್ತ ಈ ವಿಷಯ ಅರಿವಾದ ಖುರೈಶಿಗಳಿಗೆ ದಿಗ್ಭ್ರಮೆಯಾಯಿತು.ಚೂರೂ ಸುಳಿವು ಕೊಡದೆ ಕುಟುಂಬಗಳು ತಮ್ಮ ಮನೆ-ಮಠ ತೊರೆದು ಹೋಗಿದ್ದು ಅವರೆಲ್ಲರ ಅಚ್ಚರಿಗೆ ಕಾರಣವಾಯಿತು.ಹಾಗೊಂದು ವೇಳೆ ಆ ಬಗ್ಗೆ ಅವರಿಗೆ ಸುಳಿವು ದೊರೆತಿದ್ದರೂ ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.ಅವರೇನಾದರೂ ಉಗ್ರವಾಗಿ ವರ್ತಿಸಿದ ಪಕ್ಷದಲ್ಲಿ ತಮ್ಮ ರಕ್ತ ಸಂಬಂಧಿಗಳೊಂದಿಗೆ ಕಾದಾಡಿ ಅವರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತಿತ್ತು,ಅಲ್ಲದೆ ಅದು ಅವರ ಬುಡಕಟ್ಟಿನ ಒಳಗೆ ಅದು ಬಿರುಕು ಮೂಡಿಸಿದ್ದರೂ ಆಶ್ಚರ್ಯ ಪಡಬೇಕಾಗಿರಲಿಲ್ಲ.ಒಟ್ಟಿನಲ್ಲಿ ಖುರೈಷಿಗಳು ನಿಸ್ಸಹಾಯಕರಾಗಿದ್ದರು.ಇಷ್ಟರ ನಡುವೆಯೂ ಮಹಮದ್,ಅವನ ಮಾವ ಅಬು ಬಕರ್ ಹಾಗೂ ದೊಡ್ಡಪ್ಪನ ಮಗ ಅಲಿಯೊಂದಿಗೆ ಅವನ ಕುಟುಂಬದವರು ಇನ್ನೂ ಅಲ್ಲಿಯೆ ಉಳಿದುಕೊಂಡಿದ್ದರು! ಮಹಮದನ ಈ ನಡೆ ಖುರೈಶಿಗಳಂತೆ ಅಬು ಬಕರನಿಗೂ ಬಿಡಿಸಲಾರದ ಒಗಟಾಗಿತ್ತು.ಮಹಮದನೂ ಅವರೊಂದಿಗೆ ಹೋಗಿದ್ದಿದ್ದರೆ ಪೀಡೆ ತೊಲಗಿತು ಎಂದುಕೊಳ್ಳಲು ತಯಾರಿದ್ದ ಖುರೈಶಿಗಳೆಲ್ಲ ಈ ಹಿನ್ನೆಲೆಯಲ್ಲಿ ಸಭೆಗೂಡಿದರು.ಅಲ್ಲಿ ಕೆಲವರು ಮಹಮದನ ಜೀವಹರಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲಹೆ ಕೊಟ್ಟರಾದರೂ ಹಾಗೊಂದು ವೇಳೆ ಮಹಮದನ ಕೊಲೆ ಮಾಡಿದರೆ ಆತನ ಕುಟುಂಬಸ್ಥರು ಅರಬ್ಬಿ ಬುಡಕಟ್ಟಿನ ಒಳ ನಿಯಮಗಳಂತೆ ಪ್ರತಿಕಾರಕ್ಕೆ ಮುನ್ನುಗ್ಗಿದರೆ ವ್ಯಥಾ ರಕ್ತಪಾತ ಆದೀತು ಎಂಬ ಅಭಿಪ್ರಾಯವೂ ಎದುರಾಗಿ ಅವನನ್ನು ಅವನ ಮನೆಯಲ್ಲೆ ಭೇಟಿಯಾಗಿ ತೀವ್ರವಾಗಿ ಅವನನ್ನು ಹೆದರಿಸಿ ಸುಮ್ಮನಾಗಿಸಲು ತೀರ್ಮಾನ ಕೈಗೊಂಡು ಸಭೆ ಬರಖಾಸ್ತುಗೊಳಿಸಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.ಆದರೆ ಮಹಮದನಿಗೆ ಖುರೈಷಿಗಳ ಸಂಧಾನದ ಕರೆ ಸಂಶಯ ಮೂಡಿಸಿತು.ಹಾಗೊಮ್ಮೆ ತಾನವರನ್ನು ಎದುರುಗೊಂಡರೆ ಅವರು ತನ್ನ ಹತ್ಯೆ ಜರುಗಿಸಿಯಾರು ಎಂಬ ಸಂಶಯಕ್ಕೆ ಅವನು ಒಳಗಾದ.ಖುರಾನಿನ ಸುರಾ 8/30ರಲ್ಲಿ ಅದನ್ನವನು ವ್ಯಕ್ತಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.

ಈ ವಿಷಯ ತಿಳಿದ ಮಹಮದ್ ಆಲಿಯನ್ನು ತನ್ನ ಮನೆಯಲ್ಲಿ ಇರಲು ಹೇಳಿ ಅಬು ಬಕರನ್ನು ಕಾಣಲು ದೌಡಾಯಿಸಿದ.ಅಲ್ಲಿ ಮದೀನಕ್ಕೆ ಪಲಾಯನ ಮಾಡಲು ತೀರ್ಮಾನಿಸಲಾಯಿತು.ಅದೆ ರಾತ್ರಿ ಆತ ಹಾಗೂ ಅಬುಬಕರ್ ಮೆಕ್ಕಾದಿಂದ ಓಡಿಹೋದರು.ಎರಡು ಘಂಟೆ ಪ್ರಯಾಣಿಸಿ ದಾರಿಯಲ್ಲಿ ಸಿಗುವ ಥೌರ್ ಎಂಬ ಬೆಟ್ಟವನ್ನು ಕಷ್ಟದಿಂದ ಏರಿ ಅಲ್ಲಿದ್ದ ಗುಹೆಯೊಂದರಲ್ಲಿ ಇಬ್ಬರೂ ಅಡಗಿಕೊಂಡರು.ಅಬು ಬಕರನ ಮಗ ಅಬ್ದುಲ್ಲಾ ಹಾಗೂ ಮಗಳು ಆಸ್ಮಾ ಇವರಿಗೆ ಹಾಲು-ಹಣ್ಣು ಹಾಗೂ ಅಗತ್ಯ ತಿನಿಸುಗಳನ್ನು ಸರಬರಾಜು ಮಾಡಿದರು.ಇದೆ ಗುಹೆಯಲ್ಲಿ ಅಡಗಿ ಕುಳಿತಾಗ ಜೇಡವೊಂದು ಗುಹೆ ಬಾಗಿಲಿಗೆ ಬಲೆಹೆಣೆದು ಹಿಂಬಾಲಿಸಿ ಬಂದ ಕೊಲೆಗಡುಕ ಖುರೈಶಿಗಳಿಂದ ಮಹಾಮದನನ್ನು ಪಾರುಮಾಡಿತು ಎಂಬ ದಂತಕಥೆಯೊಂದು ಚಾಲ್ತಿಯಲ್ಲಿದೆ.ಇತ್ತ ಮಹಮದನ ಪಲಾಯನದ ಸುದ್ದಿ ಅರಿತ ಖುರೈಷಿಗಳು ಗಲಿಬಿಲಿಗೊಂಡರು.ಅವನನ್ನು ಹಿಡಿದು ಹೆಡೆಮುರಿಗೆ ಕಟ್ಟಿತರಲು ಬೆನ್ನ ಹಿಂದೆಯೆ ಪಡೆಗಳನ್ನೂ ಅಟ್ಟಲಾಯಿತು.ಆ ಪ್ರಯತ್ನವೂ ವಿಫಲವಾದ ನಂತರ ಮೂರು ದಿನಗಳನ್ನು ಗುಹೆಯೊಳಗೆ ಕಳೆದ ಮಹಮದ್ ಹಾಗೂ ಅಬು ಬಕರ್ ಧೈರ್ಯವಹಿಸಿ ಗುಹೆಯಿಂದ ಹೊರಬಿದ್ದರು.ಅವರಿಗಾಗಿಯೆ ಬೆಟ್ಟದ ತಪ್ಪಲಿನಲ್ಲಿ ಒಂಟೆಗಳನ್ನು ಸಿದ್ಧಪಡಿಸಿ ಇಡಲಾಗಿತ್ತು.ಅವನ್ನೇರಿ ಇಬ್ಬರೂ ಮದೀನದತ್ತ ಪೇರಿಕಿತ್ತರು.ಕ್ಷೇಮವಾಗಿಯೆ ಅವರಲ್ಲಿಗೆ ಮುಟ್ಟಿದರು.ಹೀಗೆ ಮದೀನದತ್ತ ಆತ ಯಾತ್ರಿಸಿದ ದಿನ ಮುಸ್ಲೀಮರಿಗೆ ಪವಿತ್ರವಾಗಿ ಪರಿಣಮಿಸಿ ಅಂದಿನಿಂದ 'ಹಿಜ್ರಾ' ಶಕೆ ಆರಂಭವಾಯಿತು ಎನ್ನುವುದು ಇತಿಹಾಸಕಾರ ಮ್ಯೂರನ ಅಭಿಪ್ರಾಯ.ದಿನದರ್ಶಿಕೆಯ ಪ್ರಕಾರ ಅಂದು ಕ್ರಿಸ್ತಶಕೆ 622ರ ಜೂನ್ 20ನೆ ತಾರೀಕು ಆಗಿತ್ತು.ಮಹಾಮದನಿಗಾಗ ಐವತ್ತಮೂರರ ಹರೆಯ.

ಮಹಮದನ ದೊಡ್ಡಪ್ಪನ ಮಗ ಆಲಿ,ಆತನ ಹೆಂಡತಿ ಸೌದ,ಮಕ್ಕಳಾದ ಜೈನಾಬ್,ಉಮ್'ಕುಲ್'ಸುಮ್ ಹಾಗೂ ಫಾತಿಮಾರ ಜೊತೆಗೆ ಮಹಮದನ ಎಳೆಯ ಹೆಂಡತಿ ಆಯೆಷಾ ಇವರಿಷ್ಟು ಮಂದಿ ಮಾತ್ರ ಇನ್ನೂ ಮೆಕ್ಕಾದಲ್ಲಿಯೆ ಉಳಿದುಕೊಂಡಿದ್ದರು.ಇವರಿಗ್ಯಾರಿಗೂ ಖುರೈಷಿಗಳು ಉಪಟಳ ನೀಡದಿದ್ದುದ್ದು ಸೋಜಿಗ ಹುಟ್ಟಿಸಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಏಕೆಂದರೆ ಮಹಮದ್ ಖುರೈಷಿಗಳ ಪುರಾತನ ಮತ,ವಿಗ್ರಹಾರಾಧನೆ ಹಾಗೂ ಆಚಾರಗಳ ವಿರುದ್ಧ ಎಸಗಿದ ಅಪಚಾರ ಇವೆಲ್ಲ ಅವರಲ್ಲಿ ಅವನ ಹಾಗೂ ಅವನ ಆತ್ಮೀಯರ ವಿರುದ್ಧ ವೈರತ್ವ ಸಾರುವಂತೆ ಮಾಡಿತ್ತು,ಹೀಗಿರುವಾಗ ಆತ ಕೈಸಿಗದೆ ಪಲಾಯನಗೈದ ಹತಾಶೆ ಆತನ ಕುಟುಂಬದವರ ಮೇಲೆ ಹಿಂಸಾತ್ಮಕವಾಗಿ ತಿರುಗದಿದ್ದುದು ಅಚ್ಚರಿ ಹುಟ್ಟಿಸುವುದು ಸಕಾರಣವಾಗಿದೆ.ಇದೇನೆ ಇದ್ದರೂ ಮಹಮದ್ ಕ್ಷೇಮವಾಗಿ ಅಬು ಬಕರನೊಂದಿಗೆ ಮದೀನ ಮುಟ್ಟಿದ.ಈ ಹಿಂದೆ ಮದೀನವನ್ನು 'ಯಾತ್ರಿಬ್' ಎಂದು ಕರೆಯಲಾಗುತ್ತಿತ್ತು.ಕ್ರಮೇಣ ಖುರಾನಿನಲ್ಲಿ ಅದನ್ನು ಯಹೂದಿಗಳು ಅರಮಾಯಿಕ್ ಭಾಷೆಯಲ್ಲಿ ಕರೆಯುತ್ತಿದ್ದಂತೆ 'ಮೆದಿಂಕಾ' ಅಂದರೆ 'ನಗರ'ವೆಂದು ಕರೆಯಲಾಯಿತು.ಇದೆ ಮದಿಂಕಾ ಮುಂದೆ ಮದೀನ ಎಂದು ಕರೆಸಿಕೊಂಡಿತು.ಮಹಮದ್ ಅಲ್ಲಿಗೆ ವಲಸೆ ಬಂದ ನಂತರ ಅದನ್ನು 'ಅಲ್ ಮದೀನಾತ್' ಅಂದರೆ 'ಪ್ರವಾದಿಯ ನಗರ'ವೆಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ಟ್ರಾಂಗ್.

(ಇನ್ನೂ ಇದೆ....)

ವಲಿ....( ಭಾಗ-9 )

ಮುಂದೆ ಕ್ರಿಸ್ತಶಕ ನಾಲ್ಕನೆ ಶತಮಾನದಲ್ಲಿ ಅರೇಬಿಯಾದ ದಕ್ಷಿಣ ಪ್ರಾಂತ್ಯದ ಎಮನ್'ನಿಂದ ಅರಬ್ಬಿಮೂಲದವರು ವಲಸೆ ಹೋಗಿ ಸಿರಿಯಾ ಹಾಗೂ ದಾರಿಯಲ್ಲಿ ಸಿಗುವ ಮದೀನಾದ ಸುತ್ತಲೂ ಬೇರೂರಿದರು.ಹೀಗೆ ವಲಸೆ ಹೋದವರಲ್ಲಿ 'ಅವ್ಸ್' ಹಾಗೂ 'ಖಸ್'ರಾಜ್' ಬುಡಕಟ್ಟಿನ ಮಂದಿ ಪ್ರಮುಖರು.ಈ ಅರಬ್ಬಿ ವಲಸೆಗಾರರು ಅದಾಗಲೆ ಮೂರು ಶತಮಾನದ ಹಿಂದೆಯೆ ಅಲ್ಲಿಗೆ ವಲಸೆ ಬಂದು ನೆಲೆಸಿದ್ದ ಯಹೂದಿಗಳೊಂದಿಗೆ ಅವರ ವಾಸದ ಜಾಗವನ್ನು ಆಕ್ರಮಿಸುವ ಉದ್ದೇಶದಿಂದ ಸಮರ ಹೂಡಿದರು.ಆದರೆ ವಾಸ್ತವದಲ್ಲಿ ಇವೆರಡು ಬುಡಕಟ್ಟಿನವರ ಮಧ್ಯೆಯೆ ದ್ವೇಷ ಹೊಗೆಯಾಡುತ್ತಿತ್ತು.ಈಗ ಹೂಡಿದ್ದ ಸಮರದಲ್ಲಿ ಅವರ ಪ್ರಯತ್ನ ಯಶಸ್ವಿಯಾಗಿ ಎರಡೂ ಗುಂಪಿನವರ ಒತ್ತಡ ತಾಳಲಾರದೆ ಯಹೂದಿಗಳು ಅಲ್ಲಿಂದ ಕಾಲು ಕಿತ್ತರೂ ಇವೆರಡು ಬುಡಕಟ್ಟಿನವರ ನಡುವೆಯೆ ಕಿತ್ತಾಟ ಬಿಡುವಿಲ್ಲದೆ ಮುಂದುವರೆಯಿತು.ಈ ಆಂತರಿಕ ಕಲಹದಲ್ಲಿ ಅಂತಿಮವಾಗಿ 'ಖಸ್'ರಾಜ್' ಬುಡಕಟ್ಟಿನವರು ಜಯ ಸಾಧಿಸಿದರೂ ದ್ವೇಷದ ಮಟ್ಟ ಮಾತ್ರ ಇನಿತೂ ಕಡಿಮೆಯಾಗಲಿಲ್ಲ.'ಖಸ್'ರಾಜ್' ಗುಂಪಿನ ನಾಯಕರಲ್ಲೊಬ್ಬನಾದ ಅಸಾದ್ ಎನ್ನುವವನು ಮುಂದೆ ಮದೀನಾದ ಪುರಪ್ರಮುಖನಾಗಿ ಮೆರೆದ.ಅವನ ಮನಸ್ಸಿನಲ್ಲಿ ಅವರ ವೈರಿಗಳು ಅಷ್ಟೊಂದು ತೀವ್ರತರವಾಗಿ ತಮ್ಮವರ ವಿರುದ್ಧ ಕಾದಾಡಲು ಅವರಿಗೆ ಯಹೂದಿಗಳ ಕುಮ್ಮಕ್ಕು ಸಿಕ್ಕಿದ್ದೆ ಕಾರಣ ಎನ್ನುವ ಬಲವಾದ ಭಾವನೆ ಮನೆಮಾಡಿತ್ತು.ಹೀಗಾಗಿ ವಿನಾಕಾರಣ ಅವನು ಯಹೂದಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಆದರೆ ಕ್ರಮೇಣ ಇತ್ತಂಡಗಳಿಗೂ ಶಾಂತಿಯ ಅವಶ್ಯಕತೆ ಕಂಡು ಬಂತು.ಅದಾಗಲೆ ಅವರಿಬ್ಬರ ಬಳಗಗಳಿಗೂ ಮಹಮದನ ಪರಿಚಯವಾಗಿ ಭೋದನೆಯೂ ಆಗಿತ್ತು.ಮದೀನದ ಸುತ್ತಮುತ್ತಲೂ ನೆಲೆಯೂರಿದ್ದ ಯಹೂದಿಗಳ ಧರ್ಮದ ಮರ್ಮ,ಅದರ ಆಚರಣೆಯ ಗುಟ್ಟುಗಳು,ಪರಿಪಾಲನೆಯ ಪರಿಚಯ ಮಹಮದನಿಗೂ ಆಗಿದ್ದರಿಂದ ದೇವರ ವಿವರಣೆ,ಪ್ರವಾದಿ ಮೋಸಸ್ ಮತ್ತು ಇತರ ದೇವದೂತರ ದೈವವಾಣಿಗಳು ಹಾಗೂ ಯಹೂದಿ ಪುರಾಣ ಪುಣ್ಯ ಕಥೆಗಳ ವಿವರಣೆ ಅವನ ಪ್ರವಚನಗಳಲ್ಲೂ ನಿಯಮಿತವಾಗಿ ಕಾಣಿಸಿಕೊಂಡು ಮದೀನಾದ ಯಹೂದಿಯೇತರ ಅರಬರಿಗೂ ಅಲ್ಪಸ್ವಲ್ಪ ಅವುಗಳ ಪರಿಚಯವಾಗಿದ್ದಿತು.ಯಹೂದಿಗಳು ನಂಬಿದ್ದಂತೆ ದೇವರ ಪುನರುತ್ತಾನ ಹಾಗೂ ಅದಕ್ಕೆ ಮುನ್ನ ಆಗುವ ದೇವದೂತ ಹಾಗೂ ಪ್ರವಾದಿಯ ಪುನರಾಗಮನದ ನಂಬಿಕೆಯ ಅನುಸಾರ ತಾನೆ ಆ ಕೊನೆಯ ಪ್ರವಾದಿಯೆಂದು,ತನ್ನ ಮೂಲಕವೇ ದೇವರು ಧರ್ಮದ ಪುನರ್ ಸಂಸ್ಥಾಪನೆಗೆ ಆಗಮಿಸಲಿದ್ದಾನೆ ಎಂದು ಮಹಮದ ಪ್ರಚಾರ ಆರಂಭಿಸಿದ.ಆಗ ಹೊರಹೊಮ್ಮಿದ ಸುರಾ 2;89=90ರಮೂಲಕ ಈ ಹಿಂದೆ ದೇವರು ಭೂಮಿಗೆ ಕಳುಹಿಸಿದ್ದ ಪವಿತ್ರ ಗ್ರಂಥಗನ್ನು ಹಾಗೂ ಪ್ರವಾದಿಗಳಾದ ಏಸು ಮತ್ತು ತನ್ನನ್ನು ನಂಬದಿರುವುದರಿಂದಲೆ ದೇವರ ಶಾಪ ಯಹೂದಿಗಳಿಗೆ ತಟ್ಟಿದೆ ಎಂದು ನಿರೂಪಿಸಿದ.


ಮರುವರ್ಷ ಅಂದರೆ ಕ್ರಿಸ್ತಶಕ 621ರಲ್ಲಿ ಮೆಕ್ಕಾದ ಪವಿತ್ರಯಾತ್ರೆಯ ದಿನಗಳಲ್ಲಿ ಮದೀನಾದಿಂದ ಭಕ್ತರು ಯಾತ್ರಾರ್ಥಿಗಳಾಗಿ ಬಂದಾಗ ಮಹಮದ್ ಅವರನ್ನು ಖುದ್ದಾಗಿ ಸಂಪರ್ಕಿಸಿದ.ಅವನ ಪ್ರಭಾವಕ್ಕೆ ಒಳಗಾದ ಖಾಸ್'ರಾಜ್ ಬುಡಕಟ್ಟಿನ ಹತ್ತು ಮಂದಿ ಹಾಗೂ ಅವಸ್ ಬುಡಕಟ್ಟಿನ ಇಬ್ಬರು ಇಸ್ಲಾಮಿಗೆ ಮತಾಂತರಗೊಂಡರು.ತಾವು ಇಸ್ಲಾಮನ್ನು ಒಪ್ಪಿಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿ ಅವರು 'ನಾವಿನ್ನು ಏಕದೇವನನ್ನಲ್ಲದೆ ಇತರ ದೇವರನ್ನು ಆರಾಧಿಸುವುದಿಲ್ಲ,ವ್ಯಭಿಚಾರಗೈಯ್ಯುವುದಿಲ್ಲ,ನಮ್ಮ ಮಕ್ಕಳನ್ನು ಹತ್ಯೆಗೈಯುವುದಿಲ್ಲ,ಯಾರ ಮೇಲೂ ಯಾವುದೆ ರೀತಿಯ ಮಿಥ್ಯಾರೋಪ ಮಾಡುವುದಿಲ್ಲ ಹಾಗೂ ಪ್ರವಾದಿ ವಿಧಿಸಿರುವ ಯಾವುದೆ ಒಳ್ಳೆಯದಕ್ಕೆ ಅವಿಧೇಯ ಪೂರ್ಣರಾಗಿರುವುದಿಲ್ಲ' ಎಂದು ಕಾಬಾದ ಎದುರೆ ಪ್ರತಿಜ್ಞೆ ಕೈಗೊಂಡರು.ಇದೆ ಮುಂದೆ ಇಸ್ಲಾಂ ಇತಿಹಾಸದ ಪುಟಗಳಲ್ಲಿ ಮೊತ್ತಮೊದಲ ಅಕಾಬಾದ ಪ್ರತಿಜ್ಞೆ ಎಂದು ಪ್ರಸಿದ್ಧಿ ಪಡೆಯಿತು ಎನ್ನುತ್ತಾನೆ ಇತಿಹಾಸಕಾರ ಅಲ ತಮೀಮಿ.ಹೀಗೆ ಮತಾಂತರಿತವಾದ ಹನ್ನೆರಡು ಮಂದಿ ಮದೀನಕ್ಕೆ ಮರಳಿದ ನಂತರ ಮಹಮದನ ಮತದ ಪ್ರಚಾರ ಕೈಗೊಂಡ ಪ್ರಮುಖ ಶಿಷ್ಯಂದಿರಾದರು.ಮದೀನಾದ ಮನೆಮನೆಗಳಿಗೂ ತೆರಳಿ ಬಿರುಸಿನಿಂದ ಅವರೆಲ್ಲರೂ ಕೈಗೊಂಡ ಮತಪ್ರಚಾರದ ಫಲವಾಗಿ ಅನೇಕರನ್ನು ಇಸ್ಲಾಮಿನತ್ತ ಸೆಳೆದು ಮತಾಂತರಿಸಲು ಅವರಿಗೆ ಸಾಧ್ಯವಾಯಿತು.

ಇದೆ ಸಮಯದಲ್ಲಿ ಗ್ರೀಕ್ ಬೆಜಂಟೈನರ ಹಾಗೂ ಪರ್ಷಿಯನ್ ಸಾಮ್ರಾಜ್ಯಶಾಹಿಗಳ ನಡುವೆ ಕದನ ಜರುಗಿ ಅದರಲ್ಲಿ ಪರ್ಶಿಯನ್ನರ ಕೈಮೆಲಾಗಿ ಅವರು ಬಹುತೇಕ ಕಾನ್'ಸ್ಟಾಂಟಿನೋಪೋಲಿನ ಬಾಗಿಲವರೆಗೂ ತಲುಪಿಯಾಗಿತ್ತು, ಆದರೆ ತಡವಾಗಿಯಾದರೂ ಬೆಜಂಟೈನರ ರೋಮನ್ ಸಾಮ್ರಾಟ ಹಿರಾಕ್ಲಿಯಸ್ ಮೈಕೊಡವಿಕೊಂಡು ಎದ್ದಾಗ ಪರ್ಷಿಯನ್ನರು ಸೋತು ಹಿಮ್ಮೆಟ್ಟಲೆ ಬೇಕಾಯಿತು.ಈ ಘಟನಾವಳಿ ಕ್ರಿಸ್ತಶಕ 621ರಲ್ಲಿಯೆ ಜರುಗಿತ್ತು ಎನ್ನುವ ಕುರುಹು ಅಲ್ ತಮೀಮಿಯ ಐತಿಹಾಸಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ.ಈ ಚಾರಿತ್ರಿಕ ಘಟನೆ ಮಹಮದನ ಅರಿವಿಗೆ ಬಂದಿರುವುದು ಖುರಾನಿನ ಸುರಾ 30/1/6ರ ಮೂಲಕ ಸ್ಪಷ್ಟವಾಗುತ್ತದೆ.ಅದೆ ಸುರಾದಲ್ಲಿ ಮ್ಸಹಮದ್ ಗ್ರೀಕರ ವಿಜಯದ ಕುರಿತು ಭವಿಷ್ಯ ನುಡಿದಂತೆ ಮೇಲ್ನೋಟಕ್ಕೆ ಕಂಡುಬಂದರೂ ಆ ಸುರಾಕ್ಕಿಂತಲೂ ಮೊದಲೆ ಈ ಸಂಗತಿ ಜರುಗಿ ಮುಗಿದೆ ಹೋಗಿತ್ತು!.ಈ ನಡುವೆ ಮೆಕ್ಕಾದಲ್ಲಿ ಶಾಂತಿ ನೆಲೆಸಿತ್ತು.ಮದೀನದಲ್ಲಿ ಸಫಲಗೊಂಡಿದ್ದ ಮಹಮದನ ಮತಪ್ರಚಾರದ ಬಿಸಿ ಮೆಕ್ಕಾದ ಮಟ್ಟಿಗೆ ಮಾತ್ರ ತಣ್ಣಗಾಗಿತ್ತು.ಹೀಗಾಗಿ ವಯಕ್ತಿಕವಾಗಿ ಶಾಂತ ಜೀವನ ಸವೆಸಿದರೂ ಆ ಸಮಯದಲ್ಲಿ ಮಹಮದನ ಆರ್ಥಿಕ ಸ್ಥಿತಿ ಅಷ್ಟೇನೂ ಹಿತಕರವಾಗಿರಲಿಲ್ಲ.

ಮೆಕ್ಕಾದಲ್ಲಿ ತನ್ನ ಮತಪ್ರಚಾರ ಮಾಡುತ್ತಿರುವಾಗಲೆ ಇಸ್ಲಾಂ ಜಗತ್ತಿನಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಮಹಮದನ ಪ್ರಸಿದ್ಧ ಜೆರೂಸಲಂ ಯಾತ್ರೆ ಜರುಗಿತು ಎಂಬ ನಂಬಿಕೆಯ ಜನನವೂ ಆಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದ ಜೆರೂಸಲಮ್ಮಿಗೆ ಮಹಮದ್ ಆಕಾಶಯಾನ ಮಾಡಿದ್ದ ಸಂಗತಿ.ಪುರಾತನ ಕಾಲದಿಂದಲೂ ಅತ್ಯಂತ ಪವಿತ್ರ ಯಾತ್ರಾಸ್ಥಳವಾಗಿ ಜೆರೂಸಲಂ ಮೆರೆದಿದೆ.ಮಹಮದ್ ಕೂಡ ಮಾನಸಿಕವಾಗಿ ಅಲ್ಲಿನ ಯಹೂದಿ ಹಾಗೂ ಕ್ರೈಸ್ತ ಗುಡಿ-ಗೋಪುರಗಳನ್ನು ಆರಾಧಿಸುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.ಮದೀನಕ್ಕೆ ವಲಸೆ ಬಂದ ನಂತರ ಪ್ರಾರ್ಥನೆ ಮಾಡುವಾಗ ಅದರ ವಿಧಿಗಳನ್ನು ಜೆರೂಸಲಮ್ಮಿನ ದಿಕ್ಕಿಗೆ ಮುಖಮಾಡಿ ಸಲ್ಲಿಸಬೇಕೆಂಬ ಕಟ್ಟಳೆಯನ್ನೂ ಆತ ಮಾಡಿದ್ದ.ಅದು ಆ ನಗರದ ಪಾವಿತ್ರ್ಯತೆಯ ಬಗ್ಗೆ ಅವನಿಗಿದ್ದ ಶ್ರದ್ಧೆಗೊಂದು ದ್ಯೋತಕವಾಗಿತ್ತು.ವಸ್ತುಸ್ಥಿತಿ ಹೀಗಿರುವಾಗಲೆ ಯಕ್ಷ ಗೇಬ್ರಿಯಲ್ ತನ್ನನ್ನು ರೆಕ್ಕೆಗಳಿಂದ ಕೂಡಿದ್ದ ಅಶ್ವಾರೂಢನನ್ನಾಗಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನೆರೆದಿದ್ದ ಪ್ರಾಚೀನ ಪ್ರವಾದಿಗಳಿಂದ ತನಗೆ ಸ್ವಾಗತ ಹಾರ್ದಿಕವಾಗಿ ಸಿಕ್ಕಿದ್ದು, ಅಲ್ಲಿಂದ ಅದೆ ಅಶ್ವದ ಮೇಲೆ ಕುಳಿತೆ ಒಂದೊಂದೆ ಮೆಟ್ಟಲೇರಿ ಅಂತಿಮವಾಗಿ ತಾನು ಏಳನೆ ಸ್ವರ್ಗದ ಮುಂಬಾಗಿಲು ದಾಟಿದಾಗ ತನಗಲ್ಲಿ ಸಾಕ್ಷಾತ್ ದೈವದರ್ಶನವಾಗಿದ್ದು,ದೇವರು ಅವನ ನೂತನ ಮತಾನುಯಾಯಿಗಳು ನಿತ್ಯ ಐದುಬಾರಿ ಪ್ರಾರ್ಥನೆ ಸಲ್ಲಿಸಲು ಕಟ್ಟಪ್ಪಣೆ ಮಾಡಿ ಅಂತರ್ಧನವಾಗಿದ್ದು ಇವೆಲ್ಲವನ್ನೂ ಪರಿಭಾವಿಸುತ್ತಿದ್ದಾಗ ಸೊಗಸಾದ ನಿದ್ದೆ ಒಡೆದು ಅದೂವರೆಗೂ ಕಾಣುತ್ತಿದ್ದ ಸುಂದರ ಕನಸಿನಿಂದ ಮಹಮದ್ ಹೊರಬಂದ! ಎಚ್ಚರಗೊಂಡ ಬೆಳಗ್ಯೆ ಕೂಡಲೆ ಅಬು ತಾಲೀಬನ ಮನೆಗೆ ಆವೇಶಪೂರಿತನಾಗಿ ಧಾವಿಸಿ ಅಲ್ಲಿದ್ದ ಅವನ ಮಗಳಿಗೆ ಮಹಮದ್ ಈ ವಿಷಯವನ್ನು ಹೇಳಿದಾಗ ಅವಳು ಅದಕ್ಕೆ ಸೊಪ್ಪು ಹಾಕಲಿಲ್ಲ.ಆದರೆ ಅವಳ ವಿವೇಕದ ಮಾತುಗಳಿಗೆ ಇನಿತೂ ಕಿವಿಗೊಡದೆ ಮಹಮದ್ ತನಗೆ ಜೆರೂಸಲಂನಲ್ಲಿ ದೇವರದರ್ಶನವಾದ ಸಂಗತಿಯನ್ನು ಪ್ರಕಟಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಕ್ಲೇರ್.ಅವನ ಈ ಕನಸಿನ ಸಾಕಾರ ಸ್ವರೂಪವನ್ನು ಖುರಾನಿನ ಸುರಾ 17/1 ರಲ್ಲಿ ಗಮನಿಸಬಹುದು.ಆದರೆ ಈ ಯಾತ್ರೆಯನ್ನು ಭಾವುಕವಾಗಿ ಸ್ವೀಕರಿಸಿ ನಿಜವೆಂದೆ ನಂಬಿದ ಮಹಮದನ ಹಿಂಬಾಲಕರು ಜೆರೂಸಲಮ್ಮಿನ ಓಮರ್ ಮಸೀದಿಯಲ್ಲಿ ಮಹಮದ್ ಸ್ವರ್ಗದಿಂದ ಕೆಳಗಿಳಿದ ಸ್ಥಳದಲ್ಲಿ ಆತನ ಪಾದದ ಬಿಂಬಗಳನ್ನು ಇಂದಿಗೂ ಪವಿತ್ರವೆಂದು ಪೂಜಿಸಿ ಧನ್ಯತೆ ಅನುಭವಿಸುತ್ತಾರೆ.

ಮಹಮದ್ ಅಲ್ ತೈಫ್'ನಿಂದ ಮೆಕ್ಕಾನಗರಕ್ಕೆ ಮರಳಿದ ಮೇಲೆ ತನ್ನ ದೈವವಾಣಿಯ ಮೂಲಕ ಕ್ರಿಸ್ತಧರ್ಮದ ಬಗ್ಗೆ,ಮೇರಿ ಮಾತೆಯ ಬಗ್ಗೆ,ಕ್ರಿಸ್ತನ ಜನನದ ಬಗ್ಗೆ,ಆತನ ಜೀವನ ಹಾಗೂ ಸಾವಿನ ಕುರಿತು ಸ್ವಲ್ಪ ಮಟ್ಟಿಗೆ ತನ್ನ ಸುರಾ 19/5, 43/57-62, 4/171ಗಳಲ್ಲಿ ತನಗೆ ಲಭ್ಯವಾದ ಮಾಹಿತಿ ಹೊರಗೆಡವಿದ್ದಾನೆ ಎನ್ನುತ್ತಾರೆ ಇತಿಹಾಸಕಾರರಾದ ಇಶಾಕ್,ಕ್ಲೇರ್ ಹಾಗೂ ಮ್ಯೂರ್ ಒಕ್ಕೊರಲಿನಿಂದ.ಈ ಬಗ್ಗೆ ಅವರಲ್ಲಿ ಭಿನ್ನಭಿಪ್ರಾಯಗಳಿಲ್ಲ.ಯಹೂದಿ ಹಾಗೂ ಕ್ರಿಸ್ತ ಮತದ ಬಗ್ಗೆ ಅದಾಗಲೆ ಅರಿತಿದ್ದ ಮಂದಿ ಇದರಿಂದ ಮಹಮದನ ಭೋದನೆಯಲ್ಲಿ ಹೊಸತೇನನ್ನೂ ಕಾಣದೆ ಅವನ ಖುರಾನ್ ಈ ಹಿಂದೆ ಹೊರಬಂದ 'ಟೋರಾ' ಹಾಗೂ 'ಬೈಬಲ್'ನ ನಕಲಿಯಾಗಿದೆ ಹಾಗೂ ಕೇವಲ ಕಟ್ಟುಕಥೆಗಳ ಕಂತೆಯಾಗಿದೆ ಎಂದು ಆರೋಪಿಸಿದರು.ಆ ಎಲ್ಲಾ ಟೀಕೆಗಳಿಗೆ ಮಹಮದ್ ಸುರಾ 46.47ಗಳಲ್ಲಿ ಸಮಜಾಯಷಿ ನೀಡಲು ಯತ್ನಿಸಿದ್ದಾನೆ.

(ಇನ್ನೂ ಇದೆ....)

26 October 2011

ವಲಿ....( ಭಾಗ-8 )

ಅಬು ತಾಲಿಬನ ಮರಣಾನಂತರ ಅವನ ಸಹೋದರ ಅಬು ಲಹಾಬ್ ಮಹಮದನ ಬಗ್ಗೆ ಕರುಣೆ ತೋರಿದ.ಎಷ್ಟಾದರೂ ತನ್ನ ಅಣ್ಣನ ಮಗನಲ್ಲವೆ ಎಂಬ ಕರುಣೆಯಿಂದ ಆತನೆದೆ ಮೃದುಧೋರಣೆ ಹೊಂದಿದ ಅಬು ಲಹಾಬ್ ತನ್ನ ಮಕ್ಕಳಿಗೆ ಮಹಮದನ ಇನ್ನಿಬ್ಬರು ಹೆಣ್ಣುಮಕ್ಕಳನ್ನು ತಂದುಕೊಂಡು ಮಹಮದನಿಗೆ ದೊಡ್ಡಪ್ಪನ ಜೊತೆಗೆ ಬೀಗನೂ ಆದ.ಆದರೆ ಈ ಬಾಂಧವ್ಯ ಹೆಚ್ಚು ಕಾಲ ಬಾಳಲಿಲ್ಲ.ಇತರ ಖುರೈಷಿಗಳ ಪ್ರಭಾವ ದಟ್ಟವಾಗಿದ್ದುದರಿಂದ ಅಬು ಲಹಾಬ್ ಆತನ ನೂತನ ಮತಭೋದನೆ ಹಾಗೂ ಅದರ ಬಗ್ಗೆ ಮಹಮದನ ಪ್ರಚಾರ ವೈಖರಿಯ ಬಗ್ಗೆ ಕಿಡಿಕಾರತೊಡಗಿದ.ಈ ಅಸಹನೆಯಿಂದಲೆ ಮಹಾಮದನನ್ನು ಮತಭ್ರಷ್ಟನೆಂದು ಹೀಯಾಳಿಸಿ ಅವನಿಗೆ ಕಿರುಕುಳ-ಉಪಟಳ ನೀಡಲೂ ಆರಂಭಿಸಿದ.ಅವನ ಈ ಹಿಂಸೆಗೆ ರೋಸಿ ಹೋದ ಮಹಮದ್ ತನ್ನ ಒಂದು ದೈವವಾಣಿಯಲ್ಲಿ ಅವನ ಮೇಲಿದ್ದ ದ್ವೇಷವನ್ನು ಹೊರಹಾಕಿದ.ಅದೇ ಸುರಾ 111/1-5ದಲ್ಲಿನ ದೈವವಾಣಿ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.

ಅದರಲ್ಲಿ ಹೀಗೆ ಹೇಳಲಾಗಿದೆ:
1) ಅಬು ಲಹಾಬನ ಕೈಗಳು ಮುರಿದುಹೋದವು ಹಾಗೂ ಅವನು ನಾಶವಾಗಿ ಹೋದನು.
2) ಅವನು ಮಾಡುತ್ತಿದ್ದ ಸಂಪಾದನೆಯಾಗಲಿ,ಅವನು ಕೂಡಿಟ್ಟ ಸಂಪತ್ತಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ.
3) ಖಂಡಿತವಾಗಿಯೂ ಅವನು ಸುಡುವ ಬೆಂಕಿಯಲ್ಲಿ ಹಾಕಲ್ಪಡುವನು.
4) ಕುಪ್ರಚಾರಕಳಾದ ಅವನ ಪತ್ನಿಗೂ ಅದೆ ನರಕ ಕಾದಿದೆ.
5) ಅವರಿಬ್ಬರ ಕತ್ತಿನಲ್ಲಿಯೂ ಆಗ ದರ್ಭೆಯ ಹಾರವಿರುವುದು.

ಕ್ರಮೇಣ ಮಹಮದನಿಗೂ ಅವನ ಅನುಯಾಯಿಗಳಿಗೂ ಖುರೈಷಿಗಳ ಉಪಟಳ ಹೆಚ್ಚಾಗಿ ಅವರು ಅವಮಾನಪೂರಿತವಾಗಿ ಜೀವನ ಸಾಗಿಸಬೇಕಾಗಿತ್ತು.ಇತ್ತ ಅಬು ತಾಲೀಬನ ಮರಣದ ನಂತರ ಸೂಕ್ತ ಭದ್ರತೆಯೂ ಇಲ್ಲದೆ ದೈಹಿಕ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿತ್ತು ಅವನಿಗೆ.ಅಪ್ಪಿತಪ್ಪಿ ಮನೆಯಿಂದ ಹೊರಗೆ ಅಡಿಯಿಟ್ಟರೆ ಅವನ ಮತದತ್ತ ಹನಿಯಷ್ಟೂ ಆಸಕ್ತಿ ಪ್ರಕಟಿಸದ ಮೆಕ್ಕಾದ ಮಂದಿಯಿಂದ ಅವನ ಮೇಲೆ ಕಲ್ಲು ಮಣ್ಣುಗಳು ಎಲ್ಲೆಂದರಲ್ಲಿ ಸುರಿಮಳೆಯಾಗುತ್ತಿತ್ತು.ಅಲ್ಲದೆ ಅವನ ಮತಪ್ರಚಾರವೂ ಕುಂಠಿತವಾಗಿತ್ತು.ಹೀಗಾಗಿ ತನ್ನ ಜೀವಮಾನದ ಪರಮ ಗುರಿಯಾದ ಇಸ್ಲಾಂ ಪ್ರಚಾರಕ್ಕಾಗಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಆತ ನಿರ್ಧರಿಸಿದ.ಅದೆ ಕಾರಣಕ್ಕೆ ಮೆಕ್ಕಾದಿಂದ ಅರವತ್ತು ಮೈಲಿ ದೂರದ ಅಲ್ ತೈಫ್ ಎಂಬ ಪಟ್ಟಣಕ್ಕೆ ಸೇವಕ ಜೈದ್'ನೊಂದಿಗೆ ಪ್ರಯಾಣಿಸಿದ.ಅಲ್ಲಿನ ಒಂದು ಕುಟುಂಬದೊಂದಿಗೆ ತನ್ನ ಉದ್ದೇಶ ತಿಳಿಸಿ ಅದಕ್ಕಾಗಿ ಅವರ ಬೆಂಬಲ ಅಪೇಕ್ಷಿಸಿದ.ಆದರೆ ಆತ ನಿರೀಕ್ಷಿಸಿದಷ್ಟು ಬೆಂಬಲ ವ್ಯಕ್ತವಾಗಲಿಲ್ಲ.ತನ್ನ ಹಾಗೂ ತನ್ನ ಮತಬಾಂಧವರ ರಕ್ಷಣೆಗೆ ಆತನಿಟ್ಟ ಮೊರೆಯನ್ನು ಅಲ್ಲಿನವರು ಪುರಸ್ಕರಿಸಲಿಲ್ಲ.ಅವನ ಹುಟ್ಟಿನ ಕುಲವಾದ ಖುರೈಶಿಗಲಿಂದಲೇ ದೊರೆಯದ ಬೆಂಬಲ ಇನ್ನುಳಿದವರರಿಂದ ಹೇಗೆ ನಿರೀಕ್ಷಿಸುತ್ತಿ ಎಂದು ಮೊದಲಿಸಿಕೊಂಡು 'ಅಂಗೈ ತೋರಿಸಿ ಅವಲಕ್ಷಣ' ಎನ್ನಿಸಿಕೊಂಡವನಂತೆ ಪೆಚ್ಚಾಗಿ ಆತ ಅಲ್ಲಿಂದ ಕಾಲ್ತೆಗೆಯಬೇಕಾಯಿತು.ಅಲ್ಲಿನ ಮಂದಿ ಮಹಮದ್ ಹಾಗೂ ಜೈದ್'ನನ್ನು ಅಲ್ಲಿಂದ ಹೊಡೆತ,ಬೈಗುಳ ಹಾಗೂ ಭರ್ತ್ಸನೆಗಳೊಂದಿಗೆ ಹೊರದಬ್ಬಿದರು ಎನ್ನುತ್ತಾನೆ ಇತಿಹಾಸಕಾರ ಡೋಜಿ. ಹೀಗೆ ಅವಮಾನಿತನಾದ ಮಹಮದ್ ಮರಳಿ ಮೆಕ್ಕಾಗೆ ವಾಪಸ್ಸಾಗುವಾಗ ಅತಿಯಾದ ಹಸಿವು ಹಾಗೂ ದೈಹಿಕ ಬಳಲಿಕೆಗೆ ತುತ್ತಾಗಿ ನಖ್ಲಾ ಎಂಬಲ್ಲಿ ಬೀಡು ಬಿಟ್ಟನು.ಅವರ ಹೀನಸ್ಥಿತಿ ಕಂಡು ಮರುಕಗೊಂಡ ಅಲ್ಲಿನ ತೋಟದ ಯಜಮಾನ ಕರುಣಾಪೂರಿತನಾಗಿ ಆಹಾರ ನೀಡಿ ಅವರಿಬ್ಬರನ್ನೂ ಆದರಿಸಿದ.

ಅವರು ತಂಗಿದ್ದ ತೋಟ ವಾಸ್ತವವಾಗಿ ಇಬ್ಬರು ಖುರೈಷಿಗಳಿಗೆ ಸೇರಿತ್ತು.ಹೃದಯ ವೈಶಾಲ್ಯದ ಅವರುಗಳು ಅವನ ಸ್ಥಿತಿಗೆ ಮರುಗಿ ತಮ್ಮ ಕ್ರೈಸ್ತ ಸೇವಕನ ಕೈಯಲ್ಲಿ ದ್ರಾಕ್ಷಿಹಣ್ಣಿನ ಬುಟ್ಟಿಯೊಂದನ್ನು ಅವನಿಗಾಗಿ ಕಳುಹಿಸಿಕೊಟ್ಟರು.ಅದ್ವಾಸ್ ಎಂಬ ಆ ಸೇವಕನೊಂದಿಗೆ ಮಾತನಾಡುವಾಗ ಆತ ನಿನೆವಾ ಪಟ್ಟಣದವನು ಎಂಬುದು ಮಹಮದನ ಅರಿವಿಗೆ ಬಂತು.ಬೈಬಲ್ಲಿನಲ್ಲಿ ಉಲ್ಲೇಖವಾಗಿರುವ ಪ್ರವಾದಿ ಮೋಸೆಸನ ಬಗ್ಗೆ ಪ್ರಸ್ತಾಪಿಸಿದ ಮಹಮದ್ ಅದ್ವಾಸನ ಅಚ್ಚರಿಗೆ ಕಾರಣವಾದ.ತನ್ನಂತೆ ಮೋಸೆಸ್ ಕೂಡ ಪ್ರವಾದಿ ಎಂದು ಮಹಮದ್ ಆತನಿಗೆ ಸಾರಿದ.ಮಹಮದನ ವಿನಯ ಹಾಗೂ ಧರ್ಮಶ್ರದ್ಧೆಗೆ ಮಾರುಹೋದ ಅದ್ವಾಸ್ ಮಹಮದನಿಗೆ ಒದಗಿಬಂದ ಸಂಕಟ ಹಾಗೂ ಪರಿತಾಪಗಳಿಗೆ ದೇವರಲ್ಲಿ ಪರಿಪರಿಯಾಗಿ ಪ್ರಾರ್ಥನೆ ಸಲ್ಲಿಸಿದ.ಮಹಮದನೂ ದೇವರಿಗೆ ತನ್ನ ಹೀನಸ್ಥಿತಿಯನ್ನು ಮನವರಿಕೆ ಮಾಡುವ ಪ್ರಾರ್ಥನೆಗಳನ್ನು ಸಲ್ಲಿಸಿ ದೇವರು ತನ್ನ ಮೊರೆಯನ್ನಾಲಿಸುವನು ಎಂಬ ನಂಬಿಕೆ ಹೊತ್ತು ಮೆಕ್ಕಾದೆಡೆಗೆ ಪ್ರಯಾಣಬೆಳೆಸಿದ.ದಾರಿಯಲ್ಲಿ ಸಿಗುವ ನೆಖ್ಲಾದ ಕಣಿವೆಯ ಬಳಿಯೆ ಇದ್ದ ಗುಡಿಯೊಂದರಲ್ಲಿ ತಂಗಿ ಮರಳಿ ಮೆಕ್ಕಾ ಪ್ರವೇಶಿಸಿದರೆ ತನಗ್ಯಾವ ಸತ್ಕಾರ ಕಾದಿದೆಯೋ ಎಂದು ಹೆದರಿ ಆ ರಾತ್ರಿ ಅಲ್ಲಿಯೆ ವಿರಮಿಸಿದ.ರಾತ್ರಿ ಮಲಗುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಅವನ ಖುರಾನಿನ ಸೂತ್ರ ಪಠಣವನ್ನು ಆಲಿಸಿದ 'ಜಿನ್ನು'ಗಳು (ಭೂತಗಳು) ಉತ್ತೇಜಿತರಾಗಿ ತಮ್ಮ ಬಳಗದವರನ್ನು ಕೂಡಿಕೊಂಡು ಮಹಮದನ ಪ್ರಾರ್ಥನೆಯನ್ನು ಆಲೈಸಿದವು.ಅವೆಲ್ಲ ಇದರಿಂದ ಪ್ರಭಾವಿತರಾಗಿ ಮಹಮದನ ಹಿಂಬಾಲಕರಾಗಿ ಖುರಾನಿನ ಆದೇಶ ಪಾಲಿಸಿದರೆ ಮುಕ್ತಿಖಚಿತ ಎಂದು ನಂಬಿ ಅಲ್ಲಿನ ಅವೆಲ್ಲ ನಿರ್ಗಮಿಸಿದವು.ಇದೆ ವಿವರಣೆ ಖುರಾನಿನ ಸುರಾ 66/28-30 ಹಾಗೂ 12/1 ಗಳಲ್ಲಿ ಪ್ರಸ್ತಾಪಿತವಾಗಿದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.


