ನನ್ನೊಳಗಿನ ಮೂಕ ಭಾವಗಳಿಗೆ ನನ್ನಂತೆಯೆ ಬಾಯಿಲ್ಲ,
ನಾ ಸುಮ್ಮನಿದ್ದರೂ ಈ ಕಣ್ಣು ಮುಚ್ಚಿಡದ ಮಾತುಗಳನ್ನೆಲ್ಲ....ನೀ ಓದಿಯೆ ಇರುತ್ತೀಯಲ್ಲ/
ಕೇಳಿಸಿಕೊಳ್ಳುವೆಯಾದರೆ ಕೇಳಿಸಿಕೊ ನಾ ಹೇಳದ ಯೋಚನೆಯ ಯಾಚನೆಗಳನ್ನೆಲ್ಲ,
ಹೇಳೋದು ಬಾಕಿ ಇನ್ನೂ ಇದೆ...ನನ್ನೆಲ್ಲ ಕನಸುಗಳನ್ನ ನಾನಿನ್ನೂ ನಿನ್ನಲ್ಲಿ ಹೇಳಿಯೇ ಇಲ್ಲ//
ಗಾಳಿಯಲಿ ತೂರಿ ಬಿಟ್ಟ ನನ್ನ ಮುತ್ತು ನಿನ್ನ ತುಟಿಯನೆ ಸೇರಲಿ,
ಮಳೆನೀರ ಪ್ರವಾಹದಲಿ ತೇಲಿ ಬಿಟ್ಟ ನೆನಪಿನ ಕಾಗದದ ದೋಣಿ ನಿನ್ನ ಮನದ ಅಂಗಳದಲೇ ದಡ ಮುಟ್ಟಲಿ/
ಇಂದಿನ ಹುಣ್ಣಿಮೆಯ ಚಂದಿರ ಸುರಿವ ತಂಪೆಲ್ಲ ನಿನ್ನದಾಗಲಿ,
ಹಂಚಿಕೊಳ್ಳಲು ಖಂಡಿತ ಕೂಡೋಣ ಒಂದು ಕ್ಷಣ...ಆ ದಿನ ಬೇಗ ಬರಲಿ//
25 August 2010
Subscribe to:
Post Comments (Atom)
No comments:
Post a Comment