ಮೆಕ್ಕಾದಲ್ಲಿ ಕಾದಿರಬಹುದಾದ ವಿಪತ್ತಿಗೆ ಹೆದರಿದ ಮಹಮದ್ ಖುರೈಷಿಗಳಲ್ಲೆ ದಯಾರ್ದವಾಗಿದ್ದ ಅಲ್ ಮಾತಮ್ ಎಂಬ ಮುಖಂಡನೊಬ್ಬನನ್ನು ಸಂಪರ್ಕಿಸಿ ಅವನ ಸಹಾಯವನ್ನು ಬೇಡಿದ.ಆಸರೆಯ ಭರವಸೆ ಅವನಿಂದ ದೊರಕಿದ ನಂತರ ಮೆಕ್ಕಾದ ಮನೆಗೆ ಹಿಂದಿರುಗಿದ ಮಹಮದನ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಲೆ ಹೋಯಿತು.ಆರ್ಥಿಕ ಹಿನ್ನೆಡೆ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಮೂಲವಾಯಿತು.ಆದರೆ ಇಂತಹ ಪರಿಸ್ಥಿಯನ್ನು ಎದುರಿಗಿಟ್ಟುಕೊಂಡೆ ಆತ ಸೌದಾ ಎಂಬ ವಿಧವೆಯೊಬ್ಬಳನ್ನು ಮರುವಿವಾಹವಾದ.ಮೂರು ತಿಂಗಳ ಹಿಂದಷ್ಟೆ ಪತ್ನಿ ಖತೀಜಳನ್ನು ಕಳೆದುಕೊಂಡು ವಿಧುರನಾಗಿದ್ದ ಮಹಮದ್ ಈಗ ಹೊಸ ಮದುವೆಯ ಜೊತೆಜೊತೆಗೆ ಗೆಳೆಯ ಅಬು ಬಕರನ ಆರು ವರ್ಷದ ಎಳೆ ಮಗಳು ಆಯೆಶಾಳೊಂದಿಗೆ ತನ್ನ ವಿವಾಹ ನಿಸ್ಚಿತಾರ್ಥವನ್ನೂ ನೆರವೇರಿಸಿಕೊಂಡ!.ಇದಕ್ಕೆ ಇತಿಹಾಸಕಾರರಾದ ಮ್ಯೂರ್ ಹಾಗೂ ಅಲ್ ಮುಬಾರಕಿ ಮುಂತಾದವರು ಮಹಮದನಿಗೆ ಅದಾಗಲೆ ಐವತ್ತುವರ್ಷ ವಯಸ್ಸಾಗಿದ್ದರೂ ಮುಂದಿನ ದಿನಗಳಲ್ಲಿ ತನ್ನ ಮತಪ್ರಚಾರಕ್ಕೆ ಅಬು ಬಕರನ ಪ್ರಬಲ ಬೆಂಬಲ ಅಪೇಕ್ಷಿಸಿ,ಅದಕ್ಕೆ ಪೂರ್ವಭಾವಿಯಾಗಿ ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಸಂಬಂಧದ ನಿಕಟತೆಯ ಲೇಪಹಚ್ಚಲು ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳುತ್ತಾರೆ.ಕ್ರಿಸ್ತಶಕ 620ರಲ್ಲಿ ಮೆಕ್ಕಾದ ಪವಿತ್ರ ದಿನಗಳ ಜಾತ್ರೆ ಪ್ರಾರಂಭವಾದಾಗ ಅಲ್ಲಿಗೆ ಯಾತ್ರಾರ್ಥಿಗಳಾಗಿ ಬಂದಿದ್ದ ಅನೇಕ ಮದಿನಾವಾಸಿಗಳನ್ನು ಮಹಮದ್ ಅನಾಯಾಸವಾಗಿ ಸಂಪರ್ಕಿಸಿದ.ಮದೀನವಾಸಿಗಳು ಮಹಮದನ ನೂತನ ಧರ್ಮದ ಬಗ್ಗೆ ಕೇಳಿ ಅದಾಗಲೆ ಅರಿತಿದ್ದರು.ಅವನನ್ನೆ ಈಗ ನೇರವಾಗಿ ಭೇಟಿಯಾಗಿ ಅವನ ಸಂದೇಶಗಳನ್ನು ಕೇಳಿ ಸಂತುಷ್ಟರಾದರೂ ಒಮ್ಮೆಲೆ ಅವರಲ್ಲಿ ಯಾರೂ ಮತಾಂತರವಾಗಲಿಲ್ಲ.ಅಲ್ಲದೆ ಅಷ್ಟು ಸುಲಭವಾಗಿ ಅವರ ಬೆಂಬಲವೂ ಅವನಿಗೇನೂ ಸಿಗಲಿಲ್ಲ.ಆದರೆ ಆತನ ಹಾಗೂ ಆತನ ನೂತನ ಮತದ ಬಗ್ಗೆ ಸದ್ಭಾವನೆ ಬೆಳಿಸಿಕೊಂಡ ಅವರು ಮರಳಿ ಮದೀನಾ ಸೇರಿದಾಗ ಅದು ಅಲ್ಲಿ ಬಾಯಿಪ್ರಚಾರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಮುಟ್ಟಿತು.


ಅತ್ತ ಇಸ್ರೇಲಿನ ಯಹೂದಿಗಳು ರೋಮನ್ ಚಕ್ರಾಧಿಪತ್ಯದ ಅಧೀನಕ್ಕೆ ಒಳಪಟ್ಟು ಅವರಿಂದ ನಿರಂತರ ಹಿಂಸಾಚಾರಕ್ಕೆ ಒಳಗಾಗಿ ಪಡಬಾರದ ಪಾಡುಪಟ್ಟು ಅಲ್ಲಿಂದ ಅನಿವಾರ್ಯವಾಗಿ ದೇಶಭ್ರಷ್ಟರಾಗಿ ಪ್ರಪಂಚದಾದ್ಯಂತ ಹರಡಿಹೋದ ಐತಿಹಾಸಿಕತೆಗೆ ಈಗ ಹೊಸತಿರುವು ಸಿಗಲಾರಂಭಿಸಿತು.ಹೀಗೆ ನೆಲೆ ಕಳೆದುಕೊಂಡ ಯಹೂದಿಗಳ ಗುಂಪುಗಳು ಅರೆಬಿಯವನ್ನೂ ಪ್ರವೇಶಿಸಿ ಮದೀನ ಸುತ್ತಮುತ್ತಲು ನೆಲೆಯೂರಿ ಕೋಟೆ-ಕೊತ್ತಲು ಕಟ್ಟಿಕೊಂಡು ಜೀವನವನ್ನಾರಂಭಿಸಿದರು.ಹೀಗೆ ವಲಸೆ ಬಂದಿದ್ದ ಪ್ರಮುಖ ಯಹೂದಿ ಬುಡಕಟ್ಟುಗಳೆಂದರೆ ಅಲ್ ನದೆಶ್,ಬೆನ್ ಕುರೈಜಾ ಹಾಗೂ ಬೆನ್ ಕೆನುಕಾ.ಇವರ ವಲಸೆಯೆಲ್ಲ ಕ್ರಿಸ್ತಶಕಾರಂಭ 70ರಲ್ಲಿಯೆ ಆರಂಭವಾಗಿತ್ತು ಎನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ ಅಭಿಪ್ರಾಯ.

(ಇನ್ನೂ ಇದೆ....)

24 October 2011

ವಲಿ....(ಭಾಗ-7)

ಈ ರೀತಿ ಮತ ಪರಿವರ್ತಿತವಾದವರು ಮೆಕ್ಕಾ ಬಿಟ್ಟು ಅಬಿಸೀನಿಯಕ್ಕೆ ವಲಸೆಹೋದರು ಸಹ ಮಹಮದನಿಗೆ ಖುರೈಷಿಗಳ ಕಾಟ ತಪ್ಪಲಿಲ್ಲ.ದೊಡ್ಡಪ್ಪ ಅಬು ತಾಲೀಬನ ಸುರಕ್ಷೆ ಇದ್ದ ಕಾರಣದಿಂದ ಅದು ಹೇಗೊ ಅವನ ರಕ್ಷಣೆ ಚ್ಯುತಿಯಿಲ್ಲದಂತೆ ಸಾಗುತ್ತಿತ್ತು.ಇತ್ತ ಅವನ ಈ ರಕ್ಷಣಾ ಅಭಯದ ವಿರುದ್ಧವಾಗಿ ಅಬು ತಾಲೀಬನಿಗೆ ಖುರೈಷಿಗಳು ತಾಳಲಾರದಷ್ಟು ಒತ್ತಡಗಳನ್ನು ತರಲಾರಂಭಿಸಿದರು.ವಯೋವೃದ್ಧನಾಗಿದ್ದ ಅಬು ತಾಲಿಬ್ ನಿಜಕ್ಕೂ ಈಗ ಅಡಕತ್ತರಿಯಲ್ಲಿ ಸಿಕ್ಕು ಹಾಕಿಕೊಂಡಿದ್ದ.ತನ್ನ ಆಶ್ರಯದಲ್ಲಿದ್ದ ಮಹಮದನ ಕಾರಣಕ್ಕೆ ಅವನು ತನ್ನ ಸಮಾಜವನ್ನೆ ಎದುರು ಹಾಕಿಕೊಳ್ಳುವ ಪರಿಸ್ಥಿತಿ ಉದ್ಭವಿಸಿತ್ತು.ಖುರೈಷಿಗಳು ಮಹಮದನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅವನ ಮೇಲೆ ಅಪಾರ ಒತ್ತಡ ತಂದಾಗ ಅದನ್ನು ತಾಳಲಾರದೆ ಮಹಮದನಿಗೆ ತಾನಿನ್ನು ಅವನ ರಕ್ಷಣೆಯ ಹೊಣೆ ಹೊರಲಾರೆನೆಂದು ಹೇಳಿ,ಅವನೆ ಸ್ವರಕ್ಷಣೆಗೆ ಕಾಳಜಿ ವಹಿಸಿಕೊಳ್ಳುವುದು ಸೂಕ್ತ ಎಂಬ ಸೂಚನೆ ನೀಡಿದನು.ಅದನ್ನು ಕೇಳಿದ್ದೆ ತಡ ಮಹಮದ್ ಅಪ್ರತಿಭನಾಗಿ ಕಣ್ಣೀರುಗೆರೆದನು.ಈ ಕಂಬನಿಯನ್ನು ಕಂಡು ಕರುಣಾಮಯಿಯಾದ ಅಬು ತಾಲೀಬನ ಅಂತಕರಣ ತುಂಬಿಬಂದು ಮರಳಿ ಅವನ ರಕ್ಷಣೆಯ ಹೊಣೆಹೊರಲು ಆತ ಕಟೀಬದ್ಧನಾದ.ಅವನ ಮೊದಲ ಮಾತುಗಳನ್ನು ಕೇಳಿ ನೊಂದಿದ್ದ ಮಹಮದ್ ವ್ಯಾಕುಲಗೊಂಡು ಮನೆಯಿಂದ ಹೊರಹೋಗಿದ್ದವನು ಲುಪ್ತ ಸಮಯಕ್ಕೆ ಮರಳಿ ಬಾರದಿರುವುದನ್ನು ಕಂಡು ಖುರೈಶಿಗಳಿಂದ ಆತನ ಪ್ರಾಣಕ್ಕೆ ಕುತ್ತು ಒದಗಿ ಬಂದಿರಬಹುದು ಎಂದು ಅಬು ತಾಲಿಬ್ ಗಾಬರಿಗೊಂಡ.ಅದೆ ಸಂಶಯದಲ್ಲಿ ಆಯುಧಪಾಣಿಯಾಗಿ ತನ್ನವರೊಂದಿಗೆ ಮಹಾಮದನನ್ನು ಹುಡುಕುತ್ತಾ ಹೊರಟಾಗ ಬೀದಿಯ ಕೊನೆಯಲ್ಲಿ ಅವನಿಗೆ ಮಹಮದ್ ಎದುರಾದ.ಕೂಡಲೆ ಅಲ್ಲಿಂದಲೆ ಅವನನ್ನು ಕರೆದುಕೊಂಡು ಕಾಬಾದತ್ತ ಸಾಗಿದ ಅಬು ತಾಲಿಬ್ ಅಲ್ಲಿ ನೆರೆದಿದ್ದ ಖುರೈಷಿಗಳನ್ನು ಉದ್ದೇಶಿಸಿ "ನೋಡಿ ಇಂದು ನಿಮ್ಮೆಲ್ಲರಿಂದ ಮಹಮದನಿಗೆ ಹಾನಿಯಾಗಿದ್ದಿರಬಹುದೆಂದು ಊಹಿಸಿದ್ದೆ.ಹಾಗೇನಾದರೂ ಆಗಿದ್ದೆ ಹೌದಾಗಿದ್ದಿದ್ದಲ್ಲಿ ನಿಮ್ಮಲ್ಲಿ ಒಬ್ಬರೂ ಇಲ್ಲಿ ಉಸಿರಿನೊಂದಿಗೆ ಉಳಿಯುತ್ತಿರಲಿಲ್ಲ ಅನ್ನೋದನ್ನ ನೆನಪಿನಲ್ಲಿಡಿ! ಇದು ಇಂದಿಗಷ್ಟೆ ಅಲ್ಲ ಎಂದೆಂದಿಗೂ ಸತ್ಯ !!" ಎಂದು ಆವೇಶದಿಂದ ನುಡಿದ.ಅವನ ಈ ಎಚ್ಚರಿಕೆಯ ನುಡಿಗೆ ಬೆರಗಾದ ಖುರೈಷಿಗಳು ತಮ್ಮ ಸೋಕ್ಕನ್ನೆಲ್ಲ ಕಷ್ಟದಿಂದ ತಡೆಹಿಡಿದುಕೊಂಡರು.



ಇತಿಹಾಸದ ಪುಟಗಳಲ್ಲಿ ಅವನ ಮತವನ್ನೊಪ್ಪದವರಿಂದ ಮಹಮದನ ಮೇಲೆ ನಿಂದನೆ,ಭರ್ತ್ಸನೆ ಮುಂತಾದವುಗಳೊಂದಿಗೆ ದೈಹಿಕ ಹಲ್ಲೆ ನಡೆದ ಬಗ್ಗೆ ನಮೂದಾಗಿದ್ದರೂ ಅದು ಹಿಂಸೆಯ ಪರಿಧಿ ದಾಟಿದ ಬಗ್ಗೆ ಸೂಚನೆ ಎಲ್ಲೂ ಸಿಗುವುದಿಲ್ಲ.ಹೆಚ್ಚೆಂದರೆ ಹೊಲಸು ಪದಾರ್ಥಗಳನ್ನು ಅವನ ಮೇಲೆ ಎಸೆಯುವುದರ ಮೂಲಕ ಅವರ ಅಸಹಿಷ್ಣುತೆ ಪ್ರಕಟವಾಗುತ್ತಿತ್ತು ಅಷ್ಟೆ.ಕ್ರಿಸ್ತಶಕ 615ರಲ್ಲಿ ಮಹಮದ್ ತನ್ನ ಮತ ಭೋದನೆಯನ್ನು ಆರಂಭಿಸಿದಾಗ ಮೊದಲು ಎದ್ಸುರಾಗಿದ್ದ ಅಡ್ಡಿ ಆತಂಕಗಳೆಲ್ಲ ಕ್ರಮೇಣ ಇನ್ನಿಲ್ಲವಾಗಲು ಅವನ ಮತಕ್ಕೆ ಮಾರುಹೋದ ಇಬ್ಬರು ಪ್ರಮುಖವಾಗಿ ಕಾರಣವಾದರು ಅವರೆ ಹಮ್ಜಾ ಮತ್ತು ಓಮರ್.ಈ ಹಮ್ಜಾ ಮಹಮದನ ಅಜ್ಜ ಅಬ್ದುಲ್ ಮುತಾಲಿಬ್ ತನ್ನ ಎಪ್ಪತ್ತನೆ ವಯಸ್ಸಿನಲ್ಲಿ ವಿವಾಹವಾಗಿ ಪಡೆದ ಮಗನಾಗಿದ್ದ.ಏಕಕಾಲದಲ್ಲಿ ಆತ ಮಹಮದನಿಗೆ ಮಲ ಸಹೋದರ (ತಾಯಿಯ ತಂಗಿಯ ಮಗ) ಹಾಗೂ ಚಿಕ್ಕಪ್ಪ (ತಂದೆಯ ದೊಡ್ಡಪ್ಪನ ಮಗ) ಎರಡೂ ಆಗುತ್ತಿದ್ದ! ಒಮ್ಮೆ ಅಸ್ ಸದಾಫ್ ಎಂಬ ಎತ್ತರದ ಸ್ಥಳದಲ್ಲಿ ಮಹಮದ್ ಕುಳಿತಿದ್ದಾಗ ಅಬು ಜಲಾಲ್ ಎಂಬ ಖುರೈಶಿಯೊಬ್ಬ ಅವನನ್ನು ಕಟುಮಾತುಗಳಿಂದ ನಿಂದಿಸಲಾರಂಭಿಸಿದ,ಮಹಮದ್ ಮಾತ್ರ ಅದನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಕಿವುಡನಂತೆ ನಿರ್ಲಕ್ಷಿಸಿಕೂತಿದ್ದ.ಆದರೆ ಅದನ್ನು ಗಮನಿಸಿದ ಒಬ್ಬ ಗುಲಾಮ ಸ್ತ್ರೀ ಮನೆಗೆ ಮರಳುವಾಗ ದಾರಿಯಾಲ್ಲಿ ಸಿಕ್ಕ ಹಮ್ಜಾನಿಗೆ ಈ ಘಟನೆಯನ್ನ ಹೇಳಿ ಪರಿತಾಪ ಪಟ್ಟಳು.ಮೂಲತಃ ಹಮ್ಜಾ ಒಳ್ಳೆಯ ಬಿಲ್ಲುಗಾರನಾಗಿದ್ದ.ಅಲ್ಲದೆ ಆಗಷ್ಟೆ ಆತ ಬೇಟೆಗೆ ಹೋಗಿದ್ದವ ಅಲ್ಲಿಂದ ಮನೆಗೆ ಮರಳಿಹೋಗುತ್ತಿದ್ದ.ಈ ಸಂಗತಿ ಕೇಳಿ ಕ್ಷುದ್ರನಾದ ಆತ ಕೂಡಲೆ ಇದ್ದ ಸ್ಥಿತಿಯಲ್ಲೆ ಕಾಬಾ ಬಳಿ ತೆರಳಿ ಅಲ್ಲಿ ಇತರ ಖುರೈಷಿಗಳೊಂದಿಗೆ ಹರಟೆ ನಿರತನಾಗಿದ್ದ ಅಬು ಜಹಾಲ್'ನನ್ನು ಕಂಡವನೆ ವರಸೆಯಲ್ಲಿ ತನ್ನ ಮಗನೂ ಮಲಸಹೋದರನು ಆದ ಮಹಮದನಿಗೆ ಆತ ಮಾಡಿದ ಅಪಮಾನವನ್ನು ನೆನೆಸಿಕೊಂಡು ಕೆಂಡಾಮಂಡಲನಾಗಿ ಅಲ್ಲಿಯೆ ಬಿಲ್ಲಿಗೆ ಹದೆಯೇರಿಸಿ ಬಾಣ ಹೂಡಿ ಆತನನ್ನು ಗಾಯಗೊಳಿಸಿ "ನೋಡು ನಾನೀಗ ಮಹಮದನ ಧರ್ಮವನ್ನು ಪಾಲಿಸುತ್ತೇನೆ! ನಿನಗೆ ಸಾಧ್ಯವಿದ್ದರೆ ತಡೆದುನೋಡು ನೋಡೋಣ!" ಎಂದು ಬಹಿರಂಗ ಪಂಥಾಹ್ವಾನ ನೀಡಿ ಸೆಡ್ಡುಹೊಡೆದು ನಿಂತ.ಹೀಗೆ ಅವನಿಗೆ ಗೊತ್ತಿಲ್ಲದೆ ಮಾನಸಿಕವಾಗಿ ಆತ ಮತಾಂತರಿತವಾಗಿದ್ದ!

ಇದು ಹಮ್ಜಾನ ಕಥೆಯಾದರೆ ಇನ್ನೊಬ್ಬ ಓಮರನ ಕಥೆ ತುಸು ವಿಭಿನ್ನವಾಗಿತ್ತು.ಒಮರ್ ಒಬ್ಬ ಸದೃಢ ಖುರೈಷಿ ಯುವಕನಾಗಿದ್ದ.ಶೀಘ್ರಕೋಪಿ,ಮುಂಗೋಪಿ ಎರಡೂ ಆಗಿದ್ದ ಅವನದ್ದು ವಿಪರೀತ ದುಡುಕಿನ ಸ್ವಭಾವವಾಗಿತ್ತು.ಆವೇಗ ಪರನಾಗಿದ್ದ ಆತ ಇತರ ಖುರೈಶಿಗಳಂತೆ ಮೊದಲಿಗೆ ಮಹಮದನ ಕಟ್ಟಾ ವಿರೋಧಿಯಾಗಿದ್ದು ಅವನನ್ನು ಕಂಡಲ್ಲಿ ನಿಂದಿಸುತ್ತಾ,ಅವನ ಅನುಯಾಯಿಗಳನ್ನು ಸಾಧ್ಯವಾದಷ್ಟು ಹಿಂಸಿಸುತ್ತಿದ್ದ.ಅಂತವನ ಸ್ವಂತ ಸಹೋದರಿ ಫಾತಿಮಾ ಹಾಗು ಆಕೆಯ ಪತಿ ಇಸ್ಲಾಮಿಗೆ ಗೌಪ್ಯವಾಗಿ ಮತಾಂತರಿತವಾಗಿದ್ದರು.ಈ ವಿಷಯ ಇನ್ನೂ ಓಮರನ ಕಿವಿಯನ್ನು ಇನ್ನೂ ಮುಟ್ಟಿರಲಿಲ್ಲ.ಹೀಗೆ ಒಮ್ಮೆ ನವ ಮತಾಂತರಿತವಾದವನೊಬ್ಬನನ್ನು ಆತ ಪೀಡಿಸುತ್ತಿರುವಾಗ ಅದನ್ನು ತಾಳಲಾರದೆ ನರಳಿದ ಆ ಮುಸ್ಲೀಂ ರೋಷದಿಂದ ಮಾತನಾಡುವಾಗ ಅವನ ಸಹೋದರಿಯ ಮತಾಂತರದ ಬಗ್ಗೆ ಸುಳಿವು ನೀಡಿದ!


ಇದನ್ನು ಕೇಳಿ ಆಕ್ರೋಶಿತನಾದ ಒಮರ್ ಆ ಕೂಡಲೆ ಸೋದರಿಯ ಮನೆಗೆ ಧಾವಿಸಿದ.ಅಲ್ಲಿ ಅವನಿಗೆ ಕಂಡದ್ದು ಕುಟುಂಬದ ಗುಲಾಮನೊಬ್ಬ ಒಂದು ತುಂಡು ಕಾಗದವನ್ನು ಹಿಡಿದು ಓದುತ್ತಿರುವ ದೃಶ್ಯ.ಓಮರನ ಉರಿಮುಖ ಕಂಡವನೆ ಅವನು ಒಳಹೊಕ್ಕು ಅದೆಲ್ಲೊ ಅವಿತುಕೊಂಡ.ಆದರೆ ಆ ಕೂಡಲೆ ಅವನ ನಡೆಯ ಹಿನ್ನೆಲೆ ಓಮರನಿಗೆ ಅರಿವಾಗಿತ್ತು.ಆ ಗುಲಾಮ ಮಹಮದನ ಉಪದೇಶದ ಸಾರವನ್ನು ಗುಟ್ಟಾಗಿ ಓದಿ ಪಠಿಸುತ್ತಿದ್ದ.ಒಳಬಂದ ಬಳಿಕ ಎದುರಿಗೆ ಕಂಡ ಫಾತಿಮಾಳ ಪತಿಯನ್ನು ಈ ಬಗ್ಗೆ ಪ್ರಶ್ನಿಸಿ ಅವನ ಮೇಲೆ ಓಮರ್ ಹಲ್ಲೆ ಎಸಗುವಾಗ ನಡುವೆ ಅಡ್ಡಿ ಬಂದ ಫಾತಿಮಾಳೂ ಅವನಿಂದ ಪೆಟ್ಟು ತಿನ್ನಬೇಕಾಯಿತು.ಮುಖದ ಮೇಲೆ ಬಲವಾಗಿ ಬಿದ್ದ ಪೆಟ್ಟಿನಿಂದ ಆಕೆಗೆ ರಕ್ತಸ್ರಾವವಾದಾಗ ಸಂಯಮ ಕಳೆದುಕೊಂಡ ಆಕೆ ಸಹೋದರನ ಮೇಲೆಯೆ ಎಗರಿಬಿದ್ದಳು."ಹೌದು! ನಾವು ಮತಾಂತರಗೊಂಡಿದ್ದೀವಿ.ನಾವು ದೇವರು ಹಾಗೂ ಅವನ ಪ್ರವಾದಿಯನ್ನ ನಂಬುತ್ತೇವೆ ನೀನು ಅದೇನೆ ಬೇಕಿದ್ದರೂ ಮಾಡಿಕೊಳ್ಳಬಹುದು" ಎಂದು ಚೀರಿಹೇಳಿ ಸ್ಮೃತಿ ತಪ್ಪಿಬಿದ್ದಳು.ಅವಳ ರಕ್ತಸಿಕ್ತ ಮುಖವನ್ನು ಕಂಡಾಗ ಒಮರ್ ಮೆತ್ತಗಾದ.ಅವಳ ಕೈಯಲ್ಲಿಯೆ ಭದ್ರವಾಗಿದ್ದ ಕಾಗದದ ತುಣುಕಿನಲ್ಲಿದ್ದ ಉಪದೇಶ ಸಾರವನ್ನು ತಾನೂ ಸಹ ಓದಿ ಪ್ರಭಾವಿತನಾದ.ಆ ಕೂಡಲೆ ಮಹಮದನನ್ನು ಕಾಣಲು ಆತ ಇಚ್ಚೆಪಟ್ಟು ಆತ ಉಳಿದಿದ್ದ ಅಲ್ ಅಕ್ರಮನ ಮನೆಗೆ ಸಾಗಿದ.ತನ್ನ ಮೇಲೆ ವಿಶ್ವಾಸವಿರಿಸಿ ಬಂದ ಓಮರನನ್ನು ಮಹಮದ್ ಬಹಳ ಆದರದಿಂದಲೆ ಇಸ್ಲಾಮಿಗೆ ಬರಮಾಡಿಕೊಂಡ.

ಈ ಇಬ್ಬರು ಪ್ರಭಾವಿಗಳ ಮತಾಂತರದಿಂದ ಮಹಮದನ ಆಶೋತ್ತರಗಳಿಗೆ ಮಹತ್ತರವಾದ ಬಲಬಂದೊದಗಿತು ಅನ್ನುತ್ತಾನೆ ಇತಿಹಾಸಕಾರ ಮ್ಯೂರ್.ಇಸ್ಲಾಮಿನ ಉನ್ನತಿಗಾಗಿ ಮುಂದೆ ಹೂಡಿದ ಅನೇಕ ಕಾಳಗಗಳಲ್ಲಿ ಹಮ್ಜಾ ಒಬ್ಬ ಅಪ್ರತಿಮ ವೀರನಾಗಿ ಕಂಗೊಳಿಸಿದರೆ ಒಮರ್ ಅಬುಬಕರನ ನಂತರ ಖಲೀಫನಾಗಿ ಮೆರೆದ.ಇವರಿಬ್ಬರಿಂದ ಮಹಮದನಿಗೆ ತನ್ನ ವಿಚಾರ ಮಂಡನೆಗೆ ವಿಚಿತ್ರ ಧೈರ್ಯ ಪ್ರಾಪ್ತಿಯಾಗಿತ್ತು.ಈ ಆನೆಬಲವನ್ನು ಹಿಂದಿಟ್ಟುಕೊಂಡೆ ಆತ ಇದೂವರೆಗೂ ಗುಪ್ತವಾಗಿಯಷ್ಟೆ ಮಾಡುತ್ತಿದ್ದ ತನ್ನ ಮತಪ್ರಚಾರವನ್ನು ಮರಳಿ ಬಹಿರಂಗವಾಗಿ ಕಾಬಾದ 'ಹುಬಾಬ್' ದೇವರ ಗುಡಿಯೆದುರಿಗೆ ಮಾಡಲು ಉಪಕ್ರಮಿಸಿದ.ಅಲ್ಲಿಯೆ ಆತನ ಪಠಣ-ಪ್ರವಚನ ಮತ್ತಿತರ ಪಾಠ ಪ್ರವಚನಗಳು ಆರಂಭವಾದವು.ಇದರಿಂದ ಇರುಸುಮುರುಸಿಗೆ ಒಳಗಾದ ಖುರೈಷಿಗಳು ತಮ್ಮವರನ್ನೆಲ್ಲ ಮತ್ತೆ ಸಂಘಟಿಸಿ ಇದನ್ನು ವಿರೋಧಿಸಲು ಆರಂಭಿಸಿದರು.ಅದರ ಒಂದು ನಿರ್ಬಂಧಕ ಕ್ರಮವಾಗಿ ಅವರೆಲ್ಲರೂ ಕೂಡಿ ಮಹಮದನ ಕುಟುಂಬವಾಗಿದ್ದ 'ಹಶೀಮ್' ಉಪ ಬುಡಕಟ್ಟಿಗೆ ಸಾಮಾಜಿಕ ಬಹಿಷ್ಕಾರ ಹೇರಿದರು.ಅವರ ಕುಟುಂಬದೊಂದಿಗೆ ಸಮಾಜದ ಇತರರ ವೈವಾಹಿಕ ಸಂಬಂಧಗಳು ಕೊನೆಯಾದವು.ಅವರೊಂದಿಗೆ ವ್ಯಾಪಾರ-ವ್ಯವಹಾರಗಳಿಗೂ ತಿಲಾಂಜಲಿ ಕೊಡಲಾಯಿತು,ಎಲ್ಲಾ ಸಾಮಾಜಿಕ ವ್ಯವಹಾರಗಳಿಂದಲೂ ಅವರನ್ನು ದೂರತಳ್ಳಲಾಯಿತು,ಈ ಬಹಿಷ್ಕಾರದಿಂದ ತತ್ತರಿಸಿದ ಹಶೀಮರು ಮೆಕ್ಕಾ ತೊರೆದು ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಆಶ್ರಯ ಅರಸುವಂತಾಯಿತು.ಮಹಮದನ ಮೇಲಿದ್ದ ಅಭಿಮಾನಧ ಕಾರಣದಿಂದ ಆ ಕಷ್ಟದ ದಿನಗಳನ್ನು ಮಹಮದನ ಕುಟುಂಬದವರೆಲ್ಲ ಐಕ್ಯತೆಯಿಂದಲೆ ಹಲ್ಲುಕಚ್ಚಿ ಸಹಿಸಿಕಳೆದರು.ಆದರೆ ಅವರು ಜೀವನೋಪಾಯಕ್ಕೆ ಕಷ್ಟಬೀಳಬೇಕಾಯಿತು.ಹಸಿವಿನಿಂದ ಅವರು ನರಳುವುದನ್ನು ನೋಡಲಾಗದೆ ಕೆಲವು ಕರುಣಾಮಯಿಗಳಾದ ಖುರೈಷಿಗಳು ಗುಟ್ಟಾಗಿ ಹಿರಿಯರ ಕಣ್ಣುತಪ್ಪಿಸಿ ಅವರಿಗೆ ಆಹಾರ ಹಾಗೂ ಇನ್ನಿತರೆ ಜೀವನಾವಶ್ಯಕ ವಸ್ತುಗಳನ್ನ ಪೂರೈಸುವುದೂ ಆ ಕಾಲದಲ್ಲಿ ಅಲ್ಲಲ್ಲಿ ನಡೆಯಿತು.ವರ್ಷಕ್ಕೊಮ್ಮೆ ನಡೆಯುವ ಕಾಬಾ ಉತ್ಸವಗಳಲ್ಲಿ ಮಾತ್ರ ಅವರು ಮೆಕ್ಕಾ ಪ್ರವೇಶಿಸಿ ತಮ್ಮತಮ್ಮ ಮತಪ್ರಚಾರ ಕೈಗೊಳ್ಳಲು ಅಡ್ಡಿಯಿರಲಿಲ್ಲ.ಅಂತಹ ದಿನಗಳನ್ನು ಶಾಂತಿಯ ದಿನಗಳೆಂದು ಘೋಷಿಸಿದ್ದರಿಂದ ಮಹಮದ್ ನಿರಾತಂಕವಾಗಿ ತನ್ನ ಮತವನ್ನು ಮನಬಂದಂತೆ ಭೋದಿಸಲು ಯಾರೂ ತಕರಾರು ತೆಗೆಯುತ್ತಿರಲಿಲ್ಲ.


ಆದರೆ ಆತನ ಈ ಮತಪ್ರಚಾರದಿಂದ ಖುರೈಷಿಗಳೇನೂ ಪ್ರಭಾವಿತರಾಗಲಿಲ್ಲ.ಅವರ ನಾಯಕನಾದ ಅಬು ಲಹಾಬನಂತೂ ಬಹಿರಂಗವಾಗಿಯೆ ಮಹಮದನನ್ನು ಹೀಯ್ಯಾಳಿಸಲು ಹಿಂಜರೆಯುತ್ತಿರಲಿಲ್ಲ.'ಅವನನ್ನು ನಂಬಬೇಡಿ ಅವನೊಬ್ಬ ವಂಚಕ ಧರ್ಮಭ್ರಷ್ಟ!' ಎಂದು ಕೂಗಿ ಮಹಮದನಿಂದ ಉಳಿದೆಲ್ಲರನ್ನೂ ಆತ ದೂರವಿರಿಸುವುದರಲ್ಲಿ ಸಫಲನಾಗಿದ್ದ.ಹೀಗಾಗಿ ಮಹಮದ್ ನೊಂದು ಸಂಕಟಪಡುವಂತಾಯಿತು.ಇದೆ ಸಮಯದಲ್ಲಿ ಮಹಮದನಿಗೆ ಯಹೂದಿಗಳ ಸಂಪರ್ಕ ಏರ್ಪಟ್ಟು ಅವರ ವಿಚಾರಧಾರೆಗಳಿಂದ ಆತ ಬಹಳ ಪ್ರಭಾವಿತನಾಗುವಂತಾಯಿತು.ಇದು ಆ ಕಾಲದಲ್ಲಿ ಆತನಿಗೆ ದೊರೆತ ದೈವವಾಣಿಗಳಲ್ಲಿ ಅಡಗಿದ್ದ ಯಹೂದಿ ವಿಚಾರಧಾರೆಗಳಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ದೇವರ ಪುನರುತ್ಥಾನ ಮುಂತಾದ ಉದಾಹರಣೆಗಳನ್ನವನು ಕೊಡುತ್ತಾನೆ.ಇವೆಲ್ಲ ಸೇರಿ ಸುಮಾರು ಇಪ್ಪತ್ತು ಸುರಾಗಳು ಆ ಕಾಲದಲ್ಲಿ ಹೊರಬಂದವು.ಈ ಸುರಾಗಳಲ್ಲಿ ಮಹಮದ್ ದೇವರು ವಿಶ್ವವನ್ನು ಕೇವಲ ಆಟವನ್ನಾಗಿ ಸೃಷ್ಟಿಸದೆ ಒಂದು ನಿರ್ದಿಷ್ಟ ಗುರಿ,ಧ್ಯೇಯ ಹಾಗೂ ಉದ್ದೇಶಗಳನ್ನೆ ಇಟ್ಟುಕೊಂಡು ಸೃಷ್ಟಿಸಿದ ಎಂದು ಆತ ಸಾಧಿಸಿದ. ಇವನ್ನು ಸುರಾ 72/28ರಲ್ಲಿ ಸ್ಪಷ್ಟವಾಗಿ ಕಾಣಬಹುದು.

ಪ್ರವಾದಿ ಮೋಸೆಸ್'ನಿಗೆ (ಇಸ್ಲಾಮಿನಲ್ಲಿ ಮೂಸಾ-ಎ-ಅಸಲ್ಲಂ) ದೇವರು ಕರುಣಿಸಿದ ದೈವವಾಣಿ ಹಾಗೂ ವಿಚಾರಧಾರೆಗಳೂ ಖುರಾನಿನ ಸುರಾಗಳಲ್ಲಿ ಕಾಣುತ್ತವೆ.ಮಹಮದ್ ಅವನ್ನು ಉದ್ದರಿಸುವಾಗ ತಾನು ಸಾರುತ್ತಿರುವ ಈ ವಿಚಾರಧಾರೆ ಈಗಾಗಲೆ ಇಂತಹ ಧರ್ಮಗ್ರಂಥಗಳಲ್ಲಿ ಮೂಡಿಬಂದಿದೆ ಎಂದು ಅವನ್ನು ಉದಾಹರಿಸಿ ಹೇಳುತ್ತಿದ್ದ.ಹಾಗೆ ಹಿಂದೆ ಬಂದ ಧರ್ಮಸಾರಗಳನ್ನೆ ಪುನಃ ಹೇಳಿ ಎಚ್ಚರಿಸಲು ತಾನು ಹುಟ್ಟಿಬಂದಿರುವುದಾಗಿಯೂ,ಅವುಗಳನ್ನೆಲ್ಲ ಅರೇಬಿಕ್ ಭಾಷೆಯಲ್ಲಿ ಪ್ರಚುರ ಪಡಿಸುವುದಷ್ಟೆ ತನ್ನ ಕರ್ತವ್ಯ ಎಂದು 4/160 ಹಾಗೂ 28/43ರಲ್ಲಿ ಘಂಟಾಘೋಷವಾಗಿ ಸಾರಿದ.ಇದರೊಂದಿಗೆ 2/256ರಲ್ಲಿ 'ಧರ್ಮದ ವಿಷಯಗಳಲ್ಲಿ ಯಾವುದೆ ಬಲಾತ್ಕಾರಗಳಿಲ್ಲ!' ಎಂದೂ ಸಾರಿದ.ಹಾಶಿಮ್ ಉಪ ಬುಡಕಟ್ಟಿನವರ ಮೇಲೆ ಹೇರಿದ್ದ ಬಹಿಷ್ಕಾರಕ್ಕೆ ಸ್ವತಃ ಖುರೈಷಿಗಳಲ್ಲೆ ಒಮ್ಮತವಿರಲಿಲ್ಲ.ಹೀಗಾಗಿ ಹಾಶೀಮರಿಗೆ ಅವರಲ್ಲೆ ಕೆಲವರಿಂದ ಗುಪ್ತವಾಗಿ ಸಹಕಾರಗಳು ಸಿಕ್ಕವು.ಅಷ್ಟರಲ್ಲಿ ಖುರೈಶಿಗಳಲ್ಲಿ ಒಬ್ಬ ನಾಯಕನೆನೆಸಿಕೊಂಡಿದ್ದ ಮಹಮದನ ದೊಡ್ಡಪ್ಪ ಅಬು ತಾಲಿಬ್ ಅವರೆಲ್ಲರೂ ಬಹಿಷ್ಕಾರದಿಂದ ಪಡುತ್ತಿರುವ ಬವಣೆಗಳನ್ನು ನೋಡಿ ಸಂತಾಪಗೊಂಡು ಒಂದು ದಿನ ತನ್ನ ಕೆಲವು ಸಂಗಡಿಗರೊಡನೆ ಕಾಬಾದತ್ತ ಹೆಜ್ಜೆಹಾಕಿದ.ಅಲ್ಲಿ ನೆರೆದಿದ್ದ ಇತರ ಖುರೈಶಿಗಳನ್ನ ಉದ್ದೇಶಿಸಿ "ನೀವು ಬರೆದು ದಾಖಲಿಸಿರುವ ಪತ್ರ ಆಗಲೆ ಗೆದ್ದಲು ತಿಂದು ಲಡ್ಡಾಗಿ ಹೋಗಿದೆ! ಅದರಿಂದ ಇನ್ನು ಮೂರುಕಾಸಿನ ಉಪಯೋಗವಿಲ್ಲ,ಇದರ ಮೇಲೆಯೂ ನೀವೆಲ್ಲ ಇಚ್ಚಿಸಿದರೆ ಅವನನ್ನೆ ನಿಮ್ಮ ಮುಂದೆ ತರುತ್ತೇನೆ.ನಿಮ್ಮ ಇಷ್ಟದ ಪ್ರಕಾರ ವಿಚಾರಿಸಿ ತೀರ್ಮಾನ ಕೈಗೊಳ್ಳಿ ಆದರೆ ಮೊದಲು ಈ ಬೋಳು ಬಹಿಷ್ಕಾರವನ್ನ ಮರುಮಾತಿಲ್ಲದೆ ಹಿಂತೆಗೆದುಕೊಳ್ಳಿ!" ಎಂದು ಅಬ್ಬರಿಸಿದ.ಈ ಆವೇಶದ ಮಾತುಗಳನ್ನು ಕೇಳಿದ ಅಲ್ಲಿನ ಪೂಜಾರಿ ಕಾಬಾದಲ್ಲಿನ ಸಂದೂಕದಲ್ಲಿ ಇರಿಸಿದ್ದ ಬಹಿಷ್ಕಾರ ಪತ್ರವನ್ನು ಹೊರತೆಗೆದು ನೋಡಿದಾಗ ಅದು ನಿಜಕ್ಕೂ ಲಡ್ಡಾಗಿ ಹುಳತಿಂದು ಹಾಳಾಗಿತ್ತು! ಇದನ್ನು ಕಂಡ ಖುರೈಷಿಗಳು ಗಾಬರಿಯಿಂದ ಕಂಗಾಲಾದರು.ಅವರ ಸೋಕ್ಕೆಲ್ಲ ಅಡಗಿಹೋಗಿ ಅವರಲ್ಲೆ ಹಿರಿಯರಾದವರು ಬಹಿಷ್ಕಾರ ರದ್ದುಪಡಿಸಿ ಹಾಶೀಮ್ ಕುಲಸ್ಥರನ್ನು ಮರಳಿ ಮೆಕ್ಕಾ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಹೀಗೆ ಬಹಿಷ್ಕಾರ ಮುಗಿದಮಾತ್ರಕ್ಕೆ ಮಹಮದನ ವಯಕ್ತಿಕ ಬವಣೆಗಳೇನೂ ಕೊನೆಯಾಗಲಿಲ್ಲ.ವಯೋವೃದ್ಧಳಾಗಿದ್ದ ಆತನ ಪತ್ನಿ ಖತೀಜಾ ಖಾಯಿಲೆಯಿಂದ ನರಳಿ ಕ್ರಿಸ್ತಶಕ 616ರ ಡಿಸೆಂಬರ್ ತಿಂಗಳಲ್ಲಿ ಕಣ್ಣು ಮುಚ್ಚಿದಳು.ಇದು ಮಹಮದನ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು.ಕಾಲುಶತಮಾನಗಳ ಕಾಲ ಆತನ ಪ್ರೀತಿಸುವ ಜೀವವಾಗಿ,ಹಿತೈಷಿಯಾಗಿ,ಬಾಳಗೆಳತಿಯಾಗಿ ಹಾಗೂ ಆತನಿಂದ ಮತಾಂತರ ಹೊಂದಿದ ಪ್ರಥಮ 'ಮುಸ್ಲೀಂ'ಮಳಾಗಿ ಆತನಿಗೆ ಒತ್ತಾಸೆ ನೀಡಿದ್ದ ಖತೀಜ ಮಹಮದನ ವಂಶೋದ್ಧಾರಕಳೂ ಆಗಿ ನಾಲ್ವರು ಹೆಣ್ಣುಮಕ್ಕಳ ತಾಯಿಯೂ ಆಗಿದ್ದು ತುಂಬು ಜೀವನ ಸವೆಸಿ ಕಣ್ಮುಚ್ಚಿದ್ದಳು.ಇದು ಆತನನ್ನು ಸಹಜವಾಗಿ ಕೆಂಗೆಡೆಸಿತು.

ಇದರ ಹಿಂದೆಯೆ ಗಾಯದ ಮೇಲೆ ಉಪ್ಪು ಸುರಿದಂತೆ ಆತನ ದೊಡ್ಡಪ್ಪ ಅಬು ತಾಲೀಬನೂ ಅದೆ ಕಾಲದಲ್ಲಿ ಕೊನೆಯುಸಿರು ಎಳೆದಿದುದರಿಂದಾಗಿ ಮಹಮದ್ ಸಂಕಟದಿಂದ ನರಳಬೇಕಾಯಿತು.ಮಹಮದನಿಗಾಗಿ ಸಂಪೂರ್ಣ ಖುರೈಷಿ ಕುಲದ ವೈರತ್ವವ್ವನ್ನೆ ಕಟ್ಟಿಕೊಳ್ಳಲು ಹೇಸದ ಅಬು ತಾಲೀಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರವಾಗದಿದ್ದರೂ ಮಹಮದನ ಜೊತೆಗೆ ಬೆಸೆದು ಕೊಂಡಿದ್ದ ರಕ್ತ ಸಂಬಂಧದ ಕಟ್ಟಿಗೆ ಬೆಲೆಕೊಟ್ಟು ಆತನ ಸಮೀಪವರ್ತಿಯಾಗಿ ಮುತುವರ್ಜಿಯಿಂದ ಆತನ ಹಿತಬಯಸಿದ ನಿಸ್ಪ್ರಹ ಜೀವ ಅಬು ತಾಲೀಬನದು.ಹೆತ್ತವರನ್ನು ಬಾಲ್ಯದಲ್ಲೆ ಕಳೆದುಕೊಂಡಿದ್ದ ಮಹಾಮದನನ್ನು ಹೆತ್ತಮಗನಂತೆ ಸಲಹಿದ್ದ ಅಬು ತಾಲೀಬನನ್ನು ಮಹಮದ್ ಕಳೆದುಕೊಂಡು ಶಾಂತಿಯಿಂದ ಇರುವುದು ಅಸಾಧ್ಯವಾಗಿತ್ತು.ಅವನು ಇದನ್ನು ಭಾವಪೂರ್ಣವಾಗಿ ಪ್ರಕಟಿಸಿ ಶೋಕಿಸಿದ.ನಾಲ್ಕು ದಶಕಗಳ ಈ ಗಟ್ಟಿಬಾಂಧವ್ಯ ಹೀಗೆ ಅಬು ತಾಲೀಬನ ಸಾವಿನಲ್ಲಿ ಕೊನೆಯಾದುದರಿಂದ ಮಹಮದ್ ಮಾನಸಿಕವಾಗಿ ಕೆಂಗೆಟ್ಟ.

( ಇನ್ನೂ ಇದೆ....)

23 October 2011

'' ''

ಹೊರಗೆ ಹನಿ ಹನಿ ತುಂತುರು ಮಳೆ,ಆಳುವ ಮಂದಿಯ ಕೃಪೆಯಿಂದ ಊರೆಲ್ಲ ಇಳಿಸಂಜೆಯಲ್ಲಿ ನನ್ನಂತೆಯೆ ವಿಷಾದಕ್ಕೆ ಜಾರಿದ ಹಾಗೆ ಕತ್ತಲಲ್ಲಿ ಮುದುಡಿ ಮುಳುಗಿದೆ...ನಿನ್ನ ನೆನಪಿನ ತುಂತುರಲ್ಲಿ ಒಳಗೂ-ಹೊರಗೂ ನೆನೆಯುತ್ತ ಈ ಕತ್ತಲ ಹಾದಿಯನ್ನ ಸವೆಸುತಿದ್ದೇನೆ.ನಿನ್ನನ್ನೆ ಕ್ಷಣಕ್ಷಣಕ್ಕೂ ಮೌನದಲ್ಲೇ ಜಪಿಸುತ್ತಿದ್ದೇನೆ.ಎಷ್ತೋದು ಒಂಟಿಯಾದೆನಲ್ಲ ನಾನು,ಹೋಗಹೋಗ್ತಾ, ನೀನು ಹಾಗೆಯೆ ಹೋಗಲಿಲ್ಲ ;ನನ್ನ ನೆಮ್ಮದಿ,ಖುಷಿ,ಗೆಲುವನ್ನೆಲ್ಲ ಜೊತೆಗೆ ಗಂಟು ಕಟ್ಟಿಕೊಂಡು ದೂರ ಸರಿದೆ.ಮತ್ತೆ ನನ್ನ ಬಾಳಿನ ಬುಟ್ಟಿಯ ತುಂಬಾ ಸಂಕಟದ ಮುಳ್ಳುಗಳನ್ನೆ ಸುರಿದೆ.

ಹುಟ್ಟಿನಿಂದಲೂ ನನಗೇನೆ ದೊಡ್ಡ ಪ್ರಶ್ನೆಯಾಗಿದ್ದ ನನ್ನೊಳಗಿನ ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ನನಗೂ ಬಾಳಿನ ಸಂಭ್ರಮದ ಅಸಲು ಪರಿಚಯ ಆದದ್ದು ನಿನ್ನಿಂದ.ಕಾರಣವೆ ಇಲ್ಲದ ನಮ್ಮ ಸುತ್ತಾಟಗಳು-ಜಂಟಿ ಪ್ರವಾಸಗಳು-ಕಲಾಕ್ಹೇತ್ರದ ತೀರ್ಥಯಾತ್ರೆಗಳು-ಟೌನ್'ಹಾಲಿನ ಉದ್ದನುದ್ದ ಮೆಟ್ಟಲುಗಳ ಮೇಲೆ ಕೂತು ನಾವು ಹೆಣೆದಿದ್ದ ಕನಸುಗಳ ಜಾತ್ರೆಗಳು-ಇಂಡೋ ಜರ್ಮನ್ ಸಿನಿಮಾ,ಬೆಂಗಳೂರು ಹಬ್ಬ ಅಂತೆಲ್ಲ ನಡೆಸಿದ್ದ ಹುಚ್ಚುಹುಚ್ಚು ಓಡಾಟಗಳು,ಗಾಂಧಿನಗರದ ಸಂದುಗೊಂದುಗಳ ಶ್ರದ್ಧಾಪೂರ್ವಕ ಅನ್ವೇಷಣೆಗಳು...ಓಹ್, ಬಾಳು ಎಷ್ಟೊಂದು ಸೋಗಸಾಗಿತ್ತಲ್ಲ ಆಗೆಲ್ಲ!

ಹೀಗೆ ಅರಿವಿಲ್ಲದೆ ಹೊಸತೊಂದು ಸಂತಸದ ಹಾಡನ್ನ ನಾನು ಹೆಚ್ಚುಹೆಚ್ಚು ಗುನುಗೋಕೆ ಕಾರಣವಾಗಿದ್ದುದು ಕೇವಲ ನೀನು.ನಿನ್ನ ಒಡನಾಟ.ನನ್ನ ಪಾಲಿಗೆ ಆತ್ಮದ ಬಂಧುವೆ ಆಗಿರುವ ನಿನ್ನೊಟ್ಟಿಗೆ ಹಂಚಿಕೊಂಡಿದ್ದ ಬಂಧಕ್ಕೆ ಯಾವುದೊ ಸಂಬಂಧದ ಚೌಕಟ್ಟನ್ನ ತೊಡಿಸಿ 'ಇದಿಷ್ಟೇ' ಅಂತ ವಿವರಿಸೋಕೆ ನನಗಂತೂ ಸಾಧ್ಯವೇ ಇಲ್ಲ.ಬರಡಾಗಿದ್ದ ನನ್ನ ಬಾಳಿನ ಅಂಗಳದಲ್ಲೂ ಸುಗಂಧದ ಹೂಗಳನ್ನರಳಿಸಿದ್ದ ನೀನು ನನ್ನ ಪಾಲಿಗೆ ಆಗಲು ಸಾಧ್ಯವಾದ ಎಲ್ಲವೂ ಆಗಿದ್ದೆ.

ಮೊದಲಿನಿಂದಲೂ ಒಂಟಿತನದಿಂದ ಒಳಗೊಳಗೆ ಮುದುಡಿದ್ದ ನನ್ನ ಮನಸನ್ನೂ ನೀ ಹೊರಜಗತ್ತಿಗೆ ತೆರೆದೆ ನೋಡು.ಎಲ್ಲವೂ ಹೊಸತಾಗಿಯೆ ಕಾನಿಸಿದಂತಾಗಿ.ಅನವಶ್ಯಕವೆಂದೆನಿಸುವ ಮಟ್ಟಿಗಿನ ನಿನ್ನೊಂದಿಗಿನ ಹರಟೆಗಳೂ ಇಷ್ಟವಾಗೊದಕ್ಕೆ ಶುರುವಾಯ್ತು.ಅದಕ್ಕೆ ತಕ್ಕಂತೆ ನನ್ನಷ್ಟೆ ತಿಕ್ಕಲುತಿಕ್ಕಲಾಗಿ ಹೊತ್ತುಗೊತ್ತಿಲ್ಲದೆ ನಾ ಕರೆದಲ್ಲಿಗೆ ನೀನೂ ಸಹ ದೂಸರ ಮಾತಿಲ್ಲದೆ ಹೊರಡುತ್ತಿದ್ದೆ.ಯಾರೂ ಇಲ್ಲ ನನಗಾಗಿ ಅನ್ನುವ ಕತ್ತಲಲ್ಲಿ ನಾನಿದ್ದೀನಿ ಅನ್ನೋ ಬೆಳಕಾಗಿ ನೀ ಗೋಚರಿಸಿದ ಮೇಲೆ ಇನ್ನೇನಿತ್ತು ಹೇಳು? ಆವರೆಗೂ ಶಾಪಗೃಸ್ಥ ಅಶ್ವತ್ಥಾಮನಂತೆ ಮನಸ್ಸು ಪೂರ್ತಿ ತೊನ್ನು ಹಿಡಿಸಿಕೊಂಡ ಅತೃಪ್ತ ಆತ್ಮವಾಗಿ ದಿಕ್ಕುದೆಸೆಯಿಲ್ಲದೆ ಅಲಿಯುತ್ತಿದ್ದ ನಾನು ಅಷ್ಟೂ ವರ್ಷಗಳ ಅಸಲು-ಬಡ್ಡಿ ಸಮೇತ ಮರೀಚಿಕೆಯಾಗಿದ್ದ ಸಣ್ಣಸಣ್ಣ ಖುಷಿಗಳನ್ನೆಲ್ಲ ಬಿಂದಾಸ್ ಲೂಟಿ ಹೊಡೆಯುವ ಉಮೇದಿಗೆ ಏರಿದ್ದೆ.ನನ್ನದೆ ಆದ ಅಹಂಕಾರಗಳು-ನಿನ್ನ ಪುಟ್ಟಪುಟ್ಟ ಈಗೋಗಳು ಇಬ್ಬರಲ್ಲೂ ಸಾವಿರವಿದ್ದರೂ ಅವೆಂದೂ ನಮ್ಮ ಸಾಮಿಪ್ಯಕ್ಕೆ ಅಡ್ಡಿಯಾಗಲಿಲ್ಲ.ಆದರೆ ಒಮ್ಮೆಲೆ ಅದೇನಾಯಿತೊ ನನಗಂತೂ ಒಗಟು .ನಿನ್ನ ಆದ್ಯತೆಗಳು ಬದಲಾದವು ಡಾಲರ್ ಮೋಹವೂ ನಿನ್ನನ್ನ ಅಕಾಲದಲ್ಲಿ ಆವರಿಸಿ ನೀನು ವಿಭಿನ್ನವಾಗಿ ನನಗೆ ಗೋಚರಿಸತೊಡಗಿದ ಮೇಲೆ ಮತ್ತೆ ಮೊದಲಿನ ನಲಿವೆಲ್ಲ ನಿಧಾನವಾಗಿ ಮರೆಸೆರಿದವು.ನೀನು ಅದೆಲ್ಲೊ ಅಮೇರಿಕಾದ ಗಲ್ಲಿಗಳಲ್ಲಿ ಡಾಲರ್'ಹೊಳಪನ್ನ ಕಣ್ಣಲ್ಲಿ ತುಂಬಿಸಿಕೊಳ್ಳುತ್ತಾ ಅದರಲ್ಲೆ ಸಂತಸವ ಹುಡುಕುತ್ತಿದ್ದೀಯ.ನಾನಿನ್ನೂ ನಿನ್ನ ಧಡೀರ್ ಪರಿವರ್ತನೆಯಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಇಲ್ಲಿ ನಿನ್ನ ಬಿಂಬವನ್ನೆ ನನ್ನ ಕಂಗಳ ಸ್ಕ್ರೀನ್'ಸೇವರ್ ಮಾಡಿಕೊಂಡು ಅಬ್ಬೇಪಾರಿಯಂತೆ ಅಲಿಯುತ್ತಿದ್ದೇನೆ.ನೀನಗೀಗ ನನ್ನ ಮೇಲೆ ಇರಬೇಕಾದಷ್ಟು ಪ್ರೀತಿ ಇಲ್ಲದಿದ್ದರೂ ಇರಬಾರದಷ್ಟು ಕೋಪ ಮಾತ್ರ ತುಂಬಿದೆ.

ಅದೆಲ್ಲೊ ಅಡಗಿದ್ದ ಮನಸ್ಸಿನ ತೊನ್ನು ಮತ್ತೆ ಮೇಲೆದ್ದು ಬಂದಿವೆ,ಅತೃಪ್ತತೆ ತುಂಬಿ ತುಳುಕಾಡುತ್ತಿದೆ.ಹೊರಪ್ರಪಂಚದ ಮಂದಿಗೆ ಹೊರನೋಟಕ್ಕೆ ವಿಭಿನ್ನವಾಗಿ ಗೋಚರಿಸುವ ನಾನು ಒಳಗೊಳಗೆ ಪ್ರತಿ ನಿಮಿಷವೂ ಸೋಲುತ್ತಿರೋದು ಯಾರಿಗೂ ಗೊತ್ತಾಗದಂತೆ ಇರುತ್ತದೆ ನನ್ನ ಬಾಹ್ಯ ವರ್ತನೆ.ಹೋಲಿಸಿ ನೋಡಿದರೆ ಮೇಲೆ ಕಾಣುವ ನನಗೂ-ಕಳವಳದಲ್ಲಿ ತೇಲುವ ನನ್ನೊಳಗಿನ ನನಗೂ ಚೂರೂ ತಾಳೆಯಾಗದೆ ನನ್ನೊಳಗಿನ ಈ ತಾಕಲಾಟ ಕಂಡವರು 'ಖಂಡಿತ ಇವನಿಗೆ ಹನ್ನೆರಡಾಣೆ ಕಮ್ಮಿಯಾಗಿದೆ' ಎಂದುಕೊಳ್ಳುವುದರಲ್ಲಿಯೂ ಸಂಶಯ ನನಗಿಲ್ಲ.ಆದರೊಂದು ನಿಜ ಹೇಳಲಾ.ನಿನ್ನ ಹೊರತು ನಾನು ಜೀವಂತ ಓಡಾಡಿಕೊಂಡಿರುವ ಹೆಣ ಮಾತ್ರ.ಉಸಿರಾಡುತ್ತಾ ಓಡಾಡುವ ಅದಾಗಲೆ ಸತ್ತ ನನಗೆ ನಿನ್ನ ಹೆಗಲಿನಾಸರೆಯಲ್ಲಷ್ಟೆ ಮುಕ್ತಿ ಪ್ರಾಪ್ತಿಯಾದೀತು.ಈ ಬದುಕೆಂಬ ಕೃತಕ ವೆಂಟಿಲೇಶನ್'ನ ನರಕದಿಂದ ನಾನು ಪಾರಾಗುವ ಮೊದಲಾದರು ನಿನ್ನ ಬೆಚ್ಚಗಿನ ಅಂಗೈಯಲ್ಲಿ ಮತ್ತೆ ನನ್ನ ಕೈ ಸೇರಿಸುವುದೊಂದೆ ನನಗಿರುವ ಆಸೆ.ಆದರೆ ಈ ಆಸೆಯೂ ಇನ್ನುಳಿದ ಎಲ್ಲಾ ಅಸೆಗಳಂತೆ ಬರಿಯ ಆಸೆಯಾಗಿಯೆ ಈಡೇರದೆ ಉಳಿದು ಬಿಡುವ ಖಚಿತತೆ ಇದ್ದರೂ ನಾನು ಕನಸಿಸೋದನ್ನ ಬಿಡಲಾರೆ...ನಿತ್ಯ ನಿನ್ನ ನೆನೆಯೋದನ್ನ ಬಯಸಿದರೂ ನನಗೆ ಬಿಡಲಾಗದಂತೆ ಇದೂನು ಜನ್ಮಕ್ಕಂಟಿದ ಗೀಳಾಗಿಯೆ ಉಳಿದಿರುತ್ತದೆ.ಹಿಂದಿನಂತೆ ನನ್ನೆದೆಯ ಕದತಟ್ಟಿ ಅದನ್ನ ಕೇಳಿಸಿಕೊಳ್ಳೋಕೆ ನೀನಲ್ಲಿರೋಲ್ಲ ಅಷ್ಟೆ.

ಖಾಸಗಿ ಕನವರಿಕೆಗಳನ್ನ ಹೀಗೆ ಜಾಹೀರು ಮಾಡುವಲ್ಲಿಯೂ ನನ್ನದೊಂದು ದೂರದ ಆಸೆಯಿದೆ.ನನ್ನ ಯಾವ ಮಾತಿಗೂ ನಿನ್ನ ಪ್ರತಿಕ್ರಿಯೆಯ ನಿರೀಕ್ಷೆಯಿಲ್ಲ,ಆದರೂ ಮರಳಿ ಬಾರದಂತೆ ನೀನು ನನ್ನ ಪರಿಧಿಯಿಂದ ದೂರ ಸರಿದಿದ್ದರೂ ಕೂಡ ಎಲ್ಲೋ ಒಂದೆಡೆ ಈ ನನ್ನ ಹಪಾಹಪಿ ನಿನ್ನ ಗಮನಕ್ಕೆ ಬರಲಿ.ನಿನ್ನ ಹೊರತು ನಾನು ಪಡುತ್ತಿರುವ ಯಾತನೆ.

'' ''



ಹೊರಗೆ ಹನಿ ಹನಿ ತುಂತುರು ಮಳೆ,ಆಳುವ ಮಂದಿಯ ಕೃಪೆಯಿಂದ ಊರೆಲ್ಲ ಇಳಿಸಂಜೆಯಲ್ಲಿ ನನ್ನಂತೆಯೆ ವಿಷಾದಕ್ಕೆ ಜಾರಿದ ಹಾಗೆ ಕತ್ತಲಲ್ಲಿ ಮುದುಡಿ ಮುಳುಗಿದೆ...ನಿನ್ನ ನೆನಪಿನ ತುಂತುರಲ್ಲಿ ಒಳಗೂ-ಹೊರಗೂ ನೆನೆಯುತ್ತ ಈ ಕತ್ತಲ ಹಾದಿಯನ್ನ ಸವೆಸುತಿದ್ದೇನೆ.ನಿನ್ನನ್ನೆ ಕ್ಷಣಕ್ಷಣಕ್ಕೂ ಮೌನದಲ್ಲೇ ಜಪಿಸುತ್ತಿದ್ದೇನೆ.ಎಷ್ತೋದು ಒಂಟಿಯಾದೆನಲ್ಲ ನಾನು,ಹೋಗಹೋಗ್ತಾ, ನೀನು ಹಾಗೆಯೆ ಹೋಗಲಿಲ್ಲ ;ನನ್ನ ನೆಮ್ಮದಿ,ಖುಷಿ,ಗೆಲುವನ್ನೆಲ್ಲ ಜೊತೆಗೆ ಗಂಟು ಕಟ್ಟಿಕೊಂಡು ದೂರ ಸರಿದೆ.ಮತ್ತೆ ನನ್ನ ಬಾಳಿನ ಬುಟ್ಟಿಯ ತುಂಬಾ ಸಂಕಟದ ಮುಳ್ಳುಗಳನ್ನೆ ಸುರಿದೆ.

ಹುಟ್ಟಿನಿಂದಲೂ ನನಗೇನೆ ದೊಡ್ಡ ಪ್ರಶ್ನೆಯಾಗಿದ್ದ ನನ್ನೊಳಗಿನ ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ನನಗೂ ಬಾಳಿನ ಸಂಭ್ರಮದ ಅಸಲು ಪರಿಚಯ ಆದದ್ದು ನಿನ್ನಿಂದ.ಕಾರಣವೆ ಇಲ್ಲದ ನಮ್ಮ ಸುತ್ತಾಟಗಳು-ಜಂಟಿ ಪ್ರವಾಸಗಳು-ಕಲಾಕ್ಹೇತ್ರದ ತೀರ್ಥಯಾತ್ರೆಗಳು-ಟೌನ್'ಹಾಲಿನ ಉದ್ದನುದ್ದ ಮೆಟ್ಟಲುಗಳ ಮೇಲೆ ಕೂತು ನಾವು ಹೆಣೆದಿದ್ದ ಕನಸುಗಳ ಜಾತ್ರೆಗಳು-ಇಂಡೋ ಜರ್ಮನ್ ಸಿನಿಮಾ,ಬೆಂಗಳೂರು ಹಬ್ಬ ಅಂತೆಲ್ಲ ನಡೆಸಿದ್ದ ಹುಚ್ಚುಹುಚ್ಚು ಓಡಾಟಗಳು,ಗಾಂಧಿನಗರದ ಸಂದುಗೊಂದುಗಳ ಶ್ರದ್ಧಾಪೂರ್ವಕ ಅನ್ವೇಷಣೆಗಳು...ಓಹ್, ಬಾಳು ಎಷ್ಟೊಂದು ಸೋಗಸಾಗಿತ್ತಲ್ಲ ಆಗೆಲ್ಲ!

ಹೀಗೆ ಅರಿವಿಲ್ಲದೆ ಹೊಸತೊಂದು ಸಂತಸದ ಹಾಡನ್ನ ನಾನು ಹೆಚ್ಚುಹೆಚ್ಚು ಗುನುಗೋಕೆ ಕಾರಣವಾಗಿದ್ದುದು ಕೇವಲ ನೀನು.ನಿನ್ನ ಒಡನಾಟ.ನನ್ನ ಪಾಲಿಗೆ ಆತ್ಮದ ಬಂಧುವೆ ಆಗಿರುವ ನಿನ್ನೊಟ್ಟಿಗೆ ಹಂಚಿಕೊಂಡಿದ್ದ ಬಂಧಕ್ಕೆ ಯಾವುದೊ ಸಂಬಂಧದ ಚೌಕಟ್ಟನ್ನ ತೊಡಿಸಿ 'ಇದಿಷ್ಟೇ' ಅಂತ ವಿವರಿಸೋಕೆ ನನಗಂತೂ ಸಾಧ್ಯವೇ ಇಲ್ಲ.ಬರಡಾಗಿದ್ದ ನನ್ನ ಬಾಳಿನ ಅಂಗಳದಲ್ಲೂ ಸುಗಂಧದ ಹೂಗಳನ್ನರಳಿಸಿದ್ದ ನೀನು ನನ್ನ ಪಾಲಿಗೆ ಆಗಲು ಸಾಧ್ಯವಾದ ಎಲ್ಲವೂ ಆಗಿದ್ದೆ.

ಮೊದಲಿನಿಂದಲೂ ಒಂಟಿತನದಿಂದ ಒಳಗೊಳಗೆ ಮುದುಡಿದ್ದ ನನ್ನ ಮನಸನ್ನೂ ನೀ ಹೊರಜಗತ್ತಿಗೆ ತೆರೆದೆ ನೋಡು.ಎಲ್ಲವೂ ಹೊಸತಾಗಿಯೆ ಕಾನಿಸಿದಂತಾಗಿ.ಅನವಶ್ಯಕವೆಂದೆನಿಸುವ ಮಟ್ಟಿಗಿನ ನಿನ್ನೊಂದಿಗಿನ ಹರಟೆಗಳೂ ಇಷ್ಟವಾಗೊದಕ್ಕೆ ಶುರುವಾಯ್ತು.ಅದಕ್ಕೆ ತಕ್ಕಂತೆ ನನ್ನಷ್ಟೆ ತಿಕ್ಕಲುತಿಕ್ಕಲಾಗಿ ಹೊತ್ತುಗೊತ್ತಿಲ್ಲದೆ ನಾ ಕರೆದಲ್ಲಿಗೆ ನೀನೂ ಸಹ ದೂಸರ ಮಾತಿಲ್ಲದೆ ಹೊರಡುತ್ತಿದ್ದೆ.ಯಾರೂ ಇಲ್ಲ ನನಗಾಗಿ ಅನ್ನುವ ಕತ್ತಲಲ್ಲಿ ನಾನಿದ್ದೀನಿ ಅನ್ನೋ ಬೆಳಕಾಗಿ ನೀ ಗೋಚರಿಸಿದ ಮೇಲೆ ಇನ್ನೇನಿತ್ತು ಹೇಳು? ಆವರೆಗೂ ಶಾಪಗೃಸ್ಥ ಅಶ್ವತ್ಥಾಮನಂತೆ ಮನಸ್ಸು ಪೂರ್ತಿ ತೊನ್ನು ಹಿಡಿಸಿಕೊಂಡ ಅತೃಪ್ತ ಆತ್ಮವಾಗಿ ದಿಕ್ಕುದೆಸೆಯಿಲ್ಲದೆ ಅಲಿಯುತ್ತಿದ್ದ ನಾನು ಅಷ್ಟೂ ವರ್ಷಗಳ ಅಸಲು-ಬಡ್ಡಿ ಸಮೇತ ಮರೀಚಿಕೆಯಾಗಿದ್ದ ಸಣ್ಣಸಣ್ಣ ಖುಷಿಗಳನ್ನೆಲ್ಲ ಬಿಂದಾಸ್ ಲೂಟಿ ಹೊಡೆಯುವ ಉಮೇದಿಗೆ ಏರಿದ್ದೆ.ನನ್ನದೆ ಆದ ಅಹಂಕಾರಗಳು-ನಿನ್ನ ಪುಟ್ಟಪುಟ್ಟ ಈಗೋಗಳು ಇಬ್ಬರಲ್ಲೂ ಸಾವಿರವಿದ್ದರೂ ಅವೆಂದೂ ನಮ್ಮ ಸಾಮಿಪ್ಯಕ್ಕೆ ಅಡ್ಡಿಯಾಗಲಿಲ್ಲ.ಆದರೆ ಒಮ್ಮೆಲೆ ಅದೇನಾಯಿತೊ ನನಗಂತೂ ಒಗಟು .ನಿನ್ನ ಆದ್ಯತೆಗಳು ಬದಲಾದವು ಡಾಲರ್ ಮೋಹವೂ ನಿನ್ನನ್ನ ಅಕಾಲದಲ್ಲಿ ಆವರಿಸಿ ನೀನು ವಿಭಿನ್ನವಾಗಿ ನನಗೆ ಗೋಚರಿಸತೊಡಗಿದ ಮೇಲೆ ಮತ್ತೆ ಮೊದಲಿನ ನಲಿವೆಲ್ಲ ನಿಧಾನವಾಗಿ ಮರೆಸೆರಿದವು.ನೀನು ಅದೆಲ್ಲೊ ಅಮೇರಿಕಾದ ಗಲ್ಲಿಗಳಲ್ಲಿ ಡಾಲರ್'ಹೊಳಪನ್ನ ಕಣ್ಣಲ್ಲಿ ತುಂಬಿಸಿಕೊಳ್ಳುತ್ತಾ ಅದರಲ್ಲೆ ಸಂತಸವ ಹುಡುಕುತ್ತಿದ್ದೀಯ.ನಾನಿನ್ನೂ ನಿನ್ನ ಧಡೀರ್ ಪರಿವರ್ತನೆಯಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಇಲ್ಲಿ ನಿನ್ನ ಬಿಂಬವನ್ನೆ ನನ್ನ ಕಂಗಳ ಸ್ಕ್ರೀನ್'ಸೇವರ್ ಮಾಡಿಕೊಂಡು ಅಬ್ಬೇಪಾರಿಯಂತೆ ಅಲಿಯುತ್ತಿದ್ದೇನೆ.ನೀನಗೀಗ ನನ್ನ ಮೇಲೆ ಇರಬೇಕಾದಷ್ಟು ಪ್ರೀತಿ ಇಲ್ಲದಿದ್ದರೂ ಇರಬಾರದಷ್ಟು ಕೋಪ ಮಾತ್ರ ತುಂಬಿದೆ.

ಅದೆಲ್ಲೊ ಅಡಗಿದ್ದ ಮನಸ್ಸಿನ ತೊನ್ನು ಮತ್ತೆ ಮೇಲೆದ್ದು ಬಂದಿವೆ,ಅತೃಪ್ತತೆ ತುಂಬಿ ತುಳುಕಾಡುತ್ತಿದೆ.ಹೊರಪ್ರಪಂಚದ ಮಂದಿಗೆ ಹೊರನೋಟಕ್ಕೆ ವಿಭಿನ್ನವಾಗಿ ಗೋಚರಿಸುವ ನಾನು ಒಳಗೊಳಗೆ ಪ್ರತಿ ನಿಮಿಷವೂ ಸೋಲುತ್ತಿರೋದು ಯಾರಿಗೂ ಗೊತ್ತಾಗದಂತೆ ಇರುತ್ತದೆ ನನ್ನ ಬಾಹ್ಯ ವರ್ತನೆ.ಹೋಲಿಸಿ ನೋಡಿದರೆ ಮೇಲೆ ಕಾಣುವ ನನಗೂ-ಕಳವಳದಲ್ಲಿ ತೇಲುವ ನನ್ನೊಳಗಿನ ನನಗೂ ಚೂರೂ ತಾಳೆಯಾಗದೆ ನನ್ನೊಳಗಿನ ಈ ತಾಕಲಾಟ ಕಂಡವರು 'ಖಂಡಿತ ಇವನಿಗೆ ಹನ್ನೆರಡಾಣೆ ಕಮ್ಮಿಯಾಗಿದೆ' ಎಂದುಕೊಳ್ಳುವುದರಲ್ಲಿಯೂ ಸಂಶಯ ನನಗಿಲ್ಲ.ಆದರೊಂದು ನಿಜ ಹೇಳಲಾ.ನಿನ್ನ ಹೊರತು ನಾನು ಜೀವಂತ ಓಡಾಡಿಕೊಂಡಿರುವ ಹೆಣ ಮಾತ್ರ.ಉಸಿರಾಡುತ್ತಾ ಓಡಾಡುವ ಅದಾಗಲೆ ಸತ್ತ ನನಗೆ ನಿನ್ನ ಹೆಗಲಿನಾಸರೆಯಲ್ಲಷ್ಟೆ ಮುಕ್ತಿ ಪ್ರಾಪ್ತಿಯಾದೀತು.ಈ ಬದುಕೆಂಬ ಕೃತಕ ವೆಂಟಿಲೇಶನ್'ನ ನರಕದಿಂದ ನಾನು ಪಾರಾಗುವ ಮೊದಲಾದರು ನಿನ್ನ ಬೆಚ್ಚಗಿನ ಅಂಗೈಯಲ್ಲಿ ಮತ್ತೆ ನನ್ನ ಕೈ ಸೇರಿಸುವುದೊಂದೆ ನನಗಿರುವ ಆಸೆ.ಆದರೆ ಈ ಆಸೆಯೂ ಇನ್ನುಳಿದ ಎಲ್ಲಾ ಅಸೆಗಳಂತೆ ಬರಿಯ ಆಸೆಯಾಗಿಯೆ ಈಡೇರದೆ ಉಳಿದು ಬಿಡುವ ಖಚಿತತೆ ಇದ್ದರೂ ನಾನು ಕನಸಿಸೋದನ್ನ ಬಿಡಲಾರೆ...ನಿತ್ಯ ನಿನ್ನ ನೆನೆಯೋದನ್ನ ಬಯಸಿದರೂ ನನಗೆ ಬಿಡಲಾಗದಂತೆ ಇದೂನು ಜನ್ಮಕ್ಕಂಟಿದ ಗೀಳಾಗಿಯೆ ಉಳಿದಿರುತ್ತದೆ.ಹಿಂದಿನಂತೆ ನನ್ನೆದೆಯ ಕದತಟ್ಟಿ ಅದನ್ನ ಕೇಳಿಸಿಕೊಳ್ಳೋಕೆ ನೀನಲ್ಲಿರೋಲ್ಲ ಅಷ್ಟೆ.

ಖಾಸಗಿ ಕನವರಿಕೆಗಳನ್ನ ಹೀಗೆ ಜಾಹೀರು ಮಾಡುವಲ್ಲಿಯೂ ನನ್ನದೊಂದು ದೂರದ ಆಸೆಯಿದೆ.ನನ್ನ ಯಾವ ಮಾತಿಗೂ ನಿನ್ನ ಪ್ರತಿಕ್ರಿಯೆಯ ನಿರೀಕ್ಷೆಯಿಲ್ಲ,ಆದರೂ ಮರಳಿ ಬಾರದಂತೆ ನೀನು ನನ್ನ ಪರಿಧಿಯಿಂದ ದೂರ ಸರಿದಿದ್ದರೂ ಕೂಡ ಎಲ್ಲೋ ಒಂದೆಡೆ ಈ ನನ್ನ ಹಪಾಹಪಿ ನಿನ್ನ ಗಮನಕ್ಕೆ ಬರಲಿ.ನಿನ್ನ ಹೊರತು ನಾನು ಪಡುತ್ತಿರುವ ಯಾತನೆ.

22 October 2011

ವಲಿ....( ಭಾಗ-6)

ಕ್ರಮೇಣ ಖುರಾನಿನ ಸುರಾಗಳು ಉದ್ದವಾಗುತ್ತಾ ಹೋದವು.ಅವುಗಳಲ್ಲಿ ಹೊರಹೊಮ್ಮಿದ ಉಪದೇಶಾಮೃತಗಳಲ್ಲಿ ಪರಸ್ಪರ ವಿರೋಧಾಭಾಸಗಳೂ ಗೋಚರಿಸಲಾರಂಭಿಸಿದವು.ದೈವಪ್ರೇರಣೆಯಿಂದ ಹೊರಹೊಮ್ಮಿದ ಉಪದೇಶದ ಸಾಲುಗಳೆ ಮುಂದೆ ಖಾಯಂ ದೈವವಾಣಿಗಳಾಗಿ ಅಂತಿಮವಾದುದನ್ನೂ ಗುರುತಿಸಬಹುದಾಗಿದೆ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ.ಅಷ್ಟೆ ಅಲ್ಲದೆ ಅರೇಬಿಯಾದಲ್ಲಿ ಆಕಾಲದಲ್ಲಿ ಪ್ರಚಲಿತವಿದ್ದ ಕೆಲವು ಕವಿತೆಗಳನ್ನು ಹಾಗ್ಹಾಗೆ ಖುರಾನಿನಲ್ಲೂ ಬಳಸಿರುವುದನ್ನು ಈತ ಗುರುತಿಸಿದ್ದಾನೆ! ಇಲ್ಲಿಯವರೆಗೂ ಮಹಮದ್ ದೈವಪ್ರೇರಣೆಯ ಪ್ರಕಾರ ಹೇಳಿದ ಸುರಾಗಳು ಕೇವಲ ದೇವರ ಏಕಸಾಮ್ಯತೆ,ಮಹಮದ್ ಆತನ ಪ್ರವಾದಿ,ಮರಣ ಹೊಂದಿದವರ ಪುನರುತ್ಥಾನ,ಒಳ್ಳೆಯ ಮತ್ತು ಕೆಟ್ಟದರ ಪ್ರತಿಫಲಗಳು ಮುಂತಾದಕ್ಕೆ ಸೀಮಿತವಾಗಿದ್ದವು.ಈಗ ಅದರ ಮುಂದುವರಿಕೆಯಾಗಿ ಪ್ರಾರ್ಥನೆಗೈಯುವುದು,ದಾನ ಮಾಡುವುದು,ತೂಕ ಮತ್ತು ಅಳತೆಗಳಲ್ಲಿ ಪ್ರಾಮಾಣಿಕತೆ,ಸತ್ಯನುಡಿ,ನಡತೆಯ ಪರಿಶುದ್ಧತೆ,ಒಡಂಬಡಿಕೆಗಳ ಪ್ರಾಮಾಣಿಕ ಪರಿಪಾಲನೆ ಮುಂತಾದವುಗಳ ಕುರಿತಾಗಿಯೂ ಸುರಾಗಳು ಹೊರಬಂದವು.ವಿಗ್ರಹಾರಾಧನೆಯನ್ನು ಖಂಡತುಂಡವಾಗಿ ವಿರೋಧಿಸಿ ಮಹಮದ್ ನೀಡಿದ 109/1ರಿಂದ 6ರವರೆಗಿನ ಸುರಾವೂ ಅದೆಕಾಲದಲ್ಲಿ ಹೊರಬಂದದ್ದು ಕೂಡ ಗಮನಾರ್ಹವಾಗಿತ್ತು ಎನ್ನುತ್ತಾನೆ ಇತಿಹಾಸಕಾರ ಕ್ಲೈರ್.ಸ್ವರ್ಗ ಹಾಗೂ ನರಕಗಳ ಕುರಿತು ವಿವರಣೆ ನೀಡುವ ಸುರಾವೂ ಇದೇ ಸಮಯದಲ್ಲಿ ಹೊರಬಂದಿತ್ತು.ಸ್ವರ್ಗ-ನರಕಗಳ ಚಿತ್ರಣ,ಅಲ್ಲಿ ಸಿದ್ಧವಾಗುವ ಸುಖ ಹಾಗೂ ಕಷ್ಟಕಾರ್ಪಣ್ಯಗಳು,ಸ್ವರ್ಗದ ಕಣ್ಮನ ತಣಿಸುವ ತೋಟ-ತೋಪುಗಳು,ನೆಲತೊಳೆಯುತ್ತಾ ವರ್ಷಪೂರ್ತಿ ಹರಿಯುತ್ತಲೆ ಇರುವ ಬತ್ತದ ತೊರೆಗಳು,ಅಲ್ಲಿನ ವನ ಸಮೃದ್ಧಿ,ತೊರೆಗಳ ದಡಗಳಲ್ಲಿ ಅರಳಿ ನಲಿಯುವ ಹೂಗಿಡಗಳು,ಮರಗಳ ನೆರಳಿನಲ್ಲಿ ಎಲ್ಲೆಂದರಲ್ಲಿ ಇರಿಸಿರುವ ಹೂವಿನ ಮೆತ್ತೆ ಹಾಸಿರುವ ಸುಖತೂಲಿಕಾತಲ್ಪಗಳು,ಚಿಮ್ಮುವ ಕಾರಂಜಿಗಳಿಂದ ಉಕ್ಕುವ ಕುಡಿಯುವ ಸಿಹಿನೀರು,ಅಲ್ಲಲ್ಲಿ ಇರಿಸಿರುವ ದ್ರಾಕ್ಷಾರಸಗಳ ಬೆಳ್ಳಿಬಟ್ಟಲುಗಳು,ಎಲ್ಲೆಲ್ಲೂ ಕೈಗೆಟಕುವಂತೆ ನೇತಾಡುತ್ತಿರುವ ಸಿಹಿಫಲಗಳ ಗೊಂಚಲುಗಳು,ಜೊತೆಗೆ ಅಲ್ಲಿಗೆ ಅಡಿಯಿಡುವವರ ಸಕಲಸೇವೆಗೂ ಸದಾಸಿದ್ದವಾಗಿರುವ ಹ್ಯೂರಿ ಎಂಬ ಪಾರದರ್ಶಕ ಸುಂದರಿಯರು,ಎಲ್ಲಕ್ಕಿಂತಲೂ ಹೆಚ್ಚಾಗಿ ಬಯಸಿದಾಗ ಬರಿಸಬಹುದಾದ ಮಳೆ! ಹೀಗೆ ಮರುಭೂಮಿಯ ಒಣಭೂಮಿಯ ನಂಟನ್ನಷ್ಟೇ ಹೊಂದಿದ್ದ ಅರಬರಿಗೆ ಹೊಸತೆನಿಸುವ ಈ ಎಲ್ಲಾ ವಿವರಣೆಗಳನ್ನ ಕೊಡುವುದರ ಮೂಲಕ ಅವರಿಗೆ ಮೋಡಿ ಹಾಕುವತ್ತ ಮಹಮದ್ ಕಾರ್ಯಶೀಲನಾಗಿದ್ದ,ಸುರಾ 9/64 ಸಾಹಿ ಅಲ್ ಬುಖಾರಿ -4/3243 ಈ ಸುರಾವನ್ನ ಅವಲೋಕಿಸಿದಾಗ ಆತನ ವಿವರಣೆ ಹೆಚ್ಚು ಸ್ಪಷ್ಟವಾಗುತ್ತದೆ.ಸ್ವರ್ಗವನ್ನು ಹೀಗೆ ರಂಗುರಂಗಾಗಿ ವರ್ಣಿಸಿ ಆಕರ್ಷಣೆ ಹುಟ್ಟಿಸಿದ ಮಹಮದ್ ನರಕವನ್ನು ಬಲು ಭೀಕರವಾಗಿ ವಿವರಿಸಿದ.ಹೆಜ್ಜೆಹೆಜ್ಜೆಗೂ ಸುಡುವ ಬಿಸಿನೀರಿನ ಬುಗ್ಗೆಗಳು,ಸಿಡಿಯುವ ಬೆಂಕಿ ಹೊಗೆಗಳು ನಿರಂತರ ಹೊರಹೊಮ್ಮುವ ಅಸಹ್ಯದ ಉಸಿರುಗಟ್ಟಿಸುವ ಜಾಗಗಳು.ಸುಡುಬಿಸಿಲಿಂದ ರಕ್ಷಣೆಗೆ ನೆರಳೆ ಇಲ್ಲದ ಸುಡುನೆಲ ಇವೆಲ್ಲವನ್ನೂ ಒಳಗೊಂಡಿತ್ತು ಈತನ ನರಕದ ವಿವರಣೆ.ಇವೆಲ್ಲವನ್ನೂ ಹೆಚ್ಚು ಕಡಿಮೆ ಇಹದಲ್ಲೆ ಅಗತ್ಯಕ್ಕಿಂತ ಹೆಚ್ಚು ಕಂಡುಂಡ ಅನುಭವಿಗಳಾಗಿದ್ದ ಅರಬರಿಗೆ ಸ್ವರ್ಗದ ಸುಖಮಯ ವಿವರಣೆ ಕೇಳುವಾಗಲೆ ಸುಖಾನುಭವ ತಂದದ್ದು ಮಾತ್ರ ಸುಳ್ಳಲ್ಲ.ನರಕದ ಭೀಕರತೆಯ ವಿವರಣೆ ನೀಡುವ ಸುರಾಗಳನ್ನು 32/20/21, 40/24/71/72, 41/24/25, 44/42-49, 78/23-29 ಹಾಗೂ 37/23/2ಗಳಲ್ಲಿ ಗಮನಿಸಬಹುದು.

ಸ್ವರ್ಗ ಮತ್ತು ನರಕಗಳ ವಿವರಣೆಗಳೊಂದಿಗೆ ಮಹಮದ್ ನಿರ್ಣಾಯಕ ದಿನದಂದು ಕಾದಿರುವ ಭಯಂಕರ ತೀರ್ಪಿನ ಬಗ್ಗೆಯೂ ಅರಬರಿಗೆ ದಿಗಿಲು ಹುಟ್ಟಿಸುವ ಸಂದೇಶಗಳನ್ನು ಸಾರಿದ.ಅವನ ಈ ಸಂದೇಶವನ್ನು ಆಲಿಸಿದ ಮೆಕ್ಕಾದ ಮಂದಿ ಸಂದೇಹಗೊಂಡು ಆ ಅಂತಿಮ ದಿನದ ಗಡುವು ಎಂದು ಸಮೀಪಿಸುವುದು ಯಾವಾಗ? ಎಂದು ಪ್ರಶ್ನಿಸಿದಾಗ 'ಅದು ತನಗೆ ಗೊತ್ತಿಲ್ಲ ದೇವರಿಗೆ ಮಾತ್ರ ಗೊತ್ತು!' ಎಂದು ಸುರಾ 27/65 ರ ಮೂಲಕ ಉತ್ತರಿಸಿದ.ಹೀಗೆ ಖುರಾನಿನಲ್ಲಿ ಕಂಡು ಬರುವ ಅನೇಕ ಸಾಲುಗಳ ಬಗ್ಗೆ ಮೆಕ್ಕಾದ ಮಂದಿಯ ಮನದಲ್ಲಿ ಎದ್ದ ಅಪನಂಬಿಕೆ,ಅಸಹನೆಗಳ ಬಗ್ಗೆ ಹಾಗೂ ಸತ್ತು ಮಣ್ಣಾದವರು ಪುನರುತ್ಥಾನದ ದಿನದಂದು ಮತ್ತೆ ಎದ್ದು ಬರುತ್ತಾರೆ ಎಂಬೆಲ್ಲ ಹೇಳಿಕೆಗಳ ವಿರುದ್ಧ ಎದ್ದ ಅವರ ಅಸಹನೆಗಳನ್ನು ತನ್ನದೆ ಆದ ವಾದ,ತರ್ಕ-ವಿಮರ್ಶೆಗಳ ಮೂಲಕ ತೊಡೆದು ಹಾಕಲು ಮಹಮದ್ ಯತ್ನಿಸಿದ.ಸುರಾ 67/24-27 29/1 69ಗಳ ಮೂಲಕ ಕ್ರಮೇಣ ಈ ಬಗ್ಗೆ ಉದ್ರೇಕಕಾರಿಯಾಗಿ ಪ್ರಚೋದನೆ ನೀಡುತ್ತ ತನ್ನನ್ನು ಪ್ರವಾದಿಯೆಂದು ನಂಬಿದ ಮತಬಾಂಧವರನ್ನು ಬಡಿದೆಬ್ಬಿ ಅವರು ಕಾರ್ಯಪ್ರವರ್ತರಾಗುವಂತೆ ಮಾಡಲು ಆತ ಆರಂಭಿಸಿದ.ಇತಿಹಾಸಕಾರ ಸಿಮೊನ್ ವೆಲ್ ಹೀಗೆ ಇನ್ನೊಬ್ಬರನ್ನು ಪ್ರಚೋದನೆಗೆ ಒಳಪಡಿಸಿ ಬಡಿದೆಬ್ಬಿಸುವುದು ಒಂದು ಕಲೆ ಎನ್ನುತ್ತಾನೆ.ಮೆಕ್ಕಾದ ಖುರೈಷಿಗಳ ಕೊನೆಗಾಣದ ಮೊದಲಿಕೆ,ಅಪಹಾಸ್ಯ ಹಾಗು ಕುಚೋದ್ಯದ ನುಡಿಗಳಿಗೂ ಮಹಮದ್ ತನ್ನ ಸುರಾಗಳ ಮೂಲಕವೆ ಇದಿರೇಟು ನೀಡಲಾರಂಭಿಸಿದ.ಸುರಾ 5/57 62,29/1,69ಗಳಲ್ಲಿ ಇವನ್ನು ಧಾರಾಳವಾಗಿ ಗಮನಿಸಬಹುದು.


ವಿರೋಧಿಗಳ ಈ ಎಲ್ಲಾ ಬಿರುನುಡಿಗಳಿಗೆ ಸಹನೆ ಶಾಂತಿಯಿಂದಿರುವಂತೆ ಮಹಮದ್ ಭೋದಿಸಿದ.ನೆಜ್ರಾನ್ ಎಂಬಲ್ಲಿ ಯಹೂದಿಗಳು ಕ್ರೈಸ್ತರನ್ನು ಹಿಂದೆ ಬೆಂಕಿಯ ಹೊಂಡದಲ್ಲಿ ಹಾಕಿ ಜೀವಂತ ಸುಟ್ಟ ಸಂಗತಿಯನ್ನ ಉದಾಹರಿಸುತ್ತಾ ತನ್ನ ಹಿತವಚನಗಳನ್ನು ಅವರು ಒಪ್ಪುವಂತೆ ಸುರಾ 85/1-22 ರಲ್ಲಿ ಸಾರಿದ.'ಇಸ್ಲಾಂ' ಎಂದರೆ ದೇವರಿಗೆ ತನ್ನನ್ನು ತಾನೇ ಸಂಪೂರ್ಣ ಅರ್ಪಿಸಿಕೊಳ್ಳುವುದು ಹಾಗೆ ಮಾಡುವವನೆ ಮತಶ್ರದ್ಧೆಯುಳ್ಳವನು ಅಥವಾ 'ಮುಸ್ಲೀಂ' ಎಂದ.ಯಾರು ತಾನು ಸಾರುವ ಏಕದೈವವಾಣಿಯನ್ನು ಆಲೈಸಿಯೂ ಬಹುದೇವರನ್ನೂ ಗುಟ್ಟಾಗಿ ಆರಾಧಿಸುವರೊ ಅವರೆ 'ಮುಶಿಕೀನ್'ಗಳೆನ್ನಿಸಿಕೊಳ್ಳುವರು.ತನ್ನ ದೈವವಾಣಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಎಲ್ಲರೂ 'ಕಾಫಿರಿನ್'ಗಳೆಂದು ಕರೆಸಿಕೊಳ್ಳುತ್ತಾರೆ.ಈ ಕಾಫಿರಿನ್ ಹಾಗೂ ಮುಶಿಕೀನ್'ಗಳು ಯಾವ ಹಂತದಲ್ಲೂ ತನಗೆ ವಿರೋಧಿಗಳೆ ಎಂದಾತ ಸಾರಿದ.ಈ ಬಗ್ಗೆ ಪ್ರಸಿದ್ಧ ಇತಿಹಾಸಕಾರರಾದ ಅಲ್ ವಾಕಿಡಿ ಹಾಗೂ ಅಲ್ ತಬರಿ ಜೋಡಿ ಹೀಗೊಂದು ಕಥಾರೂಪದ ವಿವರಣೆ ನೀಡುತ್ತಾರೆ.ಅದರಂತೆ ಕ್ರಿಸ್ತಶಕ 615ರ ಸುಮಾರಿಗೆ ತನ್ನ ಬುಡಕಟ್ಟಿನವರ ಆತ್ಮೋದ್ಧಾರ ಮಾಡುವ ಸಲುವಾಗಿ ತಾನು ಆರಂಭಿಸಿದ ನೂತನ ಧರ್ಮದಲ್ಲಿ ಖುರೈಷಿಗಳ ಪ್ರಬಲ ವಿರೋಧದ ಕಾರಣ ಅಂದುಕೊಂಡ ಸಫಲತೆ ಕಂಡುಬಾರದೆ ಇದ್ದುದು,ತನ್ನೆಲ್ಲಾ ಪರಿಶ್ರಮದ ಹೊರತಾಗಿಯೂ ತಾನು ಕೇವಲ ನಲವತ್ತರಿಂದ ಐವತ್ತು ಮಂದಿಯ ಮನವೊಲಿಸಲು ಮಾತ್ರ ಶಕ್ತನಾಗಿದ್ದು,ಅದೆ ಪ್ರಯತ್ನದಲ್ಲಿ ಇಡಿ ಖುರೈಷಿಕುಲವನ್ನೆ ಎದುರು ಹಾಕಿಕೊಂಡದ್ದು ಇವೆಲ್ಲ ಮಹಮದನ ಮನಸ್ಸನ್ನು ತೀವೃವಾಗಿ ಘಾಸಿಗೊಳಿಸಿತು.ಇದೆ ಕಾರಣಕ್ಕೆ ಆತನ ಆತ್ಮ ನಲುಗಿ,ಭಾವನೆಗಳಿಗೆ ಬಲವಾದ ಪೆಟ್ಟುಬಿದ್ದಿತ್ತು.ಹಿಂದೊಮ್ಮೆ ಪ್ರೀತಿಪಾತ್ರರಾಗಿದ್ದ ಖುರೈಷಿ ಮುಖಂಡರ ವೈರತ್ವ ಅವನ ಹೃದಯ ಹಿಂಡಿತ್ತು.ದುಃಖಪೀಡಿತನಾದ ಮಹಮದ್ ಹೀಗಾಗಿ ಅವರೊಂದಿಗೆ ಸಂಧಾನಕ್ಕಾಗಿ ಹಾತೊರೆದ.

ಒಂದು ಮುಂಜಾನೆ ಕಾಬಾದ ಬಳಿ ಖುರೈಷಿ ಪ್ರಮುಖರು ಕೂತು ಅದೇನನ್ನೂ ಚರ್ಚಿಸುತ್ತಿರುವಾಗ ಮಹಮದ್ ಕೂಡ ಅಲ್ಲಿಗೆ ಬಂದು ಅವರ ಸನಿಹದಲ್ಲೆ ಕುಳಿತುಕೊಂಡ.ಅವನು ಅಲ್ಲಿಯೆ ಆಗಷ್ಟೆ ತನಗೆ ಪ್ರೇರಣೆಯಾದ ಹೊಸ ಸುರಾದ ಸಾಲುಗಳನ್ನ ಪಠಿಸತೊಡಗಿದ.ಈ ರೀತಿ ಅವನ ಮಣಮಣ ಸಾಗಿದ್ದಾಗ ಒಂದು ದೆವ್ವ ಅವನ ಹೃದಯವನ್ನು ಹೊಕ್ಕಿತು ಎನ್ನುತ್ತಾರೆ ಅವರಿಬ್ಬರೂ.ಆ ದೆವ್ವ ಅದಾಗಲೆ ಅವನ ಮನದಲ್ಲಿ ಮನೆ ಮಾಡಿದ್ದ ಹೊಂದಾಣಿಕೆಯ ಸೂತ್ರಗಳೂ ಸುರಾದ ಮೂಲಕವೆ ಹೊರ ಬರುವಂತೆ ಮಾಡಿತು.ಅಲ್-ಲಾಟ್ ಸುರಾ 53/52ರ ಪ್ರಕಾರ ಹೆಣ್ಣುದೇವತೆಯರನ್ನೂ ಏಕದೈವದೊಂದಿಗೆ ಆರಾಧಿಸುವಂತೆ ಹೇಳಿ ಬಹುದೇವತಾರಾಧನೆಗಳ ಬಗ್ಗೆ ಅನುಕಂಪದ ನುಡಿಯನ್ನೆ ಹೊರ ಹೊಮ್ಮಿಸಿತಂತೆ.ಉಜ್ವಲ ಸ್ತ್ರೀಯರ ಮಧ್ಯಸ್ಥಿಕೆಯ ಕುರಿತ ಒಂದು ಸಾಲೂ ಈ ಸುರಾದಲ್ಲಿ ಸೇರಿತ್ತು.ಮಹಮದನ ಈ ಹೊಸ ವಿಮರ್ಶಾವಿಧಿ ಆಲಿಸಿದ ಖುರೈಶಿಗಳಿಗೆ ನಿಜಕ್ಕೂ ಆಶ್ಚರ್ಯವಾಯಿತು.ಮಹಮದ್ ತಮ್ಮ ದೇವದೇವತೆಗಳ ಗುಣಗಳನ್ನು ಕೀರ್ತಿಸುವುದನ್ನು ಅವರಂತೂ ನಿರೀಕ್ಷಿಸಿರಲಿಲ್ಲ.ಅದನ್ನು ಕೇಳಿದ್ದೆ ಅಲ್ಲಿಯೆ ಅವರು ನೆಲಕ್ಕೆ ಬಾಗಿ ದೇವರಿಗೆ ಸ್ವಸ್ತಿ ಸಲ್ಲಿಸಿದರು.ಆಗ ಒಕ್ಕೊರಲಿನಿಂದ ಅವರೆಲ್ಲರೂ "ಜನ್ಮವನ್ನು ನೀಡಿ ಅದನ್ನು ಹಿಂತಿರುಗಿ ತೆಗೆದುಕೊಳ್ಳುವವನು ದೇವನೊಬ್ಬನೆ.ಅವನೆ ಸೃಷ್ಟಿಕರ್ತ-ಸಂರಕ್ಷಕ ಎಂಬುದೀಗ ನಮಗೆ ಅರಿವಾಗಿದೆ.ನಮ್ಮ ಸ್ತ್ರೀದೇವತೆಗಳ ಬಗ್ಗೆ ಹೇಳುವುದಾದರೆ ಅವರು ದೇವರಬಳಿ ನಮ್ಮ ಒಳಿತಿಗಾಗಿ ಬಿನ್ನಹ ಮಾಡುತ್ತಾರೆ.ನೀನು ಅವರನ್ನು ಒಪ್ಪಿಕೊಂಡಿರುವುದರಿಂದ ನಾವೂ ನಿನ್ನನ್ನು ಬೆಂಬಲಿಸಲು ಇಚ್ಚಿಸುತ್ತೇವೆ" ಎಂದರು .ಇದು ಸುರಾ 53/19-20 ರಲ್ಲಿ ನಿರೂಪಿತವಾಗಿದೆ.


ಆದರೆ ಅವರಿಂದ ಇನ್ನೇನನ್ನೋ ನಿರೀಕ್ಷಿಸಿದ್ದ ಮಹಮದನಿಗೆ ಅವರ ಈ ಮಾತುಗಳು ತೃಪ್ತಿಹುಟ್ಟಿಸಲಿಲ್ಲ ಹೀಗಾಗಿ ಖಿನ್ನನಾಗಿ ಆತ ಮನೆಗೆ ಮರಳಿದ.ಅಂದೆ ಸಂಜೆ ಯಕ್ಷ ಗೇಬ್ರಿಯಲ್'ನ ಪುನರ್'ದರ್ಶನ ಅವನಿಗೆ ದೊರೆಯಿತು.ಅವತ್ತು ದೊರಕಿದ ದೈವವಾಣಿಯನ್ನು ಮಹಮದ್ ಅವನಿಗೆ ಅರುಹಿದ,ಅದನ್ನು ಕೇಳಿದ್ದೆ ಆತಂಕಿತನಾದ ಯಕ್ಷ "ನಾನು ಹೇಳದೆ ಇರುವ ಹಾಡುಹರಟೆಗಳನ್ನೆಲ್ಲ ಜನರ ಮುಂದಿರಿಸಿದ್ದೆಯಲ್ಲ! ನಾನು ಹೇಳಿದ್ದೇನು? ನೀನು ಮಾಡಿದ್ದೇನು?" ಎಂದಾಗ ಮಹಮದ್ ಸಂಕಟದಿಂದ ನರಳಿದ.ದೇವರದಲ್ಲದ ಆ ಸಾಲುಗಳನ್ನ ತಾನು ಬಿತ್ತರಿಸಿರುವುದಕ್ಕೆ ಏನು ಕೇಡಾಗುವುದೊ ಎಂದಾತ ಹೆದರಿದ.ಆದರೆ ಗೇಬ್ರಿಯಲ್ ಆತನನ್ನು ಸಂತೈಸಿದ.ಅವನ ಭಯವನ್ನು ನಿವಾರಿಸುತ್ತಾ ಆ ಅಪ್ರಾಮಾಣಿಕ ಸುರಾಗಳನ್ನೆಲ್ಲ ಆತ ಕೂಡಲೆ ರದ್ದು ಪಡಿಸಿದ! ಮತ್ತು ಹೊಸತಾಗಿ ಸುರಾ 24/52, 35/14;39,17/26ಗಳ ಮೂಲಕ ಈಗಿರುವಂತೆ ಹೊಸ ಪದ್ಯಗಳನ್ನು ಸೃಷ್ಟಿಸಿದ.ಈ ಹೊಸ ಸಾಲುಗಳನ್ನು ಕೇಳಿದ್ದೆ ತಡ ಖುರೈಷಿಗಳ ದುಗುಡ ಮತ್ತಷ್ಟು ಹೆಚ್ಚಿತು.ನೆನ್ನೆಯಷ್ಟೆ ತಮ್ಮ ದೇವಾನುದೇವತೆಗಳ ಬಗ್ಗೆ ಸಹಾನುಭೂತಿಯ ಒಳ್ಳೆಯ ನುಡಿಗಳನ್ನಾಡಿದ್ದ ಮಹಮದ್ ಈಗ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಸಾಲುಗಳನ್ನೆ ಉದ್ಗರಿಸುತ್ತಿರುವುದು ಅವರನ್ನು ಇನ್ನಷ್ಟು ಕೆರಳಿಸಿತು.

ಇದೆ ಸಮಯದಲ್ಲಿ ಅಬಿಸೀನಿಯಕ್ಕೆ ವಲಸೆ ಹೋಗಿದ್ದವರು ಮೆಕ್ಕಾದ ಖುರೈಷಿಗಳು ಮಹಮದನ ನೂತನ ಧರ್ಮಕ್ಕೆ ಮತಾಂತರಿತವಾಗಿದ್ದಾರೆ ಎಂಬ ಗಾಳಿಸುದ್ದಿ ಕೇಳಿ ಹಿಂದಿರುಗಲಾರಂಭಿಸಿದ್ದರು.ಆದರೆ ಇಲ್ಲಿನ ವ್ಯತಿರಿಕ್ತ ಸ್ಥಿತಿ ಕಂಡು ಅವರಿಗೆ ಆಘಾತವಾಯಿತು.ಮಹಮದ್ ಖುರೈಶಿಗಳಿಗೆ ಪ್ರಕಟಿಸಿದ್ದ ರಿಯಾಯತಿಗಳನ್ನು ಹಿಂತೆಗೆದುಕೊಂಡಿದ್ದ.ಪುನಃಪುನಃ ವಿಗ್ರಹಾರಾಧನೆಗಳನ್ನು ಕಟುವಾಗಿ ಖಂಡಿಸಿ ಏಕದೇವತಾರಾಧನೆಗೆ ಕರೆಕೊಡಲಾರಂಭಿಸಿದ್ದ.ಖುರೈಷಿಗಳ ದೇವತೆಗಳನ್ನೆಲ್ಲ ಆತ ನಿರಾಕರಿಸಿದ್ದ.ತಮ್ಮ ಬಂಧು-ಮಿತ್ರರ ಸಹಕಾರಗಳಿಂದ ಈ ವಲಸೆಗಾರರು ಮರಳಿ ತಮ್ಮ ಹಳೆ ನಿವಾಸಗಳಲ್ಲಿ ನೆಲೆಸಲು ಪ್ರಯತ್ನಿಸಿದರೂ ಅದು ಹೆಚ್ಚುಕಾಲ ಸಾಗಲಿಲ್ಲ.ಮೊದಲಿಗಿಂತ ದುಪ್ಪಟ್ಟು ಹಿಂಸೆ,ಕಿರುಕುಳಗಳಿಂದ ಕೂಡಿದ ಖುರೈಷಿಗಳ ವೈರವನ್ನವರು ಇದೀಗ ಎದುರಿಸಬೇಕಾಯಿತು.ಈ ಪೀಡೆಯಿಂದ ಪಾರಾಗಲು ಮಹಮದ್ ಅವರನ್ನೆಲ್ಲ ಮರಳಿ ಅಬಿಸೀನಿಯಕ್ಕೆ ವಲಸೆ ಹೋಗುವಂತೆ ಪುಸಲಾಯಿಸಿ ಅದರಲ್ಲಿ ಯಶಸ್ವಿಯೂ ಆದ.ಈ ಬಾರಿ ನವ ಮತಾಂತರಿತ ಸುಮಾರು ನೂರು ಮಂದಿ ಹೀಗೆ ವಲಸೆಹೋದರು ಎನ್ನುತ್ತಾನೆ ಇತಿಹಾಸ ತಜ್ಞ ಕ್ಯಾರೆನ್ ಅರ್ಮೆಸ್ಟ್ರಾಂಗ್.

(ಇನ್ನೂ ಇದೆ....)

21 October 2011

ವಲಿ....(ಭಾಗ-5)

ಮಹಮದನ ನೂತನ ಧರ್ಮದ ವಿರುದ್ಧ ನಡೆದ ಅನೇಕ ಆರಂಭಿಕ ದ್ವೇಶಪೂರಿತ ಹೋರಾಟಗಳು ಇತಿಹಾಸಕಾರರಿಂದ ದಾಖಲಿಸಲ್ಪಟ್ಟಿವೆ.ಅವುಗಳಲ್ಲಿ ಪ್ರಸಿದ್ಧಿ ಪಡೆದ ಕಥೆಯೊಂದು ಹೀಗಿದೆ....'ಮುಸಬ್ ಇಬ್ನ ಒಮೈರ್' ಎಂಬ ಪ್ರಸಿದ್ಧ ಖುರೈಷಿ ಬುಡಕಟ್ಟಿನ ಯುವವ್ಯಕ್ತಿಯೊಬ್ಬ ಅಲ್ ಅಕ್ರಮನ ಮನೆಯಲ್ಲಿ ನಡೆಯುತ್ತಿದ್ದ ಮಹಮದನ ಮತಭೋದನೆಯಿಂದ ಪ್ರಭಾವಿತನಾಗಿ ಅವನ ಧರ್ಮಕ್ಕೆ ಮತಾಂತರಗೊಂಡ.ಅವನ ಈ ಉದ್ಧಟ ನಡುವಳಿಕೆಯಿಂದ ಕುಪಿತಗೊಂಡ ಅವನ ಹತ್ತಿರದ ಸಂಬಂಧಿಕರು ಅವನ ವಿರುದ್ಧ ಬಹಿಷ್ಕಾರ ಹಾಕಿದರು,ಅದರಲ್ಲೂ ಈ ಬಗ್ಗೆ ವಿಪರೀತ ನೊಂದುಕೊಂಡ ಆತನ ತಾಯಿ ತನ್ನ ನಿಲುವಿಗೆ ವಿರುದ್ಧವಾಗಿ ಮಗ ಮತಾಂತರಗೊಂಡದ್ದರಿಂದ ಮಗ ಹಾಗೂ ಮಹಮದನ ಮೇಲೆ ಕೆರಳಿ ಕೆಂಡವಾದಳು.ಅವಳ ಈ ಕೋಪ ಮಗನನ್ನು ಗೃಹಬಂಧನದಲ್ಲಿರುವ ಮೂಲಕ ಪರ್ಯಾವಸನಗೊಂಡಿತು.ಆದ್ರೆ ಆತ ಅದು ಹೇಗೊ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಅಬಿಸೀನಿಯಕ್ಕೆ ಓಡಿಹೋದ.ಅಲ್ಲಿಂದ ಕೆಲಕಾಲದ ಬಳಿಕ ಆತ ಮೆಕ್ಕಾಗೆ ಹಿಂದಿರುಗಿದಾಗ ಆತನ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು.ಆದರೆ ಮಗನ ಬಗ್ಗೆ ಕಠಿಣ ನಿಲುವು ತೆಳೆದಿದ್ದ ತಾಯಿ ಆತನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ,ಹೀಗಾಗಿ ವಿಧಿಯಿಲ್ಲದೆ ಆತ ಕ್ಯಾರವಾನ್ ಒಂದರ ಹಿಂದೆ ಅಲೆಮಾರಿಯಾಗಿ ಎತ್ತಲೊ ಹೋಗಬೇಕಾಯಿತು.ಇದಾಗಿ ಎರಡುವರ್ಷಗಳ ನಂತರ ಆತ ಮರಳಿ ಮೆಕ್ಕಾಕ್ಕೆ ಬಂದ.ಆಗಲೂ ಅವನ ಪರಿಸ್ಥಿತಿ ಹೆಚ್ಚು ಸುಧಾರಿಸಿರಲಿಲ್ಲ.ಈ ಸಾರಿ ಆತನ ಕಡೆಗೆ ಕೊಂಚ ಮೃದುವಾಗಿದ್ದ ಆತನ ತಾಯಿ ಹಳೆಯ ಮಮತೆಯಿಂದ "ಈಗಲೂ ನೀನು ಸ್ವ-ಮತ ಭ್ರಷ್ಟನಾಗಿದ್ದೀಯ?" ಎಂದು ಪ್ರಶ್ನಿಸಿದಳು.ಆತ "ನಾನು ಸತ್ಯಧರ್ಮವಾದ ಇಸ್ಲಾಮನ್ನು ಹಾಗೂ ಪ್ರವಾದಿಯನ್ನು ಹಿಂಬಾಲಿಸುತ್ತಿದ್ದೇನೆ!" ಎಂದು ಉತ್ತರಿಸಿದ."ಬಾಳಿನ ಉದ್ದಕ್ಕೂ ಹೀಗೆಯೆ ಶೋಚನೀಯ ಸ್ಥಿತಿಯಲ್ಲೆ ಕಾಲ ಹಾಕಬೇಕೆನ್ನುವುದೆ ನಿನ್ನ ಅಂತಿಮ ನಿರ್ಧಾರವ?" ಎಂದಾಕೆ ಮರಳಿ ಪ್ರಶ್ನಿಸಿದಳು.ತನ್ನನ್ನು ಈಕೆ ಮತ್ತೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂಬ ಆತಂಕಕ್ಕೆ ಒಳಗಾದ ಆತ "ಏನು ಒಬ್ಬ ಶ್ರದ್ಧಾವಂತ ಮುಸ್ಲೀಮನನ್ನು ಧರ್ಮ ತ್ಯಜಿಸಲು ನೀನು ಆಮಿಷ ಒಡ್ಡುತ್ತಿದ್ದೀಯ! ಹಾಗೊಂದು ವೇಳೆ ನನ್ನನ್ನು ಇಚ್ಛೆಗೆ ವಿರುದ್ಧವಾಗಿ ಬಂಧನಕ್ಕೆ ಒಳಪಡಿಸಿದೆಯಾದಲ್ಲಿ ನಾನು ನಿನ್ನನ್ನು ಕೊಲ್ಲಲೂ ಹೇಸುವುದಿಲ್ಲ?!" ಎಂದು ಆವೇಶದಿಂದ ಕೂಗಿದ.ತಾಯಿಯೂ ಕನಲಿ "ತೊಲಗು! ಹಾಗಿದ್ದಲ್ಲಿ ಕ್ಷಣ ಮಾತ್ರವೂ ನನ್ನೆದುರು ನಿಲ್ಲಬೇಡ!!" ಎಂದು ಕೂಗಿದಳು.ಆತ ದುಃಖತಪ್ತನಾಗಿ " ಅಮ್ಮಾ,ನಿನಗೆ ಕರುಣಾಮೃತವಾದ ಉಪದೇಶ ನೀಡುತ್ತೇನೆ ಕೇಳು.ದೇವರೊಬ್ಬನೇ ಮಹಮದ್ ಆತನ ಸೇವಕ ಹಾಗೂ ಪ್ರವಾದಿ ಎನ್ನುವುದನ್ನ ನುಡಿದು ನರಕದಿಂದ ಪಾರಾಗು" ಎಂದು ನುಡಿದಾಗ ಆಕೆಗೆ ಕೋಪ ಕಟ್ಟೆಯೊಡೆದು " ನಿನ್ನ ಸೈತಾನಧರ್ಮಕ್ಕೆ ಸೇರುವ ಬೆಪ್ಪಳಾಗಲಾರೆ! ತೊಲಗು ಇಲ್ಲಿಂದ, ಇಂದಿಗೆ ನೀ ನನ್ನ ಪಾಲಿಗೆ ಸತ್ತೆ" ಎಂದು ಚೀರಿದಳು.


ಮಹಮದ್ ಆರಂಭದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ ಸಮಾಜದ ಕೆಳವರ್ಗದ ಮಂದಿಯನ್ನ ತನ್ನ ಪ್ರಭಾವಲಯದೊಳಗೆ ಮೆಕ್ಕಾದ ಸುತ್ತಮುತ್ತ ಸೆಳೆದುಕೊಳ್ಳುವ ಪ್ರಯತ್ನಮಾಡಿದ.ಅನಂತರ ಖುರೈಶಿಗಳಲ್ಲಿ ಪ್ರತಿಷ್ಠಿತವಾದವರತ್ತ ತನ್ನ ಮೋಹಜಾಲ ಬೀಸಲು ಆರಂಭಿಸಿದ.ಹೀಗೊಮ್ಮೆ ಖುರೈಶಿಗಳಲ್ಲೇ ಉನ್ನತ ವರ್ಗದವನಾಗಿದ್ದ ಅಲ್ ವಾಲಿಬನೊಡನೆ ಧಾರ್ಮಿಕ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗ ಅಬ್ದುಲ್ಲಾ ಇಬ್ನ ಉಮ್ಜ್ ಮಕ್ತೂಮ್ ಎಂಬ ಅಂಧ ವ್ಯಕ್ತಿಯೊಬ್ಬ ನಡುವೆ ಬಾಯಿಹಾಕಿ ತನಗೂ ಖುರಾನನ್ನು ತಿಳಿಹೇಳಬೇಕೆಂದು ಕೋರಿದ.ಆದರೆ ಆ ಕ್ಷಣ ಕೋಪಕ್ಕೆ ತುತ್ತಾದ ಮಹಮದ್ ಅವನ್ನು ಕಡೆಗಣಿಸಿ ಗಡುಸಾಗಿ ಮಾರುತ್ತರವನ್ನಿತ್ತ.ಆದರೆ ಕೆಲಹೊತ್ತಿನ ನಂತರ ತನ್ನ ಈ ಹೀನ ನಡುವಳಿಕೆಗೆ ಸ್ವತಃ ನಾಚಿಕೆಪಟ್ಟುಕೊಂಡು 'ಯಾವ ದೇವರು ಒಬ್ಬ ಕುರುಡನನ್ನು ಸೃಷ್ಠಿಸಿದ್ದಾನೊ ಅವನನ್ನು ನಾನು ಕಡೆಗಣಿಸಿದ್ದು ತಪ್ಪು,ತೋರಿಕೆಯ ಸಿರಿವಂತನ ಎದುರು ಅವನನ್ನು ಅನಾದರಿಸಬಾರದಿತ್ತು ಎಂದು ಗೋಳಾಡಿದಾಗ ಸಂತೈಸುವ ದೈವವಾಣಿ ಅವನಿಂದಲೆ ಹೊರಬಂತು.ಹಾಗೆ ಹೊರ ಹೊಮ್ಮಿದ್ದೆ ಸುರಾ 80/1-11 ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಈ ಘಟನೆಯ ಮುಖಾಂತರ ದೀನ ದಲಿತರ ಬಗ್ಗೆ ಉದಾತ್ತ ಭಾವನೆಯೊಂದು ಮಹಮದನ ಹೃದಯವನ್ನು ಹೊಕ್ಕು ಪ್ರಕಾಶಿಸಿತು ಎನ್ನಬಹುದು.

ಇದೆ ಸಮಯದಲ್ಲಿ ಆತನ ಮತಪ್ರಚಾರದ ದಿಕ್ಕು ಅರಬೇತರರಾದ ಗ್ರೀಕ್ ಸಮುದಾಯಕ್ಕೆ ಸೇರಿದ ಕ್ರೈಸ್ತರ ಕಡೆಗೆ ತಿರುಗಿತು.ಗುಲಾಮನಾಗಿ ಅರಬ್ಬಿ ಬೆದಾವಿನ್ ಬುಡಕಟ್ಟಿಗೆ ಮಾರಲ್ಪಟ್ಟಿದ್ದ ಸಿನಾನನ ಮಗ ಸಾಹೇಬ್ ಎಂಬ ಗ್ರೀಕನೊಬ್ಬ ಈ ಹೊತ್ತಿಗೆ ಇಸ್ಲಾಂ ಸ್ವೀಕರಿಸಿದ.ಮೆಕ್ಕಾದ ಪ್ರಮುಖ ವ್ಯಕ್ತಿಯಾಗಿದ್ದ ಇಬ್ನ ಜುಡಾನನ ಗುಲಾಮನಾಗಿದ್ದ ಅಪ್ಪಟ ಬಿಳಿಯ ಜನಾಂಗದ ಇವನಿಂದ ಕ್ರೈಸ್ತಧರ್ಮದ ಹಲವು ಒಳಮರ್ಮಗಳನ್ನು ಮಹಮದ್ ಅರಿತು ಬಳಸಿಕೊಳ್ಳಲು ಸಾಧ್ಯವಾಯಿತು,ಅದನ್ನೆ ಸುರಾ 4/164-183ರಲ್ಲಿ ಕಾಣಬಹುದು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಕುರಾನಿನಲ್ಲಿ ಒಟ್ಟು ಇಪ್ಪತೈದು ಪ್ರವಾದಿಗಳ ಹೆಸರು ಪ್ರಸ್ತಾಪವಾಗಿದೆ.ಅವರಲ್ಲಿ ಮಹಮದ್,ನೂರ್.ಇಬ್ರಾಹಿಮ್,ಜೀಸಸ್ ಹಾಗೂ ಮೂಸಾ ಈ ಐವರಿಗೆ ಪ್ರಬಲ ಆತ್ಮಸ್ಥೈರ್ಯವಿರುತ್ತದೆ ಎನ್ನಲಾಗಿದೆ.

ದಿನಕಳೆದಂತೆ ಹೊಸತಾಗಿ ಮತಾಂತರಿತವಾಗಿದ್ದ ದೀನ,ದಲಿತ ಹಾಗೂ ಗುಲಾಮರ ಮೇಲೆ ಧರ್ಮನಿಷ್ಠ ಖುರೈಷಿಗಳ ಕೆಂಗಣ್ಣು ಬಿಟ್ಟು.ಅವರನ್ನು ಹಿಡಿದು ದೈಹಿಕವಾಗಿ ಹಿಂಸಿಸುವುದು,ಸೆರೆಮನೆಗೆ ತಳ್ಳುವುದು,ಹನಿನೀರನ್ನೂ ಕೊಡದೆ ಸುಡುಬಿಸಿಲಿನಲ್ಲಿ ನಿಲ್ಲಿಸಿ ವಿಧಿಯಿಲ್ಲದೆ ಮರಳಿ ಮಾತೃಧರ್ಮಕ್ಕೆ ಬರುವಂತೆ ಮಾಡುವುದು ಹೀಗೆ ಅನೇಕ ಕುಟಿಲೋಪಾಯಗಳನ್ನು ಅವರು ಹೂಡತೊಡಗಿದರು.ಈ ಬಗೆಯ ಹಿಂಸೆ ಅನುಭವಿಸಿದವರಲ್ಲಿ ಒಬ್ಬನಾಗಿದ್ದ ಬಿಲಾಲ್ ಎಂಬ ಗುಲಾಮ ಮಾತ್ರ ಸುತಾರಾಂ ಅದಕ್ಕೆ ಒಪ್ಪದೆ 'ಅಹಾದ್ ಅಹಾದ್' ಅಂದರೆ ಅರಬ್ಬಿಯಲ್ಲಿ 'ದೇವರೊಬ್ಬನೆ...ಒಬ್ಬನೇ ದೇವರು' ಎಂದು ಕಷ್ಟದಲ್ಲಿದ್ದರೂ ಜಪಿಸಹತ್ತಿದ.ಅವನ ಬಾಯಿಯಿಂದ ಹೊರಬರುತ್ತಿದ್ದ ಈ ಶಬ್ದಗಳನ್ನು ಆಲಿಸಿದ ಅದೆ ದಾರಿಯಲ್ಲಿ ಸಾಗುತ್ತಿದ್ದ ಅಬು ಬಕರ್ ಈ ಶೋಷಣೆಗೆ ಮನನೊಂದು ಕರುಣೆಯಿಂದ ಅವನ ಒತ್ತೆಹಣ ಪಾವತಿಸಿ ಅವನನ್ನು ಗುಲಾಮಗಿರಿಯಿಂದ ಬಿಡಿಸಿದ.

ಇತ್ತ ಮಹಮದನ ಮತಾನುಯಾಯಿಗಳ ಪರಿಸ್ಥಿತಿ ಹೀಗೆ ಹದಗೆಡುತ್ತಿದ್ದರೆ ಅತ್ತ ಮಹಮದ್ ಮಾತ್ರ ಕ್ಷೇಮದಿಂದಿದ್ದ.ಅವನ ದೊಡ್ಡಪ್ಪ ಅಬು ತಾಲಿಬನ ರಕ್ಷಣೆಯಲ್ಲಿ ಅವನನ್ನು ಮುಟ್ಟುವ ಧೈರ್ಯ ಯಾವ ಖುರೈಶಿಗಳಿಗೂ ಹುಟ್ಟಿರಲಿಲ್ಲ.ಅಬು ತಾಲಿಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರಿತನಾಗಿರದಿದ್ದರೂ ಮಹಮದನ ಪ್ರಭಾವಕ್ಕೆ ಒಳಗಾಗಿದ್ದಂತೂ ಸತ್ಯ.ಅಲ್ಲದೆ ಅನಾಥನಾಗಿದ್ದ ಮಹಮದನ ಮೇಲೆ ಆತನಿಗೆ ಪ್ರೀತಿ ವಾತ್ಸಲ್ಯ ಅಪಾರವಾಗಿದ್ದ ಕಾರಣ ಆತನ ರಕ್ಷಣೆ ತನ್ನ ಹೊಣೆಗಾರಿಕೆ ಎಂಬಂತೆ ಆತ ವರ್ತಿಸುತ್ತಿದ್ದ.ಅದೆ ರೀತಿ ಪ್ರತಿಷ್ಠಿತ ಖುರೈಶಿವರ್ಗಗಳ ಭರ್ತ್ಸನೆಗಳಿಂದ ಅಬು ಬಕರ್ ಮಹಮದನನ್ನು ಪಾರುಮಾಡುತ್ತಿದ್ದ.ಒಂದು ಕುಟುಂಬ ಮತಾಂತರಿತವಾದರೆ ಇಷ್ಟವೋ-ನಷ್ಟವೋ ಅವರ ಸಂಬಂಧಿ ಕುಟುಂಬಸ್ತರು ಒಲ್ಲದ ಮನಸ್ಸಿನಿಂದಲಾದರೂ ನೆರವು ಸಹಕಾರಗಳನ್ನು ಜಾರಿಯಲ್ಲಿ ಇಟ್ಟುಕೊಂಡೆ ಇರುತ್ತಿದ್ದರು.ಆದರೆ ಒಂದಿಡಿ ಬುಡಕಟ್ಟಿಗೆ ಬುಡಕಟ್ಟೆ ಮತಾಂತರವಾದರೆ ಮಾತ್ರ ಅದರ ವಿರೋಧಿ ಬುಡಕಟ್ಟಿನವರಿಂದ ಹಲ್ಲೆಗೆ ಒಳಗಾಗುವ ಸಂದರ್ಭಗಳೆ ಹೆಚ್ಚಾಗಿದ್ದವು.ಹೀಗಾಗಿ ಸ್ವತಃ ತಾನು ಸುರಕ್ಷಿತನಾಗಿದ್ದರೂ ತನ್ನನ್ನು ನಂಬಿ ಬಂದವರ ಸುರಕ್ಷತೆಯ ಬಗ್ಗೆ ಸಹಜವಾಗಿ ಮಹಮದ್ ಆತಂಕಿತನಾಗಿದ್ದ.ಹೀಗಾಗಿ ಅವರಲ್ಲಿ ಆನೇಕರಿಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಾಣವುಳಿಸಿಕೊಳ್ಳಲು ಅಬಿಸೀನಿಯಾಕ್ಕೆ ವಲಸೆ ಹೋಗುವ ಸಲಹೆ ನೀಡಿದ.ಆಗಿನ ಕಾಲದ ಅಬಿಸೀನಿಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲೆಸಿದ್ದುದೆ ಅದಕ್ಕೆ ಕಾರಣ.ಅಲ್ಲದೆ ಅಲ್ಲಿಗೆ ವಲಸೆ ಹೋಗುವುದು ಸಾಮಾನು ಸರಂಜಾಮುಗಳ ಸಾಗಣೆಯ ದೃಷ್ಟಿಯಿಂದ ಸುಲಭದ್ದಾಗಿತ್ತು.ಹೀಗೆ ಆತನ ಆದೇಶದಂತೆ ಆರಂಭದಲ್ಲಿ ಮಹಮದನ ಸ್ವಂತ ಪುತ್ರಿ ರೋಕೈಯಾ ಹಾಗೂ ಆಕೆಯ ಪತಿ ಒತ್ಥಮಾನನೂ ಸೇರಿದಂತೆ ಹನ್ನೊಂದು ಮಂದಿ ವಲಸೆಹೋದರು.ಇದೆ ಮೊತ್ತ ಮೊದಲ 'ಹಿಜ್ರಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.

ಈ ವಲಸೆ ಆರಂಭವಾದ ಮೊದಲ ನಾಲ್ಕು ವರ್ಷಗಳಲ್ಲಿ ಮಹಮದನಿಗೆ ಕುರಾನ್ ಸಂದೇಶಗಳು ಸುಮಾರು ಇಪ್ಪತ್ತು ಸುರಾಗಳ ಮೂಲಕ ಹೊರಬಂದವು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಈ ಎಲ್ಲಾ ಸುರಾಗಳಲ್ಲಿ ಮಹಮದ್ 'ಸ್ವರ್ಗ-ನರಕಗಳ ಸ್ಥಿತಿಗತಿಗಳು,ಪುನರುತ್ಥಾನ (ಇಸ್ಲಾಮಿನಲ್ಲಿ ಪುನರ್ ಜನ್ಮದ ಕಲ್ಪನೆ ಇಲ್ಲ ಅನ್ನುವುದನ್ನು ಗಮನಿಸಿ),ಅಂತಿಮ ತೀರ್ಪಿನ ದಿನ,ಧರ್ಮಬದ್ಧರು-ನೀಚರು,ಯಕ್ಷ-ಬೇತಾಳ-ಪಿಶಾಚಿಗಳು ಮಹಮದನ ಉದ್ದೇಶಕ್ಕೆ ಅನುಗುಣವಾಗಿ ಚಾಕಚಾಕ್ಯತೆಯಿಂದ ನುಡಿಯುವ ಚಿತ್ರಣದ ವಿವರಣೆ ತುಂಬಿದೆಅನ್ನುತ್ತಾನೆ' ಇತಿಹಾಸಕಾರ ಮ್ಯೂರ್.

(ಇನ್ನೂ ಇದೆ...)

20 October 2011

ಕಡೆಯದೊಂದು ನಿರೀಕ್ಷೆಯ ಹನಿಯಿದೆ....

ಚಿತ್ತ ಕದಡುವ ಮಾತೇಕೆ? ಅದ ಬಿಡು
ಮೌನದ ನಾವೆಯಲ್ಲೆ ಇನ್ನೊಂದು ಸುತ್ತು....
ಸುಮ್ಮನೆ ಸಾಗೋಣ,
ನೀ ನನ್ನ ಹೀಗೆ ನೋಡುತ್ತಿರು....
ನನ್ನ ಕಣ್ಣ ಕನ್ನಡಿಯಲ್ಲಿ ಎಂದಿಗೂ ನೀನೆ ಕಾಣುತ್ತಿರು,
ಮತ್ತೆ ಒಂದಾಗಿ ದೂರ ಸರಿಯೋಣ ಬಾ....!/
ಎದೆಯ ಅಂಗಳದಲ್ಲಿ ಬಿಡಿಸಿದ ಚಿತ್ತಾರಗಳೆಲ್ಲ
ನಿನ್ನೊಂದು ನುಡಿಗೆ ಕದಡಿಹೋದಾಗ....
ನಾನು ನಿಜವಾಗಿಯೂ ಬಾಳಲ್ಲಿ ಸೋತೆ,
ಇನ್ನುಳಿದುದಿರಲಿ ಕನಿಷ್ಠ ನಿನ್ನೊಲವನ್ನೂ ಗಟ್ಟಿ ಮಾಡಿಕೊಳ್ಳುವ ಯೋಗ್ಯತೆಯಿಲ್ಲದೆ
ತಿರುಕನಂತೆ ಕಂಡಿದ್ದ ಕನಸುಗಳನ್ನೆಲ್ಲ ನೋವಿನ ಜೊತೆ ಗತದ ಗೋರಿಯಲ್ಲಿ ನಗುತಲೆ ಹೂತೆ....!//


ಮೌನವ ತೋಯಿಸುವ ನೆನಪುಗಳ ಸಿಂಚನಕ್ಕೆ
ಒಡ್ಡಿಕೊಂಡ ಮನದ ಮಾಡಿನಿಂದ ....
ಎದೆಯಂಗಳಕ್ಕೆ ಇಳಿಯುತ್ತಿರುವ ಪ್ರತಿ ಹನಿಯಲ್ಲೂ,
ಆಳದಲ್ಲಿ ನಿನ್ನದೇ ಪಿಸುದನಿಯಿದೆ/
ಅದೇನೆ ಮರೆತೆನೆಂದು ಕಳ್ಳ ಸಮಾಧಾನ ನನಗೆ ನಾನೆ ಹೇಳಿಕೊಂಡರೂ...
ನಿನ್ನೊಲವ ಮಳೆ ನಿಂತಿದ್ದರೂನು,
ಅದೆಲ್ಲೊ ಕಣ್ಣಿನಾಳದಲ್ಲಿ ಕನಸ ಸೂರಿನಿಂದ ತೊಟ್ಟಿಕ್ಕುತ್ತಿರುವ
ಕಡೆಯದೊಂದು ನಿರೀಕ್ಷೆಯ ಹನಿಯಿದೆ//


ಸತ್ತ ಭಾವಗಳ ಗೋರಿ ಕಾಯುತ
ಅವ್ಯಕ್ತ ವಾಂಛೆಗಳ ಬಚ್ಚಿಟ್ಟುಕೊಂಡ....
ನನ್ನ ನಿರ್ಜೀವ ಕಂಗಳಲ್ಲಿ ನೀನೊಂದು ಹೊಳಪು ಮಾತ್ರ,
ನಾ ಬಯಸಿದರೂ ಅಳಿಸಿ ಹಾಕಲಾಗದ ನಮ್ಮಿಬ್ಬರ ಗತದ ನೆನಪುಗಳಲ್ಲಿ
ಹುದುಗಿರುವ ನೀನು ಈ ಬಾಳಲ್ಲಿ ಅಚ್ಚಳಿಯದ ಒಂದು ಪಾತ್ರ/
ನಿರೀಕ್ಷೆ ಸತ್ತ ಖಾಲಿ ಕನಸಿನ ಹಾದಿಯಲ್ಲಿ....
ನೀನಿಲ್ಲದೆ ನನ್ನದು ಕುರುಡು ಪಯಣ,
ನೋವಂತೂ ವಿವರಿಸಲಾಗದಷ್ಟು ಭೀಕರ
ಒಡೆದಿದೆ ಹೃದಯದಲ್ಲಿ ನೀ ಮೊಳಕೆಯೊಡೆಸಿದ್ದ....
ಒಂಟಿತನ ಮಾಗಿಸಿರುವ ನೋವಿನ ವೃಣ//


ಕನಸುಗಳ ಸಾಲ ನೀ ಕೊಟ್ಟಿದ್ದೆ
ಅದರ ಬಡ್ಡಿಯನ್ನೂ ಕಟ್ಟಲಾಗದೆ....
ನಾನಾದೆ ವಿಫಲ ಸಾಲಗಾರ,
ಮೌನದ ಹೆಣ ಕಾಯುವ ವೀರಬಾಹುವಿನ ನೌಕರಿ ಸಾಕು ಸಾಕಾಗಿದೆ....
ಬೇಕಿದೆ ಇನ್ನಷ್ಟು ನಿನ್ನ ಪ್ರೀತಿಯ ಪಗಾರ/
ಕನಸ ಕೊಲೆಯಾದ ನಂತರವೂ
ಮನಸು ಅರಳೋದು ತಾನೆ ಹೇಗೆ?,
ನಿರಂತರ ನಿರೀಕ್ಷೆಗಳ ಸುಡುತ್ತಿರುವಾಗ ಬಾಳಿನುದ್ದ
ನೀನಿಲ್ಲದ ವಿರಹದ ಬೇಗೆ//

19 October 2011

ವಲಿ....(ಭಾಗ-4)

ಈ ಧಾರ್ಮಿಕ ಗುಪ್ತಸಂಘದ ಸದಸ್ಯರು ತಾವು ಕೇವಲ ಧಾರ್ಮಿಕ ಕಾರಣಗಳಿಂದ ಮಾತ್ರ ಹೀಗೆ ಮತಾಂತರಿತಗೊಂಡಿದ್ದೇವೆ ಎಂದು ಬಿಂಬಿಸುತ್ತಿದ್ದರೂ ಗುಲಾಮಗಿರಿಯೆಂಬ ನರಕದಿಂದ ಪಾರಾಗುವುದೆ ಬಹುತೇಕರ ಒಳ ಉದ್ದೇಶವಾಗಿತ್ತು.ಅಲ್ಲದೆ ಇಸ್ಲಾಮಿನಲ್ಲಿ ಪಾಪ-ಪುಣ್ಯಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಿ,ಪುಣ್ಯವಂತರು ಸ್ವರ್ಗವಾಸಿಗಳಾಗುತ್ತಾರೆ ಹಾಗೂ ಪಾಪಿಗಳು ನರಕದ ಉರಿಜ್ವಾಲೆಯಲ್ಲಿ ಬೆಂದುಹೋಗುತ್ತಾರೆ ಎಂದು ನಂಬಿಕೆ ಹುಟ್ಟಿಸಿದ್ದು ಕೂಡ ಅತಿಹೆಚ್ಚಿನ ಸಂಖ್ಯೆಯ ಧರ್ಮಬೀರುಗಳು ಮತಾಂತರವಾಗಿ ನರಕದ ಜ್ವಾಲೆಯಿಂದ ಪಾರಾಗಲು ಮಾಡಿದ್ದ ಲೌಕಿಕ ಪ್ರಯತ್ನವೆ ಅನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ್ನ ಅನಿಸಿಕೆ.ಮಹಮದ್ ತನ್ನ ನೂತನ ಧರ್ಮಾನುಯಾಯಿಗಳಿಗೆ 'ಸಲಾಂ ಆಲೈಕುಂ' ಅಂದರೆ ಅರಬ್ಬಿಯಲ್ಲಿ 'ಶಾಂತಿಯಿರಲಿ ನಿನ್ನ ಮೇಲೆ"ಎಂಬ ಪರಸ್ಪರ ಹಾರೈಕೆಗಳ ವಿನಿಮಯದ ಆಚರಣೆ ಜಾರಿಗೆ ತರಲು ಅದಾಗಲೆ ಅಂತಹ ಹಾರೈಕೆಗಳ ಹಿನ್ನೆಲೆಯಿದ್ದ ಯಹೂದಿ ಹಾಗೂ ಕ್ರೈಸ್ತ ಧರ್ಮಗಳ ಪ್ರಭಾವದ ಕಾರಣದಿಂದಲೆ ಅನ್ನುವುದು ಮಾರ್ಗೊಲಿಯತ್ತನ್ನ ಹೇಳಿಕೆ.

ಮಹಮದನ ಇಸ್ಲಾಮನ್ನು ಅಪ್ಪಿಕೊಂಡವರನ್ನ 'ಮುಸ್ಲಿಂ' ಇಲ್ಲವೆ 'ಹನೀಫಾ'ರೆಂದು ಕರೆಯಲಾಯಿತು.ಹೀಬ್ರೂ ಭಾಷೆಯಲ್ಲಿ 'ಹನೀಫಾ' ಎಂದರೆ 'ಆಷಾಢಭೂತಿ' ಎಂದೂ ಸಿರಿಯಾಕ್ ಭಾಷೆಯಲ್ಲಿ 'ಪಾಷಂಡಿ' ಎಂಬರ್ಥ ಬರುತ್ತದೆ,ಸಿರಿಯಾಕಿನಲ್ಲಿ 'ಮುಸ್ಲಿಂ' ಎಂದರೆ 'ವಿಶ್ವಾಸಘಾತುಕ' ಎಂದರ್ಥ! ಹಾಗೆ ನೋಡಿದರೆ ಇಸ್ಲಾಮಿಗಿಂತಲೂ ಹಿಂದೆಯೆ ಅರೇಬಿಯಾದಲ್ಲಿ ಏಕದೈವಾರಾಧಕರಿದ್ದು ಅವರನ್ನೂ ಸಹ 'ಹನೀಫಾ'ರೆಂದೆ ಕರೆಯಲಾಗುತ್ತಿತ್ತು,ಅನಂತರ ಇಸ್ಲಾಂ ಅನುಯಾಯಿಗಳಿಗೂ ಇದೆ ಹಣೆಪಟ್ಟಿ ಮುಂದುವರೆಯಿತಷ್ಟೆ.ಇದು ಮಹಮದನ ಧರ್ಮವಿರೋಧಿಗಳು ಕುಚೋದ್ಯದಿಂದ ಗೇಲಿಮಾಡಲು ಕೊಟ್ಟಿರಬಹುದಾದ ಹೆಸರಾಗಿರುವ ಸಾಧ್ಯತೆಯೂ ಇದೆ ಎನ್ನುವ ಇತಿಹಾಸಕಾರ ಮೂಯಿರ್ ಹಂಗಿಸುವ ಅರ್ಥದಲ್ಲಿ ಹೀಗೆ ಕರೆಯಲಾಯಿತು ಎಂದಿದ್ದಾನೆ.ಆದರೆ ಮುಂದಿನ ದಿನಗಳಲ್ಲಿ ಮಹಮದ್ ಅದನ್ನೇ ಮುಸಲ್-ಉಲ್-ಇಮಾನ್ ಎಂದು ಉಚ್ಚರಿಸಿ ಹೊಸತೆ ಗೌರವಾರ್ಹವಾದ ಅರ್ಥಕಲ್ಪಿಸುವುದರಲ್ಲಿ ಸಫಲನಾದ.ಒಂದುದಿನ ಧೈರ್ಯ ಮಾಡಿ ಮಹಮದ್ ಕಾಬಾದ ಬಳಿಯೆ ನಿಂತು ಬಹಿರಂಗವಾಗಿ ತನ್ನ ಮತಪ್ರಚಾರವನ್ನು ಆರಂಭಿಸಿದ.ಅಲ್ಲಿ ನೆರೆದ ಜನರ-ಜಂಗುಳಿಯನ್ನು ಉದ್ದೇಶಿಸಿ "ಅಲ್ಲಾ ಒಬ್ಬನೆ ನಿಜವಾದ ದೈವ,ಅವನ ವಿನಃ ಇನ್ಯಾವ ದೈವವಿಲ್ಲ" (ಅಲ್ಲಾ ಹೋ ಅಕ್ಬರ್) ಎಂದು ನಿರಂತರವಾಗಿ ಕೂಗಿಕೂಗಿ ಹೇಳಲು ಆರಂಭಿಸಿದ.ಅವನ ಮಾತಿನಿಂದ ರೊಚ್ಚಿಗೆದ್ದ ಅಲ್ಲಿ ನೆರೆದಿದ್ದ ಬಹುಮಂದಿ ಅವನ ಮೇಲೆ ಹಲ್ಲೆ ನಡೆಸಲು ಶುರುವಿಟ್ಟರು.ಹೀಗೆ ಆತ ಆಪತ್ತಿನಲ್ಲಿ ಸಿಲುಕಿಕೊಂಡಿರುವ ಸಂಗತಿ ಖತೀಜಾ ಕುಟುಂಬಕ್ಕೆ ತಲುಪಿತು.ಆಕೆಯ ಮೊದಲ ಗಂಡ ಅಬು ಹಾಲತ್'ನ ಮಗ ಅಲ್ ಹಾರುಥ್ ತನ್ನ ಮಲತಂದೆಯ ರಕ್ಷಣೆಗಾಗಿ ಕೂಡಲೆ ಧಾವಿಸಿದ.ನಡೆದ ಕಾದಾಟದಲ್ಲಿ ವಿರೋಧಿಗಳು ಅವನನ್ನು ಅಲ್ಲಿಯೆ ಹೊಡೆದುಕೊಂದರು.ಹೀಗಾಗಿ ಅವನು ಇಸ್ಲಾಮಿನ ಪ್ರಪ್ರಥಮ 'ಹುತಾತ್ಮ'ನ ಪಟ್ಟ ಗಳಿಸಿಕೊಂಡ ಅನ್ನುತ್ತಾನೆ ಇತಿಹಾಸಕಾರ ಮಾರ್ಗೊಲಿಯತ್.

"ತಾನು ದೇವದೂತ,ಹೊಸ ಮತವೊಂದರ ಆರಂಭಕ್ಕೆ ದೇವರು ಪ್ರೇರೇಪಿಸಿ ತನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ" ಎಂಬ ಮಹಮದನ ಪ್ರಚಾರವನ್ನ ಕಾಬಾದ ಹುಬಾಬ್ ಸಹಿತ ಇನ್ನುಳಿದ 360 ದೇವರ ಅಚಲ ವಿಶ್ವಾಸಿಗಳಾಗಿದ್ದ ಬಹುತೇಕ ಮೆಕ್ಕಾ ನಿವಾಸಿಗಳು ಬಲವಾಗಿ ವಿರೋಧಿಸಲು ಆರಂಭಿಸಿದರು.ತಮಾಷೆಯೆಂದರೆ ಅವರು ಆರಾಧಿಸುತ್ತಿದ್ದ ಹುಬಾಬ್ ಹೊರತುಪಡಿಸಿದ ಇನ್ನುಳಿದ ಮೂರ್ತಿಗಳಲ್ಲಿ ಅಲ್ಲಾನದ್ದೂ ಒಂದು ಪ್ರತಿಮೆ ಇತ್ತು.ಅದಕ್ಕೂ ನಿತ್ಯ ಪೂಜೆ ಸಲ್ಲುತ್ತಿತ್ತು! ಜನರು ಮಹಮದನಿಗೆ ಜಿನ್ ಅಂದರೆ ದೆವ್ವ ಮೆಟ್ಟಿಕೊಂಡಿದೆ ಎಂದು ತಲೆಗೊಬ್ಬರಂತೆ ಆಡಿಕೊಳ್ಳಲು ಆರಂಭಿಸಿದರು.ಅವರ ಈ ಆಪಾದನೆ ಮಹಮದನನ್ನು ತೀವ್ರವಾಗಿ ಘಾಸಿಗೊಳಿಸಿತು. ಇದರಿಂದ ಅವನು ಬೇಸರಕ್ಕೆ ತುತ್ತಾದ.ಅದನ್ನೆ ಅವನು ಕುರಾನಿನ ಸುರಾಗಳ ಮೂಲಕ (ಸುರಾ 67/24-27) ತೋಡಿಕೊಂಡ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.ಸುಮಾರು ಹತ್ತುವರ್ಷಗಳವರೆಗೆ ಹೀಗೆಯೆ ವಿರೋಧಿಗಳ ನಡುವೆ ಮೆಕ್ಕಾದಲ್ಲಿಯೆ ಬಾಳಿ ಬದುಕಿದ ಮಹಮದ್ ತನ್ನ ಮತಪ್ರಚಾರ ಯಶಸ್ವಿಯಾಗಿ ಕೈಗೊಳ್ಳಲು ಮಹಮದನ ಪತ್ನಿ ಖತೀಜಳ ಅರ್ಪಣಾ ಭಾವದಿಂದ ಕೂಡಿದ ಭಕ್ತಿ ಹಾಗೂ ಆಕೆಯ ಸಂಪತ್ತಿನ ಪ್ರಭಾವದಿಂದ,ಅಲ್ಲದೆ ದೊಡ್ಡಪ್ಪ ಅಬು ತಾಲಿಬ್'ನ ಪ್ರೀತಿ ಒಲುಮೆ ವಿಶ್ವಾಸ ಹಾಗೂ ಅಬು ಬಾಕರ್'ನ ಪ್ರೇರೇಪಣಾಗುಣದಿಂದ ಹಾಗೂ ಅಂಧ ವಿಶ್ವಾಸಗಳಿಂದ ಮಾತ್ರ ಸಾಧ್ಯವಾಯಿತು ಅನ್ನೋದು ಇತಿಹಾಸಕಾರ ಮ್ಯೂರನ ಅಂಬೋಣ.

ದೊಡ್ಡಪ್ಪ ಅಬುತಾಲೀಬನ ಸಮಯಪ್ರಜ್ಞೆಯಿಂದ ಅನೇಕಬಾರಿ ಖುರೈಷಿಗಳಿಂದ ಒದಗಿಬರಬಹುದಾಗಿದ್ದ ಅತಿ ಹಿಂಸೆ ಅಥವಾ ಪ್ರಾಣಹಾನಿಯಿಂದ ಮಹಮದ್ ತಪ್ಪಿಸಿಕೊಂಡ.ಆದರೆ ಅಪರೂಪವಾಗಿ ಇಸ್ಲಾಮಿಗೆ ಮತಾಂತರವಾದ ಖುರೈಶಿಗಳಲ್ಲಿ ಕೆಲವರು ತಾವು ಅಪ್ಪಿದ ಹೊಸ ಧರ್ಮಕ್ಕಾಗಿ ಸ್ವಂತ ಹೆತ್ತವರ-ಒಡಹುಟ್ಟಿದವರ ವಿರುದ್ಧವೇ ಹೋರಾಡಿದ ನಿದರ್ಶನಗಳೂ ಕಂಡುಬಂದವು.ಧರ್ಮಪ್ರಚಾರದ ಹೊತ್ತಲ್ಲಿ ಪ್ರವಚನ,ಭಾಷಣ ಇಲ್ಲವೆ ಜನರನ್ನು ಉದ್ದೇಶಿಸಿ ಮಾತನಾಡಲು ಉಧ್ಯುಕ್ತನಾಗುತ್ತಿದ್ದ ಸಂದರ್ಭಗಳಲ್ಲಿ ಮಹಮದನ ಕೆನ್ನೆ ಕೆಂಪಗಾಗುತ್ತಿತ್ತು ಮತ್ತು ಧ್ವನಿ ತಾರಕಕ್ಕೆ ಏರುತ್ತಿತ್ತು.ಆ ಕ್ಷಣ ಸ್ವಭಾವ ಉಗ್ರವಾಗುತ್ತಿತ್ತು.ಆತ ಎಷ್ಟು ಪ್ರಬಲ ಭಾಷಣಕಾರನಾಗಿದ್ದನೊ ಅಷ್ಟೆ ಕೆಟ್ಟ ಚರ್ಚಾಪಟುವಾಗಿದ್ದನು.ತನ್ನ ಈ ನ್ಯೂನತೆಯನ್ನು ಬಹಳ ಚೆನ್ನಾಗಿ ಅರಿತಿದ್ದ ಆತ ಅಂತಹ ಪರಿಸ್ಥಿತಿಗಳಲ್ಲಿ ದೈವವಾಣಿಯ ಮೊರೆ ಹೋಗುತ್ತಿದ್ದ.ಅವಿಶ್ವಾಸಿಗಳ ಪ್ರಶ್ನೆಗಳಿಗೆ ತರ್ಕಬದ್ದ ಉತ್ತರ ನೀಡಲಾರದೆ ಅವರು ಅಲ್ಲಿಂದ ನಿರ್ಗಮಿಸುವಂತೆ ಸುರಾದ ಆಜ್ಞೆ ಪಡೆದುಕೊಂಡು ಅದನ್ನ ಪಾಲಿಸಿ ಪಾರಾಗುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.

ಮುಂದಿನ ನಾಲ್ಕು ವರ್ಷಗಳಲ್ಲಿ ಕೇವಲ ನಲವತ್ತು ಮಂದಿಯಷ್ಟೆ ಇಸ್ಲಾಮಿಗೆ ಪರವಶವಾದರು.ಮೊದಮೊದಲು ಈ ಬಗ್ಗೆ ಉದಾಸೀನರಾಗಿದ್ದ ಮೆಕ್ಕಾದ ಖುರೈಷಿಗಳು ಕ್ರಮೇಣ ಅದನ್ನ ಅಸಹನೆಗೆ ತಿರುಗಿಸಿಕೊಂಡರು.ಅರೇಬಿಯಾದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಬಾದ ಪ್ರಾಮುಖ್ಯತೆ ಮಹಮದನ ಧರ್ಮೊಪದೇಶದಿಂದ ಮುಕ್ಕಾದೀತು ಎಂಬ ಆತಂಕ ಅವರದ್ದಾಗಿತ್ತು.ಹೀಗೆಯೆ ಮುಂದುವರೆಯಲು ಬಿಟ್ಟರೆ ಕಾಬಾದ ಅಸ್ತಿತ್ವಕ್ಕೆ ಖಂಡಿತ ಸಂಚಕಾರ ಬರಲಿದೆ ಎಂಬುದನ್ನು ಅರಿತ ಖುರೈಷಿಗಳು ಹಿಂಸಾತ್ಮಕವಾಗಿ ಮಹಮದನ ಧರ್ಮಪ್ರಚಾರಕ್ಕೆ ಎದಿರೇಟು ಕೊಡಲು ಆರಂಭಿಸಿದರು.ಮತಾಂತರಗೊಂಡ ಒಬ್ಬನ ವಿರುದ್ಧ ಅವರು ದೌರ್ಜನ್ಯ ಎಸಗುತ್ತಿದ್ದಾಗ ಬಿಡಿಸಿಕೊಳ್ಳಲು ಬರುವ ನೆಂಟರೂ ಅವರ ಹಿಂಸೆಗೆ ತುತ್ತಾಗಬೇಕಾಗುತ್ತಿತ್ತು,ಯಾರೊಬ್ಬರ ನೈತಿಕ ಬೆಂಬಲವೂ ಸಿಗದ ಗುಲಾಮರ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದ್ದಿತು.

ಹೀಗೆ ಶುರುವಾದ ಖುರೈಷಿಗಳ ಹಿಂಸಾ ವಿನೋದದ ವಿರುದ್ಧವಾಗಿ ನೂತನ ಧರ್ಮಾನುಯಾಯಿಗಳು ಆತ್ಮರಕ್ಷಣೆಗೆ ಮುಂದಾದರು.ಅವರೂ ಹಿಂಸಾಚಾರಕ್ಕಿಳಿದರು.ಮಹಮದ್ ಹಾಗೂ ಆತನ ಅನುಯಾಯಿಗಳಿಗೆ ಅದು ಕ್ರಮೇಣ ರೂಢಿಯಾಗಿ ಸಹನೆ,ತಾಳ್ಮೆಗಳನ್ನೆಲ್ಲ ಕಿತ್ತೊಗೆದು ವಿರೋಧಿಗಳ ವಿರುದ್ಧ ನೇರಕಾರ್ಯಾಚರಣೆಗೆ ಅವರಿಳಿಯಲು ಇದರಿಂದ ಮೊದಲಾಯಿತು.ಕ್ರಿಸ್ತಶಕ 613ರ ಸುಮಾರಿಗೆ ಅದೂವರೆಗೂ ಗುಪ್ತವಾಗಿ ಸಾಗುತ್ತಿದ್ದ ಮಹಮದನ ಮತಪ್ರಚಾರ ತೀರ ಬಹಿರಂಗಗೊಂಡಿತು.ಆತ ಖುರೈಷಿಗಳ ವಿಗ್ರಹಾರಾಧನೆಯನ್ನ ಕಟುವಾಗಿ ಖಂಡಿಸಿದ.ಅವರ ಪಿತೃಗಳೂ ವಿಗ್ರಹಾರಾಧಕರಾಗಿ ಆತ್ಮನಾಶಕ್ಕೀಡಾಗಿದ್ದಾರೆ ಎಂದು ಆತ ಹೇಳಿದಾಗ ಖುರೈಷಿಗಳು ಕೆರಳಿ ನಿಂತರು.ಮೆಕ್ಕಾದ ಹೊರವಲಯದಲ್ಲಿ ಮಹಮದನ ಬಂಟ ಸಾದ್ ಬಹಿರಂಗವಾಗಿ ನಮಾಜ್ ಮಾಡುತ್ತಿದ್ದಾಗ ಅದನ್ನು ಕಂಡು ಕೋಪಗೊಂಡ ಖುರೈಷಿಗಳು ಕಲಹಕ್ಕೆ ನಾಂದಿ ಹಾಡಿದರು,ಜಗಳ ರಕ್ತಪಾತಕ್ಕೆ ತಿರುಗಿ ಒಂಟೆಯನ್ನು ಹೊಡೆಯುವ ಮೊನೆಗೋಲಿನಿಂದ ಸಾದ್ ವಿರೋಧಿಯೋಬ್ಬನನ್ನು ಅಲ್ಲಿಯೆ ಹೊಡೆದುಸಾಯಿಸಿದ.ಇತಿಹಾಸಕಾರ ತಮ್ಮಿಮಿಯ ಪ್ರಕಾರ ಇದು 'ಇಸ್ಲಾಮಿಗಾಗಿ ಚಲ್ಲಿದ ಮೊತ್ತ ಮೊದಲನೆಯ ರಕ್ತ'.

ಇದೆ ಸಮಯದಲ್ಲಿ ಪ್ರಾಯಶಃ ಮಹಮದ್ ನೂತನವಾಗಿ ಮತಾಂತರವಾಗಿದ್ದ ಅಕ್ರಂ ಎಂಬಾತನ ಮನೆಯನ್ನ ಆಶ್ರಯಕ್ಕಾಗಿ ಪಡೆದುಕೊಂಡು ಅಲ್ಲಿದ್ದುಕೊಂಡೆ ಮತಪ್ರಚಾರವನ್ನು ಮುಂದುವರೆಸಿದ.ಅದು ಕಾಬಾ ಗುಡಿಯ ಹತ್ತಿರದಲ್ಲೆ ಇದ್ದು ಅಲ್ಲಿಗೆ ಹೋಗಿ ಬರುವ ಯಾತ್ರಿಕರು ಸಾಗುವ ದಾರಿಯಲ್ಲೆ ಇದ್ದುದರಿಂದ ಜನಸಾಂದ್ರತೆ ಸಹಜವಾಗಿ ಹೆಚ್ಚಿದ್ದು ಪ್ರಚಾರಕ್ಕೆ ಹೆಚ್ಚಿನ ಅವಕಾಶಗಳು ಅಲ್ಲಿದ್ದವು.ಮುಂದೆ ಇದೆ 'ಇಸ್ಲಾಮಿನ ಮನೆ' ಎಂಬ ಪಟ್ಟ ಪಡೆಯಿತು.

(ಇನ್ನೂ ಇದೆ....)

ವಲಿ..... (ಭಾಗ-3)

ತನ್ನ ವಯಸ್ಸು ನಲವತ್ತರ ಸಮೀಪ ಮುಟ್ಟುತ್ತಿದ್ದ ಹಾಗೆ ಮಹಮದನ ಒಳಮನಸು ತೀವ್ರವಾಗಿ ಚಡಪಡಿಸಲು ಆರಂಭಿಸಿತ್ತು.ಸ್ವಭಾವತಃ ಅಂತರ್ಮುಖಿಯಾಗಿದ್ದ ಆತ ಈಗ ಹಿಂದಿಗಿಂತಲೂ ಹೆಚ್ಚಾಗಿ ಯೋಚನಾಪರನಾಗಿ ಕಾಲ ಕಳೆಯಹತ್ತಿದ್ದ.ಈ ಪರಿಯ ಆತ್ಮಾವಲೋಕನದ ಸಮಯದಲ್ಲಿ ಆತನಿಗೆ ದೈವತ್ವ ಹಾಗೂ ಧರ್ಮದ ಕುರಿತು ಜಿಜ್ಞಾಸೆ ಒಳಗೊಳಗೆ ಮೂಡಲುಆರಂಭಿಸಿತ್ತು.ಹೀಗೆ ಮುಕ್ಕಾದ ಸುತ್ತಲಿನ ಪರ್ವತದ ಕಣಿವೆಗಳಲ್ಲಿರುವ ಗುಹೆಗಳಲ್ಲಿ ದೀರ್ಘಕಾಲ ಏಕಾಂತದಲ್ಲಿದ್ದು ಚಿಂತಿಸಲು ಆತ ತೊಡಗಿದ.ಹೀರಾ ಪರ್ವತದಲ್ಲಿದ್ದ ಒಂದು ಗುಹೆ ಆತನಿಗೆ ಆಪ್ತವಾದ ಸ್ಥಳವಾಗಿದ್ದಿತು.ಹೀಗೆ ಏಕಾಂತದಲ್ಲಿ ಚಿಂತಿಸುತ್ತಾ ಧ್ಯಾನಾಸಕ್ತನಾಗಿ ಬಹು ಸಮಯವನ್ನ ಅಲ್ಲಿಯೆ ಕಳೆಯಲು ಆರಂಭಿಸಿದ ಕೆಲದಿನಗಳ ನಂತರ ಒಮ್ಮೆ ಅಲ್ಲಿಯೆ ತಿರುಗಾಡುತ್ತಿದ್ದಾಗ ಆಗಸದಿಂದ ಒಬ್ಬ ಯಕ್ಷನ ಗಟ್ಟಿಧ್ವನಿಯೊಂದು ಮಹಮದನಿಗೆ ಕೇಳಿಸಿದಂತಾಗಿ ಆತ ಗಾಬರಿಯಾದ.ತಲೆಯೆತ್ತಿ ನೋಡಿದಾಗ ಅತಿಮಾನುಷ ಯಕ್ಷನ ದರ್ಶನ ಅವನಿಗಾಯಿತು.ಮನೆಗೆ ಹಿಂದಿರುಗಿದ ಆತ ಪತ್ನಿ ಖತೀಜಳಲ್ಲಿ ಈ ವಿಷಯವನ್ನ ಅರಹುತ್ತಾ "ವಿಗ್ರಹಾರಾಧನೆ ಹಾಗು ಭವಿಷ್ಯವಾಣಿ ನುಡಿಯುವುದನ್ನ ನಂಬದಿರುವ ಹಾಗೂ ಅಸಹ್ಯ ಪಡುವ ನಾನೆ ಈಗ ನನಗರಿವಿಲ್ಲದ ಹಾಗೆ ಭವಿಷ್ಯ ನುಡಿವ ಜೋತಿಷಿಯಾಗುತ್ತಿದ್ದಿನೇನೊ!" ಎನ್ನುತ್ತಾ ವಿಹ್ವಲನಾದ. ಆದರೆ ಆತನ ಈ ಮಾತಿಗೆ ಸೊಪ್ಪು ಹಾಕದೆ ಖತೀಜಾ 'ಖಂಡಿತಾ ಇಲ್ಲ! ದೇವರು ನಿನಗೆ ಹಾಗಾಗಲು ಬಿಡನು" ಎಂದು ಸಮಾಧಾನಿಸಿ ಈ ಸಂಗತಿಯನ್ನ ತನ್ನ ಹಿರಿಯ ಸಂಬಂಧಿಕ ವರಾಕನಿಗೆ ತಿಳಿಸುತ್ತಾಳೆ.ಇದನ್ನು ಕೇಳಿ ಹರ್ಷಿತನಾದ ವರಾಕ "ಸಂಶಯವಿಲ್ಲ ಇದೆಲ್ಲ ಒಳ್ಳೆಯದರ ಆರಂಭ! ಆತ ದೇವರ ದಯದಿಂದ ಸತ್ಯವನ್ನಷ್ಟೆ ನುದಿಯುತ್ತಿದ್ದಾನೆ" ಎಂದು ಪ್ರತಿಕ್ರಿಯಿಸಿದ.

ಅಲ್ ವಾಕಿಡಿ,ಇಬ್ನ ಹಿಶಾಮ್ ಹಾಗೂ ಅಲ್ ತಾಬರಿಯಂತಹ ಇತಿಹಾಸಕಾರರು ಮಹಮದ್ ಯಕ್ಷ ಗೇಬ್ರಿಯಲ್'ನಿಂದ ಅಪೌರುಷೇಯವಾದ ದಿವ್ಯಜ್ಞಾನ ಪಡೆದಿದ್ದನ್ನು ದಾಖಲಿಸಿದ್ದಾರೆ.ಇವರನ್ನೆ ಉದಾಹರಿಸುತ್ತ ಇತಿಹಾಸಕಾರ ಸರ್ ವಿಲಿಯಂ ಮೊಯಿರ್ ತಮ್ಮ ಗ್ರಂಥದಲ್ಲಿ ಕೊಡುವ ಸಾರಾಂಶ ಇಷ್ಟು "ಮಹಮದ್ ತನ್ನ ಕುಟುಂಬಸ್ಥರೊಂದಿಗೆ ಒಂದೊಮ್ಮೆ ಹೀರಾಪರ್ವತದ ಗುಹೆಯಲ್ಲಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಗೇಬ್ರಿಯಲ್ಲನ ಪ್ರವೇಶವಾಗುತ್ತದೆ.ಅವನ ಕೈಯಲ್ಲಿ ಒಂದು ರೇಷ್ಮೆಯ ತುಂಡಿದ್ದು ಅದರಲ್ಲಿ ಅದೇನೂ ಬರೆದಿರುತ್ತದೆ.ಯಕ್ಷ ಮಹಮದನನ್ನು ಗಟ್ಟಿಯಾಗಿ ಹಿಡಿದುಕೊಂಡು 'ಓದು' ಎಂದು ಆದೇಶಿಸುತ್ತಾನೆ.ಆದರೆ ಅನಕ್ಷರಸ್ಥನಾಗಿದ್ದ ಮಹಮದ್ ಓದಲಾಗದೆ ಯಕ್ಷನ ಬಿಗಿಹಿಡಿತದಿಂದ ವೇದನೆ ಅನುಭವಿಸುತ್ತಾ 'ಏನನ್ನು ಓದಲಿ?' ಎಂದು ಕೇಳಲು...ಗೇಬ್ರಿಯಲ್ ದೇವರ ಹೆಸರಲ್ಲಿ ಓದು ಎಂದಾಗ ಹುಟ್ಟುವುದೆ ಖುರಾನಿನ 96ರಿಂದ 5ರವರೆಗಿನ ಸುರಾಗಳು.ಅವುಗಳನ್ನಾತ ಗಟ್ಟಿಯಾಗಿ ನುಡಿದ ನಂತರ ಯಕ್ಷ ಅಲ್ಲಿಂದ ನಿರ್ಗಮಿಸಿದ ;ಅವಷ್ಟೂ ಸುರಾಗಳೂ ಮಹಮದನ ಹೃದಯದಲ್ಲಿ ಅಚ್ಚು ಹಾಕಿದಂತೆ ಅನುಭವವಾಯಿತು"

ಹೀಗೆ ಕುರಾನಿನ 96ನೆ ಸುರಾದಲ್ಲಿದ್ದ 15 ಪದ್ಯಗಳು ಮಹಮದನಿಗೆ ಮೊದಲು ವ್ಯಕ್ತವಾದದ್ದು ಅಪೌರುಷೇಯವಾಣಿಯೊಂದರಿಂದ.ಹೀಗೆ ಕೆಲತಿಂಗಳುಗಳು ಕಳೆದ ನಂತರ ಯಕ್ಷ ಗೇಬ್ರಿಯಲ್ಲನ ಪುನರಾಗಮನವಾಯಿತು.ಈ ಹಂತದಲ್ಲಿ ಆದ ಮಾನಸಿಕ ತಳಮಳ ಹಾಗು ಆಂತರಿಕ ಹತಾಶೆಯಿಂದ ಮಹಮದ್ ಹತಾಶನಾಗಿಹೋಗಿ ಆತ್ಮಹತ್ಯೆಗೂ ಯೋಚಿಸಿದ್ದ ದಿನಗಳವು! ಆದರೆ ಇದ್ದಕ್ಕಿದಂತೆ ಒಂದು ದಿನ ಆಗಸದಲ್ಲಿ ಸಿಂಹಾಸನದಲ್ಲಿ ಕೂತಿದ್ದ ಗೇಬ್ರಿಯಲ್ಲನ ದರ್ಶನ ಅವನಿಗಾಯಿತು.ಯಕ್ಷ "ಓ ಮಹಮದ್! ನೀನೀಗ ದೇವರ ಪ್ರವಾದಿ ಹಾಗೂ ನಾನು ಯಕ್ಷನಾದ ಗೇಬ್ರಿಯಲ್...ಇದು ಸತ್ಯ!" ಎಂದು ಸಾರಿದ್ದನ್ನು ಮಹಮದ್ ಆಲಿಸಬೇಕಾಯಿತು.ಅವನೊಳಗೆ ಅಡಗಿದ್ದ ಗೊಂದಲಗಳನ್ನೆಲ್ಲಾ ಗೇಬ್ರಿಯಲ್ ಒಂದೊಂದಾಗಿ ಪರಿಹರಿಸಿ ಅವನನ್ನು ಮಾನಸಿಕವಾಗಿ ತಣಿಸಿದ.ಧೃಡಗೊಂಡ ಮನಸ್ಸಿನಿಂದ ಮುಂದಿನ ದಿನಗಳಲ್ಲಿ ಮಹಮದ್ ಮರಳಿ ಮರಳಿ ದೈವವಾಣಿಯ ಸಾರುವಿಕೆಯನ್ನ ಆರಂಭಿಸಿದ್ದು ಹೀಗೆ.ಇದೆ ಮುಂದೆ 'ಖುರಾನ್' ಎಂದು ಪ್ರಸಿದ್ಧವಾದ ಧರ್ಮಗ್ರಂಥವಾಯಿತು.

'ತನಗೆ ದೈವವಾಣಿಯ ಸಾಕ್ಷಾತ್ಕಾರವಾಗಿದೆ,ತಾನಿನ್ನು ಅಲ್ಲಾನ ಪ್ರವಾದಿ' ಎಂದು ಆರಂಭಿಸಿದ ಮಹಮದನ ಮತಪ್ರಚಾರಕ್ಕೆ ಮೊದಲು ಸಮ್ಮತಿಸಿ ಆತನ ಶಿಷ್ಯೆಯಾದವಳು ಸ್ವತಃ ಆತನ ಮಡದಿ ಖತೀಜಾ.ಆಕೆ ಗಂಡನನ್ನು ಪ್ರವಾದಿ ಎಂದು ಒಪ್ಪಿಕೊಂಡ ಮೇಲೆ ನಿಧಾನವಾಗಿ ಸಂಬಂಧಿಕರು,ಸ್ನೇಹಿತರು ಕುಟುಂಬದ ಆತ್ಮೀಯರು ಹೀಗೆ ಒಬ್ಬೊಬ್ಬರಾಗಿ ಆಕೆಯನ್ನು ಹಿಂಬಾಲಿಸಲಾರಂಭಿಸಿದರು.ಕುಟುಂಬದ ಸದಸ್ಯರಲ್ಲಿ ಪ್ರಮುಖವಾಗಿ ಮಹಮದನ ಸಾಕು ಮಗ ಜೈದ್,ದೊಡ್ಡಪ್ಪನ ಮಗ ಆಲಿ,ಪತ್ನಿ ಖತೀಜಾಳ ಬಂಧು ವರಾಕಾ,ಆಪ್ತ ಸ್ನೇಹಿತ ಅಬು ಬಕರ್ ಪ್ರಮುಖರು.ಅಬು ಬಕರ್ ಮಹಮದನಿಗಿಂತ ಕೇವಲ ಎರಡುವರ್ಷಕ್ಕೆ ಕಿರಿಯನಾಗಿದ್ದು ಆತನ ವಿಧೇಯ ಚುರುಕು ಬುದ್ದಿಯ ಆಪ್ತಮಿತ್ರನಾಗಿದ್ದ.ಪ್ರವಾದಿಯೊಂದಿಗೆ ಸಲುಗೆಯ ನಿಕಟ ಬಾಂಧವ್ಯ ಹೊಂದಿದ್ದ ಆತನನ್ನು ಮುಸ್ಲಿಂ ಪ್ರಪಂಚ 'ಅಸ್ ಸಿದ್ಧಿಕಿ' ಎಂದೆ ಗುರುತಿಸುತ್ತದೆ,ಅರಬ್ಬಿಯಲ್ಲಿ ಹಾಗೆಂದರೆ ಸತ್ಯವಂತ ಎಂದರ್ಥ.ವಾಸ್ತವವಾಗಿ ಅವನ ಅಸಲಿ ಹೆಸರು 'ಅಬ್ದುಲ್ಲಾ ಇಬ್ನ ಒತ್ಹಾಮನ್ ಅಬು ಕುಹಾಫಾ' ಎಂದಾಗಿದ್ದರೂ ಒಂಟೆಗಳ ಮೇಲೆ ಅವನಿಗಿದ್ದ ವಿಪರೀತ ಮೋಹ ಹಾಗೂ ಕಾಳಜಿಯ ಕಾರಣದಿಂದ ಆತನಿಗೆ ಅಬು ಬಕರ್ ಎಂಬ ಅಡ್ಡ ಹೆಸರು ಇಡಲಾಗಿತ್ತು ಅನ್ನುತ್ತಾನೆ ಇತಿಹಾಸಗಾರ ಮ್ಯೂರ್.ವ್ಯವಹಾರಸ್ಥನಾಗಿ ಅಪಾರ ಹಣಗಳಿಸಿದ್ದ ಅಬು ಬಕರ್ ತನ್ನ ಹಿತಮಿತ ಹಾಗೂ ಸೌಜನ್ಯಯುತ ಸಂಭಾಷಣೆಗಳಿಂದ ಜನಮನ ಗೆದ್ದಿದ್ದ.ತನ್ನ ನ್ಯಾಯಯುತ ನಡುವಳಿಕೆಗಳಿಂದ ತನ್ನ ಖುರೈಷಿ ಬುಡಕಟ್ಟಿನ ಮುಖಂಡರ ಸ್ನೇಹ ಗೌರವ ಸಂಪಾದಿಸಿದ್ದ.ಒಬ್ಬ ವೀರ ಪೂಜಕನಾಗಿದ್ದ ಆತ ತನ್ನ ಕೊನೆಯ ಉಸಿರಿರುವವರೆಗೂ ತಾನು ನಂಬಿದ ನಾಯಕನನ್ನು ಅತ್ಯಂತ ವಿಧೇಯನಾಗಿ ಆರಾಧಿಸಿದ.ಇಂತಹ ಅಬು ಬಕರ್'ನ ಶ್ರದ್ಧಾಪೂರ್ಣ ನಂಬಿಕೆಗೆ ಪಾತ್ರನಾದದ್ದು ಮತಪ್ರಚಾರದ ದೃಷ್ಟಿಯಿಂದ ಮಹಮದ್ ಸಾಧಿಸಿದ ಮೊತ್ತಮೊದಲ ವಿಜಯವಾಗಿತ್ತು.ಅಬು ಬಕರ್'ನ ಪ್ರಭಾವದಿಂದಲೆ ಮುಂದೆ ಐವರು ಪ್ರಮುಖ ಖುರೈಷಿ ಪ್ರಮುಖರು ನೂತನ ಧರ್ಮಾನುಯಾಯಿಗಳಾಗಳು ಸಾಧ್ಯವಾಯಿತು.ಅವರೆಂದರೆ ತನ್ನ ಹದಿನಾರನೆ ವಯಸ್ಸಿನಲ್ಲಿಯೆ ಹೊಸಧರ್ಮಕ್ಕೆ ಸೇರಿದ ಸಾದ್ ಎಂಬ ಯುವಕ,ಅಲ್ ಗುಬೈರ್ ಎಂಬ ಖತೀಜಾ ಹಾಗೂ ಮಹಮದನ ನಿಕಟ ಸಂಬಂಧಿ,ಮುಂದೆ ಮಹಮದನ ಮಗಳು ರೋಕೈಯಾಳ ಎರಡನೆ ಪತಿಯಾದ 'ಒತ್ಹಮನ್' ಎಂಬ ಯುವಕ ( ಅದಾಗಲೆ ಒತ್ವಾನನ್ನು ವಿವಾಹವಾಗಿದ್ದ ರೋಕೈಯಾ ಮುಂದೆ ಆತನಿಂದ ವಿಚ್ಚೇದಿತೆಯಾಗಿ ಈ ಒತ್ಹಮನ್'ನನ್ನು ಮರುವಿವಾಹವಾದಳು).ತಲ್ಹಾ ಎಂಬ ಅಬು ಬಕರನ ಸಂಬಂಧಿ ಹಾಗೂ ಮಹಾಮದನಿಗಿಂತ ವಯಸ್ಸಿನಲ್ಲಿ ಹತ್ತುವರ್ಷ ಕಿರಿಯನಾಗಿದ್ದ ಅಬ್ದುಲ್ ರೆಹಮಾನ್ ಎಂಬ ಯುವಕ.

ಗುಲಾಮಗಿರಿಯಿಂದ ವಿಮೋಚಿತರಾಗುವ ಆಕರ್ಷಣೆಯಿಂದ ಹಲವಾರು ಗುಲಾಮರು ಮತಾಂತರಗೊಂಡರು.ಆ ಪೈಕಿ ಅಬಿಸೀನಿಯಾ ದೇಶದ ಗುಲಾಮ ಬಿಲಾಲ್ ಪ್ರಮುಖನಾದವ,ಅಬು ಬಾಕರ್ ಆತನನ್ನು ಒತ್ತೆಹಣ ನೀಡಿ ಗುಲಾಮಗಿರಿಯಿಂದ ಬಿಡಿಸಿದ ಮೇಲೆ ಆತನನ್ನು ಸಂತೋಷದಿಂದಲೆ ಮಹಮದ್ ತನ್ನ ಧರ್ಮಕ್ಕೆ ಬರಮಾಡಿಕೊಂಡ.ಇದೆ ಬಿಲಾಲ್ ಮುಂದೆ ಇಸ್ಲಾಮಿಕ್ ಪ್ರಪಂಚದ ಮೊತ್ತಮೊದಲ 'ಮುಯಾಜಿನ್' ಎಂದು ಕರೆಸಿಕೊಂಡ.ಮುಯಾಜಿನ್ ಅಂದರೆ ಅರಬ್ಬಿಯಲ್ಲಿ 'ಪ್ರಾರ್ಥನೆಗೆ ಕರೆನೀಡುವ ವ್ಯಕ್ತಿ' ಎಂದು ಅರ್ಥ ಬರುತ್ತದೆ.ಅಬ್ದುಲ್ಲಾ ಇಬ್ನ ಮಸೂದ್ ಎಂಬ ಇನ್ನೊಬ್ಬ ಮತಾಂತರಿತ ಗುಲಾಮ ಮುಂದೆ ಮಹಮದನ ಆಪ್ತಸೇವಕನಾಗಿ ಪ್ರಸಿದ್ಧಿಗಳಿಸಿದ.ಕಾಬ್ದಾಲ್ ಎಂಬ ಇನ್ನೊಬ್ಬ ಗುಲಾಮನನ್ನೂ ಈ ಪಟ್ಟಿಯಲ್ಲಿ ಹೆಸರಿಸಬಹುದು.ಈ ಬಹುತೇಕ ಮತಾಂತರಿತ ಗುಲಾಮರು ಮೂಲದಲ್ಲಿ ಒಂದೋ ಯಹೂದಿ ಅಥವಾ ಸಿರಿಯನ್ ಕ್ರೈಸ್ತರಾಗಿದ್ದು ತಮ್ಮ ಕೆಟ್ಟ ನಸೀಬಿನಿಂದ ಪಾರಾಗಿ ಗುಲಾಮಗಿರಿಯಿಂದ ಮುಕ್ತರಾಗಲು ಮತಾಂತರವಾದದ್ದು ಸಹಜ ಎನ್ನುತ್ತಾನೆ ಇತಿಹಾಸಕಾರ ಅಲ ಹಾಜ್ ಕಾಸಿಂ ಅಲಿ ಜೈರಾಜಬಿ.

ಹೀಗೆ ಸ್ಥಾಪಿತವಾಗಿದ್ದ ಮಹಮದನ ನೂತನ ಧರ್ಮ ಸಾಮಾಜಿಕ ಭೀತಿಯಿಂದ ಆರಂಭದಲ್ಲಿ ಒಂದು 'ಗುಪ್ತ ಸಂಘ'ವಾಗಿದ್ದಿತು.ಅತ್ಯಂತ ಗೌಪ್ಯವಾಗಿ ಮತಪ್ರಚಾರದ ಕಾರ್ಯಕೈಗೊಳ್ಳಲಾಗುತ್ತಿತ್ತು.ಕ್ರಮೇಣ ಇಸ್ಲಾಂ ಬಲಗೊಂಡಾದ ಮೇಲೆ ಗುಪ್ತ ಪ್ರಚಾರದ ನಿಯಮಗಳನ್ನೆಲ್ಲಾ ಬದಿಗೊತ್ತಿ ಬಹಿರಂಗ ಪ್ರಚಾರಕ್ಕೆ ಹೆಚ್ಚು ಒತ್ತುಕೊಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಮೋಯಿರ್.ಒಮ್ಮೆ ಯಾರಾದರೂ ಈ ಸಂಘದ ಸದಸ್ಯರಾದರೆ ಅನಂತರ ಕೊನೆಯುಸಿರು ಇರುವವರೆಗೂ ಅವರು ಅಲ್ಲಿನ ಅಜೀವ ಸದಸ್ಯರಾಗಿಯೆ ಬಾಳುವುದು ಕಡ್ಡಾಯವಾಗಿತ್ತು.ಹಾಗೊಂದುವೇಳೆ ಇನ್ಯಾವುದೊ ಹೊಸ ನಂಬಿಕೆಗೆ ಮಾರುಹೋದರೆ ಜೀವ ತೆರಬೇಕಾಗಿದ್ದಿತು.ಇಂದಿಗೂ ಇಸ್ಲಾಮಿನಲ್ಲಿ ಈ ನಿಯಮಪಾಲನೆಯನ್ನು ಕಾಣಬಹುದಾಗಿದೆ.ಒಮ್ಮೆ ಮುಸ್ಲೀಮನಾಗಿ ಮತಾಂತರವಾದವನ ಪುನರ್ ಮತಾಂತರ ದುಸ್ಸಾಧ್ಯ!

( ಇನ್ನೂ ಇದೆ...)

17 October 2011

ವಲಿ...(ಭಾಗ-2)

ಅದಾಗಲೆ ಎರಡೆರಡು ಮದುವೆಯಾಗಿದ್ದು ಎರಡು ಗಂಡು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದ ಖತೀಜ ಮಹಮದ್ ಮೇಲೆ ಅನುರಾಗ ಬೆಳೆಸಿಕೊಂಡು ವಿವಾಹ ಪ್ರಸ್ತಾಪವನ್ನು ಮುಂದಿಟ್ಟಳು.ಆದರೆ ಅವರಿಬ್ಬರ ನಡುವಿನ ಅಂತಸ್ತಿನ ವ್ಯತ್ಯಾಸದ ದೆಸೆಯಿಂದ ಅವಳನ್ನು ಮರುವಿವಾಹವಾಗಲು ಅಷ್ಟರಲ್ಲಿ ಯತ್ನಿಸಿ ಸೋತಿದ್ದ ಖುರೈಷಿ ಗಣ್ಯರಿಂದ ಈ ಮದುವೆಗೆ ಭಾರಿವಿರೋಧ ವ್ಯಕ್ತವಾಯಿತು.ಸಾಲದ್ದಕ್ಕೆ ಸುಂದರಿ ವಿಧವೆ ಖತೀಜಳ ಮುದಿತಂದೆ ಈ ಮದುವೆಗೆ ತನ್ನ ಅಸಮ್ಮತಿ ಪ್ರಕಟಿಸಿದ.ಇದರ ಹಿಂದಿನ ಹುನ್ನಾರ ಗ್ರಹಿಸಿದ ಖತೀಜ ಮದುವೆಗೆ ಮಹಮದ್'ನ ಸಮ್ಮತಿ ದೊರೆತ ನಂತರ ಉಪಾಯವಾಗಿ ಒಂದುದಿನ ಮನೆಗೆ ತನ್ನ ತಂದೆ ಹಾಗೂ ಬುಡಕಟ್ಟಿನ ಗಣ್ಯರನ್ನು ಊಟಕ್ಕಾಗಿ ಆಹ್ವಾನಿಸಿ ಅವರಿಗಾಗಿಯೆ ವಿಶೇಷವಾಗಿ ದನ ಕಡಿಸಿ ಅದರ ಮಾಂಸ ಹಾಗೂ ಮದ್ಯದ ಸಮಾರಾಧನೆಯನ್ನೆ ನಡೆಸಿ,ಅವರೆಲ್ಲ ಮತ್ತಿನಲ್ಲಿ ತೇಲುತ್ತಿದ್ದಾಗ ಕಾಟಾಚಾರಕ್ಕೆ ಅವರೆಲ್ಲರ ಸಮ್ಮತಿ ಪಡೆದು ಅಂದೆ ವಿವಾಹ ನೆರವೇರಿಸಿ ಕೊಂಡುಬಿಟ್ಟಳು! ನಶೆ ಇಳಿದು ಸ್ಮೃತಿ ತಿಳಿಯಾದ ಬಳಿಕ ನಡೆದ ಎಲ್ಲಾ ವಿದ್ಯಾಮಾನವನ್ನರಿತ ಖತೀಜಳ ತಂದೆ ಈ ವಿವಾಹವನ್ನ ವಿರೋಧಿಸಿ ಕಾಲುಕೆರೆದು ಜಗಳಕ್ಕೆ ನಿಂತ.ಆದರೆ ಬುಡಕಟ್ಟಿನ ಮುಖಂಡರ ಸಮಯಸ್ಪೂರ್ತಿಯಿಂದ ಜಗಳ ರಕ್ತಪಾತಕ್ಕೆ ತಿರುಗುವ ಮೊದಲೆ ಸಂಧಾನ-ಸಮಾಧಾನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.ಹೀಗೆ ನಲವತ್ತು ವರ್ಷದ ಸುಂದರಿ-ಸಿರಿವಂತ ವಿಧವೆ ಖತೀಜ ಇಪ್ಪತ್ತೈದರ ಚಲುವ ತರುಣ ಮಹಮದ್'ನ ಮಡದಿಯಾದಳು.

ಸುಖಮಯವಾಗಿ ಮುಂದಿನ ಹನ್ನೆರಡುವರ್ಷ ಸಾಗಿದ ಅವರ ಸಂಸಾರದ ಫಲವಾಗಿ ಎಂಟು ಗಂಡು ಮಕ್ಕಳೂ.ನಾಲ್ಕು ಹೆಣ್ಣುಮಕ್ಕಳೂ ಜನ್ಮತಾಳಿದರು.ಆದರೆ ದುರದೃಷ್ಟದಿಂದ ಯಾವೊಂದು ಗಂಡು ಮಗುವೂ ಬದುಕುಳಿಯಲಿಲ್ಲ.ಮದುವೆಯ ನಂತರ ಮಡದಿಯ ಅಂತಸ್ತಿಗೆ ತಕ್ಕ ಹಾಗೆ ಮಹಮದ್ ಕುರಿಕಾಯದೆ ಹೆಂಡತಿಯ ವ್ಯಾಪಾರದಲ್ಲಿ ಸಕ್ರಿಯನಾಗಿ ತೊಡಗಿಕೊಂಡ.'ದೇವರು ಕರುಣಾಮಯಿ ;ತನ್ನನ್ನು ನಂಬಿದವರನ್ನೆಂದೂ ಕೈಬಿಡದೆ ಅವರ ವ್ಯವಹಾರಗಳಲ್ಲಿ ವೃದ್ಧಿ ತರುವ ಆತ...ಅವಿಶ್ವಾಸಿಗಳಿಗೆ ನಷ್ಟವನ್ನಷ್ಟೆ ಕೊಡುತ್ತಾನೆ' ಎನ್ನುತ್ತಾ ಆತ ವ್ಯಾಪಾರಕ್ಕೆ ಒಂದು ಧಾರ್ಮಿಕ ಘನತೆಯನ್ನು ಆರೋಪಿಸಿ ಮೋಸ-ವಂಚನೆಗಳನ್ನ ಹಿಡಿತಕ್ಕೆ ತಂದ.

ಹೀಗೆ ಸುಖಮಯವಾಗಿದ್ದ ಮಹಮದ್ ವಯಕ್ತಿಕ ಜೀವನಕ್ಕೆ ಕುತ್ತು ಬಂದದ್ದು ಮದುವೆಯ ಹದಿಮೂರನೆ ವರ್ಷಕ್ಕೆ ಒದಗಿಬಂದ ಕಾಬಾದ ಮರುನಿರ್ಮಾಣ ಕಾರ್ಯದಿಂದ.ಆಗ ಆತನಿಗೆ ಮೂವತ್ತೆಂಟು ವರ್ಷ ವಯಸ್ಸಾಗಿತ್ತು.ಪ್ರಾಕೃತಿಕವಾಗಿ ವಿರಳ ಮಳೆ ಕಾಣುತ್ತಿದ್ದ ಅರೇಬಿಯದಲ್ಲಿ ಕ್ರಿಸ್ತಶಕ 605ರಲ್ಲಿ ಕುಂಭದ್ರೋಣ ವರ್ಷಧಾರೆ ಸುರಿದು ಪ್ರವಾಹ ಬೀದಿಗಳಲ್ಲಿ ಉಕ್ಕಿ ಹರಿಯಿತು.ಕಾಬಾ ಗುಡಿ ಸಹಜವಾಗಿ ಜಖಂ ಆಯಿತು.ಹೀಗಾಗಿ ಗುಡಿಯ ದುರಸ್ತಿ ನಡೆಸಿ ಇನ್ನಷ್ಟು ಎತ್ತರದ ಗೋಡೆ ಹಾಗೂ ಛಾವಣಿ ನಿರ್ಮಿಸಲು ಖುರೈಷಿಗಳು ತೀರ್ಮಾನಿಸಿದರು.ಅವರ ಅದೃಷ್ಟಕ್ಕೆ ಆ ಮಳೆಗಾಲದಲ್ಲಿ ಎದ್ದಿದ್ದ ಬಿರುಗಾಳಿಗೆ ಸಿಲುಕಿ ಕೆಂಪುಸಮುದ್ರದ ದಡಕ್ಕೆ ಬಂದು ಅಪ್ಪಳಿಸಿ ಪತನವಾದ ಗ್ರೀಕ್ ವ್ಯಾಪಾರಿ ನೌಕೆಯೊಂದು ವರದಾನದಂತೆ ಒದಗಿಬಂತು.ಇದರ ಖಚಿತ ಸುದ್ದಿ ತಿಳಿದ ಖುರೈಷಿಗಳ ಮುಖಂಡ ಅಲ್ ವಾಲಿದ್ ಅಲ್ಲಿಗೆ ಧಾವಿಸಿ ನೌಕೆಯ ಅಳಿದುಳಿದ ನಿರುಪಯುಕ್ತ ಮರ ಹಾಗೂ ಲೋಹಗಳ ಅವಶೇಷಗಳನ್ನು ಖರೀದಿಸಿದ.ಮೆಕ್ಖಾ ಸಮೀಪದ ಕೆಂಪುಕಲ್ಲುಗಳ ಕಣಿವೆಯಿಂದ ಕಲ್ಲುಗಳನ್ನೂ ತರಿಸಿ ಬಾಕುನ್ ಎಂಬ ರೋಮನ್ ವಾಸ್ತುಶಿಲ್ಪಿಯ ಮಾರ್ಗದರ್ಶನದೊಂದಿಗೆ ಹೊಸ ಕಾಬಾದ ನಿರ್ಮಾಣ ಕಾರ್ಯ ಆರಂಭಿಸಿದ.ಗೋಡೆಗಳು ಮೇಲೆದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ 'ಪವಿತ್ರ ಕಪ್ಪುಶಿಲೆ'ಯನ್ನು ಎಲ್ಲಿ,ಹೇಗೆ,ಯಾರು ಇರಿಸಬೇಕು? ಎಂಬ ನೈತಿಕ ಪ್ರಶ್ನೆ ಉದ್ಭವವಾಯ್ತು.ಈ ಶಿಲೆ ಆರು ಇಂಚು ಎತ್ತರ ಹಾಗೂ ಎಂಟಿಂಚು ಅಗಲವಾಗಿತ್ತು,ಭಕ್ತಾದಿಗಳ ಶ್ರದ್ಧಾಭಕ್ತಿಗೆ ಅದು ಒಳಗಾಗಿತ್ತು ಎನ್ನುತ್ತಾನೆ ವಿಲ್ ಡ್ಯೂರಂಟ್.ಆ ಶಿಲೆಯ ಹಣೆಬರಹ ನಿರ್ಧರಿಸುವುದು ತಮ್ಮ ಹಕ್ಕೆಂದು ಕೆಲವು ಖುರೈಸಿ ಗಣ್ಯರು ಗದ್ದಲ ತೆಗೆದರು.ಇನ್ನಿತರರು ತಮ್ಮ ಹಕ್ಕು ಮಂಡಿಸಿ ಅದನ್ನು ಬಲವಾಗಿಯೆ ವಿರೋಧಿಸಿದರು.ಈ ವಾದ ವಿವಾದ ತಾರಕಕ್ಕೇರಿ ಹೊಯ್'ಕೈ ನಡೆದು ಮತ್ತೆ ರಕ್ತದೋಕುಳಿಯಾಡುವ ಎಲ್ಲಾ ಸೂಚನೆಗಳು ಕಂಡುಬಂದಾಗ ಖುರೈಷಿಗಳಲ್ಲೆ ಹಿರಿಯನಾಗಿದ್ದವನೊಬ್ಬ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಂಧಾನ ಸೂತ್ರವನ್ನೇರ್ಪಡಿಸಿದ.ಅದು ಹೀಗಿತ್ತು 'ಇಂದು ಯಾವ ವ್ಯಕ್ತಿ ಮೊತ್ತ ಮೊದಲನೆಯವನಾಗಿ ಕಾಬಾದ ಒಳಕ್ಕೆ ಹೊರಗಿನಿಂದ ಬರುತ್ತಾನೊ, ಅವನಿಗೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಅಥವಾ ಅವನಿಗೆ ಕರಿಶಿಲೆಯನ್ನ ಸೂಕ್ತ ಸ್ಥಳದಲ್ಲಿರಿಸುವ ಅಧಿಕಾರ ನೀಡೋಣ" ಅನ್ನುವುದಾಗಿತ್ತು.ನೆರೆದಿದ್ದವರ ಸಮ್ಮತಿ ಆ ಸೂತ್ರಕ್ಕೆ ದೊರಕುತ್ತಿದ್ದಾಗಲೆ ಮಹಮದ್ ಮೊದಲನೆಯವನಾಗಿ ಗುಡಿಯ ಒಳ ಪ್ರವೇಶಿಸಿದ್ದು ಎಲ್ಲರ ಕಣ್ಣಿಗೂ ಬಿತ್ತು! ಆವಾಗ ಎಲ್ಲರೂ 'ಅಲ್ ಅಮೀನ್' ಮೊದಲು ಬಂದ,ಹೀಗಾಗಿ ಅವನು ಸೂಚಿಸುವ ಸೂತ್ರಕ್ಕೆ ನಮ್ಮ ಸಮ್ಮತಿಯಿದೆ ಎಂದು ಸಾಮೂಹಿಕವಾಗಿ ಕೂಗಿದರು.


ಅತ್ಯಂತ ಸಾವಧಾನ ಚಿತ್ತದಿಂದ ಮಹಮದ್ ಈ ಕಾರ್ಯಭಾರವನ್ನು ಒಪ್ಪಿಕೊಂಡು ಕಾರ್ಯಪ್ರವೃತ್ತನಾದ.ತಾನು ಹೂದ್ದಿದ್ದ ಬಟ್ಟೆಯನ್ನು ನೆಲಕ್ಕೆ ಹಾಸಿ ಕಪ್ಪುಶಿಲೆಯನ್ನು ಅದರ ಮೇಲಿರಿಸಿ ಖುರೈಷಿಗಳ ನಾಲ್ಕೂ ಗುಂಪಿನ ಸದಸ್ಯರನ್ನು ಕರೆದು ಬಟ್ಟೆಯ ನಾಲ್ಕು ತುದಿಗಳನ್ನು ಅವರಿಂದ ಎತ್ತಿಸಿ ಅವರೆಲ್ಲರೂ ಕೂಡಿ ಕಪ್ಪುಶಿಲೆಯನ್ನು ಗೋಡೆಯ ಬದಿಗೆ ಅಂಟಿಸುವಂತೆ ಮಾಡಿದ.ತಾನೂ ಸ್ವತಹ ಈ ಕಾರ್ಯದಲ್ಲಿ ಅವರೊಂದಿಗೆ ಸಹಕರಿಸಿದ.ಹೀಗಾಗಿ ಕಟ್ಟಡದ ಕಾರ್ಯ ಸುಗಮವಾಗಿ ಸಾಗುವಂತಾಯಿತು.ಇದೆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು.ಈ ಕಾರ್ಯ ಸಾಗುವಾಗ ಭಯ ಭಕ್ತಿಯಿಂದ ಖುರೈಶಿಗಳು ತಮ್ಮ ಒಳವಸ್ತ್ರವನ್ನು ತೆಗೆದು ಹೆಗಲ ಮೇಲೆ ಇಳಿಬಿಟ್ಟುಕೊಂಡಿದ್ದರು.ಮಹಮದನೂ ಹಾಗೆಯೆ ಮಾಡಿದ್ದವ ಕೊನೆಯಲ್ಲಿ ಎಡವಿ ಮುಖ ಕೆಳಗಾಗಿ ನೆಲಕ್ಕೆ ಬಿದ್ದ.ಆಗ "ನಿನ್ನ ಗುಪ್ತಾಂಗವನ್ನು ಇನ್ಯಾರಿಗೂ ತೋರಿಸಬೇಡ" ಎಂಬ ಒಂದು ಅಶರೀರವಾಣಿ ಅವನಿಗೆ ಕೇಳಿಸಿದಂತಾಯಿತು.ಆದರಿಂದ ಅಂದಿನಿಂದ ಅದನ್ನು ಯಾರೊಬ್ಬರೂ ಕಾಣಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್-ಮುಬಾರಕಿ.

ಈ ಸಮಸ್ಯೆ ಸುರಳಿತವಾಗಿ ನೆಲೆಕಂಡರೂ ಮೆಕ್ಕಾದಲ್ಲಿ ಸೂಕ್ತ ಅಧಿಕಾರ ಕೇಂದ್ರದ ಅಭಾವ ಎದ್ದುಕಾಣುತ್ತಿತ್ತು.ಖುರೈಷಿಗಳ ಒಳ ಪಂಗಡಗಳಲ್ಲೆ ವಿಪರೀತ ಕಚ್ಚಾಟವಿದ್ದರೂ ಅದೊಂದು ಬಗೆಯ ಸಾಮರಸ್ಯವೂ ಅವರಲ್ಲಿದ್ದು ವ್ಯಾಪಾರ-ವ್ಯವಹಾರಗಳಿಗೆ ಅದರಿಂದ ಅಡ್ಡಿಯಾಗದೆ ಮೆಕ್ಕಾ ಆರ್ಥಿಕವಾಗಿ ಬಲಗೊಂಡಿತ್ತು.ಉದ್ದಿಮೆದಾರರು ದೂರದ ಸಿರಿಯಾ,ನೆರೆಯ ಇರಾಕ್ ನಡುವೆ ವ್ಯಾಪಾರ ಸಂವರ್ಧನೆ ಸಾಧಿಸಿದ್ದರು.ಕ್ರಿಸ್ತ ಶಕ 606ರಲ್ಲಿ ಪರ್ಶಿಯಾದೊಂದಿಗೆ ವ್ಯಾಪಾರಿ ಸಂಬಂಧಗಳು ಅಬು ಸಫ್ಯಾನನ ಮುಂದಾಳುತ್ವದಲ್ಲಿ ಧೃಡಗೊಂಡವು.ಹೀಗೆ ಮೆಕ್ಕಾ ಉನ್ನತಿಯತ್ತ ಸಾಗುತ್ತಿದ್ದರೆ ಇತ್ತ ಮಹಮದ್'ನ ವೈವಾಹಿಕ ಜೀವನದಲ್ಲೂ ಶಾಂತಿ ನೆಲೆಸಿತ್ತು.ಮೂವರು ಹೆಣ್ಣು ಮಕ್ಕಳಿಗೆ ವಿವಾಹ ಯೋಗ ಕೂಡಿಬಂದಿತ್ತು. ಮೊದಲನೆಯವಳಾದ ಜನಾಬ್'ಳನ್ನು ಖತೀಜಳ ತಂಗಿಯ ಮಗನಿಗೆ ಕೊಟ್ಟು ಲಗ್ನ ಕುದುರಿಸಲಾಯಿತು (ಗಮನಿಸಿ ಅರಬ್ಬಿಗಳಲ್ಲಿ ಸೋದರಿಕೆಯ ಒಳವಿವಾಹಗಳು ನಿಶಿದ್ಧವಾಗಿರಲಿಲ್ಲ).ಇನ್ನಿಬ್ಬರು ಹೆಣ್ಣುಮಕ್ಕಳಾದ ರೋಶಿಯಾ ಹಾಗು ಉಮ್'ಕುಲ್'ಸುಮ್'ರನ್ನು ಅಬು ಲಹಾಬ್'ನ ಮಕ್ಕಳಾದ ಓತ್ವಾ ಹಾಗೂ ಒಬೈಬಾರಿಗೆ ಕೊಟ್ಟು ಲಗ್ನ ನೆರವೇರಿಸಲಾಯಿತು.

ಮಹಮದ್ ತನ್ನ ಎಳೆಮಗ ಕಾಸಿಂ ಮರಣ ಹೊಂದಿದ ಮೇಲೆ ಅಬು ತಾಲಿಬ್'ನ ಐದು ವರ್ಷದ ಮಗ ಆಲಿಯನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾನೆ.ಅಬು ತಾಲಿಬ್ ಕಡುಬಡತನದಲ್ಲಿದ್ದುದ್ದರಿಂದ ಮಹಮದ್ ಮಗುವನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನ ಸಂಕಟವನ್ನು ಕೊಂಚ ನಿವಾರಿಸಿದನು.ಇದೆ ಅಲಿ ಮುಂದೆ ಮಹಮದನಿಗೆ ಪ್ರಾಮಾಣಿಕನಾಗಿದ್ದುಕೊಂಡು ಆತನ ಧರ್ಮಾಭಿಮಾನಿಯಾಗಿ ಮೆರೆಯಲಾರಂಭಿಸಿದ.

ಅದೆ ಸಮಯದಲ್ಲಿ ಆಲಿಯಂತೆಯೇ ತನ್ನ ಕುಟುಂಬಕ್ಕೆ ಪರಕೀಯನಾಗಿದ್ದ ಹಾರಿಥಾ ಎಂಬ ವ್ಯಕ್ತಿಯ ಮಗನಾದ ಜೈದ್'ಎಂಬಾತನನ್ನೂ ಹೀಗೆಯೆ ದತ್ತು ತೆಗೆದುಕೊಳ್ಳಲಾಯಿತು.ಹಾರಿಥಾ ವಾಸ್ತವವಾಗಿ ಸಿರಿಯನ್ ಕ್ರೈಸ್ತ ಬುಡಕಟ್ಟಿಗೆ ಸೇರಿದ್ದ.ಜೈದ್ ಇನ್ನೂ ಮಗುವಾಗಿದ್ದಾಗಲೆ ಅರಬ್ಬಿ ದರೋಡೆಗಾರರ ಕೈಸೇರಿ ಗುಲಾಮಗಿರಿಗೆ ತಳ್ಳಲ್ಪಟ್ಟಿದ್ದ ಹಾಗೂ ಖತೀಜಳಿಗೆ ಗುಲಾಮನಾಗಿ ಮಾರಲ್ಪಟ್ಟಿದ್ದ.ಲಗ್ನದ ನಂತರ ಆಕೆಯ ಕೊಡುಗೆಯಾಗಿ ಜೈದ್ ಮಹಮದ್'ನಿಗೆ ಸಂದಿದ್ದ.ಮಹಮದ್ ಆತನನ್ನು ಗುಲಾಮನಾಗಿ ಪರಿಗಣಿಸದೆ ತನ್ನ ಒಡಹುಟ್ಟಿದವನಂತೆ ಕಂಡು ಕಡೆಗೊಮ್ಮೆ ತನ್ನ ದತ್ತು ಮಗನನ್ನಾಗಿ ಸ್ವೀಕರಿಸಿದ.

ಆದರೆ ಕಾಲಕ್ರಮೇಣ ಹಾರಿಥಾನಿಗೆ ಕಳೆದು ಹೋಗಿದ್ದ ತನ್ನ ಮಗನ ಸುಳಿವು ಸಿಕ್ಕು ಆತ ಮಗನನ್ನು ಗುಲಾಮಗಿರಿಯಿಂದ ಬಿಡಿಸಿಕೊಳ್ಳಲು ಮೆಕ್ಕಾಗೆ ಧಾವಿಸಿದ.ಅದಕ್ಕಾಗಿ ಮಹಮದನಿಗೆ ಅಪಾರ ಒತ್ತೆಹಣ ನೀಡಲು ಆತ ತಯಾರಿದ್ದರೂ ಮಹಮದ್ ಅದನ್ನು ಒಪ್ಪದೆ ಜೈದ್'ನಿಗೆ ತಂದೆಯೊಂದಿಗೆ ಸಾಗುವ ಅಥವಾ ಸ್ವತಂತ್ರವಾಗಿ ಬಾಳುವ ಹಕ್ಕನ್ನು ನೀಡಿದ.ಜೈದ್ ಮಾತ್ರ ತಂದೆಯೊಂದಿಗೆ ಸಾಗಲು ನಿರಾಕರಿಸಿ ಮಹಮದನೆ ತನ್ನ ತಂದೆ-ತಾಯಿಯೆಂದು ಘೋಷಿಸಿಕೊಂಡು ಅಲ್ಲೆ ಉಳಿಯುವ ನಿರ್ಧಾರ ಪ್ರಕಟಿಸಿದ.ಅವನ ಈ ನಡೆಯಿಂದ ವಿಪರೀತ ಹರ್ಷಿತನಾದ ಮಹಮದ್ ಜೈದನ್ನು ಕಾಬಾದ ಕರಿಶಿಲೆಯ ಸಾಕ್ಷಿಯಾಗಿ ತನ್ನ ಉತ್ತರಾಧಿಕಾರಿಯೆಂದು ಪ್ರಮಾಣ ಮಾಡಿದ.ಅಂದಿನಿಂದ ಜೈದ್'ನನ್ನು 'ಜೈದ್ ಇಬ್ನ ಮಹಮದ್' ಅಂದರೆ ಮಹಮದನ ಮಗ ಜೈದ್ ಎಂದು ಗುರುತಿಸಲಾಯಿತು.ಮಹಮದನ ಇಚ್ಛೆಯ ಪ್ರಕಾರವೆ ಜೈದ್ ಮುಂದೆ ಉಮ್ ಐಮನ್ ಎಂಬ ಕೆಲಸದವಳೊಬ್ಬಳನ್ನು ವಿವಾಹವಾಗಬೇಕಾಯಿತು.ಇತಿಹಾಸಕಾರ ಮ್ಯೂರನ ಪ್ರಕಾರ ಆಕೆಯ ವಯಸ್ಸು ಜೈದನ ವಯಸ್ಸಿನ ಎರಡರಷ್ಟಾಗಿತ್ತು.ಹೀಗಿದ್ದರೂ ಅವರ ವೈವಾಹಿಕ ಬದುಕಿಗೆ ಅದರಿಂದೇನೂ ತೊಂದರೆಯಾಗಲಿಲ್ಲ.'ಒಸಾಮಾ'ನೆಂಬ ಮಗ ಅವರಿಗೆ ಹುಟ್ಟಿದ.

(ಇನ್ನೂ ಇದೆ...)

16 October 2011

ವಲಿ.....(ಭಾಗ-1)

ಒಂದೊಮ್ಮೆ ಮೊಹಮದ್'ನ ತಾತ ಅಬ್ದುಲ್ ಮುತ್ತಾಲಿಬ್ ಇಪ್ಪತ್ತನಾಲ್ಕು ವರ್ಷದ ತನ್ನ ಎಳೆಮಗ ಅಬ್ದುಲ್ಲಾನನ್ನು ಜೊತೆಗೆ ಕರೆದುಕೊಂಡು ದೂರದ ಸಂಬಂಧಿ ವಾಹಬ್'ನ ಮನೆಗೆ ಅತಿಥಿಯಾಗಿ ಹೋಗಬೇಕಾಯಿತು.ಅಲ್ಲಿ ವಹಾಬ್'ನ ಸಹೋದರಿಯ ಮಗಳಾದ ಅಮೀನಾಳನ್ನು ಕಂಡು ಸಂಪ್ರೀತನಾದ ಆತ ಆಕೆಯನ್ನು ತನ್ನ ಮಗನಿಗೆ ತಂದುಕೊಳ್ಳಲು ಪ್ರಸ್ತಾಪಿಸಿದ.ಅದಕ್ಕೊಪ್ಪಿದ ವಹಾಬ್ ಈ ವಿವಾಹ ನೆರವೇರಿಸಿಕೊಟ್ಟ,ಜೊತೆಗೆ ಅದಾಗಲೆ ಎಪ್ಪತ್ತರ ಆಸುಪಾಸಿನಲ್ಲಿದ್ದ ಮುತ್ತಾಲಿಬ್ ತಾನು ಸ್ವತಃ ವಹಾಬನ ಸ್ವಂತ ಮಗಳಾದ ಹಲಾಹಳನ್ನು ವಿವಾಹವಾದ! ತಂದೆ-ಮಕ್ಕಳಿಬ್ಬರೂ ಅಕ್ಕ-ತಂಗಿಯರನ್ನೆ ಮದುವೆಯಾದ ನಂತರ ಕೆಲಕಾಲ ಅಲ್ಲಿಯೆ ನೆಲಸಿದರು.ಅಮೀನ ಗರ್ಭವತಿಯಾದಳು.ಅದೇ ಸಮಯಕ್ಕೆ ಆಕೆಯ ಪತಿ ಅಬ್ದುಲ್ಲಾ ವ್ಯಾಪಾರದ ನಿಮಿತ್ತ ಸಿರಿಯಾದ ಕಡೆ ಸಾಗಬೇಕಾಯಿತು.ದುರಾದೃಷ್ಟವಶಾತ್ ಆತ ಅಲ್ಲಿಂದ ಮರಳುವಾಗ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ.ಮಗನ ಸಾವಿನ ಸುದ್ದಿ ಮುತ್ತಾಲಿಬನನ್ನು ಬಹುವಾಗಿ ಕಾಡಿಸಿತು.ಆತ ತನ್ನೊಂದಿಗೆ ಉಳಿದಿದ್ದ ಇನ್ನೊಬ್ಬ ಮಗನನ್ನು ಮುಂದಿನ ಉತ್ತರಕ್ರಿಯೆಗಳಿಗಾಗಿ ಮದೀನಕ್ಕೆ ಕಳುಹಿಸಿದ.ಆತ ಮದೀನ ತಲುಪಲು ತಿಂಗಳೆ ತಗುಲಿತು.ಅಲ್ಲಿ ಅಬ್ದುಲ್ಲ ಮರಣ ಹೊಂದುವಾಗ ಕೇವಲ ಐದು ಒಂಟೆಗಳನ್ನೂ,ಕೆಲವು ಮೇಕೆಗಳನ್ನೂ ಹಾಗೂ ಓರ್ವ ಗುಲಾಮಳನ್ನಷ್ಟೆ ಬಿಟ್ಟುಹೋಗಿದ್ದ.

ಕ್ರಿಸ್ತಶಕ 570ರ ಅಗೊಸ್ತು 20ರಂದು ಮಹಮದ್'ನಿಗೆ ಜನ್ಮ ನೀಡುವಾಗ ಅಮೀನಳ ಪಾಲಿಗೆ ಬಂದ ಆಸ್ತಿಯೆಂದರೆ ಇವಿಷ್ಟೆ.ಮಗುವಿನ ಜನನದ ಸುದ್ದಿ ಅರಿತ ಮಾವ ಮುತ್ತಾಲಿಬ್ ಬಂದು ಮೊಮ್ಮಗನನ್ನು ಮುದ್ದಾಡಿ ಕಾಬಾಕ್ಕೆ ಮಗುವನ್ನೊಯ್ದು,ದೇವರಿಗೆ ಕೃತಜ್ಞತೆ ಸಲ್ಲಿಸಿ ಅಲ್ಲಿಯೆ ಕಂದನಿಗೆ 'ಮಹಮದ್' ಎಂದು ನಾಮಕರಣ ಮಾಡಿಬಿಟ್ಟ (ಅರಬ್ಬಿಯಲ್ಲಿ ಮಹಮದ್ ಎಂದರೆ ಕೊಂಡಾಡುವ ಎನ್ನುವ ಅರ್ಥ ಬರುತ್ತದೆ). ಮಹಮದ್ ಹುಟ್ಟಿದ ಆ ವರ್ಷ ಅರಬ್ಬಿಯನ್ ಪಂಚಾಗದ ಪ್ರಕಾರ ಆನೆಯವರ್ಷವಾಗಿತ್ತು.

ಅರೇಬಿಯಾದ ಉತ್ತಮ ಕುಲದವರ ವಾಡಿಕೆಯಂತೆ ಹುಟ್ಟಿದ ಮಗುವಿಗೆ ದಾದಿಯಿಂದ ಮೊಲೆಯೂದಿಸುವ ವ್ಯವಸ್ಥೆ ಮಾಡಲಾಯಿತು.ಇದಕ್ಕಾಗಿ ಥುವೈಬಾ ಎಂಬ ಗುಲಾಮಳ ಕೈಗೆ ಮಗುವನ್ನ ದಾಟಿಸಲಾಯಿತು.ಸ್ವಲ್ಪ ಸಮಯದ ನಂತರ ಹಲೀಮಾ ಎಂಬ ಇನ್ನೊಬ್ಬ ದಾದಿಯನ್ನೂ ಅದಕ್ಕಾಗಿ ನೇಮಿಸಿಕೊಳ್ಳಲಾಯಿತು.'ಬೆನ್ ಸಾದ್' ಬುಡಕಟ್ಟಿನವಳಾದ ಈ ದಾದಿಯ ಎದೆಹಾಲು ಕುಡಿದು ಬೆಳೆದ ಮೊಹಮದ್ ಐದು ವರ್ಷ ಪ್ರಾಯದವನಾದ.ಮರುಭೂಮಿಯ ಭೀಕರ ವಾತಾವರಣದಲ್ಲೂ ಮಗುವಿನ ಆರೋಗ್ಯ ಸ್ಥಿರವಾಗಿರಲಿ ಎನ್ನುವ ಕಾರಣದಿಂದ ತಾಯಿ ಅಮೀನಾ ಈ ವ್ಯವಸ್ಥೆ ಮಾಡಿದ್ದಳು.

ಆರನೆ ವಯಸ್ಸಿನಲ್ಲಿ ಮಗುವನ್ನ ತನ್ನೊಂದಿಗೆ ಬಂಧುಗಳಿಗೆ ತೋರಿಸಲು ಅಮೀನಾ ಮದೀನಕ್ಕೆ ಕರೆದೊಯ್ದಳು.ಅಲ್ಲಿ ಗಂಡನ ಮನೆ ಹಾಗು ಆತನ ಸಮಾಧಿಯ ದರ್ಶನವನ್ನ ಮಗುವಿಗೆ ಮಾಡಿಸಿದಳು.ಒಂದು ತಿಂಗಳು ಅಲ್ಲಿಯೆ ಉಳಿದು ಮರುಪಯಣಕ್ಕಾಗಿ ಮಗು ಹಾಗು ಗುಲಾಮಳಾದ ಲುಮ್' ಐಮನಳೊಂದಿಗೆ ಒಂಟೆಯೇರಿದ ಅಮೀನಾ ವಾತಾವರಣದ ವೈಪರೀತ್ಯದಿಂದ ತೀವ್ರ ಅಸ್ವಸ್ಥಲಾಗಿ ನಡುದಾರಿಯಲ್ಲೆ ಮರಣಿಸಿದಳು.ಆಕೆ ಅಸುನೀಗಿದ 'ಅಲ್-ಅಬ್ಬಾ'ದಲ್ಲಿಯೆ ಆಕೆಯನ್ನ ಮಣ್ಣುಮಾಡಲಾಯಿತು.ಹೀಗೆ ಎಳೆಯ ಪ್ರಾಯದಲ್ಲಿಯೆ ಮಹಮದ್ ತಬ್ಬಲಿಯಾಗಬೇಕಾಯಿತು.ಗುಲಾಮಳಾದ ಲುಮ್-ಐಮನ್ ಮೆಕ್ಕಾಗೆ ಮಗುವನ್ನು ಕರೆದುಕೊಂಡು ಹೋದಳು.ಮುಂದೆ ಆಕೆಯೆ ಮಹಮದ್'ನ ಸಾಕುತಾಯಿಯಾಗಿ ದೇಖಾರೇಕಿ ನೋಡಿಕೊಂಡು ಬೆಳಸಿದಳು.

ಅದರ ಖರ್ಚನ್ನೆಲ್ಲ ತಾತ ಅಬ್ದುಲ್ ಮುತ್ತಾಲಿಬ್ ವಹಿಸಿಕೊಂಡ.ಅದಾಗಲೆ ಎಂಬತ್ತು ವರ್ಷದ ಆಸುಪಾಸಿನಲ್ಲಿದ್ದ ಆತ ಮೊಮ್ಮಗನನ್ನು ಬಲು ಮುದ್ದಿನಿಂದಲೆ ಸಾಕಿ ಬೆಳೆಸಿದ.ಆದರೆ ವೃದ್ದಾಪ್ಯದ ಕಾರಣ ಮುಂದಿನ ಎರಡುವರ್ಷಗಳಲ್ಲಿ ಆತನೂ ಮರಣಿಸಿದ್ದರಿಂದ ಅಜ್ಜನ ಮುಚ್ಚಟೆ-ಪ್ರೀತಿ-ವಿಶ್ವಾಸಗಳನ್ನು ಕಂಡುಂಡಿದ್ದ ಮಹಮದ್ ಆಘಾತಗೊಂಡ.ಆತನ ಮನಸ್ಸಿನ ಮೇಲೆ ಈ ಸಾವು ಗಾಢ ಪರಿಣಾಮಬೀರಿತು.ಹೀಗಾಗಿ ಆತನ ಹೊಣೆಗಾರಿಕೆ ದೊಡ್ಡಪ್ಪ ಅಬು ತಾಲಿಬ್'ಗೆ ಸೇರಿತು.ತನ್ನ ತಂದೆಯಷ್ಟೆ ಕರುಣಾಮಯಿಯಾಗಿದ್ದ ಆತ ಮುಂದಿನ ತಾರುಣ್ಯದವರೆಗೆ ಮಹಮದನನ್ನು ಒಲವಿನಿಂದಲೆ ಸಾಕಿ ಬೆಳೆಸಿದ.

ಮುಂದೆ ಅಬು-ತಾಲಿಬ್ ವ್ಯಾಪಾರಕ್ಕಾಗಿ ಸಿರಿಯಾದತ್ತ ಪ್ರಯಾಣಿಸಬೇಕಾಗಿ ಬಂದಾಗ ಆಗಿನ್ನೂ ಹನ್ನೆರಡರ ಹರೆಯದಲ್ಲಿದ್ದ ಮಹಮದ್ ಮನೆಯಲ್ಲಿ ಒಂಟಿಯಾಗಿರಬಯಸದೆ ಹಠ ಹೂಡಿ ತಾನೂ ಅವನೊಂದಿಗೆ ತೆರಳುತ್ತಾನೆ.ಈ ಪ್ರಯಾಣ ಆತನ ಬದುಕಲ್ಲಿ ಆರಂಭಿಕ ಅನುಭವ ತರುತ್ತದೆ.ಸಿರಿಯಾದಲ್ಲಿ ಆತ ಕ್ರೈಸ್ತರ ಹಾಗೂ ಯಹೂದಿಗಳ ಸಂಪರ್ಕಕ್ಕೆ ಬಂದ.ಮುಖ್ಯವಾಗಿ ಆತನಿಗೆ ಅಲ್ಲಿ ಯಹೂದಿಗಳ ಭಾಷೆ,ಸಂಸ್ಕೃತಿ,ರೀತಿನೀತಿ,ಕಟ್ಟಳೆ-ರಿವಾಜು,ಬದುಕಿನ ನಿಯಮಗಳೆಲ್ಲದರ ಪರಿಚಯವಾಯಿತು ಎಂದಿದ್ದಾನೆ ಇತಿಹಾಸಕಾರ ಮೂಯಿರ್.

'ಒಕಾಜಾ' ಅಕಾಲದ ಅರೇಬಿಯಾದ ಪ್ರಸಿದ್ಧ ಸಂತೆ ಕೂಡುವ ವ್ಯಾಪಾರಿ ಸ್ಥಳವಾಗಿತ್ತು.ಬೆನಿ ಹವಾಜಿನ್ ಹಾಗೂ ಖುರೈಷಿಗಳು ಅಲ್ಲಿ ವ್ಯಾಪಾರಕ್ಕಾಗಿ ಪ್ರತಿವರ್ಷಕ್ಕೊಮ್ಮೆ ಸೇರುವ ಪರಿಪಾಠವಿತ್ತು ವಾಸ್ತವವಾಗಿ ಇವರಿಬ್ಬರಲ್ಲೂ ಜನಾಂಗೀಯ ದ್ವೇಷದ ಭವ್ಯಹಿನ್ನೆಲೆ ಇದ್ದುದ್ದರಿಂದ ಪರಸ್ಪರ ನೆತ್ತರು ಹರಿಸಿ ಅವರು ಕಾದಾಡುತ್ತಿದ್ದರು.ಎರಡೂ ಬುಡಕಟ್ಟಿನ ಹಿರಿಯರು ಈ ಅನಗತ್ಯ ವೈರತ್ವದಿಂದ ಸತ್ತವರ ಕುಟುಂಬಗಳಿಗೆ 'ಪರಿಹಾರ' ನೀಡುವ ಮೂಲಕ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಹೆಣಗುತ್ತಿದ್ದರು.ಅವರಲ್ಲಿ ಪರಸ್ಪರ ಇದ್ದ ಈರ್ಷ್ಯೆ-ಪ್ರತಿಕಾರದ ಸ್ವಭಾವಗಳ ಬಗ್ಗೆ ಒಂದು ರಂಜನೀಯ ಕತೆ ಚಾಲ್ತಿಯಲ್ಲಿದೆ .'ಕಿನಾನಾ' ಬುಡಕಟ್ಟಿಗೆ ಸೇರಿದ ಒಬ್ಬ ವ್ಯಕ್ತಿ ಹವಾಜಿನ್ ಬುಡಕಟ್ಟಿನ ಸಾಲಗಾರನಿಂದ ಸಾಲ ಪಡೆದು ಅದನ್ನು ಹಿಂದಿರುಗಿಸದಿದ್ದಾಗ ಇದೆ 'ಒಕಾಜ್' ಸಂತೆಯ ಪ್ರಮುಖ ಸ್ಥಳದಲ್ಲಿ ಕೂತು ತನ್ನ ಬಳಿ ಒಂದು ಮಂಗವನ್ನು ಕಟ್ಟಿಹಾಕಿಕೊಂಡು "ಯಾರು ನನಗೆ ಇಂತಹದ್ದೆ ಒಂದು ಮಂಗವನ್ನು ನೀಡುತ್ತಾರೊ ಅವರಿಗೆ ಸಾಲ ಕೊಂಡವನ ಮೇಲೆ ನನಗಿರುವ ಹಕ್ಕನ್ನು ಬಿಟ್ಟು ಕೊಡುತ್ತೇನೆ!' ಎಂದು ಕೂಗಿಕೂಗಿ ಹೇಳಿದ.ಅವನ ಧ್ವನಿಯಲ್ಲಿ 'ಕಿನಾನಾ' ಪಂಗಡದ ಬಗ್ಗೆ ಇದ್ದ ಹೀಯಾಳಿಕೆಯನ್ನ ಕೇಳಿ ಕೆರಳಿದ ಆಗುಂತಕನೊಬ್ಬ ತಕ್ಷಣವೆ ಕೈಗತ್ತಿಯಿಂದ ಆ ಮಂಗದ ಕುತ್ತಿಗೆ ಕಡಿದು ಹಾಕಿದ...ಮುಂದೆ ಎರಡುದಿನ ಬಿಡದೆ ನಡೆದ ಕಾಳಗಕ್ಕೆ ಇಷ್ಟು ಕಾರಣ ಧಾರಾಳ ಸಾಕಾಯಿತು!.

ಇಂತಹ ದುರದೃಷ್ಟಕರ ಘಟನೆಗಳನ್ನು ಮರುಕಳಿಸದಂತಾಗಿಸಲು ಎರಡೂ ಗುಂಪಿನ ಹಿರಿಯರು ಅಲ್ಲಿಗೆ ವ್ಯಾಪಾರಕ್ಕೆ ಬರುವಯಾರೂ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ತರುವಂತಿಲ್ಲವೆಂದೂ,ಬಳಿಯಿರುವುದನ್ನು ಮೆಕ್ಕಾದ ಅಬ್ದುಲ್ಲ ಇಬ್ನ ಜುಡಾನನ ಬಳಿ ಒತ್ತೆಯಿಸಿ ನಿರಾಯುಧರಾಗಿ ಬರುವಂತೆ ಕಾನೂನನ್ನೆ ಜಾರಿ ಮಾಡಿದರು.ಹೀಗಾಗಿ ಮುಂದೆ ಬಹುಕಾಲ ಅಲ್ಲಿನ ಶಾಂತಿಯನ್ನ ಕಾಪಾಡಿಕೊಳ್ಳುವುದು ಸಾಧ್ಯವಾಯಿತು,ಆದರೆ ಕ್ರಿಸ್ತಶಕ 580ರಲ್ಲಿ ಅಲ್ಲೊಂದು ಕೊಲೆಯಾಯಿತು,'ಅಲ್ ಹಿರಾ' ಪ್ರಾಂತ್ಯದ ರಾಜಕುಮಾರ ವ್ಯಾಪಾರಕ್ಕಾಗಿ ಅಲ್ಲಿಗೊಂದು ಕ್ಯಾರವಾನನ್ನು ಆ ಹಂಗಾಮಿನಲ್ಲಿ ಕಳುಹಿಸಿದ್ದ.ಅವನ ಬಗ್ಗೆ ಈರ್ಷ್ಯೆಯಿದ್ದ ಖುರೈಶಿಗಳಲ್ಲೊಬ್ಬ ಆ ಕ್ಯಾರವಾನನ್ನು ಲೂಟಿಹೊಡೆಯಲಿಕ್ಕಾಗಿ ಹವಾಜಿನರ ಆ ಕ್ಯಾರವಾನಿನ ಮುಖಂಡನನ್ನು ಹತ್ಯೆ ಮಾಡಿ ಸಂಪತ್ತನ್ನು ದೋಚಿದ.ಈ ಸುದ್ದಿ ತಿಳಿದ ಖುರೈಶಿಗಳೆಲ್ಲ ಮೆಕ್ಕಾದಲ್ಲಿ ಒಂದಾದರು ಅವರಿಗೆ ಮುಂದಾಗುವ ಅನಾಹುತದ ಮುನ್ಸೂಚನೆ ಸಿಕ್ಕಿತು.ಅವರ ಎಣಿಕೆಯಂತೆ ಹವಾಜಿನರು ಖುರೈಷಿಗಳ ಬೆನ್ನು ಹತ್ತಿದರು.ಆದರೆ ಅವರಾಗಲೆ ಮೆಕ್ಕಾದಲ್ಲಿದ್ದುದ್ದರಿಂದ ಪವಿತ್ರ ಸ್ಥಳದಲ್ಲಿ ಕಾದಾಡಲಾಗದೆ ಕೈಚೆಲ್ಲ ಬೇಕಾಯಿತು.ಹೀಗಾಗಿ ಮರುವರ್ಷ ಒಕಾಜ್'ನಲ್ಲೆ ಕಾದಾಡಲು ಆಮಂತ್ರಣ ನೀಡಿ ಹವಾಜಿನರು ಅಲ್ಲಿಂದ ನಿರ್ಗಮಿಸಿದರು.ಈ ಆಮಂತ್ರಣವನ್ನು ಒಪ್ಪಿದ ಖುರೈಷಿಗಳು ಮರುವರ್ಷ ತಪ್ಪದೆ ಬಂದು ಜೀವದ ಹಂಗು ಬಿಟ್ಟು ಹವಾಜಿನರೊಂದಿಗೆ ಕಾದಾಡಿದರು.ಹೀಗೆ ನಾಲ್ಕುವರ್ಷ ಕದನ ನಡೆದರೂ ಯಾರೊಬ್ಬರೂ ಗೆಲ್ಲದೆ,ಯಾರೊಬ್ಬರೂ ಸೋಲದೆ ಕಡೆಗೆ ಸಂಧಾನ ಅನಿವಾರ್ಯವಾಯಿತು! ಹವಾಜಿನರಲ್ಲೆ ಹೆಚ್ಚಿನ ಪ್ರಾಣ ಹಾನಿಯಾಗಿದ್ದರಿಂದ ಅವರಿಗೆ 'ರಕ್ತಹಣ' (blood money) ವನ್ನು ನೀಡುವ ನಿಯಮಕ್ಕನುಸಾರವಾಗಿ ಖುರೈಷಿಗಳು ತಮ್ಮ ಜನರನ್ನು ಅವರ ಬಳಿ ಒತ್ತೆಯಿತ್ತರು.ಅವರಲ್ಲಿ ಮುಂದೆ ಮಹಮದ್'ನ ನೆಂಟ ಹಾಗೂ ವೈರಿಯಾಗಿದ್ದ ಅಬು ಸಫ್ಯಾನನೂ ಒಬ್ಬನಾಗಿದ್ದ.ಈ ಕದನದಲ್ಲಿ ಖುರೈಷಿಗಳ ಪೈಕಿ ಎಲ್ಲಾ ಪಂಗಡದವರೂ ಪಾಲ್ಗೊಂಡಿದ್ದರು.ಉಮೈಯ್ಯಾ ಹಾಗೂ ಹಾಶಿಮ್ ಕುಟುಂಬದವರು ಅವರಲ್ಲಿ ಪ್ರಮುಖರಾಗಿದ್ದರು.ಈ ಕಾದಾಟದಲ್ಲಿ ಮಹಮದ್ ನೇರವಾಗಿ ಕತ್ತಿ ಹಿಡಿದು ಕಾದಾಡದಿದ್ದರೂ ರಣರಂಗದಲ್ಲಿ ಬತ್ತಳಿಕೆಯಿಂದ ನೆಲಕ್ಕೆ ಬಿದ್ದ ಬಾಣಗಳನ್ನು ಆಯುವ ಕೆಲಸ ಮಾಡಿ ಯೋಧರಿಗೆ ನೆರವಾದ.

ಈ 'ಅಪವಿತ್ರ ಯುದ್ಧ' ನಾಲ್ಕುವರ್ಷ ನಡೆದು ಶಾಂತಿ ನೆಲೆಸಿದ ನಂತರ ಮಹಮದ್ ಬುಡಕಟ್ಟಿನ ಕುರಿ-ಮೇಕೆಗಳನ್ನು ಊರ ಹೊರಗಿನ ಕಣಿವೆಗಳಲ್ಲಿ ಮೇಯಿಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.ಗುಡ್ಡಬೆಟ್ಟಗಳಿಂದ ಆವೃತವಾಗಿದ್ದ ಈ ಪರಿಸರದಲ್ಲಿ ತನ್ನ ಸ್ವಭಾವಕ್ಕನುಗುಣವಾಗಿ ಏಕಾಂತದಲ್ಲಿ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತಾ,ಅಲ್ಲಿನ ಮೌನದಲ್ಲಿ ಲೀನವಾಗುವ -ಕಣಿವೆಯ ಭವ್ಯತೆಯನ್ನು ಅವಲೋಕಿಸಿ ಅನುಭವಿಸುವ ನಿರಾಯಾಸದ ಅವಕಾಶ ಮಹಮದನಿಗೆ ಒದಗಿ ಬಂತು.

ಒಂಟಿಯಾಗಿ ಕುರಿಮಂದೆಯೊಂದಿಗೆ ಹಗಲು ರಾತ್ರಿ ಕಳೆದರೂ ಮಹಮದ್ ಯವ್ವನದ ಸಹಜ ಆಕರ್ಷಣೆಗಳಿಗೆ ಬಲಿಯಾಗದೆ ತನ್ನ ಸದ್-ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದನು.ಉಚ್ಛರೀತಿಯ ನಡತೆಹೊಂದಿದ್ದ ಆತ ಮೆಲು ಮಾತಿನ-ನಾಜೂಕಿನ ನಡೆ ಹೊಂದಿದ್ದ ವ್ಯಕ್ತಿಯಾಗಿ ಗುರುತಿಸಲ್ಪಟ್ಟನು.ಗಾಂಭೀರ್ಯದ ರೀತಿಯಲ್ಲಿ ಪಳಗಿದ್ದ ಆತ ಏಕಾಗ್ರಚಿತ್ತನಾಗಿ ತನ್ನದೆ ಭಾವಪ್ರಪಂಚದಲ್ಲಿ ಮುಳುಗಿ ಹೋಗಿರುತ್ತಿದ್ದ.ಅವನ ಇವೆ ಗುಣಗಳಿಂದ ಮೆಕ್ಕಾ ನಿವಾಸಿಗಳಿಂದ ಮಹಮದ್ 'ಅಲ್-ಅಮೀನ್' ಎಂದು ಹೊಗಳಿಸಿಕೊಂಡ.ಹಾಗೆಂದರೆ ಅರಬ್ಬಿಯಲ್ಲಿ 'ಶ್ರದ್ಧಾಳು' ಎಂದರ್ಥ.ಹೀಗೆ ಯವ್ವನವನ್ನು ದೊಡ್ಡಪ್ಪ ಅಬುತಾಲಿಬನ ಮನೆಯಲ್ಲೆ ಕಳೆದ ಆತ ಮುಂದೆ ಅವನ ಸಂಸಾರದ ಸದಸ್ಯರ ಸಂಖ್ಯೆ ಹೆಚ್ಚಾಗಿ,ಸಂಸಾರ ನಿರ್ವಹಣೆಯ ಖರ್ಚು ಹೆಚ್ಚಾದುದರಿಂದ ತಾನೂ ದೊಡ್ಡಪ್ಪನ ಹೊಣೆಗೆ ಹೆಗಲುಕೊಡುವ ಅನಿವಾರ್ಯತೆ ಹುಟ್ಟಿತು.ಹೀಗಾಗಿ ಉದ್ಯೋಗದ ನಿಮಿತ್ತ ಮಹಮದನನ್ನು ಅಬು-ತಾಲಿಬ್ ಸಿರಿಯಾದ ಕಡೆ ಸಾಗುವ ಒಂದು ಕ್ಯಾರವಾನ್'ಗೆ ಸೇರಿಸಿದ.ಆ ಕ್ಯಾರವಾನ್ ಖತೀಜಾ ಎಂಬ ಸಿರಿವಂತ ವಿಧವೆಗೆ ಸೇರಿತ್ತು.ಮೊಹಮದ್ ಆ ಕ್ಯಾರವಾನಿನ ಭಾಗವಾದ,ತಾನು ಹದಿಮೂರುವರ್ಷಗಳ ಹಿಂದೆ ದೊಡ್ಡಪ್ಪನೊಂದಿಗೆ ಸಾಗಿದ ದಾರಿಯಲ್ಲೆ ಮತ್ತೆ ಈಗಲೂ ಆತ ಸಾಗಬೇಕಾಯಿತು.ಕ್ಯಾರವಾನ್ ಸಿರಿಯಾದ ರಾಜಧಾನಿ 'ಡಮಾಸ್ಕಸ್' ಸಮೀಪದ ಬೋಸ್ರಾದಲ್ಲಿ ಲಂಗರು ಹಾಕಿತು.ಮಹಮದ್ ಚಾಕಚಾಕ್ಯತೆಯಿಂದ ಉತ್ತಮ ವ್ಯಾಪಾರವನ್ನೆ ಮಾಡಿ ಲಾಭದೊಂದಿಗೆ ಮರಳಿ ಸ್ವದೇಶದತ್ತ ಹೆಜ್ಜೆ ಹಾಕಿದ.

ಆಗಲೆ ಬೋಸರಾ ಪಟ್ಟಣದಲ್ಲಿದ್ದ ಸಿರಿಯನ್ ಕ್ರೈಸ್ತರ ಸಂಪರ್ಕ ಮಹಮದನಿಗೆ ಆಗಿ ಅವರಿಂದ ಪ್ರಭಾವ ಹೊಂದುವಂತಾಯಿತು.ಅವರ ಪೂಜಾರಿ,ಸನ್ಯಾಸಿಗಳ ಹಾಗೂ ಉಚ್ಚವರ್ಗದವರೊಂದಿಗೆ ಧಾರ್ಮಿಕ ಚರ್ಚೆ-ವಿಚಾರ ವಿನಿಮಯ ನಡೆಯಲು ಅದು ಕಾರಣವಾಯಿತು.ಇದರ ಪರಿಣಾಮವನ್ನು ಮುಂದಿನ ಮಹಮದನ ಧರ್ಮಭೋದನೆಗಳಲ್ಲಿ ಕಾಣಬಹುದಾಗಿದೆ.ಮೆಕ್ಕಾಗೆ ಹಿಂದಿರುಗಿದ ಮೊಹಮದ್ ಖತೀಜಾಳಿಗೆ ವ್ಯಾಪಾರದ ಪ್ರಾಮಾಣಿಕ ಲೆಕ್ಖದ ವರದಿ ಒಪ್ಪಿಸಿದ.ಹೀಗೆ ಆತ ಆಕೆಯ ಮನಗೆದ್ದ.

(ಇನ್ನೂ ಇದೆ...)

15 October 2011

ಮರಳುಗಾಡಿನ ಮರ್ಮರ...(ಭಾಗ -4)

ಇಸ್ಮಾಯಿಲ್'ನ ವಂಶಸ್ಥರಲ್ಲಿ ಅವರ್ ಬಿನ್ ಲುಹಾಯಿ ಪ್ರಸಿದ್ಧನಾಗಿದ್ದ.ಬಲು ಧರ್ಮಿಷ್ಠನಾಗಿದ್ದ ಆತ ತನ್ನ ಉದಾರ ದಾನ-ಧರ್ಮಗಳ ಕಾರಣದಿಂದ ಜನಾನುರಾಗಿಯಾಗಿದ್ದ.ಈ ಜನಪ್ರಿಯತೆಗೆ ಮಾರುಹೋದ ಅಲ್ಲಿನ ಬುಡಕಟ್ಟಿನವರು ಅವನನ್ನೆ ತಮ್ಮ ರಾಜನನ್ನಾಗಿ ಘೋಷಿಸಿಕೊಂಡರು.ಮೆಕ್ಕಾ ಹಾಗು ಅಲ್ಲಿನ ಕಾಬಾ ಅವನ ಆಳ್ವಿಕೆಗೆ ಒಳಪಟ್ಟಿತ್ತು.ಮಧ್ಯಪ್ರಾಚ್ಯದ ದೇಶಗಳಾದ ಸಿರಿಯಾ,ಲೆಬೆನಾನ್ ಹಾಗೂ ಪ್ಯಾಲಸ್ತೈನ್'ಗಳನ್ನು ಸಂದರ್ಶಿಸಿದ ಆತ ಅಲ್ಲಿನ ವಿಗ್ರಹಾರಾಧನೆಗಳಿಂದ ಅತ್ಯಂತ ಪ್ರಭಾವಿತನಾಗಿ ಅಲ್ಲಿಂದ ಮರಳುವಾಗ ತನ್ನ ಜೊತೆಯಲ್ಲಿಯೆ ಮೆಕ್ಕಾಗೆ ಒಂದು ವಿಗ್ರಹ ತಂದ.'ಹುಬಾಬ್' ಎಂದು ಆತ ಅದನ್ನು ಕರೆದು ಕಾಬಾದಲ್ಲಿ ಅದನ್ನ ಪ್ರತಿಷ್ಠಾಪಿಸಿದ.ತನ್ನ ಜನರಿಗೆ ಅದನ್ನ ಆರಾಧಿಸಲು ಆತ ಕರೆನೀಡಿದ.ತಮ್ಮ ರಾಜನ ಆಗ್ರಹಕ್ಕೆ ಮಣಿದ ಬುಡಕಟ್ಟಿನ ಮಂದಿ ಮತ್ತೆ ಹಳೆಯ ವಿಗ್ರಹಾರಾಧನೆಗೆ ಮರಳಿದರು.

ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಅಬ್ರಾಹಂ ಹಾಗೂ ಇಸ್ಮಾಯಿಲ್ ಕಾಬಾವನ್ನು ನಿರ್ಮಿಸಿದ ಬಳಿಕ ಅದರ ಒಡೆತನವನ್ನು "ಜೋರ್'ಹೂಮ್" ಬುಡಕಟ್ಟಿನವರು ತಮ್ಮ ವಶಕ್ಕೆ ತೆಗೆದುಕೊಂಡರು.ಆದರೆ ಅವರ ದುಂಡಾವರ್ತಿ ನಡೆ ಹೆಚ್ಚಿದ್ದರಿಂದ ಮೆಕ್ಕಾದ ಖುರೈಷಿ ಪಂಗಡದವರು ಅವರನ್ನು ಅಲ್ಲಿಂದ ಹೊಡೆದೋಡಿಸಬೇಕಾಯಿತು.ಖುರೈಷಿಗಳಲ್ಲಿ ಹುಲುಲ್ ಹಾಗೂ ಅರಾಮ್ ಎಂಬ ಎರಡು ಪಂಗಡಗಳಿದ್ದವು.ಅಲ್ಲದೆ 'ಬಾನ್ ಕಿನಾನಾಹ್' ಎನ್ನುವಲ್ಲಿಂದ ವಲಸೆ ಬಂದಿದ್ದ ಅನೇಕ ಕುಟುಂಬಗಳೂ ಮೆಕ್ಕಾದಲ್ಲಿ ವಾಸವಿದ್ದವು.ಖುರೈಷಿಗಳ 'ಕಹುಜಾಹ್ನ್' ಎಂಬಾತ ಕಾಬಾದ ಪಾರುಪತ್ಯ ವಹಿಸಿಕೊಂಡ.ಅನಂತರದ ಪಾರುಪತ್ಯದ ಜವಾಬ್ದಾರಿ ಅವನ ಸಂತತಿಯವರಿಗೆ ಸಂದಿತು.ಅವರು ಮುಂದೆ ಹಲೀಲ್ ಬಿನ್ ಹುಬೈಷಾ ಎಂಬಾತನಿಗೆ ಅದನ್ನ ವಹಿಸಿಕೊಟ್ಟರು.ಈ ಹಲೀಲ್'ನ ಮಗಳನ್ನು ಕುಸೈ ಬಿನ್ ಕಿಲಾಬ್ ಎಂಬಾತ ಲಗ್ನವಾಗಿ ಹಲೀಲ್ ಮರಣ ಹೊಂದಿದ ಬಳಿಕ ಬುಡಕಟ್ಟಿನ ಇತರ ಆಕ್ಷಾಂಶಿಗಳೊಂದಿಗೆ ಕಾದಾಡಿ ಕಾಬಾದ ಪಾರುಪತ್ಯಕ್ಕೆ ಪ್ರಯತ್ನಿಸಿದ.ಅಂತಿಮವಾಗಿ ಒಪ್ಪಂದವೊಂದು ಜರುಗಿ ಖುರೈಶಿಗಳಿಗೆ ಅಲ್ಲಿ ಹೆಚ್ಚಿನ ಅಧಿಕಾರ ಇರುವುದಾಗಿ ತೀರ್ಮಾನ ಹೊರಬಿದ್ದು ಅವನಿಗೆ ಕಾಬಾದ ಪಾರುಪತ್ಯವನ್ನ ಅವರ ಸಮ್ಮತಿ ಪಡೆದು ವಹಿಸಲಾಯ್ತು.ಅವನು ಕ್ರಮೇಣ ತನ್ನವರನ್ನಲ್ಲಿಗೆ ಬರಮಾಡಿಕೊಂಡು ಮುಂದೆ ತಾನೆ ಅಲ್ಲಿನ ರಾಜ ಎಂದು ಕರೆದುಕೊಂಡ!

ಕುಸೈನ ಆಡಳಿತದಲ್ಲಿ ಕಾಬಾಕ್ಕೆ ಬರುವ ಯಾತ್ರಿಕರಿಗೆ ನೀರು ನೀಡುವ ಪವಿತ್ರ ಕಾರ್ಯ ,'ಎನ್-ನದ್ವಾ' ಸಭಾಂಗಣದ ಯಜಮಾನಿಕೆ,ಯುದ್ಧ ದ್ವಜದ ಸ್ವಾಧೀನತೆ ಅವನ ಬಳಿಯೆ ಇತ್ತು.ಅವನ ನಂತರ ಅವನ ನಾಲ್ವರು ಮಕ್ಕಳು ಸೌಹಾರ್ದತೆಯಿಂದ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದಂತೆ ತಂದೆ ಹಾಕಿಕೊಟ್ಟಿದ್ದ ದಾರಿಯಲ್ಲೆ ಆಡಳಿತದ ಯಜಮಾನಿಕೆ ನಡೆಸಿದರು.ಆನಂತರ ಅವನ ಸಹೋದರರ ಮಕ್ಕಳ ಕೈಮೇಲಾಗಿ ಖುರೈಶಿಯರ ಅಬ್ಬೆ ಮುನಾಫನ ಮಗ ಅಲ್-ಮುತ್ತಲಿಬ್ ಪ್ರಮುಖನಾಗಿ ಹೊಮ್ಮಿದ.ಅವನ ನಂತರ ಮೆಕ್ಕಾ ಅವನ ತಮ್ಮ ಹಾಶೀಮನ ಕೈಸೇರಿತು.ಆದರೆ ಉಮಯ್ಯ ಎಂಬಾತ ಚಿಕ್ಕಪ್ಪನ ಮೇಲೆ ಹಕ್ಕಿಗಾಗಿ ವಾಜ್ಯ ಹೂಡಿದ.ಇದು ಪ್ರಕೋಪಕ್ಕೆ ತಿರುಗಿ ಹೋರಾಟ ನಡೆದರೂ ಹಾಶೀಮನದೆ ಮೇಲುಗೈಯಾಯಿತು.ಕ್ರಿಸ್ತಶಕ 510ರಲ್ಲಿ ಹಾಶೀಮ್ ಸತ್ತ ನಂತರ ಅವನ ಮಗ ಅಬ್ದುಲ್ ಮುತ್ತಾಲಿಬ್ ಬೆಳಕಿಗೆ ಬಂದ.ಇವನಿಗೆ ಒಟ್ಟು ಹನ್ನೆರಡು ಗಂಡು ಹಾಗು ಆರು ಹೆಣ್ಣು ಮಕ್ಕಳಿದ್ದರು.ಮುಂದೆ ಪ್ರವಾದಿ ಎಂದೆನಿಸಿದ ಮಹಮದ್ದನ ತಂದೆ ಅಬ್ದುಲ್ಲಾ ಇವರಲ್ಲೊಬ್ಬ.ಆತ ನಂತರ 'ಖುರಾಯಿಶ್' ಬುಡಕಟ್ಟಿನ 'ಸುಹ್ರಾ' ಮನೆತನದ ಅಮೀನಾ ಎನ್ನುವ ಕನ್ಯೆಯನ್ನ ವಿವಾಹ ಮಾಡಿಕೊಂಡ,ಇವರ ಒಬ್ಬನೆ ಮಗ ಮಹಮದ್.ದಾಖಲೆಗಳ ಪ್ರಕಾರ ಮಹಮದ್ ಜನಿಸಿದ್ದು ಕ್ರಿಸ್ತಶಕ 571ರಲ್ಲಿ.ಈ ಕಾಲಘಟ್ಟದಲ್ಲಿ ಮೆಕ್ಕಾದ ಮೇಲಿನ ಹಕ್ಕಿಗಾಗಿ ಆಗಾಗ ಹಾಶಿಮ್ ಹಾಗು ಉಮಯ್ಯಾನ ಸಂತತಿಯವರು ಕಾದಾಡುತ್ತಲೆ ಇದ್ದರು.ಅಲ್ಲಿನ ಶೇಖ್ ಪದವಿ ಗಳಿಸಿದ ಹಶೀಂ ಕುಲದವರು ಉಮೈದರನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ-ಕೆಣಕಿ ಈರ್ಷ್ಯೆಯಿಂದ ಅವರ ಸ್ಥಾನಮಾನಗಳಿಗೆ ಧಕ್ಕೆ ತರುತ್ತಲೆಯಿದ್ದರು.ಜೋರ್'ಹೂಮ್' ಬುಡಕಟ್ಟಿನವರು ಕಾದಾಟದಲ್ಲಿ ಸೋತ ನಂತರ ಮೆಕ್ಕಾದ ಒಡೆತನ ಖುಜಾಹ ಬುಡಕಟ್ಟಿಗೆ ಸರಿದಾಗ ಅವರು ಅಲ್ಲಿನ ಪವಿತ್ರ ಕಪ್ಪುಶಿಲೆ 'ಮುಕಾಂ ಇಬ್ರಾಹಿಮ್'ನ್ನು ಹಾಗೂ ಜುಮ್ ಜುಮ್ ಬಾವಿಯನ್ನೂ ಯಾರಿಗೂ ಸಿಗದಂತೆ ಹುಗಿದು ಮೆಕ್ಕಾವನ್ನು ತ್ಯಜಿಸಿ ಹೋದರು.ಕ್ರಮೇಣ ಕುಸೈ ಬಿನ್ ಕಿಲಾಬನ ಕಾಲಕ್ಕೆ ಮತ್ತೆ ಮೆಕ್ಕಾ ಮೆರಗು ಪಡೆಯಿತು.ಖುರೈಷಿಗಳು ಬಂದು ಅಲ್ಲಿ ನೆಲೆಯೂರಿದರು.ಆದರೆ ಅಬ್ದುಲ್ ಮುತ್ತಾಲಿಬನ ಕಾಲದವರೆಗೂ ಜುಮ್ ಜುಮ್ ಬಾವಿ ಪತ್ತೆಯೆ ಆಗಿರಲಿಲ್ಲ.ಮಹಮದ್'ನ ಅಜ್ಜ ಅಬ್ದುಲ್ ಮುತ್ತಲಿಬ್'ನಿಗೆ ಒಂದು ರಾತ್ರೆ ಬಿದ್ದ ಕನಸು ಅದರ ಕುರುಹನ್ನು ತೋರಿಸಿತು .ಆಪ್ರಕಾರವೆ ನೆಲ ಅಗೆದ ಅವನಿಗೆ ಬಾವಿ ಗೋಚರಿಸಿತು.ಇನ್ನೂ ನೆಲ ಅಗೆದಾಗ ಅಪಾರ ಶಸ್ತ್ರಾಸ್ತ್ರ ಹಾಗೂ ಚಿನ್ನಾಭರಣಗಳೂ ಅಲ್ಲಿ ದೊರೆತವು.ಇದರ ವಾಸನೆ ಹಿಡಿದ ಖುರೈಷಿಗಳು ಸಂಪತ್ತಿನ ಹಂಚಿಕೆಗೆ ಕೋರಿದರು,ಆದರೆ ಅಬ್ದುಲ್ ಮುತ್ತಾಲಿಬ್ ನಿರಾಕರಿಸಿದ.ಆದರೆ ಆತ ಸಮಸ್ಯೆಯ ಪರಿಹಾರಕ್ಕೆ ಮಧ್ಯವರ್ತಿಯೋಬ್ಬನ ನೇಮಕಕ್ಕೆ ಒಪ್ಪಿಕೊಂಡ! ಅದೆ ಸಮಯಕ್ಕೆ ಒಂದು ವಿಚಿತ್ರವಾದ ಹರಕೆಯನ್ನೂ ಹೊತ್ತ.

ಅದೇನೆಂದರೆ ದೇವರು ತನಗೆ ಹತ್ತು ಮಕ್ಕಳನ್ನು ಕರುಣಿಸಿದರೆ ಅವರಲ್ಲಿ ಒಬ್ಬನನ್ನು ಆತ ವಯಸ್ಸಿಗೆ ಬಂದ ಕೂಡಲೆ ಕಾಬಾದ ಗುಡಿಗೆ ಬಲಿನೀಡುವೆ! ಎಂಬುದಾಗಿತ್ತು.ಅದೆ ಪ್ರಕಾರ ಅವನಿಗೆ ಸಾಲಾಗಿ ಹತ್ತು ಮಕ್ಕಳಾದವು.ಅವರಲ್ಲಿ ಅಬ್ದುಲ್ಲ ಎಂಬಾತನಿದ್ದ,ಅವನೆ ಮುಂದೆ ಮಹಮದ್'ನ ತಂದೆಯಾದದ್ದು.ಮಕ್ಕಳಿಗೆ ಈ ವಿಷಯ ಅರುಹಿದ ಮುತ್ತಲಿಬ್,ಅವರು ತಂದೆಯ ಹರಕೆ ಪೂರೈಸಲು ಸಿದ್ಧರಾದರು.ಆದರೆ ಯಾರನ್ನ ಬಲಿ ನೀಡೋದು ಎಂಬ ಪ್ರಶ್ನೆ ಉದ್ಭವಿಸಿತು.

ಅದಕ್ಕೆ ಪರಿಹಾರವಾಗಿ ಕಾಬಾದ 'ಹುಬುಲ್' ವಿಗ್ರಹದ ಮುಂದೆ ಹತ್ತೂ ಜನರ ಹೆಸರು ಬರೆದ ಪ್ರತ್ಯೇಕ ಬಾಣಗಳನ್ನಿಟ್ಟು ಅಲ್ಲಿನ ಪೂಜಾರಿಯಿಂದ ಒಂದನ್ನು ಎತ್ತಿಸಲಾಯಿತು.ಸಂಪ್ರದಾಯದ ಪ್ರಕಾರ ಅದನ್ನ ಬಿಲ್ಲಿಗೆ ಹೂಡಿ ಹೊಡೆದಾದ ನಂತರ ನೋಡಿದಾಗ ಅದು ಅಬ್ದುಲ್ಲಾನ ಹೆಸರಿನದಾಗಿತ್ತು! ಅವನ ಬಗ್ಗೆ ಕನಿಕರಗೊಂಡ ಖುರೈಷಿಗಳು ಮುತ್ತಲಿಬ್ ಬಲಿ ನೀಡಲು ಒರೆಯಿಂದ ಕತ್ತಿ ತೆಗೆದಾಗಲೆ ಅವನನ್ನ ತಡೆದರು.ಹೀಗಾದರೆ ಹರಕೆ ಪೂರೈಕೆ ಹೇಗೆಂದು ಆತ ಕೇಳಿದಾಗ,ಅಬ್ದುಲ್ಲಾನ ಬದಲು ಹತ್ತು ಒಂಟೆ ಬಲಿನೀಡಲು ಸೂಚಿಸಲಾಯಿತು.ಅವರ ಸೂಚನೆಯಂತೆ ಒಂಟೆಗಳನ್ನು ಪ್ರತಿನಿಧಿಸುವ ಹೆಸರುಗಳ ಒಟ್ಟಿಗೆ ಅಬ್ದುಲ್ಲಾನ ಹೆಸರಿನ ಚೀಟಿ ಇಟ್ಟು ಎತ್ತಿದಾಗ ಅಬ್ದುಲ್ಲನ ಚೀಟಿಯೆ ಬಂತು! ಹೀಗೆ ಹತ್ತರ ಸಂಖ್ಯೆಗಳಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಿಸುತ್ತಾ ಹೋದಾಗಲೂ ದುರಾದೃಷ್ಟವಶಾತ್ ಅಬ್ದುಲ್ಲಾನ ಹೆಸರೆ ಮತ್ತೆ ಮತ್ತೆ ಬಂತು! ಕಡೆಗೆ ಅವನ ಹೆಸರು ತಪ್ಪಿದ ಚೀಟಿ ಮೇಲೇಳುವಾಗ ಒಂಟೆಗಳ ಸಂಖ್ಯೆ ನೂರು ಮುಟ್ಟಿತ್ತು.ಹೀಗಾಗಿ ಆ ನೂರೂ ಒಂಟೆಗಳನ್ನ ಬಲಿನೀಡಿ ಮುತ್ತಲಿಬ್ ತನ್ನ ಹರಕೆ ಮುಟ್ಟಿಸಿದ.ಹೀಗಾಗಿ ಮುಂದೆ ಮಹಮದ್ ತಾನು 'ಎರಡು ಬಲಿದಾನಗೈದವರ ಮಗ" ಎಂದು ಹೇಳಿಕೊಳ್ಳಲು ಇದೆ ಕಾರಣ.

ಮೆಕ್ಕವನ್ನ ಯಾವ ಅಧಿಕೃತ ಸರಕಾರಗಳೂ ಎಂದೂ ಆಳಿರಲಿಲ್ಲ.ಅದು ಆಗಾಗ ಬುಡಕಟ್ಟುಗಳ ಅಧೀನದಲ್ಲಷ್ಟೆ ಇತ್ತು.ಅವಕ್ಕೂ ಅವುಗಳದ್ದೆ ಆದ ರೀತಿನೀತಿ,ನಡೆನುಡಿಗಳಿದ್ದವು.ಕ್ಷುಲ್ಲಕ ಕಾರಣಕ್ಕೂ ರಕ್ತಚಲ್ಲಿ ಕಾದಾಡುವ ಹಾಗೂ ಪ್ರತಿಕಾರಕ್ಕಾಗಿ ಹಾತೊರೆಯುವ ಅರಬ್ಬರ ಗುಣ ಇಂದಿಗೂ ಅಷ್ಟೆ ಪ್ರಖರವಾಗಿರುವುದನ್ನು ಕಾಣಬಹುದಾಗಿದೆ.

ಒಂದು ಬಾರಿ ಒಬ್ಬನ ರಕ್ತ ಚಲ್ಲಿದಾಗ ಆ ವ್ಯಕ್ತಿಯ ಕುಟುಂಬ,ಬುಡಕಟ್ಟು,ಪಂಗಡ,ಜನಾಂಗದ ಉಳಿದವರು ಅವನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಅಥವಾ ಅವನ ಬುಡಕಟ್ಟನ್ನು ಪ್ರತಿಕಾರದ ಸಲುವಾಗಿ ಬೇಟೆಯಾಡುವುದು ಅಂದೂ ಸಾಮಾನ್ಯವಾಗಿತ್ತು,ಇಂದೂ ಸಾಮಾನ್ಯವಾಗಿಯೆ ಉಳಿದುಬಂದಿದೆ! ಹಾಗೊಂದುವೇಳೆ ಎದುರಾಳಿಗಳು ಬಲಿಷ್ಠರಾಗಿದ್ದಾಗ ಕೆಲಕಾಲ ಹಿಂದಡಿ ಇಡಲಾಗುತ್ತಿತ್ತಾದರೂ ಒಂದೊಮ್ಮೆ ಅವಕಾಶ ಸಿಕ್ಕರೆ ಪ್ರತಿಕಾರ ತೀರಿಸಿಕೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕೆಂದೆ ಅಲ್ಲಿ ಬಗೆಯಲಾಗುತ್ತಿತ್ತು.ಅದಕ್ಕೆ ಅಗತ್ಯವಾಗಿ ಇನ್ನೊಬ್ಬ ಬಲವಂತನ ನೆರವನ್ನು ಪಡೆಯಲಾಗುತ್ತಿತ್ತು.ಅಂತಹ ಒಬ್ಬ ಬಲವಂತನೆ ಪ್ರವಾದಿ ಮಹಮದ್ ಪೂರ್ವಜ ಕೂಸೈ.ಕ್ರಿಸ್ತಶಕ 400ರ ಕಾಲಕ್ಕೆ ಈತ ಪ್ರಶ್ನಾತೀತನಾಗಿರಲು ಜನಬೆಂಬಲಿತ ಈತನ ಬಾಹುಬಲವೆ ಕಾರಣ ಎಂದರೂ ತಪ್ಪಿಲ್ಲ.

(ನಿರೂಪಣೆ ಇಲ್ಲಿಗೆ ಮುಗಿಯಿತು...ಇನ್ನು ಪ್ರವಾದಿಯ ಕಥೆ ಶುರು...)

ಮರಳುಗಾಡಿನ ಮರ್ಮರ...(ಭಾಗ -3)

ಈ ಕಾಬಾ ಗುಡಿಯ ಸ್ಥಾಪನೆ,ಆರಾಧನೆ ಅರೇಬಿಯಾದ ಪುರಾಣ ಕಥೆಗಳಲ್ಲಿ ಬರುವ ಯಹೂದಿ ಹಾಗು ಕ್ರೈಸ್ತರ ಪ್ರವಾದಿ ಅಬ್ರಾಹಂನಿಂದ ಆಯಿತು ಎಂದು ಮುಸ್ಲೀಮರು ನಂಬುತ್ತಾರೆ.ದೇವರು ಅಬ್ರಾಹಂನನ್ನು ಭೂಮಿಗೆ ಕಳುಹಿಸಿ "ದೇವರೊಬ್ಬನೆ ಹಾಗೂ ಅಬ್ರಾಹಂ ಆತನ ಪ್ರತಿನಿಧಿ" ಎಂದು ಸಾರಲು ಆದೇಶಿಸುತ್ತಾನೆ.ಈ ಅಬ್ರಾಹಂನಾದರೋ ಸ್ವತಹ ಪ್ರವಾದಿಯಾಗಿದ್ದರೂ ಕೇವಲ ಮೂರೆ ಬಾರಿ ತನ್ನ ಜೀವನದಲ್ಲಿ ಸುಳ್ಳುಹೇಳಿರುತ್ತಾನೆ.ಎರಡು ಬಾರಿ ದೇವರ ಸಲುವಾಗಿ "ನನಗೆ ಸೌಖ್ಯವಿಲ್ಲ" ಅಂತಲೂ,"ಇಗೋ! ಇದೆ ಆ ಬೃಹತ್ ವಿಗ್ರಹ ಎಸಗಿದೆ!" ಅಂತಲೂ ಹಾಗೂ ಮೂರನೆಬಾರಿ ತನ್ನ ಮಡದಿ ಸಾರಾಳ ದೆಸೆಯಿಂದ ಸುಳ್ಳು ಹೇಳುತ್ತಾನೆ.ಆ ಸುಳ್ಳಿನ ಕಥೆ ಹೀಗಿದೆ.ಅಲೆಮಾರಿಯಾಗಿದ್ದ ಅಬ್ರಾಹಂ ಹೀಗೆ ಸುತ್ತುತ್ತಾ ಪ್ರಜಾಪೀಡಕನಾಗಿದ್ದ ರಾಜನೊಬ್ಬನ ರಾಜ್ಯಕ್ಕೆ ಬಂದಾಗ ಆ ಕಟುಕ ರಾಜ ತನ್ನ ಹೆಂಡತಿಗಾಗಿ ಹಂಬಲಿಸಿಯಾನು ಎಂದರಿತು,ಹೆಂಡತಿಗೆ 'ತಾನು ಅವಳ ಅಣ್ಣನೆಂದು...ಪತಿಯಲ್ಲವೆಂದೂ!' ಹೇಳುವಂತೆ ತಿಳಿಸುತ್ತಾನೆ.ಅವನು ನೆನೆಸಿದಂತೆ ರಾಜದೂತರು ಅವಳನ್ನು ರಾಜನ ಸನ್ನಿಧಿಗೆ ಕೊಂಡೊಯ್ಯುತ್ತಾರೆ.ಅಲ್ಲಿ ಅವಳನ್ನು ಕಂಡು ಮೋಹಿಸುವ ರಾಜ ಅವಳ ಕೈ ಹಿಡಿಯಲು ಧಾವಿಸುತ್ತಾನೆ.ದುರದೃಷ್ಟವಶಾತ್ ಆ ಕೈ ಭದ್ರವಾಗಿ ಅಲ್ಲಿಯೆ ಅಂಟಿಕೊಂಡು ಬಿಡುತ್ತದೆ! ಹೆದರಿದ ರಾಜ "ದಯವಿಟ್ಟು ಕೈ ಬಿಡುಗಡೆಯಾಗುವಂತೆ ದೇವರನ್ನು ಬೇಡಿಕೊ"ಎಂದು ಯಾಚಿಸಲು ಆಕೆ ಬೇಡಿದಾಗ ಕೈ ಬಿಡುಗಡೆಯಾಗುತ್ತದೆ.ನಿಟ್ಟುಸಿರು ಬಿಡುವ ರಾಜ ಅವಳ ದೈವಿಶಕ್ತಿಗೆ ಹೆದರಿ ಅವಳಿಗೊಬ್ಬ ಗುಲಾಮ ಹೆಣ್ಣನ್ನು ಬಳುವಳಿಯಾಗಿ ಕೊಟ್ಟು ತನ್ನ ಆಸ್ಥಾನದಿಂದ ಹೊರಗಟ್ಟುತ್ತಾನೆ.ಇತ್ತ ಪತ್ನಿಯನ್ನ ರಾಜನ ಬಳಿ ಕಳುಹಿಸಿ ದೈವದ ಮೊರೆಹೋಗಿದ್ದ ಅಬ್ರಾಹಂ ಈ ಪರಿ ಆಕೆ ಮರಳಿ ಬಂದಾಗ ಸಂತೋಷಗೊಂಡು ಕೂಡಲೆ ಇರಾಕ್ ಹಾಗು ಸಿರಿಯಾದ ದಿಕ್ಕಿಗೆ ಪ್ರಯಾಣಿಸುತ್ತಾನೆ.

ಹೀಗೆ ಸಾಗುವಾಗ ಗುಲಾಮ ಹೆಣ್ಣು ಹಾಜರಾಳೊಂದಿಗೆ ಅಬ್ರಾಹಂ ನಡೆಸುವ ದೈಹಿಕ ಸಂಬಂಧದಿಂದ 'ಇಸ್ಮಾಯಿಲ್' ಎಂಬ ಬಾಲಕನ ತಂದೆಯಾಗುತ್ತಾನೆ.ಅದರಿಂದ ಸವತಿ ಮಾತ್ಸರ್ಯಕ್ಕೆ ತುತ್ತಾಗುವ ಸಾರಾಳ ಒತ್ತಡ ತಾಳಲಾರದೆ ತಾಯಿ-ಮಗ ಇಬ್ಬರನ್ನೂ ಮೆಕ್ಕಾಗೆ ತಂದು ಬಿಡುತ್ತಾನೆ.ಇತ್ತ ಮರಳಿ ಸಾರಾಳನ್ನ ಬಂದು ಸೇರುವ ಅಬ್ರಾಹಂ ಅವಳಿಂದ ಐಸಾಕ್ ಹಾಗೂ ಜಾಕೊಬ್ ಎಂಬ ಮಕ್ಕಳನ್ನ ಪಡೆಯುತ್ತಾನೆ.

ಅಬ್ರಾಹಂ ಮೆಕ್ಕಾದ ಎತ್ತರ ಪ್ರದೇಶವೊಂದರ ಮರದಡಿ ಹಾಜರ ಮತ್ತು ಇಸ್ಮಾಯಿಲ್ ಇಬ್ಬರನ್ನೂ ಬಿಟ್ಟು ಹೋದನಲ್ಲ,ಜನವಸತಿಯಾಗಲಿ-ಜಲವಸತಿಯಾಗಲಿ ಇಲ್ಲದ ಈ ಬರಡು ಭೂಮಿಯಲ್ಲಿ ಹೀಗೆ ತ್ಯಜಿಸಿ ಹೋಗುವವನನ್ನ ಹಜರಾ ಹಿಂಬಾಲಿಸಿ ಹೋಗುತ್ತಾಳೆ.'ನಮ್ಮನ್ನು ಅನಾಥರಾಗಿ ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ಎಲ್ಲಿ ಹೋಗುತ್ತೀಯ?' ಎಂದವಳು ಕೇಳಿದಾಗ ಅವನಿಂದ ಉತ್ತರ ಬರುವುದಿಲ್ಲ.ಆಕೆ ಪುನಃ 'ದೇವರ ಆದೇಶದಂತೆ ನೀನು ಈ ಕೆಲಸ ಮಾಡುತ್ತಿರುವುದಾ?" ಎಂದು ಮರುಪ್ರಶ್ನಿಸಿದಾಗ ಅಬ್ರಾಹಂ "ಹೌದು!" ಎಂದೆ ಉತ್ತರಿಸುತ್ತಾನೆ. 'ಯಾರ ಆಸರೆಯಲ್ಲಿ ನಾವಿರಬೇಕು?' ಎನ್ನುತ್ತಾಳವಳು....ಇವನ ಉತ್ತರ "ದೇವರು!"."ಹೀಗಿದ್ದರೆ ನಾನಿದನ್ನು ಸ್ವೀಕರಿಸುವೆ" ಎನ್ನುವ ಆಕೆ ಹಿಂದಿರುಗುತ್ತಾಳೆ.

ಹೀಗೆ ಹಜರಾ ಮರೆಯಾದ ನಂತರ ಅಬ್ರಾಹಂ ಈಗಿರುವ ಕಾಬಾದ ಕಡೆಗೆ ಮುಖಮಾಡಿ ದೇವರನ್ನು "ನನ್ನ ಹೆಂಡತಿ ಹಜರಾ ಹಾಗು ಮಗು ಇಸ್ಮಾಯಿಲ್'ನನ್ನು ಈ ಪವಿತ್ರ ಕಣಿವೆಯ ಬಳಿ ಬಿಟ್ಟಿದ್ದೇನೆ...ಅವರಿಗೆ ಸುಖ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತಾನೆ.

ಇತ್ತ ಹಾಜರಾ ತನ್ನೊಂದಿಗೆ ಇದ್ದ ಚರ್ಮದ ಚೀಲದಲ್ಲಿದ್ದ ನೀರನ್ನೆಲ್ಲ ಕುಡಿದಾದ ನಂತರ ತನ್ನ ಮಗುವಿಗೆ ಹಾಲೂಡಿಸುತ್ತಾಳೆ,ಆದರೆ ಅವಳ ದಾಹ ಹೆಚ್ಚುತ್ತದೆ.ಕೂಸನ್ನು ಅಲ್ಲಿಯೆ ಬಿಟ್ಟು ನೀರಿಗಾಗಿ ಹುಡುಕುತ್ತ ಅಲೆದು ಹತ್ತಿರದ 'ಸಾಫಾ' ಗಿರಿಯನ್ನೇರುತ್ತಾಳೆ. ಶಿಖರದ ಮೇಲೇರಿ ದೂರದೂರದವರೆಗೆ ದಿಟ್ಟಿಸಿದರೂ ಜನವಸತಿ ಕಾಣದೆ ಹತಾಶಳಾಗುತ್ತ ಹತ್ತಿರದ ಇನ್ನೊಂದು ಗಿರಿ 'ಮಾರ್ವ'ವನ್ನೇರಿದಾಗ ಅವಳಿಗೊಂದು ಅಶರೀರವಾಣಿ ಕೇಳಿಸುತ್ತದೆ. "ಒಹ್! ನನಗೆ ನೀನು ಕೇಳಿಸುತ್ತಿದ್ದೀಯ! ನನಗೆ ಸಹಾಯಕವಾಗಲು ನಿನ್ನ ಬಳಿ ಏನಿದೆ?" ಎಂದಾಕೆ ದಿಗ್ಭ್ರಮೆಯಿಂದ ಕೇಳಲು ಅವಳಿಗೆ ಕಂಡದ್ದು ಒಬ್ಬ ಯಕ್ಷ.ಮೆಕ್ಕಾದ 'ಜುಮ್ ಜುಮ್' ಎಂಬಲ್ಲಿ ಆತ ತನ್ನ ಹಿಮ್ಮಡಿಯಿಂದ ನೆಲ ಅಗಿಯುತ್ತಿರುವಾಗ ಅಲ್ಲಿ ಜಲಧಾರೆ ಉಕ್ಕುತ್ತದೆ.ಆಗ ತಡ ಮಾಡದೆ ಆ ನೀರನ್ನೆಲ್ಲ ತನ್ನ ತೊಗಲಿನ ಚೀಲಕ್ಕೆ ತುಂಬಿಕೊಳ್ಳುವ ಆಕೆ ಅಲ್ಲಿಯೆ ತಂಗುತ್ತಾಳೆ.ಕಾಲಕ್ರಮೇಣ ನೀರು ಕಂಡ ಪಕ್ಷಿಗಳೂ,ಅದರ ಜಾಡು ಹಿಡಿದ ಬುಡಕಟ್ಟಿನವರೂ ಅಲ್ಲಿ ಬಂದು ತಂಗುತ್ತಾರೆ.ಹೀಗೆ ಹಾಜಿರಾ ನೆಮ್ಮದಿಯ ಬಾಳನ್ನು ಕಾಣುವಂತಾಗುತ್ತದೆ.ಕಾಲಾ ನಂತರ ಅವಳ ಮರಣವಾಗಿ,ವಯಸ್ಕನಾಗುವ ಅವಳ ಮಗನಿಗೆ ಅದೆ ಬುಡಕಟ್ಟಿನವರು ಹೆಣ್ಣುಕೊಟ್ಟು ಮದುವೆ ಮಾಡುತ್ತಾರೆ.ಹೀಗೆ ಅವನ ಸಂಸಾರ ಸಾಗುತ್ತಿರುವಾಗ ಅಬ್ರಾಹಂ ತಾನು ತೊರೆದು ಹೋದ ಕುಟುಂಬವನ್ನ ನೋಡಲು ಬರುತ್ತಾನೆ.ಆದರಾಗ ಇಸ್ಮಾಯಿಲ್ ಮನೆಯಲ್ಲಿರುವುದಿಲ್ಲ.ಅವನು ಅನ್ನ ಸಂಪಾದಿಸಲು ಹೊರಗೆ ಹೋಗಿದ್ದಾನೆನ್ನುವ ಹೆಂಡತಿಗೆ "ನಿನ್ನ ಗಂಡನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಶೀಘ್ರ ಬದಲಿಸೋಕೆ ಹೇಳು!" ಎನ್ನುವ ಅಬ್ರಾಹಂ ಅಲ್ಲಿಂದ ನಿರ್ಗಮಿಸುತ್ತಾನೆ.ಯಾಥಾವತ್ ಮಾತುಗಳನ್ನ ಗಂಡ ಬಂದಾಗ ಆಕೆ ಅರುಹಿದಾಗ.ಒಡನೆಯೆ ಇಸ್ಮಾಯಿಲ್ " ಒಹ್! ಬಂದಿದ್ದವನು ನನ್ನ ತಂದೆ ಅವನು ನಿನ್ನನ್ನು ತ್ಯಜಿಸಲು ಹೇಳಿದ್ದಾನೆ! ಎಂದವನೆ ಆಕೆಗೆ ವಿಚ್ಚೇದನ ಕೊಟ್ಟು ಇನ್ನೊಬ್ಬಳನ್ನ ಕಟ್ಟಿಕೊಳ್ಳುತ್ತಾನೆ.ಆಕೆ ತವರಿಗೆ ಮರಳುತ್ತಾಳೆ.

ಪುನಃ ಸ್ವಲ್ಪ ಕಾಲದ ನಂತರ ಅಬ್ರಾಹಂ ಮಗನ ಮನೆಗೆ ಬರುತ್ತಾನೆ.ಆತನ ಹೊಸ ಹೆಂಡತಿಯನ್ನ ನೋಡಿ ಸಂಸಾರದ ಸ್ಥಿತಿಗತಿಯನ್ನ ವಿಚಾರಿಸಿದಾಗ ಆಕೆ "ನಾವು ಚೆನ್ನಾಗಿದ್ದೇವೆ" ಎಂದು ತಿಳಿಸುತ್ತಾಳೆ.ಸಂತುಷ್ಟನಾಗುವ ಅಬ್ರಾಹಂ "ಆತನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಭದ್ರವಾಗಿರಿಸಿಕೊಳ್ಳಲು ತಿಳಿಸು" ಎಂದು ಹೇಳಿ ಮರೆಯಾಗುತ್ತಾನೆ.ಪತಿ ಮನೆಗೆ ಬಂದಾಗ ಅವಳು ಆತನಿಗಿದನ್ನ ತಿಳಿಸಿದಳು.ಆಗ ಇಸ್ಮಾಯಿಲ್ "ಬಂದವನು ನನ್ನ ತಂದೆ! ನಿನ್ನನ್ನ ತ್ಯಜಿಸದೆ ಇಟ್ಟುಕೊಳ್ಳಲು ನನಗೆ ಉಪದೇಶವಾಗಿದೆ" ಎಂದಂದ.ಮುಂದೊಮ್ಮೆ ಮರಳಿ ಅಬ್ರಾಹಂ ಮಗನನ್ನು ಹುಡುಕಿಕೊಂಡು ಬಂದಾಗ ಅವನಿಗೆ ಮಗನ ಸಹಾಯವೂ ಸೇರಿ ಮೊತ್ತ ಮೊದಲಿಗೆ 'ಕಾಬಾ'ದ ಗುಡಿ ಮೇಲೆದ್ದಿತು ಅನ್ನುವುದು ಐತಿಹ್ಯ.

(ಇನ್ನೂ ಇದೆ....)

ಮರಳುಗಾಡಿನ ಮರ್ಮರ...(ಭಾಗ -2)

ಆರನೆ ಶತಮಾನದಲ್ಲಿ ಅರೇಬಿಯಾದ ನೂರಾರು ಬುಡಕಟ್ಟುಗಳ ಜನರು ಬದುಕಿನ ಬಹುತೇಕ ಆಸರೆ ಕಳೆದುಕೊಂಡು ಅಲೆಮಾರಿಗಳಾಗಿ,ಅಸಂಸ್ಕೃತರಾಗಿ ದೇಶವನ್ನ ಸುತ್ತುವುದು ಸಾಮಾನ್ಯವಾಗಿತ್ತು.ಅವರೆಲ್ಲರೂ ತಮ್ಮತಮ್ಮ ಬುಡಕಟ್ಟುಗಳ ಸಂಸ್ಕೃತಿಗೆ ಬಲವಾಗಿ ಅಂಟಿಕೊಂಡಿದ್ದು ಅಸಹನೆ,ಕೋಪ-ತಾಪ,ನಿಷ್ಠೂರತೆ ಮುಂತಾದ ಗುಣಧರ್ಮಗಳನ್ನು ವಿಪರೀತವಾಗಿ ಬೆಳೆಸಿಕೊಂಡಿದ್ದರು.ಯಾರ ಹಿಡಿತಕ್ಕೂ ಸಿಗದೆ ನಿರ್ಭೀತರಾಗಿ-ಸ್ವತಂತ್ರ ಮನೋಭಾವನೆ ಬೆಳೆಸಿಕೊಂಡಿದ್ದ ಇವರು ಒಂದು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರಲಿಲ್ಲ.ಪ್ರತಿ ಬುಡಕಟ್ಟಿಗೆ 'ಶೇಖ್' ಎಂಬ ನೇತಾರನಿದ್ದರೂ ಅವನಿಂದಲೂ ಗುಂಪಿನ ಎಲ್ಲರನ್ನು ಬಯಸಿದಾಗ ನಿಯಂತ್ರಿಸೋದು ಕಷ್ಟವಾಗುತ್ತಿತ್ತು.ಒಂದು ವಿಚಿತ್ರ ರೀತಿಯ ಅರಬ್ಬರ ವ್ಯಕ್ತಿತ್ವದಲ್ಲಿ ಎದ್ದು ಕಾಣುವಂತಹ ವಿರೋಧಾಭಾಸಗಳು ಕಂಡು ಬರುತ್ತಿದ್ದವು ಎನ್ನುತ್ತಾನೆ ವಿಲ್ ಡ್ಯೂರಾಂಟ್.

ಒಂದುಕಡೆ ಅಸಂಖ್ಯಾತ ಉಪ ಬುಡಕಟ್ಟುಗಳ ಜನರು ಒಂದೆ ಭಾಷೆ,ನಡೆ-ನುಡಿ,ನ್ಯಾಯ ಸೂತ್ರಗಳನ್ನ ಒಪ್ಪಿಕೊಂಡಿದ್ದರೂ ಸಹ ಆಂತರಿಕವಾಗಿ 'ಸ್ವತಂತ್ರ ಮನೋಭಾವ'ವನ್ನೆ ಬೆಳೆಸಿಕೊಂಡು ಸಮಯ ಬಂದಾಗ ಯಾವುದೆ ನೈತಿಕ ನ್ಯಾಯ ಸೂತ್ರಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ಸದಾ ಚಡಪಡಿಸುತ್ತಾ ತಮ್ಮ ತಮ್ಮಲ್ಲೆ ಹೊಡೆದಾಡುತ್ತಿದ್ದು,ಸಣ್ಣಪುಟ್ಟ ಕ್ಷುದ್ರ ಕಾರಣಗಳಿಗೂ ಭೀಕರ ಮಾರಾಮಾರಿ-ಕದನ-ನೆತ್ತರ ಚೆಲ್ಲಾಟ ಸಾಮಾನ್ಯವೆಂಬಂತೆ ನಡೆಯುತ್ತಿದ್ದವು.ರಕ್ತ ಸಂಬಂಧ ಹಾಗೂ ಇನ್ನಿತರ ಯಾವುದೆ ಆಪ್ತ ಸಂಬಂಧಗಳ ಬೇಲಿಯೂ ಆ ಕ್ಷಣ ಅವರೊಳಗಿನ ಪಶು ವರ್ತನೆಯನ್ನು ತಡೆಯುತ್ತಿರಲಿಲ್ಲ.ಯಾವ ರಾಜನ ಚಕ್ರಾಧಿಪತ್ಯಕ್ಕೂ ಒಪ್ಪದೆ,ತಮ್ಮೊಳಗಿನ ನಾಯಕನ ಮುಂದಾಳತ್ವಕ್ಕೂ ಕಿಮ್ಮತ್ತು ಕೊಡದೆ ತಮಗೆ ಬೇಕಾದಂತೆ ಇರೋದು ಅವರ ರೂಢಿಯಾಗಿತ್ತು.ಐಕ್ಯತೆಯಲ್ಲಿ ನಂಬಿಕೆಯಿಡದೆ ಅನೈಕ್ಯತೆಯ ಅನಿಷ್ಟಗಳನ್ನ ಧಾರಾಳವಾಗಿ ಅನುಭವಿಸುತ್ತಿದ್ದ ಅರಬ್ಬರು ವಿರೋಧಾಭಾಸಪೂರಿತ ಜೀವನ ಶೈಲಿಯನ್ನು ಹೊಂದಿದ್ದದು ಸ್ಪಷ್ಟವಾಗಿತ್ತು.ಯಾವುದೆ ನಸರ್ಗಿಕ ತಡೆಗಳಿಲ್ಲದಿದ್ದರೂ ಅರಬ್ಬರ ಸ್ವಾತಂತ್ರ ಕಾಪಾಡಿದ್ದು ಇದೆ ವಿರೋಧಾಭಾಸ ಅನ್ನುವುದು ಇತಿಹಾಸಕಾರರ ಖಚಿತ ಅಭಿಪ್ರಾಯ.ಇಲ್ಲಿನ ಪ್ರತಿಯೊಂದು ಬುಡಕಟ್ಟು ಕೂಡ ಒಬ್ಬ ಪೂರ್ವಿಕನ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.ಉದಾಹಾರಣೆಗೆ 'ಬಾನ್ ಫಾಸನ್' ಬುಡಕಟ್ಟಿನವರು ತಾವು 'ಫಾಸನ್' ಎಂಬ ಸಂತತಿಗೆ ಸೇರಿದವರು ಎಂದು ಸಾರಿಕೊಳ್ಳುತ್ತಿದ್ದರು.ಹೀಗೆ ತಮ್ಮ ಬುಡಕಟ್ಟಿನ ಸಂಸ್ಕೃತಿ ಹಾಗೂ ಅಂತಸ್ತಿನ ಬಗ್ಗೆ ಅವರಲ್ಲಿ ಅತೀವ ಹೆಮ್ಮೆಯಿದ್ದು ತಮಗಿಂತ ಕೆಳ ಅಂತಸ್ತಿನ ಪಂಗಡದ ಜೊತೆ ಸಂಬಂಧ ಬೆಳೆಸುವುದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿತ್ತು.

ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಐದನೆ ಮೂರು ಭಾಗದಷ್ಟು ಮಂದಿ ಅಲೆಮಾರಿ ಬಿದೊವಿನ್ (bedowin) ಪಂಗಡದವರಾಗಿದ್ದು ತಮ್ಮ ಜಾನುವಾರುಗಳೊಂದಿಗೆ ಜಲವಸತಿ ಹುಡುಕಿಕೊಂಡು ಅಲೆದಾಡುವ ಪರಿಪಾಠ ಅವರದ್ದಾಗಿತ್ತು.ಕುದುರೆಗಳನ್ನ ಸಾಕಿ ಬೆಳೆಸುವುದು ಅವರ ಅನ್ನಕ್ಕೆ ದಾರಿಯಾಗಿದ್ದರೂ ಒಂಟೆಗಳು ಅವರ ಸರ್ವಸ್ವವಾಗಿದ್ದವು.ಅವರ ಜೀವನದ ಅಂಗವಾಗಿದ್ದ ಒಂಟೆ ಅವರೊಂದಿಗೆ ಹುಟ್ಟಿ ಮರುಭೂಮಿಯ ವೈಪರೇತ್ಯಗಳನ್ನೆಲ್ಲ ಸಹಿಸಿಕೊಂಡು ಸಾವಿನಲ್ಲೂ ಉಪಕಾರಿಯಾಗಿಯೆ ಸಾಯುತ್ತಿತ್ತು.ಉರಿ ಬೇಸಿಗೆಯಲ್ಲಿ ಐದು ದಿನಗಳವರೆಗೆ ನೀರಿಲ್ಲದೆ ಬದುಕುವ ಒಂಟೆ ಚಳಿಗಾಲದಲ್ಲಿ ನೀರಿಲ್ಲದೆ ಇಪ್ಪತೈದು ದಿನ ಸವೆಸಬಲ್ಲದು.ಪೌಷ್ಟಿಕತೆ ಹೆಚ್ಚಿಸುವ ಅದರ ಹಾಲು,ಬೆರಣಿಯಾಗಿ ಇಂಧನವಾಗುವ ಅದರ ಸಗಣಿ,ಸತ್ತರೆ ಆಹಾರವಾಗಬಹುದಾದ ಅದರ ಮಾಂಸ,ಗುಡಾರ-ಉಡುಪು ಇನ್ನಿತರ ನಿತ್ಯೋಪಯೋಗಿ ವಸ್ತುಗಳಾಗುವ ಅದರ ಚರ್ಮ ಹೀಗೆ ಅವರ ಸಮಸ್ತ ಅಗತ್ಯಗಳನ್ನೂ ಪೂರೈಸುವ ಒಂಟೆಯೆಂದರೆ ಅವರಿಗೆ ಅಚ್ಚುಮೆಚ್ಚು.ಅದರಷ್ಟೆ ಅವರೂ ಕಷ್ಟ ಸಹಿಷ್ಣುಗಳಾಗಿದ್ದರು.ಹೋರಾಟ-ಮೋಜು-ಪ್ರೇಮ-ಕಲಹ ಇವಷ್ಟೆ ಅವರ ಬಾಳ್ವೆಯಾಗಿತ್ತು.ಇನ್ನಿತರ ಉಪ ಬುಡಕಟ್ಟುಗಳನ್ನ ಮಣಿಸಿ ಅವರನ್ನ ದೋಚುವುದು ;ಅಂತೆಯೆ ತನ್ನ ಮೇಲೆ ಎರಗುವ ಇತರ ಬುಡಕಟ್ಟುಗಳವರಿಂದ ತನ್ನನ್ನು ಕಾಪಾಡಿಕೊಳ್ಳಲು ಹೆಣಗುವುದು.ತನಗೆ ಅದೆಂದೊ ಒದಗಿದ್ದ ಅವಮಾನಕ್ಕೆ ಪ್ರತಿಕಾರವಾಗಿ ಸೇಡು ತೀರಿಸಿಕೊಳ್ಳುವುದು ಇವೆ ಅವರ ಜೀವನದ ರೀತಿಯಾಗಿತ್ತು.'ಪವಿತ್ರ ದಿನ'ಗಳೆಂದು ಪರಿಗಣಿಸುವ ದಿನಗಳಲ್ಲಿ ಅವರು ವಿಶ್ರಾಮದಲ್ಲಿರುತ್ತಿದ್ದು ಹೋರಾಟದಿಂದ ವಿಮುಖರಾಗುತ್ತಿದ್ದರು.ತಮ್ಮ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿವ ಇತರ ಜನಾಂಗದವರನ್ನ ಬೆದರಿಸಿ-ಲೂಟಿ ಹೊಡೆದುಕಳಿಸಲಾಗುತ್ತಿತ್ತು! ಇವರನ್ನು 'ಕರುಣಾಳು,ಕೊಲೆಗಡುಕ,ಉದಾರಿ,ದುರಾಸಾಪೂರಿತ,ನಂಬಲರ್ಹ,ನಂಬಿಕೆ ದ್ರೋಹಿ ಹಾಗೂ ಎದೆಗಾರಿಕೆಯುಳ್ಳವರು!' ಎಂದು ವಿಚಿತ್ರವಾಗಿ ವಿಲ್ ಡ್ಯೂರಾಂಟ್ ವರ್ಣಿಸಿದ್ದಾನೆ.

ರಾಜಕೀಯ ಸಂಗತಿಗಳಲ್ಲಿ ಹೊಂದಿದ್ದಷ್ಟೆ ಅನೈಕ್ಯತೆಯನ್ನ ಅರಬ್ಬರು ದೇವಾರಾಧನೆಗಳ ವಿಷಯದಲ್ಲೂ ಹೊಂದಿದ್ದರು.ಯಾವ ಸುಧಾರಣೆಗೂ ಸೊಪ್ಪು ಹಾಕದೆ,ಯಹೂದಿ ಹಾಗೂ ಕ್ರೈಸ್ತ ಏಕದೇವತಾರಾಧನೆಯನ್ನ ಒಪ್ಪದೆ ಬಹುದೇವರನ್ನ ನಂಬುತ್ತಾ ವಿಗ್ರಹಾರಾಧನೆಯಲ್ಲಿ ನಂಬಿಕೆಹೊಂದಿದ್ದರು.ಯಾವುದೆ ಬಾಹ್ಯ ಪ್ರಭಾವಗಳು ಈ ನಂಬಿಕೆಯನ್ನ ಸಡಿಲಗೊಳಿಸಿರಲಿಲ್ಲ.ದೇವರೊಂದಿಗೆ ಅವರು ದೆವ್ವಗಳನ್ನೂ ನಂಬುತ್ತಿದ್ದು ಆಗಾಗ ಬಲಿ ನೀಡುವ ಮೂಲಕ,ಕವಿತ್ವ ಪ್ರದರ್ಶನದ ಮೂಲಕ ಹಾಡಿ ನಲಿದು ದೇವರನ್ನ ಒಲಿಸಿಕೊಳ್ಳುವುದು ಅವರಿಗೆ ಅಭ್ಯಾಸವಾಗಿತ್ತು.

ಅರಬ್ಬರ ಆರಾಧನಾ ಸ್ಥಳಗಳಲ್ಲಿ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಮೆಕ್ಕಾದ ವಿಗ್ರಹಾರಾಧನೆಯ ಗುಡಿಯೂ ಒಂದಾಗಿತ್ತು.ಆಯಕಟ್ಟಿನ ಸ್ಥಳದಲ್ಲಿದ್ದರಿಂದ ಮೆಕ್ಕಾ ಕ್ರಿಸ್ತಪೂರ್ವದಿಂದಲೂ ಪ್ರಸಿದ್ಧಿ ಪಡೆದಿತ್ತು ಅನ್ನುವುದು ಇತಿಹಾಸಕಾರರ ನಂಬಿಕೆ.ಮೆಕ್ಕಾ ಒಂದು ಬರಡು ಕಣಿವೆಯಲ್ಲಿದ್ದು ಅದರ ಸುತ್ತಲೂ ಕೆಂಪುಕಲ್ಲಿನ ಪರ್ವತಗಳಿಂದ ಅದು ಸುತ್ತುವರೆದಿದೆ.ಕೆಂಪುಸಮುದ್ರ ಇಲ್ಲಿಗೆ ಕೇವಲ ಐವತ್ತು ಮೈಲಿ ದೂರದಲ್ಲಿದೆ.ಅರೇಬಿಯಾದಿಂದ ಹೊರಸಾಗುವ ಕ್ಯಾರವಾನ್'ಗಳು ಹಾಗೂ ಅರೇಬಿಯಾದ ಒಳ ಪ್ರವೇಶಿಸುವ ಕ್ಯಾರವಾನ್'ಗಳು ಇಲ್ಲಿ ಲಂಗರು ಹಾಕುತ್ತಿದ್ದವು.ಇಂತಹ ಸಾವಿರಾರು ಕ್ಯಾರವಾನ್'ಗಳು ವಿಶ್ರಮಿಸುವ ಸರ್ವಋತು ತಂಗುದಾಣಕ್ಕೆ ಒಂದು ಪೂಜಾಸ್ಥಳದ ಅಗತ್ಯ ಕಂಡುಬರೋದರಲ್ಲಿ ಅಚ್ಚರಿಯೇನಿಲ್ಲ.

ಸದಾ ವಣಿಕರಿಂದ ತುಂಬಿ ತುಳುಕುತ್ತಿದ್ದ ಈ ಸ್ಥಳದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಅನುಸಾರ ಅರಬ್ಬರು ಒಂದು ಗುಡಿ ಕಟ್ಟಿಕೊಂಡಿದ್ದು ಅದನ್ನ 'ಕಾಬಾ' ಎಂದು ಕರೆದುಕೊಂಡಿದ್ದರು.ಇದೊಂದು ಚಚ್ಚೌಕದ ಕಟ್ಟಡವಾಗಿದ್ದು ಒಟ್ಟು ಹತ್ತು ಬಾರಿ ಇದನ್ನ ನಿರ್ಮಿಸಲಾಗಿದೆ ಅನ್ನುವುದು ಮುಸ್ಲೀಮರ ನಂಬಿಕೆ.ಮೊದಲನೆ ಕಟ್ಟಡ ಅನಾದಿಕಾಲದಲ್ಲಿ ದೇವದೂತರ ನಿರ್ಮಿತಿಯಾಗಿದ್ದಾರೆ ಎರಡನೆಯದನ್ನ ಬೈಬಲ್'ನಲ್ಲಿ ಬರುವ ಪ್ರವಾದಿ ಆದಂ ಕಟ್ಟಿದ ಎನ್ನಲಾಗುತ್ತದೆ.ಮೂರನೆಯದನ್ನು ಅವನ ಮಗ ಸೇಥ್,ನಾಲ್ಕನೆಯದನ್ನು ಮೊಮ್ಮಗ ಅಬ್ರಾಹಂ ಹಾಗೂ ಐದನೆಯದನ್ನು ಮರಿಮಗ ಹಗರ್ ಕಟ್ಟಿದ್ದನಂತೆ.ಆರು ಮತ್ತು ಏಳನೆಯದನ್ನು ಇಸ್ಲಾಂ ಪೂರ್ವದ ಖುರೈಷಿ ಬುಡಕಟ್ಟಿನವರು ಕಟ್ಟಿದ್ದಾರೆ ಎಂಟನೆಯದ್ದನ್ನು ಮಹಮದ್ ಕಾಲದಲ್ಲಿ ಮತ್ತವರೆ ಕಟ್ಟಿದ್ದರು.ಕ್ರಿಸ್ತಶಕ 681 ಮತ್ತು 696ರಲ್ಲಿ ಮುಸ್ಲೀಂ ಶ್ರದ್ಧಾಳುಗಳು ಒಂಬತ್ತನೆ ಹಾಗು ಹತ್ತನೆ ಕಟ್ಟಡವನ್ನು ನಿರ್ಮಿಸಿದರು ಎನ್ನಲಾಗುತ್ತದೆ.ಈಗ ಅಲ್ಲಿರುವ ಕಟ್ಟಡ ಅನಂತರದ ದಿನಗಳಲ್ಲಿ ವಿವಿಧ ಖಲೀಫರಿಂದ ನಿರ್ಮಾಣಗೊಂಡಿತು.40 ಅಡಿ ಉದ್ದ ಹಾಗೂ 50 ಅಡಿ ಎತ್ತರ ಹಾಗೂ 35 ಅಡಿ ಅಗಲದ ಚಚ್ಚೌಕದಾಕೃತಿಯ ಕಾಬಾ ತನ್ನ ದಕ್ಷಿಣ ಭಾಗದಲ್ಲಿ ನೆಲದಿಂದ ಐದು ಅಡಿ ಎತ್ತರದಲ್ಲಿ 'ಪವಿತ್ರ ಕರಿಶಿಲೆ'ಯನ್ನ ಹೊಂದಿದೆ.ಮುಸ್ಲೀಮರಿಗೆ ಈ ಕರಿಶಿಲೆ ಪರಮ ಪವಿತ್ರ.ಅದನ್ನು ಸ್ವರ್ಗದಿಂದಲೆ ಪಡೆಯಲಾಗಿದೆ ಎಂದು ನಂಬುವ ಮುಸ್ಲಿಂ ಯಾತ್ರಿಕರು ಶ್ರದ್ಧಾ ಭಕ್ತಿಯಿಂದ ಅದಕ್ಕೆ ಮುತ್ತಿಟ್ಟು ಧನ್ಯರಾಗುತ್ತಾರೆ.

'ಕಾಬಾ' ಕಟ್ಟಡ ದೊಳಗೆ ಇಸ್ಲಾಮಿನ ಉಗಮಕ್ಕೂ ಪೂರ್ವದಲ್ಲಿಯೇ ಒಟ್ಟು 361 ವಿಗ್ರಹಗಳನ್ನು ಆರಾಧಿಸುವ ಪದ್ದತಿಯಿತ್ತು.ಈ ಅನೇಕ ವಿಗ್ರಹಗಳ ಪೈಕಿ 'ಅಲ್ಲಾಹ'ನೂ ಒಬ್ಬನಾಗಿದ್ದ.ಅವನನ್ನು ಕೇವಲ ಮೆಕ್ಕಾ ಮೂಲ ನಿವಾಸಿಗಳು ಆರಾಧಿಸುತ್ತಿದ್ದರು ಅನ್ನುವ ವಿಶ್ಲೇಷಣೆ ವಿಲ್ ಡ್ಯೂರಂಟನದು.

(ಇನ್ನೂ ಇದೆ....)

14 October 2011

ಮರಳುಗಾಡಿನ ಮರ್ಮರ...

ಭೂಮಂಡಲದಲ್ಲಿ ಅರೇಬಿಯಾ ಭೂಭಾಗ ಬೃಹತ್ ಮರಳುಗಾಡು ವ್ಯಾಪಿಸಿರುವ ಒಣ ಪ್ರದೇಶ.ಅದರ ಪೂರ್ವದಿಕ್ಕಿನಲ್ಲಿ ಪರ್ಷಿಯನ್ ಕೊಲ್ಲಿ,ಪಶ್ಚಿಮಕ್ಕೆ ಕೆಂಪುಸಮುದ್ರ ಹಾಗೂ ದಕ್ಷಿಣಕ್ಕೆ ಅರಬ್ಬಿಸಮುದ್ರ ಆವರಿಸಿದ್ದು ಅದೊಂದು ಪರ್ಯಾಯದ್ವೀಪವಾಗಿ ಅಸ್ತಿತ್ವದಲ್ಲಿದೆ.ಈ ಪರ್ಯಾಯದ್ವೀಪದ ಪಶ್ಚಿಮ ಭಾಗದಲ್ಲಿ ಕೆಂಪುಸಮುದ್ರಕ್ಕೆ ಅಂಟಿಕೊಂಡಂತೆ ಒರಟು ಕೆಂಪುಮರಳುಗಲ್ಲಿನ ಗಿರಿಶ್ರೇಣಿಗಳು ದಕ್ಷಿಣದಿಂದ ಉತ್ತರದ ಕಡೆಗೆ ಹರಡಿವೆ.ಇದರ ಒಂದು ಭಾಗ ಸಮುದ್ರ ತೀರದಡೆಗೆ ಚಾಚಿದ್ದಾರೆ ಇನ್ನೊಂದು ಭಾಗ ಸಮುದ್ರ ಮಟ್ಟಕ್ಕಿಂತ ಸ್ವಲ್ಪ ತಗ್ಗಿನವರೆಗೂ ಒಳನಾಡಿನತ್ತ ಮೈಲಿಗಳ ದೂರ ವ್ಯಾಪಿಸಿದೆ.ಈ ಗಿರಿಶಿಖರ ಹಾಗೂ ಕೆಂಪುಸಮುದ್ರದ ಮಧ್ಯದಲ್ಲಿರುವ ಪ್ರದೇಶದಲ್ಲಿರುವುದೆ ಇತಿಹಾಸ ಪ್ರಸಿದ್ಧ ಮೆಕ್ಕಾ ಹಾಗು ಮದೀನಾ ನಗರ ಗಳು.

ಅರೇಬಿಯಾ ಒಟ್ಟಾರೆ 1400ಮೈಲಿ ಉದ್ದವಿದ್ದು, 1250ಮೈಲಿ ಅಗಲವಾಗಿದೆ.ಆದರೆ ಈ ವಿಶಾಲಪ್ರದೇಶ ಒಂದೇಒಂದು ದೊಡ್ಡ ನದಿ ಅಥವಾ ಹೊಳೆಯನ್ನ ಹೊಂದಿಲ್ಲದಿರುವುದು ವಿಸ್ಮಯ ಹುಟ್ಟಿಸುತ್ತದೆ.ಅರೇಬಿಕ್ ಭಾಷೆಯಲ್ಲಿ 'ಅರಬ' ಎಂದರೆ ಬರಡು ಎಂದರ್ಥ.ಹೆಸರಿಗೆ ತಕ್ಕಂತೆ ಈ ಪ್ರೆದೇಶ ಒಂದು ಬರಡು ಭೂಮಿಯೆ ಆಗಿದ್ದು ಈ ಎರಡು ನಗರಗಳಿರುವ ಪ್ರದೇಶದಿಂದ ಪೂರ್ವಕ್ಕೆ ಭೂಮಿ ಇಳಿಜಾರಾಗಿದ್ದು ನಡುನಡುವೆ ಕೆಲವೊಮ್ಮೆ 12000ಅಡಿ ಎತ್ತರದ ಪರ್ವತಗಳು ಏರ್ಪಟ್ಟು ಮತ್ತೆ ಕೊಲ್ಲಿಯವರೆಗೂ ಇಳಿಜಾರಾಗಿ ಒಂದು ಬಗೆಯ ವಿಲಕ್ಷಣತೆ ಹೊಂದಿರುವುದು ಒಂದು ವಿಶೇಷ.ಆದರೆ ಇಲ್ಲಿನ ನೈಋತ್ಯ ಭಾಗ ಸಣ್ಣಪುಟ್ಟ ನೀರಿನ ಒರತೆ-ಹಳ್ಳಗಳನ್ನು ಹೊಂದಿದ್ದು ಅಲ್ಲಿನ ಮಣ್ಣಿನ ಫಲವತ್ತತೆಯನ್ನ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ.ಉಳಿದಂತೆ ಇನ್ನು ಯಾವ ಭಾಗವೂ ಆ ಭಾಗ್ಯ ಹೊಂದಿರದೆ ಬೆಂಗಾಡಾಗಿ ಕೇವಲ ಅಲ್ಲಲ್ಲಿ ಕಾಣುವ ಓಯಸಿಸ್'ಗಳಿಂದಷ್ಟೆ ನೀರುಂಡು ಕರ್ಜೂರ-ಬಾರ್ಲಿ-ಅಕೇಶಿಯ ಮುಂತಾದ ಸಸ್ಯಗಳನ್ನಷ್ಟೆ ಬೆಳೆದುಕೊಳ್ಳಲು ಶಕ್ತವಾಗಿವೆ.ಈ ಜಲವಸತಿಗಳ ಸುತ್ತ ಜನವಸತಿ ಹಬ್ಬಿದೆ.ಅನಾದಿಕಾಲದಿಂದಲೂ ಇಂತಹ ಓಯಸಿಸ್'ಗಳ ಸುತ್ತ ಏರ್ಪಟ್ಟ ಜನವಸತಿಗಳ ಬುಡಕಟ್ಟಿನ ಮಂದಿಗೆ ಇಲ್ಲಿನ ಉರಿ ಉಷ್ಣಾಂಶವೆ ಮೊದಲ ಶತ್ರು.ಹಗಲಲ್ಲಿ ತಾರಕಕ್ಕೇರುವ ಉಷ್ಣಾಂಶ ಜನರ ರಕ್ತ ಕುದಿಸಿ ಮುಖವನ್ನ ಸುಡಿಸುವಂತಿರುವುದರಿಂದ ಇಲ್ಲಿನ ನಿವಾಸಿಗಳು ಮರಳು ಮಿಶ್ರಿತ ಸುಡುಗಾಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಮೈತುಂಬ ನಿಲುವಂಗಿ ಹಾಗೂ ತಲೆಗೆಸುತ್ತಿಕೊಳ್ಳುವ ಬಟ್ಟೆ ಧರಿಸುವುದು ವಾಡಿಕೆ.ಮಳೆ ಎನ್ನುವುದು ಕೇವಲ ನೆನಪಿನ ಮಿತ್ರನಾಗಿದ್ದು,ಉರಿಕೆಂಡದಂತಹ ಸೂರ್ಯನ ಸ್ನೇಹವಿರುವುದರಿಂದ ಆಕಾಶ ವರ್ಷಪೂರ್ತಿ ತಿಳಿಯಾಗಿದ್ದು ಬೀಸುವ ಗಾಳಿ 'ಹೊಳೆಯುವ ದ್ರಾಕ್ಷಾರಸ' (Sparkling Wine) ದಂತೆ ಅನುಭವವಾಗುತ್ತದೆ ಎಂದಿದ್ದಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯೂರಾಂಟ್.

ತಮ್ಮದೆ ವಿಶಿಷ್ಟ ಸಂಸ್ಕೃತಿ,ನಡೆ-ನುಡಿ,ಹವ್ಯಾಸಗಳನ್ನ ಹೊಂದಿ ಇವೆಲ್ಲದರ ಕೂಡ ಬಾಳ್ವೆ ನಡೆಸುವುದು ಇಲ್ಲಿನ ಜನರಿಗೆ ಸಾಮಾನ್ಯ ಸಂಗತಿಯಾಗಿತ್ತು.ಆದರೆ ದಿನ ಬಳಕೆಯ ದವಸಧಾನ್ಯಗಳು ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳಿಗಾಗಿ ದೂರದೇಶದವರೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಳ್ಳುವುದು ಅರಬ್ಬಿಗಳಿಗೆ ತೀರಾ ಅನಿವಾರ್ಯವೆ ಆಗಿತ್ತು.ಹೀಗಾಗಿ ಸಾರ್ಥ (ಕ್ಯಾರವಾನ್) ಕಟ್ಟಿಕೊಂಡು ನೂರಾರು ಮೈಲಿ ಸುತ್ತುವುದನ್ನ ಜೀವನದ ಅಂಗವಾಗಿಸಿಕೊಂಡಿದ್ದ ಅರಬ್ಬಿಗಳು ಒಂಟೆ,ಕುದುರೆಗಳ ಮೇಲೆ ಕೊಂಡ ಸಾಮಾನುಗಳನ್ನ ಹೇರಿಕೊಂಡು ಅವುಗಳ ರಕ್ಷಣೆಗಾಗಿ ಅಂಗರಕ್ಷಕರ ನೆರವಿನಿಂದ ಅಥವಾ ಸ್ವತಃ ತಾವೆ ಶಸ್ತ್ರಸಜ್ಜಿತರಾಗಿ ದಾರಿಗಳ್ಳರೊಂದಿಗೆ ರೋಷಾವೇಶದಿಂದ ಹೋರಾಡುವುದನ್ನು ರೂಢಿಸಿಕೊಂಡಿದ್ದರು ಅರೇಬಿಯಾದ ಉದ್ದಗಲಕ್ಕೂ ಇಂತಹ ಕ್ಯಾರವಾನ್'ಗಳು ಸರ್ವೆಸಾಮಾನ್ಯವಾಗಿದ್ದು,ಅದು ಅಲ್ಲಿನ ನಿವಾಸಿಗಳ ಬದುಕಲ್ಲಿ ಹಾಸು ಹೊಕ್ಕಾಗಿತ್ತು.ಅಲ್ಲಿನ ಭಯಂಕರ ದುರ್ಗಮ ಮರಳುಗಾಡಿನಲ್ಲಿ ಪ್ರಯಾಣಿಸುವುದು ಪ್ರಯಾಸಕರವಾಗಿದ್ದು ಅನಿರೀಕ್ಷಿತ ಅಪಾಯಗಳಿಗೇನೂ ಕೊರತೆಯಿರಲಿಲ್ಲ.ಹೀಗಾಗಿ ಕ್ಯಾರವಾನಿಗರು ತಮ್ಮ ಸ್ವತ್ತುಗಳ ರಕ್ಷಣೆಗಾಗಿ ಕಾಣದ ದೇವರನ್ನ ಮೊರೆ ಹೋಗುವುದು ಸ್ವಾಭಾವಿಕವೆ ಆಗಿತ್ತು.ದಾರಿಯುದ್ದ ಸಿಗುವ ವಿವಿಧ ದೇವತಾರಾಧನ ಸ್ಥಳಗಳಲ್ಲಿ ತಮ್ಮ ಬುಡಕಟ್ಟಿಗೆ ಸೇರಿದ ದೇವರನ್ನ ಶ್ರದ್ಧಾಭಕ್ತಿಯಿಂದ ಆರಾಧಿಸುವುದು,ದೈವ ಕೃಪೆಯನ್ನ ಅಪೇಕ್ಷಿಸಿ ಪ್ರಾರ್ಥಿಸುವುದು ಅವರ ಬಾಳಿನ ಒಂದು ಅವಿಭಾಜ್ಯ ನಡೆಯಾಗಿತ್ತು.


ಅರಬ್ಬಿಗಳೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಂಡಿದ್ದ ಪ್ರಮುಖ ವಿದೇಶಗಳಲ್ಲಿ ಸಿರಿಯಾ ಹಾಗೂ ಪ್ಯಾಲಸ್ತೈನ್ ಪ್ರಮುಖವಾಗಿದ್ದವು.ಇವುಗಳೊಂದಿಗೆ ನೆರೆಯ ಇರಾನ್.ಇರಾಕ್ ಹಾಗೂ ಭಾರತದವರೆಗೂ ಅರಬ್ಬಿ ವಣಿಕರು ಕ್ಯಾರವಾನ್ ನಡೆಸುತಿದ್ದುದೂ ಇತ್ತು.ಅರಬ್ಬರಲ್ಲಿ ಕೆಲವರು ಹೀಗೆ ವ್ಯವಹಾರ ಕೌಶಲ್ಯ ಮೆರೆದರೆ,ಇನ್ನುಳಿದವರು ಹೊರದೇಶಗಳಲ್ಲಿ ಈ ವ್ಯವಹಾರ ಕೌಶಲ್ಯ ಮೆರೆದು ಪ್ರಸಿದ್ಧರೂ ಆಗಿದ್ದರು.ಆದರೆ ಅವರ ಆರ್ಥಿಕ ನೆಮ್ಮದಿಯನ್ನ ಕಲಕಿದ್ದು ವಿದೇಶಿ ವ್ಯಾಪಾರಗಳಲ್ಲಿ ರೋಮನ್ನರ ಅಧಿಪತ್ಯ.ಕ್ರೈಸ್ತ ಮತ ರಾಜಧರ್ಮವಾಗಿ ರೋಮನ್ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದ ಕಾರಣ ಕ್ಯಾರವಾನ್'ಗಳ ಮೇಲೆ ರೋಮನ್ ಸುಂಕಾಧಿಕಾರಿಗಳು ಹೇರಲಾರಂಭಿಸಿದ ದುಬಾರಿ ಶುಲ್ಕ ಹಾಗೂ ವಿಪರೀತ ನಿರ್ಬಂಧಗಳ ಕಾರಣ ಕೆಂಗೆಟ್ಟ ಅನೇಕ ಅರಬ್ಬರು ಮರಳಿ ಮಾತೃಭೂಮಿಗೆ ಬಂದು ಮೆಕ್ಕಾ,ಮದೀನ ಹಾಗೂ ಸಿರಿಯಾ ಸೇರಿದಂತೆ ಮಧ್ಯ ಪ್ರಾಚ್ಯದಾದ್ಯಂತ ಹರಿದು ಹಂಚಿಹೋದರು.

ಗ್ರೀಕನ್ನರಿಂದ 'ಸೇರಾಕೆನಾಯ್' (Serakenoi) ಅಥವಾ "ಸಾರ್'ಸೆನ್ಸ್" ಎಂದು ಕರೆಸಿಕೊಂಡ ಅರೆಬಿಯಾವನ್ನ (ಅರಬ್ಬಿಯಲ್ಲಿ ಹಾಗೆಂದರೆ ಪೂರ್ವದವರು ಎಂದರ್ಥ) ಕ್ರಿಸ್ತಪೂರ್ವ 240ರಲ್ಲಿ ಮೊಗಾನ್ ಎಂಬುವವ ಆಳುತ್ತಿದ್ದ.ಅವನನ್ನು ಬೆಬಿಲೋನಿಯಾದ ರಾಜ ನರಂಸಿನ್ ಸೋಲಿಸಿದ ಬಗೆಗಿನ ಶಿಲಾಶಾಸನವೊಂದು ಲಭ್ಯವಿದೆ.ಅರೇಬಿಯಾದ ಇತರ ಶಾಸನಗಳ ಪ್ರಕಾರ ಕ್ರಿಸ್ತಪೂರ್ವ 800ರಲ್ಲಿ ಅದೆ ಮನೆತನದ ಇಪ್ಪತೈದಕ್ಕೂ ರಾಜರು ಅರೆಬಿಯಾವನ್ನ ಆಳಿದ್ದಾರೆ.

ಇತಿಹಾಸ ಪ್ರಸಿದ್ಧ ರಾಣಿ ಶೀಬಾ ದಕ್ಷಿಣ ಅರೆಬಿಯಾದಲ್ಲಿರುವ ಯಮನ್'ನ ಸಾಬಾದಿಂದ ರಾಜ್ಯಭಾರ ಮಾಡುತ್ತಿದ್ದಳು.ಆಕೆ ಅವಳ ಕಾಲದವನೆ ಆಗಿದ್ದ ರಾಜಾ ಸೋಲೋಮನ್ನನನ್ನು ಕ್ರಿಸ್ತಪೂರ್ವ 950ರಲ್ಲಿ ಭೇಟಿಮಾಡಿದ್ದಳು.ಸಾಬಾದ ರಾಜರು ಮಾರಿಬ್'ನಲ್ಲಿ ಕಾಲಾನಂತರ ರಾಜಧಾನಿಯನ್ನು ಸ್ಥಾಪಿಸಿ ಉಛ್ರಾಯ ಸ್ಥಿತಿಯನ್ನ ತಲುಪಿ,ಉತ್ತಮ ನೌಕಾಪಡೆ ಹೊಂದಿ ದೂರದ ಭಾರತದೊಂದಿಗೆ ಸಮುದ್ರಮಾರ್ಗದ ವ್ಯಾಪಾರ ನಡೆಸುತ್ತಿದ್ದರು.ಕ್ರಮೇಣ ರೋಮನ್ನರ ಪ್ರಾಬಲ್ಯ ಹೆಚ್ಚಿ ಅವರು ಅರೇಬಿಯಾದ ಪ್ರಸಿದ್ಧ ರೇವುಪಟ್ಟಣವಾಗಿರುವ ಏಡನ್'ನ್ನು ಅತಿಕ್ರಮಿಸಿ ಈಜಿಪ್ಟ್ ಹಾಗೂ ಭಾರತದ ಮೇಲಿನ ವ್ಯಾಪಾರದ ಮೇಲೆ ಹತೋಟಿ ಸಾಧಿಸಿತು.

ಏಡನ್ ಬದಲಾಗುತ್ತಿದ್ದ ಕಾಲಮಾನದಲ್ಲಿ ಅರಬ್,ರೋಮನ್ ಹಾಗು ಪರ್ಷಿಯನ್ ಚಕ್ರಾಧಿಪತ್ಯಕ್ಕೆ ಒಳಗಾಗಿದ್ದನ್ನು ಇತಿಹಾಸಕಾರರು ಗುರುತಿಸಿದ್ದಾರೆ.ಕ್ರಿಸ್ತಶಕ ಎರಡನೆ ಶತಮಾನವನ್ನೆ ಗಮನಿಸುವುದಾದರೆ ಸಮೈರಾ ನಗರದ ಸಾನಿಸ್ಸಾಡರು ರೋಮನ್ನರ ಅಧೀನದಲ್ಲಿದ್ದರೆ,ಯುಫ್ರೆಟಿಸ್ ನದಿಯ ದಡದಲ್ಲಿ ಇದ್ದ ಅಲ್-ಹಿರಾ ರಾಜ್ಯ ಪರ್ಶಿಯನ್ನರ ಪ್ರಭಾವದಲ್ಲಿತ್ತು.ಈ ಎರಡೂ ರಾಜ್ಯಗಳು ಕ್ರಿಸ್ತಮತದ ಪ್ರಭಾವಕ್ಕೆ ಒಳಪಟ್ಟಿದ್ದವು.ಕ್ರಿಸ್ತಶಕ ಏಳನೆ ಶತಮಾನದ ವೇಳೆಗೆ ಈ ಎರಡೂ ರಾಜ್ಯಗಳು ತಮ್ಮ ಅಸ್ಥಿತ್ವವನ್ನ ಕಳೆದುಕೊಂಡವು.

ರೋಮ್ ಹಾಗೂ ಪರ್ಷಿಯಾ ಚಕ್ರಾದಿಪತ್ಯಗಳು ಉನ್ನತ ಸ್ಥಿತಿಯಲ್ಲಿದ್ದಾಗ ಇತ್ತ ಅರೇಬಿಯಾ ಕತ್ತಲೆಯತ್ತ ಜಾರತೊಡಗಿತ್ತು.ಕ್ರಿಸ್ತಪೂರ್ವದಲ್ಲಿ ಅಲ್ಲಿದ್ದ ವೈಭವ ಏಳನೆ ಶತಮಾನದಲ್ಲಿ ಅಸ್ತಂಗತವಾಗಿತ್ತು.ಹೊರಪ್ರಪಂಚದ ಮಟ್ಟಿಗೆ ಅರಬ್ಬರು ಅಪ್ರಸ್ತುತರಾಗಿಬಿಟ್ಟಿದ್ದರು.ಹೀಗಾಗಿ ಕಗ್ಗತ್ತಲೆಯ ಆಫ್ರಿಕಾ ಖಂಡದಂತೆ ಅರೇಬಿಯಾ ಪರ್ಯಾಯ ದ್ವೀಪವೂ ಕಗ್ಗತ್ತಲ ದ್ವೀಪವಾಗಿ ಪರಿಣಮಿಸಿತು.

(ಇನ್ನೂ ಇದೆ....)

13 October 2011

ಈ ನೆಲದ ಇಸ್ಲಾಂ ಕುರಿತ ನನ್ನ ಅಪೇಕ್ಷೆಗಳು....

ಹೀಗೆ ಉಳಿದಿದ್ದ ಶಾಹಿ ಮನೆತನಗಳ ದಖನ್ ಹುಕೂಮತ್ತು,ಆರ್ಕಾಟಿನ ನವಾಬಗಿರಿ,ಢಾಕಾ ನವಾಬಗಿರಿ,ಜುನಾಘಡದ ನವಾಬಗಿರಿ,ಅವಧದ ನವಾಬಗಿರಿ,ಹಿಸ್ಸಾರಿನ ನವಾಬಗಿರಿ,ಭೂಪಾಲದ ನವಾಬಗಿರಿ ಹೀಗೆ ಅಲ್ಲಲ್ಲಿ ಮುಸ್ಲಿಂ ಪಾಳೆಪಟ್ಟು ಸಕ್ರಿಯವಾಗಿತ್ತು.ಅದಾಗಲಷ್ಟೆ ಯುರೋಪಿಯನ್ನರ ಕಿರುಕುಳದ ವಿರುದ್ಧ ಸೆಟೆದು ನಿಲ್ಲಲು ಆರಂಭಿಸಿದ್ದ,ಭಾರತೀಯ ಯುವಮನಸ್ಸುಗಳಲ್ಲಿ ಧರ್ಮಾತೀತವಾಗಿ ಮೂಡಿದ್ದ ರಾಷ್ಟ್ರೀಯತೆಯ ಸ್ಪಷ್ಟ ಮನೋಭಾವ ತಾತ್ಕಾಲಿಕ ಐಕ್ಯತೆಯ ಆಶಾಭಾವ ಮೂಡಿಸಿದ್ದು ಹೌದಾದರೂ.ಒಡೆದು ಆಳುವುದರಲ್ಲಿ ನಿಸ್ಸೀಮರಾದ ಬ್ರಿಟೀಷರು ಇತ್ತಂಡಗಳಲ್ಲಿ ಸುಶುಪ್ತವಾಗಿದ್ದ ಧಾರ್ಮಿಕ ಅಸಹನೆಯನ್ನ ಪ್ರಚೋದಿಸಿದ ಪರಿಣಾಮ ಭಾರತದಲ್ಲಿ ಕೋಮು ಸಮರಗಳ ಸರಣಿಯೆ ನಡೆದುಹೋದವು-ದುರಾದೃಷ್ಟವಶಾತ್ ಇಂದೂ ಎಗ್ಗುಸಿಗ್ಗಿಲ್ಲದೆ ಅದು ನಡೆಯುತ್ತಲೆ ಇವೆ.ಇದರ ದೊಡ್ಡ ಆಘಾತವೆಂದರೆ ಧರ್ಮದ ಹೆಸರಿನಲ್ಲಿ ಆದ ದೇಶದ ವಿಭಜನೆ.ಅದರ ಪಾಶ್ಚಾತ್ ಪರಿಣಾಮಗಳು ಇಂದೂ ಸಹ ದೇಶದ ನೆಮ್ಮದಿಯನ್ನ ಆಗಾಗ ಕದಡುತ್ತಲೆ ಇವೆ.

ಭಾರತೀಯ ಮುಸ್ಲೀಮರಲ್ಲಿ ಶೇಕಡಾ ಐದು ಭಾಗ ಅರಬ್ಬಿ ಬುಡಕಟ್ಟು ಮೂಲದ ಶುದ್ಧರಕ್ತದವರಾಗಿದ್ದರೆ ಉಳಿದವರೆಲ್ಲರೂ ಕಾರಣಾಂತರದಿಂದ ಮತಾಂತರವಾದ ಸನಾತನಧರ್ಮ ಮೂಲದವರೆ ಅನ್ನುವುದು ಸ್ಪಷ್ಟ.ಇದು ಆಯ್ಕೆಯ ಅವರೆಲ್ಲರ ಮತಾಂತರವಾಗಿತ್ತು ಎನ್ನುವ ಇಂದಿನ ಸೋ-ಕಾಲ್ಡ್ ಬುದ್ಧಿಜೀವಿಗಳ ಬುಡಭದ್ರವಿಲ್ಲದ ವಾದಸರಣಿ ಹಾಸ್ಯಾಸ್ಪದ.ಸಮಾಜದ ಮೇಲುವರ್ಗಗಳಲ್ಲಿ ಅಧಿಕಾರದ ಆಸೆಗಾಗಿ ವಿರಳವಾಗಿ ಇದಾಗಿರಬಹುದೇನೋ,ಆದರೆ ಕೆಳವರ್ಗದ ಮಂದಿಗೆ ಅಂತಹ ಯಾವುದೆ ಆಕರ್ಷಣೆಗಳಿರಲಿಲ್ಲ.ಅಲ್ಲದೆ ಶ್ರೇಣೀಕೃತ ವ್ಯವಸ್ಥೆಗೆ ಇತ್ತೀಚಿನವರೆಗೂ ಇದ್ದ ಸಾಮಾಜಿಕ ಸಮ್ಮತಿಯ ಹಿನ್ನೆಲೆಯಲ್ಲಿ ;ಹಿಂದೂ ಜಾತಿಭೇದ ಈ ಪರಿ ಮತಾಂತರಕ್ಕೆ ಪ್ರೋತ್ಸಾಹಿಸಿತು ಅನ್ನುವುದೂ ಕೂಡ ದುರ್ಬಲ ಪೊಳ್ಳುವಾದವೆ ಸರಿ.ಒಮ್ಮೆ ಧರ್ಮಭ್ರಷ್ಟನಾದರೆ ಸಾಕು ಅವನನ್ನ ಹೀನಾಯವಾಗಿ ಕಾಣುವ ಹಾಗೂ ಮರಳಿ ಮಾತೃಧರ್ಮಕ್ಕೆ ಪ್ರವೇಶ ನಿರಾಕರಿಸುವ ಹಿಂದೂ ಸನಾತನ ಧರ್ಮದ ವಿಲಕ್ಷಣತೆಯೆ ಅದರ ಅನೇಕ ಅನುಯಾಯಿಗಳನ್ನ ಕಾಲಕ್ರಮದಲ್ಲಿ ಇಸ್ಲಾಂ ಹಾಗೂ ಕ್ರೈಸ್ತ ಮತಗಳಿಗೆ ಶರತ್ತಿಲ್ಲದೆ ಧಾರೆ ಎರೆದು ಕೊಟ್ಟಿದೆ!


ಅಂದರೆ ಈ ನೆಲದ ಹಿಂದೂಯೇತರ ಧರ್ಮೀಯರ ಧಾರ್ಮಿಕ ಸಭ್ಯತೆ ಈ ಮೂಲಕ ಬದಲಾಗಿದೆಯೆ ಹೊರತು ಅವರ ಭಾರತೀಯ ಸಂಸ್ಕೃತಿಯಲ್ಲ.ಅವರ ಧಾರ್ಮಿಕ ಶ್ರದ್ಧೆ ಅದೇನೆ ಇದ್ದರೂ, ಅವರೂ ಸನಾತನ ಧರ್ಮೀಯರಂತೆ ಇಲ್ಲಿನ ಎಲ್ಲಾ ಹಕ್ಕು-ಭಾದ್ಯತೆಗಳಿಗೆ ಕಟ್ಟು ಬದ್ಧರಾಗಿರಲೇಬೇಕು.ಅವರ ರಕ್ತದಲ್ಲಿ-ವಂಶವಾಹಿಗಳಲ್ಲಿ ಭಾರತೀಯತೆ ಸುಶುಪ್ತವಾಗಿ ಇರುವ ತನಕ ಬಾಹ್ಯ ಭೂಷಣ-ಆಹಾರಗಳಲ್ಲಿ ಇನ್ಯಾವುದೊ ದೇಶದವರನ್ನ ಅನುಕರಿಸುವುದು ಛದ್ಮವೇಷದಂತೆ ಕಾಣಿಸುತ್ತದೆ.ಭಾರತೀಯ ಮುಸ್ಲೀಮರು ಅದನ್ನು ಅರಿತುಕೊಂಡು ಪುಂಡ ಧರ್ಮಭೋದಕರ ಹಾಗೂ ಸ್ವಾರ್ಥಿ ರಾಜಕಾರಣಿಗಳ ಹುನ್ನಾರಕ್ಕೆ ಬಲಿಯಾಗಬಾರದು.

'ಭಾರತದಲ್ಲಿ ನಮಗೆ ಅಲ್ಲಾ ಬೇಕು ;ಆದರೆ ಮುಲ್ಲಾ ಅಲ್ಲ!".ಅರಬ್ ಜಗತ್ತಿನಲ್ಲಿಲ್ಲದ ಭಾರತೀಯ ಇಸ್ಲಾಮಿನ ಕೆಟ್ಟ ಉಪಲಬ್ಡಿ ಮುಲ್ಲಾಗಳು.ಮೂಲ ಇಸ್ಲಾಮಿನ ವ್ಯಾಖ್ಯೆಯನ್ನ ತಿರುಚಿ ವಾಸ್ತವ ಜಗತ್ತಿನಿಂದ ಧರ್ಮಾನುಯಾಯಿಗಳನ್ನ ವಂಚಿಸುವ ಈ ಧರ್ಮಾಂಧರ ದೆಸೆಯಿಂದ ತಲೆಮಾರುಗಳ ಹಿಂದೆ ಧರ್ಮಾಂತರವಾದ ಭಾರತೀಯ ಮುಸ್ಲಿಂ ಮನಸ್ಸುಗಳು ಇಬ್ಬಂದಿತನದಲ್ಲಿ ಸಿಲುಕಿ ಒದ್ದಾಡುವಂತಾಗುತ್ತಿದೆ.'ದೀನ್ ಮೇ ಧಾಡಿ ಹೈ...ಪರ್ ಧಾಡಿ ಮೇ ದೀನ್ ನಹಿ!' ಎನ್ನುವುದು ಭಾರತೀಯ ಮುಸ್ಲಿಂ ಬಾಂಧವರಿಗೆ ಅರ್ಥವಾಗಬೇಕು.ಅಲ್ಲೊಬ್ಬ ಗೋಮುಖ ವ್ಯಾಘ್ರ ಕಸಾಯಿ ಎಸಿ ರೂಮಿನಲ್ಲಿ ಕುಳಿತು ಸದ್ಭಾವನೆಗಾಗಿ ಉಪಾವಾಸ ಮಾಡುವುದು ಈ ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಅಪಾಯಕಾರಿಯೊ, ಅಷ್ಟೆ ಅಪಾಯ ಕೇವಲ ಬಾಹ್ಯ ತೋರಿಕೆಯ ಧರ್ಮ ಭೋದಿಸುವ ಮುಲ್ಲಾಗಳಿಂದಲೂ ಕಟ್ಟಿಟ್ಟಿದೆ.ಅಷ್ಟಕ್ಕೂ ಮಹಮದ್ ಪೈಗಂಬರ್ ಭೋಧನೆಗಳು ಅರೇಬಿಯಾ ಮರಳುಗಾಡಿನ ಆಕಾಲದ ಖುರೈಶಿ ಬುಡಕಟ್ಟುಗಳ ಆಚರಣೆಗೆ ಅನುಸಾರವಾಗಿತ್ತು.ಅಲ್ಲಿನ ಕಟ್ಟು-ಕಟ್ಟಳೆಗಳು ಭಾರತದ ಮಟ್ಟಿಗೆ ಬಹುಪಾಲು ಅಪ್ರಸ್ತುತ.

ಜಗತ್ತಿನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷಿಯ ಈ ಮಟ್ಟಿಗೆ ಜಗತ್ತಿಗೆ ಮಾದರಿಯಾಗಿದೆ.ಒಂದಾನೊಂದು ಕಾಲದಲ್ಲಿ ಸಂಪೂರ್ಣ ಹಿಂದೂಮಯವಾಗಿದ್ದ ಆ ದೇಶ ಇಂದು ಅದಕ್ಕೆ ತದ್ವಿರುದ್ಧವಾಗಿ ಇಸ್ಲಾಮಿಕರಣಗೊಂಡಿದೆ.ಆದರೆ ಅಲ್ಲಿನ ಜನ ತಮ್ಮ ಸಂಸ್ಕೃತಿಯ ಬಗ್ಗೆ ಕುರುಡಾಗಿಲ್ಲ.ಇಂದಿಗೂ ತಮ್ಮ ಹೆಸರುಗಳಲ್ಲಿ-ನಾಗರೀಕ ಸೇವೆಗಳಲ್ಲಿ ನೆಲದ ಸಂಸ್ಕೃತಿಯ ಕುರುಹುಗಳನ್ನ ಉಳಿಸಿಕೊಂಡು ಬಂದಿದ್ದಾರೆ.ಅವರಿಗೆ ತಮ್ಮ ಪುರಾತನ ಸಂಸ್ಕೃತಿಯ ಬಗ್ಗೆ ಅತೀವ ಹೆಮ್ಮೆಯಿದೆ.ಧರ್ಮಾಚರಣೆ ವಯಕ್ತಿಕ ಮಟ್ಟದ್ದು. ಅದು ಬಹಿರಂಗವಾಗಿ ಗದ್ದಲವೆಬ್ಬಿಸುವ ಮಟ್ಟಕ್ಕೆ ಎಂದೂ ಇಳಿಯಬಾರದು.ಇಸ್ಲಾಂ ಹುಟ್ಟಿದ ಅರಬ್ ಜಗತ್ತಿನಲ್ಲಿಯೆ ನಮಾಜ್ ಕರೆಗೆ ಸೈರನ್ ಕೂಗಿಸುವ ವ್ಯವಸ್ಥೆ ಚಾಲ್ತಿಗೆ ಬಂದಿರುವಾಗ ಇನ್ನೂ ಭಾರತದಲ್ಲಿ 'ಬಾಂಗ್' ಕೂಗುವ ಹಳೆಯ ಪದ್ದತಿಗೆ ಅಂಟಿಕೊಳ್ಳುವುದು ಹೊಸತನವನ್ನು ನಿರಾಕರಿಸಿದಂತೆ.ಅದಕ್ಕೆ ಪೈಪೋಟಿಯಾಗಿ ಸನಾತನ ಅವಿವೇಕಿಗಳೂ ಸಹ ಹೊತ್ತುಗೊತ್ತಿನ ಪರಿವೆಯಿಲ್ಲದೆ "ಎದ್ದೇಳು ಮಂಜುನಾಥಾ" ಎಂದು ಗದ್ದಲವೆಬ್ಬಿಸುತ್ತ ಬೆಳಗ್ಯೆ-ಮಧ್ಯಾಹ್ನ-ಸಂಜೆ ಹೀಗೆ ಅಸಂಬದ್ಧವಾಗಿ ಮಂಜುನಾಥನನ್ನ ಮಲಗಲೂ ಬಿಡದೆ ಬಡಿದೆಬ್ಬಿಸುತ್ತಾರೆ!

ಗೋಮಾಂಸದ ಕುರಿತೂ ಇದೆ ಮಾತನ್ನ ಹೇಳಬಹುದು.ಹಿಂದೂ ಕೆಳವರ್ಗದ ಮಂದಿಯೂ ಕಡಿಮೆ ಬೆಲೆಗೆ ಸಿಗುವ ಕಾರಣ ಗೋಮಾಂಸವನ್ನ ಸೇವಿಸುತ್ತಾರೆ,ಅಂತೆಯೆ ಬಡ ಮುಸ್ಲೀಮರೂ ಸಹ.ಆದರೆ ಅದು ತಮ್ಮ ಧಾರ್ಮಿಕ ಸ್ವಾಭಿಮಾನದ ಸಂಕೇತ ಅಂತ ಮುಸ್ಲೀಮರು ಪರಿಗಣಿಸುವುದು ಕೊನೆಯಾಗಬೇಕು.ಆಹಾರ-ವಿಹಾರ ವ್ಯಕ್ತಿಯ ವಯಕ್ತಿಕ ವಿಚಾರಗಳು.ಕಡೆಯದಾಗಿ ಪರಸ್ಪರ ಅಪನಂಬಿಕೆಗೆ ಹಿಂದೂಗಳ ಕುರಿತ ಮುಸ್ಲೀಮರ ಹುಸಿ ಅಭದ್ರತೆಯ ಸಂಶಯ-ಮುಸ್ಲೀಮರ ಕುರಿತ ಹಿಂದೂಗಳ ದೇಶನಿಷ್ಠೆಯ ಸುಳ್ಳು ಸಂದೇಹ ಇವೆರಡೂ ಕಾರಣ.

ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದನ್ನೆಲ್ಲ ಸ್ತ್ರೀ ರೂಪಕ್ಕೇರಿಸಿ-ತಾಯಿಯನ್ನಾಗಿ ಆರಾಧಿಸುತ್ತೆ.ಉದಾಹಾರಣೆಗೆ ದೇಶ-ವಿದ್ಯೆ-ಅನ್ನ-ಹಣ ಇವುಗಳನ್ನು ನೋಡಬಹುದು.ಆದರೆ ಧರ್ಮನಿಷ್ಠವಾಗಿ ಇಸ್ಲಾಂ ಪ್ರಕಾರ ನಡೆದುಕೊಂಡ ಅಂದಿನ ಇಸ್ಲಾಮಿ ಆಡಳಿತಗಾರರು ಈ ಭಾವನೆಗಳನ್ನೆ ಕೆಣಕುವಂತೆ ನಡೆದು ಕೊಂಡು ಸನಾತನ ಧರ್ಮೀಯರಾಲ್ಲಿ ಕಸಿವಿಸಿ ತಂದರು.ಹಿಂದೂ ಆರಾಧನಾಕ್ಷೇತ್ರಗಳ ಮೂರ್ತಿಗಳನ್ನ ಮಸೀದಿಗಳ ನೆಲಹಾಸು,ಮೆಟ್ಟಿಲು ಮಾಡಿಕೊಂಡದ್ದು.ಕಾಶ್ಮೀರದಲ್ಲಿ (ಹಿಂದೂ ನಂಬಿಕೆಗಳ ಪ್ರಕಾರ ಅದು ಶಾರದೆಯ ಆವಾಸ...ಅವಳನ್ನ 'ಕಾಶ್ಮೀರ ಪುರವಾಸಿನಿ' ಎಂದು ಕರೆಯಲಾಗುತ್ತೆ) ಆ ನೆಲದ ಭಾಷೆಯ ಸತ್ವವನ್ನೆ ಕಸಿಯಲಾಗಿದೆ.ಕಾಶ್ಮೀರಿ ಭಾಷೆಗೆ ಸ್ವಂತ ಲಿಪಿಯಿದ್ದರೂ ಇಂದು ಅದು ಬಳಕೆಯಲ್ಲಿಲ್ಲ,ಮೊಘಲ್ ಕಾಲದ ಹೇರಿಕೆಯ ಪರಿಣಾಮ ಅರಬ್ಬಿ ಲಿಪಿಯಲ್ಲಿ ಕಾಶ್ಮೀರಿ ಬರೆಯಲಾಗುತ್ತೆ...ತನ್ನ ನಿವಾಸದಲ್ಲೆ ವಿದ್ಯಾಧಿದೇವತೆ ಅನಾಥೆ ಆದದ್ದು ಹೀಗೆ! ಅದು ಇಂದಿಗೂ ಹಾಗೆಯೆ ಮುಂದುವರೆಯ ಬೇಕಿಲ್ಲ.ಧರ್ಮಕ್ಕಿಂತ ದೇಶ ಹಾಗೂ ಭಾಷೆ ಯಾವಾಗಲು ದೊಡ್ಡದು.

ಹಿಂದೂ ಅತಿರೇಕಿಗಳಂತೆ-ಇಸ್ಲಾಂ ಮೂಲಭೂತವಾದಿಗಳಿಗೂ "ಮಾನವ ಧರ್ಮ" ಎಲ್ಲಕಿಂತ ದೊಡ್ಡದು ಎಂಬುದನ್ನು ಒತ್ತಯವಾಗಿಯಾದರೂ ಅರಿವು ಮೂಡಿಸಲೆ ಬೇಕಿರುವುದು ಇಂದಿನ ತುರ್ತು ಅಗತ್ಯ.ಈ ನಿಟ್ಟಿನಲ್ಲಿ ಇಂಡೋನೇಷ್ಯ ನಮಗೆ ಮಾದರಿಯಾಗಬೇಕು.ಈ ದೇಶ ನಮ್ಮೆಲ್ಲರದು ಹಾಗೂ ಎಲ್ಲರೂ ಸಮಾನರು ಅನ್ನುವುದು ಮೊದಲು ಜಾರಿಯಾಗಲು ಅನುವಾಗುವಂತೆ ಶರಿಯತ್ ರದ್ದಾಗಬೇಕು.ಗುರುಕುಲ ಪದ್ಧತಿಯನ್ನ ಮರೆಯಾಗಿಸಿದಂತೆ ಮದರಸಗಳಿಗೂ ಸರಕಾರಿ ರಾಜಾಶ್ರಯ ನಿಂತು ಮುಸ್ಲಿಂ ಮಕ್ಕಳು ಮುಖ್ಯವಾಹಿನಿಯ ಶಾಲೆಗಳಲ್ಲಿ ಉಳಿದೆಲ್ಲರಷ್ಟೆ ಕಲಿತು,ತನ್ನ ಸಮವಯಸ್ಕ ಅನ್ಯ ಕೋಮಿನ ಮಕ್ಕಳಿಗೆ ಪೈಪೋಟಿ ನೀಡುವಂತಾಗಬೇಕು.ಎರಡು ಕಣ್ಣಷ್ಟೇ ಗೋಚರಿಸುವ ಬುರ್ಕಾ ಜಾಹಿರಾತಿನ ವೀನೈಲ್'ಗಳು ಕರಾವಳಿಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣುವುದು ನಿಂತಷ್ಟು ಶೀಘ್ರ ಮುಸ್ಲಿಂ ಮಹಿಳೆಯರು ನಿಟ್ಟುಸಿರು ಬಿಟ್ಟಾರು.ಕೊನೆಯ ಖಿಲಾಫತ್ ಅಸ್ತಿತ್ವದಲ್ಲಿದ್ದ ತುರ್ಕಿಯಲ್ಲಿಯೆ ಹೊಸತರದ ಇಸ್ಲಾಮನ್ನ ಜಾರಿಗೆ ತಂದಿರೋವಾಗ ನಮ್ಮಲ್ಲೇಕೆ ಹಳೆಯ ಮರಳುಗಾಡಿನ ಸಂಸ್ಕೃತಿಯ ಮೋಹ? "ಮೊದಲು ಭಾರತೀಯರಾಗೋಣ" ಆಮೇಲೆ ಇದ್ದೆ ಇದೆ ಹಿಂದೂ,ಮುಸ್ಲಿಂ,ಕ್ರೈಸ್ತ,ಸಿಖ್,ಬೌದ್ಧ,ಜೈನರಾಗೋದು.

ಇವತ್ತಿನಿಂದ ಇಸ್ಲಾಂ ಉಗಮದ ಕಥೆ ಇಲ್ಲಿ ಮೂಡಿ ಬರಲಿದೆ.ಆರಂಭದಲ್ಲಿ ಅಂದಿನ ಅರಬ್ ಜಗತ್ತಿನ ವಿಸ್ಕೃತ ಪರಿಚಯ ಮಾಡಿಸುವುದು ಅನಿವಾರ್ಯ.ಬೋರ್ ಎನಿಸಿದರೂ ಅದನ್ನ ಓದದೆ ಇರಬೇಡಿ.ಆ ಮೊದಲ ಕಂತನ್ನ ಓದದಿದ್ದರೆ ಮುಂದಿನ ಕಥೆ ಅಷ್ಟಾಗಿ ಅರ್ಥವಾಗಲಾರದು.ನನ್ನ ದೃಷ್ಟಿಯಲ್ಲಿ ಇಸ್ಲಾಂ ಇಷ್ಟೆ.ನನ್ನ ಸಹೋದರನೊಬ್ಬ ಅದಕ್ಕೆ ಮಾರುಹೊದರೆ ಹೇಗೆಯೋ ಹಾಗೆಯೆ ಇನ್ನುಳಿದ ಮುಸ್ಲೀಮರು ನನ್ನ ಪಾಲಿಗೆ.ಏಕೆಂದರೆ ನಾನವರನ್ನ ಮೊದಲು ನೋಡೋದು ಭಾರತೀಯತೆಯ ಮೋಹರಿನಿಂದ.ಅವರ ಧಾರ್ಮಿಕ ಶ್ರದ್ಧೆ ನನಗೆ ಇಲ್ಲಿಯ ತನಕ ಮುಖಯವಾಗಿಲ್ಲ,ಮುಂದೆಯೂ ಆಗುವುದಿಲ್ಲ.

( ಮುಗಿಯಿತು...